ಅತ್ಯುತ್ತಮ ಫ್ಲೋರಿಂಗ್‌ ಅನ್ನು ಆಯ್ಕೆ ಮಾಡಲು ತ್ವರಿತ ಮಾರ್ಗದರ್ಶಿ

25 ನೇ ಮಾರ್ಚ್, 2019

ನೆಲವು ನಿಮ್ಮ ಮನೆಯ ಒಳಾಂಗಣದ ಅತ್ಯವಶ್ಯಕ ಭಾಗವಾಗಿರುತ್ತದೆ. ನಿಮ್ಮ ಫ್ಲೋರಿಂಗ್‌ ಅನ್ನು ಸರಿಯಾಗಿ ಅಳವಡಿಸಲು ಸಹಾಯ ಮಾಡುವ ಕೆಲವು ಸಲಹೆಗಳು ಇಲ್ಲಿವೆ.

ನಿಮ್ಮ ಟೈಲುಗಳನ್ನು ಹಾಕಲು ಪ್ರಾರಂಭಿಸುವ ಮೊದಲು, ನೆಲವು ದೃಢವಾಗಿ ಹಾಗೂ ಸಮತಟ್ಟಾಗಿದೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ನಿಮ್ಮ ನೆಲಕ್ಕೆ ಟೈಲ್ ಅನ್ನು ಒಮ್ಮೆ ಹಾಕಿದ ನಂತರ, ಅದನ್ನು ಮೊದಲ ವಾರ ತೊಳೆಯಬಾರದು ಎನ್ನುವುದನ್ನು ನೆನಪಿನಲ್ಲಿಡಿ.

ನಿಮ್ಮ ಮನೆಯ ನೆಲವು ಹೇಗಿರಬೇಕು ಎಂಬುದನ್ನು  ಯೋಜಿಸಲು ಒಬ್ಬ ಅನುಭವಿ ಇಂಟೀರಿಯರ್‌ ಡೆಕೋರೇಟರ್‌ನ ನೆರವನ್ನು ಪಡೆಯುವುದು ಒಳಿತು. ನಿಮ್ಮ ವಾಸ್ತುಶಿಲ್ಪಿ ಅಥವಾ ಗುತ್ತಿಗೆದಾರರೊಂದಿಗೆ ಫ್ಲೋರಿಂಗ್‌ ಅನ್ನು ಚರ್ಚಿಸುವುದೂ ಸಹ ಅತ್ಯುತ್ತಮ ಆಯ್ಕೆಯಾಗಿರುತ್ತದೆ.

ಫ್ಲೋರಿಂಗ್‌ನಲ್ಲಿ ನಾಲ್ಕು ಮುಖ್ಯ ಆಯ್ಕೆಗಳಿವೆ - ಮರ, ಗ್ರಾನೈಟ್, ಅಮೃತಶಿಲೆ ಮತ್ತು ವಿಟ್ರಿಫೈಡ್. ಕೋಣೆಯಲ್ಲಿನ ನೀವು ಯಾವ ಕಾರ್ಯಕ್ಕೆ ಬಳಸುವಿರಿ ಎಂಬುದನ್ನು ಅವಲಂಬಿಸಿ, ನಿಮ್ಮ ಫ್ಲೋರಿಂಗ್‌ ಅನ್ನು ಸರಿಹೊಂದಿಸಬೇಕಾಗುತ್ತದೆ. ಉದಾಹರಣೆಗೆ, ನಿಮ್ಮ ಬಾತ್‌ರೂಮ್‌ನ ಫ್ಲೋರಿಂಗ್‌ ಅಮೃತಶಿಲೆಯು ಉತ್ತಮ ಆಯ್ಕೆಯಾಗಿದೆ ಆದರೆ ಗ್ರಾನೈಟ್ ನಿಮ್ಮ ಅಡುಗೆಮನೆಯಲ್ಲಿ ಉತ್ತಮವಾಗಿ ಹೊಂದಿಕೊಳ್ಳುತ್ತದೆ. 

ಫ್ಲೋರಿಂಗ್‌ ಹಾಕಿದ ನಂತರ, ಅವುಗಳ ನಡುವೆ ಯಾವುದೇ ಅಂತರಗಳಿಲ್ಲ ಎನ್ನುವುದನ್ನು ನೀವು ಖಚಿತಪಡಿಸಿಕೊಳ್ಳಬೇಕು. ನಿಮ್ಮ ಫ್ಲೋರಿಂಗ್‌ ಬಹಳಷ್ಟು ಸವೆತ ಮತ್ತು ಸೀಳುವಿಕೆಗೆ ಒಳಗಾಗುತ್ತವೆ, ಅದಕ್ಕಾಗಿಯೇ ನೀವು ಸೌಂದರ್ಯದ ಜೊತೆಗೆ ಬಾಳಿಕೆಯ ಬಗ್ಗೆ ಕೂಡಾ ಗಮನವನ್ನು ಹರಿಸಬೇಕು.


Get Answer to
your Queries

Enter a valid name
Enter a valid number
Enter a valid pincode
Select a valid category
Enter a valid sub category
Please check this box to proceed further
LOADING...