ಸಂಪರ್ಕಲ್ಲಿರಿ

ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ

ಮಾನ್ಯವಾದ ವರ್ಗವನ್ನು ಆಯ್ಕೆಮಾಡಿ

ನಿಮ್ಮ ಉಪ-ವರ್ಗವನ್ನು ಆಯ್ಕೆ ಮಾಡಿ

acceptence

ಮುಂದುವರಿಯಲು ದಯವಿಟ್ಟು ಈ ಪೆಟ್ಟಿಗೆಯನ್ನು ಪರಿಶೀಲಿಸಿ

hgfghj


ನಿಮ್ಮ ಮನೆಯ ಗೋಡೆಗಳನ್ನು ಪರಿವರ್ತಿಸಲು ಪೇಂಟಿಂಗ್ ಸಲಹೆಗಳು

ನಿರ್ಮಾಣ ಕಾರ್ಯದಲ್ಲಿ ಪರಿಗಣಿಸಬೇಕಾದ ಕೊನೆಯ ವಿಷಯಗಳಲ್ಲಿ ಇದು ಒಂದಾದರೂ, ಹೋಮ್ ಪೇಂಟಿಂಗ್ ಒಟ್ಟಾರೆ ಮನೆ ಮೇಕ್ ಓವರ್ ಪ್ರಕ್ರಿಯೆಯ ಅತ್ಯಗತ್ಯ ಭಾಗವಾಗಿದೆ. ಈ ಮನೆಪೇಂಟಿಂಗ್ ಸಲಹೆಗಳು ನಿಮ್ಮ ಮನೆಯನ್ನು ಪರಿಣಾಮಕಾರಿಯಾಗಿ ಚಿತ್ರಿಸಲು ನಿಮಗೆ ಮಾರ್ಗದರ್ಶಿಯಾಗಿದೆ.

Share:


ನೀವು ಗೃಹ ನವೀಕರಣ ಪ್ರಯಾಣದಲ್ಲಿ ತೀವ್ರ ಆಸಕ್ತಿಯನ್ನು ಹೊಂದಿದ್ದರೆ ಮತ್ತು ಹೋಮ್ ಪೇಂಟಿಂಗ್ ಅನ್ನು ಸಹ ತೆಗೆದುಕೊಳ್ಳಲು ಬಯಸಿದರೆ, ಸಿಮೆಂಟ್‌ನಿಂದ ಕಾಂಕ್ರೀಟ್‌ನ ಕಂಪ್ರೆಸ್ಸಿವ್‌ ಸಾಮರ್ಥ್ಯದವರೆಗೆ ನಾವು ನಿಮಗೆ ಕೆಲವು ಉತ್ತಮ ಹೋಮ್ ಪೇಂಟಿಂಗ್‌ ಸಲಹೆಗಳನ್ನು ಇಲ್ಲಿ ಒದಗಿಸಿದ್ದೇವೆ. ನೀವು ಸರಿಯಾದ ಬಣ್ಣವನ್ನು ಆಯ್ಕೆ ಮಾಡಿಕೊಳ್ಳುತ್ತೀರಿ ಮತ್ತು ನಿಮ್ಮ ಬಣ್ಣವು ಹೆಚ್ಚು ಕಾಲ ಉಳಿಯುತ್ತದೆ. ಈ ಮನೆ ಪೇಂಟಿಂಗ್ ಮಾರ್ಗದರ್ಶಿ ಚಿತ್ರಕಲೆಯ ಸಲಹೆಗಳಿಂದ ಹಿಡಿದು ಗೋಡೆಗಳನ್ನು ಪೇಂಟಿಂಗ್ ಮಾಡುವ ತಂತ್ರಗಳವರೆಗೆ ಎಲ್ಲವನ್ನೂ ಒಳಗೊಂಡಿದೆ. ನಾವೀಗ ಆರಂಭಿಸೋಣ!




ದೀರ್ಘಾವಧಿಯ ಬಣ್ಣಕ್ಕಾಗಿ ಮನೆ ಪೇಂಟಿಂಗ್ ಮಾರ್ಗದರ್ಶಿ



  • 1. ಹವಾಮಾನವನ್ನು ಪರಿಗಣಿಸುವುದು ಮತ್ತು ಗೋಡೆಯಲ್ಲಿನ ತೇವಾಂಶವನ್ನು ಪರಿಶೀಲಿಸುವುದು:
 

    ನೀವು ಕೆಲಸಗಳ ಟೈಮ್‌ಲೈನ್ ಅನ್ನು ಹೊಂದಿಸಿದಾಗ ಮತ್ತು ನಿಮ್ಮ ಮನೆಯ ಮೇಕ್ ಓವರ್ ಅನ್ನು ಯೋಜಿಸಿದಾಗ, ನೀವು ಮೊದಲ ಬಾರಿಗೆ ಅದನ್ನು ನೀವೇ ಮಾಡುತ್ತಿದ್ದರೆ ಹೋಮ್ ಪೇಂಟಿಂಗ್‌ಗಾಗಿ ಸಾಕಷ್ಟು ಸಮಯವನ್ನು ಮೀಸಲಿಡುವುದನ್ನು ಖಚಿತಪಡಿಸಿಕೊಳ್ಳಿ. ಅಲ್ಲದೆ, ನಿಮ್ಮ ಪ್ರದೇಶದಲ್ಲಿ ಬೇಸಿಗೆ ಅಥವಾ ಚಳಿಗಾಲದ ಅವಧಿಯನ್ನು ಪರಿಗಣಿಸಿ. ಏಕೆಂದರೆ ಮಳೆಗಾಲದಲ್ಲಿ ಬಣ್ಣ ಬೇಗ ಒಣಗುವುದಿಲ್ಲ. ನಿಮ್ಮ ಗೋಡೆಗಳನ್ನು ಪೇಂಟ್ ಮಾಡಲು ಬೇಸಿಗೆ ಕಾಲವೇ ಉತ್ತಮ ಸಮಯ.


    ತೇವಾಂಶ ಮಾಪಕವು ಗೋಡೆಯಲ್ಲಿನ ತೇವಾಂಶವನ್ನು ಅಳೆಯಲು ವಿಶೇಷವಾಗಿ ವಿನ್ಯಾಸಗೊಳಿಸಲಾದ ಸಾಧನವಾಗಿದೆ.


    ಇದು ಕಾಂಕ್ರೀಟ್ ಮಹಡಿಗಳು, ಗೋಡೆ ಮತ್ತು ಮೇಲ್ಛಾವಣಿಗಳಲ್ಲಿ ಉಳಿದಿರುವ ತೇವಾಂಶವನ್ನು ಪತ್ತೆ ಮಾಡುತ್ತದೆ, ಇದು ಸೋರುವ ಮೇಲ್ಛಾವಣಿ, ಹಾನಿಗೊಳಗಾದ ಪೈಪ್‌ಗಳು, ಮಳೆ ನೀರು ಅಥವಾ ಭೂಗತ ಪೈಪ್‌ಗಳ ಸೋರಿಕೆಯಿಂದಾಗಿರಬಹುದು. ತೇವಾಂಶ ಮೀಟರ್‌ನ ವೈಜ್ಞಾನಿಕ ಮತ್ತು ನಿಖರವಾದ ಪತ್ತೆಯು ತೇವದಿಂದ ಉಂಟಾದ ಹಾನಿಯನ್ನು ಸರಿಯಾಗಿ ತಿಳಿಯಲು ನಿಮಗೆ ಸಹಾಯ ಮಾಡುತ್ತದೆ, ಇದರಿಂದಾಗಿ ನೀವು ಪೇಂಟಿಂಗ್‌ಗೆ ಮುಂಚಿತವಾಗಿ ಮನೆಯ ಗೋಡೆಗಳನ್ನು ಮತ್ತು ಛಾವಣಿಗಳನ್ನು ಜಲನಿರೋಧಕಗೊಳಿಸಲು ಸೂಕ್ತವಾದ ಕ್ರಮಗಳನ್ನು ತೆಗೆದುಕೊಳ್ಳಬಹುದು.
     

  • 2. ಪೇಂಟಿಂಗ್ ಮಾಡುವ ಮೊದಲು ಮೇಲ್ಮೈಯನ್ನು ಸ್ವಚ್ಛಗೊಳಿಸಿ:
 

    ನೀವು ಗೋಡೆಗಳನ್ನು ಪೇಂಟ್ ಮಾಡುವ ಮೊದಲು ಮೇಲ್ಮೈನ ಕೊಳಕು, ಧೂಳನ್ನು ಸ್ವಚ್ಛಗೊಳಿಸಬೇಕು. ನಿಮ್ಮ ಗೋಡೆಗಳು ಯಾವುದೇ ಧೂಳಿನ ಕಣಗಳು / ಜೇಡರ ಬಲೆಗಳನ್ನು ಹೊಂದಿದ್ದರೆ, ಪೇಂಟಿಂಗ್ ಕೆಲಸ ಪ್ರಾರಂಭಿಸುವ ಮೊದಲು ಅವುಗಳನ್ನು ತೊಡೆದುಹಾಕುವುದು ಉತ್ತಮವಾಗಿದೆ. ಮೇಲ್ನೋಟಕ್ಕೆ ಗೋಡೆಯಲ್ಲಿ ನಿಮಗೆ ಏನೂ ಧೂಳು- ಬಲೆಗಳು ಕಾಣಿಸದಿದ್ದರೂ ಸಹ, ನೀವು ಪೇಂಟಿಂಗ್ ಆರಂಭಿಸುವಾಗ ಯಾವುದೇ ಅಡಚಣೆಯನ್ನು ತಪ್ಪಿಸಲು ಒಮ್ಮೆ ಸ್ವಚ್ಛಗೊಳಿಸುವುದು ಉತ್ತಮ.

  • 3. ಪ್ರೀಮಿಯಂ-ಗುಣಮಟ್ಟದ ಉಪಕರಣ ಮತ್ತು ಬಣ್ಣದಲ್ಲಿ ಹೂಡಿಕೆ ಮಾಡಿ:
 

    ದೀರ್ಘಾವಧಿಯ ಬಣ್ಣಕ್ಕಾಗಿ ಪೇಂಟಿಂಗ್ ಮೂಲಕ ಸ್ಕಿಮ್ಮಿಂಗ್ ಮಾಡುವ ನಿಮ್ಮ ಕಲ್ಪನೆಯು ಸರಿಯಾಗಿದ್ದರೂ ಎಲ್ಲ ಕೆಲಸಗಳನ್ನೂ ನೀವು ಪುನಃ ಪ್ರಾರಂಭದಿಂದ ಮಾಡಬೇಕಾಗಿಲ್ಲ ಎಂದು ಖಚಿತಪಡಿಸಿಕೊಳ್ಳುವುದು. ಇಕ್ಕಾಗಿ ನೀವು ಉತ್ತಮ ಗುಣಮಟ್ಟದ ಪೇಂಟ್ ಮತ್ತು ಬ್ರಷ್‌ಗಳು, ರೋಲರ್ ಕವರ್‌ಗಳು ಮತ್ತು ಪೇಂಟರ್ ಟೇಪ್‌ನಂತಹ ಪೇಂಟಿಂಗ್ ಉಪಕರಣಗಳಲ್ಲಿ ಹೂಡಿಕೆ ಮಾಡಬೇಕಾಗುತ್ತದೆ. ಉತ್ತಮ ಬ್ರಷ್‌ಗಳು ಮತ್ತು ರೋಲರ್ ಕವರ್‌ಗಳು ಉತ್ತಮ ಕವರೇಜ್‌ ನೀಡುತ್ತವೆ. ಹಾಗಾಗಿ ನೀವು ಸಮಯವನ್ನು ಹಾಳುಮಾಡಬೇಡಿ ಮತ್ತು ಮರು-ಅಪ್ಲಿಕೇಶನ್‌ನಲ್ಲಿ ಪೇಂಟ್ ಮಾಡಬೇಡಿ. ಉತ್ತಮ ಪೇಂಟರ್ ಟೇಪ್ ನೀವು ಡ್ರಿಪ್ಸ್ ಮತ್ತು ಬ್ಲರ್‌ಗಳನ್ನು ಮರೆಮಾಡಬಹುದು ಎಂಬುದನ್ನು ಖಚಿತಪಡಿಸುತ್ತದೆ.

  • 4. ಪ್ರೈಮರ್ ಹಚ್ಚುವುದನ್ನು ಮರೆಯಬೇಡಿ:
 

    ನೀವು ಹೊಸ ಡ್ರೈವಾಲ್ ಅನ್ನು ಪೇಂಟಿಂಗ್ ಮಾಡುತ್ತಿದ್ದರೆ, ಅಪೂರ್ಣತೆಗಳನ್ನು ಮರೆಮಾಡಲು ಮತ್ತು ಬಣ್ಣವನ್ನು ಹಚ್ಚುವ ಮೊದಲು ಸಮತಲವನ್ನು ಒದಗಿಸಲು ನೀರು ಆಧಾರಿತ ಪ್ರೈಮರ್ ಅನ್ನು ಬಳಸಿ. ನೀವು ಪ್ಯಾನೆಲಿಂಗ್, ನೀರಿನಿಂದ ಹಾನಿಗೊಳಗಾದ ಅಥವಾ ಹೊಗೆಯಿಂದ ಹಾಳಾದ ಗೋಡೆಗಳನ್ನು ಪೇಂಟಿಂಗ್ ಮಾಡುತ್ತಿದ್ದರೆ, ತೈಲ ಆಧಾರಿತ ಪ್ರೈಮರ್ ಅನ್ನು ಆರಿಸಿಕೊಳ್ಳಿ.

  • 5. ಆರಂಭದಿಂದ ಕೊನೆಯ ವರೆಗೂ ಉದ್ದಕ್ಕೂ ಸ್ಥಿರವಾದ ಬಣ್ಣಕ್ಕಾಗಿ ದೊಡ್ಡ ಬಕೆಟ್‌ನಲ್ಲಿ ಹಲವಾರು ಬಣ್ಣದ ಕ್ಯಾನ್‌ಗಳನ್ನು ಮಿಶ್ರಣ ಮಾಡಿ:
 

    ಪೇಂಟ್‌ನ ಬಣ್ಣವು ಕ್ಯಾನ್‌ನಿಂದ ಕ್ಯಾನ್‌ಗೆ ಸ್ವಲ್ಪ ಬದಲಾಗಬಹುದು, ಆದ್ದರಿಂದ ಯಾವುದೇ ಅಸಮಂಜಸತೆಯನ್ನು ನಿವಾರಿಸಲು ಒಂದು ದೊಡ್ಡ ಬಕೆಟ್‌ನಲ್ಲಿ ಕ್ಯಾನ್‌ಗಳನ್ನು ಬೆರೆಸುವುದು ಮತ್ತು ಅಲ್ಲಿಂದ ಬಣ್ಣವನ್ನು ಬಳಸುವುದು ಉತ್ತಮ. ಅಗತ್ಯವಿರುವ ಬಣ್ಣದ ಪ್ರಮಾಣವನ್ನು ಅಂದಾಜು ಮಾಡಲು ಯಾವಾಗಲೂ ಶಿಫಾರಸು ಮಾಡಲಾಗುತ್ತದೆ ಮತ್ತು ಅದಕ್ಕೆ ಅನುಗುಣವಾಗಿ 'ಬಾಕ್ಸಿಂಗ್' ಎಂದು ಕರೆಯಲ್ಪಡುವ ಈ ಪ್ರಕ್ರಿಯೆಯೊಂದಿಗೆ ಮುಂದುವರಿಯಿರಿ.

  • 6. ಲ್ಯಾಪ್ ಗುರುತುಗಳನ್ನು ತಪ್ಪಿಸಿ:
 

    ಈಗಾಗಲೇ ಒಣಗಲು ಪ್ರಾರಂಭಿಸಿದ ಬಣ್ಣದ ಮೇಲೆ ಬ್ರಷ್ ಉರುಳಿಸುವಿಕೆಯಿಂದ ಉಂಟಾದ ಪಟ್ಟೆ ಗುರುತುಗಳನ್ನು ತಪ್ಪಿಸಲು, ಗೋಡೆಯ ಸಂಪೂರ್ಣ ಎತ್ತರವನ್ನು ಒದ್ದೆಯಾದ ಅಂಚಿನ ಮೂಲಕ ಗುರುತು ಮಾಡಿಕೊಳ್ಳಿ. ಮತ್ತು ನಂತರ ಸ್ವಲ್ಪಮಟ್ಟಿಗೆ ಬ್ರಷ್ ಚಲಿಸುವ ಮೂಲಕ ನೀವು ಕೊನೆಯ ಸ್ಟ್ರೋಕ್ ಅನ್ನು ನೀಡಬಹುದು..

  • 7. ಟ್ರಿಮ್ ಅನ್ನು ಮೊದಲು ಪೇಂಟ್ ಮಾಡಿ:
 

    ವೃತ್ತಿಪರರು ಸಾಮಾನ್ಯವಾಗಿ ತಮ್ಮದೇ ಆದ ಕ್ರಮವನ್ನು ಅನುಸರಿಸುತ್ತಾರೆ. ಅವರು ಮೊದಲು ಟ್ರಿಮ್ಗಳನ್ನು ಪೇಂಟ್ ಮಾಡುತ್ತಾರೆ, ನಂತರ ಛಾವಣಿಗಳು ಮತ್ತು ನಂತರ ಗೋಡೆಗಳು. ಏಕೆಂದರೆ ಗೋಡೆಯನ್ನು ಟೇಪ್ ಮಾಡುವುದಕ್ಕಿಂತ ಟ್ರಿಮ್‌ಗಳನ್ನು ಪೇಂಟ್ ಮಾಡುವುದು ಸುಲಭ ಮತ್ತು ವೇಗವಾಗಿರುತ್ತದೆ. ಟ್ರಿಮ್ ಅನ್ನು ಪೇಂಟ್ ಮಾಡುವಾಗ, ಅದು ಪರಿಪೂರ್ಣವಾಗಿರಬೇಕೆಂದೇನೂ ಇಲ್ಲ. ನೀವು ಮರದ ಮೇಲೆ ಸ್ಮೂತ್ ಫಿನಿಶಿಂಗ್ ಬಯಸುತ್ತೀರಿ.

     

  • 8. ಸ್ಮೂತ್‌ ಫಿನಿಶಿಂಗ್‌ಗಾಗಿ ಬಣ್ಣದ ಕೋಟಿಂಗ್‌ಗಳ ನಡುವೆ ನಡುವೆ ಮರಳು ಟ್ರಿಮ್:
 

    ಕೇವಲ ಒಂದು ಕೋಟ್ ಪೇಂಟ್ ನಿಂದ ಬಹುಶಃ ಟ್ರಿಮ್‌ನಲ್ಲಿ ಅಡಗಿರುವ ಬಣ್ಣ ಮತ್ತು ಹೊಳಪನ್ನು ಮರೆಮಾಡುವುದಿಲ್ಲ. ಮತ್ತು ನೀವು ಕೋಟಿಂಗ್‌ಗಳ ನಡುವೆ ಮೇಲ್ಮೈಯನ್ನು ಮರಳಿನಿಂದ ಟ್ರಿಮ್ ಮಾಡದಿದ್ದರೆ ಫಿನಿಶಿಂಗ್‌ ಕಾಳುಗಟ್ಟಿದ ವಿನ್ಯಾಸವನ್ನು ಹೊಂದಿರಬಹುದು. ಸ್ಮೂತ್ ಫಿನಿಶಿಂಗ್‌ಗಾಗಿ ಪ್ರತಿ ಕೋಟ್ ಪೇಂಟ್ ಅನ್ನು ಬಳಿಯುವ ಮೊದಲು ಮರಳಿನಿಂದ ಟ್ರಿಮ್ ಮಾಡಿಕೊಳ್ಳಿ.


ಪದೇ ಪದೇ ಕೇಳಲಾಗುವ ಪ್ರಶ್ನೆಗಳು (ಎಫ್‌ಎಕ್ಯು)

 

1. ನೀವು ನೇರವಾಗಿ ಹಳೆಯ ಬಣ್ಣದ ಮೇಲೆ ಹೊಸ ಪೇಂಟ್ ಮಾಡಬಹುದೇ?

 

ಹಳೆಯ ಬಣ್ಣ ಮತ್ತು ಹೊಸ ಬಣ್ಣವು ರಾಸಾಯನಿಕವಾಗಿ ಒಂದೇ ಆಗಿದ್ದರೆ ನಿಮಗೆ ಬಹುಶಃ ಪ್ರೈಮರ್ ಅಗತ್ಯವಿಲ್ಲ (ಉದಾಹರಣೆಗೆ, ತೈಲ ಆಧಾರಿತ). ಪ್ರಸ್ತುತ ಗೋಡೆಯು ನಯವಾಗಿ ಮತ್ತು ಸ್ವಚ್ಛವಾಗಿದ್ದರೆ, ನೀವು ನೇರವಾಗಿ ಹಳೆಯ ಬಣ್ಣದ ಮೇಲೆ ಹೊಸ ಬಣ್ಣವನ್ನು ಬಳಸಬಹುದು.

 

2. ನೀವು ಕನಿಷ್ಠ ಎಷ್ಟು ಕೋಟ್ ಬಣ್ಣವನ್ನು ಹಚ್ಚಲು ಉದ್ದೇಶಿಸಿದ್ದೀರಿ?

 

ಕನಿಷ್ಟಪಕ್ಷ ಬಣ್ಣದ ಎರಡು ಕೋಟ್‌ಗಳನ್ನುಬಳಿಯುವುದು ಸರಿಯಾದ ನಿಯಮ. ಆದಾಗ್ಯೂ, ಗೋಡೆಯ ವಸ್ತು ಮತ್ತು ಹಿಂದಿನ ಬಣ್ಣವು ಇದರಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ, ಉದಾಹರಣೆಗೆ, ಅಪೂರ್ಣ ಡ್ರೈವಾಲ್‌ಗಾಗಿ, ನಿಮಗೆ ಪ್ರೈಮರ್ ಅಥವಾ ಅಂಡರ್ಕೋಟ್ ಪೇಂಟ್ ಕೂಡ ಬೇಕಾಗುತ್ತದೆ.

 

3. ಪೇಂಟಿಂಗ್ ಮಾಡುವ ಮೊದಲು ನಿಮ್ಮ ಗೋಡೆಗೆ ಪ್ರೈಮರ್ ಅನ್ನು ಹಚ್ಚದಿದ್ದರೆ ಏನಾಗುತ್ತದೆ?

 

ನೀವು ಪ್ರೈಮರ್ ಅನ್ನು ಬಿಟ್ಟುಬಿಟ್ಟರೆ, ವಿಶೇಷವಾಗಿ ಆರ್ದ್ರ ಪರಿಸ್ಥಿತಿಗಳಲ್ಲಿ ನಿಮ್ಮ ಬಣ್ಣವು ಹಾಳೆ ಹಾಳೆಯಾಗಿ ಎದ್ದುಬರುವ ಅಪಾಯ ಹೆಚ್ಚಿರುತ್ತದೆ. ಇದಲ್ಲದೆ, ಬಣ್ಣವು ಸರಿಯಾಗಿ ಅಂಟಿಕೊದಿದ್ದರೆ ಬಣ್ಣ ಒಣಗಿಸಿದ ತಿಂಗಳುಗಳ ನಂತರ ಸ್ವಚ್ಛಗೊಳಿಸುವುದು ಹೆಚ್ಚು ಕಷ್ಟವಾಗುತ್ತದೆ. ನೀವು ಕೊಳಕು ಅಥವಾ ಫಿಂಗರ್‌ಪ್ರಿಂಟ್‌ಗಳನ್ನು ತೆಗೆದುಹಾಕಲು ಪ್ರಯತ್ನಿಸಿದಾಗ ಬಣ್ಣವು ಕಿತ್ತು ಬರುವುದನ್ನು ಕಾಣಬಹುದು.




ಈ ಎಲ್ಲಾ ಪೇಟಿಂಗ್‌ ಸಲಹೆಗನ್ನು ಓದಿದ ಬಳಿಕ ಸಂಪೂರ್ಣ ಪೇಂಟಿಂಗ್ ಪ್ರಕ್ರಿಯೆಯನ್ನು ನೀವೇ ಮಾಡುವಂತೆ ಪ್ರೇರಣೆ ಪಡೆದರೆ, ಪ್ರಾರಂಭಿಸುವ ಮೊದಲು ಬಾಹ್ಯ ಗೋಡೆಗಳಿಗೆ ಬಣ್ಣ ಎಂಬ ಈ ಲೇಖನವನ್ನು ಓದಲು ನಾವು ಸಲಹೆ ನೀಡುತ್ತೇವೆ:



ಸಂಬಂಧಿತ ಲೇಖನಗಳು




ಶಿಫಾರಸು ಮಾಡಿದ ವೀಡಿಯೊಗಳು





  ಮನೆ ಕನ್‌ಸ್ಟ್ರಕ್ಷನ್‌ಗಾಗಿ ಎಸ್ಟಿಮೇಟಿಂಗ್ ಟೂಲ್ಸ್


ವೆಚ್ಚ ಕ್ಯಾಲ್ಕುಲೇಟರ್

ಪ್ರತಿಯೊಬ್ಬ ಮನೆ ನಿರ್ಮಾಣ ಮಾಡುವವರು ತಮ್ಮ ಕನಸಿನ ಮನೆಯನ್ನು ನಿರ್ಮಿಸಲು ಬಯಸುತ್ತಾರೆ ಆದರೆ ಅದು ಅವರ ಬಜೆಟ್‌ ವೆಚ್ಚವನ್ನು ಮೀರದಂತೆ ಇರಿಸಿಕೊಳ್ಳಲು ಬಯಸುತ್ತಾರೆ. 

logo

ಇಎಂಐ ಕ್ಯಾಲ್ಕುಲೇಟರ್

ಮನೆ ನಿರ್ಮಾಣಕ್ಕೆ ಹಣಕಾಸು ಒದಗಿಸಿಕೊಳ್ಳುವ ಅತ್ಯುತ್ತಮ ಮಾರ್ಗಗಳಲ್ಲಿ ಮನೆ-ಸಾಲವನ್ನು ತೆಗೆದುಕೊಳ್ಳುವುದು ಒಂದಾಗಿರುತ್ತದೆ, ಆದರೆ ಮನೆಯನ್ನು ನಿರ್ಮಿಸುವವರು ಎಷ್ಟು ಕಂತುಗಳನ್ನು ಪಾವತಿಸಬೇಕೆಂದು ತಿಳಿಯಲು ಬಯಸುತ್ತಾರೆ. 

logo

ಪ್ರಾಡಕ್ಟ್ ಪ್ರೆಡಿಕ್ಟರ್

ಮನೆಯನ್ನು ನಿರ್ಮಿಸುವ ಆರಂಭಿಕ ಹಂತಗಳಲ್ಲಿ, ಮನೆ ನಿರ್ಮಿಸುವವರು ಸರಿಯಾದ ಉತ್ಪನ್ನಗಳನ್ನು ಆಯ್ಕೆ ಮಾಡುವುದು ಮುಖ್ಯವಾಗಿರುತ್ತದೆ. 

logo

ಅಂಗಡಿ ಪತ್ತೆಕಾರಕ

ಮನೆ ಕಟ್ಟುವವರಿಗೆ, ಮನೆಯ ಕಟ್ಟಡದ ಬಗ್ಗೆ ಎಲ್ಲಾ ಅಮೂಲ್ಯವಾದ ಮಾಹಿತಿಯನ್ನು ಪಡೆಯುವ ಸರಿಯಾದ ಅಂಗಡಿಯನ್ನು ಕಂಡುಹಿಡಿಯುವುದು ಮುಖ್ಯವಾಗಿದೆ.

logo

Loading....