ವಾಸ್ತು ಸಲಹೆಗಳು

ಸೈಟ್ ಆಯ್ಕೆ

   

 • ಪ್ರಧಾನ ದಿಕ್ಕುಗಳಿಗೆ ಅಂದರೆ ಉತ್ತರ, ಪೂರ್ವ, ದಕ್ಷಿಣ ಅಥವಾ ಪಶ್ಚಿಮ ದಿಕ್ಕುಗಳಿಗೆ ಅಭಿಮುಖವಾಗಿರುವ ನಿವೇಶನವನ್ನು ಆಯ್ಕೆಮಾಡಿ,
 • ಚೌಕವಾದ ಮತ್ತು ಆಯತಾಕಾರವಾದ ನಿವೇಶನಗಳು ನಿರ್ಮಾಣಕ್ಕೆ ಸೂಕ್ತ.
 • ತ್ರಿಕೋನವಾದ, ವೃತ್ತಾಕಾರವನ್ನು ಹೊಂದಿದ, ಅಂಡಾಕಾರದ ಮತ್ತು ಇತರ ಅನಿಯಮಿತ ಆಕಾರದ ನಿವೇಶನಗಳನ್ನು ಆಯ್ಕೆ ಮಾಡದೇ ಇರುವುದು ಒಳ್ಳೆಯದು.
 • ಈಶಾನ್ಯ ಮೂಲೆಯಲ್ಲಿ ವಿಸ್ತರಿಸಿದ ನಿವೇಶನವು ಆರೋಗ್ಯ, ಸಮೃದ್ಧಿ, ಹೆಸರು ಮತ್ತು ಖ್ಯಾತಿಯನ್ನು ತರುತ್ತದೆ.
 • ಪೂರ್ವದಲ್ಲಿ ವಿಸ್ತರಣೆ ಇರುವ ನಿವೇಶನವು ಉತ್ತಮ ಹೆಸರು ಮತ್ತು ಖ್ಯಾತಿಯನ್ನು ತರುತ್ತದೆ, ಆದರೆ ಆರ್ಥಿಕ ಪ್ರಗತಿಗೆ ಅಷ್ಟು ಒಳ್ಳೆಯದಲ್ಲ.
 • ಆಗ್ನೇಯ ಅಥವಾ ದಕ್ಷಿಣಕ್ಕೆ ವಿಸ್ತರಣೆ ಇರುವ ನಿವೇಶನವನ್ನು ಆದಷ್ಟು ಕಡೆಗಣಿಸುವುದು ಒಳ್ಳೆಯದು.
 • ಪಶ್ಚಿಮದಲ್ಲಿ ಇರುವ ನಿವೇಶನವು ವಾಯುವ್ಯ ದಿಕ್ಕಿನಲ್ಲಿ ವಿಸ್ತರಣೆ ಹೊಂದಿದ್ದಲ್ಲಿ ಆರೋಗ್ಯ ಹಾಗೂ ಏಳಿಗೆಯನ್ನು ತರುತ್ತದೆ, ಆದರೆ ಉತ್ತರದಲ್ಲಿ ಇರುವ ನಿವೇಶನವು ವಾಯುವ್ಯಕ್ಕೆ ವಿಸ್ತರಣೆ ಹೊಂದಿದ್ದಲ್ಲಿ ಆ ನಿವೇಶನವನ್ನು ಕಡೆಗಣಿಸುವುದು ಒಳ್ಳೆಯದು. 
 • ಆಗ್ನೇಯಕ್ಕೆ ವಿಸ್ತರಣೆ ಇರುವ ನಿವೇಶನವನ್ನು ಕಡೆಗಣಿಸುವುದು ಒಳ್ಳೆಯದು.
 • ನಿವೇಶನವು ಈಶಾನ್ಯದ ಮೂಲೆಯಲ್ಲಿ ಇದ್ದು, ರಸ್ತೆಯನ್ನು ಉತ್ತರ ಅಥವಾ ಪೂರ್ವಕ್ಕೆ ಹೊಂದಿದ್ದರೆ ಅದನ್ನು ಸೂಕ್ತ ಎಂದು ಪರಿಗಣಿಸಬಹುದು. 
 • ಆಗ್ನೇಯ, ವಾಯುವ್ಯ ಹಾಗೂ ನೈಋತ್ಯ ದಿಕ್ಕಿನಲ್ಲಿರುವ ಮೂಲೆಯ ನಿವೇಶನಗಳನ್ನು ಎಷ್ಟು ಸಾಧ್ಯವೋ ಅಷ್ಟು ಕಡೆಗಣಿಸುವುದು ಒಳ್ಳೆಯದು. ಹಾಗಿದ್ದೂ, ಅಂತಹ ನಿವೇಶನಗಳಲ್ಲಿ ನಿರ್ಮಾಣ ಕಾರ್ಯವನ್ನು ಕೈಗೊಳ್ಳುವುದು ಅನಿವಾರ್ಯವಾದಲ್ಲಿ, ದುಷ್ಪರಿಣಾಮಗಳನ್ನು ಕಡಿಮೆಗೊಳಿಸಲು ಅಥವಾ ತೊಡೆದುಹಾಕಲು ವಾಸ್ತು ತತ್ವಗಳನ್ನು ಅನುಸರಿಸಬೇಕಾಗುತ್ತದೆ.
 •  

ಹಕ್ಕುತ್ಯಾಗ:

ಈ ಮಾಹಿತಿಯು ವಾಸ್ತುವಿನ ಮೂಲಭೂತ ತಿಳುವಳಿಕೆಯನ್ನು ನೀಡುತ್ತದೆ. ಒಂದು ವೇಳೆ ಪ್ಲಾಟ್ ಅಥವಾ ನಿರ್ಮಾಣವು ಇಲ್ಲಿ ಸೂಚಿಸಿದ ವಾಸ್ತು ತತ್ವಗಳಿಗೆ ಬದ್ಧವಾಗಿರದಿದ್ದರೆ, ದುಷ್ಪರಿಣಾಮಗಳನ್ನು ಕಡಿಮೆ ಮಾಡಲು ಪರಿಹಾರ ಕ್ರಮಗಳನ್ನು/ತಿದ್ದುಪಡಿಗಳನ್ನು ಪಡೆಯಲು ವಾಸ್ತು ತಜ್ಞರನ್ನು ಸಂಪರ್ಕಿಸಬಹುದು. ವಾಸ್ತು ಬಗ್ಗೆ ಆಸಕ್ತಿ ಹೊಂದಿರುವ ಯಾರಿಗಾಗಿ ಇದು ಸಾಮಾನ್ಯ ಮಾಹಿತಿಗಾಗಿ, ಇದನ್ನು ಕಂಪನಿಯ ಯಾವುದೇ ಶಿಫಾರಸಿನಂತೆ ಅರ್ಥೈಸಿಕೊಳ್ಳಬಾರದು.

Get Answer to
your Queries

Enter a valid name
Enter a valid number
Enter a valid pincode
Select a valid category
Enter a valid sub category
Please check this box to proceed further
LOADING...