ಸಡಿಲವಾದ ಬಾಗಿಲು ಮತ್ತು ಕಿಟಕಿ ಚೌಕಟ್ಟುಗಳು ಇರುವುದನ್ನು ತಪ್ಪಿಸುವುದು ಹೇಗೆ?

25 ನೇ ಆಗಸ್ಟ್, 2020

ಬಾಗಿಲುಗಳು ಮತ್ತು ಕಿಟಕಿಗಳು ನಿಮ್ಮ ಮನೆಯ ಒಟ್ಟಾರೆ ರಚನೆಗೆ ಅಂತಿಮ ಸ್ಪರ್ಶವನ್ನು ನೀಡುತ್ತವೆ. ಒಮ್ಮೆ ನೀವು ಈ ಹಂತವನ್ನು ತಲುಪಿದಲ್ಲಿ, ನಿಮ್ಮ ಮನೆಯನ್ನು ನಿರ್ಮಾಣವನ್ನು ಬಹುತೇಕ ಮುಗಿಸಿದ್ದೀರಿ ಎಂದರ್ಥ. ಆದ್ದರಿಂದ ಈ ಕೆಳಗಿನವುಗಳನ್ನು ನೆನಪಿಟ್ಟುಕೊಳ್ಳಿ

ಬಾಗಿಲುಗಳು ಮತ್ತು ಕಿಟಕಿಗಳನ್ನು ಸರಿಯಾಗಿ ಅಳವಡಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಲು ಬೇಕಾದ ಪ್ರಮುಖ ಅಂಶಗಳು.

  • ಹೆಚ್ಚಿನ ಬಾಗಿಲುಗಳು ಮತ್ತು ಕಿಟಕಿ ಚೌಕಟ್ಟುಗಳನ್ನು ಮರದಿಂದ ತಯಾರಿಸಲಾಗುತ್ತದೆ, ಆದುದರಿಂದ ಇದು ಇತರ ವಸ್ತುಗಳಿಗಿಂತ ಬೇಗ ಹಾಳಾಗುವ ಸಂಭವವು ಹೆಚ್ಚು. ಕಾಂಕ್ರೀಟ್, ಲೋಹ ಅಥವಾ ಪಿವಿಸಿ ಯಂತಹ ವಸ್ತುಗಳನ್ನು ಬಳಸುವುದನ್ನು ಪರಿಗಣಿಸಿ.
  • ಗೋಡೆಗಳಿಗೆ ಬಾಗಿಲು ಮತ್ತು ಕಿಟಕಿ ಚೌಕಟ್ಟುಗಳನ್ನು ಅಳವಡಿಸುವಾಗ, ಜೋಡಣೆಯು ಸರಿಯಾಗಿದೆಯೆ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಪ್ಲಂಬ್ ಬಾಬ್ ಬಳಸಿ.
  • ಗೋಡೆಗಳಿಗೆ ಚೌಕಟ್ಟುಗಳನ್ನು ಅಳವಡಿಸುವ ಸಲುವಾಗಿ, ನೀವು ಜೆಡ್ ಆಕಾರದ ಹಿಡಿಕಟ್ಟುಗಳಾದ ಹೋಲ್ಡ್‌ಫಾಸ್ಟ್‌ಗಳನ್ನು ಬಳಸಬೇಕಾಗುತ್ತದೆ.
  • ಬಾಗಿಲುಗಳಿಗೆ ಸುಮಾರು ಮೂರು ಹೋಲ್ಡ್‌ಫಾಸ್ಟ್‌ಗಳ ಮತ್ತು ಕಿಟಕಿಗಳಿಗೆ ಎರಡು ಹೋಲ್ಡ್‌ಫಾಸ್ಟ್‌ಗಳ ಆಗತ್ಯತೆ ಇರುತ್ತದೆ. ಅವುಗಳನ್ನು ಅಳವಡಿಸಿದ ನಂತರ ನೀವು ಅವುಗಳ ಮಧ್ಯದಲ್ಲಿ ಇರುವ ಜಾಗಗಳನ್ನು ಕಾಂಕ್ರೀಟ್‌ನೊಂದಿಗೆ ಭರ್ತಿ ಮಾಡಬೇಕಾಗುತ್ತದೆ.

ನಿಮ್ಮ ಮನೆಯ ಬಾಗಿಲುಗಳು ಮತ್ತು ಕಿಟಕಿ ಚೌಕಟ್ಟುಗಳನ್ನು ಸರಿಯಾಗಿ ಅಳವಡಿಸಲಾಗಿದೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಇವು ಕೆಲವು ಉಪಾಯಗಳಾಗಿವೆ.

 


Get Answer to
your Queries

Enter a valid name
Enter a valid number
Enter a valid pincode
Select a valid category
Enter a valid sub category
Please check this box to proceed further
LOADING...