Home Building Guide
Our Products
Useful Tools
Waterproofing methods, Modern kitchen designs, Vaastu tips for home, Home Construction cost
ಯಾವುದೇ ಸಂರಚನೆಯ ವಿಶೇಷವಾಗಿ ಮನೆಗಳು ಮತ್ತು ಕಟ್ಟಡಗಳ ದೀರ್ಘಾಯುಷ್ಯವನ್ನು ಹೆಚ್ಚಿಸಲು ವಾಟರ್ ಪ್ರೂಫಿಂಗ್ ನಿರ್ಣಾಯಕವಾಗಿದೆ. ವಾಟರ್ ಪ್ರೂಫಿಂಗ್ ವಸ್ತುಗಳನ್ನು ಬಳಸುವುದರಿಂದ ಒಳಗಿನ ಗೋಡೆಗಳನ್ನು ರಕ್ಷಿಸುತ್ತದೆ. ಇದು ಸಂರಚನೆಯ ಮೇಲಿನ ಹಾನಿ, ಲೋಹಗಳಿಗೆ ತುಕ್ಕು ಹಿಡಿಯುವಿಕೆ ಮತ್ತು ಮರದ ಕೊಳೆಯುವಿಕೆಯನ್ನು ತಡೆಯುತ್ತದೆ.
ಅಲ್ಟ್ರಾಟೆಕ್‌ನ ವೆದರ್ ಪ್ರೊ ವಾಟರ್ ಪ್ರೂಫಿಂಗ್‌ವು ನಿರ್ಮಾಣದ ಸಮಯದಲ್ಲಿ ಬಳಸಲು ವಿಶೇಷ ತಡೆವರ್ಧಕ ವಾಟರ್ ಪ್ರೂಫಿಂಗ್ ವ್ಯವಸ್ಥೆಯಾಗಿದೆ. ವೆದರ್ ಪ್ರೊ ಸಿಸ್ಟಮ್ ನಿಮ್ಮ ಮನೆಯನ್ನು ತೇವಾಂಶದಿಂದ ಪರಿಣಾಮಕಾರಿಯಾಗಿ ರಕ್ಷಿಸುತ್ತದೆ.ನಮ್ಮ ವೆದರ್ ಪ್ರೊ ವಾಟರ್ ಪ್ರೂಫಿಂಗ್ ಸಿಸ್ಟಮ್ ಎರಡು ಘಟಕಗಳನ್ನು ಹೊಂದಿದೆ:
ತೇವಾಂಶವು ಮೇಲ್ಛಾವಣಿ, ಬಾಹ್ಯ ಗೋಡೆಗಳು, ಮಹಡಿಗಳು ಮತ್ತು ಅಡಿಪಾಯದ ಮೂಲಕವೂ ನಿಮ್ಮ ಮನೆಯಲ್ಲಿ ಕಾಣಿಸಿಕೊಳ್ಳಬಹುದು. ಆದ್ದರಿಂದ, ನಿಮ್ಮ ಮನೆಯ ಶಕ್ತಿಯನ್ನು ತೇವದಿಂದ ರಕ್ಷಿಸಲು, ನಿಮ್ಮ ಸಂಪೂರ್ಣ ಮನೆಯನ್ನು ಅಲ್ಟ್ರಾಟೆಕ್ ವೆದರ್ ಪ್ಲಸ್‌ನೊಂದಿಗೆ ನಿರ್ಮಿಸಿ. ಅಲ್ಟ್ರಾಟೆಕ್ ವೆದರ್ ಪ್ಲಸ್ ನೀರನ್ನು ಹಿಮ್ಮೆಟ್ಟಿಸುತ್ತದೆ ಮತ್ತು ಮನೆಗೆ ಪ್ರವೇಶಿಸುವ ತೇವದ ವಿರುದ್ಧ ಉತ್ತಮ ರಕ್ಷಣೆ ನೀಡುತ್ತದೆ.
ನಿಮ್ಮ ಮನೆಯ ಸಂರಚನೆಯಲ್ಲಿ ಕಂಡುಬರುವ ಅನಗತ್ಯ ಆದ್ರತೆಯ ಅಂಶವನ್ನು ತೇವಾಂಶ ಎಂದು ಕರೆಯಲಾಗುತ್ತದೆ. ತೇವವು ನಿಮ್ಮ ಮನೆಯ ಬಲತ್ವದ ದೊಡ್ಡ ಶತ್ರು. ತೇವಾಂಶವು ನಿಮ್ಮ ಮನೆಯನ್ನು ಪ್ರವೇಶಿಸಿದ ನಂತರ ಅದು ವೇಗವಾಗಿ ಹರಡುತ್ತದೆ. ನಿಮ್ಮ ಮನೆಯ ರಚನೆಯನ್ನು ಒಳಗಿನಿಂದ ಟೊಳ್ಳು ಮತ್ತು ದುರ್ಬಲಗೊಳಿಸುತ್ತದೆ. ತೇವವು ನಿಮ್ಮ ಮನೆಯ ಜೀವನವನ್ನು ಕಡಿಮೆ ಮಾಡುತ್ತದೆ ಮತ್ತು ಅಂತಿಮವಾಗಿ ನೀರಿನ ಹರಿಯುವಿಕೆಯಾಗಿ ಬದಲಾಗುತ್ತದೆ.
ಮನೆಯ ಯಾವುದೇ ಭಾಗದಿಂದ ತೇವಾಂಶವು ಪ್ರವೇಶಿಸಬಹುದು. ಇದು ಚಾವಣಿಯ ಮತ್ತು ಗೋಡೆಗಳ ಮೂಲಕ ಪ್ರವೇಶಿಸಬಹುದು ಮತ್ತು ಮನೆಯಾದ್ಯಂತ ವೇಗವಾಗಿ ಹರಡಬಹುದು. ಇದು ಮನೆಯ ಅಡಿಪಾಯದಿಂದಲೂ ಪ್ರವೇಶಿಸಬಹುದು, ಮತ್ತು ನಂತರ ಗೋಡೆಗಳ ಮೂಲಕ ಹರಡಬಹುದು
ತೇವಾಂಶವು ಕಬ್ಬಿಣದ ಸವೆತ ಮತ್ತು ಆರ್ಸಿಸಿಯಲ್ಲಿ ಬಿರುಕುಗಳ ರಚನೆಗೆ ಕಾರಣವಾಗುತ್ತದೆ. ಇದು ಸಂರಚನೆಯ ಬಲವನ್ನು ತಗ್ಗಿಸುತ್ತದೆ. ಇದು ಮನೆಯ ರಚನೆಯನ್ನು ಟೊಳ್ಳು ಮಾಡುತ್ತದೆ ಮತ್ತು ಒಳಗಿನಿಂದ ದುರ್ಬಲಗೊಳಿಸುತ್ತದೆ, ಅಂತಿಮವಾಗಿ ಅದರ ಬಾಳಿಕೆಯ ಮೇಲೆ ಪರಿಣಾಮ ಬೀರುತ್ತದೆ. ದುರದೃಷ್ಟವಶಾತ್, ತೇವವು ಗೋಚರಿಸುವ ಹೊತ್ತಿಗೆ, ಅಷ್ಟರಲ್ಲೇ ಹಾನಿ ಈಗಾಗಲೇ ಉಂಟಾಗಿರುತ್ತದೆ!
ಈ ತೇವಾಂಶ ಎಂಬುದು ಗುಣಪಡಿಸಲಾಗದ ಕಾಯಿಲೆ ಇದ್ದಂತೆ. ಇದು ನಿಮ್ಮ ಮನೆಯನ್ನು ಒಳಗಿನಿಂದ ಟೊಳ್ಳು ಮತ್ತು ದುರ್ಬಲಗೊಳಿಸುತ್ತದೆ. ಒದ್ದೆಯಾದ ನಂತರ, ಅದನ್ನು ತೊಡೆದುಹಾಕಲು ಅಸಾಧ್ಯ. ವಾಟರ್ ಪ್ರೂಫಿಂಗ್ ಕೋಟ್, ಪೇಂಟ್ ಅಥವಾ ಡಿಸ್ಟೆಂಪರ್‌ನ ತೆಳುವಾದ ಪದರದಿಂದ ಬೇಗನೆ ಮೇಲ್ಮೈ ಪೊರೆ ಉದುರುತ್ತದೆ. ಅಲ್ಲದೆ, ತೇವಾಂಶದ ವಿರುದ್ಧ ದೀರ್ಘಕಾಲೀನ ರಕ್ಷಣೆಯನ್ನು ನೀಡುವುದಿಲ್ಲ. ದುಬಾರಿ ಮತ್ತು ಅನಾನುಕೂಲವಾಗಿರುವುದರ ಜೊತಗೆ, ಮರುಸ್ಥಾಪನೆ ಮತ್ತು ಪುನಃ ಬಣ್ಣ ಬಳಿಯುವುದು ನಿಮಗೆ ತಾತ್ಕಾಲಿಕ ಪರಿಹಾರವನ್ನು ಮಾತ್ರ ನೀಡುತ್ತದೆ. ಆದ್ದರಿಂದ, ನಿಮ್ಮ ಮನೆಯ ಬಲವನ್ನು ತೇವಾಂಶದಿಂದ ರಕ್ಷಿಸಲು ಮೊದಲೇ ತಡೆಗಟ್ಟುವ ಪರಿಹಾರವನ್ನು ಬಳಸುವುದು ವಿವೇಕಯುತ ನಡೆಯಾಗಿದೆ.