ಸಂಪರ್ಕಲ್ಲಿರಿ

ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ

ಮಾನ್ಯವಾದ ವರ್ಗವನ್ನು ಆಯ್ಕೆಮಾಡಿ

ನಿಮ್ಮ ಉಪ-ವರ್ಗವನ್ನು ಆಯ್ಕೆ ಮಾಡಿ

acceptence

ಮುಂದುವರಿಯಲು ದಯವಿಟ್ಟು ಈ ಪೆಟ್ಟಿಗೆಯನ್ನು ಪರಿಶೀಲಿಸಿ

hgfghj


ಶ್ರೀ ಕುಮಾರ ಮಂಗಲಂ ಬಿರ್ಲಾ

ಅಧ್ಯಕ್ಷರು, ಅಲ್ಟ್ರಾಟೆಕ್ ಸಿಮೆಂಟ್ ಲಿಮಿಟೆಡ್.

ಶ್ರೀ ಕುಮಾರ್ ಮಂಗಳಂ ಬಿರ್ಲಾ ಅವರು US $ 48.3 ಬಿಲಿಯನ್ ಬಹುರಾಷ್ಟ್ರೀಯ ಆದಿತ್ಯ ಬಿರ್ಲಾ ಸಮೂಹದ ಅಧ್ಯಕ್ಷರಾಗಿದ್ದಾರೆ, ಇದು ಆರು ಖಂಡಗಳ 35 ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಅದರ ಆದಾಯದ ಶೇಕಡಾ 50 ಕ್ಕಿಂತಲೂ ಹೆಚ್ಚಿನವು ಭಾರತದ ಹೊರಗಿನ ಕಾರ್ಯಾಚರಣೆಗಳಿಂದ ಹರಿಯುತ್ತದೆ.

birla

ಶ್ರೀ ಕುಮಾರ ಮಂಗಲಂ ಬಿರ್ಲಾ

ಅಧ್ಯಕ್ಷರು,
ಅಲ್ಟ್ರಾಟೆಕ್ ಸಿಮೆಂಟ್ ಲಿಮಿಟೆಡ್.

ಶ್ರೀ ಕುಮಾರ ಮಂಗಲಂ ಬಿರ್ಲಾ ಅವರು ಆದಿತ್ಯ ಬಿರ್ಲಾ ಗುಂಪಿನ ಅಧ್ಯಕ್ಷರಾಗಿದ್ದಾರೆ.

ಭಾರತ ಮತ್ತು ಜಗತ್ತಿನಾದ್ಯಂತದ ಸಮೂಹದ ಪ್ರಮುಖ ಕಂಪನಿಗಳ ಆಡಳಿತ ಮಂಡಳಿಗೆ ಅವರು ಅಧ್ಯಕ್ಷರಾಗಿದ್ದಾರೆ. ಜಾಗತಿಕವಾಗಿ ಈ ಸಮೂಹದಡಿ ಇರುವ ಸಂಸ್ಥೆಗಳಲ್ಲಿ ನಾವೆಲಿಸ್, ಕೊಲಂಬಿಯನ್ ಕೆಮಿಕಲ್ಸ್, ಆದಿತ್ಯ ಬಿರ್ಲಾ ಮಿನರಲ್ಸ್, ಆದಿತ್ಯ ಬಿರ್ಲಾ ಕೆಮಿಕಲ್ಸ್, ಥಾಯ್ ಕಾರ್ಬನ್ ಬ್ಲ್ಯಾಕ್, ಅಲೆಕ್ಸಾಂಡ್ರಿಯಾ ಕಾರ್ಬನ್ ಬ್ಲ್ಯಾಕ್, ಡೊಮ್ಸ್‌ಜೊ ಫ್ಯಾಬ್ರಿಕರ್ ಮತ್ತು ಟೆರೇಸ್ ಬೇ ಪಲ್ಪ್ ಮಿಲ್ ಸೇರಿವೆ. ಭಾರತದಲ್ಲಿ, ಅವರು ಹಿಂಡಾಲ್ಕೊ, ಗ್ರಾಸಿಮ್, ಅಲ್ಟ್ರಾಟೆಕ್, ವೊಡಾಫೋನ್ ಐಡಿಯಾ ಮತ್ತು ಆದಿತ್ಯ ಬಿರ್ಲಾ ಕ್ಯಾಪಿಟಲ್ ಲಿಮಿಟೆಡ್ ಅಧ್ಯಕ್ಷತೆ ವಹಿಸುತ್ತಾರೆ.



ನಿರ್ದೇಶಕರ ಮಂಡಳಿ


ಶ್ರೀಮತಿ ರಾಜಶ್ರೀ ಬಿರ್ಲಾ

ಕಾರ್ಯನಿರ್ವಹಣೇತರ ನಿರ್ದೇಶಕರು

birla

ಶ್ರೀಮತಿ ರಾಜಶ್ರೀ ಬಿರ್ಲಾ

ಕಾರ್ಯನಿರ್ವಹಣೇತರ ನಿರ್ದೇಶಕರು

 

ಶ್ರೀಮತಿ ರಾಜಶ್ರೀ ಬಿರ್ಲಾ ಅವರು ಆದಿತ್ಯ ಬಿರ್ಲಾ ಕಂಪನಿಗಳ ಸಮೂಹದ ಎಲ್ಲ ಪ್ರಮುಖ ಮಂಡಳಿಯ ನಿರ್ದೇಶಕರಾಗಿದ್ದಾರೆ. ಆದಿತ್ಯ ಬಿರ್ಲಾ ಮ್ಯಾನೇಜ್‌ಮೆಂಟ್ ಕಾರ್ಪೊರೇಶನ್ ಲಿ. ಯಲ್ಲಿ ಸಮುದಾಯ ಉಪಕ್ರಮಗಳು ಮತ್ತು ಗ್ರಾಮೀಣಾಭಿವೃದ್ಧಿಗಾಗಿ ಆದಿತ್ಯ ಬಿರ್ಲಾ ಸೆಂಟರ್‌ನ ಮುಖ್ಯಸ್ಥೆಯಾಗಿಯೂ ಅವರು ಕೆಲಸ ಮಾಡುತ್ತಿದ್ದಾರೆ.

ಅರುಣ್‌ ಅಧಿಕಾರಿ

ಸ್ವತಂತ್ರ ನಿರ್ದೇಶಕರು

birla

ಅರುಣ್‌ ಅಧಿಕಾರಿ

ಸ್ವತಂತ್ರ ನಿರ್ದೇಶಕರು

 

ಅರುಣ್ ಅಧಿಕಾರಿ ಅವರು ಕಾನ್‌ಪುರ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಇಂಡಿಯನ್‌ ಇನ್‌ಸ್ಟಿಟ್ಯೂಟ್ ಆಫ್‌ ಮ್ಯಾನೇಜ್‌ಮೆಂಟ್‌, ಕಲ್ಕತ್ತಾದಲ್ಲಿ ವ್ಯಾಸಂಗ ಮಾಡಿದವರು. ವಾರ್ಟನ್ ಸ್ಕೂಲ್, ಪೆನ್ಸಿಲ್ವೇನಿಯಾ ಯುನಿವರ್ಸಿಟಿ, ಯುಎಸ್‌ಎ ಯಲ್ಲೂ ಅಡ್ವಾನ್ಸ್‌ಡ್‌ ಮ್ಯಾನೇಜ್‌ಮೆಂಟ್ ಪ್ರೋಗ್ರಾಮ್‌ ವ್ಯಾಸಂಗ ಮಾಡಿದ್ದಾರೆ. 1977 ರಲ್ಲಿ ಮ್ಯಾನೇಜ್‌ಮೆಂಟ್ ಟ್ರೇನೀ ಆಗಿ ಅವರು ಹಿಂದುಸ್ತಾನ್ ಲಿವರ್ ಲಿಮಿಟೆಡ್‌ಗೆ ಸೇರಿದ್ದರು ಮತ್ತು ಭಾರತ, ಯುಕೆ, ಜಪಾನ್ ಮತ್ತು ಸಿಂಗಾಪುರದಲ್ಲಿ ಯುನಿಲಿವರ್ ಗ್ರೂಪ್‌ನಲ್ಲಿ ಕೆಲಸ ಮಾಡಿದ್ದಾರೆ. ಕಾರ್ಯತಂತ್ರ, ಕಾರ್ಪೊರೇಟ್ ಬೆಳವಣಿಗೆ, ವ್ಯಾಪಾರ, ಗ್ರಾಹಕ ಸಂಶೋಧನೆ ಮತ್ತು ಮಾರ್ಕೆಟಿಂಗ್‌, ಸಾಮಾನ್ಯ ನಿರ್ವಹಣೆ ಮತ್ತು ನಾಯಕತ್ವ ಹುದ್ದೆಯ ನಿರ್ವಹಣೆಯ ಜವಾಬ್ದಾರಿಗಳು ಇವರ ಕಾರ್ಯಕ್ಷೇತ್ರವಾಗಿದೆ. ಜನವರಿ 2014 ರಲ್ಲಿ ಅವರು ಯುನಿಲಿವರ್‌ನಿಂದ ನಿವೃತ್ತರಾಗಿದ್ದಾರೆ.

 

ಅಲಕಾ ಭರುಚಾ

ಸ್ವತಂತ್ರ ನಿರ್ದೇಶಕಿ

birla

ಅಲಕಾ ಭರುಚಾ

ಸ್ವತಂತ್ರ ನಿರ್ದೇಶಕಿ

 

ಅಲಕಾ ಭರುಚಾ ತನ್ನ ವೃತ್ತಿ ಜೀವನವನ್ನು ಮುಲ್ಲಾ & ಮುಲ್ಲಾ & ಕ್ರೇಗೀ ಬ್ಲಂಟ್ & ಕರೋಯಿಯಲ್ಲಿ ಆರಂಭಿಸಿದರು ಮತ್ತು ಅಮರ್‌ಚಂದ್ & ಮಂಗಲ್‌ದಾಸ್‌ನಲ್ಲಿ ಪಾಲುದಾರರಾಗಿ 1992 ರಲ್ಲಿ ಸೇರಿದರು. 2008 ರಲ್ಲಿ, ಭರುಚಾ & ಪಾರ್ಟ್ನರ್ಸ್‌ ಅನ್ನು ಸಹಸಂಸ್ಥಾಪಿಸಿದರು. ಆರಂಭಿಸಿದಾಗಿನಿಂದ, ಭಾರತದಲ್ಲಿನ ಅಗ್ರ ಹದಿನೈದು ಸಂಸ್ಥೆಗಳಲ್ಲಿ ಒಂದು ಎಂದು ಆರ್‌ಎಸ್‌ಜಿ ಕನ್ಸಲ್ಟಿಂಗ್ ಲಂಡನ್‌ನಿಂದ ಶ್ರೇಣೀಕರಿಸಲ್ಪಟ್ಟಿದೆ. ಹಲವು ವರ್ಷಗಳಿಂದಲೂ, ಚೇಂಬರ್ಸ್‌ ಗ್ಲೋಬಲ್, ಲೀಗಲ್ 500 ಮತ್ತು ಹೂಸ್ ಹೂ ಲೀಗಲ್‌ನಿಂದ ಭಾರತದ ಪ್ರಮುಖ ವಕೀಲರು ಎಂಬುದಾಗಿ ಪ್ರಮಾಣೀಕರಿಸಲ್ಪಟ್ಟಿದ್ದಾರೆ. ಬರುಚಾ & ಪಾರ್ಟ್ನರ್ಸ್‌ನಲ್ಲಿ ವಹಿವಾಟು ಅಭ್ಯಾಸದಲ್ಲಿ ಅಲಕಾ ಮುಖ್ಯಸ್ಥರಾಗಿದ್ದಾರೆ. ಅವರ ಪರಿಣಿತಿಯ ಮುಖ್ಯ ವಲಯವೆಂದರೆ ವಿಲೀನ ಮತ್ತು ಸ್ವಾಧೀನಗಳು, ಜಂಟಿ ಸಂಸ್ಥೆಗಳು, ಖಾಸಗಿ ಈಕ್ವಿಟಿ, ಬ್ಯಾಂಕಿಂಗ್ ಮತ್ತು ಹಣಕಾಸು ಆಗಿದೆ. ಪವರ್ ಮತ್ತು ಲಾಜಿಸ್ಟಿಕ್ಸ್ ವಲಯ ಸೇರಿದಂತೆ ಹಣಕಾಸು ಸೇವೆಗಳ ಕ್ಲೈಂಟ್‌ಗಳ ಪರವಾಗಿ ಕೆಲಸ ಮಾಡಿದ ಅನುಭವವನ್ನು ಅಲಕಾ ಹೊಂದಿದ್ದಾರೆ. ರಿಟೇಲ್, ರಕ್ಷಣೆ ಮತ್ತು ಉತ್ಪಾದನೆ ವಲಯದಲ್ಲಿ ಹೂಡಿಕೆ ಮಾಡಲು ಅಂತಾರಾಷ್ಟ್ರೀಯ ಕಾರ್ಪೊರೇಶನ್‌ಗಳನ್ನೂ ಅವರು ಸಕ್ರಿಯವಾಗಿ ಪ್ರತಿನಿಧಿಸುತ್ತಿದ್ದಾರೆ.

ಸುನೀಲ್ ದುಗ್ಗಲ್‌

ಸ್ವತಂತ್ರ ನಿರ್ದೇಶಕ

birla

ಸುನೀಲ್ ದುಗ್ಗಲ್‌

ಸ್ವತಂತ್ರ ನಿರ್ದೇಶಕ

 

ದುಗ್ಗಲ್‌ ಬ್ಯಾಚುಲರ್ ಆಫ್‌ ಟೆಕ್ನಾಲಜಿ ಹಾನರ್ಸ್‌ (ಎಲೆಕ್ಟ್ರಿಕಲ್ ಇಂಜಿನಿಯರಿಂಗ್) ಬಿಐಟಿಎಸ್‌, ಪಿಲಾನಿಯಲ್ಲಿ ವ್ಯಾಸಂಗ ಮಾಡಿದ್ದಾರೆ ಮತ್ತು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್‌ ಮ್ಯಾನೇಜ್‌ಮೆಂಟ್, ಕೊಲ್ಕತಾ ದಿಂದ ಬ್ಯುಸಿನೆಸ್ ಮ್ಯಾನೇಜ್‌ಮೆಂಟ್ (ಮಾರ್ಕೆಟಿಂಗ್) ನಲ್ಲಿ ಸ್ನಾತಕೋತ್ತರ ಡಿಪ್ಲೊಮಾ ವ್ಯಾಸಂಗ ಮಾಡಿದ್ದಾರೆ. ದುಗ್ಗಲ್‌ 1994 ರಲ್ಲಿ ಡಾಬರ್ ಇಂಡಿಯಾ ಲಿಮಿಟೆಡ್‌ಗೆ ಸೇರಿದ್ದರು ಮತ್ತು 2002 ರಿಂದ 2019 ರ ವರೆಗೆ 17 ವರ್ಷಗಳ ಕಾಲ ಈ ಪ್ರಮುಖ ಎಫ್‌ಎಂಸಿಜಿ ಕಂಪನಿಯ ಸಿಇಒ ಆಗಿ ಕೆಲಸ ಮಾಡಿದ್ದು, ಎಫ್‌ಎಂಸಿಜಿ ಕಂಪನಿಯಲ್ಲಿ ಸಿಇಒ ಆಗಿ ಅತಿ ದೀರ್ಘ ಅವಧಿಗೆ ಕೆಲಸ ಮಾಡಿದ ಹೆಗ್ಗಳಿಕೆ ಹೊಂದಿದ್ದಾರೆ. ದುಗ್ಗಲ್ ಅವರು ಇಂಡೋ-ಟರ್ಕಿಶ್ ಜೆಬಿಸಿ ಮತ್ತು ಆಹಾರ ಸಂಸ್ಕರಣೆಯಲ್ಲಿ ಫಿಕ್ಕಿ ಕಮಿಟಿ ಸೇರಿದಂತೆ ಹಲವು ಸಮಿತಿಗಳಲ್ಲಿ ಮುಖ್ಯಸ್ಥರು ಮತ್ತು ಸಹ ಮುಖ್ಯಸ್ಥರಾಗಿದ್ದರು. ಮೂರು ಬಾರಿ ವರ್ಷದ ಎಫ್‌ಎಂಸಿಜಿ ಸಿಇಒ ಎಂದು ಮತ್ತು ಹಲವು ಬಾರಿ ಭಾರತದ ಅಗ್ರ ಸಂಪತ್ತು ರಚನೆಕಾರ ಎಂಬ ಪುರಸ್ಕಾರವನ್ನೂ ಅವರು ಪಡೆದಿದ್ದಾರೆ. ಉದ್ಯಮ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಮಾಡಿದ ಸಾಧನೆಗೆ 2019 ರಲ್ಲಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಕಲ್ಕತ್ತಾದ ಡಿಸ್ಟಿಗ್ವಿಶ್ಡ್ ಅಲುಮ್ನಸ್ ಅವಾರ್ಡ್ ಅನ್ನೂ ಪಡೆದಿದ್ದಾರೆ.

 


ಶ್ರೀ ಅಟುಲ್ ಡಾಗ

ವ್ಯಾಪಾರ ಮುಖ್ಯಸ್ಥ, ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಮುಖ್ಯ ಹಣಕಾಸು ಅಧಿಕಾರಿ

birla

ಶ್ರೀ ಅಟುಲ್ ಡಾಗ

ವ್ಯಾಪಾರ ಮುಖ್ಯಸ್ಥ, ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಮುಖ್ಯ ಹಣಕಾಸು ಅಧಿಕಾರಿ

 

ಶ್ರೀ ಅಟುಲ್ ಡಾಗ ಅಲ್ಟ್ರಾಟೆಕ್ ಸಿಮೆಂಟ್ ಲಿಮಿಟೆಡ್‌ನಲ್ಲಿ ಸಂಪೂರ್ಣ ಸಮಯದ ನಿರ್ದೇಶಕ ಮತ್ತು ಮುಖ್ಯ ಹಣಕಾಸು ಅಧಿಕಾರಿ. ಅಲ್ಟ್ರಾಟೆಕ್ನಲ್ಲಿ, ಹೂಡಿಕೆದಾರರ ಸಂಬಂಧಗಳನ್ನು ನಿರ್ವಹಿಸಲು ದೃಡವಾದ ವೇದಿಕೆಯನ್ನು ರಚಿಸುವುದು, ಎಂ & ಎ ಅವಕಾಶಗಳನ್ನು ಮೌಲ್ಯಮಾಪನ ಮಾಡುವುದು ಮತ್ತು ದೇಶೀಯ ಹಣಕಾಸು ಮಾರುಕಟ್ಟೆಗಳಲ್ಲಿ ದೀರ್ಘಾವಧಿಯ ಸಾಲಗಳನ್ನು ಹೆಚ್ಚಿಸಲು ಹೊಸ ಮಾನದಂಡಗಳನ್ನು ರೂಪಿಸುವುದು ಮುಂತಾದ ಹಲವಾರು ಉಪಕ್ರಮಗಳನ್ನು ಅವರು ಕೈಗೊಂಡಿದ್ದಾರೆ. ಅರ್ಹತೆಯ ಪ್ರಕಾರ ಚಾರ್ಟರ್ಡ್ ಅಕೌಂಟೆಂಟ್, ಅವರು 29 ವರ್ಷಗಳ ಅನುಭವವನ್ನು ಹೊಂದಿದ್ದಾರೆ, ಅದರಲ್ಲಿ ಎರಡು ದಶಕಗಳಲ್ಲಿ ಆದಿತ್ಯ ಬಿರ್ಲಾ ಗ್ರೂಪ್ನಲ್ಲಿದ್ದಾರೆ. ಅವರು 1988 ರಲ್ಲಿ ಅಂದಿನ ಇಂಡಿಯನ್ ರೇಯಾನ್ ಲಿಮಿಟೆಡ್‌ನ ವಿಭಾಗವಾದ ರಾಜಶ್ರೀ ಸಿಮೆಂಟ್‌ನಲ್ಲಿ ಗುಂಪಿಗೆ ಸೇರಿದರು. ಅವರು ದಿವಂಗತ ಶ್ರೀ ಆದಿತ್ಯ ಬಿರ್ಲಾ ಅವರೊಂದಿಗೆ ಕಾರ್ಯನಿರ್ವಾಹಕ ಸಹಾಯಕರಾಗಿ ಕೆಲಸ ಮಾಡಿದ್ದಾರೆ, ಅಲ್ಲಿ ಅವರು ಸಿಮೆಂಟ್, ಅಲ್ಯೂಮಿನಿಯಂ, ಕಾರ್ಬನ್ ಕಪ್ಪು ಮತ್ತು ವಿಎಸ್ಎಫ್ ಮತ್ತು ಕೆಮಿಕಲ್ಸ್ ವ್ಯವಹಾರದೊಂದಿಗೆ ನಿಕಟವಾಗಿ ಕೆಲಸ ಮಾಡಿದರು. ಶ್ರೀ ಡಾಗಾ ಅವರು ಕಾರ್ಪೊರೇಟ್ ಮ್ಯಾನೇಜ್ಮೆಂಟ್ ಇನ್ಫರ್ಮೇಷನ್ ಸಿಸ್ಟಮ್ ಅನ್ನು ಪೋರ್ಟ್ಫೋಲಿಯೋ ಮಾಲೀಕರಾಗಿ ಆದಿತ್ಯ ಬಿರ್ಲಾ ಮ್ಯಾನೇಜ್ಮೆಂಟ್ ಕಾರ್ಪೊರೇಶನ್ ಪ್ರೈವೇಟ್ ಲಿಮಿಟೆಡ್ ನ ಕಾರ್ಪೊರೇಟ್ ಫೈನಾನ್ಸ್ ಗ್ರೂಪ್ ಜೊತೆ ಕೆಲಸ ಮಾಡಿದ್ದಾರೆ. 2007 ರಲ್ಲಿ, ಅವರು ಪ್ರಾರಂಭದ ಹಣಕಾಸು ಕಾರ್ಯದ ಮುಖ್ಯಸ್ಥರಾಗಿ ಆದಿತ್ಯ ಬಿರ್ಲಾ ರಿಟೇಲ್ ಲಿಮಿಟೆಡ್‌ಗೆ ತೆರಳಿದರು. ಅವರು ಬಲವಾದ ತಂಡವನ್ನು ನಿರ್ಮಿಸಿದರು, 2010 ರಿಂದ ಮುಖ್ಯ ಹಣಕಾಸು ಅಧಿಕಾರಿಯಾಗಿ ಅಧಿಕಾರ ವಹಿಸಿಕೊಂಡರು. 2014 ರಲ್ಲಿ ಶ್ರೀ ಡಾಗಾ ಅಲ್ಟ್ರಾಟೆಕ್ ಸಿಮೆಂಟ್ ಲಿಮಿಟೆಡ್‌ನ ಮುಖ್ಯ ಹಣಕಾಸು ಅಧಿಕಾರಿಯಾಗಿ ಅಧಿಕಾರ ವಹಿಸಿಕೊಂಡರು.


ಮಂಡಳಿ ಸಮಿತಿಗಳು


Download

Terms and Conditions of Independent Director

Download

Familiarisation Programme

Download

Notice from Shareholder 2021



Loading....