1. ಮೇಲ್ಪದರು ತಯಾರಿಕೆ
ಮೇಲ್ಪದರು ಒಣಗಿರುವಾಗ ಮತ್ತು ಗ್ರೀಸ್ ಅಥವಾ ಯಾವುದೇ ಕೊಳಕು ಇಲ್ಲದಿದ್ದಾಗ ಮಾತ್ರ ಮೈಕ್ರೋ ಕಾಂಕ್ರೀಟ್ ಅನ್ನು ಅನ್ವಯಿಸಬೇಕು. ಅದಕ್ಕಾಗಿಯೇ, ಯಾವುದೇ ಕಾಂಕ್ರೀಟ್ ಅಥವಾ ಸ್ಟೀಲ್ ಮೇಲ್ಮೈಗೆ ಅನ್ವಯಿಸುವ ಮೊದಲು, ಮೇಲ್ಮೈಯನ್ನು ಸ್ವಚ್ಛಗೊಳಿಸಲಾಗಿದೆಯೆ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಅತ್ಯಗತ್ಯ. ಮೈಕ್ರೋ ಕಾಂಕ್ರೀಟ್ ಅನ್ನು ಅನ್ವಯಿಸುವ ಮೊದಲು ತುಕ್ಕು ಹಿಡಿದಿರುವ ಲೋಹದ ಮೇಲ್ಪದರುಗಳನ್ನು ಸ್ವಚ್ಛಗೊಳಿಸಿದ ನಂತರ ಹಚ್ಚಬೇಕು.
2. ಮಿಶ್ರಣ
ಮೈಕ್ರೊ ಕಾಂಕ್ರೀಟ್ ಅನ್ನು ಮಿಶ್ರಣ ಮಾಡುವುದು ಸಾಂಪ್ರದಾಯಿಕ ಕಾಂಕ್ರೀಟ್ಗಿಂತ ಅತ್ಯಂತ ಸುಲಭವಾಗಿದೆ, ಇದು ಕೂಡ ಮೈಕ್ರೋ ಕಾಂಕ್ರೀಟ್ ಅತ್ಯಂತ ಉತ್ಕೃಷ್ಟ ಆಯ್ಕೆಯಾಗಿರುವುದಕ್ಕೆ ಇರುವ ಮತ್ತೊಂದು ಕಾರಣವಾಗಿದೆ. ಅಗತ್ಯವಿರುವ ಪ್ರಮಾಣವನ್ನು ಆಧರಿಸಿ, ಮಿಶ್ರಣವನ್ನು ಕೈಯಿಂದ ಅಥವಾ ಮಿಶ್ರಣ ಪಾತ್ರೆಯಲ್ಲಿ ಹಾಕಿಕೊಂಡು ಬೆರೆಸಬಹುದು.
ಮೈಕ್ರೋ ಕಾಂಕ್ರೀಟ್‌ಗೆ ಕಡಿಮೆ ನೀರಿನ ಅವಶ್ಯಕತೆ ಇರುವುದರಿಂದ, ಅದರ ಮಿಶ್ರಣವನ್ನು ತಯಾರಿಸುವಾಗ ಮೈಕ್ರೋ ಕಾಂಕ್ರೀಟ್‌ಗೆ 1:8 ನೀರಿನ ಅನುಪಾತವನ್ನು ಅನುಸರಿಸುವುದು ಅಗತ್ಯ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿರಿ. ನೀರು ಮತ್ತು ಮೈಕ್ರೊ ಕಾಂಕ್ರೀಟ್ ಅನ್ನು ಒಟ್ಟಿಗೆ ಸೇರಿಸಿದ ನಂತರ, ನಂತರ ಮಿಶ್ರಣವನ್ನಾಗಿಸಲು ನಿರಂತರವಾಗಿ ಕಲಕಿ ಅದು ಉಪಯೋಗಕ್ಕೆ ಸಿದ್ಧವಾಗುವಂಗತೆ ಮಾಡಬೇಕಾಗುತ್ತದೆ.
3. ಸುರಿಯುವುದು (ಪೋರಿಂಗ್)
ಮೇಲ್ಪದರ ಯಾವುದೇ ಇರಲಿ, ಮೈಕ್ರೋ ಕಾಂಕ್ರೀಟ್ ಅನ್ನು ಮಿಶ್ರಣ ಮಾಡಿದ ತಕ್ಷಣ ಸುರಿಯಬೇಕು. ತಕ್ಷಣವೇ ಸುರಿಯುವಿಕೆ (ಪೋರಿಂಗ್) ಮಾಡಬೇಕಾದ ಅಗತ್ಯವೇನೆಂದರೆ ಹೆಚ್ಚು ಸಮಯ ಹಾಗೇ ಇಡುವುದರಿಂದ ಮಿಶ್ರಣವು ಒಣಗಬಹುದು. ಹೀಗಾಗಿ ಮಿಶ್ರಣವನ್ನು ಬಳಸುವ ಸಮಯದಲ್ಲಿ ಮುಂದೆ ಅದು ಸದೃಢತೆ ಕೊಡಲು ಮತ್ತು ಹರಿದು ಎಲ್ಲಡೆ ಬಳಕೆ ಆಗುವಂತೆ ತ್ವರಿತವಾಗಿ ಸುರಿಯಲಾಗುತ್ತದೆ. ಮಿಶ್ರಣವನ್ನು ಸುರಿದ ನಂತರ, ಅದನ್ನು ಒಣಗಲು ಬಿಡುವ ಮೊದಲು ಮಿಶ್ರಣವನ್ನು ಸರಿಯಾಗಿ ಮಾಡಲು ಅಗತ್ಯ ಸಾಧನಗಳನ್ನು ಬಳಸಬಹುದು.
ಮೈಕ್ರೋ ಕಾಂಕ್ರೀಟ್‌ನ ಕೆಲವು ಅನುಕೂಲಗಳು ಯಾವುವು?
ಮೈಕ್ರೊ ಕಾಂಕ್ರೀಟ್ ಮಿಶ್ರಣಕ್ಕೆ ಭಾರೀ ಯಂತ್ರೋಪಕರಣಗಳ ಅಗತ್ಯವಿರುವುದಿಲ್ಲ ಏಕೆಂದರೆ ಅದು ಹರಿಯುವ ವಸ್ತುಗಳನ್ನು ಹೊಂದಿದೆ ಮತ್ತು ಅದು ಕುಗ್ಗಿಸುವಿಕೆಯ ಯಾವುದೇ ಅಗತ್ಯವಿರುವುದಿಲ್ಲ.
ಇದು ಒಳಹೋಗಲು ಕಡಿಮೆ ಜಾಗ ಸಾಕು ಮತ್ತು ಒಳಾಂಗಣ ಮತ್ತು ಹೊರಾಂಗಣ ಪ್ರದೇಶಗಳಲ್ಲಿ ಬಳಸಬಹುದು.
ಇದು ಜೀರೋ ಕ್ಲೋರೈಡ್ ಹೊಂದಿದ್ದು, ಇದು ಹೆಚ್ಚು ಬಾಳಿಕೆ ಬರುವಂತೆ ಮಾಡುತ್ತದೆ.
ಮೈಕ್ರೋ ಕಾಂಕ್ರೀಟ್ ಮೇಲ್ಮೈಗಳಲ್ಲಿ ಯಾವುದೇ ಕ್ರ್ಯಾಕ್ಗಳು ಉಂಟಾಗುವುದಿಲ್ಲ ಏಕೆಂದರೆ ಅದು ಕುಗ್ಗುವುದಿಲ್ಲ.
ಮೈಕ್ರೋ ಕಾಂಕ್ರೀಟ್ ಸಹ ಬಜೆಟ್ ಸ್ನೇಹಿ ಆಯ್ಕೆಯಾಗಿದೆ ಏಕೆಂದರೆ ಇದು ಸಾಂಪ್ರದಾಯಿಕ ಕಾಂಕ್ರೀಟ್ಗಿಂತ ಕಡಿಮೆ ವೆಚ್ಚವನ್ನು ಹೊಂದಿದೆ.
ಕಾಂಕ್ರೀಟ್ ಅನ್ನು ಮಿಶ್ರಣ ಮಾಡಲು ಅಥವಾ ಹಾಕಲು ನೀವು ಪರಿಣತಿಯನ್ನು ಹೊಂದಿರಬೇಕಾಗಿಲ್ಲ, ಏಕೆಂದರೆ ಇದು ಮೊದಲೇ-ಪ್ಯಾಕೇಜ್ ಮಾಡಿದ ರೂಪದಲ್ಲಿ ಬರುತ್ತದೆ, ಇದು ಮನುಷ್ಯರು ಮಾಡುವ ತಪ್ಪುಗಳಿಗೆ ಅವಕಾಶವನ್ನು ಕೊಡುವುದಿಲ್ಲ.
- ಇದು ಕಡಿಮೆ ನೀರಿನ ಅಗತ್ಯವನ್ನು ಹೊಂದಿದೆ ಮತ್ತು ನಿಗದಿತ ಬಳಕೆಗಾಗಿ ಕಾಂಕ್ರೀಟ್‌ನಲ್ಲಿ 1:8 ನೀರಿನ ಸಿಮೆಂಟ್ ಅನುಪಾತಕ್ಕೆ ಹಾಕಿಬೇಕು.
ಇದನ್ನೂ ಓದಿ: ಫ್ಲೋರ್ ಸ್ಕ್ರೀಡಿಂಗ್ ಕುರಿತು ಮಾರ್ಗದರ್ಶಿ