ವಿವಿಧ ಬಗೆಯ ಪ್ರಿಕಾಸ್ಟ್ ಕಾಂಕ್ರೀಟ್‌ಗಳನ್ನು ನೋಡೋಣ.
ಆಯ್ಕೆ ಮಾಡಿಕೊಳ್ಳಲು ಹಲವು ಬಗೆಯ ಪ್ರಿಕಾಸ್ಟ್ ಕಾಂಕ್ರೀಟ್‌ಗಳಿವೆ. ಅವುಗಳ ಪೈಕಿ ಐದು ಸಾಮಾನ್ಯ ಬಗೆಯವುಗಳನ್ನು ಇಲ್ಲಿ ನೋಡೋಣ:
1. ಪ್ರಿಕಾಸ್ಟ್ ಕಾಂಕ್ರೀಟ್ ಗೋಡೆಗಳು
ಇವುಗಳು ದೊಡ್ಡದಾದ ಕಾಂಕ್ರೀಟ್ ಫಲಕಗಳಾಗಿದ್ದು, ಕಟ್ಟಡದ ಹೊರಾಂಗಣ ಅಥವಾ ಒಳಾಂಗಣ ಗೋಡೆಗಳ ನಿರ್ಮಾಣಕ್ಕೆ ಬಳಸಬಹುದಾಗಿದೆ. ಅವುಗಳನ್ನು ವಿಶೇಷವಾಗಿ ದೊಡ್ಡದಾದ ಆಯತಾಕಾರದ ಫಲಕಗಳಾಗಿ ತಯಾರಿಸಲಾಗುತ್ತದೆ. ಮತ್ತು ಇವುಗಳನ್ನು ನಿರ್ಮಾಣ ಸ್ಥಳದಲ್ಲಿ ಬೇಗನೆ ಜೋಡಿಸಬಹುದು ಮತ್ತು ಅಳವಡಿಸಬಹುದಾಗಿದೆ.
2. ಪ್ರಿಕಾಸ್ಟ್ ಕಾಂಕ್ರೀಟ್ ಬೀಮ್ (ತೊಲೆ)ಗಳು ಮತ್ತು ಕಾಲಂಗಳು
ಕಟ್ಟಡಗಳು ಅಥವಾ ಸೇತುವೆಗಳಿಗೆ ರಚನಾತ್ಮಕ ಬೆಂಬಲವನ್ನು ಒದಗಿಸಲು ಇವುಗಳನ್ನು ವಿನ್ಯಾಸಗೊಳಿಸಲಾಗಿದೆ ಮತ್ತು ನಿರ್ದಿಷ್ಟ ಲೋಡ್ ಅವಶ್ಯಕತೆಗಳಿಗೆ ತಕ್ಕಂತೆ ವಿಭಿನ್ನ ಆಕಾರಗಳು ಮತ್ತು ಗಾತ್ರಗಳಲ್ಲಿ ತಯಾರಿಸಲಾಗುತ್ತದೆ.
3. ಪ್ರಿಕಾಸ್ಟ್ ಕಾಂಕ್ರೀಟ್ ಸ್ಲ್ಯಾಬ್‌ಗಳು (ಚಪ್ಪಡಿಗಳು) ಮತ್ತು ಪ್ಲಾಂಕ್‌ಗಳು (ಹಲಗೆಗಳು)
ಇವುಗಳು ಚಪ್ಪಟೆಯಾದ ಪ್ಯಾನಲ್‌ಗಳಾಗಿವೆ. ಇವುಗಳನ್ನು ಕಟ್ಟಡಗಳಲ್ಲಿ ನೆಲಹಾಸು ಆಗಿ ಅಥವಾ ಛಾವಣಿಗಳಾಗಿ ಬಳಸಬಹುದು. ಅವುಗಳನ್ನು ಸಾಮಾನ್ಯವಾಗಿ ಉದ್ದವಾದ, ತೆಳುವಾದ ವಿಭಾಗಗಳಲ್ಲಿ ತಯಾರಿಸಲಾಗುತ್ತದೆ, ಅದನ್ನು ಸುಲಭವಾಗಿ ಸಾಗಿಸಬಹುದು ಮತ್ತು ನಿರ್ಮಾಣ ಸ್ಥಳದಲ್ಲಿ ಸ್ಥಾಪಿಸಬಹುದು.
4. ಪ್ರಿಕಾಸ್ಟ್ ಕಾಂಕ್ರೀಟ್ ಮೆಟ್ಟಿಲುಗಳು
ಇವುಗಳು ಮೊದಲೇ ತಯಾರಿಸಲಾದ ಎಲಿಮೆಂಟ್‌ಗಳಾಗಿದ್ದು ಕಟ್ಟಡಗಳಲ್ಲಿ ಮೆಟ್ಟಿಲುಗನ್ನು ನಿರ್ಮಿಸಲು ಬಳಸಬಹುದಾಗಿದೆ. ಅವು ಪೂರ್ವ-ಸ್ಥಾಪಿತ ಟ್ರೆಡ್‌ಗಳು ಮತ್ತು ರೈಸರ್‌ಗಳೊಂದಿಗೆ ಬರುತ್ತವೆ ಮತ್ತು ನಿರ್ದಿಷ್ಟ ಕಟ್ಟಡ ವಿನ್ಯಾಸದ ಅವಶ್ಯಕತೆಗಳನ್ನು ಪೂರೈಸಲು ಬೇಕಾದಂತೆ ಕಸ್ಟಮೈಸ್ ಮಾಡಬಹುದು.
5. ಪ್ರಿಕಾಸ್ಟ್ ಕಾಂಕ್ರೀಟ್ ತಡೆಗೋಡೆಗಳು (ರಿಟೇನಿಂಗ್ ವಾಲ್ಸ್)
ಇವು ಮಣ್ಣು ಅಥವಾ ಇತರ ವಸ್ತುಗಳನ್ನು ಉಳಿಸಿಕೊಳ್ಳಲು ಬಳಸುವ ಅಂಶಗಳಾಗಿವೆ. ಪೂರ್ಣ ಗೋಡೆಯನ್ನು ರಚಿಸಲು ಪರಸ್ಪರ ಜೋಡಿಸಬಹುದಾದ ಇಂಟರ್ಲಾಕಿಂಗ್ ಅಂಚುಗಳೊಂದಿಗೆ ಅವುಗಳನ್ನು ವಿಶಿಷ್ಟವಾಗಿ ತಯಾರಿಸಲಾಗುತ್ತದೆ ಮತ್ತು ನಿರ್ದಿಷ್ಟ ಲೋಡ್ ಅವಶ್ಯಕತೆಗಳನ್ನು ಪೂರೈಸಲು ಬೇಕಾದಂತೆ ವಿನ್ಯಾಸಗೊಳಿಸಬಹುದು.
ಕಾಂಕ್ರೀಟ್‌ನ ಬಲಿಷ್ಠತೆಯು ಕಾಂಕ್ರೀಟ್ ಮಿಶ್ರಣದ ಗುಣಮಟ್ಟ, ಕ್ಯೂರಿಂಗ್ ಪರಿಸ್ಥಿತಿಗಳು ಮತ್ತು ಕಾಂಕ್ರೀಟ್‌ನ ವಯಸ್ಸು ಸೇರಿದಂತೆ ಹಲವಾರು ಅಂಶಗಳಿಂದ ಪ್ರಭಾವಿತವಾಗಿರುತ್ತದೆ ಎಂಬುದನ್ನು ಗಮನಿಸಬೇಕಾಗಿದೆ. ಆದ್ದರಿಂದ, ಗುಣಮಟ್ಟವನ್ನು ಖಾತ್ರಿಪಡಿಸಲು ಸಾಮಾನ್ಯವಾಗಿ ಕಾಂಕ್ರೀಟ್‌ನ ಅನೇಕ ಮಾದರಿಗಳನ್ನು ಸಮಗ್ರ ಪರೀಕ್ಷೆಗೆ ಒಳಪಡಿಸಲಾಗುತ್ತದೆ.
ಪ್ರಿಕಾಸ್ಟ್ ಕಾಂಕ್ರೀಟ್‌ನ ಅನುಕೂಲಗಳು
ಪ್ರಿಕಾಸ್ಟ್ ಕಾಂಕ್ರೀಟ್‌ನ ಬಳಕೆಯು ಕಟ್ಟಡ ನಿರ್ಮಾಣ ಯೋಜನೆಗಳಲ್ಲಿ ಹಲವಾರು ಅನುಕೂಲಗಳನ್ನು ಹೊಂದಿದೆ. ಕೆಲವು ಪ್ರಮುಖ ಅನುಕೂಲಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ:
ಇದು ಸ್ಥಿರವಾದ ಗುಣಮಟ್ಟ ಮತ್ತು ಏಕರೂಪತೆಯನ್ನು ಖಾತ್ರಿಗೊಳಿಸುತ್ತದೆ. ಇದನ್ನು ನಿಯಂತ್ರಿತ ಪರಿಸರದಲ್ಲಿ ತಯಾರಿಸಲಾಗುತ್ತದೆ. ಇದು ದೋಷಗಳನ್ನು ಕಡಿಮೆ ಮಾಡುತ್ತದೆ ಮತ್ತು ಸಿದ್ಧಪಡಿಸಿದ ಉತ್ಪನ್ನದ ಒಟ್ಟಾರೆ ಗುಣಮಟ್ಟವನ್ನು ಸುಧಾರಿಸುತ್ತದೆ.
ಇದು ಆಫ್-ಸೈಟ್ ತಯಾರಿಸಲ್ಪಟ್ಟಿರುವುದರಿಂದ ವೇಗವಾಗಿ ಆನ್-ಸೈಟ್ ನಿರ್ಮಾಣಕ್ಕೆ ಅನುಮತಿಸುತ್ತದೆ, ಒಟ್ಟಾರೆ ನಿರ್ಮಾಣ ಸಮಯವನ್ನು ಕಡಿಮೆ ಮಾಡುತ್ತದೆ ಮತ್ತು ಯೋಜನೆಯ ದಕ್ಷತೆಯನ್ನು ಹೆಚ್ಚಿಸುತ್ತದೆ.
ಇದು ಕಠಿಣ ಹವಾಮಾನ ಮತ್ತು ಭಾರವಾದ ಹೊರೆಗಳನ್ನು ತಡೆದುಕೊಳ್ಳಬಲ್ಲ ಬಾಳಿಕೆ ಬರುವ ವಸ್ತುವಾಗಿದ್ದು, ಬೆಂಕಿ, ಶಿಥಿಲವಾಗುವಿಕೆ ಮತ್ತು ಕೀಟಗಳಿಗೆ ನಿರೋಧಕವಾಗಿದೆ, ಇದು ದೀರ್ಘಕಾಲೀನ ಆಯ್ಕೆಯಾಗಿದೆ.
ವಿವಿಧ ಆಕಾರಗಳು, ಗಾತ್ರಗಳು ಮತ್ತು ಫಿನಿಶಿಂಗ್ ನೊಂದಿಗೆ ತಯಾರಾಗುವ ಕಾರಣ, ಇದು ನಿರ್ದಿಷ್ಟ ಅವಶ್ಯಕತೆಗಳಿಗೆ ಸರಿಹೊಂದುವಂತೆ ವಿನ್ಯಾಸದಲ್ಲಿ ಹೆಚ್ಚಿನ ಹೊಂದಾಣಿಕೆ ಮತ್ತು ಕಸ್ಟಮೈಸೇಶನ್ ಮಾಡಲು ಅನುಕೂಲ ಒದಗಿಸುತ್ತದೆ.
ಇದು ಸುಸ್ಥಿರ ನಿರ್ಮಾಣ ವಸ್ತುವಾಗಿದ್ದು, ಮರುಬಳಕೆಯ ವಸ್ತುಗಳಿಂದ ಮಾಡಬಹುದಾಗಿದೆ ಮತ್ತು ಅದರ ಜೀವನ ಚಕ್ರದ ಕೊನೆಯಲ್ಲಿ ಸಂಪೂರ್ಣವಾಗಿ ಮರುಬಳಕೆ ಮಾಡಬಹುದಾಗಿದೆ.
ಸಾಂಪ್ರದಾಯಿಕ ನಿರ್ಮಾಣ ವಿಧಾನಗಳಿಗೆ ಹೋಲಿಸಿದರೆ ಒಟ್ಟಾರೆಯಾಗಿ, ಪ್ರಿಕಾಸ್ಟ್ ಕಾಂಕ್ರೀಟ್ ಹೆಚ್ಚಿನ ವೇಗ, ಗುಣಮಟ್ಟ, ಕಡಿಮೆ ವೆಚ್ಚ ಮತ್ತು ಬಾಳಿಕೆಯ ಅನುಕೂಲತೆಗಳನ್ನು ನೀಡುತ್ತದೆ.