Share:
Home Building Guide
Our Products
Useful Tools
Waterproofing methods, Modern kitchen designs, Vaastu tips for home, Home Construction cost
Share:
ಗೋಡೆಗಳಲ್ಲಿ ತೇವಾಂಶ ಉಂಟಾಗುವುದು ಮಳೆಗಾಲದಲ್ಲಿ ಸ್ವತಂತ್ರ ಮನೆಗಳ ಮಾಲೀಕರನ್ನು ಕಾಡುವ ಒಂದು ಸಾಮಾನ್ಯ ತೊಂದರೆಯಾಗಿದೆ. ಇದು ತುಂಬಾ ಗಂಭೀರ ಸಮಸ್ಯೆಯಾಗಿದ್ದು, ಮಳೆಗಾಲದ ಮೊದಲೆ ಇದರ ಬಗ್ಗೆ ಕಾಳಜಿ ವಹಿಸಬೇಕಾಗುತ್ತದೆ. ಇದನ್ನು ಮೊದಲೆ ತಡೆಯದೆ ಹೋದರೆ ತೇವಾಂಶದಿಂದ ಗೋಡೆಗಳು ಬಿರುಕು ಬಿಡಬಹುದು. ಮನೆ ಸೋರುವುದು, ಬಣ್ಣ ಕಿತ್ತು ಬರುವುದು, ಬಣ್ಣಗಳ ನಡುವೆ ಬಿರುಕುಬಿಡುವುದು ಮುಂತಾದ ಸಮಸ್ಯೆಗಳಿಗೆ ಕಾರಣವಾಗಬಹುದು. ಇದನ್ನು ಸರಿಯಾಗಿ ತಡೆಗಟ್ಟದೆ ಇದ್ದಲ್ಲಿ ಗೋಡೆಗಳ ಮೇಲೆ ಕಲೆ ಬೀಳಬಹುದು. ಶೀಲಿಂದ್ರಗಳು ಬಳೆದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ತೇವಾಂಶವು ಮನೆಯ ಸೌಂದರ್ಯನ್ನು, ಮೂಲ ರಚನೆಯನ್ನು ಸಹ ಹಾಳು ಮಾಡಬಹುದು. ಆದ್ದರಿಂದ ತೇವಾಂಶದಿಂದ ಮನೆಯನ್ನು ಕಾಪಾಡುವುದು ತುಂಬಾ ಮುಖ್ಯವಾಗಿದೆ.
ಈ ಬ್ಲಾಗ್ ನಲ್ಲಿ ಗೋಡೆಗಳ ತೇವಾಂಶದ ಬಗ್ಗೆ ಎಲ್ಲ ಅಂಶಗಳನ್ನು ಮತ್ತು ಅದನ್ನು ತಡೆಗಟ್ಟುವ ಕ್ರಮಗಳ ಬಗ್ಗೆ ತಿಳಿಯಬಹುದು. ಇದರಿಂದ ಆರೋಗ್ಯ ಮತ್ತು ಮನೆಯ ಮೇಲೆ ಆಗುವ ಸಮಸ್ಯೆಗಳನ್ನು ತಡೆಯುವ ಬಗ್ಗೆಯು ತಿಳಿಯಬಹುದು.
ಗೋಡೆಗಳ ತೇವಾಂಶದಲ್ಲಿ 3 ಬಗೆಗಳು ಇವೆ:
ಒಳಹೊಕ್ಕಿರುವ (ಆಳವಾದ) ತೇವಾಂಶ
ಏರುತ್ತಿರುವ ತೇವಾಂಶ
ಘನೀಕೃತ ತೇವಾಂಶ
ಈ ವಿಧಗಳನ್ನು ವಿವರವಾಗಿ ಅರ್ಥಮಾಡಿಕೊಳ್ಳೊಣ
ಗೋಡೆಯಿಂದ ನೀರು ಸೋರುತ್ತಿದ್ದರೆ ಗೋಡೆಯಲ್ಲಿ ಆಳವಾದ ತೇವಾಂಶ ಉಂಟಾಗುತ್ತದೆ.
ಹಲವಾರು ಕಾರಣಗಳಿಂದ ಗೋಡೆಗೆ ನೀರು ಬರುತ್ತಿರಬಹುದು, ಕೆಳಗಿನ ಕಾರಣಗಳಿಂದಲೂ ಸಹ ಬರಬಹುದು.
ನಿಮ್ಮ ಛಾಬಣಿಯ ಮಳೆ ನೀರು ಹೋಗುವ ಮಾರ್ಗ ಒಡೆದಿರಬಹುದು ಅಥವಾ ಕಟ್ಟಿರಬಹುದು.
ಇಟ್ಟಿಗೆಗಳು ಹವಾಮಾನ ಬದಲಾವಣೆ ಗೆ ತಮ್ಮ ಸಾಮರ್ಥ್ಯ ವನ್ನು ಕಳೆದು ಕೊಳ್ಳ ಬಹುದು
ಒಡೆದ ಇಟ್ಟಿಗೆಗಳು
ಬಾಗಿಲುಮತ್ತು ಕಿಟಕಿಯ ಚೌಕಟ್ಟಿನ ಬಿರುಕು
ಸೋರುವ ಪೈಪ್ ಗಳು
ಛಾವಣಿಯಲ್ಲಿ ಬಿಟ್ಟುಹೋದ ಅಥವಾ ಒಡೆದ ಹಂಚುಗಳು
ನೀವು ತೇವಾಂಶಕ್ಕೆ ಕಾರಣವಾದ ಅಂಶವನ್ನು ಕಂಡುಹಿಡಿಯಬೇಕು ಮತ್ತು ಇದಕ್ಕೆ ಕಾರಣವಾದ ಪ್ರತಿಯೊಂದು ಅಂಶವನ್ನು ತೊಡೆದುಹಾಕಬೇಕು
ಮಳೆನೀರು ಹೊಗುವ ಮಾರ್ಗವನ್ನು ರಿಪೇರಿ ಮತ್ತು ಕ್ಲೀನ್ ಮಾಡಬೇಕು
ಹಾಳಾದ ಅಥವಾ ಕಾಣೆಯಾದ ಛಾವಣಿಯ ಹಂಚನ್ನು ರಿಪೇರಿ ಮಾಡಬೇಕು ಅಥವಾ ಬದಲಾಯಿಸಬೇಕು
ಗೋಡೆಯಲ್ಲಿನ ಬಿರುಕು ಮತ್ತು ಬಾಗಿಲು, ಕಿಟಕಿಗಳಿಗೆ ಚೌಕಟ್ಟಿನ ಬಿರುಕನ್ನು ಮುಚ್ಚಬೇಕು
ಸೋರುತ್ತಿರುವ ಪೈಪ್ ಗಳನ್ನು ಸರಿ ಮಾಡಬೇಕು
ಬಿರುಕು ಬಿಟ್ಟ ಇಟ್ಟಿಗೆಗಳನ್ನು ನೀರು ಸೋರುವುದನ್ನು ತಡೆಗಟ್ಟುವ ವಸ್ತುಗಳಿಂದ ಅಥವಾ ಅದರ ಮೇಲೆ ಪೇಂಟ್ ಮಾಡುವುದರ ಮೂಲಕ ತಡೆಗಟ್ಟಬೇಕು
ನೆಲದಿಂದ ಗೋಡೆಗಳು ನೀರನ್ನು ಹೀರಿಕೊಳ್ಳುವುದು ತೇವಾಂಶದಲ್ಲಿ ಏರಿಕೆಯಾಗಲು ಕಾರಣವಾಗುತ್ತದೆ. ಕಟ್ಟಡದ ನಿರ್ಮಾಣದ ತೊಂದರೆಗಳು, ವಿಶೇಷವಾಗಿ ತೇವಾಂಶ ನಿರೋಧಕ (ಡ್ಯಾಂಪ್ ಪ್ರೂಪ್ )ಹಚ್ಚುವಲ್ಲಿ ಅಥವಾ ಮತ್ತೊಂದು ಪದರ {ಮೆಂಬ್ರೆನ್ }ಹಚ್ಚುವಾಗ ಆದ ಸಮಸ್ಯೆಯಿಂದ ತೇವಾಂಶ ಏರಿಕೆ ಯಾಗುತ್ತದೆ. ಡ್ಯಾಂಪ್ ಪ್ರೂಫ್ ಕೋರ್ಸ್ ಎನ್ನುವುದು ಕಟ್ಟಡ ಕಟ್ಟುವಾಗ ಹಚ್ಚುವ ಸೋರಿಕೆ ನಿರೋಧಕ ಪದರವಾಗಿದೆ. ಇದನ್ನು ಸಾಮಾನ್ಯವಾಗಿ ನೆಲದಿಂದ 15 ಸೆಂಮೀ ಎತ್ತರದವರೆಗೆ ಅಡ್ಡವಾಗಿ ತೇವಾಂಶ ಏರದಂತೆ ತಡೆಯಲು ಹಚ್ಚಲಾಗುತ್ತದೆ. ಇದನ್ನು ಪ್ಲಾಸ್ಟಿಕ್ ಅಥವಾ ಬಿಟುಮಿನ್(ಡಾಂಬರು) ನಿಂದ ಮಾಡಿರುತ್ತಾರೆ. ಮನೆಗಳನ್ನು ನೆಲದಿಂದ ಏರುವ ತೇವಾಂಶದಿಂದ ಕಾಪಾಡಲು ಮಾಡುವ ವಾಟರ್ ಪ್ರೂಫ್ ನ ಪದರಕ್ಕೆ ಡ್ಯಾಂಪ್ ಪ್ರೂಫ್ ಮೆಂಬ್ರೆನ್ ಎಂದು ಕರೆಯುತ್ತಾರೆ ಮತ್ತು ಇದನ್ನು ಕಾಂಕ್ರೀಟ್ ಪ್ಲೋರಿಂಗ್ ನ ಕೆಳಗಡೆ ಮಾಡಲಾಗುತ್ತದೆ. ತೇವಾಂಶ ಏರಿಕೆಯಾಗುತ್ತಿದೆ ಎಂದರೆ ಡ್ಯಾಂಪ್ ಪ್ರೂಫ್ ಕೋರ್ಸ್ ಮತ್ತು ಮೆಂಬ್ರೇನ್ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಅರ್ಥ. ಹೆಚ್ಚಾಗಿ ಮೆಂಬ್ರೆನ್ ಅಥವಾ ಕೋರ್ಸ್ ಗಳು ಇಲ್ಲವೆ ಇಲ್ಲ ಎಂದು ಸಹ ಹೆಳಬಹುದು.
ಏರಿಕೆಯಾಗುತ್ತಿರುವ ತೇವಾಂಶವನ್ನು ತಡೆಯಲು ವೃತ್ತಿಪರರು ಬೇಕಾಗಬಹುದು.
ಮೊಟ್ಟ ಮೊದಲು ನಿಮ್ಮ ಮನೆಗೆ ಡ್ಯಾಂಪ್ ಪ್ರೂಫ್ ಮೆಂಬ್ರೆನ್ ಅಥವಾ ಕೋರ್ಸ್ ಗಳು ಇವೆಯೇ ಎಂದು ಖಚಿತಪಡೆಸಿಕೂಳ್ಳಿ. ಒಂದೊಮ್ಮೆ ಇದೆ ಎಂದಾದರೆ, ನೀವು ಅದರ ಬಗ್ಗೆ ತಿಳಿಯಲು ಅಥವಾ ನೀವು ವೃತ್ತಿಪರರನ್ನು ಭೇಟಿಯಾಗಬೇಕು. ಗೋಡೆಗಳ ಪಕ್ಕದ ಧರೆ ಅಥವಾ ನೆಲದ ಎತ್ತರ ಸಹ ಸಮಸ್ಯೆಯಾಗಬಹುದು. ಏಕೆಂದರೆ ನೀರು ನೆಲದಿಂದ ಗೋಡೆಗಳ ಮೇಲೆ ಏರಬಹುದು ಡ್ಯಾಂಪ್ ಪ್ರೂಫ್ ಅನ್ನು ನೆಲಮಟ್ಟದಿಂದ 15 ಸೆಂಮೀ ಎತ್ತರದ ವರೆಗೆ ಮಾಡಬೇಕು, ಆದರೆ, ನೆಲಮಟ್ಟ ಹೆಚ್ಚು ಎತ್ತರದಲ್ಲಿ ಇದ್ದರೆ ತೇವಾಂಶ ಏರುತ್ತಿರುವ ಗೋಡೆಯ ಸುತ್ತಲು ಡ್ಯಾಂಪಿಂಗ್ ಮಾಡಲಾದ ಮಟ್ಟದ ವರೆಗೆ ಮಣ್ಣನ್ನು ತೆಗೆಯಬೇಕು. ಗೋಡೆಗಳನ್ನು ತೇವಾಂಶದಿಂದ ಕಾಪಾಡಲು ಅಸ್ಪಾಲ್ಟ ಹಚ್ಚಬೇಕು.
ಗಾಳಿಯಲ್ಲಿ ಇರುವ ತೇವಾಂಶ ಗೋಡೆಯಯ ಮೇಲೆ ಸಂಗ್ರಹವಾಗಿ ಘನೀಕೃತ ತೇವಾಂಶ ಉಂಟಾಗುತ್ತದೆ. ಬಿಸಿಯಾದ, ತೇವಾಂಶವುಳ್ಳ ಗಾಳಿಯು ತಂಪಾದ ಗೋಡೆಯ ಮೆಲ್ಮೈ ಮೇಲೆ ಕೂತಾಗ ಗಾಳಿಯಲ್ಲಿನ ತೇವಾಂಶ ಗಟ್ಡಿಯಾಗಿ ನೀರಿನ ಹನಿಯಾಗುತ್ತದೆ. ಇದು ಗೋಡೆಯ ಮೇಲೆ ಘನೀಕೃತ ತೇವಾಂಶಕ್ಕೆ ಕಾರಣವಾಗುತ್ತದೆ.
ಹೆಚ್ಚಿನ ಕಿಟಕಿ ಅಥವಾ ವೆಂಟಿಲೇಶನ್ ಇಲ್ಲದೆ ಇರುವುದು, ತಂಪಾದ ಮೆಲ್ಮೈ, ನಡುಮನೆಯನ್ನು ಬೆಚ್ಚಿಗಿಡುವ ವ್ಯವಸ್ಥೆ (ಸೆಂಟ್ರಲ್ ಹೀಟ್ ) ತುಂಬಾ ಕಡಿಮೆ ಇರುವುದು ಇವೆಲ್ಲವು ಘನೀಕೃತ ತೇವಾಂಶಕ್ಕೆ ಕಾರಣವಾಗುತ್ತವೆ.
ಘನೀಕೃತ ತೇವಾಂಶವನ್ನು ಸುಲಭವಾಗಿ ನೀವೆ ಬಗೆಹರಿಸಿಕೊಳ್ಳಬಹುದು. ಹೇಗೆಂದರೆ
ದುಬಾರಿಯ ಬದಲು ದುಪ್ಪಟ್ಟು ಗ್ಲೇಝಿಂಗ್ ಮಾಡಿಸಬೇಕು
ಡಿಹುಮೆಡಿಪೈಯರ್ ಉಪಯೋಗಿಸಬೇಕು.
ಕಿಟಕಿಗಳನ್ನು ತೆರೆದು ಗಾಳಿ ಒಳಗೆ ಬರುವಂತೆ ಮಾಡಿದಾಗ ಫ್ಯಾನ್ ನಿಂದ ವೆಂಟಿಲೇಶನ್ ಹೆಚ್ಚಾಗುವಂತೆ ಮಾಡುತ್ತದೆ.
ಹೊರಗಡೆ ವಾತಾವರಣ ಹೆಚ್ಚು ತಂಪಾದಾಗ ಮನೆಯ ಒಳಗೆ ಉಷ್ಣಾಂಶ ಹೆಚ್ಚು ಮಾಡುವುದು. (ನೀವು ಉತ್ತರ ಭಾರತದಲ್ಲಿ ವಾಸವಾಗಿದ್ದರೆ)
ತೇವಾಂಶದಿಂದ ಪರಿಣಾಮಗೊಂಡ ಜಾಗಗಳನ್ನು ಮತ್ತು ಕಿಟಕಿಗಳನ್ನು ಒರೆಸಬೇಕು
ಕಟ್ಟಡ ಕಟ್ಟುವಾಗ ಕಳಪೆ ವಸ್ತುಗಳನ್ನು ಉಪಯೊಗಿಸುವುದು ಅಥವಾ ವಾಟರ್ ಪ್ರೂಫಿಂಗ್ ಅನ್ನು ಸರಿಯಾಗಿ ಹಚ್ಚದೇ ಇರುವುದು ಗೋಡೆಗಳಿಂದ ನೀರು ಸೋರಲು ಕಾರಣವಾಗುತ್ತದೆ. ಸುದೀರ್ಘ ಕಾಲದವರೆಗೆ ಗೋಡೆಗಳು ಮಳೆ ನೀರಿನಿಂದ ಒದ್ದೆಯಾದಾಗ ಗೋಡೆಗಳಲ್ಲಿ ಬಿರುಕುಗಳು ಉಂಟಾಗಿ ತೇವಾಂಶ ಹೀರಿಕೊಂಡು ಇದರಿಂದ ನೀರು ಸೋರಿಕೆಯಾಗುತ್ತದೆ. ಗೋಡೆಗಳಿಂದ ನೀರು ಸೋರಿದಾಗ, ಅವು ತೇವವಾಗುತ್ತವೆ. ಗೋಡೆಗಳಿಂದ ನೀರು ಸೋರುವುದನ್ನು ತಡೆಗಟ್ಟದೆ ಇದ್ದಾಗ ಮನೆಯ ಒಳಭಾಗದಲ್ಲಿ ನೀರು ಸೋರಿ ಗೋಡೆಯ ಬಣ್ಣ ಹಾಳಾಗುತ್ತದೆ.
ಗೋಡೆಗಳಿಂದ ನೀರು ಸೋರಲು ಇನ್ನು ಕೆಲವು ಕಾರಣಗಳು
ಕೊಳಚೆ ನೀರು, ಬಚ್ಚಲು, ಅಡುಗೆ ಮನೆ ಅಥವಾ ನೀರಿನಟ್ಯಾಂಕ್ ನಿಂದ ಸೋರಿಕೆ ಇದ್ದರೆ ಗೋಡೆಗಳಿಂದ ನೀರು ಸೋರಬಹುದು.
ಕಾಲ ಕಳೆದಂತೆ ನಿಮ್ಮ ಮನೆಯ ಗೋಡೆಗಳು ಬಿರುಕು ಬಿಡಬಹುದು. ಸಮಾನ್ಯವಾಗಿ ಈ ಬಿರುಕುಗಳು ಗೋಡೆಯ ಬಳಿ ಮತ್ತು ಕಿಟಕಿಯ ಚೌಕಟ್ಟಿನ ಬಳಿ ಕಾಣಿಸಿಕೊಳ್ಳುತ್ತವೆ. ಈ ಬಿರುಕುಗಳು ಕಟ್ಟಡದ ಒಳಗೆ ತೇವ ಬರಲು ಅನುವು ಮಾಡಿಕೊಡುತ್ತವೆ ಮತ್ತು ತೇವದ ಕಲೆಗಳು ಮತ್ತು ನೀರಿನ ಸೋರುವಿಕೆ ಉಂಟಾಗುತ್ತದೆ.
ಬಿರುಕುಗಳು ಬಿಟ್ಟ ಗೋಡೆಗಳಿಗೆ ವಾಲ್ ಕ್ರ್ಯಾಕ್ ಪಿಲ್ಲರ್ ಗಳನ್ನು ತುಂಬಿಸಿ ಗೋಡೆಗಳಿಂದ ನೀರು ಸೋರದಂತೆ ತಡೆಯುವುದು ಒಂದು ಉತ್ತಮ ಮಾರ್ಗವಾಗಿದೆ. ಹಾಳಾದ ಪ್ಲಾಸ್ಟರ್ ಗಳನ್ನು ತೆಗೆದು, ಬಿರುಕುಗಳನ್ನು ಮುಚ್ಚಿದ ಮೇಲೆ ಗೋಡೆಯನ್ನು ಪುನಃ ಪೇಂಟ್ ಮಾಡಬೇಕು. ಈ ಎಲ್ಲ ಕೆಲಸಗಳನ್ನು ಮಳೆಗಾಲದ ಮುಂಚೆ ಮುಗಿಸುವುದು ತುಂಬಾ ಅಗತ್ಯವಾಗಿದೆ.
ಹೆಚ್ಚಿನ ಹೊರ ಗೋಡೆಗಳಿಗೆ ಮಾಡುವ ಪೇಂಟ್ ಗಳು ಸಣ್ಣ ರಂದ್ರಗಳನ್ನು ಹೊಂದಿರುತ್ತವೆ ಮತ್ತು ಇವುಗಳಿಂದ ನೀರು ಸೋರಿ ಒಳ ಗೋಡೆಗಳಿಗೆ ಬರುವಂತೆ ಮಾಡುತ್ತವೆ. ಎಕ್ಸ್ ಟಿರಿಯರ್ ವಾಟರ್ ಪ್ರೂಫ್ ಕೋಟ್ ಗಳನ್ನು ಹೊರಗಿನ ಗೋಡೆಗಳಿಗೆ ಹಚ್ಚುವುದರಿಂದ ನೀರು ಗೋಡೆಯ ಒಳಗೆ ಇಳಿಯದಂತೆ ಮಾಡಬಹುದು. ಎಕ್ಸ್ ಟಿರಿಯರ್ ವಾಟರ್ ಪ್ರೂಫ್ ಕೋಟ್ ಹಚ್ಚುವುದರಿಂದ ಗೋಡೆಗಳಿಗೆ ತೇವ ನಿರೋಧಕವಾಗಿ ಕೆಲಸ ಮಾಡುತ್ತದೆ ಮತ್ತು ಮಳೆನೀರು, ತೇವಾಂಶದಿಂದ ಗೋಡೆಗಳನ್ನು ಕಾಪಾಡುತ್ತದೆ.
ಛಾವಣಿಯನ್ನು ವಾಟರ್ ಪ್ರೂಫಿಂಗ್ ಮಾಡಿಸುವುದರಿಂದ ಒಳಗೋಡೆಗಳಿಗೆ ಉಂಟಾಗುವ ತೇವಾಂಶವನ್ನು ತಡೆಗಟ್ಟಬಹುದು. ಛಾವಣಿಯು ಕಠಿಣವಾದ ವಾತಾವರಣವನ್ನು ಎದುರಿಸಬೇಕಾಗುತ್ತದೆ, ಇದರಿಂದ ಮಳೆನೀರು ಮೇಲೆನಿಂತು ಗೋಡೆಗಳ ತೇವಾಂಶ ಮತ್ತು ಸೋರುವಿಕೆಗೆ ಕಾರಣವಾಗುತ್ತದೆ. ವಾಟರ್ ಪ್ರೂಫ್ ಕೊಟಿಂಗ್ ಮೆಲ್ಮೈ ಪದರವಾಗಿ ಕೆಲಸ ಮಾಡುತ್ತದೆ ಮತ್ತು ನೀರು ಸೋರುವುದನ್ನು ತಡೆಗಟ್ಟುತ್ತದೆ. ಆದ್ದರಿಂದ ಸೀಪೇಜ್ ಗಳನ್ನು ಸರಿಯಾಗಿ ಗೋಡೆಗಳ ಮೆಲ್ಮೈ ಗೆ ಹಚ್ಚಬೇಕು.
ನೀವು ಕೆಲವೊಮ್ಮೆ ಗೋಡೆಯ ಕೆಳಬಾಗದಲ್ಲಿ ಒದ್ದೆಯಾದ ಜಾಗಗಳನ್ನು ಗಮನಿಸಬಹುದು. ಗೋಡೆಗಳಿಂದ ನೀರು ಸೋರದಂತೆ ಹೇಗೆ ತಡೆಯಬಹುದು ಎಂದು ನಿಮಗೆ ಅಚ್ಚರಿಯಾಗಬಹುದು.
ನಿಮ್ಮ ಮನೆಯ ಗೋಡೆಗಳಿಗೆ ನೆಲದಿಂದ ನೀರು ಏರದಂತೆ ತಡೆಯಲು ಡ್ಯಾಂಪ್ ಪ್ರೂಫ್ ಕೋರ್ಸ್ ಅನ್ನು ಮಾಡಿಸಿ. ಇದು ಯಾವುದೆ ನ್ಯೂನ್ಯತೆಗಳು ಇಲ್ಲದ ವಸ್ತುಗಳಿಂದ ಮಾಡಲ್ಪಟ್ಟಿದೆ ಮತ್ತು ಇದನ್ನು ನೆಲದಿಂದ 150 ಎಂಎಂ ವರೆಗೆ ಇಟ್ಟಿಗೆಗಳನ್ನು ಜೋಡಿಸುವಾಗ ಡ್ಯಾಂಪ್ ಪ್ರೂಫ್ ಮಾಡಲಾಗುತ್ತದೆ. ಇದು ತೇವಾಂಶದಿಂದ ಗೋಡೆಗಳಿಗೆ ಹಾನಿಯಾಗದಂತೆ ತಡೆಯುತ್ತದೆ.
ಡ್ಯಾಂಪ್ ಪ್ರೂಫ್ ಕೋರ್ಸ್ ಗಳನ್ನು ಕಟ್ಟಡ ಕಟ್ಟುವಾಗ ಅಳವಡಿಸಲಾಗುತ್ತದೆ. ಒಂದೊಮ್ಮೆ ಗೋಡೆಗಳ ಕೆಳಭಾಗದಲ್ಲಿ ಒದ್ದೆ ಕಲೆಗಳು ಕಂಡುಬಂದರೆ ಮತ್ತೆ ಈ ಕೋರ್ಸ್ ಅನ್ನು ಪುನಃ ಮಾಡಿಸಬೇಕಾಗುತ್ತದೆ. ಇದೊಂದು ಕಷ್ಟದ ಕೆಲಸವಾಗಿದ್ದು ಇದನ್ನು ಪರಿಣಿತರೆ ಮಾಡಬೇಕಾಗುತ್ತದೆ. ಪರಿಣಿತರನ್ನೇ ಕರೆಸಿ ಪರಶೀಲಿಸುವುದು ಉತ್ತಮವಾಗಿದೆ ಮತ್ತು ಒಂದೊಮ್ಮೆ ಅವಶ್ಯಕವಾದರೆ ಡ್ಯಾಂಪ್ ಪ್ರೂಫ್ ಕೋರ್ಸ್ ಗಳನ್ನು ಬದಲಾಯಿಸಬೇಕು.
ಈ ಸಮಯದಲ್ಲಿ ನಿಮ್ಮ ಮನೆಯನ್ನು ಸರಿಯಾಗಿ ಗಾಳಿಯಾಡುವಂತೆ ಇರಿಸಿಕೊಳ್ಳಲು ಮರೆಯದಿರಿ. ಮಳೆಗಾಲದಲ್ಲಿ ಗೋಡೆಗಳ ಮೇಲೆ ಕಲೆಗಳು ಅಥವಾ ಶಿಲೀಂದ್ರ ಗಳು ಕಂಡುಬಂದರೆ ಅವುಗಳನ್ನು ತೆಗೆದುಹಾಕಲು ಸರಿಯಾದ ಕ್ರಮಗಳನ್ನು ತೆಗೆದುಕೊಳ್ಳಿ ಏಕೆಂದರೆ ಅವುಗಳು ಉಸಿರಾಟದ ಸಮಸ್ಯೆಗಳಿಗೆ ಕಾರಣವಾಗಬಹುದು. ಗೋಡೆಗಳ ಮೇಲೆ ಒದ್ದೆ ಕಲೆಗಳು ಅಥವಾ ದೊಡ್ಡ ಬಿರುಕುಗಳು ಕಂಡುಬಂದರೆ ತಕ್ಷಣ ಪರಿಣಿತರನ್ನು ಕರೆಸಿ ತೇವಾಂಶದಿಂದ ಗೋಡೆಗಳನ್ನು ಕಪಾಡಿಕೊಳ್ಳಿ.
ಗುನೈಟಿಂಗ್ ಎಂದರೆ ಪೈಪ್ ಮತ್ತು ಗೋಡೆಗಳನ್ನು ತೆಳುವಾದ ಸಿಮೆಂಟ್ ನಿಂದ ಮುಚ್ಚಿ ಅವುಗಳನ್ನು ವಾಟರ್ ಪ್ರೂಫ್ ಮಾಡುವುದು.
ಗುನೈಟ್ ಮತ್ತು ಶೊಟ್ ಕ್ರೀಟ್ ಎರಡು ಒಂದೆ ಅಲ್ಲ. ಹೆಚ್ಚು ಒತ್ತಡದಿಂದ ಕಾಂಕ್ರೀಟ್ ಮಿಕ್ಸ್ ಅನ್ನು ಸ್ಪ್ರೇ ಮಾಡುವುದನ್ನು ಶೋಟ್ ಕ್ರಟಿಂಗ್ ಎನ್ನುತ್ತಾರೆ, ಬೇಗ ಗಟ್ಟಿಯಾಗುವ ಕಾಂಕ್ರಿಟ್ ಮಿಶ್ರಣವನ್ನು ಸ್ಪ್ರೇ ಮಾಡುವುದನ್ನು ಗುನೈಟಿಂಗ್ ಎನ್ನುತ್ತಾರೆ. ಈ ಎರಡು ಪ್ರಕ್ರಿಯೆಗಳು ಕಟ್ಟಡವನ್ನು ಗಟ್ಟಿಮಾಡುತ್ತವೆ ಆದರೆ ಗುನೈಟಿಂಗ್ ಶೋಟ್ ಕ್ರಿಟಿಂಗ್ ಹೆಚ್ಚು ಬಾಳಿಕೆಬರುತ್ತದೆ.
ಕಟ್ಟಡದಲ್ಲಿ ಬರುವ ಎಲ್ಲ ರೀತಿಯ ಬಿರುಕುಗಳನ್ನು ಮುಚ್ಚಲು ಸಿಮೆಂಟ್ ಮತ್ತು ಮರಳಿನ ಮಿಶ್ರಣವನ್ನು ಜೆಟ್ ಮೂಲಕ ಹಚ್ಚುವುದನ್ನು ಪ್ರೆಶರ್ ಗ್ರೌಟಿಂಗ್ ಎನ್ನುತ್ತಾರೆ. ಗ್ರೌಂಟಿಂಗ್ ತೇವಾಂಶ ದಿಂದ ಗೋಡೆಗಳನ್ನು ಕಾಪಾಡುವುದಲ್ಲದೆ ಕಟ್ಟಡವನ್ನು ಸಹ ಗಟ್ಟಿಯಾಗಲು ಸಹಾಯಮಾಡುತ್ತದೆ.
1. ಗೋಡೆಗಳ ತೇವಾಂಶಕ್ಕೆ ಯಾವುದು ಕಾರಣವಾಗುತ್ತದೆ?
ಕಡಿಮೆ ಗುಣಮಟ್ಟದ ಕಟ್ಟಡ ಸಾಮಾಗ್ರಿಗಳನ್ನು ಬಳಸಿ ಕಟ್ಟಡವನ್ನು ಕಟ್ಟುವುದರಿಂದ ಗೋಡೆಗಳ ಮೇಲೆ ತೇವ ಉಂಟಾಗುತ್ತದೆ. ನೀರಿನ ಅಥವಾ ಬಳಸಿದ ನೀರಿನ ಪೈಪ್ ಸೋರುತ್ತಿದ್ದರೆ ಇದು ಸಹ ಗೋಡೆಗಳ ತೇವಾಂಶಕ್ಕೆ ಕಾರಣವಾಗುತ್ತದೆ.
2. ಗೋಡೆಗಳನನ್ನು ತೇವಾಂಶದಿಂದ ಕಾಪಾಡುವುದು ಹೇಗೆ?
ಗೋಡೆಗಳನ್ನು ತೇವಾಂಶದಿಂದ ಕಾಪಾಡಲು ವಾಟರ್ ಪ್ರೂಫ್ ಟೈಲ್ಸ್ ಗಳನ್ನು ಅಥವಾ ಡ್ಯಾಂಪ್ ಪ್ರೂಫ್ ಕೋರ್ಸ್ ಗಳನ್ನು ಅಳವಡಿಸುವುದು ಎರಡು ಮಾರ್ಗಗಳಾಗಿವೆ.
3. ಗೋಡೆಗಳಿಂದ ನೀರು ಸೋರುವುದರಿಂದ ಒಬ್ಬರ ಮನೆ ಮತ್ತು ಆರೋಗ್ಯದ ಮೇಲೆ ಕೆಟ್ಟಪರಿಣಾಮ ಬೀರುತ್ತದೆಯೆ?
ಹೌದು, ಗೋಡೆಗಳಿಂದ ನೀರು ಸೋರುವುದರಿಂದ ಕಲೆಗಳು ಮತ್ತು ಫಂಗಸ್ ಗಳು ಬೆಳೆಯುತ್ತವೆ, ಇವುಗಳು ಆರೋಗ್ಯದ ಮೇಲೆ ಪ್ರಭಾವ ಬೀರುತ್ತವೆ. ಗೋಡೆಗಳ ತೇವಾಂಶದಿಂದ ಕೊನೆಯಲ್ಲಿ ಕಟ್ಟಡದ ರಚನೆಯ ಮೇಲು ಸಹ ಪ್ರಭಾವ ಬೀರುತ್ತವೆ, ಮತ್ತು ಇದು ಕಟ್ಟಡ ಹೇಗೆ ಕಟ್ಟಲ್ಪಟ್ಟಿದೆ ಎಂಬುದರ ಮೇಲು ಪ್ರಭಾವ ಬೀರುತ್ತದೆ
ಈಗ ನೀವು ಗೋಡೆಗಳ ತೇವಾಂಶದ ಬಗೆಗಿನ ಎಲ್ಲ ಮಾಹಿತಿಯನ್ನು ಪಡೆದಿದ್ದಿರಿ, ನಿಮ್ಮ ಮನೆಯ ಗೋಡೆಗಳನ್ನು ಇದರಿಂದ ರಕ್ಷಿಸಿಕೊಳ್ಳಿ ಮತ್ತು ನಿಮ್ಮ ಮನೆ ಮತ್ತು ನಿಮ್ಮನ್ನು ಯಾವಾಗಲೂ ಅರೋಗ್ಯದಿಂದ ಇರಿಸಿಕೊಳ್ಳಿ.