ಹಾರು ಬೂದಿ ಇಟ್ಟಿಗೆಗಳನ್ನು ಉಪಯೋಗಿಸುವುದರ ಉಪಯೋಗಗಳು
ಹಾರು ಬೂದಿ ಇಟ್ಟಿಗೆಗಳನ್ನು ಬಳಸುವುದರಿಂದ ಹಲವಾರು ಉಪಯೋಗಗಳು ಇವೆ. ಅವುಗಳೆಂದರೆ:
1. ಪರಿಸರ ಸ್ನೇಹಿ
ಹಾರು ಬೂದಿ ಇಟ್ಟಿಗೆಗಳು ಪರಿಸರ ಪ್ರಜ್ಞೆಯಲ್ಲಿ ಗೆಲ್ಲುತ್ತವೆ. ಕಾರ್ಖಾನೆಗಳ ತ್ಯಾಜ್ಯವನ್ನು ಉಪಯೋಗಿಸುವುದರಿಂದ, ಆ ತ್ಯಾಜ್ಯವು ಪರಿಸರದ ಮೇಲೆ ಹೊರೆಯಾಗುವುದನ್ನು ತಪ್ಪಿಸಿದಂತಾಗುತ್ತದೆ. ಇದರಿಂದ ಭವಿಷ್ಯದಲ್ಲಿ ಪರಿಸರವು ಹಸಿರಾಗಿಸಲು ಅವಕಾಶ ನೀಡಿದಂತಾಗುತ್ತದೆ.
2. ಇಂಧನದ ಧಕ್ಷತೆ
ಹಾದು ಬೂದಿ ಇಟ್ಟಿಗೆಗಳಿಂದ ಇಂದನದ ಉಳಿತಾಯವು ನೈಸರ್ಗಿಕವಾಗಿ ಬರುತ್ತದೆ. ಇವುಗಳ ತಯಾರಿಕೆಯು ಸಂಪ್ರದಾಯಿಕ ಕೆಂಪು ಇಟ್ಟಂಗಿಗಳಿಗಿಂತ ಕಡಿಮೆ ಇಂಧನ ಸಾಕಾಗುತ್ತದೆ. ಇದರಿಂದ ಗ್ರೀನ್ ಹೌಸ್ ನ ಗಾಳಿಯು ಹೊರಹೋಗುವುದನ್ನು ಕಡಿಮೆ ಮಾಡುತ್ತದೆ ಮತ್ತು ಕಾರ್ಬನ್ ಫೂಟ್ ಪ್ರಿಂಟ್ ನ್ನು ಕಡಿಮೆ ಮಾಡುತ್ತದೆ.
3. ಕಡಿಮೆ ಭಾರ
ಹಾರು ಬೂದಿ ಇಟ್ಟಿಗೆಗಳು ತುಂಬ ಹಗುರವಾಗಿರುತ್ತವೆ ಇದರಿಂದ ಇವುಗಳನ್ನು ನಿರ್ವಹಣೆ ಮತ್ತು ಸಾಗಾಟವು ತುಂಬ ಸುಲಭವಾಗಿದೆ. ನೀವು ಕಟ್ಟಡ ನಿರ್ಮಾಣದಲ್ಲಿ ಸಮಯ ಮತ್ತು ರಲ್ಲಿ ಪ್ರಯತ್ನವನ್ನು ಉಳಿಸುತ್ತದೆ. ಇದರಿಂದ ನಿಮ್ಮ ಯೋಜನೆಯು ಎಂದಿಗಿಂತ ಸುಲಭವಾಗುತ್ತದೆ.
4. ಪರಿಣಾಮಕಾರಿ ವೆಚ್ಚ
ಇವು ಅದ್ಬುತವಾಗಿ ಮತ್ತು ಪರಿಣಾಮಕಾರಿಯಾಗಿ ವೆಚ್ಚವನ್ನು ಕಡಿಮೆ ಮಾಡುವುದರಿಂದ ನಿಮ್ಮ ಹೂಡಿಕೆಗೆ ಹೆಚ್ಚಿನ ಬೆಲೆಯನ್ನು ನೀಡುತ್ತವೆ ಮತ್ತು ಬಜೆಟ್ ಹೆಚ್ಚಾಗದಂತೆ ಮತ್ತು ಗುಣಮಟ್ಟದಲ್ಲಿ ಹೊಂದಾಣಿಕೆಯಾಗದಂತೆ ಮಾಡುತ್ತದೆ.
5. ಉತ್ತಮ ನಿರೋಧಕ
ಹಾರು ಬೂದಿ ಇಟ್ಟಿಗೆಗಳು ನಿಮ್ಮ ಯೋಜನೆಗೆ ಒಳ್ಳೆಯ ನಿರೋಧಕವನ್ನು ನೀಡುತ್ತವೆ. ಇವುಗಳು ತಮ್ಮ ಹೆಚ್ವಿನ ನಿರೊಧಕ ಶಕ್ತಿಯಿಂದ ಉಷ್ಣಾಂಶವನ್ನು ನಿಯಂತ್ರಿಸುತ್ತದೆ ಮತ್ತು ಇಂಧನದ ಬಳಕೆಯನ್ನು ಕಡಿಮೆಗೊಳಿಸಿ ವರ್ಷವಿಡಿ ಆರಾಮವಾಗಿರಲು ಅನುಕೂಲ ಮಾಡಿಕೊಡುತ್ತದೆ.
ಹಾರು ಬೂದಿ ಇಟ್ಟಿಗೆಗಳು ಗುಣಗಳು
ಹಾರು ಬೂದಿ ಇಟ್ಟಿಗೆಗಳ ಈ ಗುಣಗಳು ತಮ್ಮ ಜನಪ್ರಿಯತೆಯತೆಗೆ ಮತ್ತು ನಿರ್ಮಾಣ ಯೋಜನೆಗಳಿಗೆ ಸೂಕ್ತವಾಗಿವೆ .
1. ಸಂಕುಚನ (ಕಂಪ್ರೆಸ್ಸೀವ್) ಸಾಮರ್ಥ್ಯ
ಹಾರು ಬೂದಿ ಇಟ್ಟಿಗೆಗಳು 75- 100 kg/cm2 ವರೆಗಿನ ಸಾಂದ್ರತೆಯ ಸಾಮರ್ಥ್ಯವನ್ನು ಹೊಂದಿದ ಹೆಗ್ಗಳಿಕೆಯನ್ನು ಹೊಂದಿವೆ. ಇವುಗಳು ಬರಿ ಇಟ್ಟಿಗೆಗಳು ಮಾತ್ರವಲ್ಲ, ಹೆಚ್ಚು ಭಾರವನ್ನು ಹೊಂದಿರುವ ಕಟ್ಟಡಗಳ ಬೆನ್ನೆಲುಬಾಗಿ ನಿಂತು ಹೆಚ್ಚು ಭಾರವನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು ನೀಡುತ್ತವೆ.
2. ಅಗ್ನಿ ನಿರೋಧಕ
ಹೆಚ್ಚಿನ ಶಾಖವನ್ನು ತಡೆದುಕೊಳ್ಳುವ ಸಾಮರ್ಥ್ಯ ಮತ್ತು ವಿಷಕಾರಿಯಲ್ಲದ ಸ್ವಭಾವದಿಂದ ಇವುಗಳು ಬೆಂಕಿ ತಗುಲಿದಾಗ ಹಾನಿಕಾರಕ ಅನಿಲವನ್ನು ಸೂಸುವುದಿಲ್ಲ. ಫ್ಲೈ ಆ್ಯಶ್ ಇಟ್ಟಿಗೆಗಳು ಹೆಚ್ಚಿನ ಅಗ್ನಿ ನಿರೋಧಕವನ್ನು ನೀಡುವುದರಿಂದ ನೀವು ಹೆಚ್ವಿ ಸುರಕ್ಷಿತ ಅನುಭವವನ್ನು ಪಡೆಯಬಹುದು.
3. ಶಬ್ಧ ನಿರೋಧಕ
ಫ್ಲೈ ಆ್ಯಶ್ ಇಟ್ಟಿಗೆಗಳು ಅತ್ಯುತ್ತಮ ಶಬ್ದ ನಿರೊಧಕವಾದ ಗುಣಗಳಿಂದ ಶಬ್ದದ ಅಲೆಗಳನ್ನು ಹೀರಿಕೊಳ್ಳುತ್ತದೆ. ಇದರಿಂದ ನಿಮ್ಮ ಜಾಗವು ಶಾಂತವಾಗುತ್ತದೆ ಮತ್ತು ನಗರದ ಗದ್ದಲದ ಅವ್ಯವಸ್ಥೆಯಿಂದ ಅಥವಾ ಅವಿಶ್ರಾಂತ ಅಕ್ಕಪಕ್ಕದವರಿಂದ ಕಾಪಾಡುತ್ತದೆ .
4. ಬಾಳಿಕೆ
ಫ್ಲೈ ಆ್ಯಶ್ ಇಟ್ಟಿಗೆಗಳು ಹೆಚ್ಚು ಸ್ಥಿತಿಸ್ಥಾಪಕ ಶಕ್ತಿಯಿಂದ ಅತಿ ಹೆಚ್ಚು ಬಾಳಿಕೆ ಬರುತ್ತವೆ. ಇವುಗಳು ಹವಾಮಾನ, ಸೆವೆತ ಮತ್ತು ರಾಸಾಯನಿಕ ದಾಳಿಯನ್ನು ತಡೆದುಕೊಂಡು ಗಟ್ಟಿಯಾಗಿ ನಿಲ್ಲುವ ಸಾಮರ್ಥ್ಯವನ್ನು ಹೊಂದಿವೆ. ಹೆಚ್ಚು ಉಷ್ಣ ಮತ್ತು ಮಳೆಯಿಂದ, ಫ್ಲೈ ಆ್ಯಶ್ ಇಟ್ಟಿಗೆಗಳು ಕಟ್ಟಡದ ಸಮಗ್ರತೆಯನ್ನು ಕಾಪಾಡುತ್ತವೆ.
5. ಪರಿಸರ ಸ್ನೇಹಿ
ಫ್ಲೈ ಆ್ಯಶ್ ಇಟ್ಟಿಗೆಗಳು ಬಾಳಿಕೆಬರುವುದರಲ್ಲಿ ಸಾರ್ಥಕ ವಾಗಿವೆ. ಕೈಗಾರಿಕೆಗಳ ವ್ಯರ್ಥ ವಸ್ತುವಾದ ಫ್ಲೈ ಆ್ಯಶ್ ಗಳು, ಹೊಸ ರೂಪವನ್ನು ತಾಳುವುಸರಿಂದ ಮುಂದಾಗುವ ಭೂಕುಸಿತವನ್ನು ತಡೆಯುತ್ತವೆ. ಫ್ಲೈ ಆ್ಯಶ್ ಇಟ್ಟಿಗೆಗಳು ಸಕ್ರೀಯವಾಗಿ ಹವಾಮಾನ ಮಾಲಿನ್ಯ ವನ್ನು ತಡೆಯುತ್ತವೆ ಮತ್ತು ಕಾರ್ಬನ್ ಫೂಟ್ ಪ್ರಿಂಟ್ ಅನ್ನು ಕಟಿಮೆ ಮಾಡುತ್ತವೆ.
ಫ್ಲೈ ಆ್ಯಶ್ ಇಟ್ಟಿಗೆಗಳು ಸಾಂಪ್ರದಾಯಿಕ ಮಿತಿಗಳನ್ನು ಮೀರಿ ನಿರ್ಮಾಣ ಮಾಡಲು ಅನುವು ಮಾಡಿಕೊಡುತ್ತವೆ.
ಇದನ್ನು ಸಹ ಓದಿ: ಎಎಸಿ ಬ್ಲಾಕ್ ನ ವಿಧಗಳು