ಭಾರತದಲ್ಲಿ ಮಂಚೂಣಿ ವೈಟ್ ಸಿಮೆಂಟ್ ಬ್ರ್ಯಾಂಡ್ ಆಗಿರುವ ಬಿರ್ಲಾ ವೈಟ್ ತನ್ನನ್ನು “ಅತ್ಯಂತ ಬಿಳುಪಿನ ವೈಟ್ ಸಿಮೆಂಟ್” ಎಂಬ ಸ್ಥಾನ ಗಿಟ್ಟಿಸಿಕೊಂಡಿದೆ. ಬಿರ್ಲಾ ವೈಟ್ ತನ್ನ ವೈಟ್ ಸಿಮೆಂಟ್ ಉತ್ಪಾದನೆಯನ್ನು 1988 ಇಸವಿಯಿಂದ ಪ್ರಾರಂಭಿಸಿತು. ಆ ಸಮಯದಿಂದ, ವೈಟ್ ಸಿಮೆಂಟ್ ನೊಂದಿಗಿನ ಅಮಿತ ಬಳಕೆಯ ಸಾಧ್ಯತೆಗಳನ್ನು ಗ್ರಾಹಕರು ಕಂಡುಕೊಂಡಿದ್ದಾರೆ. ಬಿರ್ಲಾ ವೈಟ್ ಕೂಡ ತನ್ನ ಗ್ರಾಹಕರ ಅವಶ್ಯತೆಗಳನ್ನು ತ್ವರಿತವಾಗಿ ಅಳೆದು, ಅರ್ಥಮಾಡಿಕೊಂಡು, ಅದನ್ನು ಪೂರೈಸಲು ಪ್ರಯತ್ನಿಸಿದೆ. ಈ ಪ್ರಕ್ರಿಯೆಯಲ್ಲಿ, ಅದು ವೈಟ್ ಸಿಮೆಂಟ್ ಆಧಾರಿತ ಮೇಲ್ಮೈ ಫಿನಿಶಿಂಗ್ ಉತ್ಪನ್ನಗಳನ್ನು ಸಹ ಅಭಿವೃದ್ಧಿಪಡಿಸಿತು. ಈಗಿನ ಸದ್ಯದ ಪೋರ್ಟ್ಫೋಲಿಯೋದಲ್ಲಿ ವಾಲ್ ಕೇರ್ ಪುಟ್ಟಿ, ಲೆವೆಲ್ ಪ್ಲಾಸ್ಟ್, ಜಿಆರ್ಸಿ ಮತ್ತು ಟೆಕ್ಸ್ಚುರಾ ಒಳಗೊಂಡಿದೆ. ಇದರಲ್ಲಿ, ಅವರು ಗೋಡೆಗಳ ಆರೈಕೆಯ ಜೊತೆಯಲ್ಲಿ ಒಳಗಿನ ಸೌಂದರ್ಯಕ್ಕೂ ಒತ್ತು ನೀಡಿದೆ.
ನಿರಂತರ ಸಂಶೋಧನೆ ಮತ್ತು ಅಭಿವೃದ್ಧಿಯ ಕುರಿತಾಗಿರುವ ಬದ್ಧತೆಯು ಬ್ರ್ಯಾಂಡ್ ನ ಹೊಸತನದತ್ತ ಗಮನ ಹರಿಸಲು ಸಹಾಯಮಾಡಿದೆ. ಅದರ ಹೃದಯ ಭಾಗವಾಗಿರುವ ಉತ್ಪಾದನೆ ಮತ್ತು ಮಾರುಕಟ್ಟೆ ಕಾರ್ಯತಂತ್ರದ ಕಡೆಗೆ ತನ್ನ ಗಮನವನ್ನು ಹೊಂದಿರುವ ಬಿರ್ಲಾ ವೈಟ್ ಯಾವಾಗಲೂ ಗ್ರಾಹಕರಿಗೆ ನವೀನ ನಿರ್ಮಾಣ ಪರಿಹಾರಗಳನ್ನು ನೀಡುತ್ತಿದೆ. ಇವು ಸಾಂಪ್ರದಾಯಿಕ ಚಿಂತನೆಯ ಮಿತಿಗಳನ್ನು ಪ್ರಶ್ನಿಸಿರುವುದು ಮಾತ್ರವಲ್ಲದೆ, ಅತ್ಯಂತ ಸಮ್ಮತವಾದ ರೀತಿಯಲ್ಲಿ, ದೇಶದ ರಚನೆಗಳನ್ನು ಸಮೃದ್ಧಗೊಳಿಸುವ ಮತ್ತು ಸುಂದರಗೊಳಿಸುವ ವಿಕಾಸವನ್ನು ಮುಂದೂಡಿದೆ.
“ಅತ್ಯಂತ ಬಿಳುಪಾದ ವೈಟ್ ಸಿಮೆಂಟ್” ಎನ್ನಲಾದ ಬಿರ್ಲಾ ವೈಟ್ ವಾಸ್ತುಶಿಲ್ಪದ ಸೊಬಗನ್ನು ರಚಿಸಲು ಒಂದು ಸ್ವಚ್ಛ ಬಿಳಿಯ ಕ್ಯಾನ್ವಾಸ್ ನೀಡುತ್ತದೆ. ಮಾರ್ಬಲ್ ಹಾಕಲು, ಟೆರಾಝೋ ಫ್ಲೋರಿಂಗ್, ಮೊಸಾಯಿಕ್ ಟೈಲ್ಗಳು, ಅಲಂಕಾರಿಕ ಸಿಮೆಂಟ್ ಪೈಂಟುಗಳನ್ನು ಹಚ್ಚುವುದಕ್ಕೆ ಇದು ಪ್ರಾಮುಖ ಅಂಶವಾಗಿದೆ. ಇದರ ಅತ್ಯಧಿಕ ವಕ್ರೀಭವನ ಸೂಚ್ಯಂಕ ಮತ್ತು ಅಧಿಕ ಅಪಾರದರ್ಶಕತೆಯು ಗೋಡೆಗಳಿಗೆ ಹೊಳಪು ಮತ್ತು ನಯವಾದ ಮೇಲ್ಮೈಯನ್ನು ಒದಗಿಸುತ್ತದೆ. ಇದಲ್ಲದೆ ಗ್ರಿಟ್ ವಾಶ್, ಸ್ಟೋನ್ ಕ್ರೀಟ್ ಮತ್ತು ಟೈರೊಲಿನ್ ಗಳಂತಹ ಗೋಡೆ ಫಿನಿಶಿಂಗ್ ಗಳಲ್ಲಿಯೂ ಇದು ಅತ್ಯಂತ ಪ್ರಮುಖ ಅಂಶವಾಗಿದೆ.
ಇನ್ನಷ್ಟು ಮಾಹಿತಿಯನ್ನು ತಿಳಿದುಕೊಳ್ಳಲು ಲಿಂಕ್ ಮೇಲೆ ಕ್ಲಿಕ್ ಮಾಡಿ
ಪ್ರತಿಯೊಂದು ಮೂಲೆಯು ಅಚ್ಚುಕಟ್ಟಾಗಿ ಓರಣವಾಗಿ ಜೋಡಿಸಿರುವ ಆಧುನಿಕ ಮನೆಯೊಂದನ್ನು ಊಹಿಸಿಕೊಳ್ಳಿ. ಗೋಡೆಗಳ ಹೊರತಾಗಿ, ಅಲ್ಲಿನ ಪ್ರತಿಯೊಂದು ವಸ್ತು ಸಹ ನಾಜೂಕಾಗಿ ಅಲಂಕರಿಸಲಾಗಿರುತ್ತದೆ. ಆ ಗೋಡೆಗಳಲ್ಲಿ ಚಕ್ಕೆಗಳು ಏಳುತ್ತಿದ್ದು, ಆ ಮನೆಯ ಸೌಂದರ್ಯಕ್ಕೆ ಕಪ್ಪುಚುಕ್ಕೆ ಇಡುವುದಲ್ಲದೆ ನಿಮ್ಮ ಮನಸ್ಸಿಗೂ ಸಹ ಚುಚ್ಚುತ್ತಿರುತ್ತದೆ. ಬಿರ್ಲಾ ವೈಟ್ ವಾಲ್ ಕೇರ್ ಪುಟ್ಟಿಯನ್ನು ಹಚ್ಚುವುದರಿಂದ, ನೀವು ಇಂತಹ ಚಿಂತೆಗಳನ್ನು ದೂರಮಾಡಬಹುದು! ಬಿರ್ಲಾ ವೈಟ್ ವಾಲ್ ಕೇರ್ ಪುಟ್ಟಿ ವಿಶಿಷ್ಟ ಸೂತ್ರ ಮತ್ತು ನೀರು ನಿರೋಧಕ ಗುಣಗಳನ್ನು ಒಳಗೊಂಡಿರುವ ಒಂದು ಪೂರ್ವ-ಪೇಂಟು ಆಧಾರಿತ ಕೋಟ್ ಆಗಿದ್ದು, ಇದು ನಿಮ್ಮ ದುಬಾರಿ ಗೋಡೆಯ ಪೇಂಟುಗಳ ಚಕ್ಕೆಗಳು ಬೀಳದಂತೆ ನೋಡಿಕೊಳ್ಳುತ್ತದೆ.
ಪೇಂಟಿಂಗ್ ಮಾಡುವ ಮೊದಲು ಎರಡು ಕೋಟ್ ವಾಲ್ ಕೇರ್ ಪುಟ್ಟಿ ಹಚ್ಚುವುದರಿಂದ ಧೀರ್ಘ ಬಾಳಿಕೆಯ ಜೊತೆಗೆ ಚಕ್ಕೆಗಳು ಬರುವುದಿಲ್ಲ. ಅದಕ್ಕಿಂತಲೂ ಹೆಚ್ಚಾಗಿ, ಇದು ಪೇಂಟ್ ಮಾಡಿರುವ ಗೋಡೆಗಳಿಗೆ ಹೊಳಪು ನೀಡುತ್ತದೆ. ಜಾಗತಿಕ ಮಾನದಂಡಗಳನ್ನು(ಎಚ್ಡಿಬಿ, ಸಿಂಗಾಪುರ) ಪೂರೈಸಿರುವ ಭಾರತದ ಏಕ ಮಾತ್ರ ಪುಟ್ಟಿ ಇದಾಗಿದೆ. ವೈಟ್ ಸಿಮೆಂಟ್ ಆಧಾರಿತ ಪುಟ್ಟಿಯಾಗಿ, ಗೋಡೆಯ ಮೇಲ್ಮೈ ತೇವವಾಗಿದ್ದರೂ ಸಹ ಇದು ಸುರಕ್ಷಿತ ಬೇಸ್ ಅನ್ನು ರಚಿಸುತ್ತದೆ. ಇದು ಗೋಡೆ ಮತ್ತು ಸೀಲಿಂಗ್ ಗಳಲ್ಲಿರುವ ಸಣ್ಣ ರಂಧ್ರಗಳನ್ನು ಮುಚ್ಚಿ, ಪೇಂಟಿಂಗ್ ಮಾಡಲು ನಯವಾಗಿರುವ ಮತ್ತು ಒಣಗಿದ ಗೋಡೆಗಳನ್ನು ನೀಡುತ್ತದೆ.
ಸಮತಟ್ಟಾದ ಮತ್ತು ನಯವಾದ ಗೋಡೆ, ಗೋಡೆಯನ್ನು ಪರಿಪೂರ್ಣವಾಗಿಸುತ್ತದೆ. ಬಿರ್ಲಾ ವೈಟ್ ಲೆವೆಲ್ ಪ್ಲಾಸ್ಟ್ ಹೆಸರು ಸೂಚಿಸುವಂತೆ, ಗೋಡೆಯ ಎಗ್ಗುತಗ್ಗುಗಳನ್ನು ಮತ್ತು ಅಸಮಾನತೆಯನ್ನು ಮುಚ್ಚುತ್ತದೆ. ವೈಟ್ ಸಿಮೆಂಟ್ ಆಧಾರದ ಉತ್ಪನ್ನವು ಸೀಲಿಂಗ್ ಮತ್ತು ಕಾಂಕ್ರೀಟ್/ಮರಳಿನ ಸಣ್ಣ ರಂಧ್ರಗಳನ್ನು ಮುಚ್ಚುವುದರೊಂದಿಗೆ ಪೇಂಟಿಂಗ್ ಗಾಗಿ ಬಿಳುಪಾದ, ಒಣಗಿದ ಮತ್ತು ನಯವಾದ ಗೋಡೆಗಳನ್ನು ನೀಡುತ್ತದೆ. ತೇವ-ನಿರೋಧಕವಾಗಿದ್ದು, ಪಿಒಪಿ ಮತ್ತು ಜಿಪ್ಸಮ್ ಕ್ಕಿಂತಲೂ ಉತ್ಕೃಷ್ಟ ಬದಲಿಯಾಗಿದೆ. ಇದು ಹಲವು ವರ್ಷಗಳವರೆಗೆ ತನ್ನ ಹೊಸ ರೂಪವನ್ನು ಕಾಪಾಡಿಕೊಳ್ಳುವುದರ ಜೊತೆಗೆ ಇದು ಹೆಚ್ಚು ಬಲಶಾಲಿ ಮತ್ತು ಬಾಳಿಕೆಯನ್ನು ಹೊಂದಿದೆ.
ಬಿರ್ಲಾ ವೈಟ್ ಟೆಕ್ಸ್ಚುರಾ ನೊಂದಿಗೆ ನಿಮ್ಮ ಗೋಡೆಗಳಿಗೆ ಜೀವ ತುಂಬುವುದನ್ನು ನೋಡಿ! ಅದಕ್ಕೆ ಒಂದು ಅನನ್ಯ ವೈಶಿಷ್ಟ್ಯವನ್ನು ನೀಡಿ ಮತ್ತು ನಿಮ್ಮ ಉತ್ಸಾಹವನ್ನು ಹೊರತನ್ನಿ! ಬಿರ್ಲಾ ವೈಟ್ ಟೆಕ್ಸ್ಚುರಾ ಗೋಡೆಗಳ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತದೆ! ಹಲವು ರಚನೆಗಳಲ್ಲಿ ಇದು ಲಭ್ಯವಿದ್ದು, ನಿಮ್ಮ ಗೋಡೆಗಳು ಚಕ್ಕೆ ಬೀಳುವುದನ್ನು ತಪ್ಪಿಸುತ್ತದೆ. ಅಕ್ರಿಲಿಕ್ ಆಧಾರಿತ ಫಿನಿಶಿಂಗ್ ಗಳಿಗೆ ಹೋಲಿಸಿದರೆ, ಇದರ ಮೇಲೆ ಪ್ರೈಮರ್ ಹಚ್ಚುವ ಅಗತ್ಯವಿಲ್ಲದಿರುವ ಕಾರಣ ಇದು ಹೆಚ್ಚು ಆರ್ಥಿಕ ಹೊರೆ ನೀಡುವುದಿಲ್ಲ. ಸ್ಟೇಟ್ ಆಫ್ ದಿ ಆರ್ಟ್ ತಂತ್ರಜ್ಞಾನವನ್ನು ಬಳಸಿಕೊಂಡು ತಯಾರಿಸಿದ ಬಿರ್ಲಾ ವೈಟ್ ಟೆಕ್ಸ್ಚುರಾ ಎರಡು ಪ್ರಕಾರಗಳಲ್ಲಿ ಲಭ್ಯವಿರುತ್ತದೆ. ಮೊದಲನೆಯದು ಒಳಾಂಗಣಗಳಿಗೆ ಸೂಕ್ತವಾಗಿರುವ ಸ್ಪ್ರೇ ರೋಲರ್ ಫಿನಿಷ್(ಆರ್ ಎಫ್) ಮತ್ತು ಎರಡನೆಯದು ಹೊರಾಂಗಣ ಗೋಡೆಗಳಿಗೆ ಅತ್ಯಂತ ಸೂಕ್ತವಾಗಿರುವ ಟ್ರಾವೆಲ್ ಫಿನಿಷ್(ಟಿಎಫ್).
ವಾಸ್ತುಶಿಲ್ಪ ಎಲಿವೇಷನ್ ಗಳ ಅಂದಮಯ ವಿನ್ಯಾಸಗಳಿಗಾಗಿ ಲಘು ತೂಕದ ಮೋಲ್ಡ್ ಮಾಡಬಲ್ಲ ಫಿನಿಶಿಂಗ್ ಮೆಟೀರಿಯಲ್ ಅತ್ಯಂತ ಸೂಕ್ತವಾಗಿರುತ್ತದೆ. ಬಿರ್ಲಾ ವೈಟ್ ಜಿಆರ್ಸಿಯು ಬಿರ್ಲಾ ವೈಟ್ ಸಿಮೆಂಟ್ ನಿಂದ ಮಾಡಲಾಗಿದ್ದು, ಇದು ವಾಸ್ತುಶಿಲ್ಪಿಗಳು ಮತ್ತು ಎಂಜಿನಿಯರುಗಳಿಗೆ ಲಭ್ಯವಿರುವ ಅತ್ಯಂತ ಬಹುಮುಖ ನಿರ್ಮಾಣ ವಸ್ತುವಾಗಿದೆ. ಜಾಗತಿಕವಾಗಿ ಪ್ರಸಿದ್ಧವಾಗಿದ್ದು, ಇದನ್ನು ಯಾವುದೇ ವಾಸ್ತುಶಿಲ್ಪದ ಕೆಲಸಗಳಿಗೆ ಬಳಸಬಹುದಾಗಿದೆ.

This website uses cookies to serve content relevant for you and to improve your overall website
experience.
By continuing to visit this site, you agree to our use of cookies.
Accept
ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ
UltraTech is India’s No. 1 Cement
Address
"B" Wing, 2nd floor, Ahura Center Mahakali Caves Road Andheri (East) Mumbai 400 093, India
© 2020 ಎಲ್ಲ ಹಕ್ಕುಗಳನ್ನು ಒಳಗೊಂಡಿದೆ, ಅಲ್ಟ್ರಾಟೆಕ್ ಸಿಮೆಂಟ್ ಲಿ.