ಪ್ರಮುಖ ಖಾತೆ ನಿರ್ವಹಣಾ ಸೆಲ್ 

ನಿರ್ಮಾಣ ಉದ್ಯಮದಲ್ಲಿಯೇ ಮೊದಲನೆಯದಾಗಿ ನಮ್ಮ ಪ್ರಮುಖ ಖಾತೆ ನಿರ್ವಹಣಾ ಸೆಲ್, 2002 ಇಸವಿಯಲ್ಲಿ ರಚನೆಯಾಯಿತು. ಯಶಸ್ವಿ ವ್ಯಾಪಾರದಿಂದ ವ್ಯಾಪಾರ ನಡುವಿನ ಸಂಬಂಧಗಳ ಕಡೆಗೆ ತನ್ನ ಗಮನಹರಿಸುತ್ತಾ, ಇದು ಅತ್ಯಧಿಕ ಸ್ಪರ್ಧೆಯಿರುವ ನಿರ್ಮಾಣ ವಲಯದಲ್ಲಿನ ಮಂಚೂಣಿ ಉದ್ಯಮದಾರರೊಂದಿಗೆ ಪಾಲುದಾರಿಕೆ ಮಾಡುವಲ್ಲಿ ಒಲವು ತೋರಿತು. ನಮ್ಮ ಪ್ರಮುಖ ಖಾತೆಗಳಿಗೆ ವಿಶಿಷ್ಟ ಉತ್ಪನ್ನ-ಸೇವಾ ಕೊಡುಗೆ, ಹೆಚ್ಚಿದ ಲಾಭದಾಯಕತೆ ಮತ್ತು ಪ್ರತಿ ಹಂತದಲ್ಲೂ ಗ್ರಾಹಕರ ಅನುಕೂಲವನ್ನು ಖಾತ್ರಿಪಡಿಸಲಾಗಿದೆ.

ಪ್ರಮುಖ ಖಾತೆ ನಿರ್ವಹಣಾ ಸೆಲ್ 

ಪ್ರಮುಖ ಖಾತೆ ತಂಡದ ರಚನೆಯೆಂದರೆ ಇದನ್ನು ನಿರ್ಮಾಣ ವಲಯದ ಅಗತ್ಯಗಳು ಮತ್ತು ಕಾರ್ಯಾಚರಣೆಗಳನ್ನು ಆಧರಿಸಿ ಅಭಿವೃದ್ಧಿಪಡಿಸಲಾಗಿದೆ. 

ಪ್ರಮುಖ ಖಾತೆ ತಂಡದ ರಚನೆಯು ಉದ್ಯಮದ ಅಗತ್ಯತೆಗಳು ಮತ್ತು ಕಾರ್ಯಾಚರಣೆಗಳನ್ನು ಆಧರಿಸಿ ಕಸ್ಟಮೈಸ್ ಮಾಡಲಾಗಿದೆ. ಗ್ರಾಹಕರ ಮುಖ್ಯ ಕಛೇರಿಗಳೊಂದಿಗೆ ಸಂಪರ್ಕಿಸಲು ಮತ್ತು ಅವರ ಪ್ಯಾನ್-ಇಂಡಿಯಾ ಅವಶ್ಯಕತೆಗಳಿಗೆ ಸೇವೆ ನೀಡಲು ಗ್ರಾಹಕ ಸಂಪರ್ಕ ವ್ಯವಸ್ಥಾಪಕರೊಬ್ಬರೇ(ಸಿಆರ್ಎಂ) ಏಕ ಸಂಪರ್ಕ ಬಿಂದುವಾಗಿದ್ದಾರೆ. ಯೋಜನೆ ಸಂಪರ್ಕ ವ್ಯವಸ್ಥಪಾಕರು(ಪಿಆರ್ಎಂ ಗಳು) ಪೂರೈಕೆ, ದಾಖಲೆ ಸಂಬಂಧಿತ ಕೆಲಸಗಳು ಮತ್ತು ಮೌಲ್ಯವರ್ಧಿತ ಸೇವೆಗಳನ್ನು ನೋಡಿಕೊಳ್ಳುತ್ತಾರೆ. ತಾಂತ್ರಿಕ ಸೇವಾ ತಂಡದವರು ಗ್ರಾಹಕ ಅಥವಾ ಅಭ್ಯರ್ಥಿಯ ಯಾವುದೇ ತಾಂತ್ರಿಕ ಅಗತ್ಯಗಳಿಗೆ ಮಾರ್ಗದರ್ಶನವನ್ನು ನೀಡುವ ಮೂಲಕ ಉತ್ಪನ್ನ ಬಳಕೆಯ ಕುರಿತು ಮಾಹಿತಿ ನೀಡುತ್ತಾರೆ.  

ನಮ್ಮ ಪ್ರಯತ್ನವು ನಮ್ಮ ಪ್ರಮುಖ ಗ್ರಾಹಕರಿಗೆ 'ಮೌಲ್ಯವರ್ಧಿತ ಸೇವೆಗಳನ್ನು' ಒದಗಿಸುವ ಮೂಲಕ ಮತ್ತು ಬಲವಾದ 'ಸಂಬಂಧಗಳನ್ನು' ನಿರ್ಮಿಸುವ ಮೂಲಕ ನಮ್ಮ ಗ್ರಾಹಕರ ಪ್ರಮಾಣವನ್ನು ಹೆಚ್ಚಿಸುವುದಾಗಿದೆ.

ನಮ್ಮ ಮೌಲ್ಯವರ್ಧಿತ ಸೇವೆಗಳಲ್ಲಿ ಇವು ಒಳಗೊಂಡಿರುತ್ತವೆ:

ಬಲ್ಕ್ ಸಿಮೆಂಟ್ ಪೂರೈಸುವುದು 

  • ಕಡಿಮೆ ಕ್ಷಾರ ಸಿಮೆಂಟ್, 50% ಜಿಜಿಬಿಎಸ್ ನೊಂದಿಗೆ ಸ್ಲಾಗ್ ಸಿಮೆಂಟ್ ಇತ್ಯಾದಿಯಂತಹ ಉತ್ಪನ್ನ ಕೊಡುಗೆಗಳನ್ನು ಕಸ್ಟಮೈಸ್ ಮಾಡುವುದು   
  •  ‘ಒಳ್ಳೆಯ ಕಾಂಕ್ರೀಟ್ ಅನ್ನು ಉತ್ತಮ’ ಗೊಳಿಸಲು ಆನ್ ಸೈಟ್ ತಾಂತ್ರಿಕ ತರಬೇತಿಯನ್ನು ನೀಡುವುದು 
  • ಕಾಂಕ್ರೀಟ್ ವೆಚ್ಚಗಳನ್ನು ಕಡಿಮೆಗೊಳಿಸಲು ಮಿಶ್ರ ವಿನ್ಯಾಸ ಸಮಾಲೋಚನೆ 
  • ‘ಯೋಜನಾ ಪಾಲುದಾರಿಕೆ’ಯಾಗಿ ಸಿಗ್ನೇಚರ್ ಯೋಜನೆಗಳಿಗಾಗಿ ಸಮರ್ಪಿತ ದಾಸ್ತಾನು ನಿರ್ವಹಣೆ
  • ಯಾವುದೇ ಸಂಸ್ಯೆರಹಿತ ಕಾಂಕ್ರೀಟ್ ನಿರ್ಮಾಣ ಕಾರ್ಯಗಳಿಗಾಗಿ ಅಲ್ಟ್ರಾಟೆಕ್ ಕಾಂಕ್ರೀಟ್ ಪೂರೈಸುವುದು 
  • ‘ಮಾಲೀಕತ್ವ ಯೋಜನೆ ಪರಿಕಲ್ಪನೆ’ ಅಡಿಯಲ್ಲಿ ಯೋಜನೆಗಳಿಗೆ ಮೀಸಲಾಗಿರುವ ರೆಡಿ ಮಿಕ್ಸ್ ಪ್ಲಾಂಟ್ಗಳು
  • ‘ಅಲ್ಟ್ರಾಟೆಕ್ ಆಕ್ಸೆಸ್’ - ಪ್ರಮುಖ ಖಾತೆಗಳಿಗೆ ವೆಬ್ ಆಧಾರಿತ ಪೂರ್ವಭಾವಿ ಮಾಹಿತಿ ವ್ಯವಸ್ಥೆ

ಭಾರತಾದ್ಯಂತ 2600 ನಿರ್ಮಾಣ ಸೈಟ್ಗಳನ್ನು ಒಳಗೊಂಡಿರುವ 80 ಪ್ರಮುಖ ಖಾತೆಗಳು ಮತ್ತು 122 ನಿರೀಕ್ಷಿತ ಪ್ರಮುಖ ಖಾತೆಗಳು ನಮ್ಮಲ್ಲಿವೆ.  

ಪ್ರಶಂಸಾಪತ್ರ

Get Answer to
your Queries

Enter a valid name
Enter a valid number
Enter a valid pincode
Select a valid category
Enter a valid sub category
Please check this box to proceed further
LOADING...