UltraTech Premium

ಎಲ್ಲವೂ ಬ್ಲಾಸ್ಟ್ ಫರ್ನೇಸ್ ಸ್ಲ್ಯಾಗ್ ಸಿಮೆಂಟ್‌ನ ಬಗ್ಗೆ

ಅಲ್ಟ್ರಾಟೆಕ್ ಪ್ರೀಮಿಯಂ

ಅಲ್ಟ್ರಾಟೆಕ್ ಪ್ರೀಮಿಯಂ ಒಂದು ಕಾಂಕ್ರೀಟ್ ಸ್ಪೆಷಲ್ ಸಿಮೆಂಟ್ ಆಗಿದ್ದು, ಅಸಾಧಾರಣ ಸಾಮರ್ಥ್ಯ ಹಾಗೂ ಅತ್ಯುದ್ಭುತ ಬಾಳಿಕೆ ಕಾಂಕ್ರೀಟ್ ಅನ್ನು ನಿರ್ಮಿಸುವ ಸಿಮೆಂಟ್ ಅನ್ನು ಗ್ರಾಹಕರಿಗೆ ಒದಗಿಸಲು ಜಾಗರೂಕತೆಯಿಂದ ಆಯ್ಕೆಮಾಡಿದ ಪ್ರೀಮಿಯಂ ಪದಾರ್ಥಗಳೊಂದಿಗೆ ಅಲ್ಟ್ರಾಟೆಕ್ನ ಅತ್ಯಾಧುನಿಕ ಉತ್ಪಾದನಾ ಘಟಕಗಳಲ್ಲಿ ಉತ್ಪಾದಿಸಲಾಗುತ್ತದೆ.

ಗುಣಮಟ್ಟದ ಭರವಸೆ ಅಲ್ಟ್ರಾಟೆಕ್ ಉತ್ಪಾದನಾ ಸಿದ್ಧಾಂತದ ಅವಿಭಾಜ್ಯ ಅಂಗವಾಗಿದೆ. ಸುಧಾರಿತ ತಂತ್ರಜ್ಞಾನಗಳ ಕಟ್ಟುನಿಟ್ಟಿನ ಅನ್ವಯ, ಅಧಿಕ ನಿಖರತೆಯ ಸಲಕರಣೆಯೊಂದಿಗೆ ನಿರಂತರ ಗುಣಮಟ್ಟ ಮೇಲ್ವಿಚಾರಣೆ ಮತ್ತು ಐಎಸ್ಒ ಪ್ರಮಾಣೀಕೃತ ಸಿಸ್ಟಂಗಳು ಮತ್ತು ಕಾರ್ಯವಿಧಾನಗಳ ಪಾಲನೆಯ ಮೂಲಕ ಅಲ್ಟ್ರಾಟೆಕ್ ಪ್ರೀಮಿಯಂನ ಗುಣಮಟ್ಟದ ಗುಣಲಕ್ಷಣಗಳನ್ನು ನಿರಂತರವಾಗಿ ಖಚಿತಪಡಿಸಲಾಗುತ್ತದೆ.

ಅಧಿಕ ಗ್ಲಾಸ್ ಕಂಟೆಂಟ್, ಹಾನಿಕಾರಕ ಸಾಮಗ್ರಿಗಳು ಇಲ್ಲದ ಜಿಪ್ಸಿಯಂ ಮತ್ತು ಪೊಟ್ಯಾಷಿಯಂ ಪಿಎಸ್ಡಿ (ಪಾರ್ಟಿಕಲ್ ಸೈಜ್ ಡಿಸ್ಟ್ರಿಬ್ಯೂಷನ್) ಹೊಂದಿರುವ ಸಾಕಷ್ಟು ಪ್ರಮಾಣದ ಉತ್ಕೃಷ್ಟ ಬ್ಲಾಸ್ಟ್ ಫರ್ನೇಸ್ನೊಂದಿಗೆ ಮಿಶ್ರಣ ಮಾಡಿರುವ ಉನ್ನತ ಗುಣಮಟ್ಟದ ಕ್ಲಿಂಕರ್ ಒಳಗೊಂಡ ಅಲ್ಟ್ರಾಟೆಕ್ ಪ್ರೀಮಿಯಂನ ಸಂಯೋಜನೆ ವರ್ಷದಿಂದ ವರ್ಷಕ್ಕೆ ಅದರ ಸರಿಸಾಟಿಯಿಲ್ಲದ ಕಾರ್ಯಕ್ಷಮತೆಯನ್ನು ಖಚಿತಪಡಿಸುತ್ತದೆ. ಅಲ್ಟ್ರಾಟೆಕ್ ಪ್ರೀಮಿಯಂ ಸಿಮೆಂಟ್ ಅನ್ನು ವಿವಿಧ ಕಟ್ಟದ ನಿರ್ಮಾಣ ಪ್ರಕ್ರಿಯೆಗಳಿಗೆ ಬಳಸಬಹುದಾಗಿದ್ದು, ಇವುಗಳಲ್ಲಿ ಪಿಸಿಸಿ, ಗಾರೆ ಮತ್ತು ಪ್ಲಾಸ್ಟರ್ ಕಾಮಗಾರಿಗಳು ಸೇರಿವೆ. ದೊಡ್ಡ ಅಡಿಪಾಯಗಳು, ಅಣೆಕಟ್ಟುಗಳು, ಕಾಂಕ್ರೀಟ್ ರಸ್ತೆಗಳ ಮುಂತಾದ ಇತರ ಭಾರೀ ಕಾಂಕ್ರೀಟ್ ಕೆಲಸಗಳಿಗೂ ಅಲ್ಟ್ರಾಟೆಕ್ ಪ್ರೀಮಿಯಂ ಅನ್ನು ವಿಸ್ತೃತವಾಗಿ ಬಳಸಲಾಗುತ್ತದೆ. ಸಲ್ಫೇಟ್ ಮತ್ತು ಕ್ಲೋರೈಡ್ಗಳ ದಾಳಿಗೆ ಅತ್ಯುತ್ತಮ ನಿರೋಧಕತೆಯಿಂದಾಗಿ ಸಮುದ್ರ ಮತ್ತು ಒರಟು ಹವಾಮಾನಗಳಲ್ಲಿ ಇದು ಆರ್ಸಿಸಿಗೆ ಸೂಕ್ತವಾಗಿದೆ. ನೆಲದಡಿಯ ನಿರ್ಮಿತಿಗಳಿಗೆ ಮತ್ತು ನೀರಿನೊಳಗೆ ಇರುವ ನಿರ್ಮಿತಿಗಳಿಗೆ ಇದನ್ನು ಬಳಸಬಹುದು. ಉತ್ಕೃಷ್ಟ 28 ದಿನದ ಒತ್ತಡ ಸಾಮರ್ಥ್ಯದೊಂದಿಗೆ ಅಲ್ಟ್ರಾಟೆಕ್ ಪ್ರೀಮಿಯಂ ಸ್ಲ್ಯಾಬ್ಗಳು, ಕಾಲಂಗಳು, ಬೀಮ್ಗಳು ಮತ್ತು ಛಾವಣಿಗಳಂಥ ನಿರ್ಣಾಯಕ ಅಪ್ಲಿಕೇಶನ್ಗಳಿಗೆ ಸೂಕ್ತವಾಗಿದೆ. 

ಅಲ್ಟ್ರಾಟೆಕ್ ಪ್ರೀಮಿಯಂ ಅನ್ನು ಆಕರ್ಷಕವಾದ, ಪಾಲಿಪ್ರೊಪಿಲೀನ್ ಲ್ಯಾಮಿನೇಟ್ ಮಾಡಿದ ಬಾಕ್ಸ್ ಆಕಾರದ ಬ್ಯಾಗ್ಗಳಲ್ಲಿ ಪ್ಯಾಕ್ ಮಾಡಲಾಗಿದ್ದು, ಇದು ಟ್ಯಾಂಪರ್ಪ್ರೂಫ್ ಆಗಿದೆ ಮತ್ತು ಅತ್ಯಂತ ಕಠಿಣ ಬಳಕೆಯನ್ನು ತಾಳಿಕೊಳ್ಳಬಲ್ಲದು.

ಈ ಉತ್ಪನ್ನ ಪ್ರಸ್ತುತ ಪಶ್ಚಿಮ ಬಂಗಾಳ ಮತ್ತು ಬಿಹಾರಗಳಲ್ಲಿ ಲಭ್ಯವಿದೆ.

ಸಂಪರ್ಕಲ್ಲಿರಿ

ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ

ಒಂದು ಮಾನ್ಯವಾದ ಹೆಸರನ್ನು ನಮೂದಿಸಿ
ಒಂದು ಮಾನ್ಯವಾದ ಸಂಖ್ಯೆಯನ್ನು ನಮೂದಿಸಿ
ಒಂದು ಮಾನ್ಯವಾದ ಪಿನ್‌ಕೋಡ್‌ ನಮೂದಿಸಿ
ಒಂದು ಮಾನ್ಯವಾದ ವರ್ಗವನ್ನು ನಮೂದಿಸಿ
ಒಂದು ಮಾನ್ಯವಾದ ಉಪ ವರ್ಗವನ್ನು ನಮೂದಿಸಿ

ಈ ಫಾರ್ಮ್‌ ಅನ್ನು ಸಲ್ಲಿಸುವ ಮೂಲಕ ಅಲ್ಟ್ರಾಟೆಕ್‌ ಸಿಮೆಂಟ್‌ ನಿಮ್ಮನ್ನು ಸಂಪರ್ಕಿಸಲು ನೀವು ಅನುಮತಿ ನೀಡುತ್ತಿದ್ದೀರಿ.

ಮುಂದುವರೆಯಲು ದಯವಿಟ್ಟು ಈ ಚೌಕದಲ್ಲಿ ಗುರುತುಹಾಕಿ