ನೈಸರ್ಗಿಕ ಬೆಳಕಿನ ವ್ಯವಸ್ಥೆ:
ಉತ್ತಮ ನೈಸರ್ಗಿಕ ಬೆಳಕಿನ ವ್ಯವಸ್ಥೆಯನ್ನು ಒದಗಿಸುವ ಮೂಲಕ ಒಳಭಾಗ ಮತ್ತು ಹೊರಬಾಗದ ಪರಿಸರದ ನಡುವಿನ ಸಂಪರ್ಕವನ್ನು ಖಚಿತಪಡಿಸಿಕೊಳ್ಳಬೇಕು:
- ಪ್ರತಿಯೊಂದು ಬಳಕೆ ಮಾಡುವ ಸ್ಥಳಗಳಲ್ಲಿ ಕನಿಷ್ಠ 2% ಹೊಳಪು ನೀಡುವ ಅಂಶವನ್ನು ಸಾಧಿಸಿಕೊಳ್ಳಿ. ಅಡುಗೆಮನೆ, ವಾಸದ ಕೋಣೆಗಳು, ಮಲಗುವ ಕೋಣೆ, ಊಟದ ಕೋಣೆಗಳು ಮತ್ತು ಅಧ್ಯಯನ ಕೊಠಡಿಗಳು ಒಳಗೊಂಡಿರುವ.ಎಲ್ಲರೂ ಸಾಧಾರಣವಾಗಿ ಉಪಯೋಗಿಸುವ ಸ್ಥಳಗಳ ಒಟ್ಟು ಅಂಗಣದ ಪ್ರದೇಶದಲ್ಲಿ 50%. ಕೆಳಗೆ ನೀಡಲಾದ ಸೂತ್ರವನ್ನು ಬಳಸಿಕೊಂಡು ಬೇಕಾದ ಸರಾಸರಿ ಹೊಳಪು ಅಂಶವನ್ನು ಲೆಕ್ಕಹಾಕಬಹುದು: ಹೊಳಪಿನ ಅಂಶ = ಕಿಟಕಿಗಳ ವಿಸ್ತೀರ್ಣ (ಚ.ಆ) / ಮಹಡಿ ವಿಸ್ತೀರ್ಣ (ಚ.ಆ) x ವಾಸ್ತವಿಕ ಗೋಚರ ಪ್ರಸರಣ x ಸ್ಥಿರ
ಸ್ಥಿರ ಮೌಲ್ಯಗಳು:
- ಗೋಡೆಗಳಲ್ಲಿನ ಕಿಟಕಿಗಳು : 0.2
- ಛಾವಣಿಯ ಮೇಲೀನ ಕಿಟಕಿ (ಸ್ಕೈಲೈಟ್) :: 1.0
ಗಮನಿಸಿ:
ಗಾತ್ರದಲ್ಲಿ ದೊಡ್ಡದಾಗಿ ಇರುವ ವಾಸದ ಸ್ಥಳಗಳಿಗೆ, ಹಗಲು ಬೆಳಕು ಪ್ರವೇಶಿಸುವ ಪ್ರದೇಶಗಳ ಭಾಗವನ್ನು ಲೆಕ್ಕಾಚಾರದಲ್ಲಿ ಅಪವರ್ತನಗೊಳಿಸಬಹುದು. ಊಟ ಮಾಡುವ ಮತ್ತು ಚಿತ್ರ ರಚನೆ ಮಾಡುವಂತಹ ಬಹು-ಉದ್ದೇಶಗಳಿಗಾಗಿ ಬಳಸಲಾಗುವ ವಾಸಿಸುವ ಸ್ಥಳಗಳನ್ನು ಅಲ್ಲಿ ಕೈಗೊಳ್ಳುವ ಕಾರ್ಯವನ್ನು ಆಧರಿಸಿ ಪ್ರತ್ಯೇಕ ಸ್ಥಳಗಳಾಗಿ ಪರಿಗಣಿಸಬಹುದು. ಬೇರ್ಪಡಿಸುವ ಗಡಿಯು ಭೌತಿಕವಾಗಿ ಬೇರ್ಪಡಿಸುವ ಗಡಿಯಾಗಿರಬೇಕಾಗಿಲ್ಲ.
ತಾಜಾ ಗಾಳಿಯ ವಾತಾಯನ ವ್ಯವಸ್ಥೆ:
ಒಳಾಂಗಣ ಮಾಲಿನ್ಯಕಾರಕಗಳು ಒಳಾಂಗಣದಲ್ಲಿನ ಗಾಳಿಯ ಗುಣಮಟ್ಟದ ಮೇಲೆ ಪರಿಣಾಮ ಬೀರುವುದನ್ನು ತಪ್ಪಿಸಲು ಸಾಕಷ್ಟು ಹೊರಾಂಗಣ ಗಾಳಿಯ ವಾತಾಯನವನ್ನು ಒಸಬೇಕಾಗುತ್ತದೆ. ವಾಸಿಸುವ ಸ್ಥಳಗಳು, ಅಡುಗೆಮನೆ ಮತ್ತು ಸ್ನಾನಗೃಹಗಳಲ್ಲಿ ತೆರೆಯಬಹುದಾದ ಕಿಟಕಿಗಳು ಅಥವಾ ಬಾಗಿಲುಗಳನ್ನು ಸ್ಥಾಪಿಸಿ, ಅಂದರೆ ಕೆಳಗಿನ ಕೋಷ್ಟಕದಲ್ಲಿ ವಿವರಿಸಿರುವ ಮಾನದಂಡಗಳನ್ನು ಪೂರೈಸುವ ರೀತಿಯಲ್ಲಿ ತೆರೆದ ಪ್ರದೇಶವನ್ನು ವಿನ್ಯಾಸಗೊಳಿಸಬೇಕಾಗುತ್ತದೆ: ತೆರೆಯಬಹುದಾದ ಕಿಟಕಿಗಳು ಮತ್ತು ಬಾಗಿಲುಗಳಿಗಾಗಿ ವಿನ್ಯಾಸದಲ್ಲಿನ ಮಾನದಂಡಗಳು