ವಾಟರ್‌ಪ್ರೂಫಿಂಗ್‌ ವಿಧಾನಗಳು, ಮಾಡರ್ನ್‌ ಕಿಚನ್‌ ಡಿಸೈನ್ಸ್‌, ಹೋಮ್‌ಗಾಗಿ ವಾಸ್ತು ಸಲಹೆಗಳು, ಮನೆ ನಿರ್ಮಾಣ ವೆಚ್ಚ

ಸಂಪರ್ಕಲ್ಲಿರಿ

ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ

ಮಾನ್ಯವಾದ ವರ್ಗವನ್ನು ಆಯ್ಕೆಮಾಡಿ

ನಿಮ್ಮ ಉಪ-ವರ್ಗವನ್ನು ಆಯ್ಕೆ ಮಾಡಿ

acceptence

ಮುಂದುವರಿಯಲು ದಯವಿಟ್ಟು ಈ ಪೆಟ್ಟಿಗೆಯನ್ನು ಪರಿಶೀಲಿಸಿ



ವಿವಿಧ ಪ್ರಕಾರದ ಇಟ್ಟಿಗೆಗಳು ಮತ್ತು ಅವುಗಳ ಗುಣಲಕ್ಷಣಗಳು

ಅತ್ಯುತ್ತಮ ಜೇಡಿಮಣ್ಣಿನಿಂದ ಮಾಡಿದ ಇಟ್ಟಿಗೆಗಳಿಂದ ಹಿಡಿದು ಅಂದವಾದ ಕಾಂಕ್ರೀಟ್ ಇಟ್ಟಿಗೆಗಳವರೆಗೆ, ನಾವು ಎಲ್ಲವನ್ನೂ ಸೇರಿಸಿದ್ದೇವೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ವಿವಿಧ ಪ್ರಕಾರದ ಇಟ್ಟಿಗೆಗಳನ್ನು ಹುಡುಕಿಕೊಳ್ಳಿ ಮತ್ತು ನಿಮ್ಮ ಭವಿಷ್ಯದ ಯೋಜನೆಗೆ ಬೇಕಾಗುವ ಇಟ್ಟಿಗೆಗಳನ್ನು ಬಳಸಲು ಆಸಕ್ತಿಕರ ದಾರಿಯನ್ನು ಕಂಡುಕೊಳ್ಳಿರಿ.

Share:


ನಾವು ಇಂದು ನಿರ್ಮಾಣದಲ್ಲಿ ಬಳಸುವ ಸಾಂಪ್ರದಾಯಿಕ ಸುಟ್ಟ ಜೇಡಿಮಣ್ಣಿನ ಇಟ್ಟಿಗೆಗಳಿಂದ ಹಿಡಿದು ಪರಿಸರ ಸ್ನೇಹಿ ಇಟ್ಟಿಗೆಗಳವರೆಗೆ, ವಿವಿಧ ಪ್ರಕಾರದ ಇಟ್ಟಿಗೆಗಳನ್ನು ಪರಿಶೋಧಿಸುತ್ತೇವೆ. ನೀವು ವೃತ್ತಿಪರ ನಿರ್ಮಾಣಗಾರರಾಗಿರಿ ಅಥವಾ ನಿಮ್ಮ ಸುತ್ತಲಿನ ಕಟ್ಟಡ ಸಾಮಗ್ರಿಗಳ ಬಗ್ಗೆ ಸುಮ್ಮನೆ ಆಸಕ್ತಿ ಹೊಂದಿದವರಾಗಿದ್ದರೂ, ಈ ಬ್ಲಾಗ್‌ನಲ್ಲಿ ನೀವು ಇಟ್ಟಿಗೆಗಳ ಲೋಕದ ಬಗ್ಗೆ ಎಲ್ಲವನ್ನೂ ತಿಳಿದುಕೊಳ್ಳುವಿರಿ.



ಇಟ್ಟಿಗೆಗಳು ಎಂದರೇನು?

ಇಟ್ಟಿಗೆಗಳು ಎಂದರೆ ಕಾಂಕ್ರೀಟ್, ಮರಳು, ಸುಣ್ಣ ಅಥವಾ ಜೇಡಿಮಣ್ಣಿನಿಂದ ಮಾಡಿದ ಒಂದು ರೀತಿಯ ಕಟ್ಟಡ ಸಾಮಗ್ರಿಗಳಾಗಿವೆ. ಅವುಗಳನ್ನು ಸಾಮಾನ್ಯವಾಗಿ ಗೋಡೆಗಳು, ಕಲ್ಲು ಹಾಸಿನ ದಾರಿ ಮತ್ತು ಇತರ ರೀತಿಯ ವಾಸ್ತುಶಿಲ್ಪವನ್ನು ನಿರ್ಮಿಸಲು ಬಳಸಲಾಗುತ್ತದೆ. ಇಟ್ಟಿಗೆಗಳನ್ನು ತಯಾರಿಸಲು ಬಳಸುವ ವಸ್ತುಗಳು. ಮತ್ತು ಅವುಗಳ ಬಳಕೆಯ ಉದ್ದೇಶವನ್ನು ಅವಲಂಬಿಸಿ ವಿವಿಧ ಆಕಾರಗಳು ಮತ್ತು ಪ್ರಕಾರಗಳಲ್ಲಿ ಇಟ್ಟಿಗೆಗಳನ್ನು ಉತ್ಪಾದಿಸಲಾಗುತ್ತದೆ. ಇಟ್ಟಿಗೆಗಳ ದೃಢತೆ, ಶಕ್ತಿ ಮತ್ತು ಬೆಂಕಿಯ ಪ್ರತಿರೋಧದಿಂದಾಗಿ, ಅವು ಜನಪ್ರಿಯ ಕಟ್ಟಡ ಸಾಮಗ್ರಿಯಾಗಿವೆ.

 

ವಿವಿಧ ಪ್ರಕಾರದ ಇಟ್ಟಿಗೆಗಳು

ಅವುಗಳಲ್ಲಿ ಕೆಲವು ವಿವಿಧ ಪ್ರಕಾರದ ಇಟ್ಟಿಗೆಗಳು ಇಲ್ಲಿವೆ:

  • 1. ಬಿಸಿಲಿನಲ್ಲಿ ಒಣಗಿಸಿದ ಇಟ್ಟಿಗೆಗಳು

  • ಹಸಿಯಾದ ಜೇಡಿಮಣ್ಣನ್ನು ಒಣಹುಲ್ಲಿನ ಅಥವಾ ಇತರ ನಾರುಗಳೊಂದಿಗೆ ಬೆರೆಸಿ ನಂತರ ಅವುಗಳನ್ನು ಬಿಸಿಲಿನಲ್ಲಿ ಒಣಗಿಸುವ ಮೂಲಕ ಇವುಗಳನ್ನು ತಯಾರಿಸಲಾಗುತ್ತದೆ. ಬಿಸಿಲಿನಲ್ಲಿ ಒಣಗಿಸಿದ ಇಟ್ಟಿಗೆಗಳು ಸುಡುವ ಇಟ್ಟಿಗೆಗಳಂತೆ ಬಲವಾದ ಮತ್ತು ಬಾಳಿಕೆ ಬರುವಂತೆ ಇರುವುದಿಲ್ಲ, ಆದರೆ ಅವುಗಳನ್ನು ಅಗ್ಗದಲ್ಲಿ ಉತ್ಪಾದಿಸ ಬಹುದಾಗಿದೆ ಮತ್ತು ಸಾಮಾನ್ಯವಾಗಿ ಟೆಂಪರರಿ ನಿರ್ಮಾಣಕ್ಕಾಗಿ ಬಳಸಲಾಗುತ್ತದೆ.
  • 2. ಸುಟ್ಟ ಮಣ್ಣಿನ ಇಟ್ಟಿಗೆಗಳು

  • ಈ ಇಟ್ಟಿಗೆಗಳು ದೃಢವಾದವುಗಳು, ಬಾಳಿಕೆ ಬರುವವು ಮತ್ತು ವಿವಿಧ ಸೈಜ್, ಆಕಾರ ಮತ್ತು ಬಣ್ಣಗಳಲ್ಲಿ ಸಿಗುತ್ತವೆ. ಅವುಗಳನ್ನು ಹಸಿಯಾದ ಜೇಡಿಮಣ್ಣಿನಿಂದ ಅಚ್ಚು ಹಾಕುವ ಮೂಲಕ ತಯಾರಿಸಿ ಬಿಸಿಲಿನಲ್ಲಿ ಒಣಗಿಸಲಾಗುತ್ತದೆ. ನಂತರ ಅವುಗಳನ್ನು ಇಟ್ಟಿಗೆ ಗೂಡುಗಳಲ್ಲಿ ಬೆಂಕಿಯಲ್ಲಿ ಸುಡಲಾಗುತ್ತದೆ. ಸುಟ್ಟ ಜೇಡಿಮಣ್ಣಿನ ಇಟ್ಟಿಗೆಗಳನ್ನು 4 ವಿವಿಧ ಪ್ರಕಾರಗಳಲ್ಲಿ ವಿಂಗಡಿಸಲಾಗುತ್ತದೆ ಮತ್ತು ಅವುಗಳನ್ನು ಹೆಚ್ಚಾಗಿ ನಿರ್ಮಾಣ ಉದ್ದೇಶಗಳಿಗಾಗಿ ಬಳಸಲಾಗುತ್ತದೆ. ವಿಶೇಷವಾಗಿ ಜೇಡಿಮಣ್ಣು ಸಮೃದ್ಧವಾಗಿ ದೊರೆಯುವ ಪ್ರದೇಶಗಳಲ್ಲಿ ಇವುಗಳನ್ನು ತಯಾರಿಸಲಾಗುತ್ತದೆ. ಅದರ ಕೆಲವು ವಿಭಿನ್ನ ಪ್ರಕಾರಗಳು ಇಲ್ಲಿವೆ:
  •  
    • 1) ಪ್ರಥಮ ದರ್ಜೆಯ ಇಟ್ಟಿಗೆಗಳು:

      ಇವು ಉತ್ತಮ ಗುಣಮಟ್ಟದ ಮತ್ತು ಸೈಜ್​, ಆಕಾರ ಮತ್ತು ಬಣ್ಣದಲ್ಲಿ ಒಂದೇ ರೂಪದಲ್ಲಿರುತ್ತವೆ. ಅವುಗಳು ಚೂಪಾದ ಅಂಚುಗಳನ್ನು ಹೊಂದಿರುತ್ತವೆ. ಈ ಇಟ್ಟಿಗೆಗಳು ಕ್ರ್ಯಾಕ್​ ಮತ್ತು ಬೇರೆ ಧೋಷಗಳಿಂದ ಮುಕ್ತವಾಗಿರುತ್ತವೆ. ಇಂತಹ ಇಟ್ಟಿಗೆಗಳಿಗೆ ಹೊಡೆದಾಗ ಸ್ಪಷ್ಟವಾದ ರಿಂಗಿಂಗ್ ಧ್ವನಿಯನ್ನು ಉಂಟುಮಾಡುತ್ತವೆ. ಮೊದಲ ದರ್ಜೆಯ ಇಟ್ಟಿಗೆಗಳನ್ನು ಸಾಮಾನ್ಯವಾಗಿ ಲೋಡ್-ಬೇರಿಂಗ್ ಸ್ಟ್ರಕ್ಚರ್​ಗಳಲ್ಲಿ ಮತ್ತು ತೆರೆದ ಗೋಡೆಗಳಿಗೆ ಇವನ್ನು ಬಳಸಲಾಗುತ್ತದೆ.
    • 2) ಎರಡನೇ ದರ್ಜೆಯ ಇಟ್ಟಿಗೆಗಳು:

      ಇವುಗಳು ಪ್ರಥಮ ದರ್ಜೆಯ ಇಟ್ಟಿಗೆಗಳನ್ನು ಹೋಲುತ್ತವೆಯಾದರೂ, ಆಕಾರದಲ್ಲಿ, ಸೈಜ್​ನಲ್ಲಿ ಅಥವಾ ಬಣ್ಣಗಳಲ್ಲಿ ಸಣ್ಣ ದೋಷಗಳನ್ನು ಹೊಂದಿರಬಹುದು. ಲೋಡ್-ಬೇರಿಂಗ್ ಗೋಡೆಗಳಿಗೆ ಅವು ಕೂಡ ಸೂಕ್ತವಾಗಿವೆ ಆದರೆ ತೆರೆದ ಗೋಡೆಗಳಿಗೆ ಇವನ್ನು ಬಳಸಲಾಗುವುದಿಲ್ಲ.

    • 3) ಮೂರನೇ ದರ್ಜೆಯ ಇಟ್ಟಿಗೆಗಳು:

      ಈ ಇಟ್ಟಿಗೆಗಳು ಆಕಾರ, ಸೈಜ್​ ಮತ್ತು ಬಣ್ಣದಲ್ಲಿ ಹೆಚ್ಚು ಹೆಚ್ಚುಕಮ್ಮಿಯಾಗಿರುತ್ತವೆ ಮತ್ತು ಕಣ್ಣಿಗೆ ಕಾಣುವಂತಹ ಕ್ರ್ಯಾಕ್​ಗಳು, ವಿರೂಪಗಳು ಮತ್ತು ಇತರ ದೋಷಗಳನ್ನು ಹೊಂದಿರುತ್ತವೆ. ಲೋಡ್-ಬೇರಿಂಗ್ ಸ್ಟ್ರಕ್ಚರ್​ಗಳಲ್ಲಿ ಬಳಸಲು ಅವು ಸೂಕ್ತವಲ್ಲ. ಹೀಗಾಗಿ ಉದ್ಯಾನ ಗೋಡೆಗಳು ಅಥವಾ ಲ್ಯಾಂಡ್​ಸ್ಕೇಪಿಂಗ್​ನಂತಹ ರಚನಾತ್ಮಕವಲ್ಲದ ಉದ್ದೇಶಗಳಿಗಾಗಿ ಈ ಇಟ್ಟಿಗೆಗಳನ್ನು ಹೆಚ್ಚಾಗಿ ಬಳಸಲಾಗುತ್ತದೆ.

    • 4) ನಾಲ್ಕನೇ ದರ್ಜೆಯ ಇಟ್ಟಿಗೆಗಳು:

      ಇಂತಹ ಇಟ್ಟಿಗೆಗಳು ಹೆಚ್ಚು ಸುಟ್ಟ ಅಥವಾ ಕಡಿಮೆ ಸುಟ್ಟ ಮತ್ತು ಕಳಪೆ ಗುಣಮಟ್ಟದಿಂದ ಕೂಡಿರುತ್ತವೆ. ಅವು ಯಾವುದೇ ನಿರ್ಮಾಣ ಉದ್ದೇಶಗಳಿಗೆ ಸೂಕ್ತವಲ್ಲ. ಯಾಕೆಂದರೆ ಅಂತಹ ಇಟ್ಟಿಗೆಗಳು ಕ್ರ್ಯಾಕ್​, ವಿರೂಪ ಮತ್ತು ಇತರ ದೋಷಗಳನ್ನು ಹೊಂದಿರಬಹುದು.
  • 3. ಹಾರುಬೂದಿಯ ಇಟ್ಟಿಗೆಗಳು

  • ಈ ಇಟ್ಟಿಗೆಗಳನ್ನು ಹಾರುಬೂದಿ (ಕಲ್ಲಿದ್ದಲು ಉರಿಸುವ ವಿದ್ಯುತ್ ಸ್ಥಾವರಗಳ ತ್ಯಾಜ್ಯ ಉತ್ಪನ್ನ), ಸಿಮೆಂಟ್ ಮತ್ತು ನೀರನ್ನು ಬೆರೆಸಿ ನಂತರ ಆ ಮಿಶ್ರಣವನ್ನು ಅಚ್ಚುಗಳಲ್ಲಿ ಹಾಕಿ ಕಾಂಪ್ರೆಸ್​ ಮಾಡುವ ಮೂಲಕ ತಯಾರಿಸಲಾಗುತ್ತದೆ. ಸಾಂಪ್ರದಾಯಿಕ ಮಣ್ಣಿನ ಇಟ್ಟಿಗೆಗಳಿಗೆ ಅವು ವೆಚ್ಚದಾಯವಾಗಿದ್ದು-ಪರಿಣಾಮಕಾರಿ ಮತ್ತು ಪರಿಸರ ಸ್ನೇಹಿಯಾಗಿವೆ. ಈ ಇಟ್ಟಿಗೆಗಳನ್ನು ಸಾಮಾನ್ಯವಾಗಿ ಲೋಡ್-ಬೇರಿಂಗ್ ಸ್ಟ್ರಕ್ಚರ್​ಗಳ ನಿರ್ಮಾಣದಲ್ಲಿ ಬಳಸಲಾಗುತ್ತದೆ.
  • 4. ಕಾಂಕ್ರೀಟ್ ಇಟ್ಟಿಗೆಗಳು

  • ಕಾಂಕ್ರೀಟ್ ಇಟ್ಟಿಗೆಗಳನ್ನು ಸಿಮೆಂಟ್, ಮರಳು ಮತ್ತು ನೀರನ್ನು ಮಿಶ್ರಣ ಮಾಡುವ ಮೂಲಕ ತಯಾರಿಸಲಾಗುತ್ತದೆ. ಮೊದಲಿಗೆ ಈ ಮಿಶ್ರಣವನ್ನು ಅಚ್ಚುಗಳಲ್ಲಿ ಸುರಿಯಲಾಗುತ್ತದೆ. ಅವು ಬಲವಾದ, ಬಾಳಿಕೆ ಬರುವ ಮತ್ತು ಬೆಂಕಿ ಮತ್ತು ಹವಾಮಾನ ವೈಪರಿತ್ಯ ನಿರೋಧಕವಾಗಿರುತ್ತವೆ. ಈ ಇಟ್ಟಿಗೆಗಳನ್ನು ಸಾಮಾನ್ಯವಾಗಿ ಲೋಡ್-ಬೇರಿಂಗ್ ಸ್ಟ್ರಕ್ಚರ್​ಗಳು ಮತ್ತು ನೆಲಗಟ್ಟಿನ ಬ್ಲಾಕ್​ಗಳಾಗಿ ಬಳಸಲಾಗುತ್ತದೆ.
  • 5. ಎಂಜಿನಿಯರಿಂಗ್ ಇಟ್ಟಿಗೆಗಳು

  • ಈ ಇಟ್ಟಿಗೆಗಳನ್ನು ರಚನಾತ್ಮಕವಾಗಿ ಬಳಸಲು ವಿಶೇಷವಾಗಿ ವಿನ್ಯಾಸಗೊಳಿಸಲಾಗಿರುತ್ತದೆ. ಅವುಗಳನ್ನು ಉತ್ತಮ ಗುಣಮಟ್ಟದ ಜೇಡಿಮಣ್ಣಿನಿಂದ ತಯಾರಿಸಲಾಗುತ್ತದೆ, ಹೆಚ್ಚಿನ ತಾಪಮಾನದಲ್ಲಿ ಈ ಇಟ್ಟಿಗೆಗಳನ್ನು ಸುಡಲಾಗುತ್ತದೆ. ಅವು ದೃಢವಾದ, ದಟ್ಟವಾದ ಮತ್ತು ನೀರು ಮತ್ತು ರಾಸಾಯನಿಕಗಳ ನಿರೋಧಕವಾಗಿರುತ್ತವೆ. ಈ ರೀತಿಯ ಇಟ್ಟಿಗೆಗಳನ್ನು ಸಾಮಾನ್ಯವಾಗಿ ಇಟ್ಟಿಗೆಗಳು ಭಾರೀ ತೂಕಗಳನ್ನು ಹೊರುವುದಕ್ಕೆ ಅಥವಾ ನೀರಿನ ಒತ್ತಡ ತಡೆಯುವ ಪ್ರದೇಶಗಳಲ್ಲಿ ಬಳಸಲಾಗುತ್ತದೆ.
  • 6. ಕ್ಯಾಲ್ಸಿಯಂ ಸಿಲಿಕೇಟ್ ಇಟ್ಟಿಗೆಗಳು

  • ಕ್ಯಾಲಸಿಯಂ ಸಿಲಿಕೇಟ್​ ಇಟ್ಟಿಗೆಗಳನ್ನು ಉಸುಕು ಮತ್ತು ಸುಣ್ಣದಿಂದ ತಯಾರಿಸಲಾಗುತ್ತದೆ. ಅವುಗಳು ಶಕ್ತಿ, ಬಾಳಿಕೆ ಮತ್ತು ಬೆಂಕಿಯ ಪ್ರತಿರೋಧಕ್ಕೆ ಒಡ್ಡಿಕೊಳ್ಳುವುದರಲ್ಲಿ ಹೆಸರುವಾಸಿಯಾಗಿದೆ. ಈ ಇಟ್ಟಿಗೆಗಳು ಹಗುರವಾಗಿರುತ್ತವೆ ಮತ್ತು ಉತ್ತಮ ನಿರೋಧಕ ಗುಣಲಕ್ಷಣಗಳನ್ನು ಹೊಂದಿವೆ. ಅವುಗಳು ಎತ್ತರದ ಕಟ್ಟಡಗಳ ನಿರ್ಮಾಣದಲ್ಲಿ ಅಥವಾ ಉಷ್ಣ ನಿರೋಧಕವಾಗಿ ಬಳಸಲು ಸೂಕ್ತವಾಗಿದೆ.
  • 7. ಪರಿಸರ ಇಟ್ಟಿಗೆಗಳು

  • ಪ್ಲಾಸ್ಟಿಕ್ ಬಾಟಲಿಗಳು, ಕಾಗದ ಮತ್ತು ಇತರ ತ್ಯಾಜ್ಯ ಉತ್ಪನ್ನಗಳಂತಹ ಮರುಬಳಕೆಯ ವಸ್ತುಗಳಿಂದ ಈ ಪ್ರಕಾರದ ಇಟ್ಟಿಗೆಗಳನ್ನು ತಯಾರಿಸಲಾಗುತ್ತದೆ. ಸಾಂಪ್ರದಾಯಿಕ ಇಟ್ಟಿಗೆಗಳಿಗೆ ಈ ಪರಿಸರ ಸ್ನೇಹಿ ಇಟ್ಟಿಗೆಗಳು ಪರ್ಯಾಯವಾಗಿದ್ದು, ಅವುಗಳ ಸಮರ್ಥನೀಯತೆಯಿಂದ ಜನಪ್ರಿಯತೆಯನ್ನು ಗಳಿಸುತ್ತಿವೆ. ಉದ್ಯಾನ ಗೋಡೆಗಳು, ಲ್ಯಾಂಡ್​ಸ್ಕೇಪಿಂಗ್ ಅಥವಾ ಅಲಂಕಾರಿಕ ವೈಶಿಷ್ಟ್ಯಗಳಂತಹ ರಚನಾತ್ಮಕವಲ್ಲದ ಉದ್ದೇಶಗಳಿಗಾಗಿ ಅವುಗಳನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ.

ಇಟ್ಟಿಗೆಗಳನ್ನು ಗುರುತಿಸುವುದು ಹೇಗೆ?

ಇಟ್ಟಿಗೆಗಳನ್ನು ಅವುಗಳ ಗಾತ್ರ, ಬಣ್ಣ, ವಿನ್ಯಾಸ ಮತ್ತು ಅವುಗಳ ಮೇಲೆ ಟ್ಯಾಪ್ ಮಾಡಿದಾಗ ಬರುವ ಧ್ವನಿಯಿಂದ ಗುರುತಿಸಬಹುದು. ಇಟ್ಟಿಗೆಗಳನ್ನು ಗುರುತಿಸಲು ನಿಮಗೆ ಸಹಾಯ ಮಾಡುವ ಕೆಲವು ಹಂತಗಳು ಇಲ್ಲಿವೆ:

  • 1. ಗಾತ್ರ:

  • ಇಟ್ಟಿಗೆಗಳು ವಿವಿಧ ಗಾತ್ರ​ಗಳಲ್ಲಿ ಬರುತ್ತವೆ, ಆದರೆ ಸಾಮಾನ್ಯ ಗಾತ್ರ ಅಂದರೆ 8.5 ಇಂಚು x 4.25 ಇಂಚುಗಳು x 2.75 ಇಂಚುಗಳು (215 mm x 102.5 mm x 65 mm). ಅದರ ಗಾತ್ರವನ್ನು ಕಂಡುಕೊಳ್ಳಲು ನೀವು ಇಟ್ಟಿಗೆಯನ್ನು ಅಳೆಯಬಹುದು.
  • 2. ಬಣ್ಣ:

  • ಇಟ್ಟಿಗೆಗಳು ಕೆಂಪು, ಕಂದು, ಬೂದು ಮತ್ತು ಕೆನೆಬಣ್ಣ ಸೇರಿದಂತೆ ವಿವಿಧ ಬಣ್ಣಗಳಲ್ಲಿ ಬರುತ್ತವೆ. ಇಟ್ಟಿಗೆಯನ್ನು ತಯಾರಿಸಲು ಬಳಸುವ ವಸ್ತುಗಳು, ಸುಡುವ ಪ್ರಕ್ರಿಯೆ ಮತ್ತು ತಯಾರಿಸುವಾಗ ಬಳಸುವ ಸಂಯೋಜಕಗಳು ಬಣ್ಣದ ಮೇಲೆ ಪ್ರಭಾವ ಬೀರುತ್ತವೆ.
  • 3. ವಿನ್ಯಾಸ:

  • ಇಟ್ಟಿಗೆಗಳು ತಮ್ಮ ಉದ್ದೇಶಿತ ಬಳಕೆಯನ್ನು ಅವಲಂಬಿಸಿ ವಿಭಿನ್ನ ವಿನ್ಯಾಸಗಳಲ್ಲಿರುತ್ತವೆ. ಲೋಡ್-ಬೇರಿಂಗ್ ಗೋಡೆಗಳಿಗೆ ಬಳಸಲಾಗುವ ಇಟ್ಟಿಗೆಗಳು ಮೃದುವಾದ ಮೇಲ್ಮೈ ಮತ್ತು ಚೂಪಾದ ಅಂಚುಗಳನ್ನು ಹೊಂದಿರುತ್ತವೆ, ಆದರೆ ಅಲಂಕಾರಿಕ ಉದ್ದೇಶಗಳಿಗಾಗಿ ಬಳಸುವ ಇಟ್ಟಿಗೆಗಳು ಒರಟಾದ ವಿನ್ಯಾಸ ಅಥವಾ ಪ್ಯಾಟರ್ನ್​ ಹೊಂದಿರುತ್ತವೆ.
  • 4. ಶಬ್ದ:

  • ಇಟ್ಟಿಗೆಗಳ ಮೇಲೆ ಟ್ಯಾಪ್ ಮಾಡಿದಾಗ, ಉತ್ತಮ ಗುಣಮಟ್ಟದ ಇಟ್ಟಿಗೆ ಸ್ಪಷ್ಟವಾದ ರಿಂಗಿಂಗ್ ಧ್ವನಿಯನ್ನು ಹೊರಡಿಸಬೇಕು. ಇಟ್ಟಿ ಮೇಲೆ ಟ್ಯಾಪ್ ಮಾಡಿದಾಗ ಥಡ್ ಎಂಬ ಶಬ್ದ ಬಂದರೆ, ಅದು ಕಡಿಮೆ-ಗುಣಮಟ್ಟದಿಂದ ಕೂಡಿದ ಅಥವಾ ಹಾನಿಗೊಳಗಾದ ಇಟ್ಟಿಗೆಯಾಗಿರುತ್ತದೆ.

 


ಯಾವುದೇ ನಿರ್ಮಾಣಕ್ಕೆ ಇಟ್ಟಿಗೆಗಳನ್ನು ಬಳಸುವ ಮೊದಲು ವೃತ್ತಿಪರರೊಂದಿಗೆ ಸಮಾಲೋಚಿಸುವ ಮೂಲಕ ಗಾರೆ ಕೆಲಸದ ಸಂದರ್ಭಗಳಲ್ಲಿ ಆಗಬಹುದಾದ ತಪ್ಪುಗಳನ್ನು ತಡೆಯಬಹುದು. ನಿಮ್ಮ ಮನೆಯ ದೃಢವಾದ ಗೋಡೆಗಳಿಗೆ ಸರಿಯಾದ ಗಾರೆ ಕೆಲಸವನ್ನು ಮಾಡಿಸುವುದು ಮುಖ್ಯವಾಗಿದೆ.





ಇಟ್ಟಿಗೆಗಳ ಗುಣಲಕ್ಷಣಗಳು ಯಾವುವು?

  • 1. ಗಡಸುತನ

  • ಇಟ್ಟಿಗೆಗಳ ಗಡಸುತನವು ಬಳಕೆಯಿಂದಾಗುವ ಹಾನಿಯನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು ನಿರ್ಧರಿಸುತ್ತದೆ. ಹೆಚ್ಚಿನ ಗಡಸುತನವನ್ನು ಹೊಂದಿರುವ ಇಟ್ಟಿಗೆಗಳು ಹೆಚ್ಚು ಬಾಳಿಕೆ ಬರುತ್ತವೆ ಮತ್ತು ದೃಢವಾಗಿರುತ್ತವೆ.
  • 2. ಸಂಕುಚನ (ಕಂಪ್ರೆಸ್ಸೀವ್)‌ ಸಾಮರ್ಥ್ಯ

  • ಸಂಕೋಚನವನ್ನು ತಡೆದುಕೊಳ್ಳುವ ಇಟ್ಟಿಗೆಗಳ ಸಾಮರ್ಥ್ಯವನ್ನು ಕಾಂಪ್ರೆಸ್ಸಿವ್ ಶಕ್ತಿ ಎನ್ನುತ್ತಾರೆ. ಗೋಡೆಯ ಲೋಡ್-ಬೇರಿಂಗ್ ಸಾಮರ್ಥ್ಯವನ್ನು ನಿರ್ಧರಿಸಲು ಇದು ಪ್ರಮುಖ ಅಂಶವಾಗಿದೆ. ಸಂಕುಚಿಸುವ ಶಕ್ತಿ ಪರೀಕ್ಷೆ ಎಂದು ಕರೆಯಲ್ಪಡುವ ಇಟ್ಟಿಗೆಗಳ ಮೇಲಿನ ಪರೀಕ್ಷೆಯನ್ನು ಬಳಸಿಕೊಂಡು ಸಂಕುಚಿತ ಶಕ್ತಿಗಾಗಿ ಇಟ್ಟಿಗೆಗಳನ್ನು ಪರೀಕ್ಷಿಸಲಾಗುತ್ತದೆ.
  • 3. ಹೀರಿಕೊಳ್ಳುವಿಕೆ

  • ಹೀರಿಕೊಳ್ಳುವಿಕೆಯು ನೀರನ್ನು ಹೀರಿಕೊಳ್ಳುವ ಇಟ್ಟಿಗೆಗಳ ಸಾಮರ್ಥ್ಯವನ್ನು ಇದು ಸೂಚಿಸುತ್ತದೆ. ಕಡಿಮೆ ನೀರು ಹೀರಿಕೊಳ್ಳುವ ಪ್ರಮಾಣವನ್ನು ಹೊಂದಿರುವ ಇಟ್ಟಿಗೆಗಳು ನಿರ್ಮಾಣ ಉದ್ದೇಶಗಳಿಗಾಗಿ ಹೆಚ್ಚು ಸೂಕ್ತವಾಗಿವೆ. ಯಾಕೆಂದರೆ ಅವುಗಳು ನೀರಿಗೆ ಒಡ್ಡಿಕೊಂಡಾಗ ಬಿರುಕು ಉಂಟಾಗುವುದು ಅಥವಾ ದುರ್ಬಲಗೊಳ್ಳುವ ಸಾಧ್ಯತೆಗಳು ಕಡಿಮೆ ಇರುತ್ತವೆ.
  • 4. ಉಷ್ಣ ವಾಹಕತ್ವ

  • ಇಟ್ಟಿಗೆಗಳ ಉಷ್ಣ ವಾಹಕತ್ವವು ಬಿಸಿಯನ್ನು ತಡೆಯುವ ಸಾಮರ್ಥ್ಯವನ್ನು ನಿರ್ಧರಿಸುತ್ತದೆ. ಕಡಿಮೆ ಉಷ್ಣ ವಾಹಕತ್ವವನ್ನು ಹೊಂದಿರುವ ಇಟ್ಟಿಗೆಗಳು ನಿರೋಧಕ ಉದ್ದೇಶಗಳಿಗಾಗಿ ಹೆಚ್ಚು ಸೂಕ್ತವಾಗಿವೆ ಏಕೆಂದರೆ ಅವು ಕಟ್ಟಡದೊಳಗೆ ತಾಪಮಾನವನ್ನು ಒಂದೇ ರೀತಿಯಲ್ಲಿ ಇರುವಂತೆ ಮಾಡಲು ಸಹಾಯ ಮಾಡುತ್ತವೆ.
  • 5. ಎಫ್ಲೋರೆಸೆನ್ಸ್

  • ಕರಗುವ ಲವಣಗಳಿಂದಾಗಿ ಇಟ್ಟಿಗೆಗಳ ಮೇಲ್ಮೈಯಲ್ಲಿ ಬಿಳಿ ಪದರವು ಉಂಟಾಗುವುದನ್ನು ಎಫ್ಲೋರೆಸೆನ್ಸ್ ಎನ್ನುತ್ತಾರೆ. ಇದರಿಂದಾಗಿ ಬಣ್ಣಗೆಡಬಹುದು ಮತ್ತು ಇದು ಇಟ್ಟಿಗೆಯನ್ನು ದುರ್ಬಲಗೊಳಿಸಬಹುದು.
  • 6. ಕ್ಷಾರ (ಅಲ್ಕಲೈ) ಪ್ರತಿರೋಧಕ

  • ಕ್ಷಾರೀಯ (ಅಲ್ಕಲೈ) ಪ್ರತಿರೋಧಕ ಎಂಬುದು ಸಿಮೆಂಟ್​ನಂತಹ ಕ್ಷಾರೀಯ ವಸ್ತುಗಳ ಪರಿಣಾಮಗಳನ್ನು ತಡೆದುಕೊಳ್ಳುವ ಇಟ್ಟಿಗೆಗಳ ಸಾಮರ್ಥ್ಯವಾಗಿದೆ. ಹೆಚ್ಚಿನ ಕ್ಷಾರ ಪ್ರತಿರೋಧಕವನ್ನು ಹೊಂದಿರುವ ಇಟ್ಟಿಗೆಗಳು ಈ ವಸ್ತುಗಳಿಗೆ ಒಡ್ಡಿಕೊಂಡಾಗ ಹಾಳಾಗುವ ಅಥವಾ ಹಾನಿಗೊಳಗಾಗುವ ಸಾಧ್ಯತೆ ಕಡಿಮೆ ಇರುತ್ತದೆ.

 

ಒಟ್ಟಾರೆಯಾಗಿ, ಇಟ್ಟಿಗೆಗಳ ಗುಣಲಕ್ಷಣಗಳನ್ನು ಅರ್ಥಮಾಡಿಕೊಳ್ಳುವುದು ಅವು ತಮ್ಮ ಉದ್ದೇಶಿತ ಬಳಕೆಗೆ ಸೂಕ್ತವೆಂಬುದನ್ನು ಖಚಿತಪಡಿಸಿಕೊಳ್ಳಲು ಮುಖ್ಯವಾಗಿದೆ. ಕಾಲಾನಂತರದಲ್ಲಿ ಬಳಸಿರುವ ಇಟ್ಟಿಗೆಗಳು ಸದೃಢವಾಗಿ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ಅರಿಯುವುದಾಗಿದೆ. ಸಂಕುಚಿಸುವ ಶಕ್ತಿ ಪರೀಕ್ಷೆಯಂತಹ ಇಟ್ಟಿಗೆಗಳ ಪರೀಕ್ಷೆಯು ಅವುಗಳ ಗುಣಮಟ್ಟ ಮತ್ತು ಬಾಳಿಕೆಯನ್ನು ನಿರ್ಧರಿಸಲು ಸಹಾಯ ಮಾಡುತ್ತದೆ.



ಇಟ್ಟಿಗೆಗಳಿಂದ ಕಟ್ಟಡವನ್ನು ಕಟ್ಟುವುದು ಶತಮಾನಗಳಿಂದ ಜನಪ್ರಿಯ ನಿರ್ಮಾಣ ವಿಧಾನವಾಗಿದೆ. ಇಟ್ಟಿಗೆಗಳು ಅವುಗಳ ಶಕ್ತಿ, ಬಾಳಿಕೆ ಮತ್ತು ಬೆಂಕಿ ಮತ್ತು ಹವಾಮಾನಕ್ಕೆ ಪ್ರತಿರೋಧ ಒಡ್ಡುವುದಕ್ಕೆ ಪ್ರಸಿದ್ಧವಾಗಿವೆ. ಇಟ್ಟಿಗೆಗಳನ್ನು ಪರೀಕ್ಷಿಸುವ ಮೂಲಕ, ಬಿಲ್ಡರ್‌ಗಳು ತಾವು ನಿರ್ಮಿಸುವ ರಚನೆಗಳು ಸುರಕ್ಷಿತ, ಬಾಳಿಕೆ ಬರುವ ಮತ್ತು ಅಗತ್ಯ ಮಾನದಂಡಗಳನ್ನು ಪೂರೈಸುತ್ತವೆ ಎಂದು ಭರವಸೆ ಕೊಡುತ್ತಾರೆ. ಇಟ್ಟಿಗೆಗಳನ್ನು ಪರೀಕ್ಷಿಸಲು ವಿವಿಧ ವಿಧಾನಗಳಿವೆ, ಉದಾಹರಣೆಗೆ ನೀರಿನ ಹೀರಿಕೊಳ್ಳುವಿಕೆ, ಸಂಕುಚಿಸುವ ಶಕ್ತಿ ಮತ್ತು ಹೆಚ್ಚಿನದನ್ನು ನೀವು ಈ ವೀಡಿಯೊದಲ್ಲಿ ಕಂಡುಹಿಡಿಯಬಹುದು. ಈ ಪರೀಕ್ಷೆಗಳು ವಿವಿಧ ನಿರ್ಮಾಣ ಉದ್ದೇಶಗಳಿಗಾಗಿ ಇಟ್ಟಿಗೆಗಳ ಸೂಕ್ತತೆಯನ್ನು ನಿರ್ಧರಿಸಲು ಸಹಾಯ ಮಾಡುತ್ತದೆ ಮತ್ತು ಕಟ್ಟಡದ ಪ್ರಕ್ರಿಯೆಯಲ್ಲಿ ಹೆಚ್ಚಿನ ವೆಚ್ಚಕ್ಕೆ ಕಾರಣವಾಗುವ ತಪ್ಪು ಆಯ್ಕೆಗಳನ್ನು ತಡೆಯುತ್ತವೆ.



ಸಂಬಂಧಿತ ಲೇಖನಗಳು



ಶಿಫಾರಸು ಮಾಡಿದ ವೀಡಿಯೊಗಳು





  ಮನೆ ಕನ್‌ಸ್ಟ್ರಕ್ಷನ್‌ಗಾಗಿ ಎಸ್ಟಿಮೇಟಿಂಗ್ ಟೂಲ್ಸ್


ವೆಚ್ಚ ಕ್ಯಾಲ್ಕುಲೇಟರ್

ಪ್ರತಿಯೊಬ್ಬ ಮನೆ ನಿರ್ಮಾಣ ಮಾಡುವವರು ತಮ್ಮ ಕನಸಿನ ಮನೆಯನ್ನು ನಿರ್ಮಿಸಲು ಬಯಸುತ್ತಾರೆ ಆದರೆ ಅದು ಅವರ ಬಜೆಟ್‌ ವೆಚ್ಚವನ್ನು ಮೀರದಂತೆ ಇರಿಸಿಕೊಳ್ಳಲು ಬಯಸುತ್ತಾರೆ. 

logo

ಇಎಂಐ ಕ್ಯಾಲ್ಕುಲೇಟರ್

ಮನೆ ನಿರ್ಮಾಣಕ್ಕೆ ಹಣಕಾಸು ಒದಗಿಸಿಕೊಳ್ಳುವ ಅತ್ಯುತ್ತಮ ಮಾರ್ಗಗಳಲ್ಲಿ ಮನೆ-ಸಾಲವನ್ನು ತೆಗೆದುಕೊಳ್ಳುವುದು ಒಂದಾಗಿರುತ್ತದೆ, ಆದರೆ ಮನೆಯನ್ನು ನಿರ್ಮಿಸುವವರು ಎಷ್ಟು ಕಂತುಗಳನ್ನು ಪಾವತಿಸಬೇಕೆಂದು ತಿಳಿಯಲು ಬಯಸುತ್ತಾರೆ. 

logo

ಪ್ರಾಡಕ್ಟ್ ಪ್ರೆಡಿಕ್ಟರ್

ಮನೆಯನ್ನು ನಿರ್ಮಿಸುವ ಆರಂಭಿಕ ಹಂತಗಳಲ್ಲಿ, ಮನೆ ನಿರ್ಮಿಸುವವರು ಸರಿಯಾದ ಉತ್ಪನ್ನಗಳನ್ನು ಆಯ್ಕೆ ಮಾಡುವುದು ಮುಖ್ಯವಾಗಿರುತ್ತದೆ. 

logo

ಅಂಗಡಿ ಪತ್ತೆಕಾರಕ

ಮನೆ ಕಟ್ಟುವವರಿಗೆ, ಮನೆಯ ಕಟ್ಟಡದ ಬಗ್ಗೆ ಎಲ್ಲಾ ಅಮೂಲ್ಯವಾದ ಮಾಹಿತಿಯನ್ನು ಪಡೆಯುವ ಸರಿಯಾದ ಅಂಗಡಿಯನ್ನು ಕಂಡುಹಿಡಿಯುವುದು ಮುಖ್ಯವಾಗಿದೆ.

logo

Loading....