ವಾಟರ್‌ಪ್ರೂಫಿಂಗ್‌ ವಿಧಾನಗಳು, ಮಾಡರ್ನ್‌ ಕಿಚನ್‌ ಡಿಸೈನ್ಸ್‌, ಹೋಮ್‌ಗಾಗಿ ವಾಸ್ತು ಸಲಹೆಗಳು, ಮನೆ ನಿರ್ಮಾಣ ವೆಚ್ಚ

ಸಂಪರ್ಕಲ್ಲಿರಿ

ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ

ಮಾನ್ಯವಾದ ವರ್ಗವನ್ನು ಆಯ್ಕೆಮಾಡಿ

ನಿಮ್ಮ ಉಪ-ವರ್ಗವನ್ನು ಆಯ್ಕೆ ಮಾಡಿ

acceptence

ಮುಂದುವರಿಯಲು ದಯವಿಟ್ಟು ಈ ಪೆಟ್ಟಿಗೆಯನ್ನು ಪರಿಶೀಲಿಸಿ



ಭಾರತದಲ್ಲಿನ ವಿವಿಧ ಪ್ರಕಾರದ ಮನೆಗಳನ್ನು ಅನ್ವೇಷಿಸಿ

ದೇಶದ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಹಾಗೂ ವಿವಿಧ ಭೌಗೋಳಿಕ ದೃಶ್ಯಗಳನ್ನು ಪ್ರತಿಬಿಂಬಿಸುವ ಭಾರತದಲ್ಲಿನ ವೈವಿಧ್ಯ ರೀತಿಯ ಮನೆಗಳನ್ನು ಅನ್ವೇಷಿಸಿ.

Share:


ಪ್ರಮುಖಾಂಶಗಳು

 

  •  ಭಾರತೀಯ ಮನೆಗಳು ಸಾಂಪ್ರದಾಯಿಕ ಮತ್ತು ಆಧುನಿಕ ವಾಸ್ತುಶಿಲ್ಪ ಶೈಲಿಗಳ ಸಮ್ಮಿಶ್ರಣವನ್ನು ಹೊಂದಿವೆ. 
 
  • ಗುಡಿಸಲುಗಳಿಂದ ಹಿಡಿದು ಅರಮನೆಗಳವರೆಗೆ ವಿವಿಧ ರೀತಿಯ ಮನೆಗಳು ವಿವಿಧ ಪ್ರದೇಶಗಳಾದ್ಯಂತ ಸಾಂಸ್ಕೃತಿಕ ವೈವಿಧ್ಯತೆಯನ್ನು ಪ್ರತಿಬಿಂಬಿಸುತ್ತವೆ.
 
  • ಸ್ಥಳೀಯವಾಗಿ ಸಿಗುವ ಹಾಗೂ ಪರಿಸರಕ್ಕೆ ಹೊಂದುವಂತೆ ಮಣ್ಣು, ಇಟ್ಟಿಗೆ ಮತ್ತು ಕಾಂಕ್ರೀಟ್‌ನಂತಹ ಕಟ್ಟಡ ಸಾಮಗ್ರಿಗಳನ್ನು ಆಯ್ಕೆ ಮಾಡಲಾಗುತ್ತದೆ.
 
  • ನಗರ ಪ್ರದೇಶದಲ್ಲಿ ಆಧುನಿಕ ಅಪಾರ್ಟ್‌ಮೆಂಟ್‌ಗಳು ಹಾಗೂ ವಿಲ್ಲಾಗಳು ಕಂಡುಬಂದರೆ, ಗ್ರಾಮೀಣ ಪ್ರದೇಶದಲ್ಲಿ ಸಾಮಾನ್ಯವಾಗಿ ಸಾಂಪ್ರದಾಯಿಕ ಗುಡಿಸಲುಗಳು ಮತ್ತು ತೋಟದ ಮನೆಗಳನ್ನು ಇರುತ್ತವೆ.
 
  • ಸಾಂಸ್ಕೃತಿಕ ಪರಂಪರೆಯನ್ನು ವಾಸ್ತುಶಿಲ್ಪ ವಿನ್ಯಾಸಗಳಲ್ಲಿ ಸಂರಕ್ಷಿಸಲಾಗಿದೆ, ಉದಾಹರಣೆಗೆ ರಾಜಸ್ಥಾನದ ಹವೇಲಿಗಳು ಮತ್ತು ದಕ್ಷಿಣ ಭಾರತದ ಅಂಗಳದ ಮನೆಗಳು.
 
  • ಪರಿಸರದ ಅಂಶಗಳು ಕಟ್ಟುವ ಮನೆಯ ಮೇಲೆ ಪ್ರಭಾವ ಬೀರುತ್ತವೆ. ಉದಾಹರಣೆಗೆ ಪ್ರವಾಹಕ್ಕೆ ಈಡಾಗುವ ಪ್ರದೇಶಗಳಲ್ಲಿ ಸ್ಟಿಲ್ ಹೌಸ್ ಮತ್ತು ಪರಿಸರ ಸ್ನೇಹಿ ವಿನ್ಯಾಸಗಳಂತಹ ವೈಶಿಷ್ಟ್ಯಗಳನ್ನು ಅಳವಡಿಸಲಾಗುತ್ತದೆ. 
 
  • ಕಟ್ಟಡ ಸಾಮಗ್ರಿಗಳ ಆಯ್ಕೆಯು ಬಾಳಿಕೆ ಮತ್ತು ಸುಸ್ಥಿರತೆಯನ್ನು ಕೊಡುವುದರಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ.


ಇಲ್ಲಿನ ಜನರಂತೆ ಹಳ್ಳಿಗಳಲ್ಲಿನ ಸಾಂಪ್ರದಾಯಿಕ ಮಣ್ಣಿನ ಗುಡಿಸಲುಗಳಿಂದ ಹಿಡಿದು ನಗರಗಳಲ್ಲಿನ ಆಧುನಿಕ ಅಪಾರ್ಟ್​ಮೆಂಟ್​ವರೆಗೆ ಭಾರತೀಯ ಮನೆಗಳು ವೈವಿಧ್ಯಮಯವಾಗಿವೆ. ದೇಶದ ವಿವಿಧ ಭೌಗೋಳಿಕ ವೈಶಿಷ್ಟ್ಯಗಳಲ್ಲಿ ಕಂಡುಬರುವ ಮನೆಗಳ ಪ್ರಕಾರಗಳಲ್ಲಿ ದೇಶದ ವೈವಿಧ್ಯತೆಯನ್ನು ಪ್ರತಿಬಿಂಬಿಸುತ್ತವೆ. ಭಾರತದಲ್ಲಿನ ವಿವಿಧ ರೀತಿಯ ಮನೆಗಳನ್ನು ಅನ್ವೇಷಿಸೋಣ, ಅವುಗಳ ವಿಶಿಷ್ಟ ಗುಣಲಕ್ಷಣಗಳನ್ನು ಮತ್ತು ಅವುಗಳ ವಿನ್ಯಾಸದ ಮೇಲೆ ಪ್ರಭಾವ ಬೀರುವ ಸಾಂಸ್ಕೃತಿಕ ಮತ್ತು ಪರಿಸರ ಅಂಶಗಳ ಮಹತ್ವವನ್ನು ತಿಳಿಯೋಣ.

 

 


ಭಾರತದಲ್ಲಿನ 15 ವಿವಿಧ ರೀತಿಯ ಮನೆಗಳು

ಭಾರತದ ವಾಸ್ತುಶಿಲ್ಪದ ಭೌಗೋಳಿಕ ಲಕ್ಷಣವು ಇಲ್ಲಿನ ಸಂಸ್ಕೃತಿ ಮತ್ತು ಭೌಗೋಳಿಕತೆಯಂತೆಯೇ ವೈವಿಧ್ಯಮಯವಾಗಿದೆ.  ಇಲ್ಲಿ, ನಾವು ದೇಶಾದ್ಯಂತ ಕಂಡುಬರುವ 15 ವಿಭಿನ್ನ ಶೈಲಿಯ ಮನೆಗಳ ಕುರಿತು ಕಂಡುಕೊಳ್ಳುತ್ತೇವೆ. ಪ್ರತಿಯೊಂದೂ ಶೈಲಿಯ ಮನೆಗಳು ಆಯಾ ಪ್ರದೇಶದ ವಿಶಿಷ್ಟ ಸಂಪ್ರದಾಯಗಳು ಮತ್ತು ಪರಿಸರವನ್ನು ತೋರಿಸುತ್ತದೆ.

 

1. ಗುಡಿಸಲುಗಳು



ಗುಡಿಸಲುಗಳು ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಅತ್ಯಂತ ಸರಳ ವಾಸಸ್ಥಾನಗಳಾಗಿವೆ. ಸ್ಥಳೀಯವಾಗಿ ಸಿಗುವ ಮಣ್ಣಿನಿಂದ ತಯಾರಿಸಿದ ಕೆಸರು, ಹುಲ್ಲು ಮತ್ತು ಬಿದಿರನ್ನು ಬಳಸಿ ಇಂತಹ ಗುಡಿಸಲುಗಳನ್ನು ವಿಶಿಷ್ಟವಾಗಿ ನಿರ್ಮಿಸಲಾಗಿರುತ್ತದೆ. ಪ್ರಾಯೋಗಿಕ ಮತ್ತು ಹಣಕಾಸಿನ ಲಭ್ಯತೆಗಳ ಆಧಾರದ ಮೇಲೆ ಗುಡಿಸಲುಗಳ ವಿನ್ಯಾಸವನ್ನು ಮಾಡಲಾಗಿರುತ್ತದೆ. ಈ ಮನೆಗಳನ್ನು ಸಾಮಾನ್ಯವಾಗಿ ದಪ್ಪವಾದ ಗೋಡೆಗಳಿಂದ ಕಟ್ಟಲಾಗಿರುತ್ತದೆ. ಇದು ಬೇಸಿಗೆಯ ಸಮಯದಲ್ಲಿ ಮನೆಯ ಒಳಗಿನ ಭಾಗವನ್ನು ತಂಪಾಗಿ ಇರಿಸುತ್ತದೆ ಮತ್ತು ಚಳಿಗಾಲದಲ್ಲಿ ಬೆಚ್ಚಗಿರುತ್ತದೆ.

 

ಭಾರತದ ಈ ಸಣ್ಣ ಮನೆಗಳ ಹುಲ್ಲಿನ ಛಾವಣಿಗಳು ಪರಿಣಾಮಕಾರಿಯಾಗಿ ಸೋರದಂತೆ ತಡೆಯುತ್ತವೆ. ಜೊತೆಗೆ ಅವುಗಳನ್ನು ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಂಡು ಸುಲಭವಾಗಿ ರಿಪೇರಿ ಮಾಡಬಹುದಾಗಿದೆ.  ಸಾಂಸ್ಕೃತಿಕವಾಗಿ, ಗುಡಿಸಲುಗಳು ಗ್ರಾಮೀಣ ಸಮುದಾಯಗಳ ಸಾಂಪ್ರದಾಯಿಕ ಮತ್ತು ಸುಸ್ಥಿರ ಜೀವನ ಪದ್ಧತಿಗಳನ್ನು ಪ್ರತಿನಿಧಿಸುವುದರಿಂದ ಮುಖ್ಯವಾಗಿದೆ.

 

2. ಅಪಾರ್ಟ್‌ಮೆಂಟ್‌ಗಳು



ಅಪಾರ್ಟ್‌ಮೆಂಟ್‌ಗಳು ಬಹುಮಹಡಿ ಕಟ್ಟಡಗಳಾಗಿದ್ದು, ಪ್ರತ್ಯೇಕ ವಸತಿಗಾಗಿ ಘಟಕಗಳನ್ನಾಗಿ ವಿಂಗಡಿಸಲಾಗುತ್ತದೆ. ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಕಡಿಮೆ ಜಾಗದಲ್ಲಿ ಅಪಾರ್ಟ್​ಮೆಂಟ್​​ಗಳು ಭಾರತದ ನಗರ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತವೆ. ಅಪಾರ್ಟ್‌ಮೆಂಟ್‌ಗಳು ಭದ್ರತೆ, ಪಾರ್ಕಿಂಗ್ ಹಾಗೂ ಕೆಲವೊಮ್ಮೆ ರಿಕ್ರಿಯೇಶನ್ ಸೆಂಟರ್​ಗಳಾದ ಜಿಮ್‌ ಹಾಗೂ ಈಜುಕೊಳಗಳಂತಹ  ವಿವಿಧ ಸೌಕರ್ಯಗಳನ್ನು ಒದಗಿಸುತ್ತವೆ.

 

ಸಿಟಿ ಹಾಗೂ ನಗರೀಕರಣದಿಂದಾಗಿ ಹೆಚ್ಚುತ್ತಿರುವ ಜನಸಂಖ್ಯೆಯ ವಸತಿಯ ಬೇಡಿಕೆ ಈಡೇರಿಸಲು ಅಪಾರ್ಟ್‌ಮೆಂಟ್‌ಗಳು ಹೆಚ್ಚುತ್ತಿವೆ.   ಪರಿಸರಕ್ಕೆ ತಕ್ಕಂತೆ, ಇರುವ ಪ್ರದೇಶವನ್ನು ಅತ್ಯುತ್ತಮವಾಗಿ ಬಳಸಿಕೊಂಡು ವಿನ್ಯಾಸಗೊಳಿಸಲಾಗಿರುತ್ತದೆ. ಜೊತೆಗೆ ಸಾಮಾನ್ಯವಾಗಿ ಶಕ್ತಿಯ ದಕ್ಷತೆ ಮತ್ತು ತ್ಯಾಜ್ಯ ನಿರ್ವಹಣೆಗೆ ವೈಶಿಷ್ಟ್ಯಗಳನ್ನು ಒಳಗೊಂಡಿರುತ್ತದೆ.

 

3.  ಬಂಗಲೆಗಳು



ಒಂದೇ ಅಂತಸ್ತಿನ ಮನೆಗಳಾಗಿರುವ ಬಂಗಲೆಗಳು ಸಾಮಾನ್ಯವಾಗಿ ವಿಶಾಲವಾದ ರೂಮ್​ಗಳು ಮತ್ತು ಗಾರ್ಡನ್​ಗಳನ್ನು ಹೊಂದಿರುತ್ತವೆ. ಜೊತೆಗೆ ವರಾಂಡಾಗಳಂತಹ ವಿಸ್ತಾರವಾದ ಹೊರಾಂಗಣ ಪ್ರದೇಶಗಳನ್ನೂ ಒಳಗೊಂಡಿರುತ್ತವೆ. ಜಾಗೆಯು ಹೆಚ್ಚು ಲಭ್ಯವಿರುವ ನಗರ ಮತ್ತು ಉಪನಗರ ಪ್ರದೇಶಗಳಲ್ಲಿ ಇಂತಹ ಬಂಗಲೆಗಳು ವಿಶೇಷವಾಗಿ ಜನಪ್ರಿಯವಾಗಿವೆ. ಕುಟುಂಬಗಳಿಗೆ ವಾಸಕ್ಕೆ ಸೂಕ್ತವಾಗಿರುವ ಬಂಗಲೆಗಳು ಪ್ರೈವಸಿ ಮತ್ತು ಓಪನ್​ ಸ್ಪೇಸ್​​ನ ಮಿಶ್ರಣವನ್ನು ನೀಡುತ್ತವೆ.

 

ವಾಸ್ತುಶಾಸ್ತ್ರದ ಪ್ರಕಾರ, ಭಾರತದಲ್ಲಿ ಬಂಗಲೆಗಳನ್ನು ಸಾಮಾನ್ಯವಾಗಿ ಅನೇಕ ಪ್ರದೇಶಗಳ ಉಷ್ಣವಲಯದಲ್ಲಿ ಹವಾಮಾನವನ್ನು ನೈಸರ್ಗಿಕ ಗಾಳಿ ಮತ್ತು ಬೆಳಕನ್ನು ಹೆಚ್ಚಿಸಲು ಅನುಕೂಲವಾಗುವಂತೆ ಎತ್ತರದ ಛಾವಣಿಗಳು ಮತ್ತು ದೊಡ್ಡ ಕಿಟಕಿಗಳಂತಹ ಅಂಶಗಳನ್ನು ಸಂಯೋಜಿಸಿ ನಿರ್ಮಿಸಲಾಗುತ್ತದೆ.

 

4. ವಿಲ್ಲಾಗಳು

 



ವಿಲ್ಲಾಗಳು ಐಷಾರಾಮಿ, ಸ್ವತಂತ್ರ ಮನೆಗಳಾಗಿದ್ದು ಆಧುನಿಕ ಸೌಕರ್ಯಗಳು ಮತ್ತು ವಿಸ್ತಾರವಾದ ವಾಸಸ್ಥಳಗಳ ಗುಣಲಕ್ಷಣಗಳನ್ನು ಹೊಂದಿವೆ.  ಇಂತಹ ಮನೆಗಳು ಸಾಮಾನ್ಯವಾಗಿ ಶ್ರೀಮಂತ ನೆರೆಹೊರೆಯಲ್ಲಿ ಅಥವಾ ಗೇಟೆಡ್ ಕಮ್ಯೂನಿಟಿಗಳಲ್ಲಿ ಕಂಡುಬರುತ್ತವೆ. ಸಾಮಾನ್ಯವಾಗಿ ಖಾಸಗಿ ಉದ್ಯಾನಗಳು, ಈಜುಕೊಳಗಳು ಮತ್ತು ಕಾರುಗಳ ಹಲವು ಷೆಡ್ಡುಗಳ ವೈಶಿಷ್ಟ್ಯಗಳನ್ನು ವಿಲ್ಲಾಗಳು ಒಳಗೊಂಡಿರುತ್ತವೆ. ವಿಲ್ಲಾಗಳ ವಿನ್ಯಾಸವು ನೆಮ್ಮದಿ, ಪ್ರೈವಸಿ ಹಾಗೂ ಪ್ರತ್ಯೇಕವಾಗಿರುವ ಸೌಲಭ್ಯ ಕೊಡುವುದರ ಮೇಲೆ ಕೇಂದ್ರೀಕರಣವಾಗಿರುತ್ತದೆ.

 

ಸಾಂಸ್ಕೃತಿಕವಾಗಿ, ವಿಲ್ಲಾವನ್ನು ಹೊಂದುವುದು ಸಾಮಾನ್ಯವಾಗಿ ಸ್ಟೇಟಸ್​ನ ಸಂಕೇತದಂತೆ  ಕಂಡುಬರುತ್ತದೆ, ಇದು ಸಂಪತ್ತು ಮತ್ತು ಯಶಸ್ಸನ್ನು ತೋರಿಸುತ್ತದೆ.  ಪರಿಸರೀಯವಾಗಿ, ಈ ಮನೆಗಳನ್ನು ಸೋಲಾರ್ ಪ್ಯಾನಲ್​ಗಳು ಮತ್ತು ಮಳೆನೀರು ಕೊಯ್ಲು ವ್ಯವಸ್ಥೆಗಳನ್ನು ಒಳಗೊಂಡಿರುವ ಸುಸ್ಥಿರತೆಯನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿರುತ್ತದೆ.

 

5. ತೋಟದ ಮನೆಗಳು (ಫಾರ್ಮ್‌ಹೌಸ್‌ಗಳು)



ಫಾರ್ಮ್‌ಹೌಸ್‌ಗಳು ಗ್ರಾಮೀಣ ಪ್ರದೇಶಗಳಲ್ಲಿರುವ ದೊಡ್ಡ ಮನೆಗಳಾಗಿವೆ, ಹೆಚ್ಚಾಗಿ ಇಂತಹ ಮನೆಗಳು ಕೃಷಿ ಭೂಮಿಯಿಂದ ಸುತ್ತುವರಿದಿರುತ್ತವೆ. ಈ ರೀತಿಯ ಮನೆಗಳನ್ನು ಕೃಷಿ ಚಟುವಟಿಕೆಗಳಿಗೆ ತಕ್ಕಂತೆ ವಿನ್ಯಾಸಗೊಳಿಸಲಾಗಿದೆ. ಜೊತೆಗೆ ವಿಶಿಷ್ಟವಾಗಿ ದೊಡ್ಡ ಕಿಚನ್​ರೂಮ್​,  ಕೃಷಿ ಉತ್ಪನ್ನಗಳನ್ನು ಸಂಗ್ರಹಿಸಿಡಲು ಸ್ಟೋರೇಜ್​ಗಳು ಮತ್ತು ವಿಶಾಲವಾದ ಲಿವಿಂಗ್ ಕ್ವಾರ್ಟರ್‌ಗಳನ್ನು ಒಳಗೊಂಡಿರುತ್ತದೆ.

 

ಫಾರ್ಮ್‌ಹೌಸ್‌ಗಳು ಭೂಮಿ ಮತ್ತು ಕೃಷಿ ಚಟುವಟಿಕೆಗಳೊಂದಿಗೆ ನೇರವಾಗಿ ಸಂಬಂಧ ಹೊಂದಿರುವ ಜೀವನಶೈಲಿಯನ್ನು ತೋರಿಸುತ್ತವೆ.  ಪರಿಸರೀಯವಾಗಿ, ಈ ರೀತಿಯ ಮನೆಗಳನ್ನು ಸ್ಥಳೀಯ ಹವಾಮಾನವನ್ನು ತಡೆದುಕೊಳ್ಳುವಂತಹ ಸಾಮಗ್ರಿಗಳನ್ನು ಬಳಸಿಕೊಂಡು, ಜೊತೆಗೆ ಬಾಳಿಕೆ ಬರುವುದನ್ನು ಹಾಗೂ ಸೌಕರ್ಯವನ್ನು ಗಮನದಲ್ಲಿಟ್ಟುಕೊಂಡು ನಿರ್ಮಿಸಲಾಗಿರುತ್ತದೆ. ಸಾಂಸ್ಕೃತಿಕವಾಗಿ, ಫಾರ್ಮ್‌ಹೌಸ್‌ಗಳು ಪ್ರಕೃತಿ ಮತ್ತು ಸಾಂಪ್ರದಾಯಿಕ ಜೀವನ ವಿಧಾನಗಳ ಸಂಪರ್ಕವನ್ನು ಸಂಕೇತಿಸುತ್ತವೆ.

 

 6. ಚಾಳಗಳು



ಚಾಳಗಳು ಕಡಿಮೆ ವೆಚ್ಚದದಲ್ಲಿ ನಿರ್ಮಿಸಲಾಗಿರುವ, ಬಹು ಕುಟುಂಬಗಳು ವಾಸಿಸುವ ವಸತಿ ಕಟ್ಟಡಗಳಾಗಿವೆ. ಹೆಚ್ಚಾಗಿ ಇವು ಮುಂಬೈನಲ್ಲಿ ಕಂಡುಬರುತ್ತವೆ. ಅವು ಸಾಮಾನ್ಯ ಕಾರಿಡಾರ್‌ನ ಉದ್ದಕ್ಕೂ ಜೋಡಿಸಲಾದ ಹಲವಾರು ಸಣ್ಣ ಹಾಗೂ ಸಿಂಗಲ್ ರೂಮ್​ ಮನೆಗಳನ್ನು ಒಳಗೊಂಡಿರುತ್ತವೆ. ಕೈಗಾರಿಕಾ ಅಭಿವೃದ್ಧಿ ಸಮಯದ ಆರಂಭದಲ್ಲಿ ಕಾರ್ಮಿಕ ವರ್ಗದ ಜನರ ವಾಸಕ್ಕೆ ಚಾಳಗಳನ್ನು ನಿರ್ಮಿಸಲಾಯಿತು. ಪ್ರತಿಯೊಂದು ಮನೆಯು ಸಾಮಾನ್ಯವಾಗಿ ಸಣ್ಣ ಕಿಚನ್ ಮತ್ತು ಲಿವಿಂಗ್ ಏರಿಯಾವನ್ನು ಒಳಗೊಂಡಿರುತ್ತದೆ. ಹಂಚಿಕೊಳ್ಳುವ ಟಾಯ್ಲೆಟ್​ಗಳು ಮತ್ತು ಬಾತ್​ರೂಮ್​ಗಳು​ ಕಾರಿಡಾರ್‌ಗಳ ಕೊನೆಯಲ್ಲಿರುತ್ತವೆ.

 

ಚಾಳಗಳಲ್ಲಿ ವಾಸಿಸುವ ಜನರ ಅತ್ಯಂತ ಹತ್ತಿರದ ವಾಸಸ್ಥಳದಿಂದಾಗಿ ನಿವಾಸಿಗಳಲ್ಲಿ ಸಮುದಾಯದ ಬಲವಾದ ಪ್ರಜ್ಞೆಯನ್ನು ಬೆಳೆಸುತ್ತದೆ. ಸಾಂಸ್ಕೃತಿಕವಾಗಿ, ಅವು ಮುಂಬೈನ ಇತಿಹಾಸ ಮತ್ತು ನಗರಾಭಿವೃದ್ಧಿಯಲ್ಲಿ ಪ್ರಮುಖ ಅಂಶಗಳಾಗಿವೆ.

 

 7. ಸ್ಟಿಲ್ಟ್ ಹೌಸ್‌ಗಳು

 



ಸ್ಟಿಲ್ಟ್ ಹೌಸ್​ಗಳು ಕಟ್ಟಿಗೆಯ ಅಥವಾ ಬಿದಿರಿನ ಸ್ಟಿಲ್ಟ್​(ಕಂಬ)ಗಳ ಮೇಲೆ ನಿರ್ಮಿಸಲಾಗುವ ಎತ್ತರದಲ್ಲಿರುವ ಮನೆಗಳಾಗಿವೆ. ಮೂಲತಃವಾಗಿ ಅಸ್ಸಾಂನಂತಹ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಇಂಥ ಮನೆಗಳನ್ನು ನಾವು ನೋಡಬಹುದಾಗಿದೆ. ಈ ಮನೆಗಳ ಎತ್ತರವು ವಾಸಸ್ಥಳವನ್ನು ಪ್ರವಾಹದಿಂದ ರಕ್ಷಿಸುವಂತೆ ಮಾಡುತ್ತದೆ. ಜೊತೆಗೆ ಅತಿವೃಷ್ಟಿ ಸಮಯದಲ್ಲಿ ಮನೆಯು ಒಣದಾಗಿರುವಂತೆ ಮಾಡುತ್ತದೆ. ಸ್ಟಿಲ್ಟ್ ಮನೆಗಳು ಉತ್ತಮ ಗಾಳಿ-ಬೆಳಕನ್ನು ಒದಗಿಸುತ್ತವೆ. ಜೊತೆಗೆ ಕ್ರಿಮಿ-ಕೀಟಗಳಿಂದ ಉಂಟಾಗುವ ತೊಂದರೆಯನ್ನು ಕಡಿಮೆ ಮಾಡುತ್ತದೆ. ಹೆಚ್ಚಾಗಿ ಸ್ಥಳೀಯವಾಗಿ ಸಿಗುವ ವಸ್ತುಗಳನ್ನು ಮನೆ ಕಟ್ಟಲು ಬಳಸುವುದರಿಂದ ಈ ಮನೆಗಳನ್ನು ಪರಿಸರ ಸ್ನೇಹಿ ಮತ್ತು ಸುಸ್ಥೀರವಾಗಿಸುತ್ತವೆ.

 

ಸಾಂಸ್ಕೃತಿಕವಾಗಿ, ಸ್ಟಿಲ್ಟ್ ಮನೆಗಳು ಹೆಚ್ಚು ಮಳೆ ಮತ್ತು ಆಗಾಗ ಪ್ರವಾಹ ಪೀಡಿತವಾಗುವ ಪ್ರದೇಶಗಳಲ್ಲಿ ವಾಸಿಸುವ ಸಮುದಾಯಗಳ ಜೀವನಶೈಲಿಯ ಅವಿಭಾಜ್ಯ ಅಂಗವಾಗಿವೆ.

 

8. ಕಾಟೇಜ್​ಗಳು



ಕಾಟೇಜ್​ಗಳು ಚಿಕ್ಕದಾಗಿರುತ್ತವೆ, ಆದರೆ ಸಾಮಾನ್ಯವಾಗಿ ಕಲ್ಲು ಅಥವಾ ಕಟ್ಟಿಗೆಯಿಂದ ನಿರ್ಮಿಸಲಾಗಿರುವ ಆಕರ್ಷಕ ಮನೆಗಳು.  ಇಂತಹ ಮನೆಗಳು ಸಾಮಾನ್ಯವಾಗಿ ಗಿರಿಧಾಮಗಳು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕಂಡುಬರುತ್ತವೆ. ಜೊತೆಗೆ ಹಿತಕರವಾದ ಹಾಗೂ ಸುಂದರವಾದ ಜೀವನ ಪರಿಸರವನ್ನು ಒದಗಿಸುತ್ತವೆ. ಕಾಟೇಜ್​ಗಳು ಸಾಮಾನ್ಯವಾಗಿ ಇಳಿಜಾರಿನಿಂದ ಕೂಡಿ ಛಾವಣಿಗಳು, ದೊಡ್ಡ ಚಿಮಣಿಗಳು ಮತ್ತು ಚಿಕ್ಕದಾದ ಮನಸೆಳೆಯುವ ಉದ್ಯಾನಗಳನ್ನು ಒಳಗೊಂಡಿರುತ್ತವೆ.

 

ಈ ರೀತಿಯ ಮನೆಗಳನ್ನು ನಿಸರ್ಗದ ಪರಿಸರದೊಂದಿಗೆ ಹೊಂದಾಣಿಕೆ ಮಾಡಲು ಮತ್ತು ಬೆಚ್ಚಗಿನ, ಮನೆಯಂತಹ ವಾತಾವರಣವನ್ನು ಒದಗಿಸುವಂತೆ ವಿನ್ಯಾಸಗೊಳಿಸಲಾಗಿರುತ್ತದೆ. ಸಾಂಸ್ಕೃತಿಕವಾಗಿ, ಕುಟೀರಗಳು ಸರಳವಾದ, ಹಳ್ಳಿಗಾಡಿನ ಜೀವನ ವಿಧಾನದೊಂದಿಗೆ ಸಂಬಂಧ ಹೊಂದಿವೆ. ಇವುಗಳನ್ನು ಸಾಮಾನ್ಯವಾಗಿ ರಜೆಯ ಮನೆಗಳು ಅಥವಾ ಏಕಾಂತಕ್ಕಾಗಿ ಬಳಸಲಾಗುತ್ತದೆ.

 

9. ಸಾಲು ಮನೆಗಳು



ಸಾಲು ಮನೆಗಳು ಸಾಮಾನ್ಯ ಅಡ್ಡ ಗೋಡೆಗಳನ್ನು ಹಂಚಿಕೊಳ್ಳುವ ಒಂದೇ ರೀತಿಯ ಮನೆಗಳ ಸರಣಿಯ ಸಾಲನ್ನು ರೂಪಿಸುತ್ತವೆ. ಭೂಮಿ ದುಬಾರಿಯಾಗಿರುವ ಹಾಗೂ ಜಾಗದ ಬಳಕೆಯು ಮಹತ್ವದ್ದಾಗಿರು ಉಪನಗರ ಪ್ರದೇಶಗಳಲ್ಲಿ ಈ ಮನೆಗಳು ಜನಪ್ರಿಯವಾಗಿವೆ. ಪ್ರತಿಯೊಂದು ಘಟಕವು ಸಾಮಾನ್ಯವಾಗಿ ಚಿಕ್ಕ ಮುಂಭಾಗ ಮತ್ತು ಹಿಂಭಾಗದ ಅಂಗಳದೊಂದಿಗೆ ಬಹು ಮಹಡಿಗಳನ್ನು ಒಳಗೊಂಡಿರುತ್ತದೆ.

 

ಸಾಲು ಮನೆಗಳು ಸಮುದಾಯ ಜೀವನ ಮತ್ತು ವೈಯಕ್ತಿಕ ಪ್ರೈವಸಿಯ ನಡುವೆ ಸಮತೋಲನವನ್ನು ಕೊಡುತ್ತವೆ. ಪರಿಸರೀಯವಾಗಿ, ಅವುಗಳನ್ನು ಜಾಣ್ಮೆಯಿಂದ ಹೆಚ್ಚು ಜಾಗೆ ಸಿಗುವಂತೆ ಮಾಡಲು ವಿನ್ಯಾಸಗೊಳಿಸಲಾಗಿರುತ್ತದೆ. ಜೊತೆಗೆ ಸಾಮಾನ್ಯವಾಗಿ ಗಾರ್ಡನ್​ಗಳು ಅಥವಾ ಆಟದ ಮೈದಾನಗಳಂತಹ ಹಂಚಿಕೆಯ ಸೌಕರ್ಯಗಳನ್ನು ಒಳಗೊಂಡಿರುತ್ತದೆ. ಸಾಂಸ್ಕೃತಿಕವಾಗಿ, ಸಾಲು ಮನೆಗಳು ನಿಕಟ ಸಮುದಾಯ ಪರಿಸರವನ್ನು ಉತ್ತೇಜಿಸುತ್ತದೆ.

 

10. ಅರಮನೆಗಳು



ಅರಮನೆಗಳು ಭವ್ಯವಾದ ಐತಿಹಾಸಿಕ ನಿವಾಸಗಳಾಗಿದ್ದು, ಅವುಗಳು ಹಿಂದೆ ರಾಜಮನೆತನದ ಮನೆಗಳಾಗಿದ್ದವು. ಈ ಸ್ಟ್ರಕ್ಚರ್​ಗಳು ಅವುಗಳ ಭವ್ಯವಾದ ವಾಸ್ತುಶಿಲ್ಪ, ವಿಸ್ತಾರವಾದ ಪ್ರಾಂಗಣಗಳು ಮತ್ತು ಸಂಕೀರ್ಣ ವಿನ್ಯಾಸಗಳಿಂದ ಕಟ್ಟಲ್ಪಟ್ಟಿರುತ್ತವೆ. ಮೂಲತಃವಾಗಿ ರಾಜಸ್ಥಾನದಂತಹ ರಾಜ್ಯಗಳಲ್ಲಿ ಕಂಡುಬರುವ ಅರಮನೆಗಳು ಪ್ರಾಚೀನ ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ವಾಸ್ತುಶಿಲ್ಪದ ಜಾಣ್ಮೆಯನ್ನು ಪ್ರತಿಬಿಂಬಿಸುತ್ತವೆ.

 

ಅರಮನೆಗಳು ಬಹಳಷ್ಟು ಸಲ ಝರೋಖಾಗಳು (ಮೇಲ್ಭಾಗದ ಸುತ್ತುವರಿದ ಬಾಲ್ಕನಿಗಳು) ಅಂಗಳಗಳು ಮತ್ತು ದೊಡ್ಡ ಸಭಾಂಗಣಗಳಂತಹ ಭಾಗಗಳನ್ನು ಒಳಗೊಂಡಿರುತ್ತವೆ. ಸಾಂಸ್ಕೃತಿಕವಾಗಿ, ಅರಮನೆಗಳು ರಾಜಮನೆತನದ ವೈಭವ ಮತ್ತು ಐತಿಹಾಸಿಕ ಪ್ರಾಮುಖ್ಯತೆಯ ಗುರುತುಗಳಾಗಿವೆ. ಇವುಗಳನ್ನು ಸಾಮಾನ್ಯವಾಗಿ ಪರಂಪರೆಯ ಹೋಟೆಲ್‌ಗಳು ಅಥವಾ ವಸ್ತುಸಂಗ್ರಹಾಲಯಗಳನ್ನಾಗಿ ಪರಿವರ್ತನೆ ಮಾಡಲಾಗಿದೆ.

 

11. ಹವೇಲಿಗಳು 



ಹವೇಲಿಗಳು ದೊಡ್ಡದಾದ, ಸಾಂಪ್ರದಾಯಿಕ ಮಹಲುಗಳಾಗಿವೆ. ಅವುಗಳು ಹಿಂದೆ ಶ್ರೀಮಂತ ವ್ಯಾಪಾರಿಗಳು ಮತ್ತು ಪ್ರಸಿದ್ಧ ಕುಟುಂಬಗಳ ವಾಸಸ್ಥಾನಗಳಾಗಿದ್ದವು. ಇಂತಹ ಹವೇಲಿಗಳು ರಾಜಸ್ಥಾನ ಮತ್ತು ಗುಜರಾತ್‌ನಲ್ಲಿ ಸಾಮಾನ್ಯವಾಗಿವೆ. ಈ ಮನೆಗಳು ತಮ್ಮ ವಿಸ್ತಾರವಾದ ಮುಂಭಾಗಗಳು, ಅಲಂಕಾರಿಕ ಬಾಲ್ಕನಿಗಳು ಮತ್ತು ಕೇಂದ್ರ ಪ್ರಾಂಗಣಗಳಿಗೆ ಹೆಸರುವಾಸಿಯಾಗಿವೆ. ಹವೇಲಿಗಳನ್ನು ಬೆಳೆಯುವ ಕುಟುಂಬಗಳಿಗೆ ಸರಿಹೊಂದಿಸಲು ಸಾಧ್ಯವಾಗುವಂತೆ ವಿನ್ಯಾಸಗೊಳಿಸಲಾಗಿರುತ್ತದೆ. ಹಾಗೂ ವಿವಿಧ ಕುಟುಂಬ ಸದಸ್ಯರಿಗೆ ಅನೇಕ ಹಂತಗಳು ಮತ್ತು ವಿಭಾಗಗಳನ್ನು ಒಳಗೊಂಡಿರುತ್ತವೆ.

 

ಪರಿಸರವಾಗಿ, ಅವುಗಳನ್ನು ಆಯಾ ಪ್ರದೇಶದ ಕಠಿಣ ಹವಾಮಾನವನ್ನು ತಡೆದುಕೊಳ್ಳುವಂತೆ, ದಪ್ಪ ಗೋಡೆಗಳು ಮತ್ತು ನೆರಳಿನ ಪ್ರಾಂಗಣಗಳ ಮೂಲಕ ಒಳಾಂಗಣವನ್ನು ತಂಪಾಗಿರಿಸಲು ನಿರ್ಮಿಸಲಾಗಿರುತ್ತದೆ.   ಸಾಂಸ್ಕೃತಿಕವಾಗಿ, ಹವೇಲಿಗಳು ಮೊಘಲ್ ಮತ್ತು ರಜಪೂತ ವಾಸ್ತುಶಿಲ್ಪದ ಶೈಲಿಗಳ ಮಿಶ್ರಣವನ್ನು ಪ್ರತಿನಿಧಿಸುತ್ತವೆ. ಅವುಗಳ ಮಾಲೀಕರ ಐತಿಹಾಸಿಕ ಮತ್ತು ಸಾಮಾಜಿಕ ಸ್ಥಾನಮಾನವನ್ನು ಪ್ರತಿಬಿಂಬಿಸುತ್ತವೆ.

 

12. ಲಡಾಖಿ ಮನೆಗಳು



ಲಡಾಖಿ ಮನೆಗಳು ಲಡಾಖ್‌ನ ಶೀತ ಮರುಭೂಮಿ ಪ್ರದೇಶದಲ್ಲಿ ಕಂಡುಬರುವ ಸಾಂಪ್ರದಾಯಿಕ ಮನೆಗಳಾಗಿವೆ. ಕಲ್ಲು, ಕಟ್ಟಿಗೆ ಹಾಗೂ ಮಣ್ಣಿನಿಂದ ನಿರ್ಮಿಸಲಾದ ಈ ಮನೆಗಳನ್ನು ಕಠಿಣ ಹವಾಮಾನ ಮತ್ತು ಎತ್ತರದ ಪ್ರದೇಶಗಳನ್ನು ತಡೆದುಕೊಳ್ಳುವಂತೆ ವಿನ್ಯಾಸಗೊಳಿಸಲಾಗಿರುತ್ತದೆ. ದಪ್ಪ ಗೋಡೆಗಳು ಚಳಿಯ ಎದುರು ನಿರೋಧನವನ್ನು ಕೊಡುತ್ತವೆ. ಆದರೆ ಸಮತಟ್ಟಾದ ಛಾವಣಿಗಳನ್ನು ಬೆಳೆಗಳನ್ನು ಒಣಗಿಸಲು ಮತ್ತು ಉರುವಲನ್ನು ಸಂಗ್ರಹಿಸಿಡಲು ಬಳಸಲಾಗುತ್ತದೆ.

 

ಲಡಾಖಿ ಮನೆಗಳು ಸಾಮಾನ್ಯವಾಗಿ ಮನೆಯ ಮಧ್ಯದಲ್ಲಿ ಅಡುಗೆ ಮನೆ ಹಾಗೂ ಲಿವಿಂಗ್ ಏರಿಯಾವನ್ನು ಹೊಂದಿರುತ್ತವೆ. ಜೊತೆಗೆ ಬೆಚ್ಚಗಿನ ವಾತಾವರಣ ಕಡಿಮೆಯಾಗದಂತೆ ಮಾಡಲು ಸಣ್ಣ ಕಿಟಕಿಗಳನ್ನು ಅಳವಡಿಸಲಾಗಿರುತ್ತದೆ. ಸಾಂಸ್ಕೃತಿಕವಾಗಿ, ಈ ಮನೆಗಳು ಸ್ಥಳೀಯ ಜನರ ಸಂಪನ್ಮೂಲ ಮತ್ತು ಅವರ ಪರಿಸರಕ್ಕೆ ಹೊಂದಿಕೊಳ್ಳುವುದನ್ನು ತೋರಿಸುತ್ತವೆ.

 

13. ಹೌಸ್‌ಬೋಟ್‌​ಗಳು



 ಹೌಸ್​ಬೋಟ್‌ಗಳು ವಿಶಿಷ್ಟವಾದ ತೇಲುವ ಮನೆಗಳಾಗಿವೆ. ಮೂಲತಃವಾಗಿ ಕೇರಳದ ಹಿನ್ನೀರಿನಲ್ಲಿ ಮತ್ತು ಕಾಶ್ಮೀರದ ದಾಲ್ ಸರೋವರದಲ್ಲಿ ಕಂಡುಬರುತ್ತವೆ. ಸಾಂಪ್ರದಾಯಿಕ ಕರಕುಶಲತೆ ಮತ್ತು ವಿನ್ಯಾಸವನ್ನು ಒಳಗೊಂಡಿರುವ ಈ ದೋಣಿ ಮನೆಗಳನ್ನು ಕಟ್ಟಿಗೆ ಹಾಗೂ ತೆಂಗಿನ ನಾರಿನಿಂದ ನಿರ್ಮಿಸಲಾಗುತ್ತದೆ. ಕೇರಳದ ಹೌಸ್​ಬೋಟ್‌ಗಳನ್ನು ಕೆಟ್ಟುವಲ್ಲಮ್‌ಗಳು ಎಂದು ಕರೆಯಲಾಗುತ್ತದೆ. ಇವುಗಳನ್ನು ವಸತಿ ಉದ್ದೇಶಗಳಿಗಾಗಿ ಮತ್ತು ಪ್ರವಾಸೋದ್ಯಮಕ್ಕಾಗಿ ಬಳಸಲಾಗುತ್ತದೆ. ಇಂತಹ ಮನೆಗಳು ಪ್ರಶಾಂತ ಮತ್ತು ಸುಂದರವಾದ ಜೀವನ ಪರಿಸರವನ್ನು ಒದಗಿಸುತ್ತವೆ.

 

ಕಾಶ್ಮೀರದಲ್ಲಿ, ಹೌಸ್‌ಬೋಟ್‌​ಗಳು ನಿಶ್ಚಲವಾಗಿರುತ್ತವೆ. ಜೊತೆಗೆ ಐಷಾರಾಮಿ ನಿವಾಸಗಳು ಅಥವಾ ಅತಿಥಿಗೃಹಗಳಂತೆ ಕಾರ್ಯನಿರ್ವಹಿಸುತ್ತವೆ. ಸಾಂಸ್ಕೃತಿಕವಾಗಿ, ಹೌಸ್‌ಬೋಟ್‌ಗಳು ಆ ಪ್ರದೇಶಗಳ ಸಾಂಪ್ರದಾಯಿಕ ಜೀವನಶೈಲಿಯನ್ನು ಪ್ರತಿನಿಧಿಸುತ್ತವೆ. ಜೊತೆಗೆ ಪ್ರವಾಸಿಗರನ್ನು ಸೆಳೆಯುವ ಪ್ರಮುಖ ಆಕರ್ಷಣೆಯಾಗಿರುತ್ತವೆ.

 

14. ಪ್ರಾಂಗಣದ ಮನೆಗಳು



ಪ್ರಾಂಗಣದ ಮನೆಗಳು ಮಧ್ಯದಲ್ಲಿ ತೆರೆದ ಸ್ಥಳ ಅಥವಾ ಪ್ರಾಂಗಣದ ಸುತ್ತಲೂ ನಿರ್ಮಿಸಲಾದ ಸಾಂಪ್ರದಾಯಿಕ ಮನೆಗಳಾಗಿವೆ.  ಈ ಮನೆಗಳು ದಕ್ಷಿಣ ಭಾರತದಲ್ಲಿ, ವಿಶೇಷವಾಗಿ ತಮಿಳುನಾಡು ಮತ್ತು ಕೇರಳದಲ್ಲಿ ಸಾಮಾನ್ಯವಾಗಿ ಕಂಡು ಬರುತ್ತವೆ. ಪ್ರಾಂಗಣವು ಮನೆಯ ಹೃದಯದಂತೆ ಕಾರ್ಯನಿರ್ವಹಿಸುತ್ತದೆ. ನೈಸರ್ಗಿಕ ಗಾಳಿ-ಬೆಳಕು ಮತ್ತು ಕೌಂಟಂಬಿಕ ಚಟುವಟಿಕೆಗಳಿಗೆ ಸಾಮುದಾಯಿಕ ಪ್ರದೇಶವನ್ನು ಒದಗಿಸುತ್ತದೆ.

 

ಈ ರೀತಿಯ ಮನೆಗಳನ್ನು ಉಷ್ಣವಲಯದ ಹವಾಮಾನಕ್ಕೆ ಹೊಂದಿಕೊಳ್ಳುವಂತೆ ವಿನ್ಯಾಸಗೊಳಿಸಲಾಗಿದೆ. ಒಳಭಾಗವನ್ನು ತಂಪಾಗಿರಿಸಲು ನೆರಳಿನ ಪ್ರದೇಶಗಳು ಹಾಗೂ ಅಡ್ಡ ವಾತಾಯನವನ್ನು ಒದಗಿಸಲಾಗಿರುತ್ತದೆ.  ಸಾಂಸ್ಕೃತಿಕವಾಗಿ, ಅವು ಭಾರತೀಯ ಮನೆಗಳ ಸಾಮಾಜಿಕ ಮತ್ತು ಕೌಟುಂಬಿಕ ಸ್ವರೂಪವನ್ನು ಪ್ರತಿಬಿಂಬಿಸುತ್ತವೆ. ಜೊತೆಗೆ ಸಂವಹನ ಮತ್ತು ಸಂಪರ್ಕದಲ್ಲಿರುವುದನ್ನು ಉತ್ತೇಜಿಸುತ್ತವೆ.

 

15. ಪರಿಸರ ಸ್ನೇಹಿ ಮನೆಗಳು

ಪರಿಸರ ಸ್ನೇಹಿ ಮನೆಗಳು ಸುಸ್ಥಿರತೆ ಮತ್ತು ಕನಿಷ್ಠ ಪರಿಸರ ಪ್ರಭಾವವನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾದ ಆಧುನಿಕ ಮನೆಗಳಾಗಿವೆ. ಈ ಮನೆಗಳು ಹಸಿರು ಕಟ್ಟಡ ಸಾಮಗ್ರಿಗಳು, ಶಕ್ತಿ-ಸಮರ್ಥ ವ್ಯವಸ್ಥೆಗಳು ಮತ್ತು ಮಳೆನೀರು ಕೊಯ್ಲು ಮತ್ತು ಸೋಲಾರ್ ಪವರ್​ ನಂತಹ ಸುಸ್ಥಿರ ಅಭ್ಯಾಸಗಳನ್ನು ಒಟ್ಟುಗೂಡಿಸುತ್ತವೆ.

 

ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕಂಡುಬರುವ, ಪರಿಸರ ಸ್ನೇಹಿ ಮನೆಗಳು ಹಸಿರುಮನೆ ಅನಿಲಗಳನ್ನು ಕಡಿಮೆ ಮಾಡುವುದು ಹಾಗೂ ಆರೋಗ್ಯಕರ ಜೀವನ ಪರಿಸರವನ್ನು ಉತ್ತೇಜಿಸುವ ಗುರಿಯನ್ನು ಹೊಂದಿವೆ. ಸಾಂಸ್ಕೃತಿಕವಾಗಿ, ಅವು ಭಾರತದಲ್ಲಿ ಪರಿಸರ ಸಂರಕ್ಷಣೆ ಮತ್ತು ಸುಸ್ಥಿರ ಜೀವನ ಪದ್ಧತಿಗಳ ಕುರಿತು ಬೆಳೆಯುತ್ತಿರುವ ಅರಿವು ಮತ್ತು ಬದ್ಧತೆಯನ್ನು ತೋರಿಸಿಕೊಡುತ್ತವೆ.


ಭಾರತದಲ್ಲಿ ವಿವಿಧ ರೀತಿಯ ಮನೆಗಳಿಗೆ ಬಳಸಲಾಗುವ ಕಟ್ಟಡ ಸಾಮಗ್ರಿಗಳು

ಭಾರತೀಯ ವಸತಿಗಳಲ್ಲಿನ ವೈವಿಧ್ಯತೆಯು ಬೇರೆ ಬೇರೆ ಪ್ರದೇಶಗಳಲ್ಲಿ ಮನೆ ಕಟ್ಟಲು ಬಳಸಲಾಗುವ ವಿವಿಧ ಕಟ್ಟಡ ಸಾಮಗ್ರಿಗಳೊಂದಿಗೆ ನಿಕಟವಾಗಿ ಸಂಬಂಧ ಹೊಂದಿದೆ.  ಸ್ಥಳೀಯ ಲಭ್ಯತೆ, ಹವಾಮಾನ ಮತ್ತು ಸಾಂಸ್ಕೃತಿಕ ಆದ್ಯತೆಗಳ ಆಧಾರದ ಮೇಲೆ ಈ ವಸ್ತುಗಳನ್ನು ಆಯ್ಕೆ ಮಾಡಲಾಗುತ್ತದೆ.


 

ಮನೆಯ ಪ್ರಕಾರ ಬಳಸಿದ ವಸ್ತುಗಳು
ಗುಡಿಸಲುಗಳು ಮಣ್ಣು, ಹುಲ್ಲು, ಬಿದಿರು
ಅಪಾರ್ಟ್‌ಮೆಂಟ್‌ಗಳು ಕಾಂಕ್ರೀಟ್, ಸ್ಟೀಲ್, ಇಟ್ಟಿಗೆಗಳು
ಬಂಗಲೆಗಳು ಇಟ್ಟಿಗೆ, ಕಾಂಕ್ರೀಟ್, ಕಟ್ಟಿಗೆ
ವಿಲ್ಲಾಗಳು ಕಾಂಕ್ರೀಟ್, ಮಾರ್ಬಲ್, ಗ್ರಾನೈಟ್, ಗಾಜು
ತೋಟದ ಮನೆಗಳು ಇಟ್ಟಿಗೆ, ಕಲ್ಲು, ಕಟ್ಟಿಗೆ
ಚಾಳಗಳು ಇಟ್ಟಿಗೆ, ಕಾಂಕ್ರೀಟ್, ಪ್ಲಾಸ್ಟರ್
ಸ್ಟಿಲ್ಟ್ ಹೌಸ್​ಗಳು ಬಿದಿರು, ಕಟ್ಟಿಗೆ
ಕಾಟೇಜ್​ಗಳು ಕಲ್ಲು, ಕಟ್ಟಿಗೆ, ಹುಲ್ಲು
ಸಾಲು ಮನೆಗಳು ಇಟ್ಟಿಗೆ, ಕಾಂಕ್ರೀಟ್, ಸ್ಟೀಲ್
ಅರಮನೆಗಳು ಮರಳುಗಲ್ಲು, ಅಮೃತಶಿಲೆ, ಅಮೂಲ್ಯ ಕಲ್ಲುಗಳು, ಕಟ್ಟಿಗೆ
ಹವೇಲಿಗಳು ಇಟ್ಟಿಗೆ, ಸುಣ್ಣದ ಪ್ಲಾಸ್ಟರ್, ಮರಳುಗಲ್ಲು, ಕಟ್ಟಿಗೆ
ಲಡಾಖಿ ಮನೆಗಳು ಕಲ್ಲು, ಕಟ್ಟಿಗೆ, ಮಣ್ಣಿನ ಇಟ್ಟಿಗೆಗಳು
ಬೋಟ್‌ಹೌಸ್‌ಗಳು ಕಟ್ಟಿಗೆ, ತೆಂಗಿನ ಕಾತಿ
ಪ್ರಾಂಗಣದ ಮನೆಗಳು ಇಟ್ಟಿಗೆ, ಕಾಂಕ್ರೀಟ್, ಕಟ್ಟಿಗೆ, ಟೆರಾಕೋಟಾ
ಪರಿಸರ ಸ್ನೇಹಿ ಮನೆಗಳು ಮರುಬಳಕೆಯ ವಸ್ತುಗಳು, ಬಿದಿರು, ನೆಲಗಟ್ಟು ಮಾಡಿದ ನೆಲ, ಸೋಲಾರ್ ಪ್ಯಾನಲ್​ಗಳು


ಭಾರತದ ಬೇರೆ ಬೇರೆ ಶೈಲಿಯ ಮನೆಗಳನ್ನು ಅನ್ವೇಷಿಸುವುದು ಕಾಲಕಳೆದಂತೆ ಅವುಗಳ ವಾಸ್ತುಶೈಲಿಯು ಹೇಗೆ ಬದಲಾಗಿದೆ ಎಂಬುದನ್ನು ತೋರಿಸುತ್ತದೆ. ಸಾಮಾನ್ಯ ಗುಡಿಸಲುಗಳಿಂದ ಹಿಡಿದು ಭವ್ಯವಾದ ಅರಮನೆಗಳವರೆಗೆ, ಪ್ರತಿಯೊಂದು ಮನೆಯು ಸಂಸ್ಕೃತಿ ಮತ್ತು ಪ್ರಕೃತಿಯ ಬಗ್ಗೆ ಕಥೆಯನ್ನು ಹೇಳುತ್ತದೆ. ನಗರಗಳು ಬೆಳೆದಂತೆ, ಭಾರತದಲ್ಲಿನ ಆಧುನಿಕ ಮನೆಗಳು ನಗರ ಭೂದೃಶ್ಯಗಳನ್ನು ಪುನರ್ ವ್ಯಾಖ್ಯಾನಿಸುವುದನ್ನು ಮುಂದುವರೆಸುವ ಮೂಲಕ ಸಾಂಸ್ಕೃತಿಕ ಗುರುತನ್ನು ಸಂರಕ್ಷಿಸುವುದರೊಂದಿಗೆ ಸಮಕಾಲೀನ ವಿನ್ಯಾಸವನ್ನು ಅಳವಡಿಸಿಕೊಳ್ಳುತ್ತವೆ. ಬಾಳಿಕೆ ಬರುವ ಮನೆಗಳನ್ನು ಕಟ್ಟಲು ಸರಿಯಾದ ವಸ್ತುಗಳನ್ನು ಆಯ್ಕೆ ಮಾಡುವುದು ಅತ್ಯಂತ ಪ್ರಮುಖವಾಗಿದೆ.




ಸಂಬಂಧಿತ ಲೇಖನಗಳು



ಶಿಫಾರಸು ಮಾಡಿದ ವೀಡಿಯೊಗಳು





  ಮನೆ ಕನ್‌ಸ್ಟ್ರಕ್ಷನ್‌ಗಾಗಿ ಎಸ್ಟಿಮೇಟಿಂಗ್ ಟೂಲ್ಸ್


ವೆಚ್ಚ ಕ್ಯಾಲ್ಕುಲೇಟರ್

ಪ್ರತಿಯೊಬ್ಬ ಮನೆ ನಿರ್ಮಾಣ ಮಾಡುವವರು ತಮ್ಮ ಕನಸಿನ ಮನೆಯನ್ನು ನಿರ್ಮಿಸಲು ಬಯಸುತ್ತಾರೆ ಆದರೆ ಅದು ಅವರ ಬಜೆಟ್‌ ವೆಚ್ಚವನ್ನು ಮೀರದಂತೆ ಇರಿಸಿಕೊಳ್ಳಲು ಬಯಸುತ್ತಾರೆ. 

logo

ಇಎಂಐ ಕ್ಯಾಲ್ಕುಲೇಟರ್

ಮನೆ ನಿರ್ಮಾಣಕ್ಕೆ ಹಣಕಾಸು ಒದಗಿಸಿಕೊಳ್ಳುವ ಅತ್ಯುತ್ತಮ ಮಾರ್ಗಗಳಲ್ಲಿ ಮನೆ-ಸಾಲವನ್ನು ತೆಗೆದುಕೊಳ್ಳುವುದು ಒಂದಾಗಿರುತ್ತದೆ, ಆದರೆ ಮನೆಯನ್ನು ನಿರ್ಮಿಸುವವರು ಎಷ್ಟು ಕಂತುಗಳನ್ನು ಪಾವತಿಸಬೇಕೆಂದು ತಿಳಿಯಲು ಬಯಸುತ್ತಾರೆ. 

logo

ಪ್ರಾಡಕ್ಟ್ ಪ್ರೆಡಿಕ್ಟರ್

ಮನೆಯನ್ನು ನಿರ್ಮಿಸುವ ಆರಂಭಿಕ ಹಂತಗಳಲ್ಲಿ, ಮನೆ ನಿರ್ಮಿಸುವವರು ಸರಿಯಾದ ಉತ್ಪನ್ನಗಳನ್ನು ಆಯ್ಕೆ ಮಾಡುವುದು ಮುಖ್ಯವಾಗಿರುತ್ತದೆ. 

logo

ಅಂಗಡಿ ಪತ್ತೆಕಾರಕ

ಮನೆ ಕಟ್ಟುವವರಿಗೆ, ಮನೆಯ ಕಟ್ಟಡದ ಬಗ್ಗೆ ಎಲ್ಲಾ ಅಮೂಲ್ಯವಾದ ಮಾಹಿತಿಯನ್ನು ಪಡೆಯುವ ಸರಿಯಾದ ಅಂಗಡಿಯನ್ನು ಕಂಡುಹಿಡಿಯುವುದು ಮುಖ್ಯವಾಗಿದೆ.

logo

Loading....