ಬೇಸ್ಮೆಂಟ್ ವಾಟರ್‌ಪ್ರೂಫಿಂಗ್ ವಿಧಾನಗಳು
1) ಇಂಟೀರಿಯರ್ ಸೀಲೆಂಟ್‌ಗಳು
ಬೇಸ್ಮೆಂಟ್ನ ಗೋಡೆಗಳು ಮತ್ತು ಮಹಡಿಗಳ ಒಳಭಾಗಕ್ಕೆ ಇಂಟೀರಿಯರ್ ಸೀಲಾಂಟ್ಗಳನ್ನು ಅನ್ನು ಹಚ್ಚುವುದು ಬೇಸ್ಮೆಂಟ್ ವಾಟರ್‌ಪ್ರೂಫಿಂಗ್ ವಿಧಾನದ ಮತ್ತೊಂದು ಬಗೆಯಾಗಿದೆ. ಬಿರುಕುಗಳು, ಸಂದುಗಳಿಂದ ಅಥವಾ ಪೊರಸ್ ಕಾಂಕ್ರೀಟ್ ಮೂಲಕ ನೀರು ಬೇಸ್ಮೆಂಟ್ಗೆ ಹರಿಯುತ್ತದೆ, ಇಂಥ ಸ್ಥಳಗಳಲ್ಲಿ ವಿಶೇಷವಾಗಿ ಮೇಲ್ಮಟ್ಟದಲ್ಲಿರುವ ಅಂತರ್ಜಲದ ಒತ್ತಡ ಅಥವಾ ಕಳಪೆ ಒಳಚರಂಡಿ ವ್ಯವಸ್ಥೆ ಹೊಂದಿರುವುದರಿಂದ ಈ ಸಮಸ್ಯೆ ಎದುರಾಗುತ್ತದೆ. ಇದು ನೀರಿನಿಂದಾಗುವ ಹಾನಿ ಮತ್ತು ಬೂಷ್ಟು ಬೆಳೆಯಲು ಕಾರಣವಾಗಬಹುದು, ಜೊತೆಗೆ ಕಟ್ಟಡದ ಫೌಂಡೇಶನ್ ಮತ್ತು ಸ್ಟ್ರಕ್ಚರ್ನ ಸದೃಢತೆಗೂ ಹಾನಿಯನ್ನುಂಟು ಮಾಡುತ್ತದೆ. ಬೇಸ್ಮೆಂಟ್ನ ಗೋಡೆಗಳು ಮತ್ತು ನೆಲದ ಒಳಭಾಗದಲ್ಲಿ ವಾಟರ್ಪ್ರೂಫ್ ತಡೆಗೋಡೆಯನ್ನು ರಚಿಸುವ ಮೂಲಕ ಇಂಟೀರಿಯರ್ ಸೀಲೆಂಟ್‌ಗಳು ಬೇಸ್ಮೆಂಟ್ಗೆ ನೀರನ್ನು ಸೋರಿಕೆಯಾಗದಂತೆ ತಡೆಯುತ್ತವೆ. ಈ ಸೀಲಾಂಟ್ ತಡೆಗೋಡೆ ನಿರ್ಮಿಸಿ, ಕಾಂಕ್ರೀಟ್ ಮೂಲಕ ನೀರು ಹರಿಯುವುದನ್ನು ತಡೆಯುತ್ತದೆ. ಆದರೂ, ಈ ವಿಧಾನವು ನೀರಿನಿಂದಾಗುವ ಕಡಿಮೆ ಹಾನಿಗೆ ಮಾತ್ರ ಪರಿಣಾಮಕಾರಿಯಾಗಿದೆ ಮತ್ತು ತೇವಾಂಶದಿಂದ ಎದುರಾಗಿರುವ ಸಮಸ್ಯೆಗಳ ಮೂಲ ಕಾರಣಗಳನ್ನು ಪರಿಹರಿಸುವುದಿಲ್ಲ.
2) ಎಕ್ಸ್ಟೀರಿಯರ್ ವಾಟರ್‌ಪ್ರೂಫಿಂಗ್ - ಬೇಸ್ಮೆಂಟ್
ಫೌಂಡೇಶನ್ ಗೋಡೆಗಳ ಹೊರಗಿನಿಂದ ನೀರು ಒಳಕ್ಕೆ ಜಿನುಗುವುದು ಎಕ್ಸ್ಟೀರಿಯರ್ ಬೇಸ್ಮೆಂಟ್ ವಾಟರ್‌ಪ್ರೂಫಿಂಗ್ ಮಾಡಲು ಮುಖ್ಯ ಕಾರಣವಾಗಿದೆ. ಫೌಂಡೇಶನ್ನ ಹೊರಭಾಗದ ಸುತ್ತಲೂ ನೆಲವನ್ನು ಅಗೆದು, ಗೋಡೆಗಳ ಹೊರಭಾಗಕ್ಕೆ ವಾಟರ್ಪ್ರೂಫ್ ಕೋಟಿಂಗ್ ಮಾಡುವುದು ಅಥವಾ ಮೆಂಬರೇನ್ ಹಚ್ಚುವುದನ್ನು ಎಕ್ಸ್ಟೀರಿಯರ್ ಬೇಸ್ಮೆಂಟ್ ವಾಟರ್‌ಪ್ರೂಫಿಂಗ್ ಎನ್ನುತಾರೆ. ನೀರಿನಿಂದಾಗುವ ಹಾನಿಯನ್ನು ತಡೆಯಲು ಮತ್ತು ಕಟ್ಟಡದ ಸ್ಟ್ರಕ್ಚರ್ನ ದೃಢತೆಯನ್ನು ಕಾಪಾಡಿಕೊಳ್ಳಲು ಇದು ಪರಿಣಾಮಕಾರಿ ಪರಿಹಾರವಾಗಿದೆ. ಆದರೂ, ಇದನ್ನು ಮಾಡುವುದು ಖರ್ಚಿನ ಕೆಲಸ ಜೊತೆಗೆ ಇದನ್ನು ಮಾಡಲು ಹಲವು ಅಡ್ಡಿಗಳು ಎದುರಾಬಹುದು. ಯಾಕೇಂದರೆ ಕಟ್ಟಡದ ಫೌಂಡೇಶನ್ ಸುತ್ತಲೂ ನೆಲವನ್ನು ಅಗೆದು ಎಕ್ಸ್ಟೀರಿಯರ್ ಬೇಸ್ಮೆಂಟ್ ವಾಟರ್‌ಪ್ರೂಫಿಂಗ್ ಮಾಡಬೇಕಾಗುತ್ತದೆ. ಜೊತೆಗೆ ವಾಟರ್‌ಪ್ರೂಫಿಂಗ್ ಮಾಡುವುದು ಮುಗಿದ ನಂತರವೂ ಫೌಂಡೇಶನ್ ಪಕ್ಕದಲ್ಲಿ ಭೂಮಿಯಲ್ಲಿ ಇತರ ರಿಪೇರಿಗಳನ್ನು ಮಾಡುವುದನ್ನೂ ಇದು ಒಳಗೊಂಡಿದೆ. ಅದೇನೇ ಇದ್ದರೂ, ಬೇಸ್ಮೆಂಟ್ನಲ್ಲಿ ನೀರಿನ ಜಿನುಗುವಿಕೆಯನ್ನು ತಡೆಯಲು ಈ ವಿಧಾನವು ಅತ್ಯಂತ ವಿಶ್ವಾಸಾರ್ಹ ಹಾಗೂ ದೀರ್ಘಕಾಲೀನ ಪರಿಹಾರವಾಗಿದೆ.
3) ಇಂಟೀರಿಯರ್ ವಾಟರ್‌ಪ್ರೂಫಿಂಗ್ - ಬೇಸ್ಮೆಂಟ್
ಬೇಸ್ಮೆಂಟ್ನಲ್ಲಿ ನೀರು ಸಂಗ್ರಹವಾಗಲು ತೇವಾಂಶವು ಮುಖ್ಯ ಕಾರಣವಾದಾಗ ಇಂಟೀರಿಯರ್ ಬೇಸ್ಮೆಂಟ್ ವಾಟರ್‌ಪ್ರೂಫಿಂಗ್ ಮಾಡುವುದು ಅಗತ್ಯವಾಗುತ್ತದೆ. ಗೋಡೆಗಳು ಅಥವಾ ನೆಲದ ಮೂಲಕ ಬೇಸ್ಮೆಂಟ್ಗೆ ಇಳಿಯುವ ನೀರನ್ನು ಒಳಚರಂಡಿಗೆ ಸಾಗಿಸುವ ಕೆಲಸವನ್ನು ಇಂಟೀರಿಯರ್ ಬೇಸ್ಮೆಂಟ್ ವಾಟರ್‌ಪ್ರೂಫಿಂಗ್ ವ್ಯವಸ್ಥೆ ಮಾಡುತ್ತದೆ. ಹೀಗೆ ಮಾಡಲು ಬೇಸ್ಮೆಂಟ್ನಲ್ಲಿ ಅಳವಡಿಸುವ ಸಂಪ್ ಪಂಪ್ ಅನ್ನು ಬಳಸಿಕೊಂಡು ನೀರನ್ನು ಹೊರಗೆ ಪಂಪ್ ಮಾಡಲಾಗುತ್ತದೆ. ಇಳಿಜಾರನ್ನು ಸೃಷ್ಟಿಸಿ ಒಳಚರಂಡಿ ಪೈಪ್ ಅನ್ನು ಸಾಮಾನ್ಯವಾಗಿ ಬೇಸ್ಮೆಂಟ್ನ ನೆಲದ ಕೆಳಗೆ ಹಾಕಲಾಗಿರುತ್ತದೆ. ಇದನ್ನು ಬೇಸ್ಮೆಂಟ್ನಲ್ಲಿ ಇಳಿಜಾರಿನಲ್ಲಿ ಪಿಟ್‌ನಲ್ಲಿ ಅಳವಡಿಸಲಾಗುತ್ತದೆ. ಪಿಟ್‌ನಲ್ಲಿನ ನೀರಿನ ಮಟ್ಟವು ಒಂದು ನಿರ್ದಿಷ್ಟ ಹಂತವನ್ನು ತಲುಪಿದಾಗ ಸ್ವಯಂಚಾಲಿತವಾಗಿ ಆನ್ ಆಗುವಂತೆ ಸಂಪ್ ಪಂಪ್ ಅನ್ನು ವಿನ್ಯಾಸಗೊಳಿಸಲಾಗಿದ್ದು, ಅದು ಬೇಸ್ಮೆಂಟ್ನಿಂದ ಅಲ್ಲಿ ಸಂಗ್ರಹವಾಗುವ ನೀರನ್ನು ಪಂಪ್ ಮಾಡುತ್ತದೆ.
4) ಫೌಂಡೇಶನ್ ಬಿರುಕು ಇಂಜೆಕ್ಷನ್
ಫೌಂಡೇಶನ್ ಸುತ್ತಲೂ ಮಣ್ಣನ್ನು ಅಗೆಯದೆಯೇ, ಒಳಗಿನಿಂದ ಫೌಂಡೇಶನ್ ಗೋಡೆಗಳಲ್ಲಿನ ಬಿರುಕುಗಳನ್ನು ಸರಿಪಡಿಸುವ ವಿಧಾನವು ಫೌಂಡೇಶನ್ ಬಿರುಕು ಇಂಜೆಕ್ಷನ್ಗಳನ್ನು ಮಾಡುವುದಾಗಿದೆ. ಈ ಪ್ರಕ್ರಿಯೆಯ ಮೂಲಕ ಬಿರುಕುಗಳಿಗೆ ದ್ರವರೂಪದ ಪಾಲಿಯುರೆಥೇನ್ ಅಥವಾ ಎಪಾಕ್ಸಿಯನ್ನು ಸೇರಿಸಲಾಗುತ್ತದೆ. ಹೀಗೆ ಸೇರಿಸಿದ ನಂತರ ಅದು ಗಟ್ಟಿಯಾಗಿ ವಾಟರ್ಪ್ರೂಫ್ ತಡೆಗೋಡೆಯನ್ನು ಸೃಷ್ಟಿಸುತ್ತದೆ, ಜೊತೆಗೆ ಅದು ನೀರು ಒಳಗೆ ಬರದಂತೆ ತಡೆಯುತ್ತದೆ. ಈ ವಿಧಾನವನ್ನು ವಿಶೇಷವಾಗಿ ಸಣ್ಣ ಬಿರುಕುಗಳಿಗೆ ಬಳಸಲಾಗುತ್ತದೆ, ಇಷ್ಟೇ ಅಲ್ಲ ಇದು ಕಟ್ಟಡದ ಸ್ಟ್ರಕ್ಚರ್ಗೆ ಯಾವುದೇ ಅಫಾಯವನ್ನುಂಟು ಮಾಡುವುದಿಲ್ಲ ಮತ್ತು ಕಟ್ಟಡದ ನಿವಾಸಿಗಳಿಗೆ ತೊಂದರೆ ಆಗದಂತೆ ತ್ವರಿತವಾಗಿ ಮತ್ತು ಕಡಿಮೆ ಅಡಚಣೆಗಳೊಂದಿಗೆ ಇದನ್ನು ಮಾಡಿ ಮುಗಿಸಬಹುದು. ಆದರೂ, ಬಿರುಕು ಫಿಲ್ಲರ್‌ಗಳು ಅಥವಾ ಇಂಜಕ್ಷನ್ಗಳು ಬಿರುಕುನ ಮೂಲ ಸಮಸ್ಯೆಗಳನ್ನು ಪರಿಹರಿಸುವುದಿಲ್ಲ ಎಂಬುದನ್ನು ಗಮನಿಸಬೇಕಿರುವುದು ಮುಖ್ಯವಾಗಿದೆ. ಹೀಗಾಗಿ ಇದಕ್ಕೆ ಹೆಚ್ಚುವರಿ ವಾಟರ್‌ಪ್ರೂಫಿಂಗ್ ಕ್ರಮಗಳು ಬೇಕಾಗಬಹುದು. ಮೇಲಾಗಿ, ಈ ವಿಧಾನವು ದೊಡ್ಡ ಅಥವಾ ಹೆಚ್ಚು ತೀವ್ರವಾದ ಬಿರುಕುಗಳಿಗೆ ಸೂಕ್ತವಲ್ಲ, ಇದಕ್ಕೆ ಹೆಚ್ಚು ವ್ಯಾಪಕವಾದ ರಿಪೇರಿಗಳ ಅಗತ್ಯವಿರುತ್ತದೆ.
ಇದನ್ನೂ ಓದಿ: ನೀವು ತಪ್ಪಿಸಬೇಕಾದ 6 ಸಾಮಾನ್ಯ ವಾಟರ್‌ಪ್ರೂಫಿಂಗ್ ತಪ್ಪುಗಳು
ಬೇಸ್ಮೆಂಟ್ ವಾಟರ್ಪ್ರೂಫಿಂಗ್ನ ಪ್ರಯೋಜನಗಳು