Get In Touch

Get Answer To Your Queries

Select a valid category

Enter a valid sub category

acceptence

ಕನ್‌ಸ್ಟ್ರಕ್ಷನ್‌ನಲ್ಲಿ ಗುತ್ತಿಗೆದಾರರ ಪಾತ್ರ

ನಿಮ್ಮ ಮನೆಯ ನಿರ್ಮಾಣ ಕಾಮಗಾರಿಯಲ್ಲಿ ಅನೇಕ ಜನರು ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ. ಮಾಲೀಕರು - ನೀವು ಮತ್ತು ನಿಮ್ಮ ಕುಟುಂಬ, ಆರ್ಕಿಟೆಕ್ಟ್‌ - ಮನೆಯನ್ನು ವಿನ್ಯಾಸಗೊಳಿಸುವವರು, ಕಾರ್ಮಿಕರು ಮತ್ತು ಗಾರೆಯವರು - ನಿಮ್ಮ ಮನೆಯನ್ನು ನಿರ್ಮಿಸುವವರು ಮತ್ತು ಗುತ್ತಿಗೆದಾರ - ಹಾಗೂ ಎಲ್ಲಾ ನಿರ್ಮಾಣ ಚಟುವಟಿಕೆಗಳನ್ನು ಯೋಜಿಸುವವರು ಮತ್ತು ಸಂಯೋಜಿಸುವವರು. ನಿಮ್ಮ ಮನೆಯ ಕಟ್ಟಡ ಕಾಮಗಾರಿಯಲ್ಲಿ ಪ್ರತಿಯೊಬ್ಬ ವ್ಯಕ್ತಿಯು ಅವಿಭಾಜ್ಯ ಪಾತ್ರವನ್ನು ವಹಿಸುತ್ತಿರುತ್ತಾರೆ, ಅಂದಾಜು ಸಮಯ ಮತ್ತು ಬಜೆಟ್‌ನಲ್ಲಿ ಕಟ್ಟಡ ಯೋಜನೆಯು ಪೂರ್ಣಗೊಂಡಿದೆ ಎನ್ನುವುದನ್ನು ಖಚಿತಪಡಿಸುವಲ್ಲಿ ಗುತ್ತಿಗೆದಾರನ ಪಾತ್ರ ಬಹಳ ಮುಖ್ಯವಾಗಿರುತ್ತದೆ.

logo

Step No.1

ಪ್ಲಾನಿಂಗ್

ನಿಮ್ಮ ಮನೆಯ ಬಗೆಗಿನ ನಿಮ್ಮ ಕಲ್ಪನೆಯನ್ನು ಸಾಕಾರಗೊಳಿಸಲು, ನಿಮಗೆ ಒಂದು ಯೋಜನೆ ಬೇಕಾಗುತ್ತದೆ. ನಿರ್ಮಾಣ ಹಂತಕ್ಕೆ ತಲುಪಲು ನಿಮಗೆ ಸಹಾಯ ಮಾಡುವ ಸಲುವಾಗಿ ಯೋಜನೆ ಹಾಕುವುದು, ಸಮಯ ನಿಗದಿಪಡಿಸುವುದು ಮತ್ತು ಬಜೆಟ್ ಅನ್ನು ರೂಪಿಸಲು ಗುತ್ತಿಗೆದಾರನು ನಿಮಗೆ ಸಹಾಯ ಮಾಡುತ್ತಾನೆ.

Step No.2

ಯೋಜನಾ ನಿರ್ವಹಣೆ

ಒಮ್ಮೆ ಯೋಜನೆಯನ್ನು ಕಾರ್ಯಗತಗೊಳಿಸಲು ನಿರ್ಧರಿಸಿದ ನಂತರ, ಗುತ್ತಿಗೆದಾರನು ವ್ಯವಸ್ಥಾಪಕನ ಪಾತ್ರವನ್ನು ವಹಿಸುತ್ತಾನೆ, ಸಾಮಗ್ರಿಗಳ ಖರೀದಿಯಿಂದ ಹಿಡಿದು ಗಾರೆಯವರು ಮತ್ತು ಕಾರ್ಮಿಕರನ್ನು ನೇಮಿಸಿಕೊಳ್ಳುವುದು, ನಿಮ್ಮ ಮನೆಯ ನಿರ್ಮಾಣದ ಸಮಯದಲ್ಲಿ ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದನ್ನು ಖಚಿತಪಡಿಸಿಕೊಳ್ಳುವುದು

Step No.3

ಯೋಜನೆಯ ಮೇಲ್ವಿಚಾರಣೆ

ಗಾರೆಯವರು ಮತ್ತು ಕಾರ್ಮಿಕರು ಪ್ರತಿ ಇಟ್ಟಿಗೆ ಮತ್ತು ಟೈಲ್ ಅನ್ನು ಹಾಕಿದರೆ, ಗುತ್ತಿಗೆದಾರರ ಮಾರ್ಗದರ್ಶನವು ನಿಮ್ಮ ಮನೆಯನ್ನು ರೂಪಿಸುತ್ತದೆ. ಗುತ್ತಿಗೆದಾರನಿಗೆ ಸ್ಥಳದಲ್ಲಿ ನಡೆಯುವ ಕೆಲಸಗಳ ಕುರಿತು ಎಲ್ಲಾ ಮಾಹಿತಿ ಇರಬೇಕು ಮತ್ತು ಪ್ರತಿ ಸಣ್ಣ ಬದಲಾವಣೆ ಹಾಗೂ ಬೆಳವಣಿಗೆಯ ಬಗ್ಗೆ ತಿಳಿದುಕೊಂಡಿರಬೇಕು.

Step No.4

ಕಾನೂನು ಮತ್ತು ನಿಬಂಧನೆಗಳ ಪರಿಶೀಲನೆಗಳು

ಮನೆ ನಿರ್ಮಾಣದ ಬಗ್ಗೆ ವಿಶೇಷವಾಗಿ ಕಾನೂನಿನ ಜಟಿಲತೆಗಳು ಮತ್ತು ಇತರ ನಿಬಂಧನೆಗಳ ಕುರಿತು ನಿಮಗೆ ಎಲ್ಲವೂ ತಿಳಿದಿಲ್ಲದಿರಬಹುದು. ಆದ್ದರಿಂದ ಗುತ್ತಿಗೆದಾರನು, ನಿಮ್ಮ ನೆರವಿನ ವ್ಯಕ್ತಿ ಆಗಿದ್ದು, ಅವರು ಯೋಜನೆಯನ್ನು ಪ್ರಾರಂಭಿಸುವ ಮೊದಲು ಅಗತ್ಯವಿರುವ ಎಲ್ಲಾ ಒಪ್ಪಿಗೆಗಳು ಮತ್ತು ಪರವಾನಗಿಗಳನ್ನು ಚೆನ್ನಾಗಿ ಅರಿತಿರುವವರಾಗಿರುತ್ತಾರೆ.

ಲೇಖನವನ್ನು ಹಂಚಿಕೊಳ್ಳಿ :


ಸಂಬಂಧಿತ ಲೇಖನಗಳು




ಶಿಫಾರಸು ಮಾಡಿದ ವೀಡಿಯೊಗಳು




  ಮನೆ ಕನ್‌ಸ್ಟ್ರಕ್ಷನ್‌ಗಾಗಿ ಎಸ್ಟಿಮೇಟಿಂಗ್ ಟೂಲ್ಸ್


ವೆಚ್ಚ ಕ್ಯಾಲ್ಕುಲೇಟರ್

ಪ್ರತಿಯೊಬ್ಬ ಮನೆ ನಿರ್ಮಾಣ ಮಾಡುವವರು ತಮ್ಮ ಕನಸಿನ ಮನೆಯನ್ನು ನಿರ್ಮಿಸಲು ಬಯಸುತ್ತಾರೆ ಆದರೆ ಅದು ಅವರ ಬಜೆಟ್‌ ವೆಚ್ಚವನ್ನು ಮೀರದಂತೆ ಇರಿಸಿಕೊಳ್ಳಲು ಬಯಸುತ್ತಾರೆ. 

logo

ಇಎಂಐ ಕ್ಯಾಲ್ಕುಲೇಟರ್

ಮನೆ ನಿರ್ಮಾಣಕ್ಕೆ ಹಣಕಾಸು ಒದಗಿಸಿಕೊಳ್ಳುವ ಅತ್ಯುತ್ತಮ ಮಾರ್ಗಗಳಲ್ಲಿ ಮನೆ-ಸಾಲವನ್ನು ತೆಗೆದುಕೊಳ್ಳುವುದು ಒಂದಾಗಿರುತ್ತದೆ, ಆದರೆ ಮನೆಯನ್ನು ನಿರ್ಮಿಸುವವರು ಎಷ್ಟು ಕಂತುಗಳನ್ನು ಪಾವತಿಸಬೇಕೆಂದು ತಿಳಿಯಲು ಬಯಸುತ್ತಾರೆ. 

logo

ಪ್ರಾಡಕ್ಟ್ ಪ್ರೆಡಿಕ್ಟರ್

ಮನೆಯನ್ನು ನಿರ್ಮಿಸುವ ಆರಂಭಿಕ ಹಂತಗಳಲ್ಲಿ, ಮನೆ ನಿರ್ಮಿಸುವವರು ಸರಿಯಾದ ಉತ್ಪನ್ನಗಳನ್ನು ಆಯ್ಕೆ ಮಾಡುವುದು ಮುಖ್ಯವಾಗಿರುತ್ತದೆ. 

logo

ಅಂಗಡಿ ಪತ್ತೆಕಾರಕ

ಮನೆ ಕಟ್ಟುವವರಿಗೆ, ಮನೆಯ ಕಟ್ಟಡದ ಬಗ್ಗೆ ಎಲ್ಲಾ ಅಮೂಲ್ಯವಾದ ಮಾಹಿತಿಯನ್ನು ಪಡೆಯುವ ಸರಿಯಾದ ಅಂಗಡಿಯನ್ನು ಕಂಡುಹಿಡಿಯುವುದು ಮುಖ್ಯವಾಗಿದೆ.

logo

Loading....