ವಾಟರ್‌ಪ್ರೂಫಿಂಗ್‌ ವಿಧಾನಗಳು, ಮಾಡರ್ನ್‌ ಕಿಚನ್‌ ಡಿಸೈನ್ಸ್‌, ಹೋಮ್‌ಗಾಗಿ ವಾಸ್ತು ಸಲಹೆಗಳು, ಮನೆ ನಿರ್ಮಾಣ ವೆಚ್ಚ

ಸಂಪರ್ಕಲ್ಲಿರಿ

ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ

ಮಾನ್ಯವಾದ ವರ್ಗವನ್ನು ಆಯ್ಕೆಮಾಡಿ

ನಿಮ್ಮ ಉಪ-ವರ್ಗವನ್ನು ಆಯ್ಕೆ ಮಾಡಿ

acceptence

ಮುಂದುವರಿಯಲು ದಯವಿಟ್ಟು ಈ ಪೆಟ್ಟಿಗೆಯನ್ನು ಪರಿಶೀಲಿಸಿ


ಪ್ರಮುಖ ಕನ್‌ಸ್ಟ್ರಕ್ಷನ್‌ ಸೈಟ್ ಸುರಕ್ಷತಾ ಕ್ರಮಗಳು

ನಿಮ್ಮ ಮನೆಯ ನಿರ್ಮಾಣದ ಕಾಮಗಾರಿಯ ವಿಷಯಕ್ಕೆ ಬಂದಲ್ಲಿ, ಯೋಜನೆಯ ಸಮಯದಿಂದ ಹಿಡಿದು ಅದನ್ನು ಮುಗಿಸುವವರೆಗಿನ ಬಗ್ಗೆ ಸಾಕಷ್ಟು ಯೋಚಿಸಬೇಕಾಗುತ್ತದೆ. ಆದರೆ ನೀವು ನಿರ್ಮಾಣದ ಕಾಮಗಾರಿಯ ಪ್ರಕ್ರಿಯೆಯಲ್ಲಿ ಸಾಗುತ್ತಿರುವಾಗ, ಸುರಕ್ಷತೆಯು ನೀವು ಯಾವುದೇ ರಾಜಿ ಮಾಡಿಕೊಳ್ಳಲು ಸಾಧ್ಯವಾಗದಂತಹ ಒಂದು ವಿಷಯವಾಗಿರುತ್ತದೆ. ಅದು ಕಟ್ಟಡದ ಸುರಕ್ಷತೆ ಆಗಿರಬಹುದು, ನಿರ್ಮಾಣ ತಂಡವಾಗಿರಬಹುದು, ಮೇಲ್ವಿಚಾರಕರು ಆಗಿರಬಹುದು ಅಥವಾ ನಿವೇಶನದಲ್ಲಿರುವ ಯಾರಾದರೂ ಆಗಿರಬಹುದು. ನಿರ್ಮಾಣ ತಾಣವು ಸ್ವತಃ ಹೆಚ್ಚಿನ ಅಪಾಯವುಳ್ಳ ವಾತಾವರಣವನ್ನು ಹೊಂದಿದ್ದು, ಅಲ್ಲಿ ಕಾರ್ಮಿಕರು ವಿದ್ಯುತ್ ಅಪಾಯಗಳು, ನಿರ್ಮಾಣ ಯಂತ್ರೋಪಕರಣಗಳ ಅಪಾಯಗಳು ಮತ್ತು ಇತರ ಯಾವುದೇ ಅಪಘಾತಗಳಿಗೆ ಒಳಗಾಗುವ ಸಂಭವವಿರುತ್ತದೆ. ಅದಕ್ಕಾಗಿಯೇ, ನಿಮ್ಮ ಮನೆಯ ನಿರ್ಮಾಣದ ಕಾಮಗಾರಿಯ ಸಮಯದಲ್ಲಿ ಯಾವುದೇ ಅಪಘಾತಗಳನ್ನು ತಡೆಗಟ್ಟಲು ಕಾರ್ಯಕ್ಷೇತ್ರವು ಸುರಕ್ಷಿತ ಮತ್ತು ಸುಭದ್ರವಾಗಿದೆಯೆ ಎನ್ನುವುದನ್ನು ಖಚಿತಪಡಿಸಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ.

logo

Step No.1

ಇದು ಯಾವುದೇ ನಿರ್ಮಾಣ ಸ್ಥಳದಲ್ಲಿನ ಕಾರ್ಮಿಕರು, ಮೇಲ್ವಿಚಾರಕರು ಮತ್ತು ಸ್ವತಃ ನಿಮಗಾಗಿನ ಪ್ರಮುಖ ಕ್ರಮಗಳಲ್ಲಿ ಒಂದಾಗಿರುತ್ತದೆ. ಕೆಲಸದ ಮಾದರಿಯನ್ನು ಅವಲಂಬಿಸಿ ಕಾರ್ಮಿಕರಿಗೆ ಸುರಕ್ಷತಾ ಸರಂಜಾಮು, ಸುರಕ್ಷತಾ ಕನ್ನಡಕಗಳು, ತಲೆ ರಕ್ಷಣಾ ಕವಚ ಮತ್ತು ಬೀಳುವ ಸಮಯದಲ್ಲಿ ರಕ್ಷಣೆ ನೀಡುವಂತಹ ಸರಿಯಾದ ಸುರಕ್ಷತಾ ಸಾಧನಗಳು ಬೇಕಾಗುತ್ತವೆ

Step No.2

ನಿರ್ಮಾಣ ಸ್ಥಳಗಳಲ್ಲಿನ ಸಾವುನೋವುಗಳಿಗೆ ಪ್ರಮುಖ ಕಾರಣವೆಂದರೆ ವಿದ್ಯುತ್ ಅಪಘಾತಗಳು. ಹೆಚ್ಚಿನ ಶಕ್ತಿಯನ್ನು ಹೊಂದಿದ ಉಪಕರಣಗಳು, ಜನರೇಟರ್‌ಗಳು, ಟ್ರಾನ್ಸ್‌ಫಾರ್ಮರ್‌ಗಳು ಮತ್ತು ಉದ್ದವಾದ ಕೇಬಲ್‌ಗಳ ಬಳಕೆಯು ಅಪಾಯಕಾರಿಯಾಗಿದ್ದು ಹಾಗೂ ಅಪಘಾತಗಳನ್ನು ತಪ್ಪಿಸಲು ಅವುಗಳನ್ನು ಸರಿಯಾಗಿ ನಿರ್ವಹಿಸುವ ಅಗತ್ಯತೆ ಇರುತ್ತದೆ

Step No.3

ಕಾರ್ಮಿಕರುಗಳಿಗೆ ಸುರಕ್ಷತೆ ಒದಗಿಸಲು ಹಾಗೂ ಸಾಮಗ್ರಿಗಳು ಮತ್ತು ಯಂತ್ರೋಪಕರಣಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ, ನಿರ್ಮಾಣ ಕಾಮಗಾರಿಯ ಸ್ಥಳಕ್ಕೆ ಪ್ರವೇಶವನ್ನು ಸೀಮಿತಗೊಳಿಸಬೇಕು ಮತ್ತು ಅಧಿಕೃತ ವ್ಯಕ್ತಿಗಳು ಮಾತ್ರ ಒಳಬರಲು ಅವಕಾಶ ನೀಡಬೇಕು. ನಿರ್ಮಾಣ ಸ್ಥಳದಲ್ಲಿ ಸಂಭವಿಸಬಹುದಾದ ಯಾವುದೇ ಅಪಾಯಗಳಿಂದ ನೆರೆಹೊರೆಯವರು ಮತ್ತು ಪಾದಚಾರಿಗಳನ್ನು ರಕ್ಷಿಸುವ ಬಗ್ಗೆ ಗಮನ ಹರಿಸಬೇಕು ಮತ್ತು ಅದಕ್ಕೆ ಬೇಕಾದ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು

Step No.4

ಬಹುತೇಕ ಸಾಮಗ್ರಿಗಳನ್ನು, ವಿಶೇಷವಾಗಿ ನಿರ್ಮಾಣ ಸ್ಥಳದಲ್ಲಿ ಇರಬಹುದಾದ ರಾಸಾಯನಿಕಗಳು ಮತ್ತು ಯಂತ್ರೋಪಕರಣಗಳನ್ನು ಸುರಕ್ಷಿತವಾಗಿ ಮತ್ತು ಸಮರ್ಪಕವಾದ ರೀತಿಯಲ್ಲಿ ನಿರ್ವಹಣೆ ಮಾಡುವುದನ್ನು ಗಮನದಲ್ಲಿಟ್ಟುಕೊಂಡು ಸಂಗ್ರಹಿಸಬೇಕಾಗುತ್ತದೆ ಹಾಗೂ ಎಚ್ಚರಿಕೆಯಿಂದ ಬಳಸಬೇಕಾಗುತ್ತದೆ. ಸಾಮಗ್ರಿಗಳನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸದೇ ಇದ್ದಲ್ಲಿ, ಅದರಲ್ಲಿಯೂ ಬೇಗನೆ ಉರಿಯುವ ವಸ್ತುಗಳು ಇದ್ದಲ್ಲಿ, ಬೆಂಕಿ, ಸ್ಫೋಟ ಹಾಗೂ ಗಂಭೀರವಾದ ಗಾಯಗಳಿಗೆ ಕಾರಣವಾಗಬಹುದು

Step No.5

ಆದರೆ ಎಲ್ಲವೂ ನಮ್ಮ ಯೋಜನೆಯ ಪ್ರಕಾರವೇ ನಡೆಯುವುದಿಲ್ಲ ಎನ್ನುವುದು ವಾಸ್ತವಾಂಶ. ನಿಮ್ಮ ಪ್ರದೇಶವು ಯಾವ ಜಾಗದಲ್ಲಿ ಇದೆ ಎನ್ನುವುದನ್ನು ಗಣನೆಗೆ ತೆಗೆದುಕೊಂಡು ಅನಿರೀಕ್ಷಿತ ಮಳೆ ಅಥವಾ ಇತರ ಪ್ರತಿಕೂಲ ಪರಿಸರ ಪರಿಸ್ಥಿತಿಗಳಿಗೆ ಸಿದ್ಧರಾಗಿರಬೇಕಾಗುತ್ತದೆ, ಇದರಿಂದ ನಿಮ್ಮ ನಿರ್ಮಾಣದ ಸ್ಥಳದಲ್ಲಿ ಅದು ಯಾವುದೇ ಅಪಘಾತಗಳು ಅಥವಾ ಆಕಸ್ಮಿಕಗಳನ್ನು ಉಂಟುಮಾಡದಿರುವ ರೀತಿ ನೋಡಿಕೊಳ್ಳಬಹುದು.

ಲೇಖನವನ್ನು ಹಂಚಿಕೊಳ್ಳಿ :


ಸಂಬಂಧಿತ ಲೇಖನಗಳು




ಶಿಫಾರಸು ಮಾಡಿದ ವೀಡಿಯೊಗಳು




  ಮನೆ ಕನ್‌ಸ್ಟ್ರಕ್ಷನ್‌ಗಾಗಿ ಎಸ್ಟಿಮೇಟಿಂಗ್ ಟೂಲ್ಸ್


ವೆಚ್ಚ ಕ್ಯಾಲ್ಕುಲೇಟರ್

ಪ್ರತಿಯೊಬ್ಬ ಮನೆ ನಿರ್ಮಾಣ ಮಾಡುವವರು ತಮ್ಮ ಕನಸಿನ ಮನೆಯನ್ನು ನಿರ್ಮಿಸಲು ಬಯಸುತ್ತಾರೆ ಆದರೆ ಅದು ಅವರ ಬಜೆಟ್‌ ವೆಚ್ಚವನ್ನು ಮೀರದಂತೆ ಇರಿಸಿಕೊಳ್ಳಲು ಬಯಸುತ್ತಾರೆ. 

logo

ಇಎಂಐ ಕ್ಯಾಲ್ಕುಲೇಟರ್

ಮನೆ ನಿರ್ಮಾಣಕ್ಕೆ ಹಣಕಾಸು ಒದಗಿಸಿಕೊಳ್ಳುವ ಅತ್ಯುತ್ತಮ ಮಾರ್ಗಗಳಲ್ಲಿ ಮನೆ-ಸಾಲವನ್ನು ತೆಗೆದುಕೊಳ್ಳುವುದು ಒಂದಾಗಿರುತ್ತದೆ, ಆದರೆ ಮನೆಯನ್ನು ನಿರ್ಮಿಸುವವರು ಎಷ್ಟು ಕಂತುಗಳನ್ನು ಪಾವತಿಸಬೇಕೆಂದು ತಿಳಿಯಲು ಬಯಸುತ್ತಾರೆ. 

logo

ಪ್ರಾಡಕ್ಟ್ ಪ್ರೆಡಿಕ್ಟರ್

ಮನೆಯನ್ನು ನಿರ್ಮಿಸುವ ಆರಂಭಿಕ ಹಂತಗಳಲ್ಲಿ, ಮನೆ ನಿರ್ಮಿಸುವವರು ಸರಿಯಾದ ಉತ್ಪನ್ನಗಳನ್ನು ಆಯ್ಕೆ ಮಾಡುವುದು ಮುಖ್ಯವಾಗಿರುತ್ತದೆ. 

logo

ಅಂಗಡಿ ಪತ್ತೆಕಾರಕ

ಮನೆ ಕಟ್ಟುವವರಿಗೆ, ಮನೆಯ ಕಟ್ಟಡದ ಬಗ್ಗೆ ಎಲ್ಲಾ ಅಮೂಲ್ಯವಾದ ಮಾಹಿತಿಯನ್ನು ಪಡೆಯುವ ಸರಿಯಾದ ಅಂಗಡಿಯನ್ನು ಕಂಡುಹಿಡಿಯುವುದು ಮುಖ್ಯವಾಗಿದೆ.

logo

Loading....