ನಿಮ್ಮ ಮನೆಗೆ ಬಣ್ಣಗಳನ್ನು ಆಯ್ಕೆಮಾಡುವುದು ನಿಮ್ಮ ಮನೆ--ಕಟ್ಟಡ ನಿರ್ಮಾಣದ ಕಾಲದಲ್ಲಿ ನಿಮಗೆ ಹೆಚ್ಚು ಉತ್ತೇಜನವನ್ನು ಕೊಡುವ ಒಂದು ಹಂತವಾಗಿದೆ. ನೀವು ಆಯ್ಕೆ ಮಾಡಿಕೊಳ್ಳುವ ಬಣ್ಣಗಳು ನಿಮ್ಮ ಮನೆಯು ಹೊರಗಿನಿಂದ ಹೆಚ್ಚು ಆಕರ್ಷಕವಾಗಿ ಕಾಣುವಂತೆ ಮಾಡುತ್ತವೆ. ಹೀಗಾಗಿ ಮನೆ ಹೊರಗಿನ ಭಾಗಕ್ಕೆ ಗೃಹಿಸಿಕೊಂಡು ಬಣ್ಣಗಳನ್ನು ಆಯ್ಕೆ ಮಾಡುವುದರ ಮೇಲೆ ಪರಿಣಾಮ ಬೀರುವ ಹಲವು ಅಂಶಗಳಿವೆ. ಆದ್ದರಿಂದ ನಾವು ನಿಮಗೆ ಕೆಲವು ಸಲಹೆಗಳನ್ನು ನೀಡುತ್ತೇವೆ, ಆ ಮೂಲಕ ನೀವು ಸೂಕ್ತವಾದ ಬಣ್ಣಗಳನ್ನು ಪಡೆಯಬಹುದು:
1. ಸಂಯೋಜನೆಗಳು: ಕಡಿಮೆಯೇ ಹೆಚ್ಚು:
ಹೆಚ್ಚು ಬಣ್ಣಗಳನ್ನು ಆಯ್ಕೆಮಾಡಿಕೊಂಡು ಹಚ್ಚಿದ ಬಳಿಕ ಆ ಬಣ್ಣಗಳು ತುಂಬಾ ಚೆಲ್ಲಾಪಿಲ್ಲಿಯಾದಂತೆ ಕಾಣಿಸಬಹುದು ಎಂಬುದನ್ನು ನೆನಪಿಟ್ಟುಕೊಳ್ಳಬೇಕು. ಬಣ್ಣಗಳ ಆಯ್ಕೆ ವಿಷಯವನ್ನು ಸರಳವಾಗಿ ಮಾಡಿಕೊಂಡು ನಿಮ್ಮ ಮನೆಯ ಹೊರ ಭಾಗಕ್ಕೆ ಒಂದು ಅಥವಾ ಅಗತ್ಯವಿದ್ದರೆ ಎರಡು ಬಣ್ಣಗಳನ್ನು ಆಯ್ಕೆ ಮಾಡುವುದು ಒಳ್ಳೆಯದು. ಬಣ್ಣಗಳು ಒಂದೇ ರೀತಿ ಕಾಣಿಸುತ್ತಿವೆ ಎಂದು ಅನ್ನಿಸಿದರೆ ನೀವು ಒಂದೇ ಬಣ್ಣವನ್ನು ವಿವಿಧ ಶೇಡ್ಗಳಲ್ಲಿ ಬಳಸಿಕೊಳ್ಳಬಹುದು.
2. ಬಣ್ಣಗಳನ್ನು ಆಯ್ಕೆ ಮಾಡಿಕೊಳ್ಳುವುದು:
ಬಣ್ಣಗಳ ಆಯ್ಕೆಯ ವಿಚಾರಕ್ಕೆ ಬಂದಾಗ ಬಂದರೆ, ನೀವು ಅತ್ಯುತ್ತಮವಾಗಿರುವ ಹಲವು ಆಯ್ಕೆಗಳನ್ನು ಹುಡುಕಬೇಕು. ಸ್ಫೂರ್ತಿಕೊಡುವಂತಹ ಮತ್ತು ಶಿಫಾರಸುಗಳನ್ನು ನೋಡಿಕೊಂಡು, ನೀವು ಯಾವ ಬಣ್ಣಗಳನ್ನು ಇಷ್ಟಪಡುತ್ತೀರಿ ಎಂಬುದರ ಮೇಲೆ ಕಡಿಮೆ ರ್ಬರ್ನಗಳನ್ನು ಆಯ್ಕೆಮಾಡಿಕೊಳ್ಳಲು ಪ್ರಯತ್ನಿಸಿ ಮತ್ತು ನಂತರ ಅವುಗಳ ಸಂಯೋಜನೆಗಳನ್ನು ರೂಪಿಸಿ. ಸುಲಭವಾಗಿ ಧೂಳನ್ನು ಹಿಡಿದಿಟ್ಟುಕೊಳ್ಳುವ ಕಪ್ಪು ಮತ್ತು ಗಾಢ ಬಣ್ಣಗಳನ್ನು ಆಯ್ಕೆಮಾಡಿಕೊಳ್ಳಬೇಡಿ.
3. ಬೆಳಕಿನ ಅಂಶ:
ಬಣ್ಣಗಳ ಆಯ್ಕೆ ಸಂದರ್ಭದಲ್ಲಿ ನೀವು ಶೇಡ್ ಕಾರ್ಡ್‌ನಲ್ಲಿ ನೋಡುವ ಬಣ್ಣ ಮತ್ತು ಶೇಡ್ಗಳು, ನಿಮ್ಮ ಮನೆಯ ಹೊರಭಾಗಕ್ಕೆ ಹಚ್ಚಿದಾಗ ಬೇರೆಯಾಗಿಯೇ ಕಾಣಿಸಬಹುದು. ಅದು ನಿಮ್ಮ ಮನೆಯ ಮೇಲೆ ಬೀಳುವ ಬೆಳಕಿನ ಗುಣಮಟ್ಟ ಮತ್ತು ರೀತಿಗಳನ್ನು ಅವಲಂಬಿಸಿ ಬಹಳಷ್ಟು ಬೇರೆಯಾಗಿ ಕಾಣಿಸಬಹುದು. ಹೀಗಾಗಿ ಬಣ್ಣಗಳನ್ನು ಆಯ್ಕೆ ಮಾಡುವ ಮೊದಲು ಕೆಲವು ಬಣ್ಣಗಳು ಮತ್ತು ಶೇಡ್ಗಳನ್ನು ಗೋಡೆಯ ಮೇಲೆಯೇ ಹಚ್ಚಿ ನೋಡಿ, ಆ ಮೂಲಕ ಬಣ್ಣ ಹಚ್ಚಿದ ಮೇಲೆ ಹೇಗೆ ಕಾಣಿಸುತ್ತದೆ ಎಂಬುದನ್ನು ಕಂಡುಕೊಂಡು ತೀರ್ಮಾನಿಸಬಹುದು.
4. ಸುತ್ತಮುತ್ತಲಿನ ಮಹತ್ವ:
ನಿಮ್ಮ ಮನೆಯ ಹೊರಭಾಗದ ಬಣ್ಣಗಳನ್ನು ಆಯ್ಕೆಮಾಡುವಾಗ ನಿಮ್ಮ ಮನೆಯ ಇರುವ ಪ್ರದೇಶ ಮತ್ತು ಮನೆಯ ಸುತ್ತಲೂ ಏನಿದೆ ಎಂಬುದನ್ನು ನೋಡಿಕೊಳ್ಳಬೇಕು. ನಿಮ್ಮ ಮನೆ ಎದ್ದು ಕಾಣಬೇಕೆಂದು ನೀವು ಬಯಸಿದಾಗ, ನಿಮ್ಮ ಸುತ್ತಮುತ್ತಲಿನ ಹಾಗೂ ಮನೆ ಹಿಂದು-ಮುಂದು ಏನಿದೆ ಎಂಬುದನ್ನು ಗಮನಿಸಿ ಮತ್ತು ಹವಾಮಾನದೊಂದಿಗೆ ಹೊಂದುವ ರೀತಿಯಲ್ಲಿ ಬಣ್ಣಗಳನ್ನು ಆಯ್ಕೆ ಮಾಡಿಕೊಳ್ಳಿರಿ.
5. ಕೇವಲ ಬಣ್ಣಗಳು ಎಂಬುದರ ಆಚೆಗೆ ಯೋಚಿಸಿ:
ಕೇವಲ ಬಾಗಿಲು ಮತ್ತು ಕಿಟಕಿಗಳು ಮಾತ್ರವಲ್ಲ, ಬದಲಿಗೆ ಕೆಲವು ಪೀಠೋಪಕರಣಗಳು, ಕಲಾಕೃತಿಗಳು ಮತ್ತು ಸಸ್ಯಗಳು ಇರುವುದರಿಂದ ನಿಮ್ಮ ಮನೆಯ ಹೊರಭಾಗವು ಮತ್ತಷ್ಟು ಜೀವಕಳೆಯಿಂದ ಇರುವಂತೆ ಮಾಡಬಹುದು. ಮನೆಯ ಸರಿಯಾಗಿ ಬೆಳಕು ಬೀಳುವಂತಹ ವಸ್ತುಗಳನ್ನು ಆಯ್ಕೆ ಮಾಡಿಕೊಳ್ಳಿರಿ, ಅವು ನಿಮ್ಮ ಮನೆಯ ಹೊರಭಾಗದ ಬಣ್ಣಗಳೊಂದಿಗೆ ಚೆನ್ನಾಗಿ ಹೊಂದಿಕೊಳ್ಳುತ್ತವೆ. ಅಲ್ಲದೆ, ಅಚ್ಚುಕಟ್ಟಾಗಿ ಮತ್ತು ದಟ್ಟವಾದ ಬಣ್ಣಗಳಿಗೆ ಉತ್ತಮ ಬಣ್ಣ ಸಂಯೋಜನೆಯನ್ನು ಆಯ್ಕೆಮಾಡಿಕೊಳ್ಳಿರಿ.
6. ಬಾಳಿಕೆ ಬರುವುದು:
ನಿಮ್ಮ ಮನೆಯ ಹೊರಭಾಗದ ಬಣ್ಣವನ್ನು ಮೆಂಟೇನ್ ಮಾಡುವುದು ಕೂಡ ಅಷ್ಟೇ ಮುಖ್ಯವಾಗಿರುತ್ತದೆ. ಬಣ್ಣಗಳನ್ನು ಆಯ್ಕೆಮಾಡುವಾಗ, ಬಣ್ಣದ ಕಡೆಗೆ ಗಮನ ಕೊಡದೆಯೇ, ಕೇವಲ ಬಾಳಿಕೆ ಬರುವ ಮತ್ತು ಕಡಿಮೆ-ನಿರ್ವಹಣೆಯ ಬಣ್ಣಗಳನ್ನು ಆಯ್ಕೆಮಾಡುತ್ತಿದ್ದೇವೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ವಿಶಿಷ್ಟವಾಗಿ, "ಸ್ಯಾಟಿನ್" ಮತ್ತು "ಎಗ್ ಶೆಲ್" ಬಣ್ಣಗಳು ಉತ್ತಮ ಬಾಳಿಕೆ ಬರುತ್ತವೆ. ಮತ್ತು ಅಂಥ ಬಣ್ಣಗಳನ್ನು ಹಚ್ಚಿದಾಗ ಸ್ವಚ್ಛಗೊಳಿಸುವುದು ಸುಲಭವಾಗಿರುತ್ತದೆ. ಆ ಬಣ್ಣಗಳು ನಿಮ್ಮ ಮನೆಗೆ ಉತ್ತಮ ಫಿನಿಶಿಂಗ್ ಸಹ ಕೊಡುತ್ತವೆ.
7. ಥೀಮ್:
ಬಣ್ಣಗಳನ್ನು ಆರಿಸಿಕೊಳ್ಳುವ ಮೊದಲು, ಬಣ್ಣಹಚ್ಚಲು ಥೀಮ್ ಅನ್ನು ನಿರ್ಧರಿಸುವುದು ಅಗತ್ಯವಾಗಿದೆ. ಮೊದಲೇ ಹಾಗೆ ಮಾಡಿಕೊಂಡಲ್ಲಿ ನಿಮ್ಮ ಮನೆಯ ಹೊರಭಾಗಕ್ಕೆ ಬಣ್ಣಗಳನ್ನು ಹೇಗೆ ಆರಿಸುವುದು ಎಂಬ ಗೊಂದಲ ಉಂಟಾಗುವುದಿಲ್ಲ. ಮನೆಯ ಹೊರಭಾಗಕ್ಕೆ ಬಣ್ಣ ಆರಿಸಿಕೊಳ್ಳಲು ಥೀಮ್ ಹೊಂದಿಸಿಕೊಳ್ಳುವುದರಿಂದ ಕೇವಲ ಮನೆಯ ಹೊರ ಗೋಡೆಗಳಿಗೆ ಸೂಕ್ತ ಬಣ್ಣಗಳನ್ನು ಆರಿಸಿಕೊಳ್ಳುವುದಕ್ಕೆ ಮಾತ್ರವಲ್ಲ, ನಿಮ್ಮ ಮನೆಯು ಕಲಾತ್ಮಕವಾಗಿ ಹಿತಕರವಾಗಿ ಕಾಣುವಂತೆ ಮಾಡುತ್ತದೆ.
8. ಸೀಸನ್:
ಸರಿಯಾದ ಸೀಸನ್ನಲ್ಲಿ ಹೊರಗಿನ ಗೋಡೆಗಳಿಗೆ ಬಣ್ಣ ಹಚ್ಚುವುದು ಕಿರಿಕಿರಿಯನ್ನುಂಟು ಮಾಡುವುದಿಲ್ಲ, ಜೊತೆಗೆ ಉತ್ತಮ ಫಲಿತಾಂಶವನ್ನೂ ತರುತ್ತದೆ. ಬೇಸಿಗೆ ಕಾಲದಲ್ಲಿ ಹೊರಗಿನ ಭಾಗಕ್ಕೆ ಪೇಂಟ್ ಮಾಡುವುದರಿಂದ ಬಣ್ಣದ ಜೀವಿತಾವಧಿ ಹೆಚ್ಚಾಗುತ್ತದೆ. ಬಣ್ಣವು ಸರಿಯಾದ ತಾಪಮಾನದಲ್ಲಿ ಸರಿಯಾಗಿ ಒಣಗಲು ಬೇಸಿಗೆ ಕಾಲ ಅನುಕೂಲ ಮಾಡಿಕೊಡುತ್ತದೆ. ಚಳಿಗಾಲದಲ್ಲಿ ಅಥವಾ ಮಳೆಗಾಲದಲ್ಲಿ ಬಣ್ಣವನ್ನು ಹಚ್ಚಿದರೆ, ಹೊರಗಿನ ಗೋಡೆಗಳಿಗೆ ನೀವು ಆಗಾಗ ಮತ್ತೆ ಬಣ್ಣ ಹಚ್ಚಿಸಬೇಕಾಗುತ್ತದೆ.
9. ಪರೀಕ್ಷೆ:
ಹೊರಗಿನ ಗೋಡೆಗಳಿಗೆ ಸೂಕ್ತವಾದ ಬಣ್ಣಕ್ಕಾಗಿ ನೀವು ಕೆಲವು ಆಯ್ಕೆಗಳನ್ನು ಮಾಡಿಕೊಂಡ ಬಳಿಕ, ಬಣ್ಣದ ಮಾದರಿಗಳನ್ನು ಪಡೆದುಕೊಳ್ಳಿರಿ ಮತ್ತು ಆ ಬಣ್ಣಗಳಿಂದ ಹೊರಗಿನ ಗೋಡೆಗಳ ಮೇಲೆ ದೊಡ್ಡ ಸ್ವ್ಯಾಚ್ಗಳನ್ನು ಮಾಡಿ. ದಿನದ ವಿವಿಧ ಸಮಯಗಳಲ್ಲಿ, ಸೂರ್ಯನ ಬೆಳಕು ಮತ್ತು ನೆರಳಿನಲ್ಲಿ ಈ ಸ್ವಾಚ್‌ಗಳನ್ನು ವೀಕ್ಷಿಸಿ; ಹೊರಗಿನ ಗೋಡೆಗಳಿಗೆ ಸರಿಯಾದ ಬಣ್ಣವನ್ನು ಆಯ್ಕೆ ಮಾಡಲು ಇದು ನಿಮಗೆ ಸಹಾಯ ಮಾಡುತ್ತದೆ. ಇದಾದ ಬಳಿಕವೂ ನಿಮ್ಮ ಮನೆಯ ಹೊರಭಾಗ ಯಾವ ರೀತಿ ಸುಂದರವಾಗಿ ಕಾಣಿಸುತ್ತದೆ ಎಂಬಉದರ ಕುರಿತು ಗೊಂದಲಗಳು ಮುಂದುವರೆದರೆ, ನಿಮ್ಮ ಸ್ನೇಹಿತರ ಅಥವಾ ವೃತ್ತಿಪರ ವಿನ್ಯಾಸಕರಿಂದ ಸಹಾಯವನ್ನು ಪಡೆಯಬಹುದು.