Get In Touch

Get Answer To Your Queries

Select a valid category

Enter a valid sub category

acceptence


ಕಾಂಕ್ರೀಟ್‌ನಲ್ಲಿ ಆ್ಯಡ್‌ಮಿಕ್ಸ್ಚರ್‌ಗಳು: 10 ವಿಧಗಳು ಮತ್ತು ಅವುಗಳ ಉಪಯೋಗಗಳು

ಆಧುನಿಕ ಕಾಂಕ್ರೀಟ್ ನಿರ್ಮಾಣದಲ್ಲಿ ಆ್ಯಡ್‌ಮಿಕ್ಸ್‌ಚರ್‌ಗಳು ಅತಿ ಅವಶ್ಯಕ ಭಾಗವಾಗಿರುತ್ತವೆ. ವಿವಿಧ ಬಗೆಯ ನಿರ್ಮಾಣ ಯೋಜನೆಗಳಲ್ಲಿ ನಿರ್ದಿಷ್ಟ ಅಗತ್ಯಕ್ಕೆ ತಕ್ಕಂತೆ ಕಾಂಕ್ರೀಟ್‌ನ ಗುಣಲಕ್ಷಣಗಳನ್ನು ಬದಲಾಯಿಸಲು ಈ ಆ್ಯಡ್‌ಮಿಕ್ಸ್‌ಚರ್‌ಗಳ ಅಗತ್ಯವಿದೆ. ಈ ಲೇಖನದಲ್ಲಿ, ನಿರ್ಮಾಣ ಉದ್ಯಮದಲ್ಲಿ ಸಾಮಾನ್ಯವಾಗಿ ಬಳಸುವ 10 ಬಗೆಯ ಆ್ಯಡ್‌ಮಿಕ್ಸ್‌ಚರ್‌ಗಳ ಬಗ್ಗೆ, ಹಾಗೆಯೇ ಅವುಗಳ ಬಳಕೆ, ಅವುಗಳ ದಕ್ಷತೆಯ ಮೇಲೆ ಪರಿಣಾಂ ಬೀರುವ ಅಂಶಗಳು ಮತ್ತು ಕೆಲವು ಎಫ್‌ಎಕ್ಯೂ (ಸಾಮಾನ್ಯವಾಗಿ ಕೇಳಲಾಗುವ ಪ್ರಶ್ನೆಗಳು) ಬಗ್ಗೆ ಚರ್ಚಿಸೋಣ.

Share:


ಆ್ಯಡ್‌ಮಿಕ್ಸ್‌ಚರ್‌ಗಳು ಎಂದರೆ ಕಾಂಕ್ರೀಟ್‌ನ ಗುಣಲಕ್ಷಣಗಳನ್ನು ಬದಲಿಸಲು ಅಥವಾ ಹೆಚ್ಚಿಸಲು ಕಾಂಕ್ರೀಟ್‌ಗೆ ಸೇರಿಸಲಾಗುವ ಘಟಕಗಳು (ನೀರು, ಅಗ್ರಿಗೇಟ್‌ಗಳು ಅಥವಾ ಸಿಮೆಂಟ್‌ಗೆ ಹೊರತಾಗಿ). ಹೆಚ್ಚಿದ ಕಾರ್ಯಸಾಧ್ಯತೆ, ಪ್ರತಿರೋಧಕತೆಗೆ (ಹವಾಮಾನ ಮತ್ತು ರಾಸಾಯನಿಕ ದಾಳಿಗಳಿಂದ) ಅನುಗುಣವಾಗಿ ಸೆಟ್ಟಿಂಗ್ ಸಮಯದ ವೇಗವರ್ಧನೆ ಅಥವಾ ನಿಧಾನಗತಿಯನ್ನು ಹೊಂದಿಸಲು ಆ್ಯಡ್‌ಮಿಕ್ಸ್‌ಚರ್‌ಗಳು ಬಳಕೆಯಾಗುತ್ತವೆ. ಮತ್ತು ಅವುಗಳನ್ನು ಕಾಂಕ್ರೀಟ್‌ಗೆ ಸೇರಿಸಿದಾಗ ಹೆಚ್ಚಿನ ಅನುಕೂಲತೆ ಸಾಬೀತಾಗಿದೆ.



ವಿವಿಧ ಬಗೆಯ ಆ್ಯಡ್‌ಮಿಕ್ಸ್‌ಚರ್‌ಗಳು

ಕಾಂಕ್ರೀಟ್‌ನಲ್ಲಿ ಬಯಸಿದ ಗುಣಲಕ್ಷಣಗಳನ್ನು ಪಡೆಯಲು ಮತ್ತು ಇಂದು ನಿರ್ಮಾಣವಾಗುವ ರಚನೆಗಳ ಅಗತ್ಯಕ್ಕೆ ತಕ್ಕಂತೆ ಹಲವು ಬಗೆಯ ಆ್ಯಡ್‌ಮಿಕ್ಸ್‌ಚರ್‌ಗಳನ್ನು ಬಳಸಲಾಗುತ್ತದೆ:

 

1) ರಾಸಾಯನಿಕ ಆ್ಯಡ್‌ಮಿಕ್ಸ್‌ಚರ್‌ಗಳು


ಎ) ಪ್ಲಾಸ್ಟಿಸೈಜರ್‌ಗಳು

ಕಾಂಕ್ರೀಟ್‌ ಬಳಕೆಗೆ ಮುನ್ನ, ಅದಕ್ಕೆ ನಿರ್ದಿಷ್ಟ ಸ್ಥಿರತೆ ಬರಬೇಕಾಗುತ್ತದೆ. ಪ್ಲಾಸ್ಟಿಸೈಜರ್‌ಗಳು ಅಗತ್ಯವಿರುವ ಸ್ಥಿರತೆಯನ್ನು ಪಡೆಯಲು ಕಾಂಕ್ರೀಟ್‌ನಲ್ಲಿ ನೀರು-ಸಿಮೆಂಟ್‌ ಅನುಪಾತವನ್ನು ಸುಮಾರು ಶೇ 5ರಿಂದ ಶೇ 12ರಷ್ಟು ತಗ್ಗಿಸಲು ಸೇರಿಸಲಾಗುವ ರಾಸಾಯನಿಕ ಆ್ಯಡ್‌ಮಿಕ್ಸ್‌ಚರ್‌ಗಳಾಗಿರುತ್ತವೆ. ಮಿಶ್ರಣಕ್ಕೆ ಇದನ್ನು ಸೇರಿಸಿವುದರಿಂದ ಕಾಂಕ್ರೀಟ್‌ನ ಕಾರ್ಯಸಾಧ್ಯತೆಯು ಹೆಚ್ಚುತ್ತದೆ ಮತ್ತು ತಲುಪಬಹುದಾದ ಸ್ಥಳಗಳಲ್ಲಿ ಬಳಸಲು ಹಾಗೂ ಇರಿಸಲು ಸುಲಭವಾಗುತ್ತದೆ.

ಬಿ) ಸೂಪರ್ ಪ್ಲಾಸ್ಟಿಸೈಜರ್‌ಗಳು

ಸೂಪರ್ ಪ್ಲಾಸ್ಟಿಸೈಜರ್‌ಗಳನ್ನು 'ಹೈ ರೇಂಜ್ ವಾಟರ್ ರಿಡ್ಯೂಸರ್' ಎಂದೂ ಕರೆಯಲಾಗುತ್ತದೆ. ಅವು ಅತ್ಯಂತ ಪರಿಣಾಮಕಾರಿ ರಾಸಾಯನಿಕ ಮಿಶ್ರಣವಾಗಿದ್ದು, ಕಾಂಕ್ರೀಟ್‌ನ ಹರಿಯುವ ಸಾಮರ್ಥ್ಯ, ಶಕ್ತಿ ಮತ್ತು ಬಾಳಿಕೆ ಸುಧಾರಿಸಲು ಸಾಮಾನ್ಯವಾಗಿ ಸೇರಿಸಲಾಗುತ್ತದೆ. ಇದು ಸೆಲ್ಫ್‌ ಕಾಂಪ್ಯಾಕ್ಟಿಂಗ್ ಕಾಂಕ್ರೀಟ್ ಆಗಿದ್ದು, ಇದು ಕಾರ್ಯಸಾಧ್ಯತೆಯನ್ನು ನಷ್ಟಗೊಳಿಸದೆ ನೀರಿನ ಅಂಶದಲ್ಲಿ ಕಡಿತವನ್ನು ಸಾಧಿಸುತ್ತದೆ.

ಸಿ) ವೇಗವರ್ಧಕಗಳು

ಅವುಗಳ ಹೆಸರೇ ಸೂಚಿಸುವಂತೆ, ವೇಗವರ್ಧಕಗಳು ಕಾಂಕ್ರೀಟ್‌ನ ಸೆಟ್ಟಿಂಗ್ ಮತ್ತು ಗಟ್ಟಿಯಾಗಿಸುವ ಪ್ರಕ್ರಿಯೆಯನ್ನು ವೇಗಗೊಳಿಸುತ್ತವೆ. ಅವುಗಳು ಹೈಡ್ರಾಲಿಕ್ ಸಿಮೆಂಟ್‌ನಲ್ಲಿ ಹೈಡ್ರೇಶನ್ (ಜಲಸಂಚಯನ) ಪ್ರಮಾಣವನ್ನು ಹೆಚ್ಚಿಸುತ್ತವೆ. ಇದು ನಂತರ ತ್ವರಿತ ಸೆಟ್ಟಿಂಗ್ ಸಮಯ ಮತ್ತು ಸುಧಾರಿತ ಶಕ್ತಿ ಅಭಿವೃದ್ಧಿಗೆ ಕಾರಣವಾಗುತ್ತದೆ. ಸಾಮಾನ್ಯವಾಗಿ, ವೇಗವರ್ಧಕಗಳನ್ನು ಶೀತ ವಾತಾವರಣದಲ್ಲಿ ಬಳಸಲಾಗುತ್ತದೆ. ಏಕೆಂದರೆ ಅವುಗಳು ಕ್ಯೂರಿಂಗ್ ಮತ್ತು ಸೆಟ್ಟಿಂಗ್ ಪ್ರಕ್ರಿಯೆಯನ್ನು ನಿಧಾನಗೊಳಿಸುವ ತಂಪು ತಾಪಮಾನದ ಪ್ರಭಾವವನ್ನು ಪ್ರತಿರೋಧಿಸುತ್ತವೆ.

ಡಿ) ಸೆಟ್‌ ರಿಟಾರ್ಡರ್‌ಗಳು (ಮಂದಗತಿಕಾರಕಗಳು)

ಕಾಂಕ್ರೀಟ್‌ನ ಸೆಟ್ಟಿಂಗ್ ಮತ್ತು ಗಟ್ಟಿಯಾಗಿಸುವ ಪ್ರಕ್ರಿಯೆಯನ್ನು ವೇಗಗೊಳಿಸುವ ವೇಗವರ್ಧಕಗಳಿಗಿಂತ ಭಿನ್ನವಾಗಿ, ಸೆಟ್ ರಿಟಾರ್ಡರ್‌ಗಳು ವಿರುದ್ಧವಾದ ಕೆಲಸ ಮಾಡುತ್ತವೆ. ಕಾಂಕ್ರೀಟ್ ಅನ್ನು ದೂರದವರೆಗೆ ಸಾಗಿಸಬೇಕಾದಾಗ ಸಾಮಾನ್ಯವಾಗಿ ಇವುಗಳನ್ನು ಬಳಸಲಾಗುತ್ತದೆ, ಸೆಟ್ ರಿಟಾರ್ಡರ್‌ಗಳು ಸೆಟ್ಟಿಂಗ್ ಮತ್ತು ಗಟ್ಟಿಯಾಗಿಸುವ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತವೆ. ಮತ್ತು ಕಾಂಕ್ರೀಟ್ ಅನ್ನು ಬೇಗನೆ ಸೆಟ್‌ ಆಗುವುದನ್ನು ತಡೆಯುತ್ತವೆ. ವಿಶೇಷವಾಗಿ ಬಿಸಿ ವಾತಾವರಣದಲ್ಲಿ ವಿಳಂಬಿತ ಸೆಟ್ಟಿಂಗ್ ಅಗತ್ಯವಿದ್ದಾಗ ಅವು ಅತ್ಯಂತ ಸಹಾಯಕ ವಾಗುತ್ತವೆ.

 

2) ಖನಿಜ ಆ್ಯಡ್‌ಮಿಕ್ಸ್‌ಚರ್‌ಗಳು



ಎ) ಸಿಮೆಂಟಿಯಸ್

ಹೆಚ್ಚು ಬಾಳಿಕೆ ಬರುವ ಕಾಂಕ್ರೀಟ್ ರಚನೆಗಳನ್ನು ಮಾಡಲು ಸಾಮಾನ್ಯ ಪೋರ್ಟ್‌ಲ್ಯಾಂಡ್ ಸಿಮೆಂಟ್ ಅಥವಾ ಪೊಝೋಲಾನಿಕ್ ವಸ್ತುಗಳೊಂದಿಗೆ (ಕೆಳಗೆ ವಿವರಿಸಲಾಗಿದೆ) ಸಿಮೆಂಟಿಯಸ್ ಮಿಶ್ರಣಗಳನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ. ಸಿಮೆಂಟಿಯಸ್ ಮಿಶ್ರಣವು ಸಿಮೆಂಟಿಂಗ್ ಗುಣಲಕ್ಷಣಗಳನ್ನು ಹೊಂದಿದೆ. ಇದನ್ನು ಸಾಮಾನ್ಯವಾಗಿ ಕಾಂಕ್ರೀಟ್‌ನ ಶಕ್ತಿ ಮತ್ತು ಬಾಳಿಕೆ ಸುಧಾರಿಸಲು ಬಳಸಲಾಗುತ್ತದೆ. ಗ್ರೌಂಡ್‌ ಗ್ರ್ಯಾನ್ಯುಲೇಟೆಡ್ ಬ್ಲಾಸ್ಟ್ ಫರ್ನೇಸ್ ಸ್ಲ್ಯಾಗ್ ಸಿಮೆಂಟಿಯಸ್ ಮಿಶ್ರಣಕ್ಕೆ ಅತ್ಯುತ್ತಮ ಉದಾಹರಣೆಯಾಗಿದೆ. ಏಕೆಂದರೆ ಇದು ಸ್ವಭಾವದಲ್ಲಿ ಅತಿ ಹೆಚ್ಚು ಸಿಮೆಂಟಿಯಸ್ ಆಗಿದೆ.

ಬಿ) ಪೊಝೋಲಾನಿಕ್

ಪೊಝೋಲಾನ್‌ಗಳನ್ನು ಸಾಮಾನ್ಯವಾಗಿ "ಸಿಮೆಂಟ್ ಎಕ್ಸ್‌ಟೆಂಡರ್‌ಗಳು" ಎಂದು ಕರೆಯಲಾಗುತ್ತದೆ. ಇವುಗಳು ಕ್ಯಾಲ್ಸಿಯಂ ಹೈಡ್ರಾಕ್ಸೈಡ್‌ನೊಂದಿಗೆ ಬೆರೆಸಿದಾಗ ಸಿಮೆಂಟಿಯಸ್ ಗುಣಲಕ್ಷಣಗಳನ್ನು ಪ್ರದರ್ಶಿಸುವ ವಸ್ತುಗಳು. ಕಾಂಕ್ರೀಟ್ ಮತ್ತು ಪೊಝೋಲಾನ್‌ಗಳ ಘಟಕಗಳ ನಡುವಿನ ಪ್ರತಿಕ್ರಿಯೆಯ ಪರಿಣಾಮವಾಗಿ ಕಾಂಕ್ರೀಟ್‌ನ ಗುಣಮಟ್ಟ ಮತ್ತು ಕಾರ್ಯಸಾಧ್ಯತೆಯನ್ನು ಸುಧಾರಿಸುತ್ತದೆ. ಪೊಝೊಲಾನಿಕ್ ಮಿಶ್ರಣಗಳ ಕೆಲವು ಉದಾಹರಣೆಗಳೆಂದರೆ ಹಾರುಬೂದಿ, ಸಿಲಿಕಾ ಹೊಗೆ, ಅಕ್ಕಿ ಹೊಟ್ಟು ಬೂದಿ ಮತ್ತು ಮೆಟಾಕೋಲಿನ್.

ಸಿ) ಗ್ರೌಂಡ್ ಗ್ರಾನ್ಯುಲೇಟೆಡ್ ಬ್ಲಾಸ್ಟ್ ಫರ್ನೇಸ್ ಸ್ಲ್ಯಾಗ್

ಗ್ರೌಂಡ್‌ ಗ್ರ್ಯಾನ್ಯುಲೇಟೆಡ್ ಬ್ಲಾಸ್ಟ್ ಫರ್ನೇಸ್ ಸ್ಲ್ಯಾಗ್ (GGBF) ಕಬ್ಬಿಣದ ಉತ್ಪಾದನೆಯ ಉಪಉತ್ಪನ್ನವಾಗಿದೆ. ಇದು ಮೂಲಭೂತವಾಗಿ, ಕರಗಿದ ಕಬ್ಬಿಣದ ಬ್ಲಾಸ್ಟ್ ಫರ್ನೇಸ್ ಸ್ಲ್ಯಾಗ್ ಅನ್ನು ತ್ವರಿತವಾಗಿ ನೀರಿನಲ್ಲಿ ಬೆರೆಸಿದಾಗ ಅಥವಾ ನೀರಿನಲ್ಲಿ ಮುಳುಗಿಸಿದಾಗ ರೂಪುಗೊಳ್ಳುವ ಹರಳಿನ ವಸ್ತುವಾಗಿದೆ. ಅವುಗಳ ಉತ್ತಮ ಬಾಳಿಕೆ ಮತ್ತು ಶಕ್ತಿಯ ಕಾರಣ, GGBF ಗಳನ್ನು ಸಾಮಾನ್ಯವಾಗಿ ಡಬಲ್ ಕಾಂಕ್ರೀಟ್ ರಚನೆಗಳನ್ನು ಮಾಡಲು ಬಳಸಲಾಗುತ್ತದೆ.

ಡಿ) ಹಾರು ಬೂದಿ (ಫ್ಲೈ ಆಶ್)

ಇದು ಕಲ್ಲಿದ್ದಲು ವಿದ್ಯುತ್ ಸ್ಥಾವರಗಳ ಉಪಉತ್ಪನ್ನವಾಗಿದೆ. ಹಾರುಬೂದಿಯು ಗಟ್ಟಿ ಅಥವಾ ಪುಡಿಮಾಡಿದ ಕಲ್ಲಿದ್ದಲಿನ ದಹನದ ಪರಿಣಾಮವಾಗಿ ಉತ್ಪತ್ತಿಯಾಗುವ ನಯವಾದ ಪುಡಿಯಾಗಿದೆ. ಕಲ್ಲಿದ್ದಲಿನ ವಿದ್ಯುತ್ ಸ್ಥಾವರಗಳ ಚಿಮಣಿಗಳಿಂದ ಈ ನಯವಾದ ಪುಡಿಯನ್ನು ಸಂಗ್ರಹಿಸಲಾಗುತ್ತದೆ. ಇದನ್ನು ಮಿಶ್ರಣವಾಗಿ ಬಳಸಿದಾಗ, ಹಾರುಬೂದಿ ಕಾಂಕ್ರೀಟ್ ಶಾಖದ ಜಲಸಂಚಯನವನ್ನು ಕಡಿಮೆ ಮಾಡುತ್ತದೆ ಮತ್ತು ಅದರ ಕಾರ್ಯಸಾಧ್ಯತೆ ಮತ್ತು ಬಾಳಿಕೆ ಸುಧಾರಿಸುತ್ತದೆ.

ಇ) ಸಿಲಿಕಾ ಪ್ಯೂಮ್

ಆ್ಯಡ್‌ಮಿಕ್ಸ್‌ಚರ್‌ ಸಿಲಿಕಾ ಫ್ಯೂಮ್ ಸಿಲಿಕಾನ್ ಲೋಹ ಮತ್ತು ಫೆರೋಸಿಲಿಕಾನ್ ಮಿಶ್ರಲೋಹಗಳ ಉತ್ಪಾದನೆಯ ಉಪಉತ್ಪನ್ನವಾಗಿದೆ. ಇದು ಅತ್ಯಂತ ಪ್ರತಿಕ್ರಿಯಾತ್ಮಕ ಪೊಝೋಲಾನ್ ಆಗಿದೆ. ಅದರ ಸೇರ್ಪಡೆಯ ಪರಿಣಾಮವಾಗಿ ಕಾಂಕ್ರೀಟ್ ಹೆಚ್ಚು ಬಾಳಿಕೆ ಬರುವ ಮತ್ತು ಬಲಯುತವಾದ ವಸ್ತುವಾಗಿ ರೂಪುಗೊಳ್ಳುತ್ತದೆ. ಸಿಲಿಕಾ ಫ್ಯೂಮ್ ಕಾಂಕ್ರೀಟ್‌ನ ಪ್ರವೇಶಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಹೀಗಾಗಿ ಸುತ್ತಮುತ್ತಲಿನ ವಾತಾವರಣಕ್ಕೆ ಅದರ ಪ್ರತಿರೋಧವನ್ನು ಹೆಚ್ಚಿಸುತ್ತದೆ ಮತ್ತು ಸವಕಳಿಯಿಂದ ರಕ್ಷಿಸುತ್ತದೆ.

ಎಫ್‌) ಭತ್ತದ ಹೊಟ್ಟು

ಭತ್ತದ ಹೊಟ್ಟುಗಳನ್ನು ಸುಟ್ಟಾಗ ಹೊಟ್ಟಿನ ಬೂದಿ ಉತ್ಪತ್ತಿಯಾಗುತ್ತದೆ. ಈ ಉಪಉತ್ಪನ್ನವನ್ನು ಪೊಝೊಲಾನಿಕ್ ವಸ್ತುವಾಗಿ ಬಳಸಲಾಗುತ್ತದೆ, ಅದು ಸೆಲ್ಫ್ ಕಾಂಪ್ಯಾಕ್ಟಿಂಗ್ ಹೈ ಪರ್ಫಾಮೆನ್ಸ್‌ ಕಾಂಕ್ರೀಟ್‌ನ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ. ಇದು ಹೆಚ್ಚಿನ ಮಟ್ಟದ ಸಿಲಿಕಾವನ್ನು ಸಹ ಹೊಂದಿದೆ ಮತ್ತು ಕಾರ್ಯಸಾಧ್ಯತೆ, ಅಗ್ರಾಹ್ಯತೆ, ಬಲ ಮತ್ತು ತುಕ್ಕಿಗೆ ಪ್ರತಿರೋಧಿಸುವ ಕಾಂಕ್ರೀಟ್ ಗುಣಲಕ್ಷಣಗಳನ್ನು ಸುಧಾರಿಸುತ್ತದೆ.



ಆ್ಯಡ್‌ಮಿಕ್ಸ್ಚರ್‌ಗಳ ಉಪಯೋಗಗಳು



ಕಾಂಕ್ರೀಟ್ ಮಿಶ್ರಣವು ತ್ವರಿತ ಸೆಟ್ಟಿಂಗ್ ಸಿಮೆಂಟ್ ಆಗಿದ್ದು ಇದನ್ನು ಹಲವಾರು ಕಾರ್ಯಗಳಿಗಾಗಿ ಬಳಸಬಹುದು:

1) ನೀರಿನ ಅಂಶವನ್ನು ಹೆಚ್ಚಿಸದೆ ಅಥವಾ ಕಡಿಮೆ ಮಾಡದೆಯೇ ಕಾಂಕ್ರೀಟ್‌ನ ಕಾರ್ಯಸಾಧ್ಯತೆಯನ್ನು ಸುಧಾರಿಸಲು

2) ಸೆಟ್ಟಿಂಗ್ ಸಮಯದ ವೇಗವರ್ಧನೆಗೆ

3) ಕಾಂಕ್ರೀಟ್ ಮಿಶ್ರಣದ ಪಂಪ್ ಮಾಡುವಿಕೆಯ ಸಾಮರ್ಥ್ಯ ಹೆಚ್ಚಿಸಲು.

4) ಪ್ರಸ್ತುತ ಇರುವ ಮತ್ತು ಹೊಸ ಕಾಂಕ್ರೀಟ್‌ನ ನಡುವಣ ಬಂಧವನ್ನು ಹೆಚ್ಚಿಸಲು

5) ಕಾಂಕ್ರೀಟ್‌ನ ಪ್ರತ್ಯೇಕತೆ ಮತ್ತು ಬ್ಲೀಡಿಂಗ್ ಅನ್ನು ಕಡಿಮೆ ಮಾಡಲು

6) ಕುಸಿತದ ನಷ್ಟದ ಪ್ರಮಾಣವನ್ನು ಕಡಿಮೆ ಮಾಡಲು

7) ಉಕ್ಕಿನ ಬಲವರ್ಧನೆಗೆ ಕಾಂಕ್ರೀಟ್‌ನ ಬಂಧವನ್ನು ಹೆಚ್ಚಿಸಲು

8) ಶಾಖದಿಂದಾಗುವ ವಿಕಾಸವನ್ನು ಕಡಿಮೆ ಮಾಡಲು ಮತ್ತು ನೀರಿನಿಂದಾಗುವ ಬಿಗಿತವನ್ನು ಹೆಚ್ಚಿಸಲು

 

ಕಾಂಕ್ರೀಟ್‌ನಲ್ಲಿನ ಆ್ಯಡ್‌ಮಿಕ್ಸ್ಚರ್‌ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರುವ ಅಂಶಗಳು



1) ಆ್ಯಡ್‌ಮಿಕ್ಸ್ಚರ್‌ನ ವಿಧ

ವಿವಿಧ ರೀತಿಯ ಆ್ಯಡ್‌ಮಿಕ್ಸ್ಚರ್‌ (ಮಿಶ್ರಣ) ಗಳನ್ನು ನಿರ್ದಿಷ್ಟ ಕಾರ್ಯಗಳನ್ನು ನಿರ್ವಹಿಸುವುದಕ್ಕಾಗಿ ವಿನ್ಯಾಸಗೊಳಿಸಲಾಗಿದೆ. ಉದಾಹರಣೆಗೆ ಕಾರ್ಯಸಾಧ್ಯತೆಯನ್ನು ಸುಧಾರಿಸುವುದು, ಸಮಯವನ್ನು ಹೊಂದಿಸುವುದು, ಬಲ ಅಥವಾ ಕಾಂಕ್ರೀಟ್‌ನ ಬಾಳಿಕೆ. ಪ್ರತಿಯೊಂದು ವಿಧವು ವಿಭಿನ್ನ ರಾಸಾಯನಿಕ ಮತ್ತು ಭೌತಿಕ ಗುಣಲಕ್ಷಣಗಳನ್ನು ಒಳಗೊಂಡಿರುವುದರಿಂದ ಕಾಂಕ್ರೀಟ್‌ನಲ್ಲಿ ಮಿಶ್ರಣವು ಎಷ್ಟು ಚೆನ್ನಾಗಿ ಕಾರ್ಯನಿರ್ವಹಿಸುತ್ತದೆ ಎಂಬುದರ ಮೇಲೆ ಆಯ್ಕೆ ಮಾಡಿದ ಪ್ರಕಾರವು ಪರಿಣಾಮ ಬೀರುತ್ತದೆ.

2) ಪ್ರಮಾಣ (ಡೋಸೇಜ್)

ಆ್ಯಡ್‌ಮಿಕ್ಸ್ಚರ್‌ಗಳು ಕಾಂಕ್ರೀಟ್‌ನ ಗುಣಲಕ್ಷಣಗಳನ್ನು ಬದಲಾಯಿಸುವುದರಿಂದ, ಕಾಂಕ್ರೀಟ್‌ಗೆ ಅಗತ್ಯಕ್ಕಿಂತ ಹೆಚ್ಚು ಅಥವಾ ಅಗತ್ಯಕ್ಕಿಂತ ಕಡಿಮೆ ಪ್ರಮಾಣವನ್ನು ಸೇರಿಸುವುದರಿಂದ ಅದರ ಕಾರ್ಯದಕ್ಷತೆ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಸಾಮಾನ್ಯವಾಗಿ, ಮಿಶ್ರಣದ ಡೋಸೇಜ್ ಗರಿಷ್ಠ ಮಟ್ಟದಲ್ಲಿಲ್ಲದಿದ್ದಾಗ ಪ್ರತ್ಯೇಕತೆ ಮತ್ತು ಬ್ಲೀಡಿಂಗ್ (ಕರಗುವಿಕೆ) ಸಮಸ್ಯೆಗಳು ಉಂಟಾಗಬಹುದು.

3) ಸಿಮೆಂಟ್‌ನ ಪ್ರಕಾರ ಮತ್ತು ಹೊಂದಾಣಿಕೆ

ಪ್ರತಿಯೊಂದು ರೀತಿಯ ಸಿಮೆಂಟ್ ವಿಭಿನ್ನ ಮಿಶ್ರಣಗಳೊಂದಿಗೆ ವಿಭಿನ್ನ ಫಲಿತಾಂಶಗಳನ್ನು ನೀಡುತ್ತದೆ. ಕಾಂಕ್ರೀಟ್‌ನ ಕಾರ್ಯಕ್ಷಮತೆಯನ್ನು ಆ್ಯಡ್‌ಮಿಕ್ಸ್‌ಚರ್‌ ಮತ್ತು ಸಿಮೆಂಟ್ ನಡುವಿನ ಹೊಂದಾಣಿಕೆಯಿಂದ ನಿರ್ಧರಿಸಲಾಗುತ್ತದೆ. ಎರಡರ ನಡುವಿನ ಯಾವುದೇ ಅಸಾಮರಸ್ಯವು ಕಾಂಕ್ರೀಟ್‌ನ ಕಾರ್ಯಸಾಧ್ಯತೆ, ಪ್ರತ್ಯೇಕತೆ, ಬಾಳಿಕೆ ಮತ್ತು ಹೊಂದಿಸುವ ಸಮಯದ (ಸೆಟ್ಟಿಂಗ್ ಟೈಮ್) ಮೇಲೆ ಪರಿಣಾಮ ಬೀರುತ್ತದೆ.

4) ಸುತ್ತಲಿನ ತಾಪಮಾನ

ಆ್ಯಡ್‌ಮಿಕ್ಸ್ಚರ್‌ ಕಾರ್ಯಕ್ಷಮತೆಯು ಸುತ್ತಮುತ್ತಲಿನ ವಾತಾವರಣದ ತಾಪಮಾನವನ್ನು ಅವಲಂಬಿಸಿರುತ್ತದೆ. ಸುತ್ತಮುತ್ತಲಿನ ತಾಪಮಾನದಲ್ಲಿನ ಯಾವುದೇ ಹೆಚ್ಚಳವು ಸ್ಯಾಚುರೇಶನ್ ಡೋಸೇಜ್‌ನಲ್ಲಿ ಹೆಚ್ಚಳಕ್ಕೆ ಕಾರಣವಾಗುತ್ತದೆ ಮತ್ತು ಕಾಂಕ್ರೀಟ್‌ನ ಪರಿಣಾಮಕಾರಿತ್ವದ ಮೇಲೆ ಪರಿಣಾಮ ಬೀರುತ್ತದೆ.

5 ) ಮಿಶ್ರಣ

ಆ್ಯಡ್‌ಮಿಕ್ಸ್ಚರ್‌ಗಳ ವಿವಿಧ ಘಟಕಗಳು ಅದರ ಅಂತಿಮ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರುತ್ತವೆ. ನೀರಿನ ಸೇರ್ಪಡೆ, ಒರಟಾದ ಅಗ್ರಗೇಟ್‌ಗಳು, ನಯವಾದ ಅಗ್ರಿಗೇಟ್‌ಗಳು, ಸಿಮೆಂಟ್, ಆ್ಯಡ್‌ಮಿಕ್ಸ್‌ಚರ್‌ಗಳ ಕಾರ್ಯಕ್ಷಮತೆ, ಭೌತಿಕ ಕ್ರಿಯೆ ಮತ್ತು ಪ್ರಸರಣ ಮತ್ತು ದಕ್ಷತೆಯ ಮೇಲೆ ಪ್ರಭಾವ ಬೀರುತ್ತದೆ.


ಎಫ್‌ಎಕ್ಯೂ (ಪದೇ ಪದೇ ಕೇಳಲಾಗುವ ಪ್ರಶ್ನೆಗಳು)

 

1) ಆ್ಯಡ್‌ಮಿಕ್ಸ್‌ಚರ್‌ಗಳು ಕಾಂಕ್ರೀಟ್‌ನ ಬಲಿಷ್ಠತೆಯ ಮೇಲೆ ಪರಿಣಾಮ ಬೀರುವವೆ?

 

ಹೌದು, ಆ್ಯಡ್‌ಮಿಕ್ಸ್‌ಚರ್‌ಗಳು ಕಾಂಕ್ರೀಟ್‌ನ ಬಲದ ಮೇಲೆ ಪರಿಣಾಮ ಬೀರುತ್ತವೆ. ಅವುಗಳ ನೀರು- ಸಿಮೆಂಟ್‌ ಪ್ರಮಾಣದಲ್ಲಿ ಕಡಿತ, ಹೈಡ್ರೋಫೋಬಿಕ್ ಪರಿಣಾಮ, ಪೋರ್ ರಿಡಕ್ಷನ್ ಮತ್ತು ಬ್ಲಾಕಿಂಗ್, ಕಾರ್ಯನಿರ್ವಹಣೆ, ಕಾಂಕ್ರೀಟ್‌ನ ಶಕ್ತಿ ಮತ್ತು ಬಾಳಿಕೆಯನ್ನು ಗಣನೀಯವಾಗಿ ಸುಧಾರಿಸುತ್ತವೆ.

 

2) ಆ್ಯಡ್‌ಮಿಕ್ಸ್ಚರ್‌ಗಳನ್ನು ಯಾಕೆ ಬಳಸುತ್ತಾರೆ?

 

ಕಾಂಕ್ರೀಟ್‌ನ ಗುಣಲಕ್ಷಣಗಳನ್ನು ಸುಧಾರಿಸಲು, ಕಾಂಕ್ರೀಟ್‌ನ ಕುಸಿತದ ಮೇಲೆ ಪ್ರಭಾವ ಬೀರಲು, ಹೈಡ್ರೇಶನ್‌ ಮೇಲೆ ಪ್ರಭಾವ ಬೀರಲು ಮತ್ತು ಇತರ ಪ್ರಯೋಜನಗಳ ಜತೆಗೆ ಕಾಂಕ್ರೀಟ್‌ನ ವೇಗವರ್ಧನೆ ಮತ್ತು ರಿಟಾರ್ಡೇಶನ್ ಸಮಯದ ಮೇಲೆ ಪರಿಣಾಮ ಬೀರಲು ರಾಸಾಯನಿಕ ಮತ್ತು ಭೌತಿಕ ಪ್ರಕಾರಗಳ ಆ್ಯಡ್‌ಮಿಕ್ಸ್‌ಚರ್‌ಗಳನ್ನು ಬಳಸಬಹುದು.

 

3) ಅಡ್‌ಮಿಕ್ಸ್‌ಚರ್‌ಗಳ ಪರಿಣಾಮಕಾರಿತ್ವವನ್ನು ನಿರ್ಧರಿಸುವುದು ಯಾವುದು?

 

ಆ್ಯಡ್‌ಮಿಕ್ಸ್ಚರ್‌ಗಳ ಪರಿಣಾಮಕಾರಿತ್ವವು ಸಿಮೆಂಟ್ ಪ್ರಕಾರ ಮತ್ತು ಪ್ರಮಾಣ, ನೀರಿನ ಅಂಶ, ಮಿಶ್ರಣ ಸಮಯ, ಕುಸಿತ ಮತ್ತು ತಾಪಮಾನ ಸೇರಿದಂತೆ ಹಲವಾರು ಅಂಶಗಳ ಮೇಲೆ ಅವಲಂಬಿತವಾಗಿದೆ.



ಕೊನೆಯಲ್ಲಿ, ವಿವಿಧ ನಿರ್ಮಾಣ ಯೋಜನೆಗಳ ನಿರ್ದಿಷ್ಟ ಅಗತ್ಯಗಳನ್ನು ಪೂರೈಸಲು ಕಾಂಕ್ರೀಟ್‌ನ ಗುಣಲಕ್ಷಣಗಳನ್ನು ಮಾರ್ಪಡಿಸುವ ಮೂಲಕ ಆ್ಯಡ್‌ಮಿಕ್ಸ್ಚರ್‌ಗಳು ನಿರ್ಮಾಣದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಬಿಲ್ಡರ್‌ಗಳು ಮತ್ತು ಎಂಜಿನಿಯರ್‌ಗಳಿಗೆ ಅವರು ರಚಿಸುವ ರಚನೆಗಳ ಗುಣಮಟ್ಟ ಮತ್ತು ಬಾಳಿಕೆಯ ಮೇಲೆ ಹೆಚ್ಚಿನ ನಿಯಂತ್ರಣವನ್ನು ಕಾರ್ಯಸಾಧ್ಯತೆಯನ್ನು ಸುಧಾರಿಸಲು ಅಥವಾ ಶಕ್ತಿಯನ್ನು ಹೆಚ್ಚಿಸಲು ಬಳಸುವ ಮಿಶ್ರಣಗಳು ಒದಗಿಸುತ್ತವೆ. ಆ್ಯಡ್‌ಮಿಕ್ಸ್‌ಚರ್‌ಗಳ ವಿಚಾರದಲ್ಲಿ ಸರಿಯಾದ ತಿಳುವಳಿಕೆಯುಳ್ಳ ನಿರ್ಧಾರಗಳನ್ನು ತೆಗೆದುಕೊಳ್ಳುವುದು ನಿರ್ಣಾಯಕವಾಗಿದೆ. ಏಕೆಂದರೆ ಸರಿಯಾದ ಮಿಶ್ರಣಗಳು ಕಾಲದ ಪರೀಕ್ಷೆಯನ್ನು ಗೆಲ್ಲುವ ನಿರ್ಮಾಣಗಳನ್ನು ರಚಿಸಬಹುದು..



ಸಂಬಂಧಿತ ಲೇಖನಗಳು


ಗೋಡೆಗಳಲ್ಲಿ ತೇವಾಂಶ : ವಿಧಗಳು, ಕಾರಣಗಳು, ಮುನ್ನೆಚ್ಚರಿಕೆಗಳು/ ಅಲ್ಟ್ರಾಟೆಕ್

ಗೋಡೆಗಳಲ್ಲಿ ತೇವಾಂಶ : ವಿಧಗಳು, ಕಾರಣಗಳು, ಮುನ್ನೆಚ್ಚರಿಕೆಗಳು

ಗೋಡೆಗಳಲ್ಲಿನ ತೇವಾಂಶವು ಕಟ್ಟಡದ ಸ್ವರೂಪಕ್ಕೆ ಗಂಭೀರ ಹಾನಿ ಮಾಡುತ್ತದೆ ಮತ್ತು ಆರೋಗ್ಯ ಸಮಸ್ಯೆಯನ್ನು ಹೆಚ್ಚಿಸುತ್ತದೆ. ಗೋಡೆಗಳಲ್ಲಿ ನೀರು ಸೋರುವಿಕೆಯನ್ನು ಹೇಗೆ ಸಮರ್ಪಕವಾಗಿ ತಡೆಗಟ್ಟಬಹುದು ಎಂಬುದನ್ನು ಈ ಮಾರ್ಗದರ್ಶಿಯನ್ನು ಓದಿ ತಿಳಿದುಕೊಳ್ಳಬಹುದು.

ಸಿಮೆಂಟ್‌ನ ವಿವಿಧ ಪ್ರಕಾರಗಳನ್ನು ತಿಳಿದುಕೊಳ್ಳುವುದು: ಉಪಯೋಗಗಳು ಮತ್ತು ಗ್ರೇಡ್​ಗಳು

ಸಿಮೆಂಟ್‌ನ ವಿವಿಧ ಪ್ರಕಾರಗಳನ್ನು ತಿಳಿದುಕೊಳ್ಳುವುದು: ಉಪಯೋಗಗಳು ಮತ್ತು ಗ್ರೇಡ್​ಗಳು

ನಿಮ್ಮ ಮನೆ ಕಟ್ಟಲು ಸೂಕ್ತವಾದ ವಿವಿಧ ಪ್ರಕಾರದ ಸಿಮೆಂಟ್ ಕುರಿತು ತಿಳಿದುಕೊಳ್ಳಿರಿ. ಮನೆ ನಿರ್ಮಾಣ ಮಾಡುವಾಗ ತಿಳುವಳಿಕೆಯುಳ್ಳ ನಿರ್ಧಾರವನ್ನು ತೆಗೆದುಕೊಳ್ಳಲು ಅದರ ಸಾಮಾನ್ಯ ಉಪಯೋಗಗಳು ಮತ್ತು ಗ್ರೇಡ್​ಗಳನ್ನು ಕಂಡುಕೊಳ್ಳಿರಿ.

ಇಟ್ಟಿಗೆಗಳ ವಿಧಗಳು: ಉತ್ತಮ ಗುಣಮಟ್ಟದ ಇಟ್ಟಿಗೆಗಳ ಗುಣಲಕ್ಷಣಗಳು | ಅಲ್ಟ್ರಾಟೆಕ್

ಇಟ್ಟಿಗೆಗಳ ವಿಧಗಳು: ಉತ್ತಮ ಗುಣಮಟ್ಟದ ಇಟ್ಟಿಗೆಗಳ ಗುಣಲಕ್ಷಣಗಳು

ಬಿಸಿಲಿನಲ್ಲಿ ಒಣಗಿಸಿದ ಮತ್ತು ಸುಟ್ಟ ಮಣ್ಣಿಮಿಂದ ಮಾಡಿದ ಇಟ್ಟಿಗೆಗಳನ್ನು ಒಳಗೊಂಡಂತೆ ಮನೆಗಳಿಗೆ ವಿವಿಧ ರೀತಿಯ ಇಟ್ಟಿಗೆಗಳು ಇರುತ್ತವೆ. ಅವುಗಳ ವಿವಿಧ ಗುಣಲಕ್ಷಣಗಳ ಬಗ್ಗೆ ತಿಳಿದುಕೊಳ್ಳಿರಿ ಮತ್ತು ಇಟ್ಟಿಗೆಗಳನ್ನು ಆಯ್ಕೆಮಾಡುವಾಗ ಮೂಲಭೂತ ತಪ್ಪುಗಳು ಆಗದಂತೆ ನೋಡಿಕೊಳ್ಳಿರಿ.



ಶಿಫಾರಸು ಮಾಡಿದ ವೀಡಿಯೊಗಳು




  ಮನೆ ಕನ್‌ಸ್ಟ್ರಕ್ಷನ್‌ಗಾಗಿ ಎಸ್ಟಿಮೇಟಿಂಗ್ ಟೂಲ್ಸ್


ವೆಚ್ಚ ಕ್ಯಾಲ್ಕುಲೇಟರ್

ಪ್ರತಿಯೊಬ್ಬ ಮನೆ ನಿರ್ಮಾಣ ಮಾಡುವವರು ತಮ್ಮ ಕನಸಿನ ಮನೆಯನ್ನು ನಿರ್ಮಿಸಲು ಬಯಸುತ್ತಾರೆ ಆದರೆ ಅದು ಅವರ ಬಜೆಟ್‌ ವೆಚ್ಚವನ್ನು ಮೀರದಂತೆ ಇರಿಸಿಕೊಳ್ಳಲು ಬಯಸುತ್ತಾರೆ. 

logo

ಇಎಂಐ ಕ್ಯಾಲ್ಕುಲೇಟರ್

ಮನೆ ನಿರ್ಮಾಣಕ್ಕೆ ಹಣಕಾಸು ಒದಗಿಸಿಕೊಳ್ಳುವ ಅತ್ಯುತ್ತಮ ಮಾರ್ಗಗಳಲ್ಲಿ ಮನೆ-ಸಾಲವನ್ನು ತೆಗೆದುಕೊಳ್ಳುವುದು ಒಂದಾಗಿರುತ್ತದೆ, ಆದರೆ ಮನೆಯನ್ನು ನಿರ್ಮಿಸುವವರು ಎಷ್ಟು ಕಂತುಗಳನ್ನು ಪಾವತಿಸಬೇಕೆಂದು ತಿಳಿಯಲು ಬಯಸುತ್ತಾರೆ. 

logo

ಪ್ರಾಡಕ್ಟ್ ಪ್ರೆಡಿಕ್ಟರ್

ಮನೆಯನ್ನು ನಿರ್ಮಿಸುವ ಆರಂಭಿಕ ಹಂತಗಳಲ್ಲಿ, ಮನೆ ನಿರ್ಮಿಸುವವರು ಸರಿಯಾದ ಉತ್ಪನ್ನಗಳನ್ನು ಆಯ್ಕೆ ಮಾಡುವುದು ಮುಖ್ಯವಾಗಿರುತ್ತದೆ. 

logo

ಅಂಗಡಿ ಪತ್ತೆಕಾರಕ

ಮನೆ ಕಟ್ಟುವವರಿಗೆ, ಮನೆಯ ಕಟ್ಟಡದ ಬಗ್ಗೆ ಎಲ್ಲಾ ಅಮೂಲ್ಯವಾದ ಮಾಹಿತಿಯನ್ನು ಪಡೆಯುವ ಸರಿಯಾದ ಅಂಗಡಿಯನ್ನು ಕಂಡುಹಿಡಿಯುವುದು ಮುಖ್ಯವಾಗಿದೆ.

logo

Loading....