Get In Touch

Get Answer To Your Queries

Select a valid category

Enter a valid sub category

acceptence


ಭೂಕಂಪ ಪೀಡಿತ ಪ್ರದೇಶಗಳಿಗೆ ಇರುವ ನಿರ್ಮಾಣ ಮಾನದಂಡಗಳು

ನೀವು ಭಾರತದ ಭೂಕಂಪ ಪೀಡಿತ ಪ್ರದೇಶದಲ್ಲಿ ಮನೆಯನ್ನು ನಿರ್ಮಿಸುತ್ತಿದ್ದರೆ, ಈ ಸಲಹೆಯು ನಿಮ್ಮ ಅತ್ಯಂತ ಪ್ರಮುಖ ಸಂಪನ್ಮೂಲವಾಗಲಿದೆ. ಈ ಭೌಗೋಳಿಕ ಪರಿಸ್ಥಿತಿಯಲ್ಲಿ ಒಂದು ಸುರಕ್ಷಿತ ಬುನಾದಿಯನ್ನು ನಿರ್ಮಿಸಲು ಅಳವಡಿಸಿಕೊಳ್ಳಬೇಕಾದ ಹಲವಾರು ಪ್ರಕ್ರಮಗಳು, ಸಂಪನ್ಮೂಲಗಳು ಮತ್ತು ನಿರ್ಮಾಣ ಸುರಕ್ಷತೆ ನಿಯಮಗಳನ್ನು ನಾವು ಇಲ್ಲಿ ಅರಿತುಕೊಳ್ಳುತ್ತೇವೆ.

Share:


ಭೂಕಂಪ ಸಂಭವಿಸಿದಾಗ ಮನೆಗಳು ಮತ್ತು ಇತರ ಕಟ್ಟಡಗಳು ತೀವ್ರ ವಿದ್ವಂಸಕ್ಕೆ ಗುರಿಯಾಗುತ್ತವೆ. ಹೀಗಾಗಿ ಭೂಕಂಪ-ನಿರೋಧಕ ವಿನ್ಯಾಸ ತತ್ವಗಳು ಮತ್ತು ನಿರ್ಮಾಣ ನಿರ್ದೇಶನಗಳು ಮತ್ತು ಮಾನದಂಡಗಳನ್ನು ಅನುಷ್ಠಾನಗೊಳಿಸುವುದು ಕಟ್ಟಡದ ಸುರಕ್ಷತೆಗೆ ನಿರ್ಣಾಯಕವಾಗುತ್ತದೆ. ಈ ಲೇಖನವು ಬುನಾದಿ ಪ್ರತ್ಯೇಕೀಕರಣ, ಆಘಾತ ಕುಂದಿಸುವ (ಡ್ಯಾಂಪಿಂಗ್) ವ್ಯವಸ್ಥೆಗಳು, ಬಲವರ್ಧಿತ ಗೋಡೆಗಳು/ಚೌಕಟ್ಟುಗಳು, ತಡೆ ಗೋಡೆಗಳು ಮತ್ತು ಉಕ್ಕು, ಮರ ಮತ್ತು ಕಂಪೋಜಿಟ್ಗಳಂತಹ ಹಿಂಜುವ ತಂತುಶೀಲ ನಿರ್ಮಾಣ ಸಾಮಗ್ರಿಗಳನ್ನು ಒಳಗೊಂಡಂತೆ ಭೂಕಂಪನ ಹಾನಿಯಿಂದ ಮನೆಗಳನ್ನು ರಕ್ಷಿಸುವ ಪ್ರಮುಖ ತಂತ್ರಗಳನ್ನು ಪರಿಶೋಧಿಸುತ್ತದೆ.



ಭಾರತದಲ್ಲಿ ಭೂಕಂಪ ಪೀಡಿತ ಪ್ರದೇಶಗಳಲ್ಲಿ ಆಚರಿಸಬೇಕಾದ ನಿರ್ಮಾಣ ಮಾನದಂಡಗಳು

ಭಾರತವು ಎರಡು ಪ್ರಮುಖ ಭೂಫಲಕಗಳ ಮೇಲೆ ನೆಲೆಗೊಂಡಿರುವುದರಿಂದ ಅದು ಭೂಕಂಪಗಳಿಗೆ ಗುರಿಯಾಗುತ್ತದೆ. ಅನೇಕ ವರ್ಷಗಳಿಂದ, ಭೂಕಂಪಗಳು ಅನೇಕ ಮನೆಗಳನ್ನು ಮತ್ತು ಜೀವಗಳನ್ನು ನಾಶಮಾಡಿವೆ. ಆದ್ದರಿಂದ, ಭಾರತದಲ್ಲಿ ಭೂಕಂಪ ಪೀಡಿತ ಪ್ರದೇಶದಲ್ಲಿ ಮನೆ ನಿರ್ಮಿಸುವಾಗ ಕಟ್ಟುನಿಟ್ಟಾದ ನಿರ್ಮಾಣ ಮಾನದಂಡಗಳು ಮತ್ತು ಪ್ರೋಟೋಕಾಲ್‌ಗಳನ್ನು ಅನುಸರಿಸುವುದು ಬಹಳ ಮುಖ್ಯ. ಭೂಕಂಪ-ನಿರೋಧಕ ತಂತ್ರಗಳ ಸರಿಯಾದ ಯೋಜನೆ ಮತ್ತು ಬಳಕೆಯು ಭೂಕಂಪದ ಸಮಯದಲ್ಲಿ ನಿಮ್ಮ ಮನೆಗೆ ಹಾನಿಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.



ಭೂಕಂಪ ಪೀಡಿತ ಪ್ರದೇಶಗಳಲ್ಲಿನ ಕಟ್ಟಡಗಳ ರಾಚನಿಕ ಸುರಕ್ಷತೆಯನ್ನು ಹೆಚ್ಚಿಸಲು ಭಾರತವು ರಾಷ್ಟ್ರೀಯ ಕಟ್ಟಡ ಸಂಹಿತೆಯನ್ನು (NBC) ಅನುಸರಿಸುತ್ತದೆ. ಪ್ರಮುಖ ಅಂಶಗಳಲ್ಲಿ ಇವು ಸೇರಿವೆ:

 

1. ಭೂಕಂಪನ ವಲಯಗಳ ಗುರುತಿಸುವಿಕೆ

ಸೂಕ್ತವಾದ ನಿರ್ಮಾಣ ತಂತ್ರಗಳನ್ನು ನಿರ್ಧರಿಸಲು ಭೂಕಂಪನ ಚಟುವಟಿಕೆಯ ಆಧಾರದ ಮೇಲೆ ಭಾರತವನ್ನು ನಾಲ್ಕು ಭೂಕಂಪನ ವಲಯಗಳಾಗಿ (II, III, IV, V) ವಿಂಗಡಿಸಲಾಗಿದೆ.

 

2. ರಾಚನಿಕ ವಿನ್ಯಾಸ

ಕಟ್ಟಡ ವಿನ್ಯಾಸಗಳು ಆಯಾ ಭೂಕಂಪನ ವಲಯಕ್ಕೆ ಅನ್ವಯವಾಗುವ ಮಾನದಂಡಗಳಿಗೆ ಅನುಗುಣವಾಗಿರಬೇಕು, ಸರಿಯಾದ ವಸ್ತುಗಳು ಮತ್ತು ಜೋಡಣೆಗಳನ್ನು ಬಳಸಲಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.

 

3. ಸಾಮಗ್ರಿಗಳ ಬಳಕೆ

ಉತ್ತಮ ಭೂಕಂಪನ ಪ್ರತಿರೋಧಕ್ಕಾಗಿ ಉಕ್ಕು ಮತ್ತು ರಿಇನ್ಫೋರ್ಸ್ಡ್ ಸಿಮೆಂಟ್ ಕಾಂಕ್ರೀಟ್ (RCC) ನಂತಹ ತಂತುಶೀಲ ಸಾಮಗ್ರಿಗಳನ್ನು ಅಳವಡಿಸಿಕೊಳ್ಳಬೇಕು.

 

4. ಗುಣಮಟ್ಟ ನಿಯಂತ್ರಣ

ಸಾಮಗ್ರಿಗಳು ಮತ್ತು ನಿರ್ಮಾಣ ಪ್ರಕ್ರಿಯೆಗಳ ಕಟ್ಟುನಿಟ್ಟಾದ ನಿಯಂತ್ರಣವನ್ನು ಖಚಿತಪಡಿಸಿಕೊಳ್ಳುವುದು ಮತ್ತು ನಿಯಮಿತ ತಪಾಸಣೆಗಳನ್ನು ನಡೆಸುವುದು.

 

5. ಅಡಿಪಾಯದ ವಿಧ

ಭೂಕಂಪನ ವಲಯಗಳ ಆಧಾರದ ಮೇಲೆ ಅಡಿಪಾಯಗಳನ್ನು ಆಯ್ಕೆಮಾಡಿ; ಹೆಚ್ಚಿನ ಮಟ್ಟದ ಭೂಕಂಪನ ಚಟುವಟಿಕೆಯ ಪ್ರದೇಶಗಳಿಗೆ ಪ್ರತ್ಯೇಕೀಕರಣಗೊಂಡ ಅಥವಾ ರಾಫ್ಟ್ ಅಡಿಪಾಯಗಳನ್ನು ಶಿಫಾರಸು ಮಾಡಲಾಗಿರುತ್ತದೆ.

 

6. ಪುನರುಜ್ಜೀವನ

ಭೂಕಂಪನ ಪ್ರತಿರೋಧವನ್ನು ಸುಧಾರಿಸಲು ಅಸ್ತಿತ್ವದಲ್ಲಿರುವ ರಚನೆಗಳನ್ನು ಬಲಪಡಿಸುವುದು.

ಈ ನಿರ್ಮಾಣ ಮಾನದಂಡಗಳನ್ನು ಅನುಸರಿಸುವುದರಿಂದ ಹಾನಿಗಳನ್ನು ತಗ್ಗಿಸಬಹುದು ಮತ್ತು ಭೂಕಂಪಗಳ ಸಮಯದಲ್ಲಿ ಜೀವಗಳನ್ನು ಉಳಿಸಬಹುದು.


ಭೂಕಂಪಗಳು ಮನೆಗಳ ಮೇಲೆ ಹೇಗೆ ಪರಿಣಾಮ ಬೀರುತ್ತವೆ?



ಭೂಕಂಪದ ಸಮಯದಲ್ಲಿ, ನೆಲವು ವಿವಿಧ ದಿಕ್ಕುಗಳಲ್ಲಿ ಅಲುಗಾಡುತ್ತದೆ, ಇದರಿಂದಾಗಿ ಕಟ್ಟಡದ ಅಡಿಪಾಯವೂ ಅಲುಗಾಡುತ್ತದೆ. ಅಡಿಪಾಯವು ನೆಲದೊಂದಿಗೆ ಸಂಪರ್ಕ ಹೊಂದಿರುವುದರಿಂದ, ಈ ಅಲುಗಾಡುವಿಕೆಯು ಕಟ್ಟಡದಾದ್ಯಂತ ಹರಡುತ್ತದೆ. ಅದರ ಪರಿಣಾಮವಾಗಿ, ಅಡ್ಡ ಕುಲುಕಾಟದಿಂದಾಗಿ ಕಟ್ಟಡವು ಅಕ್ಕಪಕ್ಕಕ್ಕೆ ಅಲುಗಾಡಬಹುದು. ಕಟ್ಟಡದ ಮಹಡಿಗಳು ಬೇರೆಬೇರೆಯಾಗಿ ಚಲಿಸಬಹುದು, ಇದು ಗೋಡೆಗಳು ಮತ್ತು ಕಾಲಮ್‌ಗಳಂತಹ ಲಂಬ ಭಾಗಗಳ ಮೇಲೆ ಒತ್ತಡವನ್ನು ಉಂಟುಮಾಡುತ್ತದೆ. ಈ ಒತ್ತಡವು ಕಟ್ಟಡ ಸಾಮಗ್ರಿಗಳನ್ನು ಬಿರುಕುಗೊಳಿಸಬಹುದು ಅಥವಾ ಒಡೆಯಬಹುದು, ಇದು ಕಟ್ಟಡದ ಸದೃಢತೆಯನ್ನು ಗಂಭೀರವಾಗಿ ಹಾನಿಗೊಳಿಸುತ್ತದೆ. ದುರಾದೃಷ್ಟಕರ ಸಂದರ್ಭಗಳಲ್ಲಿ, ಅಲುಗಾಡುವಿಕೆಯು ತುಂಬಾ ಪ್ರಬಲವಾಗಿದ್ದರೆ, ಇಡೀ ಕಟ್ಟಡವೇ ಕುಸಿಯಬಹುದು.


ಅನುಸರಿಸಬೇಕಾದ ಕೆಲವು ನಿರ್ಮಾಣ ಪ್ರಕ್ರಮಗಳು

ಅನುಸರಿಸಬೇಕಾದ ಕೆಲವು ಪ್ರಮುಖ ಭೂಕಂಪ-ನಿರೋಧಕ ನಿರ್ಮಾಣ ಮಾನದಂಡಗಳು ಇಲ್ಲಿವೆ:



1) ಒಂದು ಹೊಂದಾಣಿಕೆಗೆ ಅವಕಾಶವುಳ್ಳ ಅಡಿಪಾಯವನ್ನು ರಚಿಸಿ

ಪರಿಣಾಮಕಾರಿ ಭೂಕಂಪ ಎಂಜಿನಿಯರಿಂಗ್ ತಂತ್ರವು ಬೇಸ್ ಐಸೊಲೇಟರ್‌ಗಳನ್ನು ಬಳಸಿಕೊಂಡು ನೆಲದಿಂದ ಅಡಿಪಾಯವನ್ನು ಪ್ರತ್ಯೇಕಿಸುತ್ತದೆ. ಈ ಬೇಸ್ ಐಸೊಲೇಟರ್‌ಗಳು ಕಟ್ಟಡ ಮತ್ತು ನೆಲದ ನಡುವೆ ಆಘಾತ ಹೀರುಕಗಳಂತೆ (ಶಾಕ್ ಅಬ್ಸೋರ್ಬರ್) ಕಾರ್ಯನಿರ್ವಹಿಸುತ್ತವೆ. ಅವುಗಳನ್ನು ರಬ್ಬರ್ ಮತ್ತು ಸ್ಟೀಲಿನ ಪದರಗಳಿಂದ ತಯಾರಿಸಲಾಗುತ್ತದೆ ಮತ್ತು ಕಟ್ಟಡದ ಅಡಿಪಾಯದ ಅಡಿಯಲ್ಲಿ ಇರಿಸಲಾಗುತ್ತದೆ. ನೆಲ ಅಲುಗಾಡಿದಾಗ, ಐಸೊಲೇಟರ್‌ಗಳು ಭೂಕಂಪದ ಶಕ್ತಿಯನ್ನು ಹೀರಿಕೊಳ್ಳುತ್ತವೆ ಮತ್ತು ಕಟ್ಟಡಕ್ಕೆ ಅದರ ವರ್ಗಾವಣೆಯನ್ನು ತಗ್ಗಿಸುತ್ತವೆ. ಇದು ಕಟ್ಟಡವನ್ನು ವಿದ್ವಂಸಕ ಭೂ ಚಲನೆಗಳಿಂದ ರಕ್ಷಿಸುತ್ತದೆ.

 

ಬಳಸಲಾಗುವ ಕೆಲವು ರೀತಿಯ ಬೇಸ್ ಐಸೊಲೇಟರ್‌ಗಳೆಂದರೆ:

 

a. ಲೆಡ್ ರಬ್ಬರ್ ಬೇರಿಂಗ್ಗಳು

ಇವು ಸೀಸದ ಕೇಂದ್ರಗಳೊಂದಿಗೆ ಒಟ್ಟಿಗೆ ಬಂಧಿತವಾದ ಸ್ಟೀಲಿನ ಫಲಕಗಳು ಮತ್ತು ರಬ್ಬರ್ ಪದರಗಳಿಂದ ಮಾಡಲ್ಪಟ್ಟಿರುತ್ತವೆ. ಸೀಸವು ಬೇರಿಂಗ್ಗಳು ದೃಢತೆಯನ್ನು ಕಳೆದುಕೊಳ್ಳದೆ ನಿಧಾನವಾಗಿ ಬಾಗುವಂತೆ ಮಾಡುತ್ತದೆ.

 

b. ಘರ್ಷಣೆ ಲೋಲಕ ವ್ಯವಸ್ಥೆ

ಇದು ಕಟ್ಟಡದ ತಳ ಮತ್ತು ನೆಲದ ನಡುವೆ ಒಂದು ಚಲನಶೀಲ ಸ್ಲೈಡರ್ ಅನ್ನು ಒಳಗೊಂಡಿದೆ. ಸ್ಲೈಡರ್ ಚಲಿಸಿದಾಗ ಉಂಟಾಗುವ ಘರ್ಷಣೆಯು ಭೂಕಂಪದ ಶಕ್ತಿಯನ್ನು ಹೀರಿಕೊಳ್ಳುತ್ತದೆ.

 

c. ಎಲಾಸ್ಟೊಮೆರಿಕ್ ಐಸೊಲೇಟರ್‌ಗಳು

ಇವು ಒಂದರ ಮೇಲೆ ಒಂದರಂತೆ ಬಿಗಿಯಾಗಿ ಬಂಧಿತವಾಗಿರುವ ರಬ್ಬರ್ ಮತ್ತು ಉಕ್ಕಿನ ಪದರಗಳನ್ನು ಹೊಂದಿರುತ್ತವೆ. ರಬ್ಬರ್ ಪದರಗಳು ಕಂಪನಗಳನ್ನು ಹಿಗ್ಗಿಸಲು ಮತ್ತು ತಗ್ಗಿಸಲು ಸಹಾಯ ಮಾಡುತ್ತದೆ.

 

d. ಹೈ-ಡ್ಯಾಂಪಿಂಗ್ ರಬ್ಬರ್ ಐಸೊಲೇಟರ್‌ಗಳು

ಇವುಗಳು ಮೃದುವಾದ ರಬ್ಬರ್ ಅನ್ನು ಬಳಸುತ್ತವೆ ಅದು ಭೂಕಂಪನ ಶಕ್ತಿಯನ್ನು ಪರಿಣಾಮಕಾರಿಯಾಗಿ ಹೀರಿಕೊಳ್ಳುತ್ತದೆ.

 

 

2) ಕುಂದಿಸುವ ಗುಣವುಳ್ಳ ಪ್ರತಿರೋಧ ಬಲಗಳು



ಮಹಡಿಗಳು ಮತ್ತು ಗೋಡೆಗಳಲ್ಲಿ ಡ್ಯಾಂಪರ್‌ಗಳು ಅಥವಾ ಶಾಕ್ ಅಬ್ಸಾರ್ಬರ್‌ಗಳನ್ನು ಸ್ಥಾಪಿಸುವುದು ಅಡ್ಡ ಅಲುಗಾಡುವಿಕೆಯ ವಿರುದ್ಧ ಪ್ರತಿಬಲವನ್ನು ಸೃಷ್ಟಿಸುತ್ತದೆ. ಡ್ಯಾಂಪರ್‌ಗಳು ಕಂಪನ ಶಕ್ತಿಯನ್ನು ಹೀರಿಕೊಂಡು ಅದನ್ನು ಶಾಖವಾಗಿ ಪರಿವರ್ತಿಸುವುದರಿಂದ, ಅದು ಮನೆಯ ಮೇಲಾಗುವ ಪರಿಣಾಮವನ್ನು ಕಡಿಮೆ ಮಾಡುತ್ತದೆ. ನಿರ್ಮಾಣ ಮಾನದಂಡಗಳಿಗೆ ಕಟ್ಟಡವನ್ನು ಸ್ಥಿರಗೊಳಿಸಲು ಹೈಡ್ರಾಲಿಕ್ ಲೋಲಕ ವ್ಯವಸ್ಥೆಗಳನ್ನು ಸಹ ಸ್ಥಾಪಿಸಬಹುದು. ಬಳಸಲಾಗುವ ಕೆಲವು ರೀತಿಯ ಭೂಕಂಪನ ಡ್ಯಾಂಪರ್‌ಗಳೆಂದರೆ:

 

a. ಲೋಹದ ಬಾಗುವ ಡ್ಯಾಂಪರ್ಗಳು

ಇವುಗಳಲ್ಲಿ ಶಕ್ತಿಯನ್ನು ಚದುರಿಸಲು ನಮ್ಯವಾದ ವಿರೂಪತೆಯ ಮೂಲಕ ಬಾಗುವ ಲೋಹದ ಫಲಕಗಳು ಇರುತ್ತವೆ.

 

b. ವಿಸ್ಕೋಲಾಸ್ಟಿಕ್ ಡ್ಯಾಂಪರ್ಗಳು

ಬಲವನ್ನು ತಗ್ಗಿಸಲು ನಿಧಾನವಾಗಿ ವಿರೂಪಗೊಂಡು ಮತ್ತೆ ಚೇತರಿಸಿಕೊಳ್ಳುವ ಪಾಲಿಮರ್‌ಗಳನ್ನು ಬಳಸಲಾಗುತ್ತದೆ.

 

c. ಘರ್ಷಣೆ ಡ್ಯಾಂಪರ್ಗಳು

ಶಕ್ತಿಯನ್ನು ಹೊರಹಾಕಲು ಸ್ಲೈಡಿಂಗ್ ಮೇಲ್ಮೈಗಳ ನಡುವೆ ಉಂಟಾಗುವ ಘರ್ಷಣೆಯನ್ನು ಬಳಸಲಾಗುತ್ತದೆ.

 

4. ಟ್ಯೂನ್ ಮಾಡಲಾದ ತೂಕದ ಡ್ಯಾಂಪರ್ಗಳು

ಇವು ಸ್ಪ್ರಿಂಗ್‌ಗಳು ಅಥವಾ ಹೈಡ್ರಾಲಿಕ್‌ಗಳ ಮೂಲಕ ಲಗತ್ತಿಸಲಾದ ತೂಕವೊಂದನ್ನು ಹೊಂದಿದ್ದು, ಅದು ಕಟ್ಟಡ ಕಂಪನದೊಂದಿಗೆ ಅನುರಣಿತವಾಗದೆ ಕ್ರಮತಪ್ಪಿಸಿ ಕಂಪಿಸುತ್ತದೆ.

 

d. ಟ್ಯೂನ್ ಮಾಡಲಾದ ದ್ರವರೂಪಿ ಡ್ಯಾಂಪರ್ಗಳು

ಶಕ್ತಿಯನ್ನು ಚದುರಿಸಲು ಕಟ್ಟಡದ ಆವರ್ತನಗಳಿಗೆ ಅಪ್ಪಳಿಸಿ ಕುಂದಿಸುವಂತೆ ಮಾಡಲು ಟ್ಯೂನ್ ದ್ರವ ಪದಾರ್ಥ ಹೊಂದಿರುವ ಕಂಟೈನರ್‌ಗಳು ಇರಿಸಲಾಗಿರುತ್ತದೆ.

 

e. ಸಕ್ರಿಯ ತೂಕದ ಡ್ಯಾಂಪರ್ಗಳು

ಇವು ಭೂಕಂಪನ ಚಲನೆಗಳನ್ನು ಊಹಿಸುವ ಮತ್ತು ಪ್ರತಿರೋಧಿಸುವ ಕಂಪ್ಯೂಟರ್-ನಿಯಂತ್ರಿತ ಹೈಡ್ರಾಲಿಕ್ ವ್ಯವಸ್ಥೆಗಳಾಗಿವೆ.

 

 

3) ಕಂಪನದಿಂದ ನಿಮ್ಮ ಮನೆಯನ್ನು ರಕ್ಷಿಸಿಕೊಳ್ಳಿ.

ಭೂಕಂಪ ಕಂಪನ ನಿಯಂತ್ರಣ ಸಾಧನಗಳು ಮನೆಯನ್ನು ಹಾನಿಯಿಂದ ರಕ್ಷಿಸಬಹುದು. ಇದು ಮನೆಯ ಸುತ್ತಲಿನ ಭೂಕಂಪದ ಶಕ್ತಿಯನ್ನು ನೆಲದೊಳಕ್ಕೆ ದಾರಿತಪ್ಪಿಸಿ ಸಾಗಿಸಲು ಅದರ ಬುನಾದಿಯ ಸುತ್ತಲೂ ಪ್ಲಾಸ್ಟಿಕ್ ಮತ್ತು ಕಾಂಕ್ರೀಟ್ನ ಏಕಕೇಂದ್ರಿತ ಉಂಗುರಗಳನ್ನು ನಿರ್ಮಿಸುವುದನ್ನು ಒಳಗೊಂಡಿರುತ್ತದೆ. ಈ ಹೊದಿಕೆ ನಿರೀಕ್ಷಿತ ಭೂಕಂಪದ ಕಂಪನಗಳಿಗೆ ಸೂಕ್ತವಾಗುವಂತ ನಿರ್ದಿಷ್ಟ ಆಯಾಮಗಳೊಂದಿಗೆ ಟ್ಯೂನ್ ಮಾಡಲಾದ ಪ್ಲಾಸ್ಟಿಕ್ ಮತ್ತು ಕಾಂಕ್ರೀಟ್ನ ಭೂಗತ ಏಕಕೇಂದ್ರಿತ ಉಂಗುರಗಳನ್ನು ಒಳಗೊಂಡಿರುತ್ತದೆ. ಇಲ್ಲಿನ ಪ್ರಮುಖ ತತ್ವಗಳೆಂದರೆ

1. ಒಳಬರುವ ಭೂಕಂಪನ ತರಂಗಾಂತರಗಳೊಂದಿಗೆ ಒಡನಾಟ ನಡೆಸಲು ಸಾಕಷ್ಟು ಹತ್ತಿರವಿರುವ ಉಂಗುರಗಳು.

2. ಭೂಕಂಪನ ಅಲೆಗಳ ವೇಗವು ಒಳಗಿನಿಂದ ಹೊರಗಿನ ಉಂಗುರಗಳ ಗುಂಟ ಕಡಿಮೆಯಾಗುತ್ತದೆ.

3. ಇದು ಅಲೆಗಳು ಕೇಂದ್ರ ಕಟ್ಟಡದ ಅಡಿಪಾಯದಿಂದ ದೂರ ನಿರ್ದೇಶಿಸಲ್ಪಡುವಂತೆ ಆಗಲು ಕಾರಣವಾಗುತ್ತದೆ.

4. ಅಲೆಗಳು ಕನಿಷ್ಠ ಪ್ರತಿರೋಧದ ಮಾರ್ಗವನ್ನು ತೆಗೆದುಕೊಳ್ಳುತ್ತವೆ ಮತ್ತು ಅಡಿಪಾಯ ಬಿಟ್ಟು ಸುತ್ತುಹಾಕಿ ಹರಿಯುತ್ತವೆ.

5. ಕಟ್ಟಡಗಳು ನೆಲದ ಚಲನೆಯೊಂದಿಗೆ ಅನುಗುಣವಾಗಿ ಕಂಪಿಸುವುದಿಲ್ಲ.

 

 

4) ಮನೆಯ ಕಟ್ಟಡ ರಚನೆಯನ್ನು ಸದೃಢಗೊಳಿಸಿ



ಕಟ್ಟಡದ ರಚನೆಯನ್ನು ಭೂಕಂಪನ ಬಲಗಳನ್ನು ತಡೆದುಕೊಳ್ಳಲು ವಿನ್ಯಾಸಗೊಳಿಸಬೇಕು ಮತ್ತು ಅವುಗಳನ್ನು ಉದ್ದೇಶಪೂರ್ವಕ ಲೋಡ್ ಹಾದಿಯಗುಂಟ ಚಾಲಿಸಿ ನೆಲದೊಳಕ್ಕೆ ತಿರುಗಿಸಬೇಕು. ನಿರ್ಣಾಯಕ ರಾಚನಿಕ ಅಂಶಗಳನ್ನು ಸಂವರ್ಧಿಸುವ ಮೂಲಕ ಮತ್ತು ಕೆಳಗಿನವುಗಳನ್ನು ಬಳಸಿಕೊಂಡು ಅದರ ಹಿಂಜುವ ಸಾಮರ್ಥ್ಯ (ತಂತುಶೀಲತ್ವವನ್ನು) ಉತ್ತಮಗೊಳಿಸುವ ಮೂಲಕ ಇದನ್ನು ಸಾಧಿಸಲಾಗುತ್ತದೆ:

 

1. ತಡೆ ಗೋಡೆಗಳು

ಲಂಬ ಗೋಡೆಯ ಅಂಶಗಳನ್ನು ಗೋಡೆಯ ಸಮತಲಕ್ಕೆ ಸಮಾನಾಂತರವಾದ ಅಡ್ಡಲಾದ ಭೂಕಂಪನ ಬಲಗಳನ್ನು ವಿರೋಧಿಸಲು ವಿನ್ಯಾಸಗೊಳಿಸಲಾಗಿರುತ್ತದೆ. ಅವು ಗಟ್ಟಿತನವನ್ನು ಹೆಚ್ಚಿಸುತ್ತ ಪೂರಕವಾಗಿ ಅಪ್ಪಿಹಿಡಿಯುವ ಬ್ರೇಸಿಂಗ್ ಆಗಿ ಕಾರ್ಯನಿರ್ವಹಿಸುತ್ತವೆ.

 

2. ಕ್ರಾಸ್ ಬ್ರೇಸಿಂಗ್ಗಳು

ಇವು ಕಟ್ಟಡವನ್ನು ಪಾರ್ಶ್ವದ ಲೋಡುಗಳ ಪ್ರತಿ ಬಲಪಡಿಸಲು ಸ್ಟೀಲನ್ನು ಬಳಸಿಕೊಂಡು ಬೀಮ್‌ಗಳು ಮತ್ತು ಕಾಲಮ್‌ಗಳ ನಡುವೆ ಅಡ್ಡಲಾಗಿ ಹಾಕಲಾದ ಕರ್ಣೀಯ ರಚನಾತ್ಮಕ ಬ್ರೇಸಿಂಗ್.

 

3. ಸಂವೇಗ-ನಿರೋಧಕ ಚೌಕಟ್ಟುಗಳು

ಕಟ್ಟಡದ ತೂಗಾಡುವಿಕೆಯನ್ನು ಗಣನೀಯವಾಗಿ ಕಡಿಮೆ ಮಾಡುವ ಉನ್ನತ ಗಟ್ಟಿತನಹೊಂದಿರುವ ಬೀಮ್-ಕಾಲಮ್ ಜೋಡಣೆಗಳು.

 

4. ಡಯಾಫ್ರಾಮ್ಗಳು

ಲಂಬ ಹಾಗೂ ಪಾರ್ಶ್ವ ಬಲ-ನಿರೋಧಕ ಅಂಶಗಳನ್ನು ಜೋಡಿಸುವ ಮಹಡಿಗಳಂತಹ ಅಡ್ಡಲಾದ ರಚನೆಗಳು.

 

5. ಬಳುಕದ ನೆಲ ಹಾಗೂ ಛಾವಣಿಯ ಡಯಾಫ್ರಾಮ್ಗಳು

ಇವು ಎಲ್ಲಾ ಗೋಡೆಗಳು / ಚೌಕಟ್ಟುಗಳನ್ನು ಒಟ್ಟಿಗೆ ಜೋಡಿಸಿ ಅವುಗಳ ನಡುವೆ ಬಲವನ್ನು ಚದುರಿಸುತ್ತವೆ.

 

6. ಟೈಗಳು ಮತ್ತು ಕಂಟಿನ್ಯೂಟಿ ಬೀಮ್ಗಳು

ವಿಚ್ಛಿನ್ನತೆಗಳ ವಿರುದ್ಧ ಗೋಡೆಗಳು ಮತ್ತು ಚೌಕಟ್ಟುಗಳ ಸುತ್ತಲೂ ನಿರಂತರ ಸಂಪರ್ಕವನ್ನು ಒದಗಿಸುತ್ತವೆ.


ನಿರ್ಮಾಣದಲ್ಲಿ ಬಳಸಲಾದ ಭೂಕಂಪ-ನಿರೋಧಕ ಸಾಮಗ್ರಿಗಳು

ಭೂಕಂಪ-ನಿರೋಧಕ ವಿನ್ಯಾಸದ ಜೊತೆಗೆ, ನಿರ್ಮಾಣ ಮಾನದಂಡಗಳ ಸಾಮಗ್ರಿಗಳ ಆಯ್ಕೆಯು ಪ್ರಮುಖ ಪಾತ್ರವನ್ನು ವಹಿಸುತ್ತದೆ:

 

1) ಸ್ಟೀಲ್ ಅಥವಾ ಉಕ್ಕು



ಉಕ್ಕು, ಭೂಕಂಪನ ಒತ್ತಡ ಮತ್ತು ಕಂಪನಗಳನ್ನು ತಡೆದುಕೊಳ್ಳಲು, ಉಚ್ಚಕರ್ಷಕ ಬಲವನ್ನು ಹಾಗೂ ಫ್ಲೆಕ್ಸಿಬಿಲಿಟಿಯನ್ನು ಹೊಂದಿದೆ. ಸರಿಯಾದ ಉಕ್ಕಿನ ರಿಇನ್ಫೋರ್ಸ್ಮೆಂಟ್‌ಗಳು ಮತ್ತು ಚೌಕಟ್ಟುಗಳು ಸದೃಢತೆಯೊಂದಿಗೆ ಫ್ಲೆಕ್ಸಿಬಿಲಿಟಿಯನ್ನು ನೀಡುತ್ತವೆ. ಭಾರತದಲ್ಲಿ ಭೂಕಂಪ-ನಿರೋಧಕ ನಿರ್ಮಾಣ ಮಾನದಂಡಗಳಿಗೆ ಉಕ್ಕು ಅತ್ಯಂತ ಸೂಕ್ತವಾದ ಸಾಮಗ್ರಿಗಳಲ್ಲಿ ಒಂದಾಗಿದೆ. ಇದು ಅತ್ಯುತ್ತಮ ಹಿಂಜುವಿಕೆ (ತಂತುಶೀಲತ್ವ) ಮತ್ತು ಅಗಲಗೊಳ್ಳುವಿಕೆ (ಪತ್ರಶೀಲತ್ವ) ಹೊಂದಿದ್ದು, ಮುರಿಯದಯೇ ಮರಳಿ ಮುಂಚಿನಂತಾಗಬಲ್ಲಂತೆ ವಿರೂಪಗೊಳ್ಳುತ್ತದೆ. ಈ ಸ್ಥಿತಿಸ್ಥಾಪಕ ಸ್ವಭಾವವು ಒತ್ತಡ ತೆಗೆದ ನಂತರ ಅದರ ಮೂಲ ಆಕಾರವನ್ನು ಮರಳಿ ಪಡೆದುಕೊಳ್ಳಲು ಅನುವು ಮಾಡಿಕೊಡುತ್ತದೆ.

 

ಉಕ್ಕಿನ ಬಳಕೆಯ ಮುಖ್ಯ ಅನುಕೂಲಗಳು:

 

1. ಅದರ ಉನ್ನತ ದೃಢತೆ-ತೂಕದ ಅನುಪಾತವು ಹಗುರವಾದ ಭೂಕಂಪ-ನಿರೋಧಕ ರಚನೆಗಳನ್ನು ನಿರ್ಮಿಸಲು ಅನುವು ಮಾಡಿಕೊಡುತ್ತದೆ.

2. ಎಳೆದಂತೆ ಗಟ್ಟಿಗೊಳ್ಳುವ ಅದರ ಗುಣದಿಂದಾಗಿ ಉಕ್ಕಿನ ಸದೃಢತೆಯು ಅದನ್ನು ವಿರೂಪಗೊಳಿಸಿದಷ್ಟು ಹೆಚ್ಚುತ್ತದೆ, ಇದು ಶಕ್ತಿಯ ಹೀರಿಕೊಳ್ಳುವಿಕೆಗೆ ಸೂಕ್ತವಾಗಿದೆ.

3. ಏಕರೂಪದ ಮತ್ತು ಪ್ರಮಾಣಿತ ಉತ್ಪಾದನೆಯು ವಸ್ತುವಿನ ಗುಣಲಕ್ಷಣಗಳ ಗುಣಮಟ್ಟ ನಿಯಂತ್ರಣವನ್ನು ಸಾಧ್ಯಗೊಳಿಸುತ್ತದೆ.

4. ಲೇಪನಗಳ ಮೂಲಕ ನೀದಲಾಉಗ್ವ ತುಕ್ಕು ನಿರೋಧಕತೆಯು ಅದರ ತಾಳಿಕೆಯನ್ನು ಹೆಚ್ಚಿಸುತ್ತದೆ.

 

 

2) ಕಟ್ಟಿಗೆ



ಕಟ್ಟಿಗೆ ಹಗುರವಾಗಿದ್ದರೂ ಅದರ ನೈಸರ್ಗಿಕ ಸ್ಥಿತಿಸ್ಥಾಪಕತ್ವದಿಂದಾಗಿ ಅತ್ಯುತ್ತಮ ಫ್ಲೆಕ್ಸಿಬಿಲಿಟಿಯನ್ನು ಹೊಂದಿದೆ. ಇದು ಭೂಕಂಪಗಳ ಸಮಯದಲ್ಲಿ ಅನುಕೂಲತೆಯನ್ನು ಒದಗಿಸುತ್ತದೆ. ಕೋಡಿನ ಅನುಸಾರ ಕ್ರಾಸ್-ಲ್ಯಾಮಿನೇಟೆಡ್ ಟಿಂಬರ್ ಮತ್ತು ಪ್ಲೈವುಡ್‌ನಂತಹ ಉತ್ಪನ್ನಗಳನ್ನು ನೆಲ ಮತ್ತು ಛಾವಣಿಯ ನಿರ್ಮಾಣಕ್ಕಾಗಿ ಬಳಸಬಹುದು.

 

ಕಟ್ಟಿಗೆ ಬಳಸಿ ನಿರ್ಮಿಸುವುದರ ಅನುಕೂಲಗಳು:

 

1. ಅದರ ಕಡಿಮೆ ಸಾಂದ್ರತೆಯು ಕಟ್ಟಡಗಳ ಮೇಲೆ ಭೂಕಂಪನ ಬಲವು ಕಡಿಮೆ ಪ್ರಭಾವಿಸುವನ್ನು ಮಾಡುತ್ತದೆ.

2. ನಮ್ಯವಾಗಿರುವ ಹಗುರ ಚೌಕಟ್ಟಿನ ಕಟ್ಟಿಗೆ ಕಟ್ಟಡಗಳು ಚಲನೆಯ ಮೂಲಕ ಭೂಕಂಪದ ಶಕ್ತಿಯನ್ನು ಚದುರಿಸಲು ಹೊಂದಿಕೊಳ್ಳುತ್ತವೆ.

3. ಪ್ಲೈವುಡ್ ಶೀಥಿಂಗ್ನಂತಹ ಪ್ಯಾನಲ್‌ಗಳು ಗೋಡೆಗಳಿಗೆ ಅಡ್ಡಲಾದ ಪ್ರತಿರೋಧವನ್ನು ಒದಗಿಸುತ್ತವೆ.

4. ಲೋಹದ ಫಾಸ್ಟೆನರ್‌ಗಳನ್ನು ಹೊಂದಿರುವ ಕಟ್ಟಿಗೆ ಅಡ್ಡ ಗೋಡೆಗಳು ಉತ್ತಮ ಪಾರ್ಶ್ವಮುಖಿ ಲೋಡಿಗೆ ಪ್ರತಿರೋಧವನ್ನು ಒದಗಿಸುತ್ತದೆ.

5. ಮರದ ದಿಮ್ಮಿಗಳನ್ನು ಮೊಳೆಹೊಡೆದು ಒಟ್ಟಿಗೆ ಸೇರಿಸುವುದು ಚದುರಿಸುವ ಜೋಡಣೆಗಳನ್ನು ಸೃಷ್ಟಿಸುತ್ತವೆ.

 

 

3) ಸುಧಾರಿತ ವಸ್ತುಗಳು

ವಿಶೇಷ ಮಿಶ್ರಲೋಹಗಳು, ಕಂಪೋಜಿಟ್ಗಳು ಮತ್ತು ಫೈಬರ್-ರಿಇನ್ಫೋರ್ಸ್ಡ್ ಪ್ಲಾಸ್ಟಿಕ್ ಮತ್ತು ಗ್ರ್ಯಾಫೀನ್-ಆಧಾರಿತ ವಸ್ತುಗಳಂತಹ ಪಾಲಿಮರ್‌ಗಳನ್ನು ಭೂಕಂಪನ ಪ್ರತಿರೋಧಕ್ಕಾಗಿ ನಿರ್ದಿಷ್ಟವಾಗಿ ವಿನ್ಯಾಸಗೊಳಿಸಲಾಗಿದೆ. ಬಿದಿರು ಕೂಡ ಒಂದು ಪರಿಸರ ಸ್ನೇಹಿ ಆಯ್ಕೆಯಾಗಿ ಹೊರಹೊಮ್ಮುತ್ತಿದೆ.

ಭೂಕಂಪ-ನಿರೋಧಕ ಗುಣಲಕ್ಷಣಗಳನ್ನು ಹೆಚ್ಚಿಸಲು ವಿನೂತನ ಸುಧಾರಿತ ವಸ್ತುಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ:

 

1. ಶೇಪ್ ಮೆಮೊರಿ ಮಿಶ್ರಲೋಹಗಳು

ಈ ವಸ್ತುವು ಅದರಿಂದ ಎಳೆತವನ್ನು ತೆಗೆದ ನಂತರ ಪೂರ್ವ-ವಿರೂಪಿತ ಆಕಾರಕ್ಕೆ ಮರಳಬಹುದಾಗಿದೆ.

 

2. ಫೈಬರ್ ರಿಇನ್ಫೋರ್ಸ್ಡ್ ಪಾಲಿಮರ್‌ಗಳು (FRP)

ಹಗುರವಾದ ಮತ್ತು ತುಕ್ಕು-ನಿರೋಧಕವಾಗಿರುವ ಉನ್ನತ- ಸದೃಢತೆಯ ಫೈಬರ್ ಕಂಪೋಜಿಟ್ಗಳು.

 

3. ಇಂಜಿನಿಯರ್ಡ್ ಸಿಮೆಂಟಿಶಿಯಸ್ ಕಾಂಪೋಸಿಟ್ಸ್ (ECC)

ಬಿರುಕು ಬಿಡದೆ ವಿರೂಪಗೊಳ್ಳುವ ಹಿಂಜುವ ಅಲ್ಟ್ರಾ-ಡಕ್ಟೈಲ್ ಕಾಂಕ್ರೀಟ್.

 

4. ಗ್ರ್ಯಾಫೀನ್-ಆಧಾರಿತ ವಸ್ತುಗಳು

ಅತ್ಯಂತ ಪ್ರಬಲವಾಗಿರುವ ಇಂಗಾಲದ ನ್ಯಾನೊಪದಾರ್ಥವು ನಿರ್ಮಾಣ ಮಾನದಂಡಗಳಿಗೆ ಸೂಕ್ತವಾಗಿದೆ.



ಕೊನೆಯಲ್ಲಿ, ಭಾರತದಲ್ಲಿ ಭೂಕಂಪ-ನಿರೋಧಕ ಮನೆಗಳನ್ನು ನಿರ್ಮಿಸುವುದು ಚತುರ ರಾಚನಿಕ ವಿನ್ಯಾಸ ಮತ್ತು ಸೂಕ್ತವಾದ ಸಾಮಗ್ರಿಗಳ ಮೂಲಕ ಮತ್ತು ಕಟ್ಟಡ ನಿರ್ದೇಶನಗಳು ಮತ್ತು ನಿರ್ಮಾಣ ಪ್ರಕ್ರಮಗಳಿಗೆ ಗಮನ ಹರಿಸುವ ಮೂಲಕ ಸಾಧಿಸಬಹುದಾಗಿದೆ. ಕೆಲವು ಪ್ರಮುಖ ವಿಧಾನಗಳಲ್ಲಿ ಹೊಂದಿಕೆಯಾಗುವ ಫ್ಲೆಕ್ಸಿಬಿಲ್ ಅಡಿಪಾಯಗಳು, ರಿಇನ್ಫೋರ್ಸ್ಮೆಂಟ್‌ ನಿರ್ಮಾಣ, ಆಘಾತ ಕುಂದಿಸುವ (ಡ್ಯಾಂಪಿಂಗ್) ವ್ಯವಸ್ಥೆಗಳು, ರಿಇನ್ಫೋರ್ಸ್ಡ್ ಕಾಂಕ್ರೀಟ್ ಗೋಡೆಗಳು ಮತ್ತು ಚೌಕಟ್ಟುಗಳು, ಅಡ್ಡ ಗೋಡೆಗಳು ಮತ್ತು ಉಕ್ಕು, ಕಟ್ಟಿಗೆ ಮತ್ತು ಇಂಜಿನಿಯರ್ಡ್ ಕಂಪೋಜಿಟ್ಗಳಂತಹ ವಸ್ತುಗಳ ಬಳಕೆಗಳು ಸೇರಿವೆ. ನಿರ್ಮಾಣ ಮಾನದಂಡಗಳ ಕಾರಣದಿಂದಾಗಿ ಅಳವಡಿಸಲಾಗುವ ಈ ಕ್ರಮಗಳು ಕಟ್ಟಡಗಳನ್ನು ಶಕ್ತಿಯುತ ಭೂಕಂಪಗಳನ್ನು ತಡೆದುಕೊಳ್ಳುವಂತೆ ಮಾಡಬಲ್ಲವು ಮತ್ತು ಮಾನವ ಜೀವಗಳು ಹಾಗೂ ಆಸ್ತಿಯನ್ನು ರಕ್ಷಿಸುತ್ತವೆ.



ಸಂಬಂಧಿತ ಲೇಖನಗಳು



ಶಿಫಾರಸು ಮಾಡಿದ ವೀಡಿಯೊಗಳು



ಮನೆ ಕನ್‌ಸ್ಟ್ರಕ್ಷನ್‌ಗಾಗಿ ಎಸ್ಟಿಮೇಟಿಂಗ್ ಟೂಲ್ಸ್


ವೆಚ್ಚ ಕ್ಯಾಲ್ಕುಲೇಟರ್

ಪ್ರತಿಯೊಬ್ಬ ಮನೆ ನಿರ್ಮಾಣ ಮಾಡುವವರು ತಮ್ಮ ಕನಸಿನ ಮನೆಯನ್ನು ನಿರ್ಮಿಸಲು ಬಯಸುತ್ತಾರೆ ಆದರೆ ಅದು ಅವರ ಬಜೆಟ್‌ ವೆಚ್ಚವನ್ನು ಮೀರದಂತೆ ಇರಿಸಿಕೊಳ್ಳಲು ಬಯಸುತ್ತಾರೆ. 

logo

ಇಎಂಐ ಕ್ಯಾಲ್ಕುಲೇಟರ್

ಮನೆ ನಿರ್ಮಾಣಕ್ಕೆ ಹಣಕಾಸು ಒದಗಿಸಿಕೊಳ್ಳುವ ಅತ್ಯುತ್ತಮ ಮಾರ್ಗಗಳಲ್ಲಿ ಮನೆ-ಸಾಲವನ್ನು ತೆಗೆದುಕೊಳ್ಳುವುದು ಒಂದಾಗಿರುತ್ತದೆ, ಆದರೆ ಮನೆಯನ್ನು ನಿರ್ಮಿಸುವವರು ಎಷ್ಟು ಕಂತುಗಳನ್ನು ಪಾವತಿಸಬೇಕೆಂದು ತಿಳಿಯಲು ಬಯಸುತ್ತಾರೆ. 

logo

ಪ್ರಾಡಕ್ಟ್ ಪ್ರೆಡಿಕ್ಟರ್

ಮನೆಯನ್ನು ನಿರ್ಮಿಸುವ ಆರಂಭಿಕ ಹಂತಗಳಲ್ಲಿ, ಮನೆ ನಿರ್ಮಿಸುವವರು ಸರಿಯಾದ ಉತ್ಪನ್ನಗಳನ್ನು ಆಯ್ಕೆ ಮಾಡುವುದು ಮುಖ್ಯವಾಗಿರುತ್ತದೆ. 

logo

ಅಂಗಡಿ ಪತ್ತೆಕಾರಕ

ಮನೆ ಕಟ್ಟುವವರಿಗೆ, ಮನೆಯ ಕಟ್ಟಡದ ಬಗ್ಗೆ ಎಲ್ಲಾ ಅಮೂಲ್ಯವಾದ ಮಾಹಿತಿಯನ್ನು ಪಡೆಯುವ ಸರಿಯಾದ ಅಂಗಡಿಯನ್ನು ಕಂಡುಹಿಡಿಯುವುದು ಮುಖ್ಯವಾಗಿದೆ.

logo

Loading....