ವಾಸ್ತು ನಿಯಮಾನುಸಾರ ಅಧ್ಯಯನದ ಜಾಗದ ವ್ಯವಸ್ಥೆ ಕಾರ್ಯಶೀಲತೆ ಮತ್ತು ಶಕ್ತಿ ಎರಡನ್ನೂ ಒಳಗೊಂಡಿರುತ್ತದೆ. ಓದುವ ಮೇಜಿನ ವ್ಯವಸ್ಥೆ ಮಾಡುವಾಗ ಏಕಾಗ್ರತೆಯ ವೃದ್ಧಿ ಮತ್ತು ಧನಾತ್ಮಕ ಶಕ್ತಿಯ ಆವಾಹನೆಗೆ ಕೆಲವು ಪರಿಣಾಮಕಾರಿ ವಾಸ್ತು ನಿಯಮಗಳು ಇಂತಿವೆ:
1. ಸರಿಯಾದ ಬೆಳಕು: ಅಧ್ಯಯನದ ಜಾಗವು ಸರಿಯಾದ ಬೆಳಕಿನ ವ್ಯವಸ್ಥೆ ಹೊಂದಿದೆ ಎಂದು ಖಾತ್ರಿಗೊಳಿಸಿಕೊಳ್ಳಿ, ನೈಸರ್ಗಿಕ ಬೆಳಕಿಗೆ ಆದ್ಯತೆ ನೀಡಿ. ವಾಸ್ತು ಪ್ರಕಾರ ಓದುವ ಮೇಜಿನ ಮೇಲೆ ನೆರಳು ನೇರವಾಗಿ ಬೀಳಬಾರದು. ಸಾಕಷ್ಟು ಸೂರ್ಯನ ಬೆಳಕು ಬೀಳುವಂತೆ ಮೇಜನ್ನು ಕಿಟಕಿಯ ಬಳಿ ಇರಿಸಿ, ಆದರೆ ನೇರ ಬಿಸಿಲು ಬೀಳದಂತೆ ತಡೆಯಿರಿ.
2. ಸೂಕ್ತ ಗೋಡೆಯ ಬಣ್ಣ ಬಣ್ಣಗಳು ಮನೋಲಹರಿ ಮತ್ತು ಶಕ್ತಿಯ ಮಟ್ಟವನ್ನು ಪ್ರಭಾವಿಸುತ್ತವೆ. ಓದುವ ಕೋಣೆಗೆ ತಿಳಿ ಬಣ್ಣಗಳಾದ ಬಿಳಿ, ತಿಳಿ ಹಸಿರು ಅಥವಾ ಕೆನೆ ಬಣ್ಣವನ್ನು ಶಿಫಾರಸು ಮಾಡಲಾಗುತ್ತದೆ. ಈ ಬಣ್ಣಗಳು ಏಕಾಗ್ರತೆ ಮತ್ತು ಶಾಂತತೆಯನ್ನು ವೃದ್ಧಿಸುವುದಲ್ಲದೆ ಓದುವ ಮೇಜಿನ ವಾಸ್ತುವಿನೊಂದಿಗೆ ಚೆನ್ನಾಗಿ ಹೊಂದಿಕೊಳ್ಳುತ್ತವೆ, ಆ ಮೂಲಕ ಸೂಕ್ತ ಕಲಿಕೆಯ ವಾತಾವರಣವನ್ನು ನಿರ್ಮಿಸುತ್ತವೆ.
3. ಮೇಜಿನ ಆಕಾರ ಸಾಮಾನ್ಯ ಆಕೃತಿಗಳಾದ ಚೌಕ ಅಥವಾ ಆಯತಾಕಾರದ ಓದುವ ಮೇಜು ನಿಮ್ಮ ಆಯ್ಕೆಯಾಗಿರಲಿ. ವಾಸ್ತು ನಿಯಮಗಳ ಪ್ರಕಾರ ಅನಿಯಮಿತ ಆಕಾರದ ಓದುವ ಮೇಜಿನಬಳಕೆ ಗೊಂದಲಕ್ಕೆ ಕಾರಣವಾಗಿ ಏಕಾಗ್ರತೆಗೆ ಭಂಗ ತರಬಹುದು.
4. ಕಪಾಟಿನ ಸ್ಥಾನ ಪುಸ್ತಕಗಳು ಮತ್ತು ಓದಿನ ಸಾಮಗ್ರಿಗಳನ್ನು ಇಡುವ ಕಪಾಟನ್ನು ಓದುವ ಮೇಜಿನ ಎಡಕ್ಕೆ ಅಥವಾ ಹಿಂದೆ ಇರಿಸಿ. ವಾಸ್ತು ಪ್ರಕಾರ ಓವರ್ ಹೆಡ್ ಕಪಾಟುಗಳನ್ನು ಓದುವ ಮೇಜಿನ ಬಳಿ ಇರಿಸಬೇಡಿ. ಏಕೆಂದರೆ ಇದು ಅನಗತ್ಯ ಒತ್ತಡ ಮತ್ತು ಆತಂಕವನ್ನು ಸೃಷ್ಟಿಸುತ್ತದೆ.
5. ವ್ಯಾಕುಲತೆಯನ್ನು ತಡೆಯಿರಿ: ಓದುವ ಮೇಜನ್ನು ಸತತ ಚಲನೆ ಮತ್ತು ಗದ್ದಲ ಉಂಟುಮಾಡುವ ಬಾಗಿಲು ಮತ್ತು ಕಿಟಕಿಗಳಿಂದ ದೂರ ಇರಿಸಿ. ವಾಸ್ತು ಪ್ರಕಾರ ಏಕಾಗ್ರತೆಯ ಅಧ್ಯಯನದ ಅವಧಿಗಳ ವೃದ್ಧಿಗೆ ಓದುವ ಮೇಜಿನಲ್ಲಿನ ಸ್ಥಿರತೆಯು ಪ್ರಮುಖ ಅಂಶವಾಗಿದೆ.
6. ಸೂಕ್ತ ಸಜ್ಜುಗೊಳಿಸುವಿಕೆ: ಓದುವ ಮೇಜನ್ನು ಕೇವಲ ಅಗತ್ಯ ವಸ್ತುಗಳಿಂದ ಸಜ್ಜುಗೊಳಿಸಿ. ವಾಸ್ತು ಪ್ರಕಾರ ಅಸ್ತವ್ಯಸ್ತವಾಗಿರುವ ಓದುವ ಮೇಜು ಶಕ್ತಿಯ ಹರಿಯುವಿಕೆಗೆ ತಡೆಯೊಡ್ಡುತ್ತದೆ. ಹೆಚ್ಚಿನ ಏಕಾಗ್ರತೆ ಮತ್ತು ಸಾಮರ್ಥ್ಯಕ್ಕಾಗಿ ಇದನ್ನು ವ್ಯವಸ್ಥಿತವಾಗಿರಿಸಿ.
7. ಕುರ್ಚಿಯ ಹಿಂದಿನ ಆಧಾರ: ನಿಮ್ಮ ಓದುವ ಕುರ್ಚಿಯು ಬೆನ್ನಿಗೆ ಸರಿಯಾದ ಆಧಾರವನ್ನು ನೀಡುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಎತ್ತರವಾದ ಬೆನ್ನಿನ ಆಧಾರವನ್ನು ಹೊಂದಿರುವ ಕುರ್ಚಿಯು ವಾಸ್ತು ನಿರ್ದೇಶನಗಳಿಗೆ ತಕ್ಕುದಾಗಿದೆ, ಏಕೆಂದರೆ ಇದು ಸ್ಥಿರತೆ ಮತ್ತು ಆರಾಮವನ್ನು ನೀಡುತ್ತದೆ.