ನಿರ್ದಿಷ್ಟ ನಿರ್ಮಾಣ ಸಾಮಗ್ರಿಗಳನ್ನು ಲೆಕ್ಕಿಸದೆ, ಹೆಚ್ಚುವರಿ ಖರ್ಚು ಮಾಡದೆಯೇ ಇಲ್ಲಿಯವರೆಗೆ ಉಲ್ಲೇಖಿಸಲಾದ ವಿಧಾನಗಳ ಮೂಲಕ ಭೂಕಂಪ ಸುರಕ್ಷಿತ ನಿರ್ಮಾಣ ವಿಧಾನಗಳನ್ನು ಮಾಡಲು ಸಾಧ್ಯವಿದೆ. ಮರದ ಚೌಕಟ್ಟು, ಕಚ್ಚಾ ಇಟ್ಟಿಗೆ, ಭೂಕಂಪ ಸಕ್ರಿಯ ಪ್ರದೇಶಗಳಲ್ಲಿ ಜಾರಿಯಲ್ಲಿರುವ ನಿರ್ಮಾಣ ವಿಧಾನಗಳು ವೆಚ್ಚವನ್ನು ಕಡಿಮೆ ಮಾಡಬಹುದಾದ ಅಸಾಂಪ್ರದಾಯಿಕ, ನಿರ್ಧಿಷ್ಟವಾದ ವಿಧಾನಗಳಾಗಿವೆ. ರೈಟ್ ಬ್ರ್ಯಾಕೆಟ್, ಹೋಲ್ಡ್-ಡೌನ್ ಮತ್ತು ಫಸ್ಟ್ ನರ್, ಕಬ್ಬಿಣದ ಚೌಕಟ್ಟುಗಳ ಬಳಕೆಯು ಕಟ್ಟಡವನ್ನು ಭೂಕಂಪ ತಡೆದುಕೊಳ್ಳುವಂತೆ ಘಟ್ಟಿಗೊಳಿಸುತ್ತದೆ. ಸ್ಕ್ರೂಗಳು ಸಾಕಷ್ಟು ಹಿಡಿದುಕೊಳ್ಳುವ ಸಾಮರ್ಥ್ಯ ಹೊಂದಿವೆ. ಆದರೆ, ಒಜ್ಜೆ ಬಿದ್ದಾಗ ಒಳಗೇ ಮುರಿಯಬಲ್ಲವು. ಕತ್ತರಿಯಾಕಾರದಲ್ಲಿ ನಿರ್ಮಿತ ಗೋಡೆಗಳು, ಬ್ರ್ಯಾಕೆಟ್ ಗಳು, ಹಾಗೂ ಗಸೆಟ್ ಗಳನ್ನು ತೊಲೆಗಳನ್ನು ಘಟ್ಟಿ ಮಾಡಲು, ಜೋಡಿಕೆಗಳಲ್ಲಿ, ಸಂದುಗಳಲ್ಲಿ, ಸಿಲ್ ಪ್ಲೇಟ್ ಗಳಲ್ಲಿ, ಮತ್ತು ರೂಫ್ ಟ್ರೆಸ್ ಗಳಲ್ಲಿ ಈ ಮಾದರಿಯ ನಿರ್ಮಾಣದಲ್ಲಿ ಬಳಸಲಾಗುತ್ತದೆ.
ಮಣ್ಣಿನ ಇಟ್ಟಿಗೆ, ಗಾರೆ ಮುಂತಾದ ಮಣ್ಣಿನ ಗೋಡೆಗಳ ಅತಿಹೆಚ್ಚು ತೂಕ, ಸುಲಭವಾಗಿ ಒಡೆದುಹೊಗುವ ಸಂಯೋಜನೆಯು ಭೂಕಂಪ ತಡೆಯಲು ವಿಫಲವಾಗುತ್ತವೆ. ವಿಶೇಷವಾಗಿ ಕೂಡಿಕೆಗಳಲ್ಲಿ ಮತ್ತು ಉದ್ದವಾದ ಗೋಡೆಗಳಲ್ಲಿ ಕಟ್ಟಡದ ದೊಡ್ಡದಾದ ಭಾಗಗಳು ಬೀಳಲು ಕಾರಣವಾಗುತ್ತದೆ. ಬಿರುಕು ಮತ್ತು ಎಲ್ಲ ಭಾಗಗಳನ್ನು ಅಲುಗಾಡದಂತೆ ಮಾಡಲು ಗೋಡೆಗಳಲ್ಲಿ ಫೈಬರ್, ಬಾರ್, ರಾಡ್ ಅಥವಾ ಮೆಶ್ ಗಳಲ್ಲಿ ಬಲವರ್ಧಕ ಸಂಯೋಜನೆಗಳನ್ನು ಬಳಸಬಹುದು. ಕೊಳವೆ, ಬಳ್ಳಿ ಅಥವಾ ಸಿಂಥೆಟಿಕ್ ದಾರಗಳನ್ನು ಒಳಗೆ ಬಳಸುವುದರ ಮೂಲಕ ವಸ್ತುಗಳನ್ನು ಬಲವರ್ಧನೆ ಮಾಡಬಹುದು. ಮರದ ಹಲಗೆಗಳನ್ನು ಜೋಡಿಸಲು ಹಗ್ಗ, ಗಿಡ, ಬಳ್ಳಿ,ಎಳೆ ಅಥವಾ ಬಿದಿರನ್ನು ಬಳಸಬಹುದು ಮತ್ತು ಅಡಿಪಾಯದ ಅಂತರಗಳನ್ನು ತುಂಬಲು, ವಾಲ್ ಕ್ಯಾಪ್ ಗಳನ್ನು ಜೋಡಿಸಲು ರಾಡ್ ಗಳನ್ನು ಬಳಸಬಹುದು.ಇದು ವಿಶೇಷವಾಗಿ ಕೂಡಿಕೆಗಳ ಮೆಶ್ ಗಳನ್ನು ಬಲವರ್ಧಕಗೊಳಿಸಲು, ಸ್ಕ್ರೀನ್, ಚಿಕನ್ ವೈಯರ್ ಮುಂತಾದವುಗಳನ್ನು ಗೋಡೆಗಳನ್ನು ಜೋಡಿಸಲು ಬಳಸ ಬಹುದು ಮತ್ತು ಇದು ಶಕ್ತಿಯನ್ನು ಸಮನಾಗಿ ಹಂಚುತ್ತದೆ.