ವಾಟರ್‌ಪ್ರೂಫಿಂಗ್‌ ವಿಧಾನಗಳು, ಮಾಡರ್ನ್‌ ಕಿಚನ್‌ ಡಿಸೈನ್ಸ್‌, ಹೋಮ್‌ಗಾಗಿ ವಾಸ್ತು ಸಲಹೆಗಳು, ಮನೆ ನಿರ್ಮಾಣ ವೆಚ್ಚ

ಸಂಪರ್ಕಲ್ಲಿರಿ

ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ

ಮಾನ್ಯವಾದ ವರ್ಗವನ್ನು ಆಯ್ಕೆಮಾಡಿ

ನಿಮ್ಮ ಉಪ-ವರ್ಗವನ್ನು ಆಯ್ಕೆ ಮಾಡಿ

acceptence

ಮುಂದುವರಿಯಲು ದಯವಿಟ್ಟು ಈ ಪೆಟ್ಟಿಗೆಯನ್ನು ಪರಿಶೀಲಿಸಿ



ನಿಮ್ಮ ಸ್ಥಳವನ್ನು ಪರಿವರ್ತಿಸಲು ಮನೆ ಇಂಟೀರಿಯರ್ ಕುರಿತು 10 ಪ್ರಮುಖ ಯೋಜನೆಗಳು

ನಿಮ್ಮ ವಾಸದ ಸ್ಥಳವನ್ನು ಪರಿವರ್ತಿಸುವ ಮನೆಯ 15 ಇಂಟಿರೀಯರ್ ಯೋಜನೆಗಳ ಕುರಿತು ಅನ್ವೇಷಿಸಿ. ಹತ್ತಿರದಿಂದ ಅರಳುವ ಪ್ಯಾಲೆಟ್​ಗಳಂತೆ ಕಂಡುಬರುವ ಈ ಸಲಹೆಗಳು ಸರಳವಾದರೂ ತಮ್ಮ ಮನೆ ಹೊಸ ಚೈತನ್ಯ ಕೊಡಬೇಕು ಎಂದು ಬಯಸುವವರಿಗೆ ಪರಿಣಾಮಕಾರಿಯಾಗಿವೆ.

Share:


ಪ್ರಮುಖ ಅಂಶಗಳು

 

  • ವಿವಿಧ ಬದಲಾಗುತ್ತಿರುವ ಅಗತ್ಯಗಳನ್ನು ಪೂರೈಸುವ ಬಹು ಬಳಕೆಯ ಸ್ಥಳಗಳಿಗೆ ಒತ್ತು ನೀಡಿ, ಲಭ್ಯವಿರುವ ಪ್ರತಿಯೊಂದು ಚದರ ಅಡಿಯಿಂದ ಹೆಚ್ಚಿನ ಜಾಗೆಯನ್ನು ಪಡೆದುಕೊಳ್ಳಿ
 
  • ನಿಮ್ಮ ಮನೆಯಲ್ಲಿ ಶಾಂತವಾದ, ಸ್ಥಾಪಿತ ವಾತಾವರಣವನ್ನು ರಚಿಸಲು ಸಸ್ಯಗಳು ಮತ್ತು ನೈಸರ್ಗಿಕ ವಸ್ತುಗಳಂತಹ ನೈಸರ್ಗಿಕ ಅಂಶಗಳನ್ನು ಸೇರಿಸಿ.


ಮನೆಗೆ ಬರುವುದು ಎಂದರೆ ಸುರಕ್ಷಿತ ಹಾಗೂ ವಿಶ್ರಮಿಸುವ ಜಾಗಕ್ಕೆ ಬರುವುದನ್ನು ಬಿಟ್ಟು ಬೇರೇನೂ ಅಲ್ಲ. ಹೀಗಾಗಿ ಕ್ರಿಯಾತ್ಮಕವಾಗಿ ಸೊಗಸಾದ ಹಾಗೂ ವಿಶ್ರಾಂತಿ ಸ್ಥಳವನ್ನು ಸೃಷ್ಟಿಸಲು ನಾವು ಮನೆಯ ಇಂಟಿರೀಯರ್ ಕುರಿತು 15 ಯೋಜನೆಗಳನ್ನು ಹೊಂದಿದ್ದೇವೆ. ದಪ್ಪ ವಾಲ್‌ಪೇಪರ್‌ಗಳಿಂದ ಹಿಡಿದು ಕುಶಲ ಶೇಖರಣಾ ಪರಿಹಾರಗಳವರೆಗೆ, ಆರಾಮವನ್ನು ಹೆಚ್ಚಿಸಲು ಮತ್ತು ನಿಮ್ಮ ಇಂಟಿರೀಯರ್ ಅಂದಗೊಳಿಸಲು ನೀವು ಯೋಜನೆಗಳನ್ನು ಕಂಡುಕೊಳ್ಳುವಿರಿ. ಮತ್ತೆ ಸಂಪೂರ್ಣವಾಗಿ ನಿಮ್ಮ ಮನೆಯೊಂದಿಗೆ ಪ್ರೀತಿಯಲ್ಲಿ ಬೀಳಲು ಸಿದ್ಧರಾಗಿ!

 

 


ಮನೆ ಇಂಟಿರೀಯರ್​ಗೆ ಅಗತ್ಯವಾದ 10 ಪ್ರಮುಖ ವಿನ್ಯಾಸ ಯೋಜನೆಗಳು

ಅತ್ಯಾಕರ್ಷಕ ಬದಲಾವಣೆಗಳೊಂದಿಗೆ ನಿಮ್ಮ ವಾಸಸ್ಥಳವನ್ನು ಚೈತನ್ಯಗೊಳಿಸಲು ಈ ಸರಳವಾದ ಮನೆಯ ಒಳಾಂಗಣ ಯೋಜನೆಗಳ ಕುರಿತು ಆಳವಾಗಿ ಅರಿಯೋಣ!

 

1. ಓಪನ್ ಶೆಲ್ವ್‌ಗಳು

 



ವಿಶೇಷವಾಗಿ ಅಡುಗೆಮನೆಗಳಲ್ಲಿ ಮಸಾಲೆ ಡಬ್ಬಿಗಳು, ತಟ್ಟೆಗಳು ಮತ್ತು ಇತರ ಪಾತ್ರೆಗಳನ್ನು ಕಾಣುವಂತೆ ಇಡಲು ಓಪನ್ ಶೆಲ್ವ್‌ಗಳು ಉತ್ತಮ ಆಯ್ಕೆಯಾಗಿವೆ.  ಹೀಗೆ ಮಾಡಿದಾಗ ಬೇಕಾದಾಗ ಅವುಗಳನ್ನು ಸುಲಭವಾಗಿ ಉಪಯೋಗಿಸಲು ಅನುಕೂಲವಾಗುತ್ತದೆ.  ಹಾಗೆಯೇ, ಬೆಡ್​ರೂಮ್​ಗಳು ಅಥವಾ ಲಿವಿಂಗ್ ಏರಿಯಾಗಳಲ್ಲಿ ಪುಸ್ತಕಗಳು, ಫೋಟೊ ಫ್ರೇಮ್​ಗಳು ಹಾಗೂ ಇತರ ವೈಯಕ್ತಿಕ ಅಗತ್ಯದ ವಸ್ತುಗಳಲ್ಲು ಶೆಲ್ಫ್​ಗಳಲ್ಲಿ ಕೈಗೆ ಸಿಗುವಂತೆ ಇಡಬಹುದು. ಓಪನ್​ ಶೆಲ್ವ್‌ಗಳು ರೂಮ್​ಗಳು ಹೆಚ್ಚು ತೆರೆದಿರುವ ಹಾಗೂ ವಸ್ತುಗಳು ಚಲ್ಲಾಪಿಲ್ಲಿಯಾಗಿರುವಂತೆ ಕಾಣುವುದಿಲ್ಲ.

 

2. ಮನೆಯೊಳಗಿಡುವ ಸಸ್ಯಗಳು

 



ಮನೆಯ ಒಳಗೆ ಸಸ್ಯಗಳನ್ನು ಇಡುವುದರಿಂದ ಜಾಗವನ್ನು ಸುಂದರಗೊಳಿಸಲು ಮತ್ತು ಯಾವುದೇ ವಿನ್ಯಾಸ ಯೋಜನೆಗೆ ಹೊಂದುವಂತೆ ಮಾಡಲು ಸುಲಭವಾದ ಮಾರ್ಗವಾಗಿದೆ. ಇದು ಲಿವಿಂಗ್ ರೂಮಿನ ಮೂಲೆಯಲ್ಲಿ ಇಟ್ಟಿರುವ ದೊಡ್ಡ ಪಾಟ್​ನಲ್ಲಿಟ್ಟಿರುವ ಸಸ್ಯವಾಗಿರಲಿ ಅಥವಾ ಕಿಟಕಿಯ ಅಡಿಗೆ ಮೇಲೆ ಸಣ್ಣ ಸಸ್ಯಗಳಾಗಿರಲಿ, ನಿಮ್ಮ ಮನೆಯ ಇಂಟಿರೀಯರ್​ನಲ್ಲಿ ಸಜೀವ ಸಸ್ಯಗಳು ರೂಮಿಗೆ ಹೆಚ್ಚು ಜೀವಂತ ಕಳೆಯನ್ನು ಕೊಡುತ್ತವೆ. ಮನೆಯಲ್ಲಿ ಗಾಳಿಯ ಗುಣಮಟ್ಟವನ್ನು ಕಾಪಾಡಿಕೊಳ್ಳಲು ಅವು ಉತ್ತಮವಾಗಿವೆ. ಜೊತೆಗೆ ಬಿಡುವಿನ ಸಮಯದಲ್ಲಿ ಅವುಗಳನ್ನು ನೋಡಿಕೊಳ್ಳುವುದು ಹವ್ಯಾಸವಾಗಿದೆ.

 

3.  ಹಿತಕರ ಬಣ್ಣಗಳು



ಹಳದಿ, ಕಿತ್ತಳೆ ಅಥವಾ ತೆಳುವಾದ ಕೆಂಪು ಬಣ್ಣಗಳಂತಹ ಹಿತಕರ ಬಣ್ಣಗಳಿಂದ ನಿಮ್ಮ ಗೋಡೆಗಳನ್ನು ಪೇಂಟ್ ಮಾಡುವುದರಿಂದ ಯಾವುದೆ ರೂಮಿನಲ್ಲಿ ಹಿತಕರ  ಅನುಭವವನ್ನು ನೀಡುತ್ತದೆ. ಈ ಬಣ್ಣಗಳು ರೂಮ್​ಗಳು ಹಿತಕರವಾಗಿರುವಂತೆ ಮಾಡುತ್ತವೆ ಹಾಗೂ ಹೆಚ್ಚು ಜಾಗವನ್ನು ಕೊಡುತ್ತವೆ. ಅಲ್ಲಿ ನಿಮ್ಮ ಅತಿಥಿಗಳೊಂದಿಗೆ ಮನರಂಜನೆ ಹೊಂದಲು ಅಥವಾ ನೀವು ವಿಶ್ರಾಂತಿ ಪಡೆಯಲು ಮತ್ತು ಹಾಯಾಗಿರಲು, ಇದು ವಾಸಿಸುವ ಅಥವಾ ಸಾಮಾನ್ಯ ಪ್ರದೇಶಗಳಿಗೆ ಉತ್ತಮವಾಗಿದೆ. 

 

4. ದಪ್ಪ ವಾಲ್‌ಪೇಪರ್



ನಿಮ್ಮ ವಿನ್ಯಾಸದ ರುಚಿ ಮತ್ತು ಆದ್ಯತೆಗಳನ್ನು ತೋರಿಸಲು ವಾಲ್‌ಪೇಪರ್‌ಗಳು ಉತ್ತಮ ಮಾರ್ಗವಾಗಿದೆ. ಸೃಜನಾತ್ಮಕ ಚಿತ್ರಗಳು ಅಥವಾ ಗಾಢವಾದ ಬಣ್ಣಗಳೊಂದಿಗೆ ದಪ್ಪ ವಾಲ್​ಪೇಪರ್​ ಅನ್ನು ಬಳಸುವುದರಿಂದ ಡಲ್​ ಆಗಿ ಕಾಣುವ ರೂಮ್​ಗಳನ್ನು ಹೆಚ್ಚು ಆಕರ್ಷಕವಾಗಿ ಕಾಣುವಂತೆ ಮಾಡಬಹುದು. ಈ ಮನೆ ವಿನ್ಯಾಸ ಯೋಜನೆಯು ಬಾತ್​​​ರೂಮ್​, ಬೆಡ್​ರೂಮ್ ಅಥವಾ ಲಿವಿಂಗ್​ ರೂಮ್​ಗೆ ಸೂಕ್ತವಾಗಿದೆ.

 

5. ಕಾರ್ಪೆಟ್‌ಗಳು(ರತ್ನಗಂಬಳಿಗಳು)


ಕಾರ್ಪೆಟ್​​ಗಳನ್ನು ಕೆಳಗೆ ಹಾಸುವುದರಿಂದ ಒಂದು ರೂಮಿನ ನೋಟ ಹಾಗೂ ಭಾವನೆಯನ್ನು ರೂಪಿಸಲು ಸಹಾಯ ಮಾಡುತ್ತದೆ. ಇದು ನಿಮ್ಮ ಲಿವಿಂಗ್ ರೂಮ್‌ನಲ್ಲಿರುವ ಕಾರ್ಪೆಟ್ ಆಗಿರಲಿ ಅಥವಾ ನಿಮ್ಮ ಬೆಡ್​ರೂಮಿನ ಹೊರಗೆ ಹಾಕಿರುವ ಮೃದುವಾದ ಕಾರ್ಪೆಟ್​ ಆಗಿರಲಿ, ಕಾರ್ಪೆಟ್‌ಗಳು ಸ್ಥಳವು ಆಕರ್ಷಕವಾಗಿ ಕಾಣುವಂತೆ ಅಲಂಕಾರದ ಕೇಂದ್ರಬಿಂದುವಾಗಿಯೂ ಸಹ ಕಾರ್ಯನಿರ್ವಹಿಸುತ್ತದೆ. ಜೊತೆಗೆ, ಮೃದುವಾದ ಕಾರ್ಪೆಟ್‌ನ ಮೇಲೆ ನಡೆದಾಡುವುದು ಸಾದಾ ಫ್ಲೋರ್​ಗಳಲ್ಲಿ ನಡೆದಾಡುವುದಕ್ಕಿಂತ ಹೆಚ್ಚು ಆಹ್ಲಾದಕರವಾಗಿರುತ್ತದೆ.

 

6. ಗೃಹ ಕಚೇರಿ



ಗೃಹ ಕಚೇರಿಗಾಗಿ ಸ್ಥಳವನ್ನು ಹೊಂದಿಸುವುದರಿಂದ ನೀವು ಮನೆಯಿಂದ ಕೆಲಸ ಮಾಡುತ್ತಿರುವಾಗ ಕೆಲಸದ ಮೇಲೆ ಗಮನ ಕೇಂದ್ರೀಕರಿಸಲು ಮಹತ್ವದ ಕೊಡುಗೆ ನೀಡುತ್ತದೆ.  ಶಾಂತವಾದ ಮೂಲೆಯಲ್ಲಿ ಆರಾಮದಾಯಕವಾದ ಕುರ್ಚಿಯನ್ನು ಹೊಂದಿರುವ ಸಣ್ಣ ಟೆಬಲ್​ ಇಟ್ಟುಕೊಂಡು ತಾತ್ಕಾಲಿಕ ಕಚೇರಿಯನ್ನು ಮಾಡಿಕೊಳ್ಳಬಹುದು. ಹಾಗೆ ಮಾಡಿದಲ್ಲಿ ನೀವು ವಿಶ್ರಾಂತಿ ಪಡೆಯುವ ಸ್ಥಳದಲ್ಲಿ ಕೆಲಸ ಮಾಡಲು ಪ್ರತ್ಯೇಕ ಜಾಗೆಯನ್ನು ಮಾಡಿಕೊಳ್ಳಬಹುದು.

 

 7. ವಿವಿಧೋದ್ದೇಶ ರೂಮ್​​​ಗಳು

ಇರುವ ಸ್ಥಳದಲ್ಲಿಯೇ ಹೆಚ್ಚಿನ ಭಾಗವನ್ನು ಬಳಸಿಕೊಂಡು, ಇಡೀ ದಿನ ಬೇರೆ ಬೇರೆ ಕೆಲಸಗಳನ್ನು ಮಾಡಲು ವಿವಿಧೋದ್ದೇಶ ರೂಮ್​​ಗಳನ್ನು ವಿನ್ಯಾಸಗೊಳಿಸಲಾಗುತ್ತದೆ. ಉದಾಹರಣೆಗೆ ಗೆಸ್ಟ್​ ರೂಮ್​ ಅನ್ನು ವರ್ಕ್​ಔಟ್​​ ಮಾಡಲು ಉಪಯೋಗಿಸಬಹುದು ಅಥವಾ ಗೃಹ ಕಚೇರಿಯನ್ನಾಗಿ ಮಾಡಿಕೊಳ್ಳಬಹುದು. ಇರುವ ಜಾಗೆಯಲ್ಲಿಯೇ ಹೆಚ್ಚಿನದನ್ನು ಪಡೆಯಲು ಇದು ಉತ್ತಮ ಮಾರ್ಗವಾಗಿದೆ.

 

8. ಬಹುಕ್ರಿಯಾತ್ಮಕತೆಯ ಪೀಠೋಪಕರಣಗಳು

ಜಾಗೆಯನ್ನು ಉಳಿಸಲು ಬಹುಕ್ರಿಯಾತ್ಮಕ ಪೀಠೋಪಕರಣಗಳ ಪ್ರತ್ಯೇಕಿಸಿದ ಭಾಗಗಳನ್ನು ಅಗತ್ಯಕ್ಕೆ ತಕ್ಕಂತೆ ಹೊಂದಿಸಲಾಗಿರುತ್ತದೆ. ಉದಾಹರಣೆಗೆ, ಅತಿಥಿಗಳಿಗೆ ಹಾಸಿಗೆಯಾಗಿ ರೂಪಾಂತರಗೊಳ್ಳುವ ಸೋಫಾ, ಅಥವಾ ಸ್ಟೋರೇಜ್ ಹೊಂದಿರುವ ಕಾಫಿ ಟೇಬಲ್​ ಅನ್ನು ಬ್ಲಾಂಕೆಟ್​ಗಳು ಹಾಗೂ ಇತರ ಅಗತ್ಯ ವಸ್ತುಗಳನ್ನಿಡಲು ಬಳಸಬಹುದು. ಮನೆಯ ಈ ಇಂಟಿರೀಯರ್ ಯೋಜನೆಯು ಜಾಣ್ಮೆಯ ಪರಿಹಾರವಾಗಿದೆ. ಇದು ನಿಮ್ಮ ಮನೆಯ ಸೈಜ್​ ಅನ್ನು ಗಮನಿಸದೆ ಆರಾಮವಾಗಿ ಇರಲು ಅವಕಾಶ ಮಾಡಿಕೊಡುತ್ತದೆ.

 

9. ನೈಸರ್ಗಿಕ ಬೆಳಕು



ಸಾಧ್ಯವಾದಷ್ಟು ನೈಸರ್ಗಿಕ ಬೆಳಕನ್ನು ಮನೆಯೊಳಗೆ ಬೀಳುವಂತೆ ಮಾಡುವುದರಿಂದ ನಿಮ್ಮ ಮನೆಯು ಪ್ರಕಾಶಮಾನವಾಗಿ ಮತ್ತು ವಿಶಾಲವಾಗಿ ಕಾಣುವಂತೆ ಮಾಡುತ್ತದೆ. ದೊಡ್ಡ ಕಿಟಕಿಗಳು, ಅಥವಾ ತೆಳುವಾದ ಕರ್ಟನ್​ಗಳು ಸೂರ್ಯನ ಬೆಳಕು ಮನೆಯೊಳಗೆ ಬೀಳಲು ಸಹಾಯ ಮಾಡುತ್ತವೆ, ಜೊತೆಗೆ ಇವು ವಿದ್ಯುತ್ ಬಿಲ್​ ಉಳಿಸಲು ಸಹಾಯ ಮಾಡುತ್ತವೆ.

 

10. ಮಿಕ್​​ ಆ್ಯಂಡ್ ಮ್ಯಾಚ್​​

ಮಿಕ್ಸ್ ಆ್ಯಂಡ್ ಮ್ಯಾಚ್ ವಿಧಾನವು ವಿವಿಧ ವಿನ್ಯಾಸಗಳು, ಮಾದರಿಗಳು ಮತ್ತು ಬಣ್ಣದ ಪ್ಯಾಲೆಟ್‌ಗಳನ್ನು ಸಂಯೋಜಿಸುತ್ತದೆ. ಸೋಫಾದ ಜೊತೆಗೆ ಕಟ್ಟಿಗೆಯ ಟೇಬಲ್ ಜೋಡಿಸಬಹುದು ಅಥವಾ ಒಂದೇ ರೂಮಿನಲ್ಲಿ ಎರಡು ವ್ಯತಿರಿಕ್ತ ಬಣ್ಣಗಳನ್ನು ಅಥವಾ ವಾಲ್​ಪೇಪರ್​ಗಳನ್ನು ಹೊಂದಿಸಬಹುದು. ಮನೆಯ ಈ  ಒಳಾಂಗಣ ಯೋಜನೆಯು ಮನೆಗೆ ನಿಮ್ಮ ವೈಯಕ್ತಿಕ ಶೈಲಿಯ ಸ್ಪರ್ಶವನ್ನು ಸೇರಿಸುತ್ತದೆ.



 

ನೀವು ಕನಿಷ್ಠ ಸರಳತೆ ಅಥವಾ ಗರಿಷ್ಠ ಶ್ರೀಮಂತಿಕೆಯು ಕಾಣುವಂತೆ ಮಾಡಲು ಪ್ರಯತ್ನಿಸುತ್ತಿರಲಿ, ಮನೆಯ ಈ ಇಂಟೀರಿಯರ್ ಯೋಜನೆಗಳು ಎಲ್ಲರಿಗೂ ಬೇಕಾದ ಒಂದಿಷ್ಟನ್ನು ಕೊಡುತ್ತವೆ. ಸ್ಮಾರ್ಟ್ ಟೆಕ್ನಾಲಜಿ, ನೈಸರ್ಗಿಕ ವಸ್ತುಗಳು ಮತ್ತು ಎದ್ದುಕಾಣುವಂತಹ ಅಲಂಕಾರದ ಆಯ್ಕೆಗಳ ಅಂಶಗಳನ್ನು ಸೇರಿಸುವ ಮೂಲಕ, ನಿಮ್ಮ ಶೈಲಿಯನ್ನು ತೋರಿಸುವ ಮತ್ತು ನಿಮ್ಮ ದಿನನಿತ್ಯದ ಜೀವನವನ್ನು ಕ್ರಿಯಾತ್ಮಕವಾಗಿ ಮತ್ತು ಆಕರ್ಷಕವಾಗಿ ಕಾಣುವಂತೆ ಸ್ಥಳವನ್ನು ನೀವು ಸೃಷ್ಟಿಸಿಕೊಳ್ಳಬಹುದು.




ಸಂಬಂಧಿತ ಲೇಖನಗಳು



ಶಿಫಾರಸು ಮಾಡಿದ ವೀಡಿಯೊಗಳು





  ಮನೆ ಕನ್‌ಸ್ಟ್ರಕ್ಷನ್‌ಗಾಗಿ ಎಸ್ಟಿಮೇಟಿಂಗ್ ಟೂಲ್ಸ್


ವೆಚ್ಚ ಕ್ಯಾಲ್ಕುಲೇಟರ್

ಪ್ರತಿಯೊಬ್ಬ ಮನೆ ನಿರ್ಮಾಣ ಮಾಡುವವರು ತಮ್ಮ ಕನಸಿನ ಮನೆಯನ್ನು ನಿರ್ಮಿಸಲು ಬಯಸುತ್ತಾರೆ ಆದರೆ ಅದು ಅವರ ಬಜೆಟ್‌ ವೆಚ್ಚವನ್ನು ಮೀರದಂತೆ ಇರಿಸಿಕೊಳ್ಳಲು ಬಯಸುತ್ತಾರೆ. 

logo

ಇಎಂಐ ಕ್ಯಾಲ್ಕುಲೇಟರ್

ಮನೆ ನಿರ್ಮಾಣಕ್ಕೆ ಹಣಕಾಸು ಒದಗಿಸಿಕೊಳ್ಳುವ ಅತ್ಯುತ್ತಮ ಮಾರ್ಗಗಳಲ್ಲಿ ಮನೆ-ಸಾಲವನ್ನು ತೆಗೆದುಕೊಳ್ಳುವುದು ಒಂದಾಗಿರುತ್ತದೆ, ಆದರೆ ಮನೆಯನ್ನು ನಿರ್ಮಿಸುವವರು ಎಷ್ಟು ಕಂತುಗಳನ್ನು ಪಾವತಿಸಬೇಕೆಂದು ತಿಳಿಯಲು ಬಯಸುತ್ತಾರೆ. 

logo

ಪ್ರಾಡಕ್ಟ್ ಪ್ರೆಡಿಕ್ಟರ್

ಮನೆಯನ್ನು ನಿರ್ಮಿಸುವ ಆರಂಭಿಕ ಹಂತಗಳಲ್ಲಿ, ಮನೆ ನಿರ್ಮಿಸುವವರು ಸರಿಯಾದ ಉತ್ಪನ್ನಗಳನ್ನು ಆಯ್ಕೆ ಮಾಡುವುದು ಮುಖ್ಯವಾಗಿರುತ್ತದೆ. 

logo

ಅಂಗಡಿ ಪತ್ತೆಕಾರಕ

ಮನೆ ಕಟ್ಟುವವರಿಗೆ, ಮನೆಯ ಕಟ್ಟಡದ ಬಗ್ಗೆ ಎಲ್ಲಾ ಅಮೂಲ್ಯವಾದ ಮಾಹಿತಿಯನ್ನು ಪಡೆಯುವ ಸರಿಯಾದ ಅಂಗಡಿಯನ್ನು ಕಂಡುಹಿಡಿಯುವುದು ಮುಖ್ಯವಾಗಿದೆ.

logo

Loading....