ವಾಟರ್‌ಪ್ರೂಫಿಂಗ್‌ ವಿಧಾನಗಳು, ಮಾಡರ್ನ್‌ ಕಿಚನ್‌ ಡಿಸೈನ್ಸ್‌, ಹೋಮ್‌ಗಾಗಿ ವಾಸ್ತು ಸಲಹೆಗಳು, ಮನೆ ನಿರ್ಮಾಣ ವೆಚ್ಚ

ಸಂಪರ್ಕಲ್ಲಿರಿ

ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ

ಮಾನ್ಯವಾದ ವರ್ಗವನ್ನು ಆಯ್ಕೆಮಾಡಿ

ನಿಮ್ಮ ಉಪ-ವರ್ಗವನ್ನು ಆಯ್ಕೆ ಮಾಡಿ

acceptence

ಮುಂದುವರಿಯಲು ದಯವಿಟ್ಟು ಈ ಪೆಟ್ಟಿಗೆಯನ್ನು ಪರಿಶೀಲಿಸಿ



ಸೆಪ್ಟಿಕ್ ಟ್ಯಾಂಕ್ ವಾಸ್ತು: ಹೆಚ್ಚಿನ ಯೋಗಕ್ಷೇಮಕ್ಕಾಗಿ ಸೂಕ್ತ ಸ್ಥಾನದಲ್ಲಿ ಸೆಪ್ಟಿಕ್ ಟ್ಯಾಂಕ್ ನಿರ್ಮಿಸಲು ಮಾರ್ಗದರ್ಶಿ

ಧನಾತ್ಮಕ ಶಕ್ತಿ ಮತ್ತು ಯೋಗಕ್ಷೇಮಕ್ಕಾಗಿ ಸೂಕ್ತ ಜಾಗದಲ್ಲಿ ಸೆಪ್ಟಿಕ್ ಟ್ಯಾಂಕನ್ನು ಇರಿಸಲು ವಾಸ್ತು ನಿಯಮಗಳು ಹೇಗೆ ನಿಮಗೆ ಸಹಾಯ ಮಾಡುತ್ತವೆ ಎಂದು ಕಂಡುಕೊಳ್ಳಿ.

Share:


ಮುಖ್ಯಾಂಶಗಳು 

 

  •  ವಾಸ್ತು ಶಾಸ್ತ್ರದ ಅನುಸಾರ ಸರಿಯಾದ ಜಾಗದಲ್ಲಿ ಸೆಪ್ಟಿಕ್ ಟ್ಯಾಂಕ್ ನಿರ್ಮಾಣವು ಧನಾತ್ಮಕ ಶಕ್ತಿಯ ಹರಿವು ಮತ್ತು ಕುಟುಂಬದ ಸಮಗ್ರ ಯೋಗಕ್ಷೇಮಕ್ಕೆ ಕಾರಣವಾದರೆ ತಪ್ಪು ಜಾಗದಲ್ಲಿ ನಿರ್ಮಿಸುವುದರಿಂದ ಆರೋಗ್ಯ ಮತ್ತು ಆರ್ಥಿಕ ಸಮಸ್ಯೆಗಳು ಉಂಟಾಗಬಹುದು.
 
  • ವಾಯುವ್ಯ ಮತ್ತು ನೈಋತ್ಯದ ದಕ್ಷಿಣ ಭಾಗಗಳು ಸೂಕ್ತ ಶಕ್ತಿ ಪ್ರವಾಹದ ಜಾಗಗಳಾಗಿದ್ದು, ಈಶಾನ್ಯ ಮತ್ತು ವಾಯುವ್ಯ ಮೂಲೆಗಳು ಉತ್ತರಾಭಿಮುಖ ಮನೆಗಳಿಗೆ ಸೂಕ್ತವಾಗಿವೆ.
 
  • ಉತ್ತರ ಮತ್ತು ಪೂರ್ವದ ನಡುವಿನ ಭಾಗವಾದ ಈಶಾನ್ಯ ಮೂಲೆಯು ಪವಿತ್ರವೆಂದು ಪರಿಗಣಿಸಲ್ಪಟ್ಟಿದ್ದು ಇಲ್ಲಿ ಸೆಪ್ಟಿಕ್ ಟ್ಯಾಂಕನ್ನು ಇರಿಸುವುದು ಗಂಭೀರ ವಾಸ್ತು ದೋಷಕ್ಕೆ ಕಾರಣವಾಗಬಹುದು.
 
  • ಸೆಪ್ಟಿಕ್ ಟ್ಯಾಂಕಿನ ಗಾತ್ರವು ಬೆಡ್ರೂಮುಗಳ ಸಂಖ್ಯೆಯ ಮೇಲೆ ಅವಲಂಬಿತವಾಗಿದ್ದು, ನಿರ್ದಿಷ್ಟ ಶಿಫಾರಸಿಗೆ ಅನುಗುಣವಾಗಿ ನಿರ್ಮಿಸುವುದರಿಂದ ತ್ಯಾಜ್ಯ ನೀರಿನ ಸುಲಭ ನಿರ್ವಹಣೆಗೆ ಅನುಕೂಲವಾಗುತ್ತದೆ.


ವಾಸ್ತುಶಾಸ್ತ್ರವು ಲಭ್ಯ ಜಾಗದ ಒಳಗೆ ಶಕ್ತಿಯ ಹರಿವಿನ ಸಮನ್ವಯತೆಯನ್ನು ಒತ್ತಿ ಹೇಳುತ್ತದೆ. ಸೆಪ್ಟಿಕ್ ಟ್ಯಾಂಕನ್ನು ಸೂಕ್ತ ಜಾಗದಲ್ಲಿ ನಿರ್ಮಿಸುವುದರ ಬಗ್ಗೆ ವಾಸ್ತುಶಾಸ್ತ್ರವು ಅಮೂಲ್ಯ ಮಾಹಿತಿಗಳನ್ನು ಕೊಡುತ್ತದೆ. ಇದು ನಿಮ್ಮ ಮನೆಯ ಮತ್ತು ಮನೆಮಂದಿಯ ಯೋಗಕ್ಷೇಮವನ್ನು ಖಾತ್ರಿಗೊಳಿಸುತ್ತದೆ. ಸೆಪ್ಟಿಕ್ ಟ್ಯಾಂಕಿನ ದಿಕ್ಕು ಒಂದು ಸಣ್ಣ ವಿಷಯದಂತೆ ಕಂಡರೂ, ವಾಸ್ತು ಪ್ರಕಾರ ಇದು ಮನೆಯ ಸದಸ್ಯರ ಒಳಿತಿನ ಮೇಲೆ ಗಣನೀಯ ಪರಿಣಾಮ ಬೀರುತ್ತದೆ. ಸೆಪ್ಟಿಕ್ ಟ್ಯಾಂಕ್ ವಾಸ್ತುವಿನ ಬಗ್ಗೆ ತಿಳಿದುಕೊಳ್ಳುವುದರಿಂದ ನೀವು ಮನೆಯಲ್ಲಿ ಹೆಚ್ಚು ಸಮತೋಲಿತ ವಾತಾವರಣವನ್ನು ನಿರ್ಮಿಸಬಹುದು.

 

 


ಸೆಪ್ಟಿಕ್ ಟ್ಯಾಂಕನ್ನು ಸರಿಯಾದ ದಿಕ್ಕಿನಲ್ಲಿ ಇರಿಸುವುದರ ಪ್ರಾಮುಖ್ಯತೆ

 ವಾಸ್ತು ಪ್ರಕಾರ ಸೆಪ್ಟಿಕ್ ಟ್ಯಾಂಕಿನ ದಿಕ್ಕು ಬಹಳ ಮುಖ್ಯವಾದುದು ಏಕೆಂದರೆ ಸೆಪ್ಟಿಕ್ ಟ್ಯಾಂಕ್ ಋಣಾತ್ಮಕ ಶಕ್ತಿಯನ್ನು ಪಸರಿಸಬಲ್ಲ ತ್ಯಾಜ್ಯ ಮತ್ತು ದುರ್ಗಂಧಪೂರಿತ ವಸ್ತುಗಳನ್ನು ಹೊಂದಿರುತ್ತದೆ. ಇದನ್ನು ತಪ್ಪಾದ ದಿಕ್ಕಿನಲ್ಲಿ ನಿರ್ಮಿಸುವುದರಿಂದ ಮನೆಯೊಳಗೆ ಧನಾತ್ಮಕ ಶಕ್ತಿ ಪ್ರವೇಶಿಸಲು ತಡೆ ಉಂಟಾಗಬಹುದು, ಆ ಮೂಲಕ ಆರೋಗ್ಯ ಸಮಸ್ಯೆಗಳು, ಹಣಕಾಸಿನ ಅಡಚಣೆಗಳು ಉಂಟಾಗಬಹುದು ಮತ್ತು ಮನೆಯ ನೆಮ್ಮದಿಯ ಮೇಲೆ ಋಣಾತ್ಮಕ ಪರಿಣಾಮ ಉಂಟಾಗಬಹುದು. ಆದ್ದರಿಂದ ವಾಸ್ತು ಪ್ರಕಾರ ಸರಿಯಾದ ಕಡೆ ಸೆಪ್ಟಿಕ್ ಟ್ಯಾಂಕ್ ನಿರ್ಮಿಸುವುದರಿಂದ ಋಣಾತ್ಮಕ ಶಕ್ತಿಯ ನಿಯಂತ್ರಣ ಮತ್ತು ನಿವಾರಣೆಯಾಗಿ ಮನೆಗೆ ಅದರಿಂದ ತೊಂದರೆಯಾಗುವುದು ತಪ್ಪುತ್ತದೆ.

 

 ದಿಕ್ಕು 1: ವಾಯುವ್ಯ 

 ವಾಸ್ತು ಪ್ರಕಾರ ವಾಯುವ್ಯ ಮೂಲೆಯು ಸೆಪ್ಟಿಕ್ ಟ್ಯಾಂಕ್ ನಿರ್ಮಿಸಲು ಅತ್ಯುತ್ತಮ ಜಾಗವಾಗಿದೆ. ನಿಮ್ಮ ಮನೆ ಯಾವುದೇ ದಿಕ್ಕಿನಲ್ಲಿದ್ದರೂ ಸೂಕ್ತ ಶಕ್ತಿಯ ಹರಿವು ಮತ್ತು ಸಮನ್ವಯಕ್ಕಾಗಿ ಸೆಪ್ಟಿಕ್ ಟ್ಯಾಂಕನ್ನು ವಾಯುವ್ಯದಲ್ಲಿ ಇರಿಸುವುದು ಉತ್ತಮ.

 

 ದಿಕ್ಕು 2: ನೈಋತ್ಯದ ದಕ್ಷಿಣ ಭಾಗ 

 ನೈಋತ್ಯದ ದಕ್ಷಿಣ ಭಾಗವೂ ಮತ್ತೊಂದು ಆಯ್ಕೆಯಾಗಿದೆ. ವಾಸ್ತು ಪ್ರಕಾರ ಸೆಪ್ಟಿಕ್ ಟ್ಯಾಂಕನ್ನು ಅಳವಡಿಸಲು ಈ ದಿಕ್ಕನ್ನೂ ಪರಿಗಣಿಸಬಹುದು. ಈ ದಿಕ್ಕು ಮನೆಯ ಮೇಲೆ ಋಣಾತ್ಮಕ ಶಕ್ತಿಗಳ ಪರಿಣಾಮವನ್ನು ತಡೆಯಲು ಸಹಾಯ ಮಾಡುತ್ತದೆ.

 

 ದಿಕ್ಕು 3: ಈಶಾನ್ಯ ಅಥವಾ ವಾಯುವ್ಯ 

ಉತ್ತರಾಭಿಮುಖ ಮನೆಗಳ ಬಾಗಿಲಿನ ಸಮೀಪದಲ್ಲಿ ಸೆಪ್ಟಿಕ್ ಟ್ಯಾಂಕ್ ನಿರ್ಮಿಸುವುದು ಸೂಕ್ತವಲ್ಲ ಅದರ ಬದಲಾಗಿ ನೀವು ಈಶಾನ್ಯ ಅಥವಾ ಆಗ್ನೇಯ ಮೂಲೆಯಲ್ಲಿ ಸೂಕ್ತ ಜಾಗವನ್ನು ಹುಡುಕುವುದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿಯ ಹರಿವನ್ನು ಖಾತ್ರಿಗೊಳಿಸಬಹುದು. ಇದರಿಂದ ಸೆಪ್ಟಿಕ್ ಟ್ಯಾಂಕ್ ನಿರ್ಮಾಣಕ್ಕೆ ಸಂಬಂಧಿಸಿದ ವಾಸ್ತುದೋಷವನ್ನು ತಡೆಯಬಹುದು.

 

ದಿಕ್ಕು 4: ನಿಷಿದ್ಧ ದಿಕ್ಕು 

 ವಾಯುವ್ಯ ಮತ್ತು ನೈಋತ್ಯ ದಿಕ್ಕುಗಳು ಸೆಪ್ಟಿಕ್ ಟ್ಯಾಂಕಿಗೆ ಸೂಕ್ತ ದಿಕ್ಕುಗಳೆಂದು ವಾಸ್ತು ಪ್ರಕಾರ ಪರಿಗಣಿಸಲಾಗಿದ್ದರೆ, ಈಶಾನ್ಯದ ಪೂರ್ವ ಭಾಗವು ಸೆಪ್ಟಿಕ್ ಟ್ಯಾಂಕ್ ಕಟ್ಟಲು ಕಡ್ಡಾಯವಾಗಿ ನಿಷಿದ್ಧ ಜಾಗವಾಗಿದೆ. ಈ ಮೂಲೆಯು ’ಇಶಾನ್’ ಎಂದೂ ಹೆಸರಾಗಿದ್ದು, ಪವಿತ್ರವೆಂದು ಹೇಳಲಾಗುತ್ತದೆ. ಆದ್ದರಿಂದ ಈ ದಿಕ್ಕಿನಲ್ಲಿ ಸೆಪ್ಟಿಕ್ ಟ್ಯಾಂಕ್ ನಿರ್ಮಾಣ ಮಾಡಲೇಬಾರದು.



ವಾಸ್ತು ಪ್ರಕಾರ ಸೆಪ್ಟಿಕ್ ಟ್ಯಾಂಕಿನ ಗಾತ್ರ



ಬೇರೆ ಬೇರೆನೀರಿನ ಟ್ಯಾಂಕುಗಳು ಮನೆಯ ಗಾತ್ರಕ್ಕೆ ಅನುಗುಣವಾಗಿ ವಿವಿಧ ಗಾತ್ರವನ್ನು ಹೊಂದಿರುತ್ತವೆ. ಅದೇ ರೀತಿ ಸೆಪ್ಟಿಕ್ ಟ್ಯಾಂಕ್ ಗಾತ್ರವೂ ಮನೆಯಲ್ಲಿರುವ ಬೆಡ್ರೂಮುಗಳ ಸಂಖ್ಯೆಗೆ ಅನುಗುಣವಾಗಿ ನಿರ್ಧಾರವಾಗುತ್ತದೆ. ಮನೆಯ ಸೆಪ್ಟಿಕ್ ಟ್ಯಾಂಕ್ ಸರಿಯಾದ ತ್ಯಾಜ್ಯ ವಿಲೇವಾರಿಯ ನಿರ್ವಹಣೆ ಮತ್ತು ತ್ಯಾಜ್ಯ ನೀರಿನ ನಿರ್ವಹಣೆಗೆ ಅವಶ್ಯಕವಾಗಿದೆ. ಸೆಪ್ಟಿಕ್ ಟ್ಯಾಂಕನ್ನು ಸರಿಯಾದ ಅಳತೆ ಮತ್ತು ಆಕಾರದೊಂದಿಗೆ ಕಟ್ಟುವುದರಿಂದ ರಿಪೇರಿ ಕೆಲಸ ಮತ್ತು ನಿರ್ವಹಣೆ ಸುಲಭವಾಗುತ್ತದೆ. ಇದು ತ್ಯಾಜ್ಯ ನೀರಿನ ಸರಿಯಾದ ನಿರ್ವಹಣೆಯನ್ನೂ ಖಾತ್ರಿಗೊಳಿಸುತ್ತದೆ..

 

ಬೆಡ್ರೂಮುಗಳ ಸಂಖ್ಯೆ ಸೆಪ್ಟಿಕ್ ಟ್ಯಾಂಕ್ ವಶಪಡಿಸಿಕೊಂಡಿದ್ದಾರೆ
2ರ ತನಕ 3,000 ಲೀಟರ್
3 4,500 ಲೀಟರ್
4 6,500 ಲೀಟರ್
5 ಅಥವಾ ಹೆಚ್ಚು 7,500 ಲೀಟರ್ ಅಥವಾ ಹೆಚ್ಚು

 

ಸೆಪ್ಟಿಕ್ ಟ್ಯಾಂಕಿನ ಗಾತ್ರವು ಅದರ ದಿಕ್ಕಿನಷ್ಟೇ ಮುಖ್ಯವಾಗಿದ್ದು, ತಪ್ಪಾದ ಗಾತ್ರವು ವಾಸ್ತುದೋಷ ಮತ್ತು ಇತರ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಅಗತ್ಯಕ್ಕಿಂತ ದೊಡ್ಡ ಗಾತ್ರದ ಸೆಪ್ಟಿಕ್ ಟ್ಯಾಂಕ್ ಸಂಪನ್ಮೂಲಗಳ ನಷ್ಟಕ್ಕೆ ಕಾರಣವಾದರೆ ಸಣ್ಣ ಗಾತ್ರದ ಸೆಪ್ಟಿಕ್ ಟ್ಯಾಂಕ್ ಆರೋಗ್ಯ ಮತ್ತು ಆರ್ಥಿಕ ಸಮಸ್ಯೆಗಳನ್ನು ತರಬಹುದು.

 

 

ವಾಸ್ತು ಪ್ರಕಾರ ಸೆಪ್ಟಿಕ್ ಟ್ಯಾಂಕ್ ನಿರ್ಮಾಣದಲ್ಲಿ ಮಾಡಬೇಕಾದ ಮತ್ತು ಮಾಡಬಾರದ ಕೆಲಸಗಳು.



ಸೆಪ್ಟಿಕ್ ಟ್ಯಾಂಕ್ ವಾಸ್ತು ವಿಷಯದಲ್ಲಿ ಕೆಳಕಂಡ ವಿಷಯಗಳನ್ನು ಗಮನದಲ್ಲಿರಿಸಿಕೊಳ್ಳಬೇಕು.

 

ಮಾಡಬೇಕಾದ ಕಾರ್ಯಗಳು

  • ಸೆಪ್ಟಿಕ್ ಟ್ಯಾಂಕ್ ಮನೆಯ ಯಾವುದೇ ಗೋಡೆಯನ್ನು ಸ್ಪರ್ಶಿಸುತ್ತಿಲ್ಲವೆಂದು ಖಾತ್ರಿಗೊಳಿಸಿಕೊಳ್ಳಿ, ಏಕೆಂದರೆ ಇದು ಋಣಾತ್ಮಕ ಶಕ್ತಿಯನ್ನು ಪಸರಿಸಬಹುದು.
 
  • ಸೆಪ್ಟಿಕ್ ಟ್ಯಾಂಕಿನಿಂದ ಹೊರ ಹೋಗುವ ಪೈಪುಗಳನ್ನು ಉತ್ತರ ಅಥವಾ ಪಶ್ಚಿಮ ದಿಕ್ಕಿಗೆ ಇರಿಸಿ
 
  • ಸೆಪ್ಟಿಕ್ ಟ್ಯಾಂಕಿನ ಔಟ್ಲೆಟ್ಟನ್ನು ಪೂರ್ವ ಅಥವಾ ಪಶ್ಚಿಮ ದಿಕ್ಕಿಗೆ ಇರಿಸಿ
 
  • ಸೆಪ್ಟಿಕ್ ಟ್ಯಾಂಕ್ ಮತ್ತು ಗೋಡೆಯ ನಡುವೆ ಕನಿಷ್ಟ ಎರಡು ಅಡಿ ಅಂತರವನ್ನು ಕಾಯ್ದುಕೊಳ್ಳಿ.

 

ಇವುಗಳನ್ನು ಮಾಡಬಾರದು

  • ಸೆಪ್ಟಿಕ್ ಟ್ಯಾಂಕನ್ನು ಮುಖ್ಯದ್ವಾರಕ್ಕೆ ಎದುರಾಗಿ ಅಥವಾ ಬೋರ್ ವೆಲ್, ಅಂಡರ್ ಗ್ರೌಂಡ್ ಟ್ಯಾಂಕ್ ಮೊದಲಾದ ನೀರಿನ ಮೂಲಗಳಿಗೆ ಸಮೀಪದಲ್ಲಿ ಇಡಬೇಡಿ
 
  • ಸೆಪ್ಟಿಕ್ ಟ್ಯಾಂಕಿನ ಮೇಲ್ಭಾಗದಲ್ಲಿ ಅಡುಗೆಮನೆ, ಪೂಜಾಗೃಹ ಅಥವಾ ಮಲಗುವ ಕೋಣೆ ಇರದಂತೆ ನೋಡಿಕೊಳ್ಳಿ.
 
  • ಆಗ್ನೇಯ ಅಥವಾ ಈಶಾನ್ಯ ದಿಕ್ಕಿನಲ್ಲಿ ಸೆಪ್ಟಿಕ್ ಟ್ಯಾಂಕ್ ನಿರ್ಮಿಸಬೇಡಿ, ಇದರಿಂದ ತೀವ್ರ ವಾಸ್ತುದೋಷಗಳು ಉಂಟಾಗಿ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು
 
  • ಉತ್ತರ, ಈಶಾನ್ಯ ಅಥವಾ ಪೂರ್ವ ದಿಕ್ಕಿನಲ್ಲಿ ಸೆಪ್ಟಿಕ್ ಟ್ಯಾಂಕ್ ನಿರ್ಮಿಸಬೇಡಿ, ಇದರಿಂದ ಕುಟುಂಬಸ್ಥರ ಆರೋಗ್ಯ ಮತ್ತು ನೆಮ್ಮದಿಯ ಮೇಲೆ ಋಣಾತ್ಮಕ ಪರಿಣಾಮ ಉಂಟಾಗಬಹುದು.

 

ಸೆಪ್ಟಿಕ್ ಟ್ಯಾಂಕನ್ನು ವಾಸ್ತುವಿಗೆ ಅನುಗುಣವಾಗಿ ಸರಿಯಾದ ಕಡೆ ಇರಿಸುವುದರಿಂದ ಧನಾತ್ಮಕ ಶಕ್ತಿಯ ಹರಿವು ಉಂಟಾಗುವುದಲ್ಲದೆ ತ್ಯಾಜ್ಯನೀರಿನ ಸಮರ್ಥ ನಿರ್ವಹಣೆಯೂ ಆಗುವುದು.



 

ವಾಸ್ತು ನಿಯಮಗಳ ಅನುಸಾರ ಸೆಪ್ಟಿಕ್ ಟ್ಯಾಂಕನ್ನು ಸರಿಯಾದ ಗಾತ್ರ, ಜಾಗ ಮತ್ತು ದಿಕ್ಕಿನಲ್ಲಿ ನಿರ್ಮಿಸುವುದರಿಂದ ಮನೆಯಲ್ಲಿ ಸೌಹಾರ್ದ ವಾತಾವರಣ ಉಂಟಾಗುವುದಲ್ಲದೆ ಮನೆಮಂದಿಯ ಸಮಗ್ರ ಯೋಗಕ್ಷೇಮವೂ ವೃದ್ಧಿಸುವುದು. ಸೆಪ್ಟಿಕ್ ಟ್ಯಾಂಕಿನ ವಾಸ್ತು ನಿಯಮಗಳ ಸರಿಯಾದ ಅಳವಡಿಕೆಯಿಂದ ನೀವು ಆರೋಗ್ಯವಂತ, ಸಮೃದ್ಧ ಮತ್ತು ಸಮತೋಲಿತ ಮನೆಯನ್ನು ಹೊಂದಬಹುದು.




ಸಂಬಂಧಿತ ಲೇಖನಗಳು


ಶಿಫಾರಸು ಮಾಡಿದ ವೀಡಿಯೊಗಳು



ಮನೆ ಕನ್‌ಸ್ಟ್ರಕ್ಷನ್‌ಗಾಗಿ ಎಸ್ಟಿಮೇಟಿಂಗ್ ಟೂಲ್ಸ್


ವೆಚ್ಚ ಕ್ಯಾಲ್ಕುಲೇಟರ್

ಪ್ರತಿಯೊಬ್ಬ ಮನೆ ನಿರ್ಮಾಣ ಮಾಡುವವರು ತಮ್ಮ ಕನಸಿನ ಮನೆಯನ್ನು ನಿರ್ಮಿಸಲು ಬಯಸುತ್ತಾರೆ ಆದರೆ ಅದು ಅವರ ಬಜೆಟ್‌ ವೆಚ್ಚವನ್ನು ಮೀರದಂತೆ ಇರಿಸಿಕೊಳ್ಳಲು ಬಯಸುತ್ತಾರೆ. 

logo

ಇಎಂಐ ಕ್ಯಾಲ್ಕುಲೇಟರ್

ಮನೆ ನಿರ್ಮಾಣಕ್ಕೆ ಹಣಕಾಸು ಒದಗಿಸಿಕೊಳ್ಳುವ ಅತ್ಯುತ್ತಮ ಮಾರ್ಗಗಳಲ್ಲಿ ಮನೆ-ಸಾಲವನ್ನು ತೆಗೆದುಕೊಳ್ಳುವುದು ಒಂದಾಗಿರುತ್ತದೆ, ಆದರೆ ಮನೆಯನ್ನು ನಿರ್ಮಿಸುವವರು ಎಷ್ಟು ಕಂತುಗಳನ್ನು ಪಾವತಿಸಬೇಕೆಂದು ತಿಳಿಯಲು ಬಯಸುತ್ತಾರೆ. 

logo

ಪ್ರಾಡಕ್ಟ್ ಪ್ರೆಡಿಕ್ಟರ್

ಮನೆಯನ್ನು ನಿರ್ಮಿಸುವ ಆರಂಭಿಕ ಹಂತಗಳಲ್ಲಿ, ಮನೆ ನಿರ್ಮಿಸುವವರು ಸರಿಯಾದ ಉತ್ಪನ್ನಗಳನ್ನು ಆಯ್ಕೆ ಮಾಡುವುದು ಮುಖ್ಯವಾಗಿರುತ್ತದೆ. 

logo

ಅಂಗಡಿ ಪತ್ತೆಕಾರಕ

ಮನೆ ಕಟ್ಟುವವರಿಗೆ, ಮನೆಯ ಕಟ್ಟಡದ ಬಗ್ಗೆ ಎಲ್ಲಾ ಅಮೂಲ್ಯವಾದ ಮಾಹಿತಿಯನ್ನು ಪಡೆಯುವ ಸರಿಯಾದ ಅಂಗಡಿಯನ್ನು ಕಂಡುಹಿಡಿಯುವುದು ಮುಖ್ಯವಾಗಿದೆ.

logo

Loading....