Share:
Home Building Guide
Our Products
Useful Tools
Waterproofing methods, Modern kitchen designs, Vaastu tips for home, Home Construction cost
Share:
ಕಾಂಕ್ರೀಟ್ ಮತ್ತು ಸಿಮೆಂಟ್ ನಡುವಿನ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳುವಲ್ಲಿನ ಮೊದಲ ಭಾಗವು ಸಿಮೆಂಟ್ ಎಂದರೇನು ಎಂಬುದನ್ನು ಅರ್ಥಮಾಡಿಕೊಳ್ಳುವುದಾಗಿದೆ. ಸಿಮೆಂಟ್, ತನ್ನ ಒಟ್ಟಿಗೆ ಬಂಧಿಸುವ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದ್ದು, ಕಲ್ಲುಗಳು, ಇಟ್ಟಿಗೆಗಳು ಮತ್ತು ಹೆಂಚುಗಳಂತಹ ವಿವಿಧ ಕಟ್ಟಡ ಘಟಕಗಳಿಗೆ ಅಂಟಿಕೊಳ್ಳಲು ಸಾಧ್ಯವಾಗಿಸುವ ಒಂದು ಪ್ರಮುಖ ನಿರ್ಮಾಣ ಸಾಮಗ್ರಿವಾಗಿದೆ. ಇದು ಪ್ರಾಥಮಿಕವಾಗಿ (ಕ್ಯಾಲ್ಸಿಯಂ ಸಮೃದ್ಧ) ಸುಣ್ಣದಕಲ್ಲು, ಸಿಲಿಕಾ-ಸಮೃದ್ಧ ಮರಳು ಅಥವಾ ಜೇಡಿಮಣ್ಣಿನಂತಹ ಪದಾರ್ಥಗಳು, ಬಾಕ್ಸೈಟ್, ಕಬ್ಬಿಣದ ಅದಿರು, ಮತ್ತು ಕೆಲವೊಮ್ಮೆ ಚಿಪ್ಪುಗಳು, ಸೀಮೆಸುಣ್ಣ, ಬಳಪ ಮತ್ತು ಶೇಲ್ನಂತಹ ಹೆಚ್ಚುವರಿ ಅಂಶಗಳನ್ನು ಒಳಗೊಂಡಿರುವ ನುಣ್ಣಗೆ ರುಬ್ಬಲಾದ ಕಚ್ಚಾ ಪದಾರ್ಥಗಳನ್ನು ಒಳಗೊಂಡಿರುತ್ತದೆ.
ಉತ್ಪಾದನಾ ಪ್ರಕ್ರಿಯೆಯು ಈ ಪದಾರ್ಥಗಳನ್ನು ಉನ್ನತ ತಾಪಮಾನಗಳಿಗೆ ಒಳಪಡಿಸಿ ಅದರ ಪರಿಣಾಮವಾಗಿ ಒಂದು ಘನೀಕೃತ ವಸ್ತುವಾಗಿ ಉತ್ಪತ್ತಿಯಾಗುವಂತೆ ಸಿಮೆಂಟ್ ಸ್ಥಾವರಗಳಲ್ಲಿ ಸಂಸ್ಕರಿಸುವುದನ್ನು ಒಳಗೊಂಡಿರುತ್ತದೆ. ಈ ಗಟ್ಟಿಗೊಂಡ ಸಾಮಗ್ರಿಯನ್ನು ವಾಣಿಜ್ಯಿಕ ವಿತರಣೆಗಾಗಿ ನುಣ್ಣನೆ ಪುಡಿಯಾಗಿವಂತೆ ಅರೆಯಲಾಗುತ್ತದೆ. ನೀರಿನೊಂದಿಗೆ ಬೆರೆಸಿದಾಗ, ಸಿಮೆಂಟ್ ರಾಸಾಯನಿಕ ಕ್ರಿಯೆಗೆ ಒಳಗಾಗಗಿ ಕಾಲಾಂತರದಲ್ಲಿ ಘನೀಕರಿಸುವ ಪೇಸ್ಟ್ ಅನ್ನು ರೂಪಿಸುತ್ತದೆ ಹೀಗೆ ಅದು ಪರಿಣಾಮಕಾರಿಯಾಗಿ ಬೇರೆಬೇರೆ ಕಟ್ಟಡ ಸಾಮಗ್ರಿಗಳನ್ನು ಒಂದಕ್ಕೊಂದು ಬಂಧಿಸುತ್ತದೆ.
ಕಾಂಕ್ರೀಟ್ ಮತ್ತು ಸಿಮೆಂಟ್ ನಡುವಿನ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳುವಾಗ, ಸಿಮೆಂಟ್ ರಚನೆಗಳಿಗೆ ಶಕ್ತಿ ಮತ್ತು ಬಾಳಿಕೆ ಒದಗಿಸುವ ಸಾಮರ್ಥ್ಯವನ್ನು ಒಳಗೊಂಡಂತೆ ಹಲವಾರು ಪ್ರಯೋಜನಗಳನ್ನು ನೀಡುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ವಿವಿಧ ನಿರ್ಮಾಣ ಬಳಕೆಗಳಲ್ಲಿನ ಅದರ ಬಹುಪಯೋಗಿತೆ ಮತ್ತು ಬೆಂಕಿ ಮತ್ತು ವಿಪರೀತ ತಾಪಮಾನಗಳ ಪ್ರತಿ ಅದರ ಪ್ರತಿರೋಧವು ಕಟ್ಟಡಗಳು, ರಸ್ತೆಗಳು, ಸೇತುವೆಗಳು ಮತ್ತು ನಮ್ಮ ಆಧುನಿಕ ಪ್ರಪಂಚದ ಬೆನ್ನೆಲುಬಾಗಿರುವ ಅಸಂಖ್ಯಾತ ಇತರ ಕಟ್ಟಡರಚನೆಗಳನ್ನು ನಿರ್ಮಿಸುವಲ್ಲಿ ಅದನ್ನು ಅನಿವಾರ್ಯವಾಗಿಸುತ್ತದೆ.
ಸಿಮೆಂಟ್ ಉಪಯುಕ್ತತೆಯ ಗುಟ್ಟು ನೀರಿನೊಂದಿಗೆ ಪ್ರತಿಕ್ರಿಯಿಸುವ ಅದರ ಸಾಮರ್ಥ್ಯದಲ್ಲಡಗಿದೆ. ನೀರಿನೊಂದಿಗೆ ಬೆರೆಸಿದಾಗ, ಸಿಮೆಂಟ್ ಇತರ ಸಾಮಗ್ರಿಗಳನ್ನು ಒಟ್ಟಿಗೆ ಜೋಡಿಸುವ ಒಂದು ಪೇಸ್ಟ್ ಅನ್ನು ರೂಪಿಸುತ್ತದೆ. ಈ ಪೇಸ್ಟು ಕಾಲಾಂತರದಲ್ಲಿ ಮರಳು ಮತ್ತು ಕಡಿ ಮುಂತಾದ ಅಗ್ರಿಗೇಟ್‌ಗಳನ್ನು ಕಾಂಕ್ರೀಟ್ ಎಂದು ಕರೆಯಲಾಗುವ ಒಂದು ಸಂಯುಕ್ತವಾಗಿ ಬಂಧಿಸುವಂತೆ ಗಟ್ಟಿಗೊಂಡು ಒಂದು ಘನಗಟ್ಟಿ ದ್ರವ್ಯರಾಶಿಯಾಗಿ ರೂಪಾಂತರಗೊಳ್ಳುತ್ತದೆ.
ಕಾಂಕ್ರೀಟ್ ಮತ್ತು ಸಿಮೆಂಟ್ ನಡುವಿನ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳುವಾಗ, ಕಾಂಕ್ರೀಟ್ ಎಂದರೆ ಸಿಮೆಂಟ್, ಮರಳು, ಕಾದಿ ಮತ್ತು ನೀರಿನ ಮಿಶ್ರಣದಿಂದ ಮಾಡಲಾದ ಒಂದು ಸಂಯೋಜಿತ ವಸ್ತುವಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಅವಶ್ಯಕ. ಅದರ ಸದೃಢತೆ, ಬಾಳಿಕೆ ಮತ್ತು ಬಹುಪಯೋಗಿತೆಯಿಂದಾಗಿ ಇದು ಹೆಚ್ಚು ವ್ಯಾಪಕವಾಗಿ ಬಳಸಲಾಗುವ ನಿರ್ಮಾಣ ಸಾಮಗ್ರಿಗಳಲ್ಲಿ ಒಂದಾಗಿದೆ. ಕಾಂಕ್ರೀಟ್, ರಾಚನಿಕ ಹೊರೆಗಳನ್ನು ತಡೆದುಕೊಳ್ಳುವ ಅದರ ಸಾಮರ್ಥ್ಯ, ಅದರ ಬೆಂಕಿಯ ಪ್ರತಿ ಪ್ರತಿರೋಧಕತೆ, ಅದರ ಕಡಿಮೆ ನಿರ್ವಹಣೆ ಅಗತ್ಯತೆಗಳು ಮತ್ತು ಅದರ ದೀರ್ಘಾಬಾಳಿಕೆಯ ಜೀವಿತಾವಧಿಯು ಸೇರಿದಂತೆ ಹಲವಾರು ಪ್ರಯೋಜನಗಳನ್ನು ನೀಡುತ್ತದೆ.
ಇದು ರಸ್ತೆ ಮತ್ತು ಸಾಗರೀಯ ನಿರ್ಮಾಣಗಳು, ಕಟ್ಟಡಗಳು, ಮೂಲಸೌಕರ್ಯ, ಅಲಂಕಾರಿಕ ಅಂಶಗಳು ಮತ್ತು ಸಾರಿಗೆಯಲ್ಲಿ ವಿಭಿನ್ನ ಅನ್ವಯಿಕೆಗಳನ್ನು ಹೊಂದಿದೆ.
ಕಾಂಕ್ರೀಟ್ ಮತ್ತು ಸಿಮೆಂಟ್ ನಡುವಿನ ಪ್ರಮುಖ ವ್ಯತ್ಯಾಸವು ಅವುಗಳ ಸಂಯೋಜನೆಯಲ್ಲಿದೆ. ಸಿಮೆಂಟ್ ಕಾಂಕ್ರೀಟ್‌ನ ಮುಖ್ಯ ಅಂಶವಾಗಿದ್ದು ಸುಣ್ಣದ ಕಲ್ಲು, ಜೇಡಿಮಣ್ಣು, ಚಿಪ್ಪುಗಳು ಮತ್ತು ಸಿಲಿಕಾ ಮರಳಿನ ಸಂಯೋಜನೆಯಿಂದ ತಯಾರಿಸಲ್ಪಟ್ಟಿರುತ್ತದೆ. ಈ ವಸ್ತುಗಳನ್ನು ನುಣ್ಣಗೆ ಅರೆದು ಉನ್ನತ ತಾಪಮಾನದಲ್ಲಿ ಬಿಸಿಮಾಡಿ ಪುಡಿಯನ್ನು ರೂಪಿಸಲಾಗಿರುತ್ತದೆ. ಅದೇ ಮತ್ತೊಂದೆಡೆ, ಕಾಂಕ್ರೀಟ್ ಎಂಬುದು ಸಿಮೆಂಟ್, ಅಗ್ರಿಗೇಟ್‌ಗಳು (ಮರಳು ಮತ್ತು ಜಲ್ಲಿಕಲ್ಲು) ಮತ್ತು ನೀರಿನ ಮಿಶ್ರಣದಿಂದ ತಯಾರಿಸಲಾದ ಒಂದು ಸಂಯೋಜಿತ ವಸ್ತುವಾಗಿದೆ. ಕಾಂಕ್ರೀಟ್ ಮತ್ತು ಸಿಮೆಂಟ್ ನಡುವಿನ ಪ್ರಮುಖ ವ್ಯತ್ಯಾಸಗಳಲ್ಲಿ ಇದು ಒಂದಾಗಿದೆ.
ಈ ವಸ್ತುಗಳ ಕಾರ್ಯವಿಧಾನವು ಕಾಂಕ್ರೀಟ್ ಮತ್ತು ಸಿಮೆಂಟ್ ನಡುವಿನ ಪ್ರಮುಖ ವ್ಯತ್ಯಾಸಗಳಲ್ಲೊಂದಾಗಿದೆ. ಸಿಮೆಂಟ್ ಅನ್ನು ನೀರಿನೊಂದಿಗೆ ಬೆರೆಸಿ ಪೇಸ್ಟ್ ಅನ್ನು ರೂಪಿಸಲಾಗುತ್ತದೆ, ಇದು ಅಗ್ರಿಗೇಟ್‌ಗಳನ್ನು ಒಟ್ಟಿಗೆ ಹಿಡಿದಿಟ್ಟುಕೊಳ್ಳುವ ಬೈಂಡರ್ ಆಗಿ ಕಾರ್ಯನಿರ್ವಹಿಸುತ್ತದೆ. ಸಿಮೆಂಟ್ ಮತ್ತು ನೀರಿನ ನಡುವೆ ಉಂಟಾಗುವ ಹೈಡ್ರೇಶನ್ ಎಂದು ಕರೆಯಲ್ಪಡುವ ಪ್ರತಿಕ್ರಿಯೆಯು ಪೇಸ್ಟ್ ಅನ್ನು ಗಟ್ಟಿಗೊಂಡು ಘನ ರಚನೆಯನ್ನು ಸೃಷ್ಟಿಸುವಂತೆ ಮಾಡಲು ಕಾರಣವಾಗುತ್ತದೆ. ಕಾಲಾನಂತರದಲ್ಲಿ, ಕಾಂಕ್ರೀಟ್ ಮಿಶ್ರಣವು ಕಠಿಣ ಮತ್ತು ಬಾಳಿಕೆ ಬರುವಂತೆ ಆಗುತ್ತದೆ.
ಕಾಂಕ್ರೀಟ್ ಮತ್ತು ಸಿಮೆಂಟ್ ನಡುವಿನ ಮತ್ತೊಂದು ವ್ಯತ್ಯಾಸವು ಅವುಗಳ ಬಳಕೆಯಲ್ಲಿನ ವ್ಯತ್ಯಾಸದಲ್ಲಡಗಿದೆ. ಸಿಮೆಂಟ್ ಅನ್ನು ಪ್ರಾಥಮಿಕವಾಗಿ ಕಾಂಕ್ರೀಟ್ ಉತ್ಪಾದನೆಯಲ್ಲಿ ಬಳಸಲಾಗುತ್ತದೆ, ಇದು ನಿರ್ಮಾಣ ಉದ್ಯಮದಲ್ಲಿ ಹಲವಾರು ಅನ್ವಯಿಕೆಗಳನ್ನು ಹೊಂದಿದೆ. ಕಾಂಕ್ರೀಟ್ ಅನ್ನು ಸಾಮಾನ್ಯವಾಗಿ ಬುನಾದಿ, ಗೋಡೆಗಳು, ಮಹಡಿಗಳು, ರಸ್ತೆಗಳು, ಸೇತುವೆಗಳು ಮತ್ತು ಇತರ ರಚನೆಗಳನ್ನು ನಿರ್ಮಿಸಲು ಬಳಸಲಾಗುತ್ತದೆ. ಸಿಮೆಂಟ್ ಅನ್ನು ಇಟ್ಟಿಗೆಗಳು, ಕಲ್ಲುಗಳು ಮತ್ತು ಹೆಂಚುಗಳಿಗೆ ಬಾಂಡಿಂಗ್ ಏಜೆಂಟ್ ಆಗಿ ಗಾರೆಯ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಇದನ್ನು ಮಣ್ಣಿನ ಸ್ಥಿರೀಕರಣಕ್ಕಾಗಿ ಮತ್ತು ನಿರ್ಮಾಣ ದುರಸ್ತಿಗಾಗಿ ಬಳಸಬಹುದು.
ಅಂತಿಮವಾಗಿ, ಕಾಂಕ್ರೀಟ್ ಮತ್ತು ಸಿಮೆಂಟ್ ನಡುವಿನ ವ್ಯತ್ಯಾಸವು ಅವುಗಳಲ್ಲಿನ ವಿಧಗಳಲ್ಲಿಯೂ ಇರುತ್ತದೆ. ಸಿಮೆಂಟ್‌ನಲ್ಲಿನ ವಿಧಗಳಲ್ಲಿ ನಿರ್ಮಾಣದಲ್ಲಿ ಬಳಸಲಾಗುವ ಪೋರ್ಟ್ಲ್ಯಾಂಡ್ ಸಿಮೆಂಟ್, ಬ್ಲೆಂಡೆಡ್ ಸಿಮೆಂಟ್, ವಾಸ್ತುಶಿಲ್ಪದ ಯೋಜನೆಗಳಲ್ಲಿ ಬಳಸುವ ಬಿಳಿ ಸಿಮೆಂಟ್ ಮತ್ತು ಅಣೆಕಟ್ಟುಗಳು ಮತ್ತು ಅಡಿಪಾಯಗಳಿಗೆ ಬಳಸಲಾಗುವ ಕಡಿಮೆ ಶಾಖದ ಸಿಮೆಂಟ್‌ಗಳು ಸೇರಿವೆ. ಕಾಂಕ್ರೀಟ್‌ನಲ್ಲಿನ ವಿಧಗಳು ಲೈಮ್ ಕಾಂಕ್ರೀಟ್, ಸಿಮೆಂಟ್ ಕಾಂಕ್ರೀಟ್ ಮತ್ತು ರಿಇನ್ಫೋರ್ಸ್ಡ್ ಸಿಮೆಂಟ್ ಕಾಂಕ್ರೀಟ್‌ಗಳು ಸೇರಿವೆ. ಈ ವಿಧಗಳು ಅವುಗಳಲ್ಲಿನ ಸಾಮಗ್ರಿಗಳು ಮತ್ತು ಉದ್ದೇಶದಲ್ಲಿ ಭಿನ್ನವಾಗಿರುತ್ತವೆ.
ಸಂಕ್ಷಿಪ್ತವಾಗಿ ಹೇಳುವುದಾದರೆ, ಸಿಮೆಂಟ್ ಮತ್ತು ಕಾಂಕ್ರೀಟ್‌ಗಳು ಎರಡು ವಿಭಿನ್ನ ಆದರೆ ನಿಕಟವಾಗಿ ಸಂಬಂಧ ಹೊಂದಿರುವ ನಿರ್ಮಾಣ ಸಾಮಗ್ರಿಗಳಾಗಿವೆ. ಸಿಮೆಂಟ್ ಸಾಮಗ್ರಿಗಳನ್ನು ಒಟ್ಟಿಗೆ ಬಂಧಿಸುತ್ತದೆ, ಆದರೆ ಕಾಂಕ್ರೀಟ್ ಸಿಮೆಂಟ್, ಅಗ್ರಿಗೇಟ್‌ಗಳು ಮತ್ತು ನೀರನ್ನು ಸಂಯೋಜಿಸುತ್ತದೆ. ಕಾಂಕ್ರೀಟ್ ಬಹುಪಯೋಗಿಯಾಗಿದೆ ಅದನ್ನು ಬುನಾದಿಗಳು, ಗೋಡೆಗಳು, ರಸ್ತೆಗಳು ಮತ್ತು ಇನ್ನೂ ಹಲವೆಡೆಗಳಲ್ಲಿ ಬಳಸಲಾಗುತ್ತದೆ. ಸಿಮೆಂಟ್‌ನ ವಿಧಗಳು ಪೋರ್ಟ್ಲ್ಯಾಂಡ್, ಬ್ಲೆಂಡೆಡ್, ಬಿಳಿ, ಕ್ಷಿಪ್ರವಾಗಿ ಗಟ್ಟಿಯಾಗುವ ಮತ್ತು ಕಡಿಮೆ ಶಾಖದ ಸಿಮೆಂಟ್ಗಳನ್ನು ಒಳಗೊಂಡಿವೆ. ಕಾಂಕ್ರೀಟ್ ಮತ್ತು ಸಿಮೆಂಟ್ ನಡುವಿನ ಈ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳುವುದು ಭವಿಷ್ಯದ ಕಟ್ಟಡ ನಿರ್ಮಾಣ ಸಂಬಂಧಿ ನಿರ್ಧಾರಗಳನ್ನು ಮಾಡುವಾಗ ಅನುಕೂಲಕ್ಕೆ ಬರುತ್ತದೆ.