Share:
Home Building Guide
Our Products
Useful Tools
Waterproofing methods, Modern kitchen designs, Vaastu tips for home, Home Construction cost
Share:
ಬಾತ್ರೂಮ್ ಹಾಗೂ ಟಾಯ್ಲೆಟ್ಗಳಿಗಾಗಿ ವಾಸ್ತು ವಿಚಾರಕ್ಕೆ ಬಂದಾಗ, ಮನಸ್ಸಿನಲ್ಲಿಟ್ಟುಕೊಂಡು ಪರಿಗಣಿಸಬೇಕಾದ ಹಲವಾರು ಪ್ರಮುಖ ವಿಷಯಗಳಿವೆ. ಈ ಜಾಗಗಳನ್ನು ವಾಸ್ತು-ಪ್ರಕಾರ ಮಾಡಲು ಕೆಲವು ಉಪಯುಕ್ತ ಸಲಹೆಗಳನ್ನು ಅನ್ವೇಷಿಸೋಣ:
ಬಾತ್ರೂಮ್ ಬಾಗಿಲಿನ ಸ್ಥಾನವು ವಾಸ್ತುವಿನಲ್ಲಿ ನಿರ್ಣಾಯಕವಾಗಿದೆ. ಬಾತ್ರೂಮ್ನ ಬಾಗಿಲು ಉತ್ತರ, ಪೂರ್ವ ಅಥವಾ ಈಶಾನ್ಯ ದಿಕ್ಕಿನಲ್ಲಿರುವುದು ಒಳ್ಳೆಯದು. ಈ ರೀತಿ ಮಾಡುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಜೊತೆಗೆ ಈ ರೀತಿ ಮಾಡುವುದರಿಂದ ಮನೆಯೊಳಗೆ ಪಾಸಿಟಿವ್ ಎನರ್ಜಿ ಬರುವಂತೆ ಮಾಡಲು ಸಹಾಯ ಮಾಡುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ, ಬಾತ್ರೂಮ್ ಬಾಗಿಲನ್ನು ನೈಋತ್ಯ ಅಥವಾ ವಾಯುವ್ಯ ದಿಕ್ಕಿನಲ್ಲಿ ಇಡುವುದನ್ನು ತಪ್ಪಿಸಿ. ಇದು ಎನರ್ಜಿಯು ಸಮತೋಲನವನ್ನು ತೊಂದರೆಗೊಳಿಸುತ್ತದೆ ಎಂದು ನಂಬಲಾಗಿದೆ.
ಟಾಯ್ಲೆಟ್ ಸೀಟ್ ಯಾವ ದಿಕ್ಕಿನಲ್ಲಿ ಮುಖ ಮಾಡಿದೆ ಎಂಬುದು ವಾಸ್ತುವಿನಲ್ಲಿ ಮಹತ್ವದ್ದಾಗಿದೆ. ತಾತ್ತ್ವಿಕವಾಗಿ, ಟಾಯ್ಲೆಟ್ ಸೀಟ್ ಉತ್ತರ ಅಥವಾ ದಕ್ಷಿಣ ದಿಕ್ಕಿನತ್ತ ಮುಖ ಮಾಡಿರಬೇಕು. ಈ ರೀತಿ ಮಾಡುವುದರಿಂದ ಬಾತ್ರೂಮ್ನಿಂದ ನೆಗೆಟಿವ್ ಎನರ್ಜಿಯನ್ನು ಹೊರಹಾಕುತ್ತದೆ ಎಂದು ನಂಬಲಾಗಿದೆ. ಟಾಯ್ಲೆಟ್ ಸೀಟ್ ಪೂರ್ವ ಅಥವಾ ಪಶ್ಚಿಮಕ್ಕೆ ಮುಖ ಮಾಡುವುದನ್ನು ತಪ್ಪಿಸಿ, ಏಕೆಂದರೆ ಇದು ನೆಗೆಟಿವ್ ಪ್ರಭಾವ ಬೀರುವುದನ್ನು ಆಹ್ವಾನಿಸುತ್ತದೆ ಎಂದು ಭಾವಿಸಲಾಗಿದೆ.
ನಿಮ್ಮ ಬಾತ್ರೂಮ್ ಮತ್ತು ಟಾಯ್ಲೆಟ್ಗೆ ಸರಿಯಾದ ಬಣ್ಣಗಳನ್ನು ಆಯ್ಕೆ ಮಾಡುವುದು ವಾಸ್ತು ಪ್ರಕಾರ ಅತ್ಯಗತ್ಯ. ನೆಮ್ಮದಿಯ ವಾತಾವರಣ ಉಂಟಾಗುವಂತೆ ಮಾಡಲು ಹಿತವಾದ ಮತ್ತು ತಿಳಿಯಾದ ಬಣ್ಣಗಳನ್ನು ಆರಿಸಿಕೊಳ್ಳಿ. ವಾಸ್ತು ತತ್ವಗಳ ಪ್ರಕಾರ ಬಿಳಿ, ತಿಳಿ ನೀಲಿ ಮತ್ತು ನೀಲಿಬಣ್ಣದ ಷೇಡ್ನಂತಹ ಬಣ್ಣಗಳನ್ನು ಅನುಕೂಲಕರವೆಂದು ಪರಿಗಣಿಸಲಾಗುತ್ತದೆ. ಈ ಬಣ್ಣಗಳು ನೈರ್ಮಲ್ಯದ ಪ್ರಜ್ಞೆಯನ್ನು ಹೆಚ್ಚಿಸುವುದರೊಂದಿಗೆ ಪಾಸಿಟಿವ್ ವಾತಾವರಣವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತವೆ.
ಕಾರ್ಯಕ್ಷಮತೆ ಮತ್ತು ವಾಸ್ತು ಪಾಲನೆ ಎರಡಕ್ಕೂ ಸಮರ್ಥ ಒಳಚರಂಡಿ ವ್ಯವಸ್ಥೆಯು ಅತ್ಯಗತ್ಯವಾಗಿದೆ. ನಿಮ್ಮ ಬಾತ್ರೂಮ್ ಮತ್ತು ಟಾಯ್ಲೆಟ್ಗಳು ನೀರು ಸಾರಾಗವಾಗಿ ಹರಿದು ಹೋಗುವಂತೆ ಉತ್ತಮ ವಿನ್ಯಾಸದ ಒಳಚರಂಡಿ ವ್ಯವಸ್ಥೆಯನ್ನು ಹೊಂದಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿರಿ. ಸಮರ್ಪಕವಾದ ಒಳಚರಂಡಿಯು ನೀರು ನಿಲ್ಲದಂತೆ ಹರಿದು ಹೋಗಲು ಸಹಾಯ ಮಾಡುತ್ತದೆ. ಇಂತಹ ನೀರು ನೆಗೆಟಿವ್ ಎನರ್ಜಿಯನ್ನು ಒಳಗೊಂಡಿರುತ್ತದೆ.
ಕಾರ್ಯಕ್ಷಮತೆ ಮತ್ತು ವಾಸ್ತು ಪಾಲನೆ ಎರಡಕ್ಕೂ ಸಮರ್ಥ ಒಳಚರಂಡಿ ವ್ಯವಸ್ಥೆಯು ಅತ್ಯಗತ್ಯವಾಗಿದೆ. ನಿಮ್ಮ ಬಾತ್ರೂಮ್ ಮತ್ತು ಟಾಯ್ಲೆಟ್ಗಳು ನೀರು ಸಾರಾಗವಾಗಿ ಹರಿದು ಹೋಗುವಂತೆ ಉತ್ತಮ ವಿನ್ಯಾಸದ ಒಳಚರಂಡಿ ವ್ಯವಸ್ಥೆಯನ್ನು ಹೊಂದಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿರಿ. ಸಮರ್ಪಕವಾದ ಒಳಚರಂಡಿಯು ನೀರು ನಿಲ್ಲದಂತೆ ಹರಿದು ಹೋಗಲು ಸಹಾಯ ಮಾಡುತ್ತದೆ. ಇಂತಹ ನೀರು ನೆಗೆಟಿವ್ ಎನರ್ಜಿಯನ್ನು ಒಳಗೊಂಡಿರುತ್ತದೆ.
ಬಾತ್ರೂಮ್ನಲ್ಲಿ ಬಳಸುವ ಮತ್ತು ಉಪಯೋಗಿಸುವ ವಸ್ತುಗಳನ್ನು ಜೋಡಿಸುವಾಗ, ಬಾತ್ರೂಮ್ನಲ್ಲಿ ಹಾಕುವ ಸಿಂಕ್ ಅಥವಾ ವಾಶ್ ಬೇಸಿನ್ ಅನ್ನು ಈಶಾನ್ಯ ಅಥವಾ ಉತ್ತರ ದಿಕ್ಕಿನಲ್ಲಿ ಅಳವಡಿಸಲು ವಾಸ್ತು ಪ್ರಕಾರ ಸಲಹೆ ನೀಡಲಾಗುತ್ತದೆ. ಈ ರೀತಿ ಅಳವಡಿಕೆ ಮಾಡುವುದು ಪಾಸಿಟಿವ್ ಎನರ್ಜಿಯನ್ನು ಮತ್ತು ಸಮೃದ್ಧಿಯನ್ನು ಸೆಳೆಯುತ್ತದೆ ಎಂದು ನಂಬಲಾಗಿದೆ. ಅದರೊಂದಿಗೆ, ದೈನಂದಿನ ದಿನಚರಿಗಳಲ್ಲಿ ಪಾಸಿಟಿವ್ ಎನರ್ಜಿಯ ಒಳಗೆ ಬರುವುದನ್ನು ಹೆಚ್ಚಿಸಲು ಪೂರ್ವ ಅಥವಾ ಈಶಾನ್ಯ ದಿಕ್ಕಿನಲ್ಲಿ ಶವರ್ ಅಥವಾ ಸ್ನಾನಕ್ಕೆ ಜಾಗವನ್ನು ಬಿಡಬೇಕು
ವಾಸ್ತು ಪ್ರಕಾರ ವಾಶ್ ಬೇಸಿನ್ ಮತ್ತು ಶವರ್‌ಗಳ ನಿಯೋಜನೆಯನ್ನು ಮಾಡುವುದು ಪ್ರಮುಖ್ಯತೆಯನ್ನು ಪಡೆದುಕೊಂಡಿದೆ. ವಾಶ್ ಬೇಸಿನ್ ಅನ್ನು ನಿರ್ಧಿಷ್ಟವಾಗಿ ಈಶಾನ್ಯ ಅಥವಾ ಉತ್ತರ ದಿಕ್ಕಿನಲ್ಲಿ ಅಳವಡಿಸಬೇಕು, ಇದು ಸಾಮರಸ್ಯ ಮತ್ತು ಲವಲವಿಕೆಯ ಕೊಡುಗೆ ನೀಡುತ್ತದೆ. ಅದೇ ರೀತಿ, ಶವರ್ ಅನ್ನು ಪೂರ್ವ ಅಥವಾ ಈಶಾನ್ಯ ದಿಕ್ಕಿನಲ್ಲಿ ಅಳವಡಿಸುವುದರಿಂದ ಬಾತ್ರೂಮ್ ಒಳಗೆ ಸಮಗ್ರವಾಗಿ ಎನರ್ಜಿಯನ್ನು ಹೆಚ್ಚಿಸುತ್ತದೆ.
ಸಾಕಷ್ಟು ಗಾಳಿ ಬೆಳಕು ಬಾತ್ರೂಮ್ ಒಳಗೆ ಅಗತ್ಯವಾಗಿ ಬರುವಂತಿರಬೇಕು. ಸಹಜ ಬೆಳಕು ಮತ್ತು ತಾಜಾ ಗಾಳಿಯು ಒಳಬರುವಂತೆ ಮಾಡಲು ಕಿಟಕಿಗಳನ್ನು ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ಅಳವಡಿಸಬೇಕು. ಈ ನಿಲುವುಗಳನ್ನು ವಾಸ್ತುವಿನಲ್ಲಿ ಅನುಕೂಲಕರವೆಂದು ಪರಿಗಣಿಸಲಾಗುತ್ತದೆ. ಏಕೆಂದರೆ ಅವುಗಳು ಪಾಸಿಟಿವ್ ಮತ್ತು ಗಾಳಿ-ಬೆಳಕು ಉತ್ತಮವಾಗಿ ಇರುವಂತಹ ಬಾತ್ರೂಮ್ ಪರಿಸರವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ, ದಕ್ಷಿಣ ಅಥವಾ ನೈಋತ್ಯ ದಿಕ್ಕುಗಳಲ್ಲಿ ಕಿಟಕಿಗಳನ್ನು ಅಳವಡಿಸುವುದನ್ನು ತಪ್ಪಿಸಿ.
ನಿಮ್ಮ ಬಾತ್ರೂಮ್ನಲ್ಲಿ ನೀವು ಬಾತ್ಟಬ್ ಅನ್ನು ಇಟ್ಟಿದ್ದರೆ, ಅದನ್ನು ಪಶ್ಚಿಮ, ದಕ್ಷಿಣ ಅಥವಾ ನೈಋತ್ಯ ದಿಕ್ಕಿನಲ್ಲಿ ಇಡಬೇಕು. ಈ ರೀತಿ ಮಾಡುವುದರಿಂದ ವಾಸ್ತು ತತ್ವಗಳೊಂದಿಗೆ ಹೊಂದಿಕೆಯಾಗುತ್ತವೆ ಮತ್ತು ಬಾತ್ರೂಮ್ ಒಳಗೆ ಸಮತೋಲಿತ ಎನರ್ಜಿಯ ಹರಿವನ್ನು ಸೃಷ್ಟಿಸುತ್ತವೆ ಎಂದು ನಂಬಲಾಗಿದೆ. ಈಶಾನ್ಯ ಮೂಲೆಯಲ್ಲಿ ಬಾತ್ಟಬ್ ಅನ್ನು ಇಡಬಾರದು, ಏಕೆಂದರೆ ಇದು ವಾಸ್ತು ಹೊಂದಾಣಿಕೆಗೆ ಅಡ್ಡಿಪಡಿಸಬಹುದು.
ಇದರ ಹೊರತಾಗಿ, ಬಾತ್ರೂಮ್ನ ನೈಋತ್ಯ ಅಥವಾ ವಾಯುವ್ಯ ದಿಕ್ಕಿನಲ್ಲಿ ವಾಶಿಂಗ್ ಮಷಿನ್ ಇಡುವುದು, ಉತ್ತಮ ಎನರ್ಜಿಗಾಗಿ ಕನ್ನಡಿಗಳನ್ನು ಹಾಕುವುದು ಮತ್ತು ಬಾತ್ರೂಮ್ನಲ್ಲಿ ಆಗ್ನೇಯ ಭಾಗಕ್ಕೆ ವಿದ್ಯುತ್ ಉಪಕರಣಗಳನ್ನು ಜೋಡಿಸುವುದು, ಇಂತಹ ಮುಂತಾದ ಬೇರೆ ಬೇರೆ ಸಲಹೆಗಳಿವೆ.
ಬಾತ್ರೂಮ್ ಮತ್ತು ಟಾಯ್ಲೆಟ್ಗಾಗಿ ವಾಸ್ತುವನ್ನು ಅಳವಡಿಸಿಕೊಳ್ಳುವುದರಿಂದ ಹೊಂದಾಣಿಕೆ ಮತ್ತು ಸ್ವಚ್ಛತೆಯಿಂದ ಕೂಡದ ವಾಸಸ್ಥಳವನ್ನು ಮಾಡಿಕೊಳ್ಳಬಹುದು. ಬಾಗಿಲಿನ ಸ್ಥಾನದಿಂದ ಹಿಡಿದು ಬಣ್ಣಗಳು ಮತ್ತು ಫಿಕ್ಚರ್‌ಗಳ ಆಯ್ಕೆಯವರೆಗೆ, ಪ್ರತಿಯೊಂದು ಅಂಶವು ಒಟ್ಟಾರೆ ವಾಸ್ತು ಪ್ರಕಾರ ಇರಲು ಕೊಡುಗೆ ನೀಡುತ್ತದೆ. ಅದು ಕನ್ನಡಿಯನ್ನು ಹಾಕುವುದಾಗಿರಲಿ, ಹೇರ್ ಡ್ರೈಯರ್ ಅನ್ನು ಬಳಸುವುದಾಗಿರಲಿ ಅಥವಾ ನಿಮ್ಮ ಬಾತ್ ಟಬ್‌ಗಾಗಿ ಜಾಗೆಯನ್ನು ಆಯ್ಕೆಮಾಡುವುದು, ಇದಾವುದೇ ಇರಲಿ. ಈ ಎಲ್ಲದಕ್ಕಾಗಿ ವಾಸ್ತು ಶಾಸ್ತ್ರದ ಬಗ್ಗೆ ಚೆನ್ನಾಗಿ ತಿಳಿದಿರುವ ವೃತ್ತಿಪರರನ್ನು ಸಂಪರ್ಕಿಸುವುದು ಒಳ್ಳೆಯದು. ಈ ಬ್ಲಾಗ್‌ನಲ್ಲಿ ತಿಳಿಸಲಾದ ಬಾತ್ರೂಮ್ ಮತ್ತು ಟಾಯ್ಲೆಟ್ ಸಲಹೆಗಳಿಗಾಗಿ ವಾಸ್ತುವನ್ನು ಅನುಸರಿಸುವ ಮೂಲಕ, ನೀವು ಪಾಸಿಟಿವ್ ಎನರ್ಜಿಯು ಒಳಗೆ ಬರುವುದನ್ನು ಹೆಚ್ಚಿಸಬಹುದು. ಮತ್ತು ನಿಮ್ಮ ಬಾತ್ರೂಮ್ನಲ್ಲಿ ಪ್ರಶಾಂತ ಮತ್ತು ತಾರುಣ್ಯ ತರುವ ವಾತಾವರಣವನ್ನು ಸೃಷ್ಟಿಬಹುದು.