ಪದೇ ಪದೇ ಕೇಳಲಾಗುವ ಪ್ರಶ್ನೆಗಳು
1. ನಿಮ್ಮ ಗೋಡೆಗಳಲ್ಲಿ ನೀರು ತೂರಿಕೊಂಡರೆ ಏನಾಗುತ್ತದೆ?
ಗೋಡೆಗಳಲ್ಲಿನ ನೀರು ಶಿಲೀಂಧ್ರ ಬೆಳವಣಿಗೆ, ಕಟ್ಟಡದ ರಾಚನಿಕ ಸಮಸ್ಯೆಗಳು ಮತ್ತು ಆಸ್ತಿ ಮೌಲ್ಯದಲ್ಲಿ ಕುಸಿತದಂತಹ ವಿವಿಧ ಹಾನಿಗಳಿಗೆ ಕಾರಣವಾಗಬಹುದು. ಇದು ಇನ್ಸುಲೇಷನ್, ವಾಲ್‌ಪೇಪರ್ ಮತ್ತು ಪೇಂಟ್ ಅನ್ನು ಹಾಳುಮಾಡುತ್ತದೆ ಮತ್ತು ಅಹಿತಕರ ವಾಸನೆಗಳಿಗೆ ಕಾರಣವಾಗಬಹುದು.
2. ಯಾವ ಸಿಮೆಂಟ್ ನೀರಿನ ಸೋರಿಕೆಯನ್ನು ತಡೆಯಬಲ್ಲದು?
ವಾಟರ್‌ಪೂಫಿಂಗ್ ಸಿಮೆಂಟ್ ನೀರು ಸೋರಿಕೆಯನ್ನು ನಿಲ್ಲಿಸುವಲ್ಲಿ ಪರಿಣಾಮಕಾರಿಯಾಗಿದೆ. ಇದನ್ನು ನೀರಿನ ನುಸುಳುವಿಕೆಯನ್ನು ಪ್ರತಿರೋಧಿಸಲು ಹಾಗೂ ಆಮೂಲಕ ನೀರಿನ ಹಾನಿಯಿಂದ ರಚನೆಗಳನ್ನು ರಕ್ಷಿಸಲೆಂದೇ ರೂಪಿಸಲಾಗಿದೆ, . ಈ ಸಿಮೆಂಟ್‌ಗಳು ಬಿರುಕುಗಳು ಮತ್ತು ಸೀಳುಗಳನ್ನು ಮುಚ್ಚಲು ಸಹಾಯ ಮಾಡುವ ಮೂಲಕ ಕಟ್ಟಡದ ವಾಟರ್‌ಪೂಫಿಂಗ್ ಅನ್ನು ವರ್ಧಿಸುತ್ತವೆ.
3. ನೀರಿನ ಸೋರಿಕೆ ದುರಸ್ತಿಗೆ ಎಷ್ಟು ಸಮಯ ತೆಗೆದುಕೊಳ್ಳುತ್ತದೆ?
ಸೋರಿಕೆ ಎಷ್ಟು ಕೆಟ್ಟದಾಗಿದೆ ಎಂಬುದಕ್ಕೆ ಮತ್ತು ಅಗತ್ಯವಿರುವ ನಿರ್ದಿಷ್ಟ ದುರಸ್ತಿಗೆ ಅನುಗುಣವಾಗಿ ದುರಸ್ತಿ ಸಮಯವು ಒಂದೆರಡು ಗಂಟೆಗಳಿಂದ ಹಿಡಿದು ಕೆಲವು ದಿನಗಳವರೆಗೆ ಇರುತ್ತದೆ. ಸಣ್ಣ ಸೋರಿಕೆಗಳನ್ನು ಸರಿಪಡಿಸಲು ಕೆಲವು ಗಂಟೆಗಳು ತೆಗೆದುಕೊಳ್ಳಬಹುದು, ಆದರೆ ಅಧಿಕ ಸಂಕೀರ್ಣ ಸಮಸ್ಯೆಗಳಿಗೆ ಹಾನಿಯ ಪ್ರಮಾಣವನ್ನು ಅವಲಂಬಿಸಿ ಹಲವಾರು ದಿನಗಳು ಬೇಕಾಗಬಹುದು.
4. ನಾವು ಸೋರುವ ಹೆಂಚುಗಳಿಗೆ ವಾಟರ್‌ಪೂಫಿಂಗ್ ಮಾಡಬಹುದೇ?
ಹೌದು, ವಾಟರ್‌ಪೂಫಿಂಗ್ ಪದರವನ್ನು ರೂಪಿಸಲು ಹೆಂಚುಗಳಿಗೆ ವಿಶೇಷ ಸೀಲಾಂಟ್‌ಗಳನ್ನು ಅನ್ವಯಿಸಬಹುದು ಅದು ಸೋರಿಕೆ ಸಂಭವಿಸುವುದನ್ನು ತಡೆಯುತ್ತದೆ. ಈ ಸೀಲರ್‌ಗಳನ್ನು ಅನ್ವಯಿಸುವುದು ರಕ್ಷಣಾತ್ಮಕ ಪದರವನ್ನು ರಚಿಸಲು ಸಹಾಯ ಮಾಡುತ್ತದೆ ಮತ್ತದು ಹೆಂಚುಗಳ ಮೂಲಕ ನೀರು ಬಸಿಯುವುದನ್ನು ತಡೆಯುತ್ತದೆ.
5. ನೀರು ಸೋರಿಕೆಯನ್ನು ದುರಸ್ತಿಗೊಳಿಸಿದ ನಂತರ ನಾವು ಪೇಯಿಂಟ್ ಹಚ್ಚಬಹುದೇ?
ಹೌದು, ನೀರು ಸೋರಿಕೆ ದುರಸ್ತಿ ಪೂರ್ಣಗೊಂಡ ನಂತರ ಮತ್ತು ಮೇಲ್ಮೈಗಳು ಸರಿಯಾಗಿ ಒಣಗಿದ ನಂತರ, ನೀವು ಅದಕ್ಕೆ ಪೇಯಿಂಟ್ ಹಚ್ಚಬಹುದು. ಆದರೆ, ತೇವಾಂಶ ಅಥವಾ ಜವಳು ಪೀಡಿತ ಪ್ರದೇಶಗಳಿಗೆ ನಿರ್ದಿಷ್ಟವಾಗಿ ವಿನ್ಯಾಸಗೊಳಿಸಲಾದ ಪೇಯಿಂಟ್‌ಗಳನ್ನು ಆಯ್ಕೆ ಮಾಡುವಂತೆ ಸಲಹೆ ನೀಡಲಾಗುತ್ತದೆ.
6. ಗೋಡೆಗಳಲ್ಲಿನ ತೇವಾಂಶವನ್ನು ಪರಿಶೀಲಿಸುವುದು ಹೇಗೆ?
ಜವಳು ತೇಪೆಗಳು, ಬಣ್ಣಗೆಡುವಿಕೆ ಮತ್ತು ಬಣ್ಣ ಸಿಪ್ಪೆಸುಲಿಯುವಿಕೆಗಳಂತಹ ಗೋಚರ ಚಿಹ್ನೆಗಳು ತೇವಾಂಶ-ಸಂಬಂಧಿತ ಸಮಸ್ಯೆಗಳನ್ನು ಸೂಚಿಸಬಹುದು. ಹೆಚ್ಚುವರಿಯಾಗಿ, ಮಾಯಿಸ್ಚರ್ ಮೀಟರ್‌ಗಳು ಮತ್ತು ಇನ್ಫ್ರಾರೆಡ್ ಕ್ಯಾಮೆರಾಗಳು ಗೋಡೆಗಳಲ್ಲಿನ ತೇವಾಂಶವನ್ನು ಪತ್ತೆಹಚ್ಚಲು ಪರಿಣಾಮಕಾರಿ ಸಾಧನಗಳಾಗಿವೆ.