Share:
Home Building Guide
Our Products
Useful Tools
Waterproofing methods, Modern kitchen designs, Vaastu tips for home, Home Construction cost
Share:
ಕಾಂಕ್ರೀಟ್ ಸಿದ್ಧಪಡಿಸಲು ಎಷ್ಟು ಪ್ರಮಾಣದ ಸಿಮೆಂಟ್‌ಗೆ ನೀರನ್ನು ಯಾವ ಪ್ರಮಾಣದಲ್ಲಿ ಸೇರಿಸಲಾಗಿದೆ ಎಂಬುದರ ಅನುಪಾತ. ನೀರು ಮತ್ತು ಸಿಮೆಂಟ್‌ನ ಅನುಪಾತ ನೇರವಾಗಿ ಕಾಂಕ್ರೀಟ್‌ನ ದೃಢತೆ ಮತ್ತು ಎಷ್ಚು ಕಾಲ ಅದು ಬಾಳಿಕೆ ಬರಲಿದೆ ಎಂದು ತೀರ್ಮಾನಿಸುತ್ತದೆ. ವಿವಿಧ ರೀತಿಯ ಶ್ರೇಣಿಗಳ ಕಾಂಕ್ರೀಟ್‌ಗೆ ಸಾಮಾನ್ಯವಾಗಿ ನೀರು ಮತ್ತು ಸಿಮೆಂಟ್ ಮಿಶ್ರಣ 0.40ರಿಂದ 0.60ರ ನಡುವೆ ಇರುತ್ತದೆ.
ಸಿಮೆಂಟ್ ಮತ್ತು ನೀರಿನ ಅನುಪಾತ ಕಾಂಕ್ರೀಟ್ ಮಿಶ್ರಣದ ಶಕ್ತಿಯನ್ನು ನಿರ್ಧರಿಸುತ್ತದೆ. ಅದುವೇ ಪ್ರಧಾನವಾಗಿರುವ ಅಂಶ.
ಕಾಂಕ್ರೀಟ್‌ನ ದೃಢತೆ ಮತ್ತು ಬಾಳಿಕೆಯನ್ನು ನಿಗದಿ ಮಾಡುವ ಪ್ರಧಾನ ಅಂಶವೇ ನೀರು ಮತ್ತು ಸಿಮೆಂಟ್ ನ ಅನುಪಾತ. ಅದು ಸರಿಯಾದ ರೀತಿಯಲ್ಲಿ ಒಣಗಿದ ನಂತರ ಅದರ ಫಲಿತಾಂಶ ಗೊತ್ತಾಗುತ್ತದೆ. ಉದಾಹರಣೆಗೆ ನೀರು ಮತ್ತು ಸಿಮೆಂಟ್ ನ ಅನುಪಾತ 0.40 ಆಗಿದ್ದರೆ, ಪ್ರತಿ 50 ಕೆಜಿ ಸಿಮೆಂಟ್ (ಒಂದು ಚೀಲ) ಅನ್ನು 20 ಲೀಟರ್ ನೀರಿನ ಜತೆಗೆ ಸೇರಿಸಿ ಮಿಶ್ರ ಮಾಡಲಾಗಿದೆ ಎಂದು ತಿಳಿದುಕೊಳ್ಳಬೇಕು.
ನೀರು ಮತ್ತು ಸಿಮೆಂಟ್ ಅನುಪಾತ = ನೀರಿನ ತೂಕ
ಸಿಮೆಂಟ್‌ನ ಭಾರ
ಉದಾಹರಣೆಗೆ ಕಾಂಕ್ರೀಟ್ ಸಿದ್ಧಪಡಿಸಲು ನೀರು ಮತ್ತು ಸಿಮೆಂಟ್ ಅನ್ನು 0.50 ಅನುಪಾತದಲ್ಲಿ ಸೇರಿಸಲಾಗಿದೆ ಎಂದರೆ ಅಲ್ಲಿ 50 ಕೆಜಿ ಸಿಮೆಂಟ್ ಬಳಕೆ ಮಾಡಲಾಗಿದೆ ಎಂದು ತಿಳಿಯಬೇಕು (ಅದು ಒಂದು ಚೀಲ ಸಿಮೆಂಟ್ ನ ತೂಕ)
ಕಾಂಕ್ರೀಟ್ ಸಿದ್ಧಪಡಿಸಲು ಬೇಕಾದ ನೀರಿನ ಪ್ರಮಾಣ:
ನೀರು / ಸಿಮೆಂಟ್ = 0.50
ನೀರು / 50 ಕೆಜಿ = 0.50
ನೀರು = 0.50 x 50 = 25 ಲೀಟರ್.
ಅದೇ ರೀತಿ ನೀರು / ಸಿಮೆಂಟ್ = 0.40
ನೀರು = 0.40 x 50
ನೀರು = 20 ಲೀಟರ್ ಗಳು
ಸಿಮೆಂಟ್‌ಗೆ ನೀರು ಸೇರಿಸುವ ಪ್ರಮಾಣದ ಕಡಿಮೆ ಮಾಡಿದಾಗ ನೀರು-ಸಿಮೆಂಟ್ ಅನುಪಾತ ನೀರಿನ ಅನುಪಾತ ಸಹಜವಾಗಿಯೇ ತಗ್ಗುತ್ತದೆ. ಕಾಂಕ್ರೀಟ್‌ನಲ್ಲಿ ನೀರಿನ ಪ್ರಮಾಣ ಕಡಿಮೆಯಾದಾಗ ಅದರ ಒಟ್ಟಾರೆ ಶಕ್ತಿ ವೃದ್ಧಿಯಾಗುತ್ತದೆ. ಆದರೆ, ನೀರು ಮತ್ತು ಸಿಮೆಂಟ್ ನ ಅನುಪಾತದ ಮೇಲೆ ಕೆಲವು ಮಿತಿಗಳಿವೆ. ಕನಿಷ್ಠ ಪ್ರಮಾಣದ ನೀರು ಸಿಮೆಂಟ್ ಅನುಪಾತದ ಪ್ರಮಾಣ 0.30-0.35, ಅದಕ್ಕಿಂತ ಹೆಚ್ಚಾದರೆ ಕಾಂಕ್ರೀಟ್ ತುಂಬಾ ಗಟ್ಟಿಯಾಗಿ, ಅದನ್ನು ಬೇಕಾದಂತೆ ಬಳಕೆ ಮಾಡಲು ಅಸಾಧ್ಯವಾಗಬಹುದು.
ನೀರು ಮತ್ತು ಸಿಮೆಂಟ್‌ನ ಅನುಪಾತವನ್ನು ಪರೀಕ್ಷಿಸುವುದು ಹೇಗೆ?
ಮನೆ ನಿರ್ಮಾಣದ ಸಂದರ್ಭದಲ್ಲಿ ಕಾಂಕ್ರೀಟ್‌ನಲ್ಲಿ ನೀರು ಮತ್ತು ಸಿಮೆಂಟ್ ನಡುವಿನ ಅನುಪಾತ ಸರಿಯಾಗಿದೆಯೇ ಇಲ್ಲವೇ ಎಂಬುದನ್ನು ಹೀಗೆ ಪರೀಕ್ಷೆ ಮಾಡಲು ಸಾಧ್ಯವಿದೆ :
ಗುತ್ತಿಗೆದಾರರು ನೀರಿನ ಪ್ರಮಾಣವನ್ನು ನಿಯಂತ್ರಿಸುವುದು ಹೇಗೆ ಎಂದು ತಿಳಿಯಲು ಸರಳ ಮತ್ತು ಪ್ರಾಯೋಗಿಕ ವಿಧಾನವನ್ನು ಇಲ್ಲಿ ವಿವರಿಸಲಾಗಿದೆ.
ಈ ಪರೀಕ್ಷೆಯನ್ನು ನಡೆಸುವುದಕ್ಕಾಗಿ 30 ಸೆಮೀ ಎತ್ತರ ಮತ್ತು ಕೆಳಗಿನ ಭಾಗದಲ್ಲಿ 20 ಸೆಮೀ ಸುತ್ತಳತೆ ಇರುವ ಸ್ಟೀಲ್ ನ ಇಳಿಜಾರಿನ ಆಕಾರ ಇರುವ ಶಂಕುವನ್ನು ಬಳಕೆ ಮಾಡಬೇಕು. ಅಂದ ಹಾಗೆ ಅದರ ಮೇಲ್ಭಾಗ 10 ಸೆಮೀ ಇರಬೇಕು. ಅದರಲ್ಲಿ ಒಂದು ಬಾರಿಗೆ 7.5 ಸೆಮೀ ವರೆಗೆ ಕಾಂಕ್ರೀಟ್ ತುಂಬಬೇಕು. ಪ್ರತಿ ಹಂತವನ್ನೂ ಲೋಹದ ಸಲಿಕೆಯಿಂದ 25 ಬಾರಿ ಬಡಿಯಬೇಕು. ಅದು 16 ಮಿಮೀ ಅಗಲ, 60 ಸೆಮೀ ಉದ್ದ ಇರಬೇಕು. ಇಳಿಜಾರಿನ ಆಕಾರ ಇರುವ ಶಂಕು ತುಂಬಿದ ಬಳಿಕ ಅದನ್ನು ಎತ್ತಲಾಗುತ್ತದೆ. ಈ ಸಂದರ್ಭದಲ್ಲಿ ಹೆಚ್ಚುವರಿಯಾಗಿ ಇರುವ ಕಾಂಕ್ರೀಟ್ ಬೀಳುತ್ತದೆ. ಶಂಕುವನ್ನು ತೆಗೆದ ಬಳಿಕ ಅದನ್ನು ಮೇಲ್ಭಾಗದಿಂದ ಕಾಂಕ್ರೀಟ್ ವರೆಗೆ ಅಳೆಯಲಾಗುತ್ತದೆ.
ಸಾಮಾನ್ಯವಾಗಿ ಇರುವ ಹೆಚ್ಚುವರಿ ಕಾಂಕ್ರೀಟ್‌ನ ಮೌಲ್ಯವನ್ನು ಬೇರೆ ಬೇರೆ ಉಪಯೋಗಗಳಿಗೆ ಬಳಕೆ ಮಾಡಲಾಗುತ್ತದೆ. ಪ್ರತಿ ಹಂತದಲ್ಲಿಯೂ ಹೊಸತಾಗಿ ಹಾಕಿದ ಕಾಂಕ್ರೀಟ್ ಪ್ರಮಾಣವನ್ನು ಅನುಸರಿಸಿಕೊಂಡು ಅದನ್ನು ಅಳೆಯಲಾಗುತ್ತದೆ. ಸಣ್ಣ ಪ್ರಮಾಣದಲ್ಲಿ ಬಲವನ್ನು ಪ್ರಯೋಗಿಸಿದಾಗ ಅಗತ್ಯಕ್ಕಿಂತ ಹೆಚ್ಚಾಗಿ ಇರುವ ಕಾಂಕ್ರೀಟ್ ಅನ್ನು ತೆಗೆಯಬೇಕಾಗುತ್ತದೆ.
ಹೆಚ್ಚಿನ ಪ್ರಮಾಣದ ಕಾಂಕ್ರೀಟ್ ಮತ್ತು ರಸ್ತೆ ಕಾಮಗಾರಿ : 2.5 ರಿಂದ 5 ಸೆಮೀ
ಸಾಮಾನ್ಯವಾಗಿರುವ ಬೀಮ್ ಗಳು ಮತ್ತು ಸ್ಲ್ಯಾಬ್ ಗಳು : 5 ರಿಂದ 10 ಸೆಮೀ
ಸ್ತಂಭಗಳು, ಲಂಬವಾಗಿರುವ ವಿಭಾಗಗಳು
ಮತ್ತು ತಡೆಗೋಡೆಗಳು ಇತ್ಯಾದಿ: 7.5 ರಿಂದ 12.5 ಸೆಮೀ
ಇದನ್ನೂ ಓದಿ: ಕಾಂಕ್ರೀಟ್ ಮತ್ತು ಅವುಗಳ ವಿಧಗಳು
1. ನೀರು ಮತ್ತು ಸಿಮೆಂಟ್‌ನ ಅನುಪಾತದ ಪ್ರಮಾಣ ದೃಢತೆಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ ?
ಕಡಿಮೆ ಪ್ರಮಾಣದಲ್ಲಿ ಸಿಮೆಂಟ್ ಮತ್ತು ನೀರಿನ ಸೇರ್ಪಡೆಯ ಅನುಪಾತದಿಂದಾಗಿ ಕೆಲವು ವಾಯ ರಂಧ್ರಗಳನ್ನು ಹೊಂದಿ ಕಾಂಕ್ರೀಟ್ ಹೆಚ್ಚಿನ ರೀತಿಯಲ್ಲಿ ಶಕ್ತಿಯನ್ನು ಹೊಂದುವಂತೆ ಮಾಡುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ನೀರು ಇರುವುದರಿಂದ ಕಾಂಕ್ರೀಟ್‌ನ ಒಟ್ಟಾರೆ ದೃಢತೆಯನ್ನು ತಗ್ಗಿಸುತ್ತದೆ. ಏಕೆಂದರೆ ಅದು ಸಿಮೆಂಟ್ ನ ನಡುವೆ ಇರುವ ಅಂತರವನ್ನು ಹೆಚ್ಚಿಸುತ್ತದೆ.
2. ಕಡಿಮೆ ಪ್ರಮಾಣದಲ್ಲಿ ನೀರು ಮತ್ತು ಸಿಮೆಂಟ್ ಅನುಪಾತದ ಅನುಕೂಲಗಳೇನು ?
ನೀರು ಮತ್ತು ಸಿಮೆಂಟ್‌ನ ಅನುಪಾತವು ಕಡಿಮೆಯಾಯಿತು ಎಂದಾದರೆ ಕಾಂಕ್ರೀಟ್‌ನಲ್ಲಿ ಬಿರುಕು ಉಂಟಾಗುವ ಪ್ರಮಾಣ ಮತ್ತು ಕುಗ್ಗಿ ಹೋಗುವುದು ಕಡಿಮೆಯಾಗುತ್ತದೆ.
3. ಕಾಂಕ್ರೀಟ್‌ನಲ್ಲಿ ನೀರು ಮತ್ತು ಸಿಮೆಂಟ್‌ನ ಅನುಪಾತವನ್ನು ತಗ್ಗಿಸುವುದು ಹೇಗೆ?
ಸಿಮೆಂಟ್ ಪ್ರಮಾಣವನ್ನು ಕಡಿಮೆ ಮಾಡಬೇಕು ಎಂದಾದರೆ ಮೊದಲಿಗೆ ನೀರಿನ ಪ್ರಮಾಣವನ್ನು ಇಳಿಕೆ ಮಾಡಬೇಕು. ಅದಕ್ಕಾಗಿ ಮಿಶ್ರಣವನ್ನು ಬಳಕೆ ಮಾಡಿ ಹಾರು ಬೂದಿ ಸೇರಿಸಬೇಕು ಅಥವಾ ಉತ್ತಮವಾಗಿರುವ ವಸ್ತುವನ್ನು ಸಾಧ್ಯವಾಗಲಿದೆ.