ನೀರಿನ ಉತ್ಪತ್ತಿ ಹಾಗೂ ಕಾರ್ಯಕ್ಷಮತೆ ಮೇಲೆ ಪರಿಣಾಮ ಬೀರುವಂತಹ ಹಲವಾರು ಸಮಸ್ಯೆಗಳನ್ನು ಕೊಳವೆಬಾವಿಗಳು ಎದುರಿಸಬಹುದು. ಇಲ್ಲಿ ಅಂತಹ ಕೆಲವು ಸಾಮಾನ್ಯ ಸಮಸ್ಯೆಗಳನ್ನು ನೋಡೋಣ:
1. ಜಲ ಸಂಪನ್ಮೂಲದ ಸ್ಥಿತಿ:
ಕಾಲಕಳೆದಂತೆ ಅಂತರ್ಜಲದ ಗುಣಮಟ್ಟ ಹಾಗೂ ಪ್ರಮಾಣವು ಬದಲಾಗಬಹುದು. ಜಲಕ್ಷಾಮ, ಪರಿಸರ ಮಾಲಿನ್ಯ ಅಥವಾ ಜಲಚರಗಳ ಸವೆತವು ಕೊಳವೆಬಾವಿಯ ನೀರಿನ ಲಭ್ಯತೆಯ ಮೇಲೆ ಪರಿಣಾಮ ಬೀರಬಹುದು. ಹೀಗಾಗಿ ನೀರಿನ ಸಂಪನ್ಮೂಲವನ್ನು ಸರಿಯಾಗಿ ನಿರ್ವಹಿಸುವ ಕುರಿತು ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು. ಆ ಮೂಲಕ ಉದ್ಭವಿಸಬಹುದಾದ ಯಾವುದೇ ಸಮಸ್ಯೆಗಳನ್ನು ಪರಿಹರಿಸಲು ಸೂಕ್ತ ಕ್ರಮಗಳನ್ನು ನಾವು ತೆಗೆದುಕೊಳ್ಳುವುದು ಅಗತ್ಯವಾಗಿದೆ .
2. ನೀರಿನ ಉತ್ಪತ್ತಿಯಲ್ಲಿ ಕೊರತೆ:
ಕೊಳವೆಬಾವಿಗಳು ಕೆಲವೊಂದು ಸಲ ಸಾಕಷ್ಟು ಪ್ರಮಾಣದ ನೀರನ್ನು ಒದಗಿಸುವುದಿಲ್ಲ. ನೀರಿನ ಸೆಲೆಯು ಕಡಿಮೆಯಾಗುವುದು, ಸೆಲೆಯ ರಂದ್ರಗಳು ಮುಚ್ಚಿಹೋಗುವುದು ಅಥವಾ ಅಂತರ್ಜಲದ ಮರುಪೂರಣದ ಕೊರತೆಯಿಂದ ಇದು ಉಂಟಾಗಬಹುದು. ನೀರು ಉತ್ಪತ್ತಿ ಪರೀಕ್ಷೆಯನ್ನು ನಡೆಸುವುದರಿಂದ ಕೊಳವೆಬಾವಿಯ ನೀರಿನ ಉತ್ಪಾದನೆ ನಿರ್ಧರಿಸಲು ಮತ್ತು ಕಡಿಮೆ ನೀರಿನ ಉತ್ಪಾದನೆಗೆ ಇರುವ ಸಂಭಾವ್ಯ ಕಾರಣಗಳನ್ನು ಗುರುತಿಸಲು ಸಹಾಯ ಮಾಡುತ್ತದೆ.
3. ಕೊಳವೆಬಾವಿಯ ಭೌತಿಕ ಸ್ಥಿತಿಗತಿ:
ಕಾಲ ಕಳೆದಂತೆ ಕೊಳವೆಬಾವಿಗಳ ಕೇಸಿಂಗ್ ಪೈಪ್ ಹಾಳಾಗಬಹುದು, ಇದು ಬಾವಿಯ ಸ್ಟ್ರಕ್ಚರ್ ಹಾನಿಗೂ ಕಾರಣವಾಗುತ್ತದೆ. ಕೇಸಿಂಗ್ ಪೈಪ್ ಮೇಲಿನ ಬಿರುಕುಗಳು, ಸೋರಿಕೆ ಅಥವಾ ತುಕ್ಕು ಹಿಡಿಯುವುದು , ಕಲ್ಮಶವು ಬಾವಿಗೆ ಇಳಿಯಲು ಅವಕಾಶ ಮಾಡಿಕೊಡುತ್ತದೆ. ಮತ್ತು ಇದು ನೀರಿನ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಕೊಳವೆಬಾವಿಯ ಕೇಸಿಂಗ್ ಪೈಪ್ನ ನಿಯಮಿತ ತಪಾಸಣೆ ಮತ್ತು ನಿರ್ವಹಣೆಯು ಹೀಗೆ ಆಗಬಹುದಾದ ಯಾವುದೇ ಹಾನಿಯನ್ನು ಮೊದಲೇ ಗುರುತಿಸಲು ಮತ್ತು ಮತ್ತಷ್ಟು ಹಾಳಾಗುವುದನ್ನು ತಡೆಯಲು ಸಹಾಯ ಮಾಡುತ್ತದೆ.
4. ಕೊಳವೆಬಾವಿ ಪಂಪಿಂಗ್ ಸಲಕರಣೆಗಳ ಸ್ಥಿತಿಗತಿ:
ಕೊಳವೆಬಾವಿಯಲ್ಲಿ ಬಳಸುವ ಸಬ್‌ಮರ್ಸಿಬಲ್ ಪಂಪ್‌ಗಳು ಮೋಟಾರ್ ಹಾಳಾಗುವುದು, ಬ್ಲಾಕ್ ಆಗುವುದು ಅಥವಾ ಇಂಪೆಲ್ಲರ್‌ಗಳಿಗೆ ಹಾನಿ ಇಂತಹ ಸಮಸ್ಯೆಗಳನ್ನು ಎದುರಿಸುತ್ತವೆ. ಈ ಸಮಸ್ಯೆಗಳಿಂದ ನೀರಿನ ಹರಿವು ಕಡಿಮೆಯಾಗಬಹುದು ಅಥವಾ ನೀರೆತ್ತುವ ಪಂಪ್ ಸಂಪೂರ್ಣವಾಗಿ ಹಾಳಾಗಲು ಕಾರಣವಾಗಬಹುದು. ನೀರನ್ನು ಪಂಪ್ ಮಾಡುವ ಉಪಕರಣಗಳನ್ನು ನಿಯಮಿತವಾಗಿ ನಿರ್ವಹಣೆ ಮಾಡುವುದು, ಅಂದರೆ ಸ್ವಚ್ಛಗೊಳಿಸುವುದು ಅಥವಾ ಸವೆದಿರುವ ಭಾಗಗಳನ್ನು ಬದಲಾಯಿಸುವುದೂ ಸೇರಿದಂತೆ, ಉತ್ತಮ ಕಾರ್ಯನಿರ್ವಹಣೆಯನ್ನು ಖಚಿತಪಡಿಸಿಕೊಳ್ಳುವುದು ಅಗತ್ಯವಾಗಿದೆ.