ವಾಟರ್‌ಪ್ರೂಫಿಂಗ್‌ ವಿಧಾನಗಳು, ಮಾಡರ್ನ್‌ ಕಿಚನ್‌ ಡಿಸೈನ್ಸ್‌, ಹೋಮ್‌ಗಾಗಿ ವಾಸ್ತು ಸಲಹೆಗಳು, ಮನೆ ನಿರ್ಮಾಣ ವೆಚ್ಚ

ಸಂಪರ್ಕಲ್ಲಿರಿ

ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ

ಮಾನ್ಯವಾದ ವರ್ಗವನ್ನು ಆಯ್ಕೆಮಾಡಿ

ನಿಮ್ಮ ಉಪ-ವರ್ಗವನ್ನು ಆಯ್ಕೆ ಮಾಡಿ

acceptence

ಮುಂದುವರಿಯಲು ದಯವಿಟ್ಟು ಈ ಪೆಟ್ಟಿಗೆಯನ್ನು ಪರಿಶೀಲಿಸಿ



ವಿಭಜನಾ ಗೋಡೆಗಳ ವಿವಿಧ ಪ್ರಕಾರಗಳಿಗೆ ನಿಮ್ಮ ಮಾರ್ಗದರ್ಶಿ

ಕ್ರಿಯಾತ್ಮಕತೆಯಿಂದ ಹಿಡಿದು ಸೌಂದರ್ಯದವರೆಗೆ ವಿಭಜನಾ ಗೋಡೆಗಳು ಹಲವಾರು ಪ್ರಯೋಜನಗಳನ್ನು ಹೊಂದಿವೆ. ವಿಭಜನಾ ಗೋಡೆಗಳು ನಿಮ್ಮ ಜಾಗವನ್ನು ಹೇಗೆ ಹೆಚ್ಚಿಸಬಹುದು ಎಂಬುದನ್ನು ಅನ್ವೇಷಿಸೋಣ.

Share:


ಪ್ರಮುಖಾಂಶಗಳು

 

  • ವಿಭಜನಾ ಗೋಡೆಗಳು ಬಹಳಷ್ಟು ಪ್ರಯೋಜನಗಳನ್ನು ಕೊಡುತ್ತವೆ. ಅವು ಕ್ರಿಯಾತ್ಮಕವಾಗಿಯೂ ಹಾಗೂ ಸೌಂದರ್ಯದ ಪ್ರಯೋಜನಗಳನ್ನು ನೀಡುತ್ತದೆ.
 
  • ಅವುಗಳು ಹೆಚ್ಚು ಸ್ಥಳವು ಸಿಗುವಂತೆ ಮಾಡುತ್ತವೆ. ಜೊತೆಗೆ ಪ್ರೈವಸಿಯನ್ನೂ ಒದಗಿಸುತ್ತವೆ. ಮತ್ತು ಕೋಣೆಯ ಸಂರಚನೆ, ನೈಸರ್ಗಿಕ ಗಾಳಿ-ಬೆಳಕು ಮತ್ತು ಧ್ವನಿ ನಿರೋಧಕವಾಗಿಯೂ ಕೆಲಸ ಮಾಡುತ್ತವೆ.
 
  • ಇಟ್ಟಿಗೆಯಿಂದ ಮಾಡಿದ ವಿಭಜನಾ ಗೋಡೆಗಳು ಬಾಳಿಕೆ ಬರುತ್ತವೆ. ಜೊತೆಗೆ ಉಷ್ಣವನನ್ನು ತಡೆಯುತ್ತವೆ. ಜೊತೆಗೆ ಸಾಂಪ್ರದಾಯಿಕ ಭಾರತೀಯ ವಾಸ್ತುಶಿಲ್ಪಕ್ಕೆ ಸೂಕ್ತವಾದ ಹಳ್ಳಿಗಾಡಿನ ಚೆಲುವನ್ನು ನೀಡುತ್ತವೆ.
 
  • ಗಾಜಿನ ವಿಭಜನಾ ಗೋಡೆಗಳು ಪ್ರೈವಸಿಯನ್ನು ಒದಗಿಸಲು ಹಾಗೂ ಒಳಾಂಗಣಕ್ಕೆ ಆಧುನಿಕ ಸ್ಪರ್ಶವನ್ನು ಕೊಡುವಾಗ ಮುಕ್ತ ಭಾವನೆಯನ್ನು ಕಾಯ್ದುಕೊಳ್ಳುತ್ತವೆ.
 
  • ಕಟ್ಟಿಗೆಯ ವಿಭಜನಾ ಗೋಡೆಗಳು ಉಷ್ಣತೆ ಮತ್ತು ಸೌಂದರ್ಯದ ಆಕರ್ಷಣೆಯನ್ನು ಕೊಡುತ್ತವೆ. ಜೊತೆಗೆ ವಿನ್ಯಾಸ ಮತ್ತು ಮೆರಗುಗೊಳಿಸುವ ಆಯ್ಕೆಗಳಲ್ಲಿ ಬಹುಮುಖತೆಯನ್ನು ನೀಡುತ್ತವೆ.
 
  • ಸರಿದಾಡುವ ವಿಭಜನಾ ಗೋಡೆಗಳು ಹೊಸತನವನ್ನು ನೀಡುತ್ತವೆ. ಬದಲಾಗುತ್ತಿರುವ ಅಗತ್ಯಗಳಿಗೆ ಹೊಂದಿಕೊಳ್ಳಲು ತ್ವರಿತವಾಗಿ ಕೊಠಡಿ ಮರುಸಂರಚನೆಗೆ ಅವಕಾಶ ನೀಡುತ್ತವೆ.
 
  • ನಿಮ್ಮ ಜಾಗಕ್ಕೆ ಅತ್ಯಂತ ಸೂಕ್ತವಾದ ವಿಭಜನಾ ಗೋಡೆಯನ್ನು ಆಯ್ಕೆಮಾಡುವಾಗ ಅದಕ್ಕಾಗುವ ಖರ್ಚು, ನಿರ್ವಹಣೆ ಮತ್ತು ವಿನ್ಯಾಸದ ಹೊಂದಾಣಿಕೆಗಳಂತಹ ಅಂಶಗಳನ್ನು ಪರಿಗಣಿಸಿ.


ವಿಭಜನಾ ಗೋಡೆಗಳು ಸ್ಥಳಗಳನ್ನು ವಿಭಜಿಸಲು ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ. ಪ್ರೈವಸಿ, ರಚನಾತ್ಮಕ ಆಧಾರ ಹಾಗೂ ಸೌಂದರ್ಯವನ್ನು ಹೆಚ್ಚಿಸುತ್ತವೆ. ಅವು ವಿವಿಧ ಪ್ರಕಾರಗಳಲ್ಲಿ ಲಭ್ಯವಾಗುತ್ತವೆ. ಪ್ರತಿಯೊಂದು ಪ್ರಕಾರವೂ ನಿರ್ದಿಷ್ಟ ಕೆಲವನ್ನು ಮಾಡುತ್ತದೆ. ಜೊತೆಗೆ ವಿಭಿನ್ನ ವಿನ್ಯಾಸದ ಅವಶ್ಯಕತೆಗಳನ್ನು ಕೊಡುತ್ತದೆ. ಈ ಬ್ಲಾಗ್‌ನಲ್ಲಿ, ನಾವು ವಿವಿಧ ರೀತಿಯ ವಿಭಜನಾ ಗೋಡೆಗಳನ್ನು ನೋಡುತ್ತೇವೆ. ಅದರೊಂದಿಗೆ ಅವುಗಳ ಗುಣಲಕ್ಷಣಗಳು ಮತ್ತು ಬಳಕೆಗಳ ಮೇಲೆ ಬೆಳಕು ಚೆಲ್ಲುತ್ತೇವೆ.

 

 


ವಿಭಜನಾ ಗೋಡೆ ಎಂದರೇನು?



ವಿಭಜನಾ ಗೋಡೆಯು ಮನೆಯೊಳಗಿನ ಸ್ಥಳಗಳನ್ನು ವಿಭಜಿಸುವ ಲೋಡ್-ಬೇರಿಂಗ್ ಅಲ್ಲದ ಗೋಡೆಯಾಗಿದೆ. ಕಟ್ಟಡದ ಹೊರೆಗೆ ಆಧಾರ ಕೊಡುವ ಸ್ಟ್ರಕ್ಚರಲ್ ಗೋಡೆಗಳಂತಲ್ಲದೆ, ಈ ರೀತಿಯ ಗೋಡೆಗಳನ್ನು ಮೂಲತಃವಾಗಿ ಸ್ಥಳವನ್ನು ವಿಭಾಗಿಸಲು ಪ್ರೈವಸಿಯನ್ನು ಒದಗಿಸಲು ಅಥವಾ ಸೌಂದರ್ಯವನ್ನು ಹೆಚ್ಚಿಸಲು ಬಳಸಲಾಗುತ್ತದೆ. ಈ ಗೋಡೆಗಳನ್ನು ಅಪೇಕ್ಷಿತ ಕಾರ್ಯ ಮತ್ತು ವಿನ್ಯಾಸವನ್ನು ಅವಲಂಬಿಸಿ ಡ್ರೈವಾಲ್, ಗಾಜು, ಕಟ್ಟಿಗೆ ಅಥವಾ ಮೆಟಲ್ ಸ್ಟಡ್‌ಗಳಂತಹ ವಿವಿಧ ವಸ್ತುಗಳಿಂದ ಮಾಡಬಹುದಾಗಿದೆ.

 

ವಿಭಜನೆಯ ಗೋಡೆಗಳು ಬೇರೆ ಬೇರೆ ಅಗತ್ಯಗಳಿಗೆ ಸರಿಹೊಂದುವಂತೆ  ಓಪನ್ ಪ್ಲ್ಯಾನ್ ಲೇಔಟ್​ನಲ್ಲಿ ಪ್ರತ್ಯೇಕ ಕೊಠಡಿಗಳನ್ನು ಮಾಡುವುದರಿಂದ ಹಿಡಿದು ವಿಶಾಲವಾದ ಸ್ಥಳಗಳನ್ನು ಕ್ರಿಯಾತ್ಮಕ ಭಾಗಗಳಾಗಿ ವಿಭಜಿಸುವವರೆಗೆ ಹಲವು ಪ್ರಕಾರಗಳು ಮತ್ತು ಸಂರಚನೆಗಳಲ್ಲಿ ಲಭ್ಯವಿವೆ. ಒಟ್ಟಾರೆಯಾಗಿ, ಆಂತರಿಕ ಜಾಗವನ್ನು ಸಂಯೋಜಿಸುವುದು ಮತ್ತು ಉತ್ತಮಗೊಳಿಸಲು ಅವುಗಳು ಬಹುಮುಖ ಪರಿಹಾರಗಳಾಗಿ ಕೆಲಸ ಮಾಡುತ್ತವೆ.


12 ರೀತಿಯ ವೈವಿಧ್ಯಮಯ ವಿಭಜನಾ ಗೋಡೆಗಳ ಮೂಲಕ ಸಾಗೋಣ, ಪ್ರತಿಯೊಂದೂ ವಿಶಿಷ್ಟವಾದ ಚೆಲವು ಹಾಗೂ ಕೆಲಸವನ್ನು ಮಾಡುತ್ತದೆ. ಇದು ಭಾರತೀಯ ಮನೆಗಳು ಮತ್ತು ಕಛೇರಿಗಳಿಗೆ ಸಂಪೂರ್ಣವಾಗಿ ಸೂಕ್ತವಾಗಿದೆ.

 

1. ಇಟ್ಟಿಗೆ ವಿಭಜನಾ ಗೋಡೆಗಳು

ಸಾಂಪ್ರದಾಯಿಕ ಭಾರತೀಯ ವಾಸ್ತುಶೈಲಿಯಲ್ಲಿ ಸಾಮಾನ್ಯವಾಗಿ, ಇಟ್ಟಿಗೆ ವಿಭಜನಾ ಗೋಡೆಗಳು ಬಾಳಿಕೆ ಮತ್ತು ಉಷ್ಣ ನಿರೋಧನವನ್ನು ನೀಡುತ್ತವೆ. ಅವುಗಳು ಒಳಾಂಗಣಕ್ಕೆ ಹಳ್ಳಿಗಾಡಿನ ಸೌಂದರ್ಯ ಕೊಡುತ್ತವೆ. ಜೊತೆಗೆ ಭಾರವಾದ ಹೊರೆಗಳನ್ನು ಹೊರಬಹುದು, ರಚನಾತ್ಮಕ ಉದ್ದೇಶಗಳಿಗಾಗಿ ಅವುಗಳು ಸೂಕ್ತವಾಗಿವೆ.

 

2. ಡ್ರೈವಾಲ್ ವಿಭಜನಾ ಗೋಡೆಗಳು

 


ಹಗುರವಾಗಿವೆ ಹಾಗೂ ಅಳವಡಿಸುವುದು ಸುಲಭ, ಡ್ರೈವಾಲ್ ವಿಭಜನಾ ಗೋಡೆಗಳು ಅವುಗಳ ಬೆಲೆಗೆ ತಕ್ಕ ಮೌಲ್ಯದ ಪರಿಣಾಮದಿಂದಾಗಿ ಹಾಗೂ ಬಹುಮುಖತೆಗಾಗಿ ಜನಪ್ರಿಯವಾಗಿವೆ. ಅವರು ತಡವಿಲ್ಲದೆ ಕೊಠಡಿ ವಿಭಾಗಗಳನ್ನು ಒದಗಿಸುತ್ತವೆ. ಹಾಗೂ ಬಣ್ಣ ಅಥವಾ ವಾಲ್‌ಪೇಪರ್‌ನಂತಹ ವಿವಿಧ ಪೂರ್ಣಗೊಳಿಸುವಿಕೆಗಳಿಗೆ ಅವಕಾಶ ಮಾಡಿಕೊಡುತ್ತವೆ.

 

3. ಗಾಜಿನ ವಿಭಜನಾ ಗೋಡೆಗಳು



ಈ ಪಾರದರ್ಶಕ ಅಡ್ಡಗೋಡೆಯು ತೆರೆದ ಅನುಭವವನ್ನು ಉಳಿಸಿಕೊಂಡು ಒಳಾಂಗಣಕ್ಕೆ ಆಧುನಿಕ ಸ್ಪರ್ಶವನ್ನು ಒದಗಿಸುತ್ತವೆ. ನೈಸರ್ಗಿಕ ಬೆಳಕನ್ನು ಬಿಟ್ಟುಕೊಡದೆಯೆ ಕಛೇರಿಗಳಲ್ಲಿ ಅಥವಾ ಮನೆಗಳಲ್ಲಿ ವಿಭಜಿಸುವ ಸ್ಥಳಗಳಲ್ಲಿ ಪ್ರತ್ಯೇಕ ಕೆಲಸದ ಸ್ಥಳಗಳನ್ನು ಮಾಡಲು ಇವು ಸೂಕ್ತವಾಗಿದೆ.

 

4. ಕಟ್ಟಿಗೆಯ ವಿಭಜನಾ ಗೋಡೆಗಳು

 



 ಕಟ್ಟಿಗೆಯ ವಿಭಜನಾ ಗೋಡೆಗಳು ನಿಸರ್ಗದ ಉಷ್ಣತೆ ಹಾಗೂ ಸೌಂದರ್ಯದ ಆಕರ್ಷಣೆ ಕೊಡುವುದರರೊಂದಿಗೆ ಸ್ಥಳಗಳಿಗೆ ಹಿತಕರವಾದ ವಾತಾವರಣವನ್ನು ಸೃಷ್ಟಿಸುತ್ತವೆ. ಅವು ಗಟ್ಟಿಯಾದ ಫಲಕಗಳಿಂದ ಹಿಡಿದು ಸಂಕೀರ್ಣವಾದ ಜಾಲರಿಯೊಂದಿಗೆ ವಿವಿಧ ವಿನ್ಯಾಸಗಳಲ್ಲಿ ಸಿಗುತ್ತವೆ. ಜೊತೆಗೆ ಯಾವುದೇ ಅಲಂಕಾರಕ್ಕೆ ಪೇಂಟ್ ಮಾಡಬಹುದು ಅಥವಾ ಬಣ್ಣ ಬದಲಿಸಬಹುದು.

 

5. ಅಲ್ಯೂಮಿನಿಯಂ ವಿಭಜನಾ ಗೋಡೆಗಳು

ನಯವಾದ ಮತ್ತು ಸಮಕಾಲೀನ ಅಲ್ಯೂಮಿನಿಯಂ ವಿಭಜನಾ ಗೋಡೆಗಳು ಆಧುನಿಕ ಒಳಾಂಗಣಗಳಿಗೆ ಒಟ್ಟಿಗಿನ ಪರಿಹಾರವನ್ನು ನೀಡುತ್ತವೆ.  ಅವು ಹಗುರವಾದ, ಬಾಳಿಕೆ ಬರುವ ಮತ್ತು ಗ್ರಾಹಕೀಯಗೊಳಿಸಬಲ್ಲವು, ವಸತಿ ಮತ್ತು ವಾಣಿಜ್ಯ ಸೆಟ್ಟಿಂಗ್‌ಗಳಿಗೆ ಸೂಕ್ತವಾಗಿವೆ.

 

 6. ಜಿಪ್ಸಮ್ ವಿಭಜನಾ ಗೋಡೆಗಳು

ಜಿಪ್ಸಮ್ ವಿಭಜನಾ ಗೋಡೆಗಳು ಅವುಗಳ ನಯವಾದ ಫಿನಿಶಿಂಗ್ ಹಾಗೂ ಅಗ್ನಿನಿರೋಧಕ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿವೆ. ಅವುಗಳ ಧ್ವನಿ ನಿರೋಧಕ ಸಾಮರ್ಥ್ಯಗಳು ಮತ್ತು ಸುಲಭವಾಗಿ ಅಳವಡಿಸಲು ಸಾಧ್ಯವಾಗುವುದರಿಂದ ಅವುಗಳನ್ನು ಸಾಮಾನ್ಯವಾಗಿ ವಾಣಿಜ್ಯ ಸ್ಥಳಗಳಲ್ಲಿ ಬಳಸಲಾಗುತ್ತದೆ.

 

 7. ಸರಿದಾಡುವ ವಿಭಜನಾ ಗೋಡೆಗಳು

ಸರಿದಾಡಬಲ್ಲ ವಿಭಜನಾ ಗೋಡೆಗಳು ಬದಲಾಗುತ್ತಿರುವ ಅವಶ್ಯಕತೆಗಳಿಗೆ ಅನುಗುಣವಾಗಿ ಕೊಠಡಿಗಳ ತ್ವರಿತ ಮರುಸಂರಚನೆಗೆ ಹೊಂದಿಕೊಳ್ಳುವ ಸ್ಥಳಗಳಿಗೆ ಪರಿಪೂರ್ಣ ಅವಕಾಶ ನೀಡುತ್ತದೆ. ಅವು ಅಕಾರ್ಡಿಯನ್, ಸ್ಲೈಡಿಂಗ್ ಅಥವಾ ಫೋಲ್ಡಿಂಗ್ ಪ್ಯಾನೆಲ್‌ಗಳನ್ನು ಒಳಗೊಂಡಂತೆ ವಿವಿಧ ಶೈಲಿಗಳಲ್ಲಿ ಬರುತ್ತವೆ.

 

8. ಬಿದಿರಿನ ವಿಭಜನಾ ಗೋಡೆಗಳು



ಪರಿಸರ ಸ್ನೇಹಿ ಮತ್ತು ಸುಸ್ಥಿರ ಬಿದಿರಿನ ವಿಭಜನಾ ಗೋಡೆಗಳು ಒಳಾಂಗಣಕ್ಕೆ ಪ್ರಕೃತಿಯ ಸ್ಪರ್ಶವನ್ನು ತರುತ್ತವೆ. ಅವುಗಳು ಹಗುರವಾದ ಮತ್ತು ಗಟ್ಟಿಯಾದ ಹಾಗೂ ಸಂಕೀರ್ಣವಾದ ಮಾದರಿಗಳಲ್ಲಿ ನೇಯಬಹುದು, ಒಳಾಂಗಣಕ್ಕೆ ಉಷ್ಣವಲಯದ ವೈಬ್ ಅನ್ನು ಸೇರಿಸುತ್ತದೆ.

 

9. ಪಿವಿಸಿ ವಿಭಜನಾ ಗೋಡೆಗಳು



ಕಡಿಮೆ ಬೆಲೆಯಲ್ಲಿ ಸಿಗುತ್ತವೆ ಹಾಗೂ ಇವುಗಳನ್ನು ನಿರ್ವಹಿಸುವುದು ಸುಲಭವಾಗಿದೆ. ಜೊತೆಗೆ ಪಿವಿಸಿ ವಿಭಜನಾ ಗೋಡೆಗಳು ತಾತ್ಕಾಲಿಕ ಅಥವಾ ಅರೆ-ಶಾಶ್ವತ ವಿಭಾಗಗಳಿಗೆ ಬಹುಮಟ್ಟಿಗೆ ಉತ್ತಮ ಆಯ್ಕೆಯಾಗಿವೆ. ಅವು ವಿವಿಧ ಬಣ್ಣಗಳಲ್ಲಿ ಸಿಗುತ್ತವೆ ಹಾಗೂ ಹೆಚ್ಚಿನ ನಿರ್ಮಾಣ ಕೆಲಸವಿಲ್ಲದೆ ಬೇಗನೆ ಅಳವಡಿಸಬಹುದಾಗಿದೆ.

 

10. ಕರ್ಟನ್ ವಿಭಜನಾ ಗೋಡೆಗಳು

 



ಸರಳವಾದ ಆದರೆ ಪರಿಣಾಮಕಾರಿ, ಪರದೆ ವಿಭಜನಾ ಗೋಡೆಗಳು ಕಡಿಮೆ ಖರ್ಚಿನಲ್ಲಿ ಪ್ರೈವಸಿಯನ್ನು ಹಾಗೂ ಹೊಸತನವನ್ನು ಕೊಡುತ್ತವೆ.  ದೊಡ್ಡ ಜಾಗಗಳನ್ನು ತಾತ್ಕಾಲಿಕವಾಗಿ ವಿಭಜಿಸಲು ಅವು ಸೂಕ್ತವಾಗಿವೆ ಮತ್ತು ಯಾವುದೇ ಅಲಂಕಾರಕ್ಕೆ ಸರಿಹೊಂದುವಂತೆ ಬಟ್ಟೆಗಳು, ಬಣ್ಣಗಳು ಮತ್ತು ವಿನ್ಯಾಸಗಳ ಶ್ರೇಣಿಯಲ್ಲಿ ಲಭ್ಯವಿರುತ್ತವೆ.

 

11. ಪ್ಲಾಸ್ಟರ್ಬೋರ್ಡ್ ವಿಭಜನಾ ಗೋಡೆಗಳು:

ಪ್ಲಾಸ್ಟರ್‌ಬೋರ್ಡ್ ವಿಭಜನಾ ಗೋಡೆಗಳು ಪ್ಲಾಸ್ಟರ್‌ಬೋರ್ಡ್ ಶೀಟ್​ಗಳನ್ನು ಹೊಂದಿರುವ ಕಟ್ಟಿಗೆಯ ಅಥವಾ ಲೋಹದ ಚೌಕಟ್ಟನ್ನು ಒಳಗೊಂಡಿರುತ್ತವೆ. ಇವುಗಳನ್ನು ಸ್ಟಡ್ ವಾಲ್‌ಗಳು ಎಂದೂ ಕರೆಯುತ್ತಾರೆ.   ಇವುಗಳು ಹಗುರವಾಗಿದ್ದು ಬಹಳಷ್ಟು ಉಪಯುಕ್ತವಾಗಿವೆ. ಜೊತೆಗೆ ಸುಧಾರಿತ ಉಷ್ಣ ಮತ್ತು ಗದ್ದಲವನ್ನು ಕಡಿಮೆ ಮಾಡುವ ಕಾರ್ಯಕ್ಷಮತೆಗಾಗಿ ನಿರೋಧನವನ್ನು ಸರಿಹೊಂದಿಸಬಹುದು.

 

12. ಸ್ಟೀಲ್ ವಿಭಜನಾ ಗೋಡೆಗಳು:

ದೃಢವಾದ ಮತ್ತು ಬಾಳಿಕೆ ಬರುವ, ಉಕ್ಕಿನ ವಿಭಜನಾ ಗೋಡೆಗಳನ್ನು ಶಕ್ತಿ ಮತ್ತು ಸುರಕ್ಷತೆಯು ಅತಿಮುಖ್ಯವಾಗಿರುವ ಕಡೆಗಳಲ್ಲಿ, ಸಾಮಾನ್ಯವಾಗಿ ಕೈಗಾರಿಕಾ ಅಥವಾ ವಾಣಿಜ್ಯ ಸೆಟ್ಟಿಂಗ್‌ಗಳಲ್ಲಿ ಬಳಸಲಾಗುತ್ತದೆ.  ಅವುಗಳು ಅತ್ಯುತ್ತಮವಾದ ಅಗ್ನಿನಿರೋಧಕವಾಗಿವೆ ಹಾಗೂ ಭಾರೀ ಹೊರೆಗಳನ್ನು ತಡೆದುಕೊಳ್ಳಬಲ್ಲವು. ಹೆಚ್ಚಿನ ದಟ್ಟಣೆಯ ಪ್ರದೇಶಗಳಿಗೆ ಅವುಗಳು ಸೂಕ್ತವಾಗಿವೆ.

 


ವಿಭಜನಾ ಗೋಡೆಯ ಪ್ರಯೋಜನಗಳು



ವಿಭಜನಾ ಗೋಡೆಯು ಅನೇಕ ಪ್ರಯೋಜನಗಳನ್ನು ನೀಡುತ್ತದೆ, ಅವುಗಳೆಂದರೆ:

 

  • ಜಾಗೆಯ ಅತ್ಯುತ್ತಮ ಉಪಯೋಗ: ಕ್ರಿಯಾತ್ಮಕ ಪ್ರದೇಶಗಳಾಗಿ ವಿಭಜಿಸುವ ಮೂಲಕ ಲಭ್ಯವಿರುವ ಜಾಗದ ಬಳಕೆಯನ್ನು ಇಂತಹ ಗೋಡೆಗಳು ಹೆಚ್ಚುಗೊಳಿಸುತ್ತವೆ.
 
  • ಏಕಾಂತತೆ: ಅವುಗಳು ಪ್ರತ್ಯೇಕ ಸ್ಥಳಗಳನ್ನು ಸೃಷ್ಟಿಸುತತ್ತವೆ, ವ್ಯಕ್ತಿಗಳಿಗೆ ಏಕಾಂತವನ್ನು ಖಾತ್ರಿಪಡಿಸುತ್ತಾರೆ.
 
  • ಸರ್ವತೋಮುಖ ಶಕ್ತಿ: ಬದಲಾಗುವ ಅಗತ್ಯಗಳಿಗೆ ತಕ್ಕಂತೆ ಈ ಗೋಡೆಗಳನ್ನು ಸುಲಭವಾಗಿ ಅಳವಡಿಸಬಹುದು ಅಥವಾ ತೆಗೆಯಬಹುದು.
 
  • ಸೌಂದರ್ಯ: ಅವುಗಳು ಸ್ಥಳದ ಆಕರ್ಷಣೆಯನ್ನು ಹೆಚ್ಚಿಸುತ್ತವೆ, ಜೊತೆಗೆ ವಿನ್ಯಾಸ ಮತ್ತು ಶೈಲಿಯನ್ನು ಸೇರಿಸುತ್ತಾರೆ.
 
  • ಬೆಳಕು ಮತ್ತು ವೆಂಟಿಲೇಶನ್: ಕೆಲವು ಪ್ರಕಾರದ ವಿಭಜನಾ ಗೋಡೆಗಳು ನೈಸರ್ಗಿಕ ಬೆಳಕನ್ನು ಒಳಭಾಗಕ್ಕೆ ತೀಕ್ಷಣವಾಗಿ ಒಳಗೆ ಬೀಳುವಂತೆ ಮಾಡುತ್ತವೆ. ಜೊತೆಗೆ ಗಾಳಿಯು ಬೀಸುವುದನ್ನು ಸುಧಾರಿಸಲು ಅವಕಾಶ ಮಾಡಿಕೊಡುತ್ತದೆ.
 
  • ಸಪ್ಪಳ ನಿರೋಧಕ: ಕೆಲವು ವಿಭಜನಾ ಗೋಡೆಗಳು ಸಪ್ಪಳವನ್ನು ತಡೆಯುತ್ತವೆ, ಸ್ಥಳಗಳ ನಡುವೆ ಶಬ್ದ ಪ್ರಸರಣವನ್ನು ಕಡಿಮೆ ಮಾಡುತ್ತವೆ.


 

ಒಳಾಂಗಣ ವಿನ್ಯಾಸದಲ್ಲಿ, ವಿಭಜನಾ ಗೋಡೆಗಳು ಜಾಗದ ಕ್ರಿಯಾತ್ಮಕತೆ ಮತ್ತು ಸೌಂದರ್ಯಕ್ಕೆ ಗಮನಾರ್ಹ ಕೊಡುಗೆ ನೀಡುತ್ತವೆ. ಪ್ರತಿಯೊಂದು ವಿಭಜನಾ ಗೋಡೆಯ ಪ್ರಕಾರವು ಹೆಚ್ಚು ಸುಂದರವಾಗಿ ಕಾಣಲು ಮತ್ತು ನಿಮ್ಮ ಜಾಗವನ್ನು ಶೈಲಿಯೊಂದಿಗೆ ಹೊಂದಿಸಲು ತನ್ನದೇ ಆದ ಕೊಡುಗೆ ನೀಡುತ್ತದೆ




ಸಂಬಂಧಿತ ಲೇಖನಗಳು



ಶಿಫಾರಸು ಮಾಡಿದ ವೀಡಿಯೊಗಳು





  ಮನೆ ಕನ್‌ಸ್ಟ್ರಕ್ಷನ್‌ಗಾಗಿ ಎಸ್ಟಿಮೇಟಿಂಗ್ ಟೂಲ್ಸ್


ವೆಚ್ಚ ಕ್ಯಾಲ್ಕುಲೇಟರ್

ಪ್ರತಿಯೊಬ್ಬ ಮನೆ ನಿರ್ಮಾಣ ಮಾಡುವವರು ತಮ್ಮ ಕನಸಿನ ಮನೆಯನ್ನು ನಿರ್ಮಿಸಲು ಬಯಸುತ್ತಾರೆ ಆದರೆ ಅದು ಅವರ ಬಜೆಟ್‌ ವೆಚ್ಚವನ್ನು ಮೀರದಂತೆ ಇರಿಸಿಕೊಳ್ಳಲು ಬಯಸುತ್ತಾರೆ. 

logo

ಇಎಂಐ ಕ್ಯಾಲ್ಕುಲೇಟರ್

ಮನೆ ನಿರ್ಮಾಣಕ್ಕೆ ಹಣಕಾಸು ಒದಗಿಸಿಕೊಳ್ಳುವ ಅತ್ಯುತ್ತಮ ಮಾರ್ಗಗಳಲ್ಲಿ ಮನೆ-ಸಾಲವನ್ನು ತೆಗೆದುಕೊಳ್ಳುವುದು ಒಂದಾಗಿರುತ್ತದೆ, ಆದರೆ ಮನೆಯನ್ನು ನಿರ್ಮಿಸುವವರು ಎಷ್ಟು ಕಂತುಗಳನ್ನು ಪಾವತಿಸಬೇಕೆಂದು ತಿಳಿಯಲು ಬಯಸುತ್ತಾರೆ. 

logo

ಪ್ರಾಡಕ್ಟ್ ಪ್ರೆಡಿಕ್ಟರ್

ಮನೆಯನ್ನು ನಿರ್ಮಿಸುವ ಆರಂಭಿಕ ಹಂತಗಳಲ್ಲಿ, ಮನೆ ನಿರ್ಮಿಸುವವರು ಸರಿಯಾದ ಉತ್ಪನ್ನಗಳನ್ನು ಆಯ್ಕೆ ಮಾಡುವುದು ಮುಖ್ಯವಾಗಿರುತ್ತದೆ. 

logo

ಅಂಗಡಿ ಪತ್ತೆಕಾರಕ

ಮನೆ ಕಟ್ಟುವವರಿಗೆ, ಮನೆಯ ಕಟ್ಟಡದ ಬಗ್ಗೆ ಎಲ್ಲಾ ಅಮೂಲ್ಯವಾದ ಮಾಹಿತಿಯನ್ನು ಪಡೆಯುವ ಸರಿಯಾದ ಅಂಗಡಿಯನ್ನು ಕಂಡುಹಿಡಿಯುವುದು ಮುಖ್ಯವಾಗಿದೆ.

logo

Loading....