ಸಂಪರ್ಕಲ್ಲಿರಿ

ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ

ಮಾನ್ಯವಾದ ವರ್ಗವನ್ನು ಆಯ್ಕೆಮಾಡಿ

ನಿಮ್ಮ ಉಪ-ವರ್ಗವನ್ನು ಆಯ್ಕೆ ಮಾಡಿ

acceptence

ಮುಂದುವರಿಯಲು ದಯವಿಟ್ಟು ಈ ಪೆಟ್ಟಿಗೆಯನ್ನು ಪರಿಶೀಲಿಸಿ

hgfghj


ನಿರ್ಮಾಣದಲ್ಲಿ ಲಿಂಟೆಲ್ ಎಂದರೇನು? ಅದರ ಪ್ರಕಾರಗಳು ಮತ್ತು ಕಾರ್ಯಶೀಲತೆಯನ್ನು ಅರ್ಥಮಾಡಿಕೊಳ್ಳುವುದು

ಪ್ರಾಚೀನ ಸ್ಟ್ರಕ್ಚರ್​ಗಳಿಂದ ಆಧುನಿಕ ಬೆರಗಾಗುವಂತಹ ಈಗಿನ ಸ್ಟ್ರಕ್ಚರ್​ಗಳವರೆಗೆ, ಲಿಂಟೆಲ್‌ಗಳು ದೀರ್ಘಕಾಲ ಬಾಳಿಕೆ ಬರುವುದನ್ನು ನೋಡಿದ್ದೇವೆ. ಕಾರ್ಯಶೀಲತೆ ಮತ್ತು ಸೌಂದರ್ಯ ತರುವುದರೊಂದಿಗೆ ಇವು ಅಗತ್ಯಕ್ಕೆ ತಕ್ಕಂತೆ ಸಂಯೋಜಿಸುವ ಹಾಗೂ ಮಣಿಯದ ಬೆಂಬವನ್ನು ಸಿಸ್ಟಮ್​ಗೆ ಕೊಡುತ್ತವೆ. ಈ ಬ್ಲಾಗ್‌ನಲ್ಲಿ, ನಾವು ಲಿಂಟೆಲ್ ಎಂದರೇನು ಎಂಬುದನ್ನು ತಿಳಿದುಕೊಳ್ಳುತ್ತೇವೆ ಮತ್ತು ಅದರ ವಿವಿಧ ಪ್ರಕಾರಗಳು ಮತ್ತು ಕಾರ್ಯಗಳನ್ನು ಅರ್ಥಮಾಡಿಕೊಳ್ಳುತ್ತೇವೆ.

Share:


ನಿರ್ಮಾಣದಲ್ಲಿ, ಗಟ್ಟಿಯಾದ ಮತ್ತು ಬಾಳಿಕೆ ಬರುವ ಸ್ಟ್ರಕ್ಚರ್​ಗಳನ್ನು ನಿರ್ಮಾಣಮಾಡಲು ಹಲವಾರು ಘಟಕಗಳು ಒಟ್ಟಿಗೆ ಸೇರುತ್ತವೆ. ಫೌಂಡೇಶನ್​ನಿಂದ ಹಿಡಿದು ಛಾವಣಿಯವರೆಗೆ, ಪ್ರತಿ ಅಂಶವು ಸದೃಢತೆ ಮತ್ತು ದೀರ್ಘಾಯುಷ್ಯವನ್ನು ಖಾತ್ರಿಪಡಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಈ ನಿರ್ಣಾಯಕ ಅಂಶಗಳಲ್ಲಿ, ಲಿಂಟೆಲ್ ಎಂಬುದು ಕಣ್ಣಿಗೆ ಕಾಣದ ನಾಯಕನಂತೆ ದೃಢವಾಗಿ ನಿಂತಿರುತ್ತದೆ. ಲಿಂಟೆಲ್​ಗಳು ಬಾಗಿಲುಗಳು, ಕಿಟಕಿಗಳು ಮತ್ತು ಕಮಾನುಗಳಿಗೆ ಅಗತ್ಯ ಬೆಂಬಲ ಮತ್ತು ರಚನಾತ್ಮಕ ಸಮಗ್ರತೆಯನ್ನು ಒದಗಿಸುತ್ತವೆ. ಲಿಂಟೆಲ್ ಎಂದರೇನು ಮತ್ತು ಅದರ ಪ್ರಕಾರಗಳ ಬಗ್ಗೆ ಮುಂದಿನ ಭಾಗದಲ್ಲಿ ಮತ್ತಷ್ಟು ತಿಳಿದುಕೊಳ್ಳೋಣ.



ನಿರ್ಮಾಣದಲ್ಲಿ ಲಿಂಟೆಲ್ ಎಂದರೇನು?

ಲಿಂಟೆಲ್ ಎಂದರೆ ಕಿಟಕಿ, ಬಾಗಿಲುಗಳ ಮೇಲೆ ತೆರೆದಿರುವ ಸ್ಥಳದ ಮೇಲೆ ಹಾಕಿರುವ ಸಮತಲದ ಬೀಮ್ ಎಂದು ಸರಳವಾಗಿ ಹೇಳಬಹುದು. ಬೀಮ್ ಮೇಲಿನ ಸ್ಟ್ರಕ್ಚರ್​ ತೂಕವನ್ನು ಪಕ್ಕದ ಎರಡು ಕಡೆಗಳಲ್ಲಿ ಹಂಚಿಕೆ ಮಾಡಿ ಹೊರುತ್ತದೆ. ಲಿಂಟೆಲ್​ನ ಮಹತ್ವವು ಅದು ಭಾರವನ್ನು ಹೊರುವ ಸಾಮರ್ಥ್ಯ, ಲಿಂಟೆಲ್​ ಹಾಕಿದ ಮೇಲೆ ಬೆಂಡ್​ ಆಗುವುದು ಅಥವಾ ಕುಗ್ಗುವಿಕೆಯನ್ನು ತಡೆಯುವುದರ ಮೇಲೆ ಅವಲಂಬಿತವಾಗಿರಯತ್ತದೆ. ಜೊತೆಗೆ ಕಟ್ಟಡದ ಒಟ್ಟಾರೆ ದೃಢತೆಯನ್ನು ರಕ್ಷಣೆ ಮಾಡುವ ಸಾಮರ್ಥ್ಯ ಲಿಂಟೆಲ್​​ಗಳಿಗೆ ಇರುತ್ತದೆ.

  1. ಮರದ ಲಿಂಟೆಲ್‌ಗಳು

  2. ಮರದ ಲಿಂಟೆಲ್‌ಗಳು ಅತ್ಯಂತ ಹಳೆಯ ಪ್ರಕಾರದ ಲಿಂಟೆಲ್‌ಗಳಾಗಿವೆ ಮತ್ತು ಮರಗಳು ಹೇರಳವಾಗಿ ಲಭ್ಯವಿರುವಂತಹ ಪ್ರದೇಶಗಳಲ್ಲಿ ಅವುಗಳ ಬಳಕೆ ನಿರಂತರವಾಗಿರುತ್ತದೆ. ಆದರೂ, ಇಂತಹ ಲಿಂಟೆಲ್​ಗಳನ್ನು ಉಪಯೋಗಿಸಿದಾಗ ಬೆಂಕಿ ಅನಾಹುತಕ್ಕೆ ಒಳಗಾಗುವುದು, ಕೊಳೆಯುವುದು ಮತ್ತು ಗೆದ್ದಲು ಹಿಡಿಯುವ ಸಾಧ್ಯತೆಗಳಿರುತ್ತವೆ. ಹೀಗಾಗಿ ಅವುಗಳ ಬಳಕೆ ಸೀಮಿತವಾಗಿದೆ. ಮರದ ಲಿಂಟೆಲ್‌ಗಳಲ್ಲಿ ಮುಖ್ಯವಾಗಿ ಎರಡು ಪ್ರಕಾರಗಳಿವೆ: ಒಂದೇ-ತುಂಡು ಮರದ ಲಿಂಟೆಲ್‌ಗಳು (ಸಣ್ಣ ಸ್ಪ್ಯಾನ್‌ಗಳಿಗಾಗಿ) ಹಾಗೂ ಬೋಲ್ಟ್‌ಗಳಿಂದ ಹಿಡಿದಿರುವ ಒಂದಕ್ಕಿಂತ ಹೆಚ್ಚಿನ ತುಂಡುಗಳ (ದೊಡ್ಡ ಸ್ಪ್ಯಾನ್‌ಗಳಿಗಾಗಿ) ಲಿಂಟೆಲ್​ಗಳು. ಸೂಕ್ತವಾಗಿ, ಮರದ ಲಿಂಟೆಲ್‌ಗಳನ್ನು ಬಳಸುವಾಗ ಮರದ ಆಯ್ಕೆ (ತೇಗ, ಸಾಲ್, ರೋಸ್‌ವುಡ್) ಮತ್ತು ಅದರ ಆಳ ಮತ್ತು ಅಗಲವನ್ನು ಪರಿಗಣಿಸಿ ಆಯ್ಕೆಮಾಡಿಕೊಳ್ಳಬೇಕು.

  3. ಕಲ್ಲಿನ ಲಿಂಟೆಲ್‌ಗಳು

    ಕಲ್ಲಿನ ಲಿಂಟೆಲ್‌ಗಳನ್ನು ವಿವಿಧ ನಿರ್ಮಾಣ​ಗಳಲ್ಲಿ ಶತಮಾನಗಳಿಂದ ಬಳಸಲಾಗುತ್ತಿದೆ. ಬಾಳಿಕೆ ಬರುವುದು ಹಾಗೂ ಸೌಂದರ್ಯವನ್ನು ಉಳಿಸಿಕೊಳ್ಳುವುದನ್ನು ಅವು ತೋರಿಸುತ್ತಿವೆ. ಕಲ್ಲಿನ ಲಿಂಟೆಲ್​ಗಳು ವಿಶೇಷವಾಗಿ ನೈಸರ್ಗಿಕವಾಗಿ ಮತ್ತು ವಿವಿಧ ರೀತಿಯ ಕಲ್ಲುಗಳು ಸಮೃದ್ಧವಾಗಿರುವ ಪ್ರದೇಶಗಳಲ್ಲಿ ಹೆಚ್ಚು ಬಳಕೆಯಲ್ಲಿರುತ್ತವೆ. ಈ ದೃಢವಾದ ಲಿಂಟೆಲ್‌ಗಳು ವಾಸ್ತು ವಿನ್ಯಾಸಗಳಿಗೆ ಶಕ್ತಿ, ದೀರ್ಘಾಯುಷ್ಯ ಮತ್ತು ಶಾಶ್ವತವಾದ ಸೌಂದರ್ಯವನ್ನು ನೀಡುತ್ತವೆ. ಕಲ್ಲಿನ​ ಲಿಂಟೆಲ್​ಗಳನ್ನು ಆಯ್ಕೆಮಾಡುವಾಗ ಪರಿಗಣಿಸಬೇಕಾದ ಕೆಲವು ಪ್ರಮುಖ ವಿಷಯಗಳಿವೆ:-.

    1. ಕಲ್ಲಿನ ಲಿಂಟೆಲ್‌ಗಳು ಇತರ ಪ್ರಕಾರದ ಲಿಂಟೆಲ್‌ಗಳಿಗಿಂತ ಹೆಚ್ಚು ತೂಕವಾಗಿರುತ್ತವೆ, ಇವುಗಳನ್ನು ಜಾಗರೂಕತೆಯಿಂದ ಕೂಡಿದ ರಚನಾತ್ಮಕ ಯೋಜನೆ ಮತ್ತು ಬೆಂಬಲದೊಂದಿಗೆ ಬಳಸಿಕೊಳ್ಳುವ ಅಗತ್ಯವಿದೆ.

    2. ಇತರ ಬೇರೆ ಲಿಂಟೆಲ್​ಗಳೊಂದಿಗೆ ಹೋಲಿಸಿದರೆ ಕಲ್ಲಿನ ಲಿಂಟೆಲ್‌ಗಳು ಹೆಚ್ಚು ದುಬಾರಿಯಾಗಬಹುದು

    3. ಕಲ್ಲಿನ ಲಿಂಟೆಲ್‌ಗಳು ವ್ಯಾಪ್ತಿಯ ಅಳತೆಯಲ್ಲಿ ಇತಿಮಿತಿಗಳನ್ನು ಹೊಂದಿರುತ್ತವೆ. ಹೀಗಾಗಿ ಮೊದಲೇ ಸರಿಯಾಗಿ ಅಳತೆ ಮಾಡಿಕೊಳ್ಳಬೇಕು.

    4. ಲಿಂಟೆಲ್​ಗಳ ಇತರ ಪ್ರಕಾರಗಳಿಗೆ ಹೋಲಿಕೆ ಮಾಡಿದರೆ ಕಲ್ಲಿನ ಲಿಂಟೆಲ್‌ಗಳನ್ನು ಹಾಕುವುದು ಹೆಚ್ಚು ಶ್ರಮದಾಯಕ ಮತ್ತು ಸಮಯವನ್ನು ತೆಗೆದುಕೊಳ್ಳುತ್ತದೆ

  4.  

  5. ಇಟ್ಟಿಗೆ ಲಿಂಟೆಲ್​ಗಳು

    ಇಟ್ಟಿಗೆ ಅಥವಾ ಬ್ರಿಕ್ ಲಿಂಟೆಲ್‌ಗಳು ಕಿಟಕಿ, ಬಾಗಿಲುಗಳ ಮೇಲೆ ತೆರೆದಿರುವ ತೆರೆದ ಸ್ಥಳದ ಮೇಲೆ ಹಾಕಲು ಸಾಮಾನ್ಯವಾಗಿ ಬಳಸುವ ಆಯ್ಕೆಯನ್ನು ನೀಡುತ್ತವೆ. ಇಟ್ಟಿಗೆಗಳ ವ್ಯಾಪಕ ಲಭ್ಯತೆ ಜೊತೆಗೆ ಇಟ್ಟಿಗೆಯು ಕಲ್ಲಿನ ಸ್ಟ್ರಕ್ಚರ್​ನೊಂದಿಗೆ ಹೊಂದಾಣಿಕೆ ಗುಣದಿಂದಾಗಿ ಅವು ಪ್ರಸಿದ್ಧವಾಗಿವೆ. ಇಟ್ಟಿಗೆಯ ಲಿಂಟೆಲ್‌ಗಳು ರಚನಾತ್ಮಕವಾಗಿ ಹೊಂದಿಕೊಳ್ಳುವುದು, ಸುಂದರವಾಗಿ ಕಾಣುತ್ತವೆ ಮತ್ತು ಇವುಗಳನ್ನು ಬಳಸುವುದು ಸುಲಭವಾಗಿದೆ. ಹೀಗಾಗಿ ಕಟ್ಟಡಗಳ ನಿರ್ಮಾಣದಲ್ಲಿ ಇವುಗಳನ್ನು ಪ್ರಾಯೋಗಿಕವಾಗಿ ಬಳಸಲಾಗುತ್ತದೆ.

    ನಿಮ್ಮ ಕನ್​ಸ್ಟ್ರಕ್ಷನ್​ ಪ್ರೊಜೆಕ್ಟ್​ನಲ್ಲಿ ಇಟ್ಟಿಗೆ ಲಿಂಟೆಲ್​ಗಳನ್ನು ಆಯ್ಕೆಮಾಡಿಕೊಳ್ಳುವಾಗ ನೆನಪಿನಲ್ಲಿಟ್ಟುಕೊಳ್ಳಬೇಕಾಗಿರುವ ಕೆಲವು ಪ್ರಮುಖ ಸೂಚನೆಗಳು ಇಲ್ಲಿವೆ:

    1. ಬಾಳಿಕೆ ಬರುವ, ಗಟ್ಟಿಯಾದ ಮತ್ತು ದೋಷಗಳಿಂದ ಮುಕ್ತವಾಗಿರುವ ಉತ್ತಮ ಗುಣಮಟ್ಟದ ಇಟ್ಟಿಗೆಗಳನ್ನು ಆರಿಸಿಕೊಳ್ಳಿ.

    2. ಲಿಂಟೆಲ್‌ಗಳ ನಿರೀಕ್ಷಿತ ಲೋಡ್‌ಗಳು ಮತ್ತು ಸ್ಪ್ಯಾನ್ ಅವಶ್ಯಕತೆಗಳನ್ನು ಪರಿಗಣಿಸಿ.

    3. ಲಿಂಟೆಲ್‌ಗಳಿಗೆ ಬಳಸಿದ ಇಟ್ಟಿಗೆಗಳ ಪ್ರಕಾರ ಮತ್ತು ಸೈಜ್​, ಬಣ್ಣ, ವಿನ್ಯಾಸ ಮತ್ತು ಅಳತೆಯು ಕನ್​ಸ್ಟ್ರಕ್ಷನ್​ ಸಂದರ್ಭದಲ್ಲಿ ಬಳಸುವ ಇತರ ಇಟ್ಟಿಗೆಗಳೊಂದಿಗೆ ಹೊಂದಿಕೊಳ್ಳುತ್ತದೆಯೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.



    4) ಬಲವರ್ಧಿತ ಇಟ್ಟಿಗೆ ಲಿಂಟೆಲ್‌ಗಳು

    ಸಾಂಪ್ರದಾಯಿಕ ಇಟ್ಟಿಗೆ ಲಿಂಟೆಲ್‌ಗಳಿಗೆ ಹೋಲಿಸಿದರೆ ಬಲವರ್ಧಿತ ಇಟ್ಟಿಗೆ ಲಿಂಟೆಲ್‌ಗಳು ಹೆಚ್ಚಿನ ತಾಕತ್ತು ಮತ್ತು ಲೋಡ್-ಬೇರಿಂಗ್ ಸಾಮರ್ಥ್ಯವನ್ನು ಕೊಡುತ್ತವೆ. ಕನ್​ಸ್ಟ್ರನ್​ನಲ್ಲಿ ಬಲವರ್ಧಿತ ಇಟ್ಟಿಗೆಯ ಲಿಂಟೆಲ್‌ಗಳನ್ನು ಬಳಸುವ ಪ್ರಕ್ರಿಯೆಯು ಇಟ್ಟಿಗೆ ಕೆಲಸದೊಳಗೆ ಬಲವರ್ಧನೆಯನ್ನು ಇರಿಸುವುದನ್ನು ಒಳಗೊಂಡಿರುತ್ತದೆ. ಈ ಬಲವರ್ಧನೆಯು ಹೆಚ್ಚುವರಿ ಕರ್ಷಕ ಶಕ್ತಿಯನ್ನು ಒದಗಿಸುತ್ತದೆ, ಇದು ಭಾರವಾದ ತೂಕವನ್ನು ತಡೆದುಕೊಳ್ಳಲು ಮತ್ತು ಕ್ರ್ಯಾಕ್​ ಅಥವಾ ವೈಫಲ್ಯವನ್ನು ತಡೆಯಲು ಸೂಕ್ತವಾಗಿದೆ. ಸರಿಯಾಗಿ ಕಟ್ಟಲು ಮತ್ತು ತೂಕವನ್ನು ಹೊರುವ ಸಾಮರ್ಥ್ಯವನ್ನು ಹೊಂದಲು ಈ ಬಲವರ್ದನೆ ಸಾಮರ್ಥ್ಯ ಕೊಡುತ್ತದೆ.

    5) ಕಾಂಕ್ರೀಟ್ ಲಿಂಟೆಲ್​ಗಳು

    ಕಾಂಕ್ರೀಟ್ ಲಿಂಟೆಲ್‌ಗಳನ್ನು ಅವುಗಳ ಅಸಾಧಾರಣ ಶಕ್ತಿ, ಬಾಳಿಕೆ ಮತ್ತು ಅತ್ಯುತ್ತಮವಾದ ತಾಕತ್ತಿನಿಂದಾಗಿ ಕನ್​ಸ್ಟ್ರಕ್ಷನ್​ನಲ್ಲಿ ಹೆಚ್ಚು ಬಳಸಲಾಗುತ್ತದೆ. ಅವುಗಳನ್ನು ಎರಡು ಮುಖ್ಯ ವಿಧಗಳಾಗಿ ವರ್ಗೀಕರಿಸಬಹುದು: ಸರಳ ಕಾಂಕ್ರೀಟ್ ಲಿಂಟೆಲ್​ಗಳು ಮತ್ತು ಬಲವರ್ಧಿತ ಕಾಂಕ್ರೀಟ್ ಲಿಂಟೆಲ್​ಗಳು.

  • 1) ಪ್ಲೇನ್​ ಕಾಂಕ್ರೀಟ್ ಲಿಂಟೆಲ್‌ಗಳು

  • ಯಾವುದೇ ಹೆಚ್ಚುವರಿ ಬಲವರ್ಧನೆಯಿಲ್ಲದೆ ಕಾಂಕ್ರೀಟ್‌ನಿಂದ ಮಾಡಲಾದ ಲಿಂಟೆಲ್‌ಗಳನ್ನು ಪ್ಲೇನ್​ ಕಾಂಕ್ರೀಟ್ ಲಿಂಟೆಲ್‌ಗಳು ಎನ್ನುತ್ತಾರೆ. ಸಾದಾ ಕಾಂಕ್ರೀಟ್ ಲಿಂಟೆಲ್​​ಗಳನ್ನು ಸಾಮಾನ್ಯವಾಗಿ ಸಣ್ಣ ಸ್ಪ್ಯಾನ್‌ಗಳು ಮತ್ತು ಹಗುರವಾದ ಭಾರವನ್ನು ಹೊರಲು ಬಳಸಲಾಗುತ್ತದೆ. ಕಾಂಕ್ರೀಟ್​ನ ಸ್ವಂತ-ತೂಕ ಮತ್ತು ಸಂಕುಚಿತ ಶಕ್ತಿಯು ಅಗತ್ಯವಿರುವ ಭಾರವನ್ನು ಬೆಂಬಲಿಸಲು ಸಾಕಾಗುತ್ತದೆ.
  • 2) ಬಲವರ್ಧಿತ ಕಾಂಕ್ರೀಟ್ ಲಿಂಟೆಲ್‌ಗಳು

    ಬಲವರ್ಧಿತ ಕಾಂಕ್ರೀಟ್ ಲಿಂಟೆಲ್‌ಗಳು ತಮ್ಮ ಲೋಡ್-ಬೇರಿಂಗ್ ಸಾಮರ್ಥ್ಯ ಮತ್ತು ರಚನಾತ್ಮಕ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಕಾರ್ಪೊರೇಟ್ ಉಕ್ಕಿನೊಂದಿಗೆ ಸಂಯೋಜಿಸುತ್ತವೆ. ಈ ಲಿಂಟೆಲ್​ಗಳು ಅಗಲವಾದ ತೆರೆಯುವಿಕೆಗೆ ಭಾರವಾದ ಹೊರೆಗಳನ್ನು ಬೆಂಬಲಿಸಲು ಸಮರ್ಥರಾಗಿರುತ್ತವೆ. ಬಲವರ್ಧಿತ ಕಾಂಕ್ರೀಟ್ ಲಿಂಟೆಲ್​ಗಳನ್ನು ಎರಡು ಉಪವಿಧಗಳಾಗಿ ವಿಂಗಡಿಸಬಹುದು:

  • 1. ಪ್ರೀಕಾಸ್ಟ್ ಲಿಂಟಲ್ಸ್
  • ಪ್ರೀಕಾಸ್ಟ್ ಲಿಂಟೆಲ್‌ಗಳನ್ನು ನಿರ್ಧಾರಿತ ಸೈಜ್​ಗಳು ಮತ್ತು ಆಕಾರಗಳಲ್ಲಿ ಉತ್ಪಾದಿಸಲಾಗುತ್ತದೆ. ಈ ಲಿಂಟೆಲ್​ಗಳನ್ನು ಸಮರ್ಥವಾಗಿ ಉತ್ಪಾದನೆ ಮಾಡಲು ಮತ್ತು ತ್ವರಿತವಾಗಿ ಅಳವಡಿಸಲು ಅನುವು ಮಾಡಿಕೊಡುತ್ತವೆ. ಅವು ಸ್ಥಿರವಾದ ಗುಣಮಟ್ಟ, ಅಳತೆಯ ನಿಖರತೆಯನ್ನು ನೀಡುತ್ತವೆ ಮತ್ತು ಯೋಜನೆಯ ಅವಶ್ಯಕತೆಗಳಿಗೆ ಅನುಗುಣವಾಗಿ ವಿವಿಧ ಪೂರ್ಣಗೊಳಿಸುವಿಕೆಗಳೊಂದಿಗೆ ಕಸ್ಟಮೈಸ್ ಮಾಡಬಹುದು.

  • 2. ಕ್ಯಾಸ್ಟ್-ಇನ್-ಸಿಟು ಲಿಂಟೆಲ್‌ಗಳು

    ಎರಕಹೊಯ್ದ ಸಿಟು ಲಿಂಟೆಲ್‌ಗಳನ್ನು ಸೈಟ್‌ನಲ್ಲಿಯೇ ತಯಾರಿಸಲಾಗುತ್ತದೆ, ನಂತರ ಅವುಗಳನ್ನು ಬಲಪಡಿಸಲು ಫಾರ್ಮ್‌ವರ್ಕ್‌ನಲ್ಲಿ ಇರಿಸಲಾಗುತ್ತದೆ. ಲಿಂಟೆಲ್ ಗಳನ್ನು ತಯಾರಿಸಲು ಕಾಂಕ್ರೀಟ್ ಅನ್ನು ಸುರಿಯಲಾಗುತ್ತದೆ. ಅವುಗಳು ವಿನ್ಯಾಸ ಮತ್ತು ಶೈಲಿಯಲ್ಲಿ ಹೊಸತನವನ್ನು ಕೊಡುತ್ತವೆ ಮತ್ತು ಸಂಕೀರ್ಣ ಅಥವಾ ವಿಶಿಷ್ಟವಾದ ನಿರ್ಮಾಣ ಸಂದರ್ಭಗಳಲ್ಲಿ ಸಾಮರ್ಥ್ಯವನ್ನು ನೀಡುತ್ತವೆ. ಮತ್ತು ಸುತ್ತಮುತ್ತಲಿನ ಅಂಶಗಳೊಂದಿಗೆ ಅಗತ್ಯಕ್ಕೆ ತಕ್ಕಂತೆ ಹೊಂದಿಸಬಹುದು.


6) ಸ್ಟೀಲ್ ಲಿಂಟೆಲ್‌ಗಳು


    ಸಾಂಪ್ರದಾಯಿಕ ಇಟ್ಟಿಗೆ ಲಿಂಟೆಲ್‌ಗಳಿಗೆ ಹೋಲಿಸಿದರೆ ಬಲವರ್ಧಿತ ಇಟ್ಟಿಗೆ ಲಿಂಟೆಲ್‌ಗಳು ಹೆಚ್ಚಿನ ಮಟ್ಟದ ಸಾಮರ್ಥ್ಯ ಮತ್ತು ಲೋಡ್-ಬೇರಿಂಗ್ ಸಾಮರ್ಥ್ಯವನ್ನು ನೀಡುತ್ತವೆ. ಬಲವರ್ಧಿತ ಇಟ್ಟಿಗೆ ಲಿಂಟೆಲ್‌ಗಳನ್ನು ನಿರ್ಮಿಸುವ ಪ್ರಕ್ರಿಯೆಯು ಇಟ್ಟಿಗೆಗಳನ್ನು ಬಲವರ್ಧನೆ (ಗಟ್ಟಿಗೊಳಿಸುವಿಕೆ)ಯನ್ನು ಒಳಗೊಂಡಿರುತ್ತದೆ . ಈ ಗಟ್ಟಿಗೊಳಿಸುವಿಕೆಯು ಹೆಚ್ಚುವರಿ ಕರ್ಷಕ ಶಕ್ತಿಯನ್ನು ಕೊಡುತ್ತದೆ, ಜೊತೆಗೆ ಭಾರವಾದ ತೂಕವನ್ನು ತಡೆದುಕೊಳ್ಳಲು ಮತ್ತು ಕ್ರ್ಯಾಕ್​ ಅಥವಾ ವೈಫಲ್ಯವನ್ನು ತಡೆಯಲು ಸೂಕ್ತವಾಗಿವೆ. ಸರಿಯಾಗಿ ಕಟ್ಟಲು ಮತ್ತು ತೂಕವನ್ನು ಹೊರುವ ಸಾಮರ್ಥ್ಯವನ್ನು ಹೊಂದಲು ಈ ಬಲವರ್ದನೆ ಸಾಮರ್ಥ್ಯ ಕೊಡುತ್ತದೆ.

  • 1) ಸ್ಟ್ಯಾಂಡರ್ಡ್ ಕ್ಯಾವಿಟಿ ಸ್ಟೀಲ್ ಲಿಂಟೆಲ್‌ಗಳು

  • ಸ್ಟ್ಯಾಂಡರ್ಡ್ ಕ್ಯಾವಿಟಿ ಸ್ಟೀಲ್ ಲಿಂಟೆಲ್​ಗಳನ್ನು ಟೊಳ್ಳು ಗೋಡೆಗಳ ನಿರ್ಮಾಣಗಳಲ್ಲಿ ಬಳಸಲು ವಿನ್ಯಾಸಗೊಳಿಸಲಾಗಿದೆ. ಅವು ಗೋಡೆಯೊಳಗೆ ತೇವಾಂಶವನ್ನು ನಿರ್ವಹಿಸಲು ಸಹಾಯ ಮಾಡುವ ಟೊಳ್ಳಿನ ತಟ್ಟೆಯೊಂದಿಗೆ ಸಮತಲವಾದ ಸ್ಟೀಲ್​ ಬೀಮ್​ ಅನ್ನು ಒಳಗೊಂಡಿರುತ್ತವೆ. ಈ ಲಿಂಟೆಲ್‌ಗಳು ಇನ್ಸುಲೇಟೆಡ್ ಟೊಳ್ಳತನ ಇರುವಲ್ಲಿ ಹಾಕಲು ಸೂಕ್ತವಾಗಿವೆ, ಉಷ್ಣತೆಯನ್ನು ಕಾಪಾಡಿಕೊಳ್ಳುವಾಗ ಗೋಡೆಯ ಒಳ ಮತ್ತು ಹೊರ ಲೀವ್​ಗಳಿಗೆ ಈ ಲಿಂಟೆಲ್​ಗಳು ಬೆಂಬಲವನ್ನು ಒದಗಿಸುತ್ತದೆ.

  • 2) ಗಿಡ್ಡ ಬಾಹ್ಯ​ ಲೀಫ್​ ಸ್ಟೀಲ್ ಇಂಟೆಲ್​ಗಳು

    ಒಳಗಿನ ಲೀಫ್​ಗೆ ಹೋಲಿಸಿದರೆ ಗೋಡೆಯ ಬಾಹ್ಯ ಲೀಫ್​ ಎತ್ತರದಲ್ಲಿ ಚಿಕ್ಕದಿದ್ದಾಗ ಗಿಡ್ಡ ಬಾಹ್ಯ ಲೀಫ್​​ ಸ್ಟೀಲ್​ ಲಿಂಟೆಲ್‌ಗಳನ್ನು ಬಳಸಲಾಗುತ್ತದೆ. ಈ ಲಿಂಟೆಲ್‌ಗಳು ನಿರ್ದಿಷ್ಟವಾಗಿ ಹೊರ ಲೀಫ್​​ಗಳಿಗೆ ಬೆಂಬಲವನ್ನು ಕೊಡುತ್ತವೆ, ರಚನಾತ್ಮಕ ಸಮಗ್ರತೆ ಮತ್ತು ಸರಿಯಾದ ಲೋಡ್ ಹಂಚುವಿಕೆಯನ್ನು ಖಾತ್ರಿಪಡಿಸುತ್ತದೆ. ಮುಂಭಾಗದ ವಿನ್ಯಾಸಗಳು ಅಥವಾ ವಾಸ್ತುಶಿಲ್ಪದ ವೈಶಿಷ್ಟ್ಯಗಳಂತಹ ಹೊರಗಿನ ಲೀಫ್​ಗೆ ಸ್ಥಳಾವಕಾಶ ಕಲ್ಪಿಸಬೇಕಾದ ಸಂದರ್ಭಗಳಲ್ಲಿ ಅವುಗಳನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ.

  • 3) ಅಗಲವಾದ ಒಳ ಲೀಫ್​ ಸ್ಟೀಲ್ ಲಿಂಟಲ್‌ಗಳು

  • ಅಗಲವಾದ ಒಳ ಲೀಫ್​ ಸ್ಟೀಲ್​ ಲಿಂಟೆಲ್‌ಗಳನ್ನು ಬಾಹ್ಯ ಲೀಫ್​ಗಿಂತ ಅಗಲವಾಗಿರುವ ಟೊಳ್ಳು ಗೋಡೆಯ ಒಳಗಿನ ಲೀಪ್​ ಬೆಂಬಲಿಸಲು ವಿನ್ಯಾಸಗೊಳಿಸಲಾಗಿದೆ. ಒಳಗಿನ ಲೀಫ್​ ಹೆಚ್ಚುವರಿ ಲೋಡ್-ಬೇರಿಂಗ್ ಸಾಮರ್ಥ್ಯದ ಅಗತ್ಯವಿರುವಾಗ ಅಥವಾ ಗೋಡೆಯೊಳಗೆ ದಪ್ಪ ಇನ್ಸುಲೇಶನ್​ ಅಥವಾ ಸೇವೆಗಳಿಗೆ ಸ್ಥಳಾವಕಾಶದ ಅಗತ್ಯವಿರುವಾಗ ಈ ಲಿಂಟಲ್​ಗಳನ್ನು ಬಳಸಲಾಗುತ್ತದೆ. ಗೋಡೆಯ ರಚನೆಯ ಸಮಗ್ರತೆಯನ್ನು ಕಾಪಾಡಿಕೊಳ್ಳುವಾಗ ಅವುಗಳು ವಿಶಾಲ ಒಳಗಿನ ಲೀಫ್​ಗೆ ಸರಿಯಾದ ಬೆಂಬಲ ಮತ್ತು ಸ್ಥಿರತೆಯನ್ನು ಖಚಿತಪಡಿಸುತ್ತವೆ.
  • 4) ಅಗಲವಾದ ಬಾಹ್ಯ ಲೀಫ್​ ಸ್ಟೀಲ್​ ಲಿಂಟೆಲ್‌ಗಳು

    ಟೊಳ್ಳಿನ ಗೋಡೆಯ ಬಾಹ್ಯ ಲೀಫ್​ ಒಳಗಿನ ಲೀಫ್​ಗಿಂತ ಅಗಲವಾಗಿದ್ದಾಗ ಅಗಲವಾದ ಬಾಹ್ಯ ಲೀಫ್​ ಸ್ಟೀಲ್​ ಲಿಂಟಲ್‌ಗಳನ್ನು ಬಳಸಲಾಗುತ್ತದೆ. ಈ ಲಿಂಟೆಲ್‌ಗಳು ರಚನಾತ್ಮಕ ಸ್ಥಿರತೆ ಮತ್ತು ಲೋಡ್ ಹಂಚಿಕೆಯನ್ನು ಖಾತ್ರಿಪಡಿಸುವ, ಅಗಲವಾದ ಬಾಹ್ಯ ಲೀಫ್​ಗಳಿಗೆ ಬೆಂಬಲವನ್ನು ನೀಡುತ್ತವೆ. ವಿಶಾಲವಾದ ಬಾಹ್ಯ ಗೋಡೆಗಳ ಅಗತ್ಯವಿರುವ ಅಥವಾ ಸೌಂದರ್ಯದ ಅಥವಾ ಕ್ರಿಯಾತ್ಮಕ ಉದ್ದೇಶಗಳಿಗಾಗಿ ಹೆಚ್ಚುವರಿ ಸ್ಥಳಾವಕಾಶದ ಅಗತ್ಯವಿರುವಾಗ ವಾಸ್ತುಶಿಲ್ಪದ ವಿನ್ಯಾಸಗಳಲ್ಲಿ ಅವುಗಳನ್ನು ಸಾಮಾನ್ಯವಾಗಿ ಬಳಸಿಕೊಳ್ಳಲಾಗುತ್ತದೆ.

    7) ಸ್ಪೆಷಲಿಸ್ಟ್ ಲಿಂಟಲ್ಸ್

    ಸ್ಪೆಷಲಿಸ್ಟ್ ಲಿಂಟೆಲ್‌ಗಳು ನಿರ್ದಿಷ್ಟ ನಿರ್ಮಾಣ ಅಗತ್ಯತೆಗಳು ಮತ್ತು ಸವಾಲುಗಳನ್ನು ಪರಿಹರಿಸಲು ವಿನ್ಯಾಸಗೊಳಿಸಲಾದ ಎಂಜಿನಿಯರಿಂಗ್ ಉತ್ಪನ್ನಗಳಾಗಿವೆ. ಆಧುನಿಕ ಕನ್​ಸ್ಟ್ರಕ್ಷನ್​ ವಿಧಾನಗಳ ಬೇಡಿಕೆಗಳನ್ನು ಪೂರೈಸಲು ಅವುಗಳನ್ನು ನಿರ್ಮಿಸಲಾಗಿದೆ. ಈ ಲಿಂಟೆಲ್‌ಗಳು ವಿಭಿನ್ನ ವಸ್ತುಗಳಲ್ಲಿ ಲಭ್ಯವಿವೆ, ಪ್ರತಿಯೊಂದೂ ವಿಶಿಷ್ಟವಾದ ಗುಣಲಕ್ಷಣಗಳು ಮತ್ತು ಪ್ರಯೋಜನಗಳನ್ನು ಹೊಂದಿದೆ. ಅವುಗಳು ಉಷ್ಣ ನಿರೋಧಕ, ಅಗ್ನಿ ನಿರೋಧಕ, ಧ್ವನಿ ನಿರೋಧಕ ಮತ್ತು ರಚನಾತ್ಮಕ ಬೆಂಬಲದಂತಹ ವೈಶಿಷ್ಟ್ಯಗಳನ್ನು ಒದಗಿಸುತ್ತವೆ, ನಿರ್ದಿಷ್ಟ ಯೋಜನೆಯ ಅವಶ್ಯಕತೆಗಳನ್ನು ಪೂರೈಸುತ್ತವೆ.



    8) ಕ್ಯಾವಿಟಿ ಲಿಂಟಲ್ಸ್

    ಕ್ಯಾವಿಟಿ (ಟೊಳ್ಳು) ಲಿಂಟೆಲ್‌ಗಳನ್ನು ಕ್ಯಾವಿಟಿ ಗೋಡೆಯ ಕನ್​ಸ್ಟ್ರಕ್ಷನ್​ಗಳಲ್ಲಿ ಬಳಸಲು ವಿನ್ಯಾಸಗೊಳಿಸಲಾದ ನಿರ್ದಿಷ್ಟ ಪ್ರಕಾರದ ಲಿಂಟೆಲ್ ಆಗಿವೆ. ಈ ಲಿಂಟಲ್‌ಗಳನ್ನು ಗೋಡೆಯ ಒಳ ಮತ್ತು ಹೊರ ಲೀಫ್​ಗಳ ನಡುವಿನ ಟೊಳ್ಳನ್ನು ಸರಿಹೊಂದಿಸುವಾಗ ಗೋಡೆಯಲ್ಲಿ ತೆರೆಯುವಿಕೆಯನ್ನು ವಿಸ್ತರಿಸಲು ಬಳಸಲಾಗುತ್ತದೆ. ಕ್ಯಾವಿಟಿ ಲಿಂಟೆಲ್‌ಗಳನ್ನು ಸಾಮಾನ್ಯವಾಗಿ ಸ್ಟೀಲ್​ ಅಥವಾ ಕಾಂಕ್ರೀಟ್‌ನಂತಹ ವಸ್ತುಗಳಿಂದ ತಯಾರಿಸಲಾಗುತ್ತದೆ ಮತ್ತು ಗೋಡೆಯ ಒಳ ಮತ್ತು ಹೊರ ಲೀಫ್​ಗಳಿಗೆ ಬೆಂಬಲವನ್ನು ಒದಗಿಸಲು ನಿರ್ದಿಷ್ಟವಾಗಿ ವಿನ್ಯಾಸಗೊಳಿಸಲಾಗಿದೆ. ಕ್ಯಾವಿಟಿ ಲಿಂಟೆಲ್‌ಗಳ ಪ್ರಮುಖ ಲಕ್ಷಣವೆಂದರೆ ಕ್ಯಾವಿಟಿ ಟ್ರೇ ಹೊಂದಿರುವುದಾಗಿದೆ. ಈ ಟ್ರೇ ತಡೆಗೋಡೆಯಾಗಿ ಕಾರ್ಯನಿರ್ವಹಿಸುತ್ತದೆ, ತೇವಾಂಶವು ಕ್ಯಾವಿಟಿಯೊಳಗೆ ತೂರಿಕೊಳ್ಳುವುದನ್ನು ತಡೆಯುತ್ತದೆ ಮತ್ತು ಗೋಡೆಗೆ ಹಾನಿ ಮಾಡುತ್ತದೆ. ಕ್ಯಾವಿಟಿ ಲಿಂಟೆಲ್‌ಗಳನ್ನು ಆಯ್ಕೆಮಾಡುವಾಗ, ಗೋಡೆಯ ನಿರ್ಮಾಣದ ಪ್ರಕಾರ ಮತ್ತು ಲೋಡ್ ಅವಶ್ಯಕತೆಗಳಂತಹ ಅಂಶಗಳನ್ನು ಪರಿಗಣಿಸುವುದು ಮುಖ್ಯವಾಗಿದೆ ಮತ್ತು ಸ್ಟ್ರಕ್ಚರಲ್​ ಎಂಜಿನಿಯರ್‌ಗಳೊಂದಿಗೆ ಚರ್ಚಿಸಿದ ಬಳಿಕ ತೀರ್ಮಾನಿಸಿಕೊಳ್ಳಿರಿ.

     

ಲಿಂಟಲ್​ಗಳ ಕಾರ್ಯ

ಕಟ್ಟಡದ ಸ್ಥಿರತೆ, ಬೆಂಬಲ ಮತ್ತು ರಚನಾತ್ಮಕ ಸಮಗ್ರತೆಯನ್ನು ಖಚಿತಪಡಿಸಿಕೊಳ್ಳಲು ಕನ್​​ಸ್ಟ್ರಕ್ಚನ್​ನಲ್ಲಿ ಲಿಂಟೆಲ್‌ನ ಕೆಲಸವು ನಿರ್ಣಾಯಕವಾಗಿದೆ.

    1) ಭಾರವನ್ನು ಹೊರುವುದು

    ಸಮತಲ ಬೀಮ್​ಗಳಾಗಿ ಕಾರ್ಯನಿರ್ವಹಿಸುವುದರಿಂದ, ಲಿಂಟೆಲ್‌ಗಳು ಬಾಗಿಲುಗಳು, ಕಿಟಕಿಗಳು ಮತ್ತು ವೆಂಟಿಲೇಟರ್‌ಗ ಮೇಲಿನ ತೆರೆದ ಸ್ಥಳದ ಮೇಲಿರುವ ಕಲ್ಲು ಅಥವಾ ರಚನಾತ್ಮಕ ಅಂಶಗಳಿಂದ ಭಾರವನ್ನು ಹೊರುತ್ತವೆ.

    2) ಹೊರೆಹೊರುವ ದೃಢತೆ

    ಲಿಂಟೆಲ್‌ಗಳು ಅವುಗಳ ಮೇಲೆ ಬೀಳುವ ಒತ್ತಡ, ಸಂಕೋಚನ ಮತ್ತು ಶಿಯರಿಂಗ್ ಫೋರ್ಸ್​ಗಳನ್ನು ತಡೆದುಕೊಳ್ಳುತ್ತವೆ, ಗೋಡೆ ಅಥವಾ ಸ್ಟ್ರಕ್ಚರ್​ನ ಒಟ್ಟಾರೆ ಶಕ್ತಿ ಮತ್ತು ದೃಢತೆಯನ್ನು ಖಾತ್ರಿಪಡಿಸುತ್ತವೆ.



ಒಟ್ಟುಗೂಡಿಸಿ, ಲಿಂಟೆಲ್ ಎಂದರೇನು?-ಎಂಬ ಪ್ರಶ್ನೆಗೆ ಉತ್ತರಿಸಲು- ಕಟ್ಟಡಗಳ ದೃಢತೆ ಮತ್ತು ಬೆಂಬಲಕ್ಕಾಗಿ ಅಗತ್ಯವಾದ ಕಾರ್ಯಗಳನ್ನು ಪೂರೈಸುವ ಕನ್​ಸ್ಟ್ರಕ್ಷನ್​ನಲ್ಲಿ ಲಿಂಟೆಲ್‌ಗಳು ಪ್ರಮುಖ ಅಂಶಗಳಾಗಿವೆ. ಅವು ಕೇವಲ ಕಾರ್ಯಾತ್ಮಕ ಉದ್ದೇಶಗಳನ್ನು ಪೂರೈಸುವುದಿಲ್ಲ, ಆದರೆ ಕನ್​ಸ್ಟ್ರಕ್ಷನ್​ ಆರ್ಕಿಟೆಕ್ಚರ್​ ಸಮಗ್ರತೆ ಮತ್ತು ಸೌಂದರ್ಯವು ಕನ್​ಸ್ಟ್ರಕ್ಷನ್​ ಪ್ರೊಜೆಕ್ಟ್​ಗಳಲ್ಲಿ ಅವುಗಳನ್ನು ಅನಿವಾರ್ಯವಾಗಿಸುತ್ತದೆ. ಇದು ಮರದ, ಕಲ್ಲು, ಇಟ್ಟಿಗೆ, ಕಾಂಕ್ರೀಟ್, ಸ್ಟೀಲ್​ ಅಥವಾ ವಿಶೇಷ ಲಿಂಟೆಲ್‌ಗಳಾಗಿರಲಿ, ಲಿಂಟೆಲ್ ಏನೆಂದು ಅರ್ಥಮಾಡಿಕೊಳ್ಳುವುದು ಮತ್ತು ಸೂಕ್ತವಾದ ಇಂಟೆಲ್​ ಪ್ರಕಾರವನ್ನು ಆಯ್ಕೆ ಮಾಡುವುದು ನಿರ್ಣಾಯಕವಾಗಿದೆ ಮತ್ತು ನಿಮ್ಮ ನಿರ್ಮಾಣ ಯೋಜನೆಯ ಯಶಸ್ಸಿಗೆ ಅದು ಸಹಾಯ ಮಾಡಬಹುದು.



ಸಂಬಂಧಿತ ಲೇಖನಗಳು




ಶಿಫಾರಸು ಮಾಡಿದ ವೀಡಿಯೊಗಳು





  ಮನೆ ಕನ್‌ಸ್ಟ್ರಕ್ಷನ್‌ಗಾಗಿ ಎಸ್ಟಿಮೇಟಿಂಗ್ ಟೂಲ್ಸ್


ವೆಚ್ಚ ಕ್ಯಾಲ್ಕುಲೇಟರ್

ಪ್ರತಿಯೊಬ್ಬ ಮನೆ ನಿರ್ಮಾಣ ಮಾಡುವವರು ತಮ್ಮ ಕನಸಿನ ಮನೆಯನ್ನು ನಿರ್ಮಿಸಲು ಬಯಸುತ್ತಾರೆ ಆದರೆ ಅದು ಅವರ ಬಜೆಟ್‌ ವೆಚ್ಚವನ್ನು ಮೀರದಂತೆ ಇರಿಸಿಕೊಳ್ಳಲು ಬಯಸುತ್ತಾರೆ. 

logo

ಇಎಂಐ ಕ್ಯಾಲ್ಕುಲೇಟರ್

ಮನೆ ನಿರ್ಮಾಣಕ್ಕೆ ಹಣಕಾಸು ಒದಗಿಸಿಕೊಳ್ಳುವ ಅತ್ಯುತ್ತಮ ಮಾರ್ಗಗಳಲ್ಲಿ ಮನೆ-ಸಾಲವನ್ನು ತೆಗೆದುಕೊಳ್ಳುವುದು ಒಂದಾಗಿರುತ್ತದೆ, ಆದರೆ ಮನೆಯನ್ನು ನಿರ್ಮಿಸುವವರು ಎಷ್ಟು ಕಂತುಗಳನ್ನು ಪಾವತಿಸಬೇಕೆಂದು ತಿಳಿಯಲು ಬಯಸುತ್ತಾರೆ. 

logo

ಪ್ರಾಡಕ್ಟ್ ಪ್ರೆಡಿಕ್ಟರ್

ಮನೆಯನ್ನು ನಿರ್ಮಿಸುವ ಆರಂಭಿಕ ಹಂತಗಳಲ್ಲಿ, ಮನೆ ನಿರ್ಮಿಸುವವರು ಸರಿಯಾದ ಉತ್ಪನ್ನಗಳನ್ನು ಆಯ್ಕೆ ಮಾಡುವುದು ಮುಖ್ಯವಾಗಿರುತ್ತದೆ. 

logo

ಅಂಗಡಿ ಪತ್ತೆಕಾರಕ

ಮನೆ ಕಟ್ಟುವವರಿಗೆ, ಮನೆಯ ಕಟ್ಟಡದ ಬಗ್ಗೆ ಎಲ್ಲಾ ಅಮೂಲ್ಯವಾದ ಮಾಹಿತಿಯನ್ನು ಪಡೆಯುವ ಸರಿಯಾದ ಅಂಗಡಿಯನ್ನು ಕಂಡುಹಿಡಿಯುವುದು ಮುಖ್ಯವಾಗಿದೆ.

logo

Loading....