ಪ್ರತಿ 1 ಘನ ಮೀಟರ್‌ಗೆ ಎಂ20 ಕಾಂಕ್ರೀಟ್ ಅನುಪಾತವನ್ನು ಹೇಗೆ ಮಿಶ್ರಣ ಮಾಡುವುದು?
ಎಂ20 ಕಾಂಕ್ರೀಟ್ ಮಿಶ್ರಣಕ್ಕೆ ನಿಖರವಾದ ಅಳತೆಗಳು ಮತ್ತು ಘಟಕಗಳ ಕುರಿತು ಸ್ಪಷ್ಟವಾಗಿ ತಿಳಿದುಕೊಳ್ಳುವ ಅಗತ್ಯವಿರುತ್ತದೆ. ಎಂ20 ಮಿಶ್ರಣ ಅನುಪಾತ 1:1.5:3 (ಸಿಮೆಂಟ್: ಮರಳು: ಅಗ್ರಿಗೇಟ್ಗಳು) ಕಾರ್ಯಸಾಧ್ಯತೆ ಮತ್ತು ಶಕ್ತಿಯನ್ನು ಸಮತೋಲನಗೊಳಿಸುವ ಕಾಂಕ್ರೀಟ್ ಮಿಶ್ರಣವನ್ನು ಖಾತ್ರಿಗೊಳಿಸುತ್ತದೆ, ಇದು ವಿವಿಧ ಮಧ್ಯಮ ಸಾಮರ್ಥ್ಯದ ಬಳಕೆಗಳಿಗೆ ಸೂಕ್ತವಾಗಿದೆ. 1 ಘನ ಮೀಟರ್ ಪರಿಮಾಣಕ್ಕೆ ಕಾಂಕ್ರೀಟ್ ಅನ್ನು ಪರಿಣಾಮಕಾರಿಯಾಗಿ ಮಿಶ್ರಣ ಮಾಡುವ ಸರಳ ಮಾರ್ಗದರ್ಶಿ ಇಲ್ಲಿದೆ:
1. ಅನುಪಾತದ ಕುರಿತು ತಿಳಿದುಕೊಳ್ಳುವುದು:
ಎಂ20 ಕಾಂಕ್ರೀಟ್ ಮಿಶ್ರಣದ ಅನುಪಾತವು 1:1.5:3 ರಷ್ಟಿದೆ, ಅಂದರೆ ಸಿಮೆಂಟ್‌ನ ಪ್ರತಿಯೊಂದು ಭಾಗಕ್ಕೆ, ನೀವು 1.5 ಭಾಗದಷ್ಟು ಮರಳು ಮತ್ತು 3 ಭಾಗದಷ್ಟು ಅಗ್ರಿಗೇಟ್ ಸೇರಿಸುವ ಅಗತ್ಯವಿದೆ. ಈ ಅನುಪಾತವು ಕಾಂಕ್ರೀಟ್ 28 ದಿನಗಳ ಕ್ಯೂರಿಂಗ್ ನಂತರ 20 ಎಂಪಿಎ ಸಂಕುಚಿತ ಶಕ್ತಿಯನ್ನು ಪಡೆದುಕೊಳ್ಳುತ್ತದೆ ಎಂಬುದನ್ನು ಖಚಿತಪಡಿಸುತ್ತದೆ.
2. ಅಗತ್ಯವಾದ ಸಾಮಗ್ರಿಗಳನ್ನು ಪಟ್ಟಿ ಮಾಡಿಕೊಳ್ಳುವುದು:
ಎ) ಸಿಮೆಂಟ್: ಎಂ20 ಕಾಂಕ್ರೀಟಿನ 1 ಘನ ಮೀಟರ್ (ಎಂ³) ಗೆ ಅಗತ್ಯವಿರುವ ಸಿಮೆಂಟ್ ಪ್ರಮಾಣವನ್ನು ಅನುಪಾತದ ಆಧಾರದ ಮೇಲೆ ಲೆಕ್ಕಹಾಕಲಾಗುತ್ತದೆ. ಪ್ರಮಾಣಿತ ತೂಕದ ಸಿಮೆಂಟ್ (1400 ಕೆಜಿ/ಎಂ³) ಅನ್ನು ಪರಿಗಣಿಸಿ, ನಿಮಗೆ ಸುಮಾರು 8 ಚೀಲಗಳಷ್ಟು ಸಿಮೆಂಟ್ ಬೇಕಾಗುತ್ತದೆ.
ಬಿ) ಮರಳು: ಅಗತ್ಯವಿರುವ ಮರಳಿನ ಪ್ರಮಾಣವು ಸಿಮೆಂಟಿಗಿಂತ 1.5 ರಷ್ಟು ಹೆಚ್ಚಾಗಿರಬೇಕು ಎಂಬ ಅನುಪಾತವನ್ನು ಕೊಡಲಾಗಿದೆ. ಇದು ಸರಿಸುಮಾರು 0.42 ಎಂ³ ಮರಳು ಎಂದು ಭಾಷಾಂತರಿಸುತ್ತದೆ.
ಸಿ) ಅಗ್ರಿಗೇಟ್: ಅನುಪಾತದ 3:1 ಭಾಗವನ್ನು ಅನುಸರಿಸುವ ಮೂಲಕ ಪ್ರತಿ ಘನ ಮೀಟರ್ ಕಾಂಕ್ರೀಟ್ ಮಿಶ್ರಣಕ್ಕೆ ಅಗತ್ಯವಿರುವ ಒಟ್ಟು ಪರಿಮಾಣವು 0.84 ಎಂ³ ಆಗಿದೆ.
3. ಮಿಶ್ರಣ ಮಾಡುವ ಪ್ರಕ್ರಿಯೆ:
ಸಿಮೆಂಟ್, ಮರಳು ಮತ್ತು ಅಗ್ರಿಗೇಟ್ಗಳು ಈ ಎಲ್ಲವನ್ನು ಸೇರಿಸಿ, ಅವೆಲ್ಲವೂ ಒಂದು ಏಕರೂಪದ ಬಣ್ಣಕ್ಕೆ ಬರುವಂತೆ ಒಣ ಮಿಶ್ರಣವನ್ನು ಮಾಡಿಕೊಳ್ಳಿ. ಕ್ರಮೇಣ ನೀರನ್ನು ಸೇರಿಸಿ ಮತ್ತು ಕಾಂಕ್ರೀಟ್ ಉಪಯೋಗಿಸಲು ಸಿದ್ಧವಾಗುವವರೆಗೆ ಮಿಶ್ರಣ ಮಾಡುವುದನ್ನು ಮುಂದುವರಿಸಿ. ಎಷ್ಟು ಪ್ರಮಾಣದ ನೀರನ್ನು ಬಳಸಬೇಕು ಎಂಬುದು ಮಹತ್ವದ್ದಾಗಿದೆ; ಹೆಚ್ಚು ನೀರು ಬಳಸುವುದರಿಂದ ಕಾಂಕ್ರೀಟ್ ದುರ್ಬಲವಾಗಬಹುದು. ಜೊತೆಗೆ ಅತಿ ಕಡಿಮೆ ನೀರು ಬಳಸಿ ಮಿಶ್ರಣ ಮಾಡುವುದರಿಂದ ಬಳಕೆ ಮಾಡಲು ಸಾಧ್ಯವಾಗದಿರಬಹುದು.
4. ಗುಣಮಟ್ಟ ಮತ್ತು ಸ್ಥಿರತೆ:
ಸಾಮಗ್ರಿಗಳ ಗುಣಮಟ್ಟ ಉತ್ತಮವಾಗಿದೆ ಮತ್ತು ಅವು ಕಲ್ಮ ಶಗಳಿಂದ ಮುಕ್ತವಾಗಿವೆ ಎಂಬುದನ್ನು ಖಚಿತಪಡಿಸಿಕೊಳ್ಳುವ ಮೂಲಕ ಮಿಶ್ರಣದ ಗುಣಮಟ್ಟವನ್ನು ಕಾಪಾಡಿಕೊಳ್ಳುವುದು ಅತ್ಯಗತ್ಯ. ಮಿಶ್ರಣ ಪ್ರಕ್ರಿಯೆಯಲ್ಲಿನ ಸ್ಥಿರತೆಯು ಬಲವಾದ ಮತ್ತು ಹೆಚ್ಚು ಬಾಳಿಕೆ ಬರುವ ಎಂ20 ಕಾಂಕ್ರೀಟ್ ಪಡೆಯುವುದಕ್ಕೆ ಕಾರಣವಾಗುತ್ತದೆ.