Get In Touch

Get Answer To Your Queries

Select a valid category

Enter a valid sub category

acceptence

ಒಂದು ಮನೆಯನ್ನು ನಿರ್ಮಿಸಲು ನೀವು ಹಣಕಾಸಿನ ವಿಷಯದಲ್ಲಿ ಸಿದ್ಧರಾಗಿದ್ದೀರಾ?

ಮನೆಯನ್ನು ಕಟ್ಟುವ ವಿಷಯಕ್ಕೆ ಬಂದಾಗ, ಅಂತಿಮವಾಗಿ ಮುಖ್ಯವಾಗುವುದು ಹಣಕಾಸು. ನಿಮ್ಮ ಹಣಕಾಸನ್ನು ಸರಿಯಾಗಿ ನಿಭಾಯಿಸಲು, ನೀವು ನಿಮ್ಮ ಕುಟುಂಬದಲ್ಲಿ ಕಾಲಕಾಲಕ್ಕೆ ಬದಲಾಗುತ್ತಿರುವ ಅಗತ್ಯತೆಗಳನ್ನು ಅರಿತುಕೊಳ್ಳುವುದು ಮುಖ್ಯವಾಗುತ್ತದೆ. ಇದು ನಿಮ್ಮ ಮನೆ ನಿರ್ಮಾಣ ಪಯಣದಲ್ಲಿನ ವೆಚ್ಚವನ್ನು ಸರಿಯಾಗಿ ಯೋಜಿಸಲು ನೆರವಾಗುವ ಮೊದಲ ಹೆಜ್ಜೆಯಾಗಿರುತ್ತದೆ. ಜೊತೆಗೆ, ಇದು ನಿಮ್ಮ ಈ ಪಯಣದಲ್ಲಿ ಎದುರಾಗುವ ಏರಿಳಿತಗಳನ್ನು ಸರಿಯಾಗಿ ನಿಭಾಯಿಸಲು ನೀವು ಸೂಕ್ತ ತಯಾರಿಗೊಂಡಿದ್ದೀರಿ ಎಂದು ಖಾತರಿಯನ್ನು ಒದಗಿಸುತ್ತದೆ.

logo

Step No.1

ಮೊದಲ ಹಂತವೇ ಖರ್ಚುವೆಚ್ಚಗಳ ಮುನ್ನಂದಾಜು ಮಾಡುವುದು. ಪ್ರತಿಯೊಂದು ಮನೆಯ ವೆಚ್ಚಗಳು ಮತ್ತು ಉಳಿತಾಯಗಳ ಸರಿಯಾದ ಚಿತ್ರಣಕ್ಕಾಗಿ ಅದರ ಆಯವ್ಯಯಕ್ಕೆ ಅನುಗುಣವಾಗಿ ಯೋಜಿಸಬೇಕು.

Step No.2

ಪ್ರತಿಯೊಂದು ಘಟ್ಟದಲ್ಲಿಯೂ ಸಹ ಎಷ್ಟು ಹಣ ಬೇಕಾಗುತ್ತದೆ ಎಂಬ ಅಂದಾಜನ್ನು ಹೊಂದುವುದು ಅತಿ ಮುಖ್ಯವಾಗಿರುತ್ತದೆ. ಆದ್ದರಿಂದ ಒಂದು ನಿವೇಶನವನ್ನು ಖರೀದಿಸಿದ ನಂತರ ಮತ್ತು ನಿರ್ಮಾಣವನ್ನು ಆರಂಭಿಸುವ ಮೊದಲು ಉಳಿತಾಯಕ್ಕಾಗಿ ವಿಶೇಷ ಗಮನವನ್ನು ಹರಿಸಿ. ಇದರಿಂದ ನಿಮ್ಮ ಮನೆಯ ನಿರ್ಮಾಣದ ಪಯಣವು ಸುಲಲಿತವಾಗಿರುತ್ತದೆ.

Step No.3

ನಿಮ್ಮ ಉಳಿತಾಯಗಳ ಆಧಾರದಲ್ಲಿ, ನೀವು ಸರಿಯಾದ ಗೃಹ ಸಾಲವನ್ನು ಆಯ್ಕೆ ಮಾಡಿಕೊಳ್ಳಬಹುದು. ಸಾಲವನ್ನು ತೆಗೆದುಕೊಳ್ಳು ಮೊದಲು ಎಲ್ಲಾ ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಲು ನೆನಪಿಡಿ, ಮತ್ತು ನಿಮಗೆ ಹೊಂದಿಕೆಯಾಗುವ ಒಂದು ಇಎಂಐ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಿ.

Step No.4

ಕಾನೂನು ಮತ್ತು ನಿಬಂಧನೆಗಳ ಪರಿಶೀಲನೆಗಳು

ಮನೆ ನಿರ್ಮಾಣದ ಬಗ್ಗೆ ವಿಶೇಷವಾಗಿ ಕಾನೂನಿನ ಜಟಿಲತೆಗಳು ಮತ್ತು ಇತರ ನಿಬಂಧನೆಗಳ ಕುರಿತು ನಿಮಗೆ ಎಲ್ಲವೂ ತಿಳಿದಿಲ್ಲದಿರಬಹುದು. ಆದ್ದರಿಂದ ಗುತ್ತಿಗೆದಾರನು, ನಿಮ್ಮ ನೆರವಿನ ವ್ಯಕ್ತಿ ಆಗಿದ್ದು, ಅವರು ಯೋಜನೆಯನ್ನು ಪ್ರಾರಂಭಿಸುವ ಮೊದಲು ಅಗತ್ಯವಿರುವ ಎಲ್ಲಾ ಒಪ್ಪಿಗೆಗಳು ಮತ್ತು ಪರವಾನಗಿಗಳನ್ನು ಚೆನ್ನಾಗಿ ಅರಿತಿರುವವರಾಗಿರುತ್ತಾರೆ.

ಲೇಖನವನ್ನು ಹಂಚಿಕೊಳ್ಳಿ :


ಸಂಬಂಧಿತ ಲೇಖನಗಳು




ಶಿಫಾರಸು ಮಾಡಿದ ವೀಡಿಯೊಗಳು




  ಮನೆ ಕನ್‌ಸ್ಟ್ರಕ್ಷನ್‌ಗಾಗಿ ಎಸ್ಟಿಮೇಟಿಂಗ್ ಟೂಲ್ಸ್


ವೆಚ್ಚ ಕ್ಯಾಲ್ಕುಲೇಟರ್

ಪ್ರತಿಯೊಬ್ಬ ಮನೆ ನಿರ್ಮಾಣ ಮಾಡುವವರು ತಮ್ಮ ಕನಸಿನ ಮನೆಯನ್ನು ನಿರ್ಮಿಸಲು ಬಯಸುತ್ತಾರೆ ಆದರೆ ಅದು ಅವರ ಬಜೆಟ್‌ ವೆಚ್ಚವನ್ನು ಮೀರದಂತೆ ಇರಿಸಿಕೊಳ್ಳಲು ಬಯಸುತ್ತಾರೆ. 

logo

ಇಎಂಐ ಕ್ಯಾಲ್ಕುಲೇಟರ್

ಮನೆ ನಿರ್ಮಾಣಕ್ಕೆ ಹಣಕಾಸು ಒದಗಿಸಿಕೊಳ್ಳುವ ಅತ್ಯುತ್ತಮ ಮಾರ್ಗಗಳಲ್ಲಿ ಮನೆ-ಸಾಲವನ್ನು ತೆಗೆದುಕೊಳ್ಳುವುದು ಒಂದಾಗಿರುತ್ತದೆ, ಆದರೆ ಮನೆಯನ್ನು ನಿರ್ಮಿಸುವವರು ಎಷ್ಟು ಕಂತುಗಳನ್ನು ಪಾವತಿಸಬೇಕೆಂದು ತಿಳಿಯಲು ಬಯಸುತ್ತಾರೆ. 

logo

ಪ್ರಾಡಕ್ಟ್ ಪ್ರೆಡಿಕ್ಟರ್

ಮನೆಯನ್ನು ನಿರ್ಮಿಸುವ ಆರಂಭಿಕ ಹಂತಗಳಲ್ಲಿ, ಮನೆ ನಿರ್ಮಿಸುವವರು ಸರಿಯಾದ ಉತ್ಪನ್ನಗಳನ್ನು ಆಯ್ಕೆ ಮಾಡುವುದು ಮುಖ್ಯವಾಗಿರುತ್ತದೆ. 

logo

ಅಂಗಡಿ ಪತ್ತೆಕಾರಕ

ಮನೆ ಕಟ್ಟುವವರಿಗೆ, ಮನೆಯ ಕಟ್ಟಡದ ಬಗ್ಗೆ ಎಲ್ಲಾ ಅಮೂಲ್ಯವಾದ ಮಾಹಿತಿಯನ್ನು ಪಡೆಯುವ ಸರಿಯಾದ ಅಂಗಡಿಯನ್ನು ಕಂಡುಹಿಡಿಯುವುದು ಮುಖ್ಯವಾಗಿದೆ.

logo

Loading....