Get In Touch

Get Answer To Your Queries

Select a valid category

Enter a valid sub category

acceptence

ಪೋರ್ಟ್‌ಲ್ಯಾಂಡ್ ಪೊಜೊಲಾನಾ ಸಿಮೆಂಟ್ ಎಂದರೇನು?

ಪೋರ್ಟ್‌ಲ್ಯಾಂಡ್ ಪೊಜೊಲಾನಾ ಸಿಮೆಂಟ್ (ಪಿಪಿಸಿ) ಅನ್ನು ಅಧಿಕ ಗುಣಮಟ್ಟದ ಕ್ಲಿಂಕರ್ ಅನ್ನು ಇಂಟರ್‌-ಗ್ರೈಂಡಿಂಗ್‌ ಮಾಡುವ ಮೂಲಕ ಉತ್ಪಾದಿಸಲಾಗುತ್ತದೆ. ಇದರಲ್ಲಿ ಸಮತೋಲಿತ ರಾಸಾಯನಿಕ ಸಂಯೋಜನೆ, ಅಧಿಕ ಪ್ರತಿಕ್ರಿಯಾತ್ಮಕ ಸಿಲಿಕಾ ಇರುವ ಫ್ಲೈ ಆಶ್‌ ಮತ್ತು ಡೀಲೀಟಿರಿಯಸ್ ಸಾಮಗ್ರಿಗಳೊಂದಿಗೆ ಅಧಿಕ ಶುದ್ಧತೆಯ ಜಿಪ್ಸಮ್ ಇರುತ್ತದೆ. ಅಧಿಕ ರಿಯಾಕ್ಟಿವ್ ಸಿಲಿಕಾ ಇರುವ ಅತಿ ಸಣ್ಣ ಫ್ಲೈ ಆ್ಯಶ್‌ ಜೊತೆಗೆ ಉನ್ನತ ಗುಣಮಟ್ಟದ ಆರ್ಡಿನರಿ ಪೋರ್ಟ್‌ಲ್ಯಾಂಡ್ ಸಿಮೆಂಟ್‌ ಮಿಶ್ರಣ ಮಾಡಿಯೂ ಇದನ್ನು ಉತ್ಪಾದಿಸಲಾಗುತ್ತದೆ. ಸಿಮೆಂಟ್ ಉತ್ತಮ ಗುಣಮಟ್ಟದ ಮಾನದಂಡಗಳನ್ನು ಹೊಂದಿರುವಂತೆ ಈ ಸಾಮಗ್ರಿಗಳ ಅನುಪಾತವನ್ನು ಅತ್ಯಂತ ಜಾಣ್ಮೆಯಿಂದ ರೂಪಿಸಿರಲಾಗುತ್ತದೆ. 

 

ಅಲ್ಟ್ರಾಟೆಕ್‌ ಪೋರ್ಟ್‌ಲ್ಯಾಂಡ್ ಪೊಜೊಲಾನಾ ಸಿಮೆಂಟ್‌ ಉತ್ತಮ ಕಾರ್ಯನಿರ್ವಹಣೆ, ಕೊಲ್ಯಾಸಿವ್ ಮಿಶ್ರಣ, ಕಡಿಮೆ ಸೋರಿಕೆ, ಕಡಿಮೆ ಬಿರುಕುಗಳು, ಕಡಿಮೆ ಪರ್ಮಿಯೆಬಿಲಿಟಿ, ರಾಸಾಯನಿಕ ದಾಳಿಗೆ ಅಧಿಕ ಪ್ರತಿರೋಧ ಮತ್ತು ಸ್ಟೀಲ್‌ನ ......

logo


ಪಿಪಿಸಿ ಸಿಮೆಂಟ್‌ನ ಅನುಕೂಲಗಳು

ಅಲ್ಟ್ರಾಟೆಕ್‌ನ ಪೋರ್ಟ್‌ಲ್ಯಾಂಡ್ ಪೊಜೊಲಾನಾ ಸಿಮೆಂಟ್ ತನ್ನ ಕಾರ್ಯನಿರ್ವಹಣೆಗಾಗಿ ಜನಪ್ರಿಯವಾಗಿದೆ. ಗೋಳಾಕಾರದ ಸಿಮೆಂಟ್ ಕಣಗಳು ಅಧಿಕ ಗುಣಮಟ್ಟ ಮೌಲ್ಯವನ್ನು ಹೊಂದಿದೆ ಮತ್ತು ಹೆಚ್ಚು ಮುಕ್ತವಾಗಿ ಸಾಗುತ್ತವೆ. ಇದರಿಂದಾಗಿ, ಪೊಳ್ಳುಗಳು ಉತ್ತಮವಾಗಿ ತುಂಬಿಕೊಳ್ಳುತ್ತವೆ. ವಿಶೇಷವಾಗಿ ಬೇಸಿಗೆಯ ಸಮಯದಲ್ಲಿ ಇದು ಕಾಂಕ್ರೀಟ್‌ನ ಸ್ಲಂಪ್ ನಷ್ಟದ ಪ್ರಮಾಣವನ್ನು ಕಡಿಮೆ ಮಾಡುತ್ತದೆ.  ಕಡಿಮೆ ವಾಟರ್ ಕಂಟೆಂಟ್‌ನಲ್ಲಿ ಬ್ಲೀಡ್ ಆಗುವುದನ್ನೂ ಪಿಪಿಸಿ ಸಿಮೆಂಟ್‌ ಕಡಿಮೆ ಮಾಡುತ್ತದೆ. ಈ ಮೂಲಕ, ಬ್ಲೀಡ್ ವಾಟರ್ ಚಾನೆಲ್‌ಗಳನ್ನು ನಿರ್ಬಂಧಿಸುತ್ತದೆ. 

ಪಿಪಿಸಿ ಸಹಜವಾಗಿ ಅತಿ ಸೂಕ್ಷ್ಮವಾಗಿರುತ್ತದೆ ಮತ್ತು ಪೇಸ್ಟ್ ಪ್ರಮಾಣವನ್ನು ಹೆಚ್ಚಿಸುತ್ತದೆ. ಇದರಿಂದಾಗಿ, ಕಾಂಕ್ರೀಟ್ ಮತ್ತು ಸ್ಟೀಲ್‌ನ ಬಾಂಧವ್ಯ ಸುಧಾರಿಸುತ್ತದೆ. ಆರಂಭಿಕ ಹೈಡ್ರೇಶನ್ ಸಮಯದಲ್ಲಿ ಲೈಮ್ ಅನ್ನು ಲಿಬರೇಟ್ ಮಾಡುತ್ತದೆ. ಇದರಿಂದಾಗಿ, ಪೊಳ್ಳುಗಳು ಕಡಿಮೆಯಾಗುತ್ತವೆ ಮತ್ತು ಕಾಂಕ್ರೀಟ್‌ನ ಪರ್ಮಿಯೆಬಿಲಿಟಿ ಕೂಡ ಕಡಿಮೆಯಾಗುತ್ತದೆ. ಹೀಗಾಗಿ ಬಾಳಿಕೆ ಹೆಚ್ಚುತ್ತದೆ. ಸ್ಟ್ರಕ್ಚರ್‌ನಲ್ಲಿ ಅತಿ ಸಣ್ಣ ಬಿರುಕುಗಳ ಬೆಳವಣಿಗೆಯನ್ನೂ ಇದು ತಡೆಯುತ್ತದೆ. ಇದು ರಚನೆಯ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.



ಪಿಪಿಸಿ ಸಿಮೆಂಟ್ ಗ್ರೇಡ್‌ಗಳು

ಸಿಮೆಂಟ್‌ನ ಗ್ರೇಡ್ ಅದರ ಸಾಮರ್ಥ್ಯವನ್ನು ಸೂಚಿಸುತ್ತದೆ. ಕಂಪ್ರೆಸಿವ್ ಸಾಮರ್ಥ್ಯವು ಸಾಮರ್ಥ್ಯ ಅಳತೆಯ ಅತ್ಯಂತ ಸಾಮಾನ್ಯ ವಿಧವಾಗಿದೆ. ಖರೀದಿ ಮಾಡುವುದಕ್ಕೂ ಮೊದಲು ಸಿಮೆಂಟ್‌ ಗ್ರೇಡ್‌ಗಳನ್ನು ಪರಿಶೀಲಿಸಿ ಎಂದು ಸಲಹೆ ಮಾಡಲಾಗಿದೆ. ಏಕೆಂದರೆ, ಸ್ಟ್ರಕ್ಚರ್‌ನ ಸಾಮರ್ಥ್ಯದ ಮೇಲೆ ಇದು ಗಮನಾರ್ಹ ಪರಿಣಾಮವನ್ನು ಬೀರುತ್ತದೆ. ಪಿಪಿಸಿ ಸಿಮೆಂಟ್‌ನಲ್ಲಿ ಯಾವುದೇ ಗ್ರೇಡ್ ಇರುವುದಿಲ್ಲ. ಒಪಿಸಿ ಸಿಮೆಂಟ್‌ನಲ್ಲಿ 33, 43 ಮತ್ತು 53 ಎಂಬ ಗ್ರೇಡ್‌ಗಳು ಇರುತ್ತವೆ. ಆದಾಗ್ಯೂ, ಒಪಿಸಿ 33 ಗ್ರೇಡ್‌ ಸಿಮೆಂಟ್‌ಗೆ ಪಿಪಿಸಿ ಸಿಮೆಂಟ್ ಸಾಮರ್ಥ್ಯವು ಸಮಾನವಾಗಿದೆ ಎಂದು ಪರಿಗಣಿಸಲಾಗುತ್ತದೆ. ಇದು 330 ಕಿಲೋ ಚದರ ಸೆಂ.ಮೀ ಗ್ರೇಡ್ ಸಾಮರ್ಥ್ಯವನ್ನು ಹೊಂದಿದೆ.

 

logo

ಪಿಪಿಸಿ ಸಿಮೆಂಟ್‌ನ ಅಪ್ಲಿಕೇಶನ್‌ಗಳು

ಇದು ಅತ್ಯಂತ ಹೆಚ್ಚು ಬಾಳಿಕೆ ಮತ್ತು ಸಲ್ಪೇಟ್‌, ನೀರು ಮತ್ತು ರಾಸಾಯನಿಕ ದಾಳಿಗಳ ವಿರುದ್ಧ ಪ್ರತಿರೋಧವನ್ನು ಹೊಂದಿದ್ದು, ಸಮುದ್ರ ತೀರದಲ್ಲಿ ಬಳಿ ನಿರ್ಮಾಣ, ಆಣೆಕಟ್ಟೆ, ಸಾಗರದಲ್ಲಿನ ಸ್ಟ್ರಕ್ಚರ್‌ಗಳು, ನೀರಿನಡಿಯ ಬ್ರಿಡ್ಜ್‌ ಪೈಯರ್‌ಗಳು, ಅಬಟ್‌ಮೆಂಟ್‌ಗಳು ಮತ್ತು ಗಡುಸದಾದ ವಾತಾವರಣದಲ್ಲಿ ನಿರ್ಮಾಣ ಮಾಡುವ ಕಟ್ಟಡಗಳಲ್ಲಿ ಬಳಸಲು ಇದು ಸೂಕ್ತವಾಗಿದೆ.





ಸಾರಾಂಶ/ಉಪಸಂಹಾರ

ಕಾಂಕ್ರೀಟ್‌ನ ಇಮ್‌ಪರ್ಮೀಯಬಿಲಿಟಿ ಮತ್ತು ಸಾಂದ್ರತೆಯನ್ನು ಪಿಪಿಸಿ ಹೆಚ್ಚಿಸುತ್ತದೆ. ಏಕೆಂದರೆ, ಇದು ಅತ್ಯುತ್ತಮ ಬಂಧವನ್ನು ರೂಪಿಸುವುದಕ್ಕಾಗಿ ಪೋರ್ಟ್‌ಲ್ಯಾಂಡ್ ಸಿಮೆಂಟ್ ಅನ್ನು ಹೈಡ್ರೇಟ್ ಮಾಡುವ ಮೂಲಕ ಕ್ಯಾಲ್ಸಿಯಂ ಹೈಡ್ರಾಕ್ಸೈಡ್ ಜೊತೆಗೆ ಪೊಜೊಲಾನಿಕ್ ಸಾಮಗ್ರಿಯು ಪ್ರತಿಕ್ರಿಯಿಸುತ್ತದೆ. ಹೈಡ್ರಾಲಿಕ್ ಸ್ಟ್ರಕ್ಚರ್‌ಗಳು, ಸಾಗರದಲ್ಲಿನ ಕೆಲಸಗಳು, ದೊಡ್ಡ ಪ್ರಮಾಣದಲ್ಲಿ ಕಾಂಕ್ರೀಟ್ ಹಾಕುವುದು ಇತ್ಯಾದಿಯಲ್ಲಿ ಅತ್ಯಂತ ವಿಶ್ವಾಸದಿಂದ ಇದನ್ನು ಬಳಸಬಹುದು. ಅಲ್ಕಲಿ-ಅಗ್ರಗೇಟ್‌ ರಿಯಾಕ್ಷನ್‌ ವಿರುದ್ಧ ಕಾಂಕ್ರೀಟ್ ಅನ್ನು ಇದು ರಕ್ಷಿಸುತ್ತದೆ.


Loading....