ವಾಟರ್‌ಪ್ರೂಫಿಂಗ್‌ ವಿಧಾನಗಳು, ಮಾಡರ್ನ್‌ ಕಿಚನ್‌ ಡಿಸೈನ್ಸ್‌, ಹೋಮ್‌ಗಾಗಿ ವಾಸ್ತು ಸಲಹೆಗಳು, ಮನೆ ನಿರ್ಮಾಣ ವೆಚ್ಚ

ಸಂಪರ್ಕಲ್ಲಿರಿ

ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ

ಮಾನ್ಯವಾದ ವರ್ಗವನ್ನು ಆಯ್ಕೆಮಾಡಿ

ನಿಮ್ಮ ಉಪ-ವರ್ಗವನ್ನು ಆಯ್ಕೆ ಮಾಡಿ

acceptence

ಮುಂದುವರಿಯಲು ದಯವಿಟ್ಟು ಈ ಪೆಟ್ಟಿಗೆಯನ್ನು ಪರಿಶೀಲಿಸಿ

Be wise, protect strength from dampness

logo


ನಗರ ತಾಂತ್ರಿಕ ಸಭೆ ಮತ್ತು ಗ್ರಾಮೀಣ ತಾಂತ್ರಿಕ ಸಭೆ

ವೇಗವಾಗಿ ಬದಲಾಗುತ್ತಿರುವ ತಂತ್ರಜ್ಞಾನಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಮತ್ತು ನಿರ್ಮಾಣದಲ್ಲಿ ನವೀನ ಪರಿಕಲ್ಪನೆಗಳನ್ನು ಅಳವಡಿಸಿಕೊಳ್ಳಲು ಹೆಚ್ಚಿನ ತಿಳಿವಳಿಕೆಯ ಅಗತ್ಯವಿದೆ. ಜಾಗತಿಕ ತಾಂತ್ರಿಕ ಬದಲಾವಣೆಗಳು, ಬೆಳವಣಿಗೆಗಳು, ನವೀನ ನಿರ್ಮಾಣ ಅಭ್ಯಾಸಗಳ ಬಗ್ಗೆ ನಾಗರಿಕರಿಗೆ ಮತ್ತು ರಚನಾತ್ಮಕ ಎಂಜಿನಿಯರ್‌ಗಳು ಹಾಗೂ ವಾಸ್ತುಶಿಲ್ಪಿಗಳನ್ನು ಇಂದಿನ ದಿನಮಾನಕ್ಕೆ ತಕ್ಕಂತೆ ಮಾಹಿತಿಯನ್ನು ಹೊಂದಲು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸೂಕ್ತವಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.

logo

ಇಲ್ಲಿ ವೀಕ್ಷಕರ ಜ್ಞಾನದ ಮಟ್ಟವನ್ನು ಗಮನದಲ್ಲಿಟ್ಟುಕೊಂಡು ಉದ್ಯಮ ಮತ್ತು ಶೈಕ್ಷಣಿಕ ಕ್ಷೇತ್ರದ ವಿಷಯ ತಜ್ಞರು ಕಾರ್ಯಕ್ರಮಗಳನ್ನು ಆಯೋಜಿಸುವುದಲ್ಲದೆ, ಎಲ್ಲರಿಗೂ ಮಾಹಿತಿಯನ್ನು ತಲುಪಿಸುತ್ತಾರೆ. ಅವರು ಎದುರಿಸುತ್ತಿರುವ ತಾಂತ್ರಿಕ ಸಮಸ್ಯೆಗಳನ್ನು ಮತ್ತು ಇದೇ ರೀತಿಯ ಸಮಸ್ಯೆಗಳನ್ನು ಹೇಗೆ ಪರಿಹರಿಸಲಾಗುತ್ತದೆ ಎಂಬುದನ್ನು ಚರ್ಚಿಸುವ ಮೂಲಕ ಜ್ಞಾನ ಹಂಚಿಕೆಗೆ ಇದು ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ.


ಕಾಂಕ್ರೀಟ್ ಮಿಕ್ಸ್ ಅನುಪಾತದ ಕಾರ್ಯಾಗಾರಗಳು

ಸ್ಥಳೀಯವಾಗಿ ಲಭ್ಯವಿರುವ ವಸ್ತುಗಳನ್ನು ಬಳಸಿಕೊಂಡು ಅಪೇಕ್ಷಿತ ಶಕ್ತಿ ಮತ್ತು ಬಾಳಿಕೆಯೊಂದಿಗೆ ಕಾಂಕ್ರೀಟ್ ಅನ್ನು ಉತ್ಪಾದಿಸಲು ವಿವಿಧ ಕಾಂಕ್ರೀಟ್ ವಸ್ತುಗಳನ್ನು ಹೇಗೆ ಅನುಪಾತ ಕ್ರಮಮದಲ್ಲಿ ಸಮ್ಮಿಳಿತಗೊಳಿಸುವುದು ಹೇಗೆಂದು ಈ ಕಾರ್ಯಾಗಾರಗಳು ಅಭ್ಯಾಸನಿರತ ಎಂಜಿನಿಯರ್ಗಳು ಮತ್ತು ವಾಸ್ತುಶಿಲ್ಪಿಗಳಿಗೆ ಮಾಹಿತಿ ನೀಡುತ್ತವೆ. ಇಲ್ಲಿ ಭಾಗಿಯಾಗುವವರು ಕಾಂಕ್ರೀಟ್ ಮಿಶ್ರಣವನ್ನು ರೂಪಿಸುವ ಮೂಲಕ ಮತ್ತು ಅದಕ್ಕೆ ಅನುಗುಣವಾಗಿ ಕಾಂಕ್ರೀಟ್ ಅನ್ನು ಉತ್ಪಾದಿಸುವ ಮೂಲಕ ಅನುಭವವನ್ನು ಪಡೆದುಕೊಳ್ಳುತ್ತಾರೆ. ಇಲ್ಲಿ ಕಡಿಮೆ ವೆಚ್ಚ ಮತ್ತು ಬಾಳಿಕೆಯನ್ನು ಖಾತರಿಪಡಿಸಿಕೊಳ್ಳಲು ವಿಭಿನ್ನ ವಾತಾವರಣಕ್ಕೆ ಒಡ್ಡುವಿಕೆ ಪರಿಸ್ಥಿತಿಗಳಿಗೆ ವಿಭಿನ್ನ ಸಾಮರ್ಥ್ಯಗಳ ಕಾಂಕ್ರೀಟ್ ಮಿಶ್ರಣಗಳನ್ನು ವಿನ್ಯಾಸಗೊಳಿಸುವ ಸಾಮರ್ಥ್ಯದ ಬಗ್ಗೆ ಇದು ಭಾಗವಹಿಸುವವರಿಗೆ ವಿಶ್ವಾಸವನ್ನು ನೀಡುತ್ತದೆ.
 

logo


ಘಟಕಕ್ಕೆ ಭೇಟಿಗಳು

ಎಂಜಿನಿಯರ್ ಗಳು, ಆರ್ಕಿಟೆಕ್ಚರ್‌ಗಳು, ಚಾನೆಲ್ ಪಾರ್ಟ್‌ನರ್‌ಗಳು (ವಿತರಕರು ಮತ್ತು ಚಿಲ್ಲರೆ ವ್ಯಾಪಾರಿಗಳು), ಬಿಲ್ಡರ್‌ಗಳು ಮತ್ತು ಗುತ್ತಿಗೆದಾರರು ಮತ್ತು ಮೇಸ್ತ್ರಿಗಳೆಲ್ಲರಿಗೂ ಈ ಕಾರ್ಯಕ್ರಮಕ್ಕೆ ಆಹ್ವಾನ ಇರುತ್ತದೆ. ಕಚ್ಚಾ ವಸ್ತುಗಳ ಆಯ್ಕೆಯಿಂದ ಪ್ಯಾಕಿಂಗ್‌ವರೆಗೆ ಸಿಮೆಂಟ್ ಉತ್ಪಾದನಾ ಪ್ರಕ್ರಿಯೆಯ ಬಗ್ಗೆ ಸಂದರ್ಶಕರಿಗೆ ಅರಿವು ನೀಡುವ ಉದ್ದೇಶವನ್ನು ಇದು ಹೊಂದಿದೆ. ಘಟಕದಲ್ಲಿ ಚಾಲ್ತಿಯಲ್ಲಿರುವ ವಿವಿಧ ಗುಣಮಟ್ಟ ನಿಯಂತ್ರಣ ಕ್ರಮಗಳು ಮತ್ತು ಗುಣಮಟ್ಟ ಭರವಸೆ ವ್ಯವಸ್ಥೆಗಳನ್ನು ಅವರು ಗಮನಿಸುವುದರಿಂದ ಸಿಮೆಂಟ್‌ನ ಗುಣಮಟ್ಟದ ಬಗ್ಗೆ ಉತ್ತಮ ತಿಳಿವಿಳಿಕೆ ಪಡೆಯುವುದಲ್ಲದೆ,ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಾರೆ.

 

ಇನ್ನಷ್ಟು ತಿಳಿಯಲು, ಇಲ್ಲಿ ಕ್ಲಿಕ್ ಮಾಡಿ.



ಎಂಜಿನಿಯರ್‌ಗಳು ಮತ್ತು ವಾಸ್ತುಶಿಲ್ಪಿಗಳಿಗಾಗಿ



Loading....