Share:
Home Building Guide
Our Products
Useful Tools
Waterproofing methods, Modern kitchen designs, Vaastu tips for home, Home Construction cost
Share:
ಜನರು ತಮ್ಮ ಮನೆಯು ಒಂದು ಸ್ವಂತಿಕೆಯ ಭಾವವನ್ನು ಉಂಟು ಮಾಡುವ ರೀತಿಯಲ್ಲಿ ಇರುವಂತೆ ವಿನ್ಯಾಸಗೊಳಿಸಲು ಪ್ರಯತ್ನಿಸುತ್ತಾರೆ. ಅದೇ ರೀತಿಯಲ್ಲಿ ದಿನವಿಡೀ ಕೆಲಸದಿಂದ ದಣಿದು ಮನೆಗೆ ಬಂದು ವಿಶ್ರಮಿಸಲು ಬಯಸಿದಾಗ ಅವರಿಗೆ ಉಂಟಾಗುವ ಭಾವನೆಯು ಬೆಡ್‌ರೂಮ್‌ನ ಸರಿಯಾದ ವಾಸ್ತುವಿನ ಮೇಲೆ ಅವಲಂಬಿತವಾಗಿರುತ್ತದೆ. ಇಷ್ಟೇ ಅಲ್ಲದೇ, ನಮ್ಮ ಬೆಡ್‌ರೂಮ್ ನಮಗೆ ಹೊರಜಗತ್ತಿನಿಂದ ಪ್ರತ್ಯೇಕಗೊಂಡ ಒಂದು ಸ್ಥಳಾವಕಾಶವನ್ನು ನೀಡುತ್ತದೆ ಹಾಗೂ ಇಲ್ಲಿ ನಾವು ಕೆಲಸ, ಬರವಣಿಗೆ, ನಮ್ಮ ಹವ್ಯಾಸಗಳಲ್ಲಿ ತೊಡಗುವಿಕೆ ಮುಂತಾದವುಗಳನ್ನು ಮಾಡುತ್ತೇವೆ. ಬೆಡ್‌ರೂಮ್‌ಗಾಗಿನ ಸರಿಯಾದ ವಾಸ್ತುಶಾಸ್ತ್ರವು ಕೇವಲ ಅದಕ್ಕೆ ಉತ್ತಮವಾದ ಶಕ್ತಿಯನ್ನು ಒದಗಿಸುವುದು ಮಾತ್ರವಲ್ಲದೆ ನಮ್ಮ ಆರೋಗ್ಯ, ಸಂಪತ್ತು ಮತ್ತು ಯಶಸ್ಸಿನ ಮೇಲೆ ಪರಿಣಾಮ ಬೀರುವ ಅಂಶಗಳನ್ನೂ ಸಹ ನಿರ್ಧರಿಸುತ್ತದೆ.
ಮಾರ್ಗದರ್ಶನ: ಮಾಸ್ಟರ್ ಬೆಡ್‌ರೂಮ್ ವಾಸ್ತು ಸಲಹೆಗಳ ಪ್ರಕಾರ, ಮಾಸ್ಟರ್ ಬೆಡ್‌ರೂಮ್ ನೈಋತ್ಯ ದಿಕ್ಕಿನಲ್ಲಿರಲು ಸೂಚಿಸಲಾಗುತ್ತದೆ.
ಮುಖ್ಯ ಬಾಗಿಲು ಇರಬೇಕಾದ ಸ್ಥಾನ: ಮಾಸ್ಟರ್ ಬೆಡ್‌ರೂಮ್ ವಾಸ್ತು ಮಾರ್ಗಸೂಚಿಯ ಪ್ರಕಾರ ಬಾಗಿಲು 90 ಡಿಗ್ರಿಗಳಲ್ಲಿ ತೆರೆಯಬೇಕು, ತೆರೆಯುವಾಗ ಅಥವಾ ಮುಚ್ಚುವಾಗ ಯಾವುದೇ ಕರ್ಕಶ ಶಬ್ದವನ್ನುಂಟು ಮಾಡಬಾರದು. ಮತ್ತು ಮಾಸ್ಟರ್ ಬೆಡ್‌ರೂಮ್ ಪೂರ್ವ, ಪಶ್ಚಿಮ ಅಥವಾ ಉತ್ತರ ದಿಕ್ಕಿನಲ್ಲಿ ಇರಬೇಕು ಎಂದು ಸೂಚಿಸುತ್ತದೆ.
ಹಾಸಿಗೆ ಇಡಬೇಕಾದ ಸ್ಥಳ: ಮಾಸ್ಟರ್ ಬೆಡ್‌ರೂಮ್ ವಾಸ್ತು ಸಲಹೆಗಳ ಪ್ರಕಾರ ವಾಸ್ತು ತತ್ವಗಳು ಹಾಸಿಗೆಯನ್ನು ದಕ್ಷಿಣ ಅಥವಾ ಪಶ್ಚಿಮ ದಿಕ್ಕಿನಲ್ಲಿ ಇರಿಸಲು ಶಿಫಾರಸು ಮಾಡುತ್ತವೆ. ಅದರಿಂದ ಕಾಲುಗಳು ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿರುತ್ತವೆ. ಹಾಸಿಗೆಯ ಮೂಲೆಯಲ್ಲಿರಬಾರದು, ಕೋಣೆಯ ಮಧ್ಯಭಾಗದಲ್ಲಿರಬೇಕು.
ಬಣ್ಣ: ಮಾಸ್ಟರ್ ಬೆಡ್‌ರೂಮ್ ವಾಸ್ತು ಮಾರ್ಗಸೂಚಿಗಳ ಪ್ರಕಾರ ಬೂದು, ಹಸಿರು, ಗುಲಾಬಿ ಮತ್ತು ನೀಲಿ, ದಂತ ಅಥವಾ ತಿಳಿ ಬಣ್ಣಗಳು ಮಾಸ್ಟರ್ ಬೆಡ್‌ರೂಮ್‌ಗೆ ಸೂಕ್ತವಾದ ಬಣ್ಣಗಳು
ವಾರ್ಡ್ರೋಬ್ ನಿಯೋಜನೆ: ವಾರ್ಡ್ರೋಬ್ ಅನ್ನು ಪಶ್ಚಿಮ, ನೈಋತ್ಯ ಅಥವಾ ದಕ್ಷಿಣ ದಿಕ್ಕಿನಲ್ಲಿ ಇರಿಸಬೇಕು ಏಕೆಂದರೆ ಈ ದಿಕ್ಕುಗಳು ಮಾಸ್ಟರ್ ಬೆಡ್ ರೂಮ್ ವಾಸ್ತು ಸಲಹೆಗಳ ಪ್ರಕಾರ ಪಾಸಿಟಿವ್ ಎನರ್ಜಿಯನ್ನು ಹೊರಸೂಸುತ್ತವೆ.
ಅಲಂಕಾರ: ಭೂಮಿಯ ನೈಸರ್ಗಿಕ ಅಥವಾ ಸಾಗರದ ಪ್ರಶಾಂತ ವರ್ಣಚಿತ್ರಗಳಿಂದ ಗೋಡೆಯನ್ನು ಅಲಂಕರಿಸಲು ಶಿಫಾರಸು ಮಾಡಲಾಗಿದೆ ಮತ್ತು ಮಾಸ್ಟರ್ ಬೆಡ್‌ರೂಮ್ ವಾಸ್ತು ಮಾರ್ಗಸೂಚಿಗಳ ಪ್ರಕಾರ ಹಿಂಸೆಯನ್ನು ಬಿಂಬಿಸುವ ಯಾವುದೇ ವರ್ಣಚಿತ್ರಗಳನ್ನು ತಪ್ಪಿಸಬೇಕು.
ಈಗ ನೀವು ನಿಮ್ಮ ಬೆಡ್‌ರೂಮ್‌ಗೆ ಸೂಕ್ತವಾದ ವಾಸ್ತುವನ್ನು ಚೆನ್ನಾಗಿ ತಿಳಿಕೊಂಡಿದ್ದೀರಿ, ನಿಮ್ಮ ಪರಿಶುದ್ಧ ಜಾಗವನ್ನು ಪಾಸಿಟಿವ್ ಮತ್ತು ಪ್ರಶಾಂತ ವೈಬ್ರೇಷನ್ಗಳಿಂದ ತುಂಬಿರುವ ವಾಸಸ್ಥಾನವನ್ನಾಗಿ ಮಾಡಿಕೊಳ್ಳಿ.
ನಿಮ್ಮ ಬೆಡ್‌ರೂಮ್ ನಂತೆಯೆ, ನಿಮ್ಮ ವಾಶ್ರೂಮ್ನಲ್ಲಿಯೂ ನೀವು ಬಹಳಷ್ಟು ಸಮಯವನ್ನು ಕಳೆಯುತ್ತೀರಿ. ಅಲ್ಲಿಯೂ ನಿಮ್ಮಲ್ಲಿ ಅನೇಕ ಆಲೋಚನೆಗಳು ನಡೆಯುತ್ತವೆ. ಸರಿಯಾದ ವಾಸ್ತುವಿನೊಂದಿಗೆ ವಾಶ್‌ರೂಮ್ ನಿರ್ಮಿಸುವ ಮೂಲಕ ಅದನ್ನು ಆಹ್ಲಾದಕರ ಸ್ಥಳವನ್ನಾಗಿಸಿಕೊಳ್ಳಿರಿ. ವಾಶ್‌ರೂಮ್‌ಗಳಿಗಾಗಿ ವಾಸ್ತು ಕುರಿತು ಇನ್ನಷ್ಟು ಓದಿ.