ವಾಸ್ತು ಪ್ರಕಾರ ಮಲಗುವ ಕೋಣೆಯಲ್ಲಿ ಬಳಸಬಾರದ ಬಣ್ಣಗಳು
ನಿಮ್ಮ ಮಲಗುವ ಕೋಣೆಯನ್ನು ಅಲಂಕರಿಸುವಾಗ ಸೂಕ್ತ ಬಣ್ಣದ ಆಯ್ಕೆ ನಿರ್ಣಾಯಕ. ಭಾರತದ ಪುರಾತನ ವಿಜ್ಞಾನವಾದ ವಾಸ್ತುಶಾಸ್ತ್ರವು ಬಣ್ಣಗಳು ಹೇಗೆ ನಿಮ್ಮ ಸ್ಥಳದ ಶಕ್ತಿಯನ್ನು ಪ್ರಭಾವಿಸುತ್ತವೆ ಎಂದು ವಿವರಿಸುತ್ತದೆ. ಕೆಲವು ಬಣ್ಣಗಳು ಧನಾತ್ಮಕತೆ ಮತ್ತು ನೆಮ್ಮದಿಯನ್ನು ಹೆಚ್ಚಿಸುವಂತಿದ್ದರೆ ಇನ್ನು ಕೆಲವು ಬಣ್ಣಗಳನ್ನು ಮಲಗುವ ಕೋಣೆಯಲ್ಲಿ ಬಳಸದಿರುವುದೇ ಒಳ್ಳೆಯದು. ಈಗ ಮಲಗುವ ಕೋಣೆಯ ಬಣ್ಣಗಳ ಬಗ್ಗೆ ಗಮನ ಹರಿಸೋಣ ವಾಸ್ತು ಪ್ರಕಾರ ಸಮನ್ವಯದ ವಾತಾವರಣವನ್ನು ಸೃಷ್ಟಿಸುವ ಬಣ್ಣಗಳ ಬಗ್ಗೆ ನೀವು ಸ್ಪಷ್ಟತೆಯನ್ನು ಹೊಂದಿರಬೇಕು.
1. ಕಪ್ಪು
ಏಕೆ ಬಳಸಬಾರದು: ಕಪ್ಪು ಬಣ್ಣವು ಹೆಚ್ಚು ಶಕ್ತಿಯನ್ನು ಹೀರಿಕೊಳ್ಳುವುದರಿಂದ ನಿಮ್ಮ ಮಲಗುವ ಕೋಣೆಯ ವಾತಾವರಣದಲ್ಲಿ ಅಸಮತೋಲನ ಉಂಟಾಗಬಹುದು. ಇದು ಋಣಾತ್ಮಕತೆಯನ್ನು ತುಂಬಬಹುದು ಮತ್ತು ಅದರಿಂದ ನಿಮಗೆ ನೆಮ್ಮದಿಯ ನಿದ್ದೆ ಬಾರದಿರಬಹುದು.
ವಾಸ್ತುವಿನ ದೃಷ್ಟಿಕೋನ: ಮಲಗುವ ಕೋಣೆಯ ವಾಸ್ತು ಬಣ್ಣಗಳ ನಿಯಮಗಳ ಅನುಸಾರ, ಗಾಢ ಬಣ್ಣಗಳು ನಿಶ್ಚಲತೆಯನ್ನು ಬಿಂಬಿಸುತ್ತವೆ ಮತ್ತು ಅಭಿವೃದ್ಧಿ ಹಾಗೂ ಧನಾತ್ಮಕ ಹರಿವಿಗೆ ತಡೆಯೊಡ್ಡುತ್ತವೆ.
2. ಕೆಂಪು
ಏಕೆ ಬಳಸಬಾರದು: ಕೆಂಪು ಬಣ್ಣವು ರೋಮಾಂಚನಕಾರಿ ಮತ್ತು ಲವಲವಿಕೆಯ ಬಣ್ಣವಾಗಿದ್ದರೂ ಇದು ಆಕ್ರಮಣಕಾರಿ ಸಹ ಆಗಿದೆ. ಇದು ಶಕ್ತಿಯನ್ನು ಬಹಳವಾಗಿ ಹೆಚ್ಚಿಸುವುದರಿಂದ ವಿಶ್ರಾಂತಿ ಹೊಂದುವುದು ಕಠಿಣವಾಗುತ್ತದೆ.
ವಾಸ್ತುವಿನ ದೃಷ್ಟಿಕೋನ: ಕೆಂಪು ಪ್ರಚೋದನೆಯ ಬಣ್ಣವಾಗಿದ್ದು ಶಾಂತಿಯನ್ನು ಕೆಡಿಸಬಹುದು ಮತ್ತು ವಾಸ್ತು ಪ್ರಕಾರ ಇದು ಮಲಗುವ ಕೋಣೆಯಲ್ಲಿ ಬಳಸಲು ಯೋಗ್ಯವಲ್ಲ.
3. ಗಾಢ ಕಂದು
ಏಕೆ ಬಳಸಬಾರದು: ಗಾಢ ಕಂದು ಬಣ್ಣದ ಬಳಕೆಯಿಂದ ಕೋಣೆಯು ಮುಚ್ಚಿದಂತೆ ಭಾಸವಾಗುತ್ತದೆ. ಇದು ತೀವ್ರ ಭಾವಗಳನ್ನು ಹುಟ್ಟುಹಾಕಿ ನಿಮ್ಮ ಚಿತ್ತವನ್ನು ಕೆಡಿಸಬಹುದು.
ವಾಸ್ತುವಿನ ದೃಷ್ಟಿಕೋನ: ವಾಸ್ತುಶಾಸ್ತ್ರದ ಪ್ರಕಾರ ಮಲಗುವ ಕೋಣೆಯಲ್ಲಿ ಬೆಳಕು ಮತ್ತು ಮುಕ್ತಭಾವವನ್ನು ನೀಡಲು ತಿಳಿಯಾದ ಬಣ್ಣಗಳಿಗೆ ಆದ್ಯತೆ.
4. ಪ್ರಕಾಶಮಾನವಾದ ಹಳದಿ
ಏಕೆ ಬಳಸಬಾರದು: ಪ್ರಕಾಶಮಾನವಾದ ಹಳದಿ ಬಣ್ಣವು ಸಂತೋಷವನ್ನು ಹೆಚ್ಚಿಸುವುದಾಗಿದ್ದರೂ ಕೆಲವೊಮ್ಮೆ ಅತಿ ಪ್ರಚೋದನೆಯನ್ನು ಉಂಟುಮಾಡಿ ವಿಶ್ರಾಂತಿಯ ಸಮಯವನ್ನು ಕೆಡಿಸುತ್ತದೆ.
ವಾಸ್ತುವಿನ ದೃಷ್ಟಿಕೋನ: ವಾಸ್ತು ಪ್ರಕಾರ ಮಲಗುವ ಕೋಣೆಯ ಬಣ್ಣವು ಪ್ರಶಾಂತವಾಗಿರಬೇಕು. ತಿಳಿಹಳದಿಯನ್ನು ಬಳಸಬಹುದು ಆದರೆ ಕಣ್ಣುಕುಕ್ಕುವ, ಪ್ರಕಾಶಮಾನವಾದ ಬಣ್ಣಗಳನ್ನು ಶಿಫಾರಸು ಮಾಡುವುದಿಲ್ಲ.
5. ನಿಯಾನ್ ಬಣ್ಣಗಳು
ಏಕೆ ಬಳಸಬಾರದು: ನಿಯಾನ್ ಬಣ್ಣಗಳು ಚಿತ್ತವನ್ನು ವ್ಯಾಕುಲಗೊಳಿಸಬಹುದು ಮತ್ತು ಮಲಗುವ ಕೋಣೆಗೆ ಅವಶ್ಯಕವಾದ ನೆಮ್ಮದಿ ಮತ್ತು ಶಾಂತಿಯನ್ನು ಕೆಡಿಸಬಹುದು.
ವಾಸ್ತುವಿನ ದೃಷ್ಟಿಕೋನ: ವಾಸ್ತುಪ್ರಕಾರ ಮಲಗುವ ಕೋಣೆಗೆ ಅವಶ್ಯವಾದ ಶಾಂತ ಹಾಗೂ ನೆಮ್ಮದಿಯ ವಾತಾವರಣಕ್ಕೆ ಈ ಗಾಢಬಣ್ಣಗಳು ವಿರುದ್ಧವಾಗಬಹುದು.