ಗಟ್ಟಿಯಾದ ಅಡಿಪಾಯವನ್ನು ನಿರ್ಮಿಸಲು ಬಳಸಲಾಗುವ ವಸ್ತುಗಳನ್ನು ಎಚ್ಚರಿಕೆಯಿಂದ ಆಯ್ಕೆ ಮಾಡುವ ಅಗತ್ಯವಿರುತ್ತದೆ. ಕೆಲವು ಸಾಮಾನ್ಯ ಅಡಿಪಾಯ ಸಾಮಗ್ರಿಗಳನ್ನು ಪರಿಶೀಲಿಸೋಣ ಮತ್ತು ಅವುಗಳ ಗುಣಲಕ್ಷಣಗಳು, ಬಳಕೆಗಳು ಮತ್ತು ಅನುಕೂಲಗಳನ್ನು ಅರ್ಥಮಾಡಿಕೊಳ್ಳೋಣ.
1. ಮರ
ಮರದ ಅಡಿಪಾಯಗಳನ್ನು ಪ್ರೆಶರ್-ಟ್ರೀಟೆಡ್ ಮರಮುಟ್ಟು ಅಥವಾ ಎಂಜಿನಿಯರ್ಡ್ ಮರದ ಉತ್ಪನ್ನಗಳನ್ನು ಬಳಸಿ ನಿರ್ಮಿಸಲಾಗುತ್ತದೆ. ಸಣ್ಣ ಶೆಡ್‌ಗಳು, ಕ್ಯಾಬಿನ್‌ಗಳು ಅಥವಾ ಇತರ ಹಗುರವಾದ ಕಟ್ಟಡಗಳಲ್ಲಿ ಇದನ್ನು ಸಾಮಾನ್ಯವಾಗಿ ಬಳಸಬಹುದಾಗಿರುತ್ತದೆ. ಇತರ ಅಡಿಪಾಯದ ಸಾಮಾಗ್ರಿಗಳಿಗೆ ಹೋಲಿಸಿದರೆ ಕಡಿಮೆ ವೆಚ್ಚವು ಇದರ ಪ್ರಮುಖ ಅನುಕೂಲವಾಗಿದೆ.
ಅನುಕೂಲಗಳು
a) ಇದರೊಂದಿಗೆ ಕೆಲಸ ಮಾಡಲು ಮತ್ತು ನಿರ್ಮಾಣ ಮಾಡಲು ಸುಲಭ
b) ಕಡಿಮೆ ವೆಚ್ಚ
c) ಹೆಚ್ಚಿನ ನೀರು ಹೊಂದಿರುವಂತಹ ಪ್ರದೇಶಗಳಲ್ಲಿ ಇತರ ಅಡಿಪಾಯಗಳನ್ನು ನಿರ್ಮಿಸಲು ಅಸಾಧ್ಯವಾದಾಗ ಇದು ಹೆಚ್ಚು ಸೂಕ್ತವಾಗಿರುತ್ತದೆ.
2. ಕಲ್ಲು
ಕಲ್ಲಿನ ಅಡಿಪಾಯಗಳನ್ನು ನೈಸರ್ಗಿಕವಾದ ಅಥವಾ ಕತ್ತರಿಸಿದ ಕಲ್ಲುಗಳಿಂದ ತಯಾರಿಸಲಾಗುತ್ತದೆ. ಇದು ಹಳೆಯ ಕಾಲದಲ್ಲಿ ಮನೆಗಳು ಮತ್ತು ಕಟ್ಟಡಗಳಿಗೆ ಅಡಿಪಾಯವನ್ನು ನಿರ್ಮಿಸುವ ಒಂದು ವಿಶಿಷ್ಟ ವಿಧಾನವಾಗಿತ್ತು. ಕಲ್ಲಿನ ಅಡಿಪಾಯಗಳು ಬೇಗನೆ ಹಾಳಾಗುವುದಿಲ್ಲ ಹಾಗೂ ದೀರ್ಘಕಾಲದವರೆಗೆ ಬಾಳಿಕೆ ಬರುತ್ತವೆ. ಆದರೆ ಇವುಗಳಿಗೆ ಆಗ್ಗಾಗ್ಗೆ ನಿರ್ವಹಣೆ ಮತ್ತು ದುರಸ್ತಿಯ ಅಗತ್ಯವಿರುತ್ತದೆ.
ಅನುಕೂಲಗಳು
a) ಬೇಗನೆ ಹಾಳಾಗುವುದಿಲ್ಲ ಮತ್ತು ದೀರ್ಘಕಾಲ ಬಾಳಿಕೆ ಬರುತ್ತದೆ
b) ಬೆಂಕಿ ನಿರೋಧಕ
c) ತಾಪಮಾನದ ಏರಿಳಿತಗಳ ವಿರುದ್ಧ ಅತ್ಯುತ್ತಮ ಇನ್ಸುಲೇಶನ್ ಒದಗಿಸುತ್ತದೆ
3. ಕಾಂಕ್ರೀಟ್ ಮತ್ತು ಕಾಂಕ್ರೀಟ್ ಬ್ಲಾಕ್‌ಗಳು
ಅಡಿಪಾಯಕ್ಕೆ ಬಳಸುವ ವಸ್ತುಗಳ ಸಾಮಾನ್ಯ ಪ್ರಕಾರಗಳಲ್ಲಿ ಕಾಂಕ್ರೀಟ್ ಅಡಿಪಾಯಗಳು ಒಂದಾಗಿದೆ. ಈ ಅಡಿಪಾಯಗಳನ್ನು ಮೂಲತಃ ಸಿಮೆಂಟಿನಿಂದ ಮಾಡಲಾಗಿರುತ್ತದೆ ಮತ್ತು ಹೆಚ್ಚು ಒತ್ತಡವನ್ನು ತಡೆದುಕೊಳ್ಳುವ ಶಕ್ತಿಯನ್ನು ಹೊಂದಿರುತ್ತವೆ. ಇದರಿಂದ ಇವು ಗಮನಾರ್ಹ ಪ್ರಮಾಣದ ತೂಕವನ್ನು ತಡೆದುಕೊಳ್ಳಬಲ್ಲವು. ಸಿಮೆಂಟ್ ಅಡಿಪಾಯಗಳು ಎಂದೂ ಕರೆಯಲ್ಪಡುವ ಕಾಂಕ್ರೀಟ್ ಅನ್ನು ಅಡಿಪಾಯವನ್ನು ನಿರ್ಮಿಸುವ ಸ್ಥಳದಲ್ಲಿ ಸುರಿಯಬಹುದು ಅಥವಾ ಬ್ಲಾಕ್‌ಗಳ ರೂಪದಲ್ಲಿ ಪ್ರಿಕಾಸ್ಟ್ ಮಾಡಿ ಬಳಸಬಹುದು. ಇದಲ್ಲದೆ, ಸಿಂಡರ್ ಬ್ಲಾಕ್‌ಗಳು ಎಂದೂ ಕರೆಯಲ್ಪಡುವ ಕಾಂಕ್ರೀಟ್ ಬ್ಲಾಕ್‌ಗಳನ್ನು ಬಳಸುವುದು ಸುರಿದ ಮಾಡುವ ಕಾಂಕ್ರೀಟ್ ಅಡಿಪಾಯಗಳಿಗಿಂತ ಕಡಿಮೆ ವೆಚ್ಚದ ಪರ್ಯಾಯ ವಿಧಾನವಾಗಿದೆ.
ಅನುಕೂಲಗಳು
a) ಧೃಡವಾಗಿರುತ್ತದೆ ಮತ್ತು ಬಾಳಿಕೆ ಬರುತ್ತದೆ
b) ಬೆಂಕಿ, ತೇವಾಂಶ ಮತ್ತು ಕೀಟಗಳಿಗೆ ಪ್ರತಿರೋಧಕ ಉಂಟುಮಾಡುತ್ತದೆ
c) ಕಡಿಮೆ ನಿರ್ವಹಣೆಯ ಅಗತ್ಯವಿರುತ್ತದೆ
4. ಅಗ್ರಿಗೇಟ್ಟ್
ಜಲ್ಲಿಕಲ್ಲು, ಪುಡಿಮಾಡಿದ ಕಲ್ಲು ಅಥವಾ ಮರುಬಳಕೆ ಮಾಡಿದ ಕಾಂಕ್ರೀಟ್ ನಂತಹ ಅಗ್ರಿಗೇಟ್‌ಗಳನ್ನು ಅಡಿಪಾಯ ವಸ್ತುವಾಗಿ ಬಳಸಬಹುದು. ಹೆಚ್ಚಿನ ನೀರನ್ನು ಹೊಂದಿರುವ ಜೌಗಿನ ಪ್ರದೇಶಗಳಿಗೆ ಇವು ಸೂಕ್ತವಾಗಿವೆ ಏಕೆಂದರೆ ಇವು ಅಡಿಪಾಯದಿಂದ ನೀರನ್ನು ಹೊರಹಾಕುತ್ತವೆ ಮತ್ತು ಮಣ್ಣಿನ ಸವೆತವನ್ನು ತಡೆಯುತ್ತವೆ.
ಅನುಕೂಲಗಳು
a) ಕಡಿಮೆ ವೆಚ್ಚ
b) ಸರಿಯಾಗಿ ನೀರನ್ನು ಹೊರಹಾಕುತ್ತದೆ
c) ಪರಿಸರ ಸ್ನೇಹಿ
5. ಹಾರುಬೂದಿ (ಫ್ಲೈ ಆ್ಯಶ್)
ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರಗಳ ಉಪ ಉತ್ಪನ್ನವಾದ ಹಾರು ಬೂದಿ ಅಥವಾ ಫ್ಲೈ ಆ್ಯಶ್ ಅನ್ನು ಅದರ ಶಕ್ತಿ ಮತ್ತು ಬಾಳಿಕೆಯಿಂದಾಗಿ ಸಾಮಾನ್ಯವಾಗಿ ಅಡಿಪಾಯ ವಸ್ತುವಾಗಿ ಬಳಸಲಾಗುತ್ತದೆ. ಕಾಂಕ್ರೀಟ್ ಮಿಶ್ರಣಗಳಲ್ಲಿ ಸಿಮೆಂಟ್‌ಗೆ ಬದಲಿಯಾಗಿಯೂ ಸಹ ಇದನ್ನು ಬಳಸಬಹುದು. ಇದು ಪರಿಸರಕ್ಕೆ ಅನುಕೂಲವಾಗುವಂತಹ ಒಂದು ಆಯ್ಕೆಯಾಗಿದೆ.
ಅನುಕೂಲಗಳು
a) ಸಿಮೆಂಟ್ ಬಳಕೆಯನ್ನು ಕಡಿಮೆ ಮಾಡುತ್ತದೆ
b) ಪರಿಸರ ಸ್ನೇಹಿಯಾಗಿದೆ
c) ಕುಗ್ಗುವಿಕೆ ಮತ್ತು ಬಿರುಕುಗಳು ಉಂಟಾಗುವುದನ್ನು ತಡೆಯುತ್ತದೆ
6. ಮರಳು
ಕಡಿಮೆ ನೀರಿರುವ ಮತ್ತು ಸ್ಥಿರವಾದ ಮಣ್ಣು ಇರುವ ಪ್ರದೇಶಗಳಲ್ಲಿ ಬಳಸುವ ಸಾಮಾನ್ಯ ಅಡಿಪಾಯ ವಸ್ತು ಮರಳಾಗಿದೆ. ಇದನ್ನು ಹೆಚ್ಚಾಗಿ ಅಡಿಪಾಯ ಮತ್ತು ಮಣ್ಣಿನ ನಡುವಿನ ಬೆಡ್ ಪದರವಾಗಿ ಬಳಸಲಾಗುತ್ತದೆ.
ಅನುಕೂಲಗಳು
a) ಕೆಲಸ ಮಾಡಲು ಸುಲಭ ಮತ್ತು ಕಾಂಪ್ಯಾಕ್ಟ್ ಆಗಿರುತ್ತದೆ
b) ಸ್ಥಿರವಾದ ಅಡಿಪಾಯವನ್ನು ಒದಗಿಸುತ್ತದೆ
c) ನೀರನ್ನು ಸರಿಯಾಗಿ ಹೊರಹಾಕಲು ಅನುವು ಮಾಡಿಕೊಡುತ್ತದೆ
7. ಇಟ್ಟಿಗೆ
ಸುದೀರ್ಘ ಬಾಳಿಕೆಯ ದೃಷ್ಟಿಯಲ್ಲಿ ನೋಡಿದಾಗ ಇಟ್ಟಿಗೆಗಳನ್ನು ಅಡಿಪಾಯವಾಗಿ ಬಳಸುವುದು ಕಲ್ಲಿನ ಅಡಿಪಾಯವನ್ನು ಹೋಲುತ್ತವೆ. ಹಿಂದಿನ ಕಾಲದ ಮನೆಗಳು ಮತ್ತು ಕಟ್ಟಡಗಳಿಗೆ ಅವು ಸಾಮಾನ್ಯ ಆಯ್ಕೆಯಾಗಿದ್ದವು.
ಅನುಕೂಲಗಳು
a) ದೀರ್ಘ ಬಾಳಿಕೆ ಬರುತ್ತದೆ
b) ಬೆಂಕಿ ನಿರೋಧಕ
c) ತಾಪಮಾನದ ಏರಿಳಿತಗಳ ವಿರುದ್ಧ ಅತ್ಯುತ್ತಮ ಇನ್ಸುಲೇಶನ್ ಒದಗಿಸುತ್ತದೆ
8. ಉಕ್ಕು
ಕಟ್ಟಡ ನಿರ್ಮಾಣ ಉದ್ಯಮದಲ್ಲಿ ಬೇರೆ ಅಡಿಪಾಯಗಳಿಗೆ ಹೋಲಿಸಿದಲ್ಲಿ ಉಕ್ಕಿನ ಅಡಿಪಾಯಗಳು ಸ್ವಲ್ಪ ಹೊಸದು. ಅವುಗಳ ಧೃಡತೆ ಮತ್ತು ಬಾಳಿಕೆಯ ಕಾರಣದಿಂದಾಗಿ ವಾಣಿಜ್ಯ ಮತ್ತು ಕೈಗಾರಿಕಾ ಕಟ್ಟಡಗಳಲ್ಲಿ ಬಳಸಲಾಗುವ ಅಡಿಪಾಯ ಸಾಮಗ್ರಿಗಳಲ್ಲಿ ಜನಪ್ರಿಯ ಆಯ್ಕೆಯಾಗಿದೆ.
ಅನುಕೂಲಗಳು
a) ದೃಢತೆ ಮತ್ತು ಬಾಳಿಕೆ ಬರುತ್ತದೆ
b) ಹವಾಮಾನ ಮತ್ತು ಕೀಟಗಳಿಗೆ ಪ್ರತಿರೋಧಕ
c) ಕಡಿಮೆ ನಿರ್ವಹಣೆಯ ಅಗತ್ಯವಿರುತ್ತದೆ