Get In Touch

Get Answer To Your Queries

Select a valid category

Enter a valid sub category

acceptence


ಗೋಡೆಗಳಲ್ಲಿ ಇರುವ ಬಿರುಕುಗಳನ್ನು ನಿವಾರಿಸುವುದು ಹೇಗೆ: ಒಂದು ಸಂಪೂರ್ಣ ಮಾಹಿತಿ

ಗೋಡೆಗಳಲ್ಲಿ ಬಿರುಕು ಉಂಟಾಗುವುದು ಸಾಮಾನ್ಯ ಸಮಸ್ಯೆ. ಗೋಡೆಗಳಲ್ಲಿ ಬಿರುಕನ್ನು ನಿವಾರಿಸುವುದು ಹೇಗೆ ಎನ್ನುವುದೇ ಪ್ರಧಾನ ಪ್ರಶ್ನೆಯಾಗುತ್ತದೆ. ಅದಕ್ಕಾಗಿಯೇ ಇಲ್ಲಿ ಒಂದು ವಿಶೇಷವಾಗಿರುವ ಮಾಹಿತಿಯನ್ನು ನೀಡಲಾಗಿದೆ. ಗೋಡೆಗಳಲ್ಲಿ ಬಿರುಕು ನಿವಾರಿಸುವುದು ಹೇಗೆ ಮತ್ತು ಅದನ್ನು ಸರಿಯಾದ ರೀತಿಯಲ್ಲಿ ಮತ್ತು ದಕ್ಷ ರೀತಿಯಲ್ಲಿ ದುರಸ್ತಿಗೊಳಿಸುವುದು ಹೇಗೆ ಎಂಬ ಬಗ್ಗೆ ನಿಮಗೆ ಕಲಿಯಲು ಸಾಧ್ಯವಿದೆ.

Share:


ನೀವು ಸ್ವಂತ ಮನೆಯನ್ನು ಹೊಂದಿದ್ದರೆ ಅಥವಾ ಮನೆಯನ್ನು ಇತರರಿಗೆ ಬಾಡಿಗೆಗೆ ನೀಡಿದ್ದರೆ ಗೋಡೆಯಲ್ಲಿ ಉಂಟಾಗಿರುವ ಬಿರುಕುಗಳು ನಿಮ್ಮ ಗಮನ ಸೆಳೆದಿರಬಹುದು. ತಾಪಮಾನದಲ್ಲಿ ಬದಲಾವಣೆ, ತಳಪಾಯದಲ್ಲಿ ಉಂಟಾದ ಚಲನೆ ಅಥವಾ ಸಾಮಾನ್ಯವಾಗಿ ಉಂಟಾಗುವ ಇತರ ಕಾರಣಗಳಿಂದ ಗೋಡೆಯಲ್ಲಿ ಬಿರುಕು ಉಂಟಾಗುವ ಸಾಧ್ಯತೆಗಳು ಇವೆ. ಗೋಡೆಗಳ ಮೇಲೆ ಇರುವ ಸಣ್ಣ ಪ್ರಮಾಣದ ಬಿರುಕುಗಳು ದೊಡ್ಡ ಸಮಸ್ಯೆ ಎಂದು ನಿಮಗೆ ಅನಿಸಲಾರದು. ಆರಂಭಿಕ ಹಂತದಲ್ಲಿಯೇ ಅದನ್ನು ದುರಸ್ತಿಗೊಳಿಸದೇ ಇದ್ದರೆ ಮುಂದೆ ಅದು ಹೆಚ್ಚು ವೆಚ್ಚದಾಯಕವಾಗಿ ಪರಿಣಮಿಸಲೂ ಸಾಧ್ಯತೆಗಳಿವೆ. ಅದೃಷ್ಟವಶಾತ್ ಗೋಡೆಗಳ ಮೇಲೆ ಉಂಟಾಗಿರುವ ಬಿರುಕು ದುರಸ್ತಿ ಮಾಡುವ ವಿಚಾರ ಸರಳ ಹಾಗೂ ಸುಲಭವೇ ಆಗಿದೆ. ಮನೆ ಮಾಲೀಕರು ತಮಗೆ ಇರುವ ಪ್ರಾಥಮಿಕ ತಿಳಿವಳಿಕೆಯಿಂದ ಅದನ್ನು ಸರಿಪಡಿಸಬಹುದು. ಈ ಬ್ಲಾಗ್ ನಲ್ಲಿ ಗೋಡೆಯಲ್ಲಿ ಉಂಟಾಗಿರುವ ಬಿರುಕುಗಳನ್ನು ಸರಿಪಡಿಸುವ ಪ್ರಾಥಮಿಕ ಮಾಹಿತಿ ಮತ್ತು ಅದರ ವಿವರಗಳನ್ನು ನೀಡಲಿದ್ದೇವೆ, ಹೀಗಾಗಿ ನೀವು ನಿಮ್ಮ ಶರ್ಟ್ ನ ತೋಳುಗಳನ್ನು ಮಡಚಿ, ಕನ್ನಡಕವನ್ನು ಏರಿಸಿ ಬಿರುಕು ದುರಸ್ತಿ ಮಾಡಲು ಹೋಗಿ!



ಗೋಡೆಗಳಲ್ಲಿ ಇರುವ ಬಿರುಕು ದುರಸ್ತಿ ಮಾಡುವುದು ಹೇಗೆ?



1) ಸುಣ್ಣದ ಕೋಟ್ (ಡ್ರೈವಾಲ್‌) ಮೇಲೆ ಉಂಟಾದ ಬಿರುಕಿನ ದುರಸ್ತಿ ಹೇಗೆ?


ಡ್ರೈವಾಲ್ ಎಂದರೆ ಸುಣ್ಣದ ಕೋಟಿಂಗ್ ಮತ್ತು ಎರಡು ರೀತಿಯ ಪೇಪರ್ ಗಳ ನಡುವೆ ಸ್ಯಾಂಡ್‌ವಿಚ್‌ನಂತೆ ಇರಿಸಲಾಗುತ್ತದೆ. ಹಲವು ಮನೆಗಳ ಮತ್ತು ಕಟ್ಟಡಗಳ ಒಳಗಿನ ಗೋಡೆಗಳಲ್ಲಿ ಸಾಮಾನ್ಯವಾಗಿ ಅದನ್ನು ಬಳಕೆ ಮಾಡಲಾಗುತ್ತದೆ. ಹೀಗಾಗಿ, ಗೋಡೆಗಳಲ್ಲಿನ ಬಿರುಕುಗಳನ್ನು ದುರಸ್ತಿ ಮಾಡುವುದು ಹೇಗೆ ಎಂಬ ವಿಚಾರ ಬಂದಾಗ ಈ ಅಂಶ ಗೊತ್ತಾಗುತ್ತದೆ. ಏಕೆಂದರೆ ಮನೆಯ ಮಾಲೀಕರಿಗೆ ಒಂದಲ್ಲ ಒಂದು ರೀತಿಯಲ್ಲಿ ತಮ್ಮ ಮನೆಯ ಗೋಡೆಯಲ್ಲಿ ಬಿರುಕನ್ನು ಅವರು ನೋಡಿಯೇ ನೋಡುತ್ತಾರೆ. ಅದೃಷ್ಟವಶಾಲ್ ಇಂಥ ಡ್ರೈವಾಲ್ ನಲ್ಲಿ ಸುಲಭ ರೀತಿಯಲ್ಲಿ ಸಣ್ಣ ಪ್ರಮಾಣದ ಬಿರುಕನ್ನು ನಿವಾರಿಸಲಾಗುತ್ತದೆ.

 

ಡ್ರೈವಾಲ್ ನಲ್ಲಿ ಕಂಡುಬಂದ ಬಿರುಕು ನಿವಾರಣೆಗೆ ಈ ಕೆಳಗಿನ ಕ್ರಮಗಳನ್ನು ಅನುಸರಿಸಬೇಕು:

 

    1) ಮೊದಲೇ ಮಿಶ್ರಣವಾಗಿರುವ ಅಥವಾ ನಂತರ ಬೆರೆಸಬಹುದಾಗಿರುವುದನ್ನು ಖರೀದಿಸಿ

    2) ನೀವು ದುರಸ್ತಿ ಮಾಡಬೇಕಾಗಿರುವ ಬಿರುಕಿನ ಸಮೀಪ ವಿ ಆಕಾರದ ಗುರುತು ಮಾಡಿ

    3) ಬಿರುಕಿನ ಸುತ್ತಲಿನ ಸ್ಥಳವದಲ್ಲಿ ಇರುವ ಅವಶೇಷಗಳು ಅಥವಾ ದೂಳನ್ನು ತೆಗೆದು ಶುಚಿಗೊಳಿಸಬೇಕು

    4) ಮಿಶ್ರಣವನ್ನು ಬಿರುಕಿನ ಮೇಲೆ ದಪ್ಪವಾಗಿ ಹಚ್ಚಬೇಕು ಮತ್ತು ಅದನ್ನು ಸಮವಾಗಿ ಹರಡಬೇಕು

    5)ನಿಮಗೆ ಅಗತ್ಯ ಇರುವಷ್ಟು ಬಾರಿ ಬಿರುಕಿನ ಮೇಲೆ ಅದನ್ನು ಹಚ್ಚಬೇಕು

    6) ಕನಿಷ್ಠ 24 ಗಂಟೆಗಳ ಕಾಲ ಅದನ್ನು ಒಣಗಲು ಬಿಡಬೇಕು

    7) ಒಣಗಿದ ನಂತರ ಮರಳು ಕಾಗದ ತೆಗೆದುಕೊಂಡು ಹಚ್ಚಿರುವ ಮಿಶ್ರಣದ ಹೆಚ್ಚುವರಿ ಭಾಗವನ್ನು ನಿಧಾನವಾಗಿ ಒರೆಸಿ ತೆಗೆಯಬೇಕು.

    8)  ಗೋಡೆ ಹೊಂದಿರುವ ಬಣ್ಣಕ್ಕೆ ಅನುಗುಣವಾಗಿ ತೇಪೆ ಹಚ್ಚಿದ ಭಾಗಕ್ಕೆ ಪೆಯಿಂಟ್ ಮಾಡಬೇಕು.

     

2) ಕಾಂಕ್ರೀಟ್ ಗೋಡೆಯಲ್ಲಿ ಉಂಟಾಗಿರುವ ಬಿರುಕಿನ ದುರಸ್ತಿ


ನೆಲಮಹಡಿಗಳು, ಗ್ಯಾರೇಜುಗಳು, ಮತ್ತು ಮನೆಯ ಇತರ ಭಾಗಗಳಲ್ಲಿ ಕಾಂಕ್ರೀಟ್ ಗೋಡೆಗಳು ಇರುತ್ತವೆ. ಇಂಥ ಗೋಡೆಗಳಲ್ಲಿಯೂ ಕೂಡ ತಳಪಾಯದಲ್ಲಿ ಉಂಟಾದ ಬದಲಾವಣೆ, ತಾಪಮಾನದಲ್ಲಿ ವ್ಯತ್ಯಾಸ, ಅಥವಾ ನೀರಿನಿಂದ ಉಂಟಾದ ಸಮಸ್ಯೆಗಳಿಂದಲೂ ಕೂಡ ಬಿರುಕುಗಳು ಕಾಣಬಹುದು. ಅದೃಷ್ಟವಶಾತ್ ಅದನ್ನು ದುರಸ್ತಿ ಮಾಡುವ ಮತ್ತು ಸುಲಭವಾಗಿ ಕಾಂಕ್ರಿಟ್ ಗಟ್ಟಿಯಾಗಲು ಬೇಕಾಗುವ ಸಮಯವೂ ಅತ್ಯಲ್ಪ.

 

ಕಾಂಕ್ರೀಟ್ ಗೋಡೆಯಲ್ಲಿ ಉಂಟಾಗಿರುವ ಬಿರುಕು ಸರಿಪಡಿಸಲು ಈ ಕೆಳಗಿನ ಸೂತ್ರಗಳನ್ನು ಅನುಸರಿಸಿ:

 

1) ಉಳಿ ಮತ್ತು ಸುತ್ತಿಗೆಯ ಸಹಾಯದಿಂದ ಬಿರುಕು ಇರುವ ಸ್ಥಳವನ್ನು ಅಗಲ ಮಾಡಬೇಕು

2) ಬ್ರಶ್ ನಿಂದ ಆ ಸ್ಥಳದಲ್ಲಿ ಇರುವ ಧೂಳು ಅಥವಾ ಕಾಂಕ್ರೀಟ್ ಅವಶೇಷಗಳನ್ನು ತೆಗೆಯಬೇಕು

3) ಹಳೆಯ ಪೆಯಿಂಟ್ ಬ್ರಶ್‌ನಿಂದ ಕಾಂಕ್ರೀಟ್ ಗೆ ಇರುವ ಮಿಶ್ರಣವನ್ನು ಬಿರುಕು ಬಿಟ್ಟಿರುವಲ್ಲಿಗೆ ಹಚ್ಚಬೇಕು

4) ಹಲವು ಬಾರಿ ಮಿಶ್ರಣವನ್ನು ಬಿರುಕು ಮೂಡಿದ ಸ್ಥಳಕ್ಕೆ ಹಚ್ಚಬೇಕು. ಅದು ಗೋಡೆಗೆ ಸಮನಾಗಿ ನಿಲ್ಲುವಂತೆ ಮಾಡಬೇಕು.

5) ಗೋಡೆಯ ಇತರ ಭಾಗಕ್ಕೆ ಹೋಲಿಸಿ ನೋಡಿದಾಗ ಬಿರುಕು ಇದ್ದ ಸ್ಥಳವನ್ನು ದುರಸ್ತಿ ಮಾಡಿದ್ದು ಸರಿಯಾಗಿದೆಯೇ ಎಂದು ಗಮನಿಸಬೇಕು.

 

 

3). ಪ್ಲಾಸ್ಟರ್ ಗೋಡೆಯಲ್ಲಿ ಇರುವ ಬಿರುಕು ಸರಿಪಡಿಸುವುದು

ಹಳೆಯ ಮನೆಗಳು ಮತ್ತು ಕಟ್ಟಡಗಳಲ್ಲಿ ಪ್ಲಾಸ್ಟರ್ ಗೋಡೆಗಳು ಕಂಡುಬರುತ್ತವೆ. ಕಟ್ಟಡ ತಳಭಾಗಕ್ಕೆ ಏನಾದರೂ ಸಮಸ್ಯೆಯಾದಾಗ, ತಾಪಮಾನದಲ್ಲಿ ಬದಲಾವಣೆ, ಈಗಾಗಲೇ ಇರುವ ಪ್ಲಾಸ್ಟರ್ ಹಳೆಯದಾಗಿದ್ದರೆ ಅದರಲ್ಲಿ ಬಿರುಕು ಉಂಟಾಗುವ ಸಾಧ್ಯತೆಗಳು ಇರುತ್ತವೆ. ಡ್ರೈವಾಲ್ ಅಥವಾ ಕಾಂಕ್ರೀಟ್ ಗೋಡೆಯಲ್ಲಿ ಇರುವ ಬಿರುಕು ದುರಸ್ತಿ ಮಾಡುವುದಕ್ಕೂ ಈ ರೀತಿಯ ಗೋಡೆಯಲ್ಲಿ ಇರುವ ಬಿರುಕು ಸರಿಪಡಿಯುವುದಕ್ಕೂ ವ್ಯತ್ಯಾಸವಿದೆ. ಆದರೆ, ಅದನ್ನು ಡಿಐವೈ ಪ್ರಾಜೆಕ್ಟ್ ನಿಂದ ಸರಿಪಡಿಸಲು ಸಾಧ್ಯವಿದೆ.

ಪ್ಲಾಸ್ಟರ್ ಗೋಡೆಗಳಲ್ಲಿ ಇರುವ ಬಿರುಕು ಸರಿಪಡಿಸಲು ಈ ಕೆಳಗಿನ ಕ್ರಮಗಳನ್ನು ಅನುಸರಿಸಿ:

 

1) ಗೋಡೆಯಲ್ಲಿ ಇರುವ ಪ್ಲಾಸ್ಟರ್ ಕಿತ್ತು ಬರುತ್ತದೆಯೇ ಎಂಬುದನ್ನು ಒತ್ತಿ ಪರೀಕ್ಷಿಸಿ

2) ಬಿರುಕು ಇರುವ ಸ್ಥಳವನ್ನು ಶುಚಿಗೊಳಿಸಿ ಮತ್ತು ಸಿಮೆಂಟ್ ಹಾಕಲು ಬಳಸುವ ಕತ್ತಿಯಿಂದ ಕೊಂಚ ಅಗಲಗೊಳಿಸಿ

3) ಈಗಾಗಲೇ ಸಿದ್ಧಗೊಂಡಿರುವ ಮಿಶ್ರಣವನ್ನು ಅಥವಾ ಎರಡು ವಸ್ತುಗಳನ್ನು ಬಿರುಕು ಇರುವ ಜಾಗಕ್ಕೆ ಹಚ್ಚಿ ಪೂರ್ಣವಾಗಿ ಮುಚ್ಚಬೇಕು

4) ಬಿರುಕು ಇರುವುದಕ್ಕೆ ಅನುಸಾರವಾಗಿ ಮಿಶ್ರಣವನ್ನು ಹಚ್ಚಬೇಕು. ಒಂದು ವೇಳೆ ದೊಡ್ಡ ಪ್ರಮಾಣದ ಬಿರುಕು ಇದ್ದರೆ ಮೆಶ್‌ ಟೇಪ್ ಅನ್ನು ಮಿಶ್ರಣವನ್ನು ಹಾಕುವುದಕ್ಕೆ ಮೊದಲು ಇರಿಸಬೇಕು.

5) ಮೊದಲೇ ನಿಗದಿಪಡಿಸಿದ ಸ್ಥಳದಲ್ಲಿ ಹಲವು ಎರಡು ವಸ್ತುಗಳ ಮಿಶ್ರಣವನ್ನು (2 ಅಥವಾ 3) ಹಚ್ಚಬೇಕು.

6) ಕೊನೆಯದಾಗಿ ಗೋಡೆಗೆ ಹೊಂದಾಣಿಕೆಯಾಗುವಂತೆ ತೇಪೆ ಹಚ್ಚಿದ ಸ್ಥಳಕ್ಕೆ ಪೆಯಿಂಟ್ ಮಾಡಬೇಕು.

 

 

ಇದನ್ನೂ ಓದಿ : ನೀರು ಮತ್ತು ಸಿಮೆಂಟ್ ನ ಅನುಪಾತದ ಲೆಕ್ಕಾಚಾರ ಹೇಗೆ?




ಕೊನೆಯದಾಗಿ ಹೇಳುವುದಿದ್ದರೆ, ಗೋಡೆಗಳಲ್ಲಿ ಬಿರುಕು ಎನ್ನುವುದು ಡ್ರೈ ವಾಲ್, ಕಾಂಕ್ರಿಟ್ ಅಥವಾ ಪ್ಲಾಸ್ಟರ್ ವಾಲ್ ಗಳಲ್ಲಿ ಸಾಮಾನ್ಯ ಸಮಸ್ಯೆಯಾಗಿದೆ. ಆದರೆ, ಸರಿಯಾದ ರೀತಿಯ ಪರಿಕರಗಳು ಮತ್ತು ವಸ್ತುಗಳನ್ನು ಬಳಕೆ ಮಾಡುವುದರ ಮೂಲಕ ಅದನ್ನು ದುರಸ್ತಿ ಮಾಡಲು ಸಾಧ್ಯವಿದೆ. ಇಂಥ ಡಿಐವೈ ಪ್ರಾಜೆಕ್ಟ್ ಮೂಲಕ ಮನೆ ಮಾಲೀಕರ ಸಮಯ ಮತ್ತು ಹಣದ ಉಳಿತಾಯ ಮಾಡಲು ಸಾಧ್ಯವಾಗುತ್ತದೆ. ಸ್ವಲ್ಪ ತಾಳ್ಮೆ ಮತ್ತು ಶ್ರಮ ವಹಿಸಿ ಈ ಸರಳ ಸೂತ್ರಗಳನ್ನು ಪಾಲಿಸಿದರೆ ಗೋಡೆಗಳ ಮೇಲೆ ಬಿರುಕು ಉಂಟಾಗುವುದನ್ನು ತಡೆಯಲು ಸಾಧ್ಯವಿದೆ. ಜತೆಗೆ ನೀವೇ ಅದನ್ನು ದುರಸ್ತಿಗೊಳಿಸಿ ಮನೆಯ ಅಂದವನ್ನು ಹೆಚ್ಚಿಸಲು ನಿಮ್ಮದೇ ಆದ ಕೊಡುಗೆ ನೀಡಬಹುದು.



ಸಂಬಂಧಿತ ಲೇಖನಗಳು


ಗೋಡೆಗಳಲ್ಲಿ ತೇವಾಂಶ : ವಿಧಗಳು, ಕಾರಣಗಳು, ಮುನ್ನೆಚ್ಚರಿಕೆಗಳು/ ಅಲ್ಟ್ರಾಟೆಕ್

ಗೋಡೆಗಳಲ್ಲಿ ತೇವಾಂಶ : ವಿಧಗಳು, ಕಾರಣಗಳು, ಮುನ್ನೆಚ್ಚರಿಕೆಗಳು

ಗೋಡೆಗಳಲ್ಲಿನ ತೇವಾಂಶವು ಕಟ್ಟಡದ ಸ್ವರೂಪಕ್ಕೆ ಗಂಭೀರ ಹಾನಿ ಮಾಡುತ್ತದೆ ಮತ್ತು ಆರೋಗ್ಯ ಸಮಸ್ಯೆಯನ್ನು ಹೆಚ್ಚಿಸುತ್ತದೆ. ಗೋಡೆಗಳಲ್ಲಿ ನೀರು ಸೋರುವಿಕೆಯನ್ನು ಹೇಗೆ ಸಮರ್ಪಕವಾಗಿ ತಡೆಗಟ್ಟಬಹುದು ಎಂಬುದನ್ನು ಈ ಮಾರ್ಗದರ್ಶಿಯನ್ನು ಓದಿ ತಿಳಿದುಕೊಳ್ಳಬಹುದು.

ಬೇಸ್​ಮೆಂಟ್ ವಾಟರ್​ಪ್ರೂಫಿಂಗ್ ವಿಧಾನಗಳು: ಸಂಪೂರ್ಣ ಮಾರ್ಗದರ್ಶಿ | ಅಲ್ಟ್ರಾಟೆಕ್

ಬೇಸ್​ಮೆಂಟ್ ವಾಟರ್​ಪ್ರೂಫಿಂಗ್ ವಿಧಾನಗಳು: ಸಂಪೂರ್ಣ ಮಾರ್ಗದರ್ಶಿ

ಬೇಸ್​ಮೆಂಟ್ ವಾಟರ್​ಪ್ರೂಫಿಂಗ್ ಎಂದರೆ, ನೀರಿನಿಂದ ಉಂಟಾಗುವ ಹಾನಿಯನ್ನು ತಡೆಯಲು ಮತ್ತು ಬೂಷ್ಟು ಬೆಳೆಯುವುದರಿಂದಾಗುವ ಇತರ ವೆಚ್ಚದಾಯಕ ಸಮಸ್ಯೆಗಳನ್ನು ತಡೆಯುವುದಾಗಿದೆ. ಈ ಸಮಸ್ಯೆಗಳನ್ನು ತಡೆಯಲು ಬೇಸ್​ಮೆಂಟ್​ ವಾಟರ್​ಪ್ರೂಫಿಂಗ್ ಮಾಡುವುದು ಅತ್ಯಗತ್ಯ. ಎಕ್ಸ್ಟೀರಿಯರ್ ಮತ್ತು ಇಂಟೀರಿಯರ್ ಬೇಸ್​ಮೆಂಟ್ ವಾಟರ್​ಪ್ರೂಫಿಂಗ್​ ಬಗ್ಗೆ ಮುಂದೆ ಮತ್ತಷ್ಟು ತಿಳಿದುಕೊಳ್ಳಿರಿ.

ಸಿಮೆಂಟ್‌ನ ವಿವಿಧ ಪ್ರಕಾರಗಳನ್ನು ತಿಳಿದುಕೊಳ್ಳುವುದು: ಉಪಯೋಗಗಳು ಮತ್ತು ಗ್ರೇಡ್​ಗಳು

ಸಿಮೆಂಟ್‌ನ ವಿವಿಧ ಪ್ರಕಾರಗಳನ್ನು ತಿಳಿದುಕೊಳ್ಳುವುದು: ಉಪಯೋಗಗಳು ಮತ್ತು ಗ್ರೇಡ್​ಗಳು

ನಿಮ್ಮ ಮನೆ ಕಟ್ಟಲು ಸೂಕ್ತವಾದ ವಿವಿಧ ಪ್ರಕಾರದ ಸಿಮೆಂಟ್ ಕುರಿತು ತಿಳಿದುಕೊಳ್ಳಿರಿ. ಮನೆ ನಿರ್ಮಾಣ ಮಾಡುವಾಗ ತಿಳುವಳಿಕೆಯುಳ್ಳ ನಿರ್ಧಾರವನ್ನು ತೆಗೆದುಕೊಳ್ಳಲು ಅದರ ಸಾಮಾನ್ಯ ಉಪಯೋಗಗಳು ಮತ್ತು ಗ್ರೇಡ್​ಗಳನ್ನು ಕಂಡುಕೊಳ್ಳಿರಿ.


ಶಿಫಾರಸು ಮಾಡಿದ ವೀಡಿಯೊಗಳು





  ಮನೆ ಕನ್‌ಸ್ಟ್ರಕ್ಷನ್‌ಗಾಗಿ ಎಸ್ಟಿಮೇಟಿಂಗ್ ಟೂಲ್ಸ್


ವೆಚ್ಚ ಕ್ಯಾಲ್ಕುಲೇಟರ್

ಪ್ರತಿಯೊಬ್ಬ ಮನೆ ನಿರ್ಮಾಣ ಮಾಡುವವರು ತಮ್ಮ ಕನಸಿನ ಮನೆಯನ್ನು ನಿರ್ಮಿಸಲು ಬಯಸುತ್ತಾರೆ ಆದರೆ ಅದು ಅವರ ಬಜೆಟ್‌ ವೆಚ್ಚವನ್ನು ಮೀರದಂತೆ ಇರಿಸಿಕೊಳ್ಳಲು ಬಯಸುತ್ತಾರೆ. 

logo

ಇಎಂಐ ಕ್ಯಾಲ್ಕುಲೇಟರ್

ಮನೆ ನಿರ್ಮಾಣಕ್ಕೆ ಹಣಕಾಸು ಒದಗಿಸಿಕೊಳ್ಳುವ ಅತ್ಯುತ್ತಮ ಮಾರ್ಗಗಳಲ್ಲಿ ಮನೆ-ಸಾಲವನ್ನು ತೆಗೆದುಕೊಳ್ಳುವುದು ಒಂದಾಗಿರುತ್ತದೆ, ಆದರೆ ಮನೆಯನ್ನು ನಿರ್ಮಿಸುವವರು ಎಷ್ಟು ಕಂತುಗಳನ್ನು ಪಾವತಿಸಬೇಕೆಂದು ತಿಳಿಯಲು ಬಯಸುತ್ತಾರೆ. 

logo

ಪ್ರಾಡಕ್ಟ್ ಪ್ರೆಡಿಕ್ಟರ್

ಮನೆಯನ್ನು ನಿರ್ಮಿಸುವ ಆರಂಭಿಕ ಹಂತಗಳಲ್ಲಿ, ಮನೆ ನಿರ್ಮಿಸುವವರು ಸರಿಯಾದ ಉತ್ಪನ್ನಗಳನ್ನು ಆಯ್ಕೆ ಮಾಡುವುದು ಮುಖ್ಯವಾಗಿರುತ್ತದೆ. 

logo

ಅಂಗಡಿ ಪತ್ತೆಕಾರಕ

ಮನೆ ಕಟ್ಟುವವರಿಗೆ, ಮನೆಯ ಕಟ್ಟಡದ ಬಗ್ಗೆ ಎಲ್ಲಾ ಅಮೂಲ್ಯವಾದ ಮಾಹಿತಿಯನ್ನು ಪಡೆಯುವ ಸರಿಯಾದ ಅಂಗಡಿಯನ್ನು ಕಂಡುಹಿಡಿಯುವುದು ಮುಖ್ಯವಾಗಿದೆ.

logo

Loading....