Share:
Home Building Guide
Our Products
Useful Tools
Waterproofing methods, Modern kitchen designs, Vaastu tips for home, Home Construction cost
Share:
ಲಿವಿಂಗ್ ರೂಮ್‌ಗಳು ನೀವು ನಿಮ್ಮ ಮನೆಯಲ್ಲಿ ಹೆಚ್ಚು ಬಳಸುವ ಸ್ಥಳಗಳಾಗಿವೆ. ನಿಮ್ಮ ಮಕ್ಕಳೊಂದಿಗೆ ರಾತ್ರಿ ಆಟವಾಡಲು, ನಿಮ್ಮ ಸಂಗಾತಿಯೊಂದಿಗೆ ಹಿತಕರವಾದ ಸೋಫಾಗಳಲ್ಲಿ ಕುಳಿತು ಒಂದು ಕಪ್ ಕಾಫಿ ಕುಡಿಯಲು ಅಥವಾ ಪ್ರತಿ ಹದಿನೈದು ದಿನಗಳಿಗೊಮ್ಮೆ ನಿಮ್ಮ ಪ್ರೀತಿಯ ಸ್ನೇಹಿತರನ್ನು ಕರೆದು ಗೆಟ್-ಟುಗೆದರ್ ಮಾಡಲು ಲಿವಿಂಗ್ ರೂಮ್ ನೀವು ಅತಿಹೆಚ್ಚು ಬಳಸುವ ಸ್ಥಳವಾಗಿದೆ. ಯಾವುದಕ್ಕೂ ಕಡಿಮೆ ಇಲ್ಲದಂತೆ ಇಂಟೀರಿಯರ್ ಡಿಸೈನಿಂಗ್ ಜೊತೆಗೆ, ಸ್ಥಳವನ್ನು ಮಂಗಳಕರ, ಧನಾತ್ಮಕ ಮತ್ತು ನಕಾರಾತ್ಮಕ ಶಕ್ತಿಗಳಿಂದ ಮುಕ್ತವಾಗಿಡಲು ಲಿವಿಂಗ್ ರೂಮ್ಗೆ ಕೆಲವು ವಾಸ್ತು ಸಲಹೆಗಳನ್ನು ಅನುಸರಿಸುವುದು ಮುಖ್ಯವಾಗಿದೆ.
ಈ ಲೇಖನದಲ್ಲಿ ಲಿವಿಂಗ್ ರೂಮ್‌ಗಾಗಿ ವಾಸ್ತು ಸಲಹೆಗಳು ನಿಮ್ಮ ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೆ ಸಂತೋಷ, ಯಶಸ್ಸು ಮತ್ತು ಆರೋಗ್ಯಕರ ಜೀವನವನ್ನು ಖಾತ್ರಿಪಡಿಸುವ ವಾಸ್ತು-ಪ್ರಕಾರದ ಜಾಗವನ್ನಾಗಿಸಲು ಮತ್ತು ವಿನ್ಯಾಸ ಮಾಡಲು ನಿಮಗೆ ಮಾರ್ಗದರ್ಶನ ನೀಡುತ್ತದೆ.
ಲಿವಿಂಗ್ ರೂಮ್ನಲ್ಲಿ ಪೂರ್ವ ಅಥವಾ ಉತ್ತರ ದಿಕ್ಕಿಗೆ ಇಳಿಜಾರಿನ ನೆಲಹಾಸನ್ನು ರಚಿಸುವುದು ವಾಸ್ತು ತಜ್ಞರಿಂದ ಮಂಗಳಕರವೆಂದು ಪರಿಗಣಿಸಲಾಗಿದೆ. ಲಿವಿಂಗ್ ರೂಮ್ನಲ್ಲಿ ಇಳಿಜಾರಿನ ಫ್ಲೋರ್ ಅನ್ನು ಮಾಡಲು ಪೂರ್ವದ ಈಶಾನ್ಯ ದಿಕ್ಕು ಅತ್ಯಂತ ಅನುಕೂಲಕರವಾಗಿದೆ.
ಲಿವಿಂಗ್ ರೂಮ್ನಲ್ಲಿ ಇಳಿಜಾರಿನ ಫ್ಲೋರ್ ಮನೆಯ ಮಕ್ಕಳಿಗೆ ಪ್ರಯೋಜನವನ್ನು ನೀಡುತ್ತದೆ, ಅಧ್ಯಯನ ಮಾಡುವಾಗ ಅವರಿಗೆ ಏಕಾಗ್ರತೆಯನ್ನು ಕೊಟ್ಟು ಯಶಸ್ಸು ತರುತ್ತದೆ. ಶಿಕ್ಷಣತಜ್ಞರಿಗೆ, ಪಶ್ಚಿಮ ಪ್ರವೇಶವು ಪ್ರಯೋಜನಕಾರಿಯಾಗಿದೆ ಎಂದು ಸಲಹೆ ಕೊಡಲಾಗಿದೆ.
ವಾಸ್ತುವು ಗೊಂಚಲುಗಳಂತಹ ಶೋಪೀಸ್‌ಗಳನ್ನು ನೇತುಹಾಕಲು ಸೂಚಿಸುತ್ತದೆ, ಅದನ್ನು ಲಿವಿಂಗ್ ಏರಿಯಾದ ಪಶ್ಚಿಮ ಅಥವಾ ದಕ್ಷಿಣ ಭಾಗದಲ್ಲಿ ತೂಗುಹಾಕಬೇಕು. ಇವುಗಳು ಈ ಜಾಗದ ಸಕಾರಾತ್ಮಕತೆ ಮತ್ತು ಸೊಬಗಿನ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತವೆ.
ವಾಸ್ತು-ಪ್ರಕಾರದ ಜಾಗದಲ್ಲಿ ವಾಸಿಸುವ ಮೂಲಕ ಆರೋಗ್ಯ, ಸಂಪತ್ತು, ಸಂತೋಷ ಮತ್ತು ನೆಮ್ಮದಿಯನ್ನು ಸ್ವಾಗತಿಸಿರಿ. ನಿಮ್ಮ ಮಕ್ಕಳಿಗೆ ಉಜ್ವಲ ಭವಿಷ್ಯವನ್ನು ಕೊಡಲು ಮತ್ತು ನಿಮ್ಮ ಗೆಸ್ಟ್ಗಳನ್ನು ಪಾಸಿಟಿವ್ ವಾತಾವರಣಕ್ಕೆ ಸ್ವಾಗತಿಸಲು, ಮಕ್ಕಳು ಮತ್ತು ಗೆಸ್ಟ್ ರೂಮ್ಗಳಿಗಾಗಿ ವಾಸ್ತು ಶಾಸ್ತ್ರದ ಈ ಲೇಖನವನ್ನು ಓದಿ.