ವಾಟರ್‌ಪ್ರೂಫಿಂಗ್‌ ವಿಧಾನಗಳು, ಮಾಡರ್ನ್‌ ಕಿಚನ್‌ ಡಿಸೈನ್ಸ್‌, ಹೋಮ್‌ಗಾಗಿ ವಾಸ್ತು ಸಲಹೆಗಳು, ಮನೆ ನಿರ್ಮಾಣ ವೆಚ್ಚ

ಸಂಪರ್ಕಲ್ಲಿರಿ

ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ

ಮಾನ್ಯವಾದ ವರ್ಗವನ್ನು ಆಯ್ಕೆಮಾಡಿ

ನಿಮ್ಮ ಉಪ-ವರ್ಗವನ್ನು ಆಯ್ಕೆ ಮಾಡಿ

acceptence

ಮುಂದುವರಿಯಲು ದಯವಿಟ್ಟು ಈ ಪೆಟ್ಟಿಗೆಯನ್ನು ಪರಿಶೀಲಿಸಿ



ಅಡುಗೆಮನೆಯ ವಾಸ್ತು ಸಲಹೆಗಳ ಬಗ್ಗೆ ತಿಳಿದುಕೊಳ್ಳಬೇಕಾದರೆ ಈ ಲೇಖನವನ್ನು ಓದಿರಿ. ಅದರಿಂದಾಗಿ ಅಡುಗೆಮನೆಯ ನಿರ್ಮಾಣ ಅಥವಾ ಪುನರ್ ನಿರ್ಮಾಣದ ವೇಳೆ ಉಂಟಾಗುವ ಧನಾತ್ಮಕ ಪರಿಣಾಮಗಳ ಬಗ್ಗೆ ತಿಳಿದುಕೊಳ್ಳಬಹುದು.

ಅಡುಗೆಮನೆಯಲ್ಲಿ ಪ್ರಕೃತಿಯ ಪಂಚಭೂತಗಳಲ್ಲಿ ಒಂದಾಗಿರುವ ಅಗ್ನಿ ಇರುವ ಸ್ಥಳ. ಹೀಗಾಗಿ, ಅಡುಗೆಮನೆ ವಾಸ್ತು ಸರಿಪಡಿಸುವುದರಿಂದ ಈ ಅಂಶದಿಂದಾಗುವ ಪ್ರಯೋಜನವನ್ನು ಪಡೆಯಲು ಸಾಧ್ಯ. ಇಲ್ಲದೇ ಹೋದಲ್ಲಿ ಅಡುಗೆಮನೆಯಲ್ಲಿ ಆಕಸ್ಮಿಕಗಳು ಉಂಟಾಗಲು ಕಾರಣವಾಗಬಹುದು.

Share:



ವಾಸ್ತು ನಿಯಮದ ಅನ್ವಯ ಅಡುಗೆಮನೆಯನ್ನು ನಿರ್ಮಿಸುವ ಅಗತ್ಯತೆ

 

ದೇವರ ಕೋಣೆಯ ಬಳಿಕ ಅಡುಗೆಮನೆಯನ್ನು ಮನೆಯ ಅತ್ಯಂತ ಪವಿತ್ರ ಸ್ಥಳ ಎಂದು ಭಾವಿಸಲಾಗುತ್ತದೆ. ಏಕೆಂದರೆ ಅಲ್ಲಿ ಆಹಾರ ಮತ್ತು ಪೌಷ್ಟಿಕಾಂಶಗಳ ದೇವತೆ ಎಂದು ತಿಳಿಯುವ ಮಾತಾ ಅನ್ನಪೂರ್ಣ ಇರುತ್ತಾಳೆ ಎಂಬ ನಂಬಿಕೆ ಇದೆ, ನಮ್ಮ ದೈನಂದಿನ ಕೆಲಸಗಳನ್ನು ನಿರ್ವಹಿಸಲು ಬೇಕಾದ ಶಕ್ತಿಯನ್ನು ಪೂರೈಸಲು ಮತ್ತು ಹಸಿವೆಯನ್ನು ನೀಗಿಸಲು ಬೇಕಾಗುವ ಉತ್ತಮ ಆಹಾರಗಳನ್ನು ಅಲ್ಲಿ ಸಿದ್ಧಪಡಿಸಲಾಗುತ್ತದೆ. ಅಲ್ಲಿ ಸಿದ್ಧಪಡಿಸಲಾಗಿರುವ ಅತ್ಯುತ್ತಮ ಆಹಾರದಿಂದ ನಾವು ಆರೋಗ್ಯವಂತರಾಗಿ ಮತ್ತು ಸದೃಢರಾಗಿ ಇರಲು ಸಾಧ್ಯವಾಗುತ್ತದೆ.

 

ಸರಿಯಾದ ರೀತಿಯಲ್ಲಿ ಅಡುಗೆಮನೆಯ ವಾಸ್ತು ಅನುಷ್ಠಾನದಿಂದ ಆರೋಗ್ಯಯುಕ್ತ ಜೀವನ ಮತ್ತು ಧನಾತ್ಮಕ ವಾತಾವರಣವನ್ನು ಹೊಂದಿ ಕಾಯಿಲೆ ಸೇರಿದಂತೆ ಋಣಾತ್ಮಕ ಶಕ್ತಿಗಳನ್ನು ದೂರ ಇರಿಸಲು ಸಾಧ್ಯವಿದೆ. ವಾಸ್ತು ನಿಯಮದ ಅನ್ವಯ ನಿರ್ಮಾಣಗೊಳ್ಳದೇ ಇರುವ ಅಡುಗೆಮನೆಯಿಂದ ಹಣಕಾಸಿನ ಸಮಸ್ಯೆಗಳು, ಕಾಯಿಲೆಗಳು, ಕೌಟುಂಬಿಕ ಸಮಸ್ಯೆಗಳು ಸೇರಿದಂತೆ ಹಲವು ಸಮಸ್ಯೆಗಳು ಕಾಣಿಸಿಕೊಳ್ಳಬಹುದು.


ಅಡುಗೆಮನೆ ವಾಸ್ತು ಸಲಹೆಗಳು ಮತ್ತು ನಿಯಮಗಳು


ಅಡುಗೆಮನೆ ಇರಬೇಕಾದ ಸ್ಥಳ :

 

  • ಅಡುಗೆಮನೆಯ ವಾಸ್ತು ಸಲಹೆಗಳ ಪ್ರಕಾರ ಮನೆಯ ಆಗ್ನೇಯ ದಿಕ್ಕಿನಲ್ಲಿ ಅಗ್ನಿ ಎಂಬ ವಸ್ತು ಇರಬೇಕು. ಹೀಗಾಗಿ, ಆ ಸ್ಥಳವೇ ಅಡುಗೆಮನೆಯ ನಿರ್ಮಾಣಕ್ಕೆ ಅತ್ಯುತ್ತಮ ಸ್ಥಳ.
 
  • ಅಡುಗೆಮನೆಯ ವಾಸ್ತುವಿನ ಪ್ರಕಾರ ಉತ್ತಮ ದಿಕ್ಕು ಎಂದರೆ ವಾಯವ್ಯ ದಿಕ್ಕು.
 
  • ಉತ್ತರ, ಈಶಾನ್ಯ, ಮತ್ತು ನೈಋತ್ಯ ದಿಕ್ಕುಗಳಲ್ಲಿ ಅಡುಗೆಮನೆ ನಿರ್ಮಾಣ ಮಾಡಬಾರದು. ಏಕೆಂದರೆ ಆ ದಿಕ್ಕುಗಳು ಅಡುಗೆಮನೆ ವಾಸ್ತು ನಿಯಮಗಳ ಅನ್ವಯ ಅಲ್ಲಿ ಅಡುಗೆಮನೆ ನಿರ್ಮಾಣ ಸೂಕ್ತವಾದುದಲ್ಲ.
 
  • ಬಾತ್ ರೂಮ್ ಮತ್ತು ಅಡುಗೆ ಕೋಣೆಯನ್ನು ಜತೆಯಾಗಿ ನಿರ್ಮಿಸಬಾರದು. ವಾಸ್ತುವಿನ ಅನ್ವಯ ಇದು ನಿಷಿದ್ಧ.

ಪ್ರವೇಶ :

 

  • ಅಡುಗೆಮನೆಯ ಬಾಗಿಲು ಪಶ್ಚಿಮ ಅಥವಾ ಉತ್ತರ ದಿಕ್ಕಿನಲ್ಲಿ ಇರಬೇಕು ಎಂದು ಅಡುಗೆಮನೆಯ ವಾಸ್ತು ಸಲಹೆಗಳು ಹೇಳುತ್ತವೆ. ಆ ಎರಡು ದಿಕ್ಕುಗಳು ಬಾಗಿಲು ನಿರ್ಮಾಣಕ್ಕೆ ಪ್ರಶಸ್ತವಾದವುಗಳು. ಒಂದು ವೇಳೆ, ಆ ಎರಡು ದಿಕ್ಕುಗಳು ನಿರ್ಮಾಣ ಸಂದರ್ಭದಲ್ಲಿ ಸಿಗುತ್ತಿಲ್ಲ ಎಂದಾದರೆ ಆಗ್ನೇಯ ಭಾಗದಲ್ಲಿ ಅಡುಗೆಮನೆ ನಿರ್ಮಾಣ ಮಾಡಬಹುದು.

ಗ್ಯಾಸ್ ಸ್ಟೌ:

 

  • ಅಡುಗೆಮನೆಯಲ್ಲಿ ವಾಸ್ತು ಸಲಹೆಗಳ ಪ್ರಕಾರ ಗ್ಯಾಸ್ ಸ್ಟೌ ಅನ್ನು ಅಡುಗೆಮನೆಯ ಆಗ್ನೇಯ ಭಾಗದಲ್ಲಿ ಇರಿಸಬೇಕು.
 
  • ಅಡುಗೆಮನೆಯಲ್ಲಿ ಪೂರ್ವ ಮುಖವಾಗಿ ನಿಂತು ಅಡುಗೆ ಮಾಡುವಂತೆ ಗ್ಯಾಸ್ ಸ್ಟೌ ಅನ್ನು ಇರಿಸಬೇಕು.

ಬಾಗಿಲುಗಳು ಮತ್ತು ಕಿಟಕಿಗಳು:

 

  • ಅಡುಗೆಮನೆಗೆ ಸಾಮಾನ್ಯವಾಗಿ ಒಂದು ದಿಕ್ಕಿನಿಂದ ಪ್ರವೇಶಕ್ಕೆ ಅವಕಾಶ ಇದ್ದರೆ ಉತ್ತಮ. ಒಂದಕ್ಕೊಂದು ಮುಖವಾಗಿ 2 ಬಾಗಿಲುಗಳನ್ನು ಇರಿಸಬಾರದು. ಒಂದು ವೇಳೆ ಎರಡು ಬಾಗಿಲುಗಳು ಇದ್ದರೆ ಒಂದು ಉತ್ತರ ಅಥವಾ ಪಶ್ಚಿಮ ದಿಕ್ಕಿನಲ್ಲಿ ಇರಬೇಕು ಮತ್ತು ಅದನ್ನು ತೆರೆದಿಡಬೇಕು. ಉತ್ತರ ದಿಕ್ಕಿನಲ್ಲಿ ಇರುವ ಬಾಗಿಲನ್ನು ಯಾವತ್ತೂ ಮುಚ್ಚಿ ಇರಿಸಬೇಕು.
 
  • ಸರಿಯಾಗಿರುವ ಅಡುಗೆಮನೆಯ ವಾಸ್ತುವಿನ ಪ್ರಕಾರ ಬಾಗಿಲನ್ನು ಎಡದಿಂದ ಬಲಕ್ಕೆ (ಪ್ರದಕ್ಷಿಣೆಯ ದಿಕ್ಕಿನಲ್ಲಿ) ತೆರೆಯಬೇಕು. ಇದರಿಂದಾಗಿ ಅಭಿವೃದ್ಧಿಯನ್ನು ಆಹ್ವಾನಿಸಿದಂತಾಗುತ್ತದೆ. ಬಲದಿಂದ ಎಡಕ್ಕೆ (ಅಪ್ರದಕ್ಷಿಣೆಯ ದಿಕ್ಕಿನಲ್ಲಿ) ತೆರೆಯುವುದರಿಂದ ಏಳಿಗೆ- ಪ್ರಗತಿಯಲ್ಲಿ ವಿಳಂಬ ಉಂಟಾಗುತ್ತದೆ.
 
  • ಅಡುಗೆಮನೆಯಲ್ಲಿ ಅಗತ್ಯವಾಗಿ ಕಿಟಕಿ ಇರಬೇಕು. ಅದು ಇದ್ದರೆ ಅದರಿಂದಾಗಿ ಧನಾತ್ಮಕ ಶಕ್ತಿ ಇರಲು ಹೆಚ್ಚು ಅನುಕೂಲ ಮಾಡಿಕೊಡುತ್ತದೆ. ಇದರ ಜತೆಗೆ ಗಾಳಿ ಮತ್ತು ಬೆಳಕಿಗೆ ಕೂಡ ಅನುಕೂಲವಾಗುತ್ತದೆ.
 
  • ಅಡುಗೆಮನೆಯಲ್ಲಿ ಪೂರ್ವ ಅಥವಾ ದಕ್ಷಿಣ ದಿಕ್ಕಿನಲ್ಲಿ ಕಿಟಕಿ ಇರಬೇಕು. ಇದರಿಂದಾಗಿ ಸೂರ್ಯನ ಕಿರಣಗಳು ಸುಲಭವಾಗಿ ಒಳ ಪ್ರವೇಶಿಸಲು ಸಾಧ್ಯವಾಗುತ್ತದೆ.
 
  • ಒಂದು ವೇಳೆ ಅಡುಗೆ ಕೋಣೆಯಲ್ಲಿ ಎರಡು ಕಿಟಕಿಗಳು ಇದ್ದರೆ, ದೊಡ್ಡ ಕಿಟಕಿಯ ಎದುರು ಸಣ್ಣ ಕಿಟಕಿ ಇರಬೇಕು. ಇದರಿಂದಾಗಿ ಸುಲಭವಾಗಿ ಗಾಳಿ- ಬೆಳಕಿನ ಸಂಚಾರಕ್ಕೂ ಅನುಕೂಲವಾಗುತ್ತದೆ.
 
  • ಸಣ್ಣ ಕಿಟಕಿಯನ್ನು ದಕ್ಷಿಣ ದಿಕ್ಕಿನಲ್ಲಿ ನಿರ್ಮಿಸಬೇಕು ಅಥವಾ ದೊಡ್ಡ ಕಿಟಕಿಯ ಎದುರಿನಲ್ಲಿ ಇರಬೇಕು.

ಕಿಚನ್ ಸ್ಲ್ಯಾಬ್ :

 

  • ಅಡುಗೆಮನೆಗಾಗಿ ವಾಸ್ತು ಶಾಸ್ತ್ರ ಸಲಹೆಯಂತೆ ಕಪ್ಪು ಮಾರ್ಬಲ್ ಅಥವಾ ಕಲ್ಲನ್ನು ಸ್ಲ್ಯಾಬ್ ಗಾಗಿ ಬಳಸಬಹುದು. ಅದು ಗ್ರಾನೈಟ್ ಬಳಕೆಗೆ ಸೂಚಿಸುವುದಿಲ್ಲ.
 
  • ಅಡುಗೆಮನೆ ಯಾವ ದಿಕ್ಕಿಗೆ ಇರುತ್ತದೆಯೋ ಅದಕ್ಕೆ ಅನುಸಾರವಾಗಿ ಸ್ಲ್ಯಾಬ್ ನ ಬಣ್ಣವೂ ಇರುತ್ತದೆ.
 
  • ಒಂದು ವೇಳೆ ಅಡುಗೆ ಕೋಣೆ ಪೂರ್ವದಲ್ಲಿದ್ದರೆ, ಹಸಿರು ಅಥವಾ ಕಂದು ಬಣ್ಣದ ಸ್ಲ್ಯಾಬ್ ಬಳಕೆ ಅತ್ಯುತ್ತಮ.
 
  • ಅಡುಗೆಮನೆ ಈಶಾನ್ಯದಲ್ಲಿದ್ದರೆ, ಹಳದಿ ಬಣ್ಣದ ಸ್ಲ್ಯಾಬ್ ಅತ್ಯುತ್ತಮ.
 
  • ದಕ್ಷಿಣ ಅಥವಾ ಆಗ್ನೇಯ ದಿಕ್ಕಿನಲ್ಲಿ ಅಡುಗೆಮನೆ ಇದ್ದರೆ, ಕಂದು, ಕಂದು ಕೆಂಪು ಬಣ್ಣ ಅಥವಾ ಹಸಿರು ಬಣ್ಣದ ಸ್ಲ್ಯಾಬ್ ಬಳಕೆ ಮಾಡಲು ಅಡುಗೆಮನೆ ವಾಸ್ತು ಸಲಹೆ ಮಾಡುತ್ತದೆ.
 
  • ಅಡುಗೆಮನೆ ಪಶ್ಚಿಮದಲ್ಲಿದ್ದರೆ, ಆಗ ಬೂದು ಅಥವಾ ಹಳದಿ ಬಣ್ಣದ ಸ್ಲ್ಯಾಬ್ ಅತ್ಯುತ್ತಮ.
 
  • ಉತ್ತರ ಭಾಗದಲ್ಲಿ ಇರುವ ಅಡುಗೆಮನೆಗೆ ಹಸಿರು ಬಣ್ಣದ ಸ್ಯ್ಲಾಬ್ ಬಳಕೆ ಸೂಕ್ತ. ಆದರೆ ವಾಸ್ತುವಿನ ಪ್ರಕಾರ ಉತ್ತರ ಭಾಗದಲ್ಲಿ ಅಡುಗೆಮನೆ ನಿರ್ಮಾಣಕ್ಕೆ ಸಲಹೆ ಮಾಡುವುದಿಲ್ಲ.

ಅಡುಗೆಮನೆಯ ಸಿಂಕ್ :

 

  • ಸಾಮಾನ್ಯವಾಗಿ ಅಡುಗೆಮನೆಯಲ್ಲಿ ಸಿಂಕ್ ಅನ್ನು ಉತ್ತರ ಅಥವಾ ಈಶಾನ್ಯ ಭಾಗದಲ್ಲಿ ಇರಿಸಲಾಗುತ್ತದೆ.
 
  • ಸ್ಟೌಗೆ ಸಮಾನಾಂತರದಲ್ಲಿ ಸಿಂಕ್ ಫಿಟ್ ಮಾಡಲಾಗಿಲ್ಲ ಎಂದು ಖಚಿತಪಡಿಸಿಕೊಳ್ಳಿ ಅಥವಾ ಅದೇ ಹಂತದಲ್ಲಿ ಇಲ್ಲವೆಂದು ಖಾತರಿಪಡಿಸಿಕೊಳ್ಳಿ. ವಾಸ್ತುವಿನ ಪ್ರಕಾರ ಅಗ್ನಿ ಮತ್ತು ನೀರು ಒಂದಕ್ಕೊಂದು ವಿರೋಧವಾಗಿವೆ ಮತ್ತು ಒಂದೇ ರೀತಿಯಾಗಿ ಇರಿಸಿದರೆ ಋಣಾತ್ಮಕ ಪರಿಣಾಮ ಕಂಡುಬರುತ್ತದೆ.
 
  • ಇಂಥ ಹಾನಿಕಾರಕವಾಗಿರುವ ಪರಿಣಾಮಗಳನ್ನು ನಿವಾರಿಸಲು ಅಡುಗೆಮನೆ ವಾಸ್ತು ಸಲಹೆಗಳ ಪ್ರಕಾರ ಸಿಂಕ್ ಮತ್ತು ಸ್ಟೌ ಅನ್ನು ಒಟ್ಟಿಗೇ ಕಟ್ಟಿದಾಗ ಚೀನಾ ಹೂದಾನಿಯನ್ನು ಅವುಗಳ ನಡುವೆ ಇರಿಸಬೇಕು.

ಕುಡಿಯುವ ನೀರು:

 

  • ಕುಡಿಯುವ ನೀರಿಗಾಗಿ ಬಳಕೆ ಮಾಡುವ ಪರಿಕರಗಳು ಮತ್ತು ಪಾತ್ರೆಗಳನ್ನು ಯಾವಾಗಲೂ ಅಡುಗೆ ಕೋಣೆಯ ಒಳಗೇ ಇರಿಸಬೇಕು ಎಂದು ಸರಿಯಾಗಿರುವ ಅಡುಗೆಮನೆಯ ವಾಸ್ತು ನಿಯಮದಲ್ಲಿ ಹೇಳಲ್ಪಟ್ಟಿದೆ.
 
  • ಅಡುಗೆಮನೆಯ ವಾಸ್ತು ಸಲಹಗಳ ಪ್ರಕಾರ ಮನೆಯ ಈಶಾನ್ಯ ಅಥವಾ ಉತ್ತರ ಭಾಗದಲ್ಲಿ ಕುಡಿಯುವ ನೀರನ್ನು ಇರಿಸುವುದು ಸೂಕ್ತ.
 
  • ಉತ್ತರ ಮತ್ತು ಈಶಾನ್ಯ ಭಾಗ ಸಿಗದೇ ಇದ್ದರೆ ಅವುಗಳನ್ನು ಪೂರ್ವ ಭಾಗದಲ್ಲಿ ಕೂಡ ಇರಿಸಬಹುದು.

ಅಡುಗೆಮನೆಯ ಪರಿಕರಗಳು :

 

  • ಅಡುಗೆಮನೆ ವಾಸ್ತು ಸಲಹೆಗಳ ಪ್ರಕಾರ ರೆಫ್ರೀಜರೇಟರ್ ಅನ್ನು ಅಡುಗೆಮನೆಯ ನೈಋತ್ಯ ಮೂಲೆಯಲ್ಲಿ ಅಥವಾ ಯಾವುದಾದರೊಂದು ಮೂಲೆಯಲ್ಲಿ ಇರಿಸಬಹುದು. ಆದರೆ, ಈಶಾನ್ಯ ಮೂಲೆಯಲ್ಲಿ ಮಾತ್ರ ಇರಿಸಬಾರದು.
  • ಅಡುಗೆಮನೆ ವಾಸ್ತು ಸಲಹೆಯ ಪ್ರಕಾರ ಯಾವತ್ತೂ ಅಸ್ತವ್ಯಸ್ತವಾಗಿ ಇರಬಾರದು. ಎಲ್ಲಾ ಪಾತ್ರೆ- ಪರಿಕರಗಳನ್ನು ಒಪ್ಪ- ಓರಣವಾಗಿ ಕ್ಯಾಬಿನೆಟ್ ನಲ್ಲಿ ಅಡುಗೆಮನೆಯ ದಕ್ಷಿಣ ಅಥವಾ ಪಶ್ಚಿಮ ಮೂಲೆಯಲ್ಲಿ ಇರಿಸಬೇಕು.
  • ಅಡುಗೆಮನೆಯಲ್ಲಿ ಇರುವ ಎಲ್ಲಾ ವಿದ್ಯುತ್ ಉಪಕರಣಗಳನ್ನು ಆಗ್ನೇಯ ಮೂಲದಲ್ಲಿ ಮತ್ತು ಈಶಾನ್ಯ ಭಾಗದಲ್ಲಿ ಅವುಗಳನ್ನು ಇರಿಸಲೇಬಾರದು. ಏಕೆಂದರೆ ಆ ರೀತಿ ಇರಿಸಿದಲ್ಲಿ ವಿದ್ಯುತ್ ಉಪಕರಣಗಳು ಹಾಳಾಗುವ ಸಾಧ್ಯತೆಗಳು ಇವೆ.

ಅಡುಗೆ ಕೋಣೆಯ ಬಣ್ಣ :

 

  • ಅಡುಗೆಮನೆಯ ವಾಸ್ತು ಸಲಹೆಗಳ ಪ್ರಕಾರ ಅಡುಗೆಮನೆಗೆ ಹೆಚ್ಚು ಗಾಢವಲ್ಲದ ಬಣ್ಣಗಳನ್ನು ಬಳಕೆ ಮಾಡುವಂತೆ ಸಲಹೆ ಮಾಡುತ್ತವೆ.
  • ಕೆಂಪು, ತಿಳಿ ಗುಲಾಬಿ, ಕಿತ್ತಳೆ ಮತ್ತು ಹಸಿರು ಬಣ್ಣಗಳನ್ನು ಕೂಡ ಅಲ್ಲಿಗೆ ಬಳಕೆ ಮಾಡಬಹುದು ಎಂದು ವಾಸ್ತು ನಿಯಮಗಳು ಸೂಚಿಸುತ್ತವೆ.
  • ಅಡುಗೆ ಕೋಣೆಗೆ ಕಡು ಬಣ್ಣಗಳನ್ನು ಬಳಕೆ ಮಾಡಬಾರದು. ಇದರಿಂದಾಗಿ ಅಲ್ಲಿ ಕತ್ತಲೆಯಾಗಿರುವ ಅನುಭವವನ್ನು ತಂದುಕೊಡುತ್ತದೆ.

 

ಇದನ್ನೂ ಓದಿ: ನಿಮ್ಮ ಮನೆಗೆ ಅದ್ಭುತವಾಗಿ ಪೆಯಿಂಟಿಂಗ್ ಮಾಡುವ ಬಗ್ಗೆ ಟಿಪ್ಸ್ ಗಳು ಮತ್ತು ಟ್ರಿಕ್ ಗಳು.



ಮೇಲೆ ಹೇಳಲಾಗಿರುವ ಎಲ್ಲಾ ರೀತಿಯ ಟಿಪ್ಸ್ ಗಳನ್ನು ಅನುಸರಿಸಿಕೊಂಡು ವಾಸ್ತು ನಿಯಮಗಳಿಂದ ಕೂಡಿರುವ ಅಡುಗೆಮನೆ ನಿರ್ಮಾಣಕ್ಕೆ ಒತ್ತು ನೀಡುತ್ತದೆ. ಅದರ ಮೂಲಕ ಧನಾತ್ಮಕ ಕಂಪನಗಳನ್ನು ಹೊಂದಿ, ನೀವು ಹಾಗೂ ನಿಮ್ಮ ಕುಟುಂಬದ ಸದಸ್ಯರು ಸದೃಢವಾಗಿ ಮತ್ತು ಆರೋಗ್ಯಪೂರ್ಣವಾಗಿ ಇರಲು ನೆರವಾಗುತ್ತದೆ.



ಸಂಬಂಧಿತ ಲೇಖನಗಳು




ಶಿಫಾರಸು ಮಾಡಿದ ವೀಡಿಯೊಗಳು





  ಮನೆ ಕನ್‌ಸ್ಟ್ರಕ್ಷನ್‌ಗಾಗಿ ಎಸ್ಟಿಮೇಟಿಂಗ್ ಟೂಲ್ಸ್


ವೆಚ್ಚ ಕ್ಯಾಲ್ಕುಲೇಟರ್

ಪ್ರತಿಯೊಬ್ಬ ಮನೆ ನಿರ್ಮಾಣ ಮಾಡುವವರು ತಮ್ಮ ಕನಸಿನ ಮನೆಯನ್ನು ನಿರ್ಮಿಸಲು ಬಯಸುತ್ತಾರೆ ಆದರೆ ಅದು ಅವರ ಬಜೆಟ್‌ ವೆಚ್ಚವನ್ನು ಮೀರದಂತೆ ಇರಿಸಿಕೊಳ್ಳಲು ಬಯಸುತ್ತಾರೆ. 

logo

ಇಎಂಐ ಕ್ಯಾಲ್ಕುಲೇಟರ್

ಮನೆ ನಿರ್ಮಾಣಕ್ಕೆ ಹಣಕಾಸು ಒದಗಿಸಿಕೊಳ್ಳುವ ಅತ್ಯುತ್ತಮ ಮಾರ್ಗಗಳಲ್ಲಿ ಮನೆ-ಸಾಲವನ್ನು ತೆಗೆದುಕೊಳ್ಳುವುದು ಒಂದಾಗಿರುತ್ತದೆ, ಆದರೆ ಮನೆಯನ್ನು ನಿರ್ಮಿಸುವವರು ಎಷ್ಟು ಕಂತುಗಳನ್ನು ಪಾವತಿಸಬೇಕೆಂದು ತಿಳಿಯಲು ಬಯಸುತ್ತಾರೆ. 

logo

ಪ್ರಾಡಕ್ಟ್ ಪ್ರೆಡಿಕ್ಟರ್

ಮನೆಯನ್ನು ನಿರ್ಮಿಸುವ ಆರಂಭಿಕ ಹಂತಗಳಲ್ಲಿ, ಮನೆ ನಿರ್ಮಿಸುವವರು ಸರಿಯಾದ ಉತ್ಪನ್ನಗಳನ್ನು ಆಯ್ಕೆ ಮಾಡುವುದು ಮುಖ್ಯವಾಗಿರುತ್ತದೆ. 

logo

ಅಂಗಡಿ ಪತ್ತೆಕಾರಕ

ಮನೆ ಕಟ್ಟುವವರಿಗೆ, ಮನೆಯ ಕಟ್ಟಡದ ಬಗ್ಗೆ ಎಲ್ಲಾ ಅಮೂಲ್ಯವಾದ ಮಾಹಿತಿಯನ್ನು ಪಡೆಯುವ ಸರಿಯಾದ ಅಂಗಡಿಯನ್ನು ಕಂಡುಹಿಡಿಯುವುದು ಮುಖ್ಯವಾಗಿದೆ.

logo

Loading....