ಲೋಡ್ ಬೇರಿಂಗ್ ಸ್ಟ್ರಕ್ಚರ್ಗಳಿಂದಾಗುವ ಪ್ರಯೋಜನಗಳು
ಈಗ ನಾವು ಭಾಗಗಳನ್ನು ಅರ್ಥಮಾಡಿಕೊಂಡಿದ್ದೇವೆ ಮತ್ತು ಲೋಡ್ ಬೇರಿಂಗ್ ಸ್ಟ್ರಕ್ಚರ್‌ಗಳ ಸ್ಥಿರತೆ ಮತ್ತು ಬಾಳಿಕೆಗೆ ಅವು ಹೇಗೆ ಕೊಡುಗೆ ನೀಡುತ್ತವೆ, ಅವುಗಳ ಪ್ರಯೋಜನಗಳು ಹಾಗೂ ದಕ್ಷತೆಗಳನ್ನು ಅನ್ವೇಷಿಸೋಣ.
1. ನೇರ ಲೋಡ್ ವರ್ಗಾವಣೆ
ಈ ಕಟ್ಟಡಗಳು ಬಲವಾಗಿ ಹಾಗೂ ಸ್ಥಿರವಾಗಿರುತ್ತವೆ. ಏಕೆಂದರೆ ಅವು ಮೇಲ್ಛಾವಣಿ ಸೇರಿದಂತೆ ಮೇಲಿನ ಮಹಡಿಗಳಿಂದ ಭಾರವನ್ನು ನೇರವಾಗಿ ನೆಲಕ್ಕೆ ವರ್ಗಾಯಿಸುತ್ತವೆ. ಇದು ಸರಳ ರೇಖೆಯಲ್ಲಿ ಬ್ಲಾಕ್ಗಳನ್ನು ಒಟ್ಟಾಗಿ ಇಟ್ಟಿರುವಂತಿರುತ್ತದೆ. ಅಲ್ಲಿನ ಪ್ರತಿ ಬ್ಲಾಕ್ ಅದರ ಮೇಲಿನ ಬ್ಲಾಕ್ಗಳಿಗೆ ಆಧಾರವಾಗಿರುತ್ತದೆ.
2. ಸಣ್ಣ ಕಟ್ಟಡಗಳಿಗೆ ಬೆಲೆಗೆ ತಕ್ಕ ಮೌಲ್ಯ
ಮನೆಗಳು ಅಥವಾ ಎರಡು ಅಂತಸ್ತಿನ ಕಟ್ಟಡಗಳಂತಹ ಸಣ್ಣ ಸ್ಟ್ರಕ್ಚರ್ಗಳಿಗೆ ಲೋಡ್ ಬೇರಿಂಗ್ ಗೋಡೆಗಳನ್ನು ಬಳಸುವುದು ಅಗ್ಗವಾಗಿದೆ. ಏಕೆಂದರೆ ಆಧಾರಕ್ಕಾಗಿ ಹೆಚ್ಚಿನ ಸ್ಟೀಲ್ ಅಥವಾ ಕಾಂಕ್ರೀಟ್ ಬೀಮ್ಗಳ ಅಗತ್ಯವಿಲ್ಲದೆಯೇ ಕಟ್ಟಡವನ್ನು ಉಳಿಸಿಕೊಳ್ಳುವಲ್ಲಿ ಸ್ಟ್ರಕ್ಚರ್ ಹೆಚ್ಚಿನ ಕೆಲಸವನ್ನು ಮಾಡುತ್ತದೆ.
3. ಬಹು ಕಾರ್ಯಾತ್ಮಕ ಗೋಡೆಗಳು
ಲೋಡ್ ಬೇರಿಂಗ್ ಸ್ಟ್ರಕ್ಚರ್ಗಳಲ್ಲಿ ಗೋಡೆಗಳು ಕೇವಲ ಕಟ್ಟಡವನ್ನು ಎತ್ತಿಹಿಡಿಯುದಕ್ಕಿಂತ ಹೆಚ್ಚಿನದನ್ನು ಮಾಡುತ್ತವೆ. ಅವು ಸ್ಥಳವನ್ನು ರೂಮುಗಳಾಗಿ ವಿಭಜಿಸಲು, ಸಪ್ಪಳವನ್ನು ತಡೆಯಲು ಹಾಗೂ ಉಷ್ಣವನ್ನು ಒಳಗೆ ಅಥವಾ ಹೊರಗೆ ಇರಿಸಲು ಸಹಾಯ ಮಾಡುತ್ತವೆ. ಇವೆಲ್ಲವೂ ಅವರ ಮುಖ್ಯ ಕೆಲಸವನ್ನು ಹೊರತುಪಡಿಸಿ ಮಾಡುವ ಹೆಚ್ಚಿನ ಕೆಲಸಗಳಾಗಿವೆ.
4. ಸಾಮಗ್ರಿಗಳು ಎಲ್ಲೆಡೆ ಸಿಗುತ್ತವೆ
ಈ ರೀತಿಯ ಸ್ಟ್ರಕ್ಚರ್ಗಳಿಗೆ ಬಳಸುವ ಇಟ್ಟಿಗೆಗಳು ಮತ್ತು ಕಾಂಕ್ರೀಟ್ ಬ್ಲಾಕ್‌ಗಳಂತಹ ವಸ್ತುಗಳನ್ನು ಸಾಮಾನ್ಯವಾಗಿ ಸುಲಭವಾಗಿ ಪಡೆಯಬಹುದಾಗಿದೆ. ಇವು ಹೀಗೆ ಸುಲಭವಾಗಿ ಸಿಗುವುದರಿಂದ ವಿಶೇಷ ವಸ್ತುಗಳ ಮೂಲವನ್ನು ಹುಡುಕದೆಯೇ ವಿವಿಧ ಸ್ಥಳಗಳಲ್ಲಿ ಪ್ರಾಜೆಕ್ಟ್‌ಗಳನ್ನು ಪ್ರಾರಂಭಿಸುವುದು ಹಾಗೂ ಪೂರ್ಣಗೊಳಿಸುವುದು ಸುಲಭವಾಗುತ್ತದೆ.
5. ಹೆಚ್ಚು ಉಷ್ಣವನ್ನು ಹಿಡಿದಿಟ್ಟುಕೊಳ್ಳುತ್ತವೆ
ಕಲ್ಲು ಅಥವಾ ಇಟ್ಟಿಗೆಯಂತಹ ಭಾರವಾದ ವಸ್ತುಗಳು ಶಾಖವನ್ನು ಹೀರಿಕೊಳ್ಳುತ್ತವೆ ಮತ್ತು ಹಿಡಿದಿಟ್ಟುಕೊಳ್ಳುತ್ತವೆ. ಅದರಿಂದಾಗಿ ಇದು ಕಟ್ಟಡದೊಳಗಿನ ತಾಪಮಾನವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಹಗಲಿನಲ್ಲಿ, ಅವು ಶಾಖವನ್ನು ಹೀರಿಕೊಂದು ಒಳಗಿನ ಭಾಗವನ್ನು ತಂಪಾಗಿ ಇಡುತ್ತವೆ. ಮತ್ತು ರಾತ್ರಿವೇಳೆ ಅವು ಸಂಗ್ರಹವಾದ ಈ ಶಾಖವನ್ನು ಬಿಡುಗಡೆ ಮಾಡುವುದರಿಂದ ಸ್ಥಳವನ್ನು ಬೆಚ್ಚಗಾಗಿರಿಸಲು ಸಹಾಯ ಮಾಡುತ್ತವೆ.
6. ಅಗ್ನಿ ಹಾಗೂ ಸಪ್ಪಳದ ಸ್ಥಿತಿಸ್ಥಾಪಕತ್ವ
ಲೋಡ್ ಬೇರಿಂಗ್ ಗೋಡೆಗಳಲ್ಲಿ ಬಳಸಲಾಗುವ ವಸ್ತುಗಳು ನೈಸರ್ಗಿಕವಾಗಿ ಸಾಮಾನ್ಯವಾಗಿ ಅಗ್ನಿ ನಿರೋಧಕವಾಗಿರುತ್ತವೆ. ಇದು ಅಗ್ನಿ ಅವಘಡಗಳ ಸಂದರ್ಭದಲ್ಲಿ ನಿಮ್ಮ ಕಟ್ಟಡವನ್ನು ಸುರಕ್ಷಿತವಾಗಿಸುತ್ತದೆ. ಹೊರಭಾಗದಲ್ಲಿ ಗದ್ದಲ ಇದ್ದರೂ ಕೂಡ ಒಳಭಾಗವನ್ನು ನಿಶ್ಯಬ್ದವಾಗಿಸುವ, ಸಪ್ಪಳವನ್ನು ತಡೆಯುವಲ್ಲಿ ಅವು ಅತ್ಯುತ್ತಮವಾಗಿವೆ.
7. ಸುಸ್ಥಿರ ಆಯ್ಕೆ
ಕೆಲವು ಆಧುನಿಕ ಕಟ್ಟಡ ಸಾಮಗ್ರಿಗಳಿಗೆ ಹೋಲಿಕೆ ಮಾಡಿದರೆ ಕಲ್ಲು ಮತ್ತು ಇಟ್ಟಿಗೆಯಿಂದ ನಿರ್ಮಿಸಲಾಗುವ ಭಾರ ಹೊರುವ ಸ್ಟ್ರಕ್ಚರ್ಗಳಲ್ಲಿ ಬಳಸಲಾಗುವ ಅನೇಕ ವಸ್ತುಗಳು ನೈಸರ್ಗಿಕವಾಗಿರುತ್ತವೆ. ಜೊತೆಗೆ ಹೆಚ್ಚು ಪರಿಸರ ಸ್ನೇಹಿಯಾಗಿರುತ್ತವೆ. ಈ ಎಲ್ಲ ಕಾರಣಗಳಿಂದಾಗಿ ಕೆಲವು ಸಂದರ್ಭಗಳಲ್ಲಿ ಲೋಡ್ ಬೇರಿಂಗ್ ಸ್ಟ್ರಕ್ಚರ್ಗಳನ್ನು ಹೆಚ್ಚು ಸಮರ್ಥನೀಯ ಆಯ್ಕೆಯನ್ನಾಗಿ ಮಾಡಬಹುದು.