ಈಶಾನ್ಯ ಮೂಲೆಯ ವಾಸ್ತುಶಾಸ್ತ್ರ: ಮಾಡಬೇಕಾದ ಮತ್ತು ಮಾಡಬಾರದ ಕೆಲಸಗಳು
ವಾಸ್ತು ಶಾಸ್ತ್ರದ ಪ್ರಕಾರ ಈಶಾನ್ಯ ಮೂಲೆಯ ಪ್ರಯೋಜನವನ್ನು ಪಡೆಯಲು ಮತ್ತು ಧನಾತ್ಮಕ ಶಕ್ತಿಯ ಹರಿವಿಗಾಗಿ ನೀವು ಮಾಡಬೇಕಾದ ಮತ್ತು ಮಾಡಬಾರದ ಕೆಲಸಗಳು ಇಂತಿವೆ:
ಮಾಡಬೇಕಾದ ಕೆಲಸಗಳು:
1. ಸದಾ ಸ್ವಚ್ಛವಾಗಿರಿಸಿ
ಈಶಾನ್ಯ ಮೂಲೆಯಲ್ಲಿ ಸ್ವಚ್ಛತೆಯು ಬಹುಮುಖ್ಯ. ಈ ಜಾಗವು ಪವಿತ್ರವೆಂದು ಪರಿಗಣಿಸಲ್ಪಟ್ಟಿದ್ದು ಧನಾತ್ಮಕ ಶಕ್ತಿಯ ಸುಗಮ ಹರಿವಿಗಾಗಿ ಕಸ ಮತ್ತು ಅವ್ಯವಸ್ಥೆಯಿಂದ ಮುಕ್ತವಾಗಿರಬೇಕು.
2. ತೆರೆದ ಜಾಗವಿರುವಂತೆ ನೋಡಿಕೊಳ್ಳಿ
ಈ ಮೂಲೆಯು ಭಾರೀ ಪೀಠೋಪಕರಣಗಳು ಅಥವಾ ಅಸ್ತವ್ಯಸ್ತ ಸರಂಜಾಮುಗಳಿಂದ ಮುಚ್ಚಿ ಹೋಗದಂತೆ ನೋಡಿಕೊಳ್ಳಿ. ಈಶಾನ್ಯ ಮೂಲೆಯಲ್ಲಿ ತೆರೆದ ಜಾಗವು ಧನಾತ್ಮಕ ವಾತಾವರಣವನ್ನು ಆಹ್ವಾನಿಸುತ್ತದೆ ಮತ್ತು ಮನಸ್ಸಿನ ಸ್ಪಷ್ಟತೆಗೆ ನೆರವಾಗುತ್ತದೆ.
3. ನೀರು ಹೊಂದಿದ ವಸ್ತುವೊಂದನ್ನು ಇರಿಸಿ
ಈಶಾನ್ಯವು ನೀರಿನ ವಸ್ತುಗಳೊಂದಿಗೆ ತಳುಕು ಹಾಕಿಕೊಂಡಿದೆ ನೀರಿನ ಕಾರಂಜಿಯನ್ನೋ ಅಥವಾ ಒಂದು ಅಕ್ವೇರಿಯಂನ್ನೋ ಇರಿಸುವುದರಿಂದ ಅದೃಷ್ಟದೊಂದಿಗೆ ಧನಾತ್ಮಕ ಶಕ್ತಿಯೂ ವೃದ್ಧಿಯಾಗುತ್ತದೆ.
4. ಸಮರ್ಪಕ ಬೆಳಕಿನ ವ್ಯವಸ್ಥೆಯನ್ನು ಖಚಿತಪಡಿಸಿಕೊಳ್ಳಿ
ಈ ಜಾಗವು ಸೂರ್ಯನ ಬೆಳಕು ಅಥವಾ ಕೃತಕ ಬೆಳಕಿನಿಂದ ಸದಾ ಚೆನ್ನಾಗಿ ಬೆಳಗುತ್ತಿರಬೇಕು. ಈಶಾನ್ಯದಲ್ಲಿನ ಪ್ರಕಾಶವು ಅಜ್ಞಾನದ ನಿವಾರಣೆ ಮತ್ತು ಜ್ಞಾನದ ವೃದ್ಧಿಯನ್ನು ಸೂಚಿಸುತ್ತದೆ.
5. ಧ್ಯಾನ ಮತ್ತು ಪ್ರಾರ್ಥನೆಗೆ ಬಳಸಿರಿ
ಈಶಾನ್ಯ ಮೂಲೆಯು ಪ್ರಾರ್ಥನಾ ಕೋಣೆ ಅಥವಾ ಧ್ಯಾನದ ಸ್ಥಳಕ್ಕೆ ಹೇಳಿ ಮಾಡಿಸಿದಂತಿದೆ. ಇದರ ನೆಮ್ಮದಿಯ ವಾತಾವರಣವು ಅಧ್ಯಾತ್ಮಿಕ ಉನ್ನತಿ ಮತ್ತು ಶಾಂತಿಯನ್ನು ಹೆಚ್ಚಿಸುತ್ತದೆ.
ಮಾಡಬಾರದ ಕೆಲಸಗಳು:
1. ಇಲ್ಲಿ ಶೌಚಾಲಯವನ್ನು ನಿರ್ಮಿಸಬೇಡಿ
ಈಶಾನ್ಯದಲ್ಲಿರುವ ಶೌಚಾಲಯವು ಅಲ್ಲಿನ ಪವಿತ್ರತೆಯನ್ನು ಹಾಳುಗೆಡವುತ್ತದೆ, ಆ ಮೂಲಕ ಋಣಾತ್ಮಕ ಶಕ್ತಿಗಳು ಮತ್ತು ಅನಾರೋಗ್ಯಕ್ಕೆ ಆಹ್ವಾನ ನೀಡಿದಂತಾಗುತ್ತದೆ.
2. ಭಾರವಾದ ವಸ್ತುಗಳನ್ನಿಡಬೇಡಿ
ಭಾರವಾದ ಪೀಠೋಪಕರಣಗಳು ಅಥವಾ ಯಂತ್ರಗಳು ಈ ಮೂಲೆಯ ಶಕ್ತಿಯನ್ನು ಕುಂಠಿತಗೊಳಿಸಿ ಆರ್ಥಿಕ ಮತ್ತು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತವೆ.
3. ಕಸ ಅಥವಾ ಅನುಪಯುಕ್ತ ವಸ್ತುಗಳನ್ನು ಸಂಗ್ರಹಿಸಿಡಬೇಡಿ
ಇಲ್ಲಿ ಕಸ ತುಂಬಿಡುವುದರಿಂದ ಅಥವಾ ಅನುಪಯುಕ್ತ ವಸ್ತುಗಳನ್ನು ಅಸ್ತವ್ಯಸ್ತವಾಗಿ ಎಸೆಯುವುದರಿಂದ ಧನಾತ್ಮಕ ಶಕ್ತಿಯು ಮನೆಯನ್ನು ಪ್ರವೇಶಿಸಲು ತಡೆಯುಂಟಾಗಿ ಬದುಕು ನಿಂತ ನೀರಂತಾಗಬಹುದು.
4. ಮೆಟ್ಟಿಲುಗಳನ್ನು ನಿರ್ಮಿಸಬೇಡಿ
ಈಶಾನ್ಯ ಮೂಲೆಯಲ್ಲಿ ಮೆಟ್ಟಿಲುಗಳನ್ನು ಇಡುವುದರಿಂದ ಧನಾತ್ಮಕ ಶಕ್ತಿಯ ಹರಿವಿಗೆ ತೊಂದರೆಯಾಗಿ ಒತ್ತಡ ಮತ್ತು ಅನಾರೋಗ್ಯ ಉಂಟಾಗಬಹುದು.
5. ಗಾಢ ಬಣ್ಣಗಳನ್ನು ಬಳಸಬೇಡಿ
ಗಾಢಬಣ್ಣಗಳು ಮನೆಗೆ ಅಗತ್ಯವಿದ್ದ ಧನಾತ್ಮಕ ಶಕ್ತಿಯನ್ನು ತಾವು ಹೀರಿಕೊಳ್ಳಬಹುದು. ಈ ಜಾಗವು ಧನಾತ್ಮಕ ವಾತಾವರಣವನ್ನು ಹೊಂದಲು ತಿಳಿ ಬಣ್ಣಗಳ ಆಯ್ಕೆ ಸೂಕ್ತ.