ವಾಟರ್‌ಪ್ರೂಫಿಂಗ್‌ ವಿಧಾನಗಳು, ಮಾಡರ್ನ್‌ ಕಿಚನ್‌ ಡಿಸೈನ್ಸ್‌, ಹೋಮ್‌ಗಾಗಿ ವಾಸ್ತು ಸಲಹೆಗಳು, ಮನೆ ನಿರ್ಮಾಣ ವೆಚ್ಚ

ಸಂಪರ್ಕಲ್ಲಿರಿ

ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ

ಮಾನ್ಯವಾದ ವರ್ಗವನ್ನು ಆಯ್ಕೆಮಾಡಿ

ನಿಮ್ಮ ಉಪ-ವರ್ಗವನ್ನು ಆಯ್ಕೆ ಮಾಡಿ

acceptence

ಮುಂದುವರಿಯಲು ದಯವಿಟ್ಟು ಈ ಪೆಟ್ಟಿಗೆಯನ್ನು ಪರಿಶೀಲಿಸಿ



ಟೈಲ್ ಪಾಪ್‌ ಅಪ್‌ ಆಗಲು ಇರುವ 8 ಕಾರಣಗಳು ಮತ್ತು ಹಾಗೆ ಆಗದಂತೆ ತಡೆಯುವುದು

ಬಹಳಷ್ಟು ಮನೆಗಳಲ್ಲಿ ಟೈಲ್ ಪಾಪ್‌ ಆಗುವುದು ಎಂಬುದು ಒಂದು ಸಾಮಾನ್ಯ ಸಮಸ್ಯೆಯಾಗಿದೆ, ಆದರೆ ಅದು ಆಗದಂತೆಯೂ ತಡೆಯಬಹುದು. ಎಂಟು ವಿಧದ ಟೈಲ್ ಪಾಪಿಂಗ್ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ಈ ಬ್ಲಾಗ್ ಒಳಗೊಂಡಿದೆ. ದುಬಾರಿ ರಿಪೇರಿ ಮತ್ತು ಸುರಕ್ಷತೆ ಸಮಸ್ಯೆಗಳನ್ನು ತಪ್ಪಿಸಲು ಪ್ರಾಯೋಗಿಕ ಪರಿಹಾರಗಳನ್ನು ಇದು ಒದಗಿಸುತ್ತದೆ.

Share:


ಟೈಲ್ ಪಾಪಿಂಗ್ ಎಂದರೇನು?

ಮನೆಗಳು ಸುಂದರವಾಗಿ ಆಕರ್ಷಕವಾಗಿ ಕಾಣುವಂತೆ, ಹೆಚ್ಚಿನ ಮನೆಗಳಲ್ಲಿ ಮಾರ್ಬಲ್​ ಅಥವಾ ಕಾಂಕ್ರೀಟ್ ಫ್ಲೋರಿಂಗ್ ಹಾಕಲಾಗುತ್ತದೆ. ಆದರೆ ಇದನ್ನು ಮಾಡುವಾಗ ಸರಿಯಾಗಿ ಗಮನ ಕೊಡದಿರುವುದು ಟೈಲ್ಸ್​ ಪಾಪ್ ಔಟ್ ಆಗಲು, ಒಡೆಯಲು ಅಥವಾ ಬೆಂಡ್​ ಆಗಲು ಕಾರಣವಾಗುತ್ತದೆ, ಜೊತೆಗೆ ಇದು ಫ್ಲೋರ್​ನಲ್ಲಿ ಉಬ್ಬುತಗ್ಗುಗಳನ್ನು ಉಂಟುಮಾಡುತ್ತದೆ. ಇದನ್ನು ಟೈಲ್ ಪಾಪಿಂಗ್ ಎಂದು ಕರೆಯಲಾಗುತ್ತದೆ.

ಟೈಲ್ಸ್​ಗಳನ್ನು ಮನೆಗೆ ಹಾಕುವುದಕ್ಕೂ ಮೊದಲೇ ಪಾಲಿಶ್ ಮಾಡಲಾಗಿರುತ್ತದೆ, ಹೀಗಾಗಿ ಅವು ಶೈನಿಂಗ್ ಆಗಿಯೂ ಮತ್ತು ನಯವಾಗಿಯೂ ಇರುತ್ತವೆ. ಆದ್ದರಿಂದ ಅವುಗಳ ಹಾಕಿದ ಬಳಿಕ ಆಕರ್ಷವಾಗಿ ಕಾಣುವಂತೆ ಮತ್ತೇ ಬೇರೇನೂ ಮಾಡುವುದು ಅಥವಾ ಮತ್ತೆ ಪಾಲಿಶ್ ಮಾಡುವ ಅಗತ್ಯವಿರುವುದಿಲ್ಲ. ಆದರೂ, ಕೂಡ ಫ್ಲೋರ್ ಟೈಲ್ಸ್ ಪಾಪಿಂಗ್ ಅಪ್ ಎಂಬುದು ಮನೆ ಕಟ್ಟಿಸಿದವರಿಗೆ ನಿರಾಶೆ ಹಾಗೂ ಚಿಂತೆಯನ್ನುಂಟು ಮಾಡುವ ಸಮಸ್ಯೆಯಾಗಿದೆ.

cdxc


"ಇದು ನನ್ನ ಮನೆಯು ಆಕರ್ಷಕವಾಗಿ ಹಾಗೂ ಸುಂದರವಾಗಿ ಕಾಣುವಂತೆ ಮಾಡುತ್ತದೆಯೇ?"

 

ಒಬ್ಬ ವ್ಯಕ್ತಿಯು ತನ್ನ ಮನೆಯನ್ನು ಕಟ್ಟಿಕೊಳ್ಳುವಾಗ ಎದುರಾಗುವ ಪ್ರಮುಖ ಪ್ರಶ್ನೆಗಳಲ್ಲಿ ಬಹುಶಃ ಇದೂ ಕೂಡ ಒಂದು. ಛಾವಣಿಯ ಶೈಲಿ ಮತ್ತು ಕಿಟಕಿಗಳಿಂದ ಗೋಡೆಯ ವಿನ್ಯಾಸ ಮತ್ತು ಫ್ಲೋರ್​ ವರೆಗೆ, ಸ್ಟ್ರಕ್ಚರ್​ನ ಪ್ರತಿಯೊಂದು ಅಂಶವು ಮನೆ ಪೂರ್ಣಗೊಂಡ ಬಳಿಕ ಸುಂದರವಾಗಿ ಕಾಣುತ್ತದೆ ಎಂದು ಖಚಿತಪಡಿಸಿಕೊಂಡು ವಿನ್ಯಾಸಗೊಳಿಸಲಾಗುತ್ತದೆ.

 

ಆದರೂ ಕೂಡ, ಕೆಲವೊಮ್ಮೆ ಜನರು ಈ ಪ್ರಕ್ರಿಯೆಯಲ್ಲಿ ಪರಿಗಣಿಸಬೇಕಾದ ಆಕರ್ಷಕ ಮನವಿಯನ್ನು ಹೊರತುಪಡಿಸಿ ಇತರ ಅಂಶಗಳನ್ನು ಮರೆತುಬಿಡುತ್ತಾರೆ. ಉದಾಹರಣೆಗೆ, ಟೈಲ್ಸ್​ ಬಾಳಿಕೆ ಬರುವುದು ಅದನ್ನು ಗಮನಕೊಟ್ಟುಕೊಂಡು ಹೊಂದಿಸುವುದನ್ನು ಅವಲಂಬಿಸಿದೆ.

 

ಟೈಲ್ಸ್​ ಹಾಕಿಸುವಾಗ ಅವುಗಳನ್ನು ಸರಿಯಾಗಿ ಅಳವಡಿಸುವ ವಿಧಾನ, ಹಾಕಲು ಬಳಸುವ ವಸ್ತುಗಳ ಬಳಕೆ ಮುಂತಾದವುಗಳಿಗೆ ಆಧ್ಯತೆ ಕೊಡದೇ ಇರುವುದು, ಹೊಂದಿಸುವ ಸಮಯದಲ್ಲಿ ಮತ್ತು ನಂತರ ಟೈಲ್ಸ್​ನಲ್ಲಿ ಕಂಡುಬರುವ ದೋಷಗಳಿಗೆ ಕಾರಣವಾಗಬಹುದು. ಇಂತಹ ಸಂದರ್ಭಗಳಲ್ಲಿ ಎದುರಾಗುವ ಸಾಮಾನ್ಯ ಸಮಸ್ಯೆ ಎಂದರೆ ಟೈಲ್ ಪಾಪಿಂಗ್.


ಟೈಲ್ಸ್ ಪಾಪ್ ಅಪ್ ಉಂಟಾಗಲು ಕಾರಣಗಳು

ಮೊದಲೇ ಗೊತ್ತಾಗದಂತೆ ಟೈಲ್ಸ್​ ಪಾಪಿಂಗ್ ಅಥವಾ ಬಕ್ಲಿಂಗ್ ಆಗುವುದು ಮನೆಯಲ್ಲಿ ವಾವಿಸುವವರಿಗೆ ಪ್ರಮುಖ ಆರೋಗ್ಯ ಅಪಾಯವನ್ನುಂಟು ಮಾಡುತ್ತವೆ. ಆದರಿಂದ, ಟೈಲ್ಸ್​ ಪಾಪಿಂಗ್ ಅಪ್​ ಉಂಟಾಗಲು ಇರುವ ಕಾರಣಗಳನ್ನು ಅರ್ಥಮಾಡಿಕೊಳ್ಳಲು ನಾವು ನಿಮಗೆ ಸಲಹೆ ನೀಡುತ್ತೇವೆ.:

 

1. ಸೂಕ್ತವಲ್ಲದ ಸ್ವಚ್ಛಗೊಳಿಸುವಿಕೆ



 

ಫ್ಲೋರ್​ಗೆ ನೀವು ಟೈಲ್ಸ್​ ಹೊಂದಿಸುವ ಮೊದಲು, ಅವುಗಳನ್ನು ಹಾಗೂ ಅವುಗಳನ್ನು ಇಡುವ ಸ್ಥಳವನ್ನು ಸಮತಟ್ಟುಮಾಡಿ ಸ್ವಚ್ಛಗೊಳಿಸುವುದು ಮುಖ್ಯವಾಗಿದೆ. ಹಾಗೆ ಮಾಡದಿದ್ದಲ್ಲಿ, ಟೈಲ್ಸ್​ ಬಾಗುವ ಮತ್ತು ಪಾಪಿಂಗ್​ ಅಪ್​ ಆಗುವ ಪರಿಣಾಮ ಉಂಟಾಗಬಹುದು. ಫ್ಲೋರ್​ ಅನ್ನು ಸೂಕ್ತವಾಗಿ ಸ್ವಚ್ಚಗೊಳಿಸದೇ ಇರುವುದು ಒಂದೇ ರೂಪದ ಬಾಂಡಿಂಗ್​ ಲೇಯರ್​ ಜೊತೆಗೆ ಹೊಂದಿಕೊಳ್ಳದಿರುವುದಕ್ಕೆ ಪ್ರಮುಖ ಕಾರಣವಾಗುತ್ತದೆ.

 

2. ಅಸಮಾನವಾಗಿ ಹೊಂದಿಸಿರುವ ಟೈಲ್



 

ದೊಡ್ಡ ಸೈಜ್​​ನ ಟೈಲ್ಸ್​ ಬಳಸಬೇಕಾದ ಸಂದರ್ಭಗಳಲ್ಲಿ ಅವುಗಳನ್ನು ಸರಿಯಾಗಿ ಹೊಂದಿದಲು ನಿರ್ಧಿಷ್ಟವಾಗಿ ಕಟ್ ಮಾಡಬೇಕು, ಅದಕ್ಕಾಗಿ ಇರುವ ಟ್ರೊವೆಲಿಂಗ್ ತಂತ್ರವನ್ನು ಬಳಸಿಕೊಳ್ಳಬೇಕು. ಟೈಲ್ಸ್​ನ್ನು ಸರಿಯಾಗಿ ಟ್ರೂವೆಲಿಂಗ್​ ಮಾಡಿ ಅಡಿಸಿವ್ ಬಳಸಿಕೊಂಡು ಅವುಗಳು​ ಒಂದಕ್ಕೊಂದು ಗಟ್ಟಿಯಾಗಿ ಅಂಟಿಕೊಳ್ಳುವಂತೆ ಮಾಡಬೇಕು. ಕಟ್ಟಿಗೆಯ ಸುತ್ತಿಗೆಯಂತಹ ವಸ್ತುವಿನಿಂದ ಹೊಡೆಯುವ ಮೂಲಕ ಟೈಲ್ಸ್​ನ್ನು ಗಟ್ಟಿಯಾಗಿ ಕೂಡಿಸಬೇಕು.

 

ಟೈಲ್​ಗಳನ್ನು ಸರಿಯಾಗಿ ಹೊಂದಿಸದಿರುವ ವಿಧಾನ ಅನುಸರಿಸದೆ ಇರುವುದು ಅಸಮರ್ಪಕ ಟೈಲ್ಸ್​ ಹೊಂದಿಸುವಿಕೆಗೆ ಕಾರಣವಾಗಬಹುದು, ಇದು ಟೈಲ್ಸ್​ ಪಾಪ್ ಅಪ್ ಆಗುವ ಸಾಧ್ಯತೆಯನ್ನುಂಟು ಮಾಡುತ್ತದೆ.

 

3. ಫ್ಲೋರ್ ದೊಡ್ಡದು ಮಾಡುವುದು


 

ಟೈಲ್ಸ್​ಗಳು ಸೋರಬಹುದು; ಅಂದರೆ ಟೈಲ್​ಗಳಲ್ಲಿ ದ್ರವರೂಪದ ವಸ್ತುಗಳು ಸೋರಿಕೆಯಾಗಬಹುದು. ಜೊತೆಗೆ ಹೆಚ್ಚಿನ ಮಟ್ಟದ ತೇವಾಂಶವನ್ನು ಹೀರಿಕೊಳ್ಳುವುದರಿಂದಾಗಿ ಅವು ಉಬ್ಬುತ್ತವೆ. ಇದು ಮೇಲ್ಮೈ ಉಬ್ಬಲು ಕಾರಣವಾಗುತ್ತದೆ ಮತ್ತು ಈ ಕಾರಣದಿಂದ ಉಂಟಾಗುವ ಒತ್ತಡವು ಟೈಲ್ಸ್​ ಪಾಪ್ ಅಪ್​ ಮಾಡಬಹುದು.

 

4. ಕಳಪೆ ಗುಣಮಟ್ಟದ ಬಾಂಡಿಂಗ್ ಏಜೆಂಟ್ ಬಳಕೆ



 

ಟೈಲ್ಸ್​ ಹೊಂದಿಸುವಾಗ ಬಳಸುವ ಬಾಂಡಿಂಗ್ ಏಜೆಂಟ್ ಅನ್ನು ಆಯ್ಕೆ ಮಾಡಿಕೊಳ್ಳುವಾಗ ಗುಣಮಟ್ಟವವನ್ನು ಪರಿಗಣಿಸಬೇಕಾಗಿರುವುದು ಪ್ರಮುಖ ಅಂಶವಾಗಿದೆ. ಕಳಪೆ ಗುಣಮಟ್ಟದ ಬಾಂಡಿಂಗ್​​ ಏಜೆಂಟ್ ಬಳಸಿದರೆ, ಟೈಲ್ಸ್​ಗೆ​ ಆಧಾರವಾಗಿರುವ ವಸ್ತುವಿನೊಂದಿಗೆ ಸುರಕ್ಷಿತವಾಗಿ ಮತ್ತು ದೃಢವಾದ ಕೂಡಿಸುವುದು ಸಾಧ್ಯವಾಗುವುದಿಲ್ಲ

 

ಆದ್ದರಿಂದಾಗಿ, ಹವಾಮಾನ ಬದಲಾವಣೆಯಿಂದ ಉಂಟಾಗುವ ತಾಪಮಾನ ಬದಲಾವಣೆ ಅಥವಾ ಒದ್ದೆ ಪರಿಸರ ಪರಿಸ್ಥಿತಿಗಳ ಬದಲಾವಣೆಗಳ ಸಂದರ್ಭದಲ್ಲಿ, ಟೈಲ್ಸ್‌ಗಳ ಮೇಲಿನ ಬಾಂಡಿಂಗ್ ಏಜೆಂಟ್‌ನ ಹಿಡಿತವು ಸಡಿಲಗೊಳ್ಳುತ್ತದೆ, ಇದು ದೋಷಯುಕ್ತ ಅಥವಾ ಬಕಲ್ ಟೈಲ್ಸ್‌ಗೆ ಕಾರಣವಾಗುತ್ತದೆ.

 

5. ಕಳಪೆ ಗುಣಮಟ್ಟದ ಟೈಲ್ ಅಡಿಸವ್ ಬಳಕೆ



 

ಉತ್ತಮ ಗುಣಮಟ್ಟದ ಟೈಲ್ ಅಡಿಸವ್​ (ಅಂಟು) ಬಳಸುವುದು ಕೂಡ ಬಹಳ ಮುಖ್ಯವಾಗಿದೆ, ವಿಶೇಷವಾಗಿ ಫ್ಲೋರ್​ ಮೇಲೆ ನೇರವಾಗಿ ಸೂರ್ಯನ ಬಿಸಿಲು ಬೀಳುವಂತಿದ್ದಾಗ. ಅಡಿಸವ್​ ಅನ್ನು ಸಂಪೂರ್ಣವಾಗಿ ಬಳಸದಿದ್ದರೆ ಅಥವಾ ಕಳಪೆ ಗುಣಮಟ್ಟದ್ದನ್ನು ಬಳಸಿದರೆ, ಸೂರ್ಯನ ಬಿಸಿಲು ಬೀಳುವುದರಿಂದ ಟೈಲ್ಸ್​ ಉಬ್ಬಲು ಕಾರಣವಾಗುತ್ತದೆ, ಒತ್ತಡದ ಕಾರಣದಿಂದಾಗಿಯೂ ಬಕಲ್ ಟೈಲ್ಸ್​ ಉಂಟುಮಾಡುತ್ತದೆ.

 

6. ಹಳೆಯ ಟೈಲ್ಸ್​



ಹಳೆಯ ಟೈಲ್ಸ್​ ತಮ್ಮ ನಮ್ಯತೆ ಮತ್ತು ತಾಪಮಾನ ಬದಲಾವಣೆಗಳನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು ಕಳೆದುಕೊಂಡಿರುತ್ತವೆ ಆದ್ದರಿಂದ ಅವು ಸುಲಭವಾಗಿ ಒಡೆದು ಹೋಗುತ್ತವೆ. ಇವುಗಳನ್ನು ಬಳಸುವುದು ಟೈಲ್ ಪಾಪಿಂಗ್ ಆಗುವ ಸಾಧ್ಯತೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ.

 

7. ಬಾಗಿದ ಟೈಲ್ಸ್​

ಕೆಲವೊಮ್ಮೆ, ತಯಾರಿಕೆಯ ಸಮಯದಲ್ಲಿಯೇ ಟೈಲ್ಸ್​ ಬಾಗಿರುತ್ತವೆ. ಇವುಗಳನ್ನು ಬಳಸುವುದರಿಂದ ದೋಷಯುಕ್ತ ಅಥವಾ ಪಾಪ್ ಟೈಲ್ಸ್​ ಆಗುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ.

 

8. ಉಬ್ಬುತಗ್ಗಿರುವ ಅಡಿಯ ನೆಲ

ಅಡಿಭಾಗದಲ್ಲಿ ಇರುವ ನೆಲವು​ ಉಬ್ಬುತಗ್ಗುಗಳಿಂದ ಅಸಮವಾಗಿದ್ದರೆ, ಅದು ಅಡೆಸವ್​ ಹಾಗೂ ಗಾರೆಯೊಂದಿಗೆ ದೃಢವಾದ ಮತ್ತು ಒಂದೇ ರೂಪದ ಬಾಂಡಿಂಗ್​ ರೂಪಿಸುವುದಿಲ್ಲ. ಇದು ನಿಮ್ಮ ಫ್ಲೋರ್​ ಅನ್ನು ಅಚ್ಚುಕಟ್ಟಿಲ್ಲದಂತೆ ಮತ್ತು ಸಮತಟ್ಟಾಗಿ ಕಾಣದಂತೆ ಮಾಡಬಹುದು.

 

ಫ್ಲೋರ್​ ಟೈಲ್ಸ್ ಪಾಪ್ ಅಪ್ ಆಗುವುದನ್ನು ತಪ್ಪಿಸುವುದು ಹೇಗೆ?



ನೀವು ಇತ್ತೀಚೆಗೆ ಹೊಸ ಮನೆಗೆ ತೆರಳಿದ್ದರೆ, ನೀವು ಮಾಡಬೇಕಾದ ಮೊದಲ ಕೆಲಸವೆಂದರೆ ಮನೆಯಲ್ಲಿ ಯಾವುದಾದರೂ ದೋಷಗಳಿವೆಯೇ ಎಂದು ಮನೆಯ ವ್ಯಪ್ತಿಯಲ್ಲಿ ಪರಿಶೀಲಿಸುವುದು. ಜೊತೆಗೆ ಅದನ್ನು ನಿವಾರಿಸಲು ಶೀಘ್ರ ಕ್ರಮ ತೆಗೆದುಕೊಳ್ಳಲು ಮತ್ತು ಸಾಧ್ಯವಾದಷ್ಟು ಬೇಗ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ನಿಮಗೆ ಇದು ಸಹಾಯ ಮಾಡುತ್ತದೆ.

 

ಮನೆ ಅಥವಾ ಕಟ್ಟಡ ನವೀಕರಣದ ಸಮಯದಲ್ಲಿ, ಟೈಲ್ ಪಾಪಿಂಗ್ ಆಗದಂತೆ ನೋಡಿಕೊಳ್ಳಲು ಗುತ್ತಿಗೆದಾರ ಅಥವಾ ಬಿಲ್ಡರ್ ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದ್ದಾರೆ ಎಂಬುದನ್ನು ಖಚಿತಪಡಿಸಿಕೊಳ್ಳಿ.

 

ಹಗುರವಾದ ಉಪಕರಣದಿಂದ ಹಾಲೊ ಟೈಲ್ಸ್​ ಮೇಲೆ ಟ್ಯಾಪ್​ ಮಾಡುವುವುದರಿಂದ ಟೈಲ್ಸ್​ ಅನ್ನು ಅಸಮರ್ಪಕವಾಗಿ ಹೊಂದಿಸಲಾಗಿದೆಯೇ ಎಂಬುದುನ್ನು ಗುರುತಿಸಲು ಮನೆಯ ಹೊಸ ಮಾಲೀಕರಿಗೆ ಉತ್ತಮ ವಿಧಾನವಾಗಿದೆ. ಈ ಸಂದರ್ಭದಲ್ಲಿ ಯಾವುದಾದರೂ ಸಮಸ್ಯೆಗಳು ಕಂಡುಕೊಂಡರೆ, ಅವನ್ನು ಪರಿಹರಿಸಲು ಸುಲಭವಾದ ಮಾರ್ಗವೆಂದರೆ ಕೆಲವು ಫ್ಲೋರ್​ ಟೈಲ್ಸ್​ ಅಂಚಿನಲ್ಲಿ ಅಡೆಸವ್​ ಅನ್ನು ತುಂಬುವುದಾಗಿದೆ.

 

ಟೈಲ್ಸ್​ ಪಾಪ್ ಅಪ್ ಆಗಿದ್ದರೆ, ನೀವು ಈ ಕೆಳಗಿನ ಕ್ರಮಗಳನ್ನು ತೆಗೆದುಕೊಳ್ಳಬಹುದು:

 

  • ಟೈಲ್ಸ್​ ಪಾಪಿಂಗ್ ಮುಗಿಯುವ ತನಕ ದೂರ ಇರಿ
  • ಒಮ್ಮೆ ಮುಗಿಸಿದ ನಂತರ, ಮುರಿದ ಅಂಚುಗಳಿಂದ ಯಾವುದೇ ಚೂರುಗಳು ಅಥವಾ ಬಿರುಕುಗಳನ್ನು ತೊಡೆದುಹಾಕಿ
  •  ಅಥವಾ ಬೀರುಗಳಂತಹ ಪೀಠೋಪಕರಣಗಳ ತುಂಡಿನಿಂದ ಪ್ರದೇಶವನ್ನು ಕವರ್ ಮಾಡಿ.
  • ದೋಷಹೊಂದಿರುವ ಮೇಲ್ಮೈ ಮೇಲೆ ದಪ್ಪ ರಟ್ಟಿನ ಹಾಳೆಯನ್ನು ಇರಿಸಿ.

 

ಫ್ಲೋರ್​ ಮೇಲೆ ನಿಮಗೆ ಅಲ್ಲಾಡುವ ಟೈಲ್ಸ್​ ಕಂಡುಬಂದರೆ ಮತ್ತು ಈ ಪಾಪ್-ಅಪ್ ಟೈಲ್ಸ್ ಅನ್ನು ಹೇಗೆ ಸರಿಪಡಿಸುವುದು ಎಂಬುದು ನಿಮ್ಮ ಚಿಂತೆ ಆಗಿದ್ದರೆ, ಟೈಲ್ಸ್ ತೆಗೆದುಹಾಕುವ ಮೂಲಕ ಟೈಲ್​ ಹೊಂದಿಸುವ ಪ್ರಕ್ರಿಯೆಯನ್ನು ಮತ್ತೊಮ್ಮೆ ಸಂಪೂರ್ಣವಾಗಿ ಮಾಡುವ ಮೂಲಕ ಪಾಪ್​-ಅಪ್​ ಟೈಲ್ಸ್​ನ್ನು ಸರಿಪಡಿಸಬಹುದು.


ಪದೇ ಪದೇ ಕೇಳಲಾಗುವ ಪ್ರಶ್ನೆಗಳು (ಎಫ್‌ಎಕ್ಯು)

 

1) ಟೈಲ್ಸ್ ಪಾಪ್ ಅಪ್ ಆಗಲು ಕಾರಣವೇನು?

 

ಅಸಮರ್ಪಕವಾಗಿ ಹೊಂದಿಸುವುದು, ಸಮವಾಗಿರದ ಸಬ್‌ಫ್ಲೋರ್, ತೇವಾಂಶ-ಸಂಬಂಧಿತ ಸಮಸ್ಯೆಗಳು, ದುರ್ಬಲ ಅಂಟಿಕೊಳ್ಳುವಿಕೆ, ತೂಕದ ನಡೆದಾಡುವ ದಟ್ಟಣೆ ಅಥವಾ ಸ್ಟ್ರಕ್ಷರ್​ ಹೊಯ್ದಾಡುವುದರಿಂದ ಟೈಲ್ಸ್ ಪಾಪ್ ಅಪ್ ಆಗಬಹುದು ಅಥವಾ ಸಡಿಲವಾಗಬಹುದು.

 

2) ಸಡಿಲವಾದ ಟೈಲ್ ಅನ್ನು ನಾನು ಸರಿಪಡಿಸಬಹುದೇ?

 

ಸಾಧ್ಯವಾದರೆ ಹೊಸದಾಗಿ ಅಡೆಸವ್ ಹಾಕಿ ಅಂಟಿಸುವ ಮೂಲಕ ಸಡಿಲವಾದ ಟೈಲ್​ ಅನ್ನು ಮತ್ತೆ ಹೊಂದಿಸುವ ಮೂಲಕ ಸಡಿಲವಾದ ಟೈಲ್ ಅನ್ನು ನೀವೇ ಸರಿಪಡಿಸಲು ಸಾಧ್ಯವಿದೆ. ಆದರೂ, ಸಮಸ್ಯೆಯು ದೊಡ್ಡದಾಗಿದ್ದರೆ ಅಥವಾ ನಿಮಗೆ ಅಗತ್ಯವಾದ ಕೌಶಲ್ಯಗಳ ಕೊರತೆಯಿದ್ದರೆ ವೃತ್ತಿಪರರನ್ನು ಕರೆಯುವುದು ಉತ್ತಮ.

 

3) ಟೈಲ್ಸ್ ಮೊದಲ ಸ್ಥಾನದಲ್ಲಿ ಪಾಪ್ ಅಪ್ ಆಗುವುದನ್ನು ನಾನು ಹೇಗೆ ತಡೆಯಬಹುದು?

 

ಟೈಲ್‌ಗಳು ಪಾಪ್ ಅಪ್ ಆಗುವುದನ್ನು ತಡೆಯಲು, ಅರ್ಹ ಮತ್ತು ಅನುಭವಿ ಟೈಲ್ ಇನ್‌ಸ್ಟಾಲರ್ ಅನ್ನು ನೇಮಿಸಿ, ಅತಿಯಾದ ತೇವಾಂಶ ಅಥವಾ ಭಾರಿ ಜನ ದಟ್ಟಣೆಗೆ ಟೈಲ್‌ಗಳನ್ನು ಒಡ್ಡುವುದನ್ನು ತಪ್ಪಿಸಿ ಮತ್ತು ಟೈಲ್ಸ್ ಅನ್ನು ನಿಯಮಿತವಾಗಿ ನಿರ್ವಹಿಸಿ.



ಫ್ಲೋರ್​ ನಿಮ್ಮ ಮನೆಯ ಪ್ರಮುಖ ಭಾಗಗಳಲ್ಲಿ ಒಂದಾಗಿದೆ. ಮತ್ತು ಟೈಲ್ಸ್​ನಿಂದ ಅದನ್ನು ವಿನ್ಯಾಸಗೊಳಿಸಿದಾಗ ಸ್ಥಳದ ಸೌಂದರ್ಯವನ್ನು ಹೆಚ್ಚಿಸುತ್ತದೆ, ಟೈಲ್ ಹೊಂದಿಸುವ ಪ್ರಕ್ರಿಯೆಯು ಕೆಲವು ಜವಾಬ್ದಾರಿಯುತ ಏಕಾಗ್ರತೆ ಮತ್ತು ಪ್ರಯತ್ನದ ಅಗತ್ಯವಿರುತ್ತದೆ.

ಆದ್ದರಿಂದ, ನೀವು ಸುಂದರವಾದ ಟೈಲ್ಸ್​ ಹೊಂದಿಸಲು ಸಹಾಯ ಮಾಡುವ ಕಾಂಟ್ರಾಕ್ಟಾರ್​ ಅನ್ನು ಕರೆತರುವುದು ಖಚಿತಪಡಿಸಿಕೊಳ್ಳಿ ಆದರೆ ಯಾವುದೇ ಮುರಿದುಹೋದವುಗಳನ್ನು ಸರಿಪಡಿಸಲು ಸಹಾಯ ಮಾಡುತ್ತದೆ!



ಸಂಬಂಧಿತ ಲೇಖನಗಳು


ಶಿಫಾರಸು ಮಾಡಿದ ವೀಡಿಯೊಗಳು



  ಮನೆ ಕನ್‌ಸ್ಟ್ರಕ್ಷನ್‌ಗಾಗಿ ಎಸ್ಟಿಮೇಟಿಂಗ್ ಟೂಲ್ಸ್


ವೆಚ್ಚ ಕ್ಯಾಲ್ಕುಲೇಟರ್

ಪ್ರತಿಯೊಬ್ಬ ಮನೆ ನಿರ್ಮಾಣ ಮಾಡುವವರು ತಮ್ಮ ಕನಸಿನ ಮನೆಯನ್ನು ನಿರ್ಮಿಸಲು ಬಯಸುತ್ತಾರೆ ಆದರೆ ಅದು ಅವರ ಬಜೆಟ್‌ ವೆಚ್ಚವನ್ನು ಮೀರದಂತೆ ಇರಿಸಿಕೊಳ್ಳಲು ಬಯಸುತ್ತಾರೆ. 

logo

ಇಎಂಐ ಕ್ಯಾಲ್ಕುಲೇಟರ್

ಮನೆ ನಿರ್ಮಾಣಕ್ಕೆ ಹಣಕಾಸು ಒದಗಿಸಿಕೊಳ್ಳುವ ಅತ್ಯುತ್ತಮ ಮಾರ್ಗಗಳಲ್ಲಿ ಮನೆ-ಸಾಲವನ್ನು ತೆಗೆದುಕೊಳ್ಳುವುದು ಒಂದಾಗಿರುತ್ತದೆ, ಆದರೆ ಮನೆಯನ್ನು ನಿರ್ಮಿಸುವವರು ಎಷ್ಟು ಕಂತುಗಳನ್ನು ಪಾವತಿಸಬೇಕೆಂದು ತಿಳಿಯಲು ಬಯಸುತ್ತಾರೆ. 

logo

ಪ್ರಾಡಕ್ಟ್ ಪ್ರೆಡಿಕ್ಟರ್

ಮನೆಯನ್ನು ನಿರ್ಮಿಸುವ ಆರಂಭಿಕ ಹಂತಗಳಲ್ಲಿ, ಮನೆ ನಿರ್ಮಿಸುವವರು ಸರಿಯಾದ ಉತ್ಪನ್ನಗಳನ್ನು ಆಯ್ಕೆ ಮಾಡುವುದು ಮುಖ್ಯವಾಗಿರುತ್ತದೆ. 

logo

ಅಂಗಡಿ ಪತ್ತೆಕಾರಕ

ಮನೆ ಕಟ್ಟುವವರಿಗೆ, ಮನೆಯ ಕಟ್ಟಡದ ಬಗ್ಗೆ ಎಲ್ಲಾ ಅಮೂಲ್ಯವಾದ ಮಾಹಿತಿಯನ್ನು ಪಡೆಯುವ ಸರಿಯಾದ ಅಂಗಡಿಯನ್ನು ಕಂಡುಹಿಡಿಯುವುದು ಮುಖ್ಯವಾಗಿದೆ.

logo

Loading....