Share:
Home Building Guide
Our Products
Useful Tools
Waterproofing methods, Modern kitchen designs, Vaastu tips for home, Home Construction cost
Share:
ನೀವು ಹೊಸ ಮನೆಗೆ ಹೋಗುತ್ತಿದ್ದರೆ ಮತ್ತು ಇಂಟೀರಿಯರ್ ಡಿಸೈನರ್ ಸಹಾಯದಿಂದ ಅದನ್ನು ನೀವೇ ವಿನ್ಯಾಸಗೊಳಿಸಲು ಯೋಜಿಸುತ್ತಿದ್ದರೆ ನಿಮ್ಮ ಮನೆಯ ವಾಸ್ತುವನ್ನು ಪರೀಕ್ಷಿಸಲೇ ಬೇಕೆಂದು ಸಲಹೆ ನೀಡಲಾಗುತ್ತದೆ. ಮನೆಗಾಗಿ ವಾಸ್ತು ಶಾಸ್ತ್ರವು ವೈಜ್ಞಾನಿಕ ಸಂಶೋಧನೆಯನ್ನು ಆಧರಿಸಿದೆ ಮತ್ತು ಇದು ವಿನ್ಯಾಸ, ವಾಸ್ತುಶಿಲ್ಪ ಮತ್ತು ವಿನ್ಯಾಸದ ತತ್ವವನ್ನು ವಿವರಿಸುತ್ತದೆ. ಮನೆಯು ಸಕಾರಾತ್ಮಕ ಶಕ್ತಿಯನ್ನು ಹೊರಸೂಸಲು ಮತ್ತು ನಕಾರಾತ್ಮಕತೆಯು ಹತ್ತಿರ ಬರದಂತೆ ತಡೆಯಲು, ಮನೆಗಾಗಿ ವಾಸ್ತು ಸಲಹೆಗಳನ್ನು ಅನುಸರಿಸುವುದು ಅತ್ಯಗತ್ಯ.
ವಾಸ್ತುವಿನ ವಿಜ್ಞಾನ ಮತ್ತು ನಮ್ಮ ಮನೆಗಳ ವಿನ್ಯಾಸದ ನಡುವಿನ ಸಂಬಂಧವನ್ನು ಸಕಾರಾತ್ಮಕತೆ ಮತ್ತು ಒಳ್ಳೆಯ ವೈಬ್‌ಗಳನ್ನು ಸುಧಾರಿಸಲು ಅರ್ಥಮಾಡಿಕೊಳ್ಳುವುದು ಅಗತ್ಯವಾಗಿದೆ. ನೀವು ಪ್ರೀತಿಯಿಂದ ಕೂಡಿದ ಸಂತೋಷದ ಜೀವನವನ್ನು ಅನುಭವಿಸಲು ನಿಮ್ಮ ಮನೆಯಲ್ಲಿ ಅಳವಡಿಸಿಕೊಳ್ಳಬೇಕಾದ ಮನೆಗಾಗಿ ವಿವಿಧ ವಾಸ್ತು ಸಲಹೆಗಳಿವೆ. ಅವುಗಳಲ್ಲಿ ಇಲ್ಲಿ ಕೆಲವು ಅಂಶಗಳಿವೆ:
ಪ್ಲಾಟ್ಗೆ ರಸ್ತೆ ಹತ್ತಿಕೊಂಡಿರುವುದನ್ನು ಬೀದಿ ಶೂಲ ಎಂದು ಕರೆಯಲಾಗುತ್ತದೆ. ಕೆಲವು ಬೀದಿ ಶೂಲಗಳು ಸಕಾರಾತ್ಮಕತೆಯನ್ನು ತರುತ್ತವೆ ಮತ್ತು ಇತರ ಬೀದಿ ಶೂಲಗಳು ನಕಾರಾತ್ಮಕ ಶಕ್ತಿಯನ್ನು ಮನೆಗೆ ತರುತ್ತವೆ. ಈಶಾನ್ಯದ ಉತ್ತರದಲ್ಲಿ, ಈಶಾನ್ಯದ ಪೂರ್ವದಲ್ಲಿ ಬೀದಿ ಶೂಲಗಳನ್ನು ಅತ್ಯುತ್ತಮವೆಂದು ಪರಿಗಣಿಸಲಾಗುತ್ತದೆ. ಆದರೆ ಆಗ್ನೇಯದಿಂದ ದಕ್ಷಿಣಕ್ಕೆ, ವಾಯವ್ಯದ ಪಶ್ಚಿಮಕ್ಕೆ ಇರುವುದನ್ನು ಇದ್ದುದರಲ್ಲಿಯೇ ಕಡಿಮೆ ಅಂದರೆ ಮಧ್ಯಮ ಎಂದು ಪರಿಗಣಿಸಲಾಗುತ್ತದೆ.
ಪರಿಪೂರ್ಣವಾಗಿ ಹೇಳುವುದಾದರೆ, ನೈಋತ್ಯ ದಿಕ್ಕಿನಲ್ಲಿ ಬೆಡ್ರೂಮ್ ಉತ್ತಮ ಆರೋಗ್ಯ ಮತ್ತು ಸಮೃದ್ಧಿ ಕೊಡುವುದನ್ನು ಖಚಿತಪಡಿಸುತ್ತದೆ. ಬೆಡ್ರೂಮ್ ನೈಋತ್ಯ ಮೂಲೆಯಲ್ಲಿ ಹಾಸಿಗೆಯನ್ನು ಇಡಬೇಕು. ಹಾಸಿಗೆಯ ಮುಂದೆ ಕನ್ನಡಿ ಅಥವಾ ಟಿವಿಯನ್ನು ಇಡಲೇಬಾರದು.
ಇದನ್ನೂ ಓದಿ : ನಿಮ್ಮ ಬೆಡ್ರೂಮ್ಗಾಗಿ ಅತ್ಯಗತ್ಯವಾದ 5 ಪ್ರಮುಖ ವಾಸ್ತು ಸಲಹೆಗಳು
ನಿಮ್ಮ ಮನೆಯಲ್ಲಿ ಸಂತೋಷ, ಯಶಸ್ಸು ಮತ್ತು ಉತ್ತಮ ಆರೋಗ್ಯದಿಂದ ತುಂಬಿರುವುದನ್ನು ಖಚಿತಪಡಿಸಿಕೊಳ್ಳಲು ಮನೆಗಾಗಿ ಈ ವಾಸ್ತು ಸಲಹೆಗಳನ್ನು ಅಳವಡಿಸಿಕೊಳ್ಳಬೇಕು.