ಓಜೀ ಕಮಾನಿನಲ್ಲಿ ಎರಡು ಕಂಸದ ಆಕಾರಗಳಿದ್ದು, ಎರಡೂ ಕಂಸಗಳು S ಆಕಾರದಲ್ಲಿರುತ್ತವೆ ಮತ್ತು ಒಂದು ಇನ್ನೊಂದರ ಪ್ರತಿಬಿಂಬವಾಗಿರುತ್ತದೆ. ಇದರ ಸೊಬಗು ಮತ್ತು ಸಂಕೀರ್ಣತೆ ಇದನ್ನು ಆಂಗ್ಲೋ ಗೋಥಿಕ್ ಮತ್ತು ಪುನರುಜ್ಜೀವಿತ ಗೋಥಿಕ್ ವಾಸ್ತುಶಿಲ್ಪದಲ್ಲಿ ಹೆಸರುವಾಸಿಯಾಗಿಸಿದೆ. ನೋಡಲು ಸುಂದರವಾಗಿರುವುದು ಮಾತ್ರವಲ್ಲದೆ ಭಾರ ತಡೆಯುವ ಸಾಮರ್ಥ್ಯವನ್ನೂ ಸಹ ಓಜೀ ಕಮಾನಿನ ವಿನ್ಯಾಸ ಹೊಂದಿದೆ.
6. ರಿಲೀವಿಂಗ್ ಕಮಾನು
ರಿಲೀವಿಂಗ್ ಕಮಾನು ಒಂದು ಅವಶ್ಯಕ ಆದರೆ ಬಹುತೇಕ ಕಡೆಗಣಿಸಲ್ಪಟ್ಟ ಕಮಾನಾಗಿದೆ. ಸಾಮಾನ್ಯವಾಗಿ ಲಿಂಟೆಲ್ ಅಥವಾ ಕೆಳಗಿನ ಕಮಾನಿನ ಮೇಲಿನ ಭಾರವನ್ನು ಕಡಿಮೆ ಮಾಡಲು ಬಳಸುವ ರಿಲೀವಿಂಗ್ ಕಮಾನುಗಳು ಒಂದು ಬಗೆಯ ಜಾಣ್ಮೆಯ ಇಂಜಿನಿಯರಿಂಗ್ ಉಪಾಯಗಳಾಗಿವೆ. ವಿಶೇಷವಾಗಿ ಪುರಾತನ ಮತ್ತು ಐತಿಹಾಸಿಕ ಕಟ್ಟಡಗಳಲ್ಲಿ ಅಕ್ಕಪಕ್ಕದ ಗೋಡೆಗಳ ಮೇಲೆ ಭಾರಹಂಚಿಕೆ ಮಾಡುವುದು ಒತ್ತಡ ನಿರ್ವಹಣೆಗೆ ಸಹಾಯ ಮಾಡುತ್ತದೆ. ಈ ಬಗೆಯ ಕಮಾನುಗಳನ್ನು ಸಾಮಾನ್ಯವಾಗಿ ಮನೆಗಳು ಮತ್ತು ಇತರ ಕಟ್ಟಡಗಳಲ್ಲಿ ಅವುಗಳ ದೀರ್ಘಬಾಳಿಕೆ ಮತ್ತು ಸ್ಥಿರತೆಯ ಕಾರಣಕ್ಕೆ ಬಳಸಲಾಗುತ್ತದೆ.
7. ತ್ರಿಕೋನಾಕಾರದ ಕಮಾನು
ಸಾಮಾನ್ಯವಾಗಿ ಇತರ ಬಗೆಯ ಕಮಾನುಗಳಲ್ಲಿ ಕಂಸಗಳಿದ್ದರೆ ತ್ರಿಕೋನ ಕಮಾನು ಅದರ ನೇರ ಗೆರೆಗಳು ಮತ್ತು ಚೂಪಾದ ಕೋನಾಕಾರದಿಂದ ಭಿನ್ನವಾಗಿ ನಿಲ್ಲುತ್ತದೆ. ಈ ಬಗೆಯ ಕಮಾನು ಬಹಳ ಹಳೆಯ ಮಾದರಿಯಾಗಿದ್ದು, ಮೆಸಪೊಟೇಮಿಯನ್ ನಾಗರೀಕತೆಯಲ್ಲಿ ಇದರ ಬಳಕೆಯ ಬಗ್ಗೆ ಸಾಕ್ಷ್ಯಗಳಿವೆ. ಇದರ ಸರಳ ಆಕಾರವು ಇದನ್ನು ವಿಭಿನ್ನವಾಗಿ,ನಯನ ಮನೋಹರವಾಗಿ ಮಾಡಿರುವುದಲ್ಲದೆ, ಕಟ್ಟಡಕ್ಕೆ ಸಾಕಷ್ಟು ಆಧಾರವನ್ನೂ ನೀಡುವುದರಿಂದ ಪುರಾತನ ಮತ್ತು ಆಧುನಿಕ ವಾಸ್ತುವಿನ್ಯಾಸದಲ್ಲಿ ಪ್ರಸ್ತುತವಾಗಿದೆ. ತ್ರಿಕೋನ ಕಮಾನುಗಳ ನಿರ್ಮಾಣ ವಿಧಾನವು ಸರಳವಾಗಿರುವುದರಿಂದ ಸಾಮಾನ್ಯವಾಗಿ ಸಮಕಾಲೀನ ವಾಸ್ತುಶಿಲ್ಪದಲ್ಲಿ ಇದರ ಬಳಕೆಯಿದೆ.
ನಿರ್ಮಾಣ ಪ್ರಕ್ರಿಯೆಯಲ್ಲಿ ವಿವಿಧ ಕಮಾನುಗಳನ್ನು ಹೇಗೆ ವರ್ಗೀಕರಿಸಲಾಗಿದೆ?
ಕಮಾನುಗಳ ವರ್ಗೀಕರಣದಲ್ಲಿ ಅನೇಕ ಅಂಶಗಳು ಪಾತ್ರವಹಿಸುತ್ತವೆ. ಕಮಾನುಗಳ ವರ್ಗೀಕರಣದ ಬಗ್ಗೆ ತಿಳಿದುಕೊಳ್ಳೋಣ:
1. ಆಕಾರದ ಆಧಾರದಲ್ಲಿ ವರ್ಗೀಕರಣ
ಕಮಾನುಗಳನ್ನು ಅವುಗಳ ಸೌಂದರ್ಯ ಮತ್ತು ಗುಣಗಳನ್ನು ನಿರ್ಧರಿಸುವ ಅಂಶವಾದ ಆಕಾರದ ಆಧಾರದಲ್ಲಿ ವರ್ಗೀಕರಿಸಬಹುದು. ಸಾಮಾನ್ಯ ಆಕಾರಗಳೆಂದರೆ ಅರ್ಧವೃತ್ತಾಕೃತಿಯ ಸಾಂಪ್ರದಾಯಿಕ ರೋಮನ್ ಕಮಾನು ಮತ್ತು ಚೂಪಾದ ಶಿಖರವನ್ನು ಹೊಂದಿರುವ ಮೊನಚು ಗೋಥಿಕ್ ಕಮಾನು. ಇತರ ಆಕಾರಗಳೆಂದರೆ ಒಂದಕ್ಕೊಂದು ಹೊಂದಿಕೊಂಡಿರುವ ಅರ್ಧವೃತ್ತಗಳನ್ನು ಹೋಲುವ ಬ್ಯಾರೆಲ್ ಕಮಾನು ಮತ್ತು ಪ್ಯಾರಾಬೊಲ ಆಕಾರವನ್ನು ಹೋಲುವ ಪ್ಯಾರಾಬೋಲಿಕ್ ಕಮಾನು. ಪ್ರತಿಯೊಂದು ಆಕಾರವೂ ತನ್ನದೇ ಆದ ನಿರ್ದಿಷ್ಟ ಉಪಯೋಗವನ್ನು ಹೊಂದಿದೆ ಮತ್ತು ಸೌಂದರ್ಯ ಹಾಗು ಅನುಕೂಲತೆಗಳ ಸಮಾಗಮವಾಗಿರುತ್ತವೆ.
2. ನಿರ್ಮಾಣ ಸಾಮಗ್ರಿಗಳು
ಕಮಾನುಗಳನ್ನು ವರ್ಗೀಕರಿಸುವ ಇನ್ನೊಂದು ವಿಧಾನವೆಂದರೆ ಅವುಗಳ ನಿರ್ಮಾಣದಲ್ಲಿ ಬಳಸುವ ನಿರ್ಮಾಣ ಸಾಮಗ್ರಿಗಳ ಅಧಾರದ ಮೇಲೆ. ಸಾಂಪ್ರದಾಯಿಕ ನಿರ್ಮಾಣ ವಸ್ತುಗಳಾದ ಕಲ್ಲು, ಇಟ್ಟಿಗೆ ಮತ್ತು ಕಾಂಕ್ರೀಟ್‍ಗಳನ್ನು ದೀರ್ಘಬಾಳಿಕೆ ಮತ್ತು ಬಲಕ್ಕಾಗಿ ಉಪಯೋಗಿಸಲಾಗುತ್ತದೆ. ಆಧುನಿಕ ಕಮಾನುಗಳಲ್ಲಿ ಉಕ್ಕು ಅಥವಾ ರೀಇನ್ಫೋರ್ಸಡ್ ಕಾಂಕ್ರೀಟನ್ನು ಸಹ ಸ್ಥಿರತೆ ಮತ್ತು ಬೇಕಾದ ಆಕಾರಗಳನ್ನು ರೂಪಿಸಲು ಬಳಸಲಾಗುತ್ತದೆ. ನಿರ್ಮಾಣ ಸಾಮಗ್ರಿಗಳ ಆಯ್ಕೆ ಬಜೆಟ್, ವಾಸ್ತುವಿನ್ಯಾಸ ಮತ್ತು ಪರಿಸರಕ್ಕೆ ತಕ್ಕಂತೆ ನಿರ್ಧಾರವಾಗುತ್ತದೆ.
3. ಕೆಲಸಗಾರಿಕೆಯ ವಿಧ
ನಿರ್ಮಾಣ ವಿಧಾನವು ಸಹ ಕಮಾನುಗಳ ವರ್ಗೀಕರಣದಲ್ಲಿ ಮುಖ್ಯ ಪಾತ್ರವಹಿಸುತ್ತದೆ. ನುರಿತ ಕುಶಲಕರ್ಮಿಗಳ ಸೂಕ್ಷ್ಮ ಕರಕುಶಲತೆಯಿಂದ ನಿರ್ಮಾಣವಾದ ಕಮಾನುಗಳು ಕಲೆಗಾರಿಕೆಯನ್ನು ಮತ್ತು ಸೂಕ್ಷ್ಮ ವಿವರಗಳನ್ನೂ ಹೊಂದಿರುವುದರಿಂದ ನೋಡಲು ಸುಂದರವಾಗಿರುತ್ತವೆ. ಆಧುನಿಕ ತಯಾರಿಕಾ ತಂತ್ರಗಳನ್ನು ಬಳಸಿ ಯಂತ್ರಗಳಿಂದ ನಿರ್ಮಿಸಲ್ಪಟ್ಟ ಕಮಾನುಗಳು ನಿಖರತೆ ಮತ್ತು ಸಾಮರ್ಥ್ಯಕ್ಕೆ ಆದ್ಯತೆ ಕೊಡುತ್ತವೆ. ಎರಡು ಬಗೆಯ ಕೆಲಸಗಾರಿಕೆಗಳು ತಮ್ಮದೇ ಆದ ಅನುಕೂಲ ಮತ್ತು ಅನಾನುಕೂಲವನ್ನು ಹೊಂದಿದ್ದು ಯೋಜನೆಯ ಅಗತ್ಯ ಮತ್ತು ಹಣಕಾಸಿನ ಮಿತಿಯ ಆಧಾರದಲ್ಲಿ ಆಯ್ಕೆ ಮಾಡಿಕೊಳ್ಳಬಹುದು.
4. ಕೇಂದ್ರಬಿಂದುಗಳ ಸಂಖ್ಯೆ
ಕಮಾನುಗಳನ್ನು ಅವುಗಳ ಕೇಂದ್ರಬಿಂದುಗಳ ಸಂಖ್ಯೆಯ ಆಧಾರದಲ್ಲಿ ಸಹ ವರ್ಗೀಕರಿಸಬಹುದು. ಸಾಂಪ್ರದಾಯಿಕ ರೋಮನ್ ಕಮಾನಿನ ರೀತಿ ಏಕಕೇಂದ್ರ ಕಮಾನುಗಳು ಒಂದೇ ಕೇಂದ್ರಬಿಂದುವನ್ನು ಹೊಂದಿದ್ದು ಅಲ್ಲಿಂದಲೇ ಕಂಸವು ಆರಂಭವಾಗುತ್ತದೆ. ಅಂಡಾಕಾರದ ಕಮಾನಿನ ರೀತಿ ಎರಡು ಕೇಂದ್ರದ ಕಮಾನುಗಳು ಎರಡು ಬಿಂದುಗಳನ್ನು ಹೊಂದಿದ್ದು ವಿಶಾಲ ಮತ್ತು ಹೆಚ್ಚು ಸಮತಟ್ಟಾದ ಕಂಸವನ್ನು ನಿರ್ಮಿಸುತ್ತವೆ. ಅನೇಕ-ಕೇಂದ್ರ ಕಮಾನುಗಳು, ಉದಾಹರಣೆಗೆ ಓಜೀ ಕಮಾನು, ಅನೇಕ ಕೇಂದ್ರಬಿಂದುಗಳಿಂದ ಉಂಟಾದ ಹೆಚ್ಚು ಸಂಕೀರ್ಣ ಕಂಸಗಳನ್ನು ಒಳಗೊಂಡಿರುತ್ತವೆ. ಕೇಂದ್ರಬಿಂದುಗಳ ಸಂಖ್ಯೆಗಳು ಕಮಾನಿನ ಒಟ್ಟಾರೆ ಆಕಾರ ಮತ್ತು ರಚನೆಯ ಸ್ಥಿರತೆಯ ಮೇಲೆ ಪ್ರಭಾವ ಬೀರುತ್ತವೆ.