ದಕ್ಷ ಮಳೆನೀರು ಕೊಯ್ಲು ವ್ಯವಸ್ಥೆಗಾಗಿ ತೆಗೆದುಕೊಳ್ಳಬೇಕಾದ ಕ್ರಮಗಳು

25 ನೇ ಆಗಸ್ಟ್, 2020

ಅಂತರ್ಜಲವು ನಿಮ್ಮ ಮನೆಗೆ ನೈಸರ್ಗಿಕವಾಗಿ ದೊರಕಿರುವ ನೀರಿನ ಮೂಲವಾಗಿರುತ್ತದೆ. ಆದರೆ, ಈ ಮೂಲವನ್ನು ಅತಿಯಾಗಿ ಬಳಸುವುದರಿಂದ ಕಾಲಾನಂತರದಲ್ಲಿ ಅಂತರ್ಜಲವು ಬತ್ತಿ ಹೋಗುತ್ತದೆ. ಅಂತರ್ಜಲವನ್ನು ಮರುಪೂರಣಗೊಳಿಸಲು ಸುಲಭವಾದ ಹಾಗೂ ಉತ್ತಮವಾದ ವಿಧಾನವೆಂದರೆ ಮಳೆನೀರಿನ ಹರಿವನ್ನು ಕೊಯ್ಲು ಮಾಡುವುದು, ಮತ್ತು ರೀಚಾರ್ಜ್ ಹೊಂಡವನ್ನು ಸ್ಥಾಪಿಸುವುದು.

ನೀವು ರೀಚಾರ್ಜ್ ಹೊಂಡವನ್ನು ಹೇಗೆ ನಿರ್ಮಿಸಬಹುದು ಎನ್ನುವುದನ್ನು ಈ ಕೆಳಗೆ ವಿವರಿಸಲಾಗಿದೆ.

  • ಒಂದರಿಂದ ಎರಡು ಮೀಟರ್ ಅಗಲ ಮತ್ತು ಎರಡರಿಂದ ಮೂರು ಮೀಟರ್ ಆಳದ ಹಳ್ಳವನ್ನು ಅಗೆಯುವ ಮೂಲಕ ಪ್ರಾರಂಭಿಸಿ.
  • ಮೊದಲು ಕಲ್ಲುಗಳಿಂದ, ನಂತರ ಒರಟಾದ ಜಲ್ಲಿ ಕಲ್ಲುಗಳಿಂದ ಮತ್ತು ಕೊನೆಯದಾಗಿ ಮರಳಿನಿಂದ ಹಳ್ಳವನ್ನು ತುಂಬಿಸಿ. ಇದು ಮಳೆನೀರಿನ ಹರಿವನ್ನು ಸಂಗ್ರಹಿಸುತ್ತದೆ ಮತ್ತು ಅದನ್ನು ಹೊಂಡದ ಮೂಲಕ ಫಿಲ್ಟರ್ ಮಾಡುತ್ತದೆ.
  • ಮೇಲಿನ ಭಾಗವನ್ನು ಜಾಲರಿಯಿಂದ ಮುಚ್ಚುವ ಮೂಲಕ ನೀವು ಹೊಂಡವನ್ನು ರಕ್ಷಿಸಬಹುದು. ನೀರು ಸುಲಭವಾಗಿ ಹರಿದು ಹೋಗುವಂತೆ ನಿಯಮಿತವಾಗಿ ಅದನ್ನು ಸ್ವಚ್ಚಗೊಳಿಸುವುದನ್ನು ಖಚಿತಪಡಿಸಿಕೊಳ್ಳಿ.
  • ಮಳೆನೀರನ್ನು ಸಂಗ್ರಹಿಸಲಾಗಿರುವ ಪ್ರದೇಶಗಳಿಂದ, ಮಳೆನೀರನ್ನು ರೀಚಾರ್ಜ್ ಹೊಂಡಕ್ಕೆ ಹಾಯಿಸಲು ಪೈಪ್‌ಗಳನ್ನು ಬಳಸಿ. ನಿಮ್ಮ ಮನೆಯ ಅಗತ್ಯತೆಗಳಿಗಾಗಿಯೂ ಕೂಡಾ ನೀವು ಈ ನೀರನ್ನು ಸಂಗ್ರಹಿಸಬಹುದು.
  •  

ರೀಚಾರ್ಜ್ ಹೊಂಡದ ಮೂಲಕ ಮಳೆನೀರನ್ನು ಸಂಗ್ರಹಿಸುವ ಈ ತಂತ್ರವು ಅಮೂಲ್ಯವಾದ ಅಂತರ್ಜಲ ನಿಕ್ಷೇಪಗಳನ್ನು ಪುನರುಜ್ಜೀವನಗೊಳಿಸಲು ಸಹಾಯ ಮಾಡುತ್ತದೆ.


Get Answer to
your Queries

Enter a valid name
Enter a valid number
Enter a valid pincode
Select a valid category
Enter a valid sub category
Please check this box to proceed further
LOADING...