Share:
Home Building Guide
Our Products
Useful Tools
Waterproofing methods, Modern kitchen designs, Vaastu tips for home, Home Construction cost
Share:
ವಾಸ್ತು ಶಾಸ್ತ್ರದ ಪ್ರಕಾರ, ಬಾಲ್ಕನಿ ಸೇರಿದಂತೆ ನಿಮ್ಮ ಮನೆಯ ಪ್ರತಿಯೊಂದು ಅಂಶವು ಎನರ್ಜಿಯು ಒಳಗೆ ಹರಿದು ಬರುವುದರ ಮೇಲೆ ಮತ್ತು ಒಟ್ಟಾರೆ ಸೌಖ್ಯದ ಮೇಲೆ ಪರಿಣಾಮ ಬೀರುತ್ತದೆ. ನಿಮ್ಮ ಮನೆ ಹೊರಗಿನ ಪ್ರದೇಶಗಳಲ್ಲಿ ಸಾಮರಸ್ಯ ಮತ್ತು ಸಕಾರಾತ್ಮಕ ವಾತಾವರಣವನ್ನು ಸೃಷ್ಟಿಯಾಗುವಂತೆ ಮಾಡಲು ಕೆಲವು ಬಾಲ್ಕನಿ ವಾಸ್ತು ಸಲಹೆಗಳು ಇಲ್ಲಿವೆ:
ನಿಮ್ಮ ಬಾಲ್ಕನಿಯ ದಿಕ್ಕು ಅದು ಆಕರ್ಷಿಸುವ ಶಕ್ತಿಗಳ ಮೇಲೆ ಆಳವಾದ ಪ್ರಭಾವ ಬೀರುತ್ತದೆ. ದಕ್ಷಿಣಾಭಿಮುಖವಾಗಿರುವ ಬಾಲ್ಕನಿಯು ದಿನವಿಡೀ ಸಾಕಷ್ಟು ಸೂರ್ಯನ ಬೆಳಕನ್ನು ಒದಗಿಸುವ ಮೂಲಕ, ಬೆಚ್ಚಗಿನ ಮತ್ತು ಉತ್ಸಾಹಭರಿತ ಜಾಗವನ್ನು ಸೃಷ್ಟಿಸುತ್ತದೆ. ಪಶ್ಚಿಮ ದಿಕ್ಕಿನ ಬಾಲ್ಕನಿಯು ಮಧ್ಯಾಹ್ನದ ವಿಶ್ರಾಂತಿಗೆ ಸೂಕ್ತವಾಗಿದೆ, ಜೊತೆಗೆ ನೈಋತ್ಯ ದಿಕ್ಕಿನ ಬಾಲ್ಕನಿಯು ಸೂರ್ಯನ ಬೆಳಕು ಮತ್ತು ಪ್ರಶಾಂತತೆಯನ್ನು ಜೊತೆಯಾಗಿ ನೀಡುತ್ತದೆ. ಈ ನಿರ್ದೇಶನಗಳು ವಿಶ್ರಾಂತಿ, ಧ್ಯಾನ ಅಥವಾ ಸಣ್ಣ ಮೀಟಿಂಗ್ ಸ್ಥಳವಾಗಿ ಬಾಲ್ಕನಿಯ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ.
ನಿಮ್ಮ ಬಾಲ್ಕನಿಯ ಛಾವಣಿಯ ಸ್ಥಿತಿಯು ಅದರ ವಾಸ್ತುವನ್ನು ನೇರವಾಗಿ ಪ್ರಭಾವಿಸುತ್ತದೆ. ಸರಿಯಾಗಿ ನಿರ್ಹಹಣೆ ಮಾಡಿರುವ, ಸೋರಿಕೆಯಾಗದ ಛಾವಣಿಯು ಇಷ್ಟವಾದ ಮತ್ತು ಉಲ್ಲಾಸಕರ ವಾತಾವರಣ ಮತ್ತು ಉತ್ತಮ ಬಾಲ್ಕನಿ ವಾಸ್ತುವನ್ನು ಖಾತ್ರಿ ಪಡಿಸುತ್ತದೆ. ಆತಂಕವನ್ನುಂಟು ಮಾಡುವ ಅಥವಾ ಹಾನಿಗೊಳಗಾದ ಮೇಲ್ಛಾವಣಿಯು ಎನರ್ಜಿಯ ಒಳಗೆ ಬರದಂತೆ ತಡೆಯಲು ಕಾರಣವಾಗಬಹುದು, ಅದನ್ನು ಸರಿಪಡಿಸಬಹುದು. ಮೇಲ್ಛಾವಣಿಯನ್ನು ಸ್ವಚ್ಛವಾಗಿಡಿ ಮತ್ತು ಯಾವುದೇ ಕಸ ಇರದಂತೆ ನೋಡಿಕೊಳ್ಳಿ.
ಸರಿಯಾದ ಬೆಳಕು ನಿಮ್ಮ ಬಾಲ್ಕನಿಯಲ್ಲಿ ಬಣ್ಣದ ಅಂದವನ್ನು ಹೊಂದಿಸುತ್ತದೆ. ಶಾಂತ, ಬೆಚ್ಚಗಿನ ಲೈಟ್ಗಳು ಶಾಂತ ಮತ್ತು ಆಕರ್ಷಕ ವಾತಾವರಣವನ್ನು ಸೃಷ್ಟಿಸುತ್ತವೆ. ಸಂಜೆಯ ಸಮಯದವನ್ನು ಕಳೆಯಲು ಬಾಲ್ಕನಿಯು ಪರಿಪೂರ್ಣ ಸ್ಥಳವಾಗಿದೆ. ಅತಿ ಪ್ರಕಾಶಮಾನವಾದ ಅಥವಾ ಕಣ್ಣುಕುಕ್ಕುವಂತಹ ಲೈಟ್ಗಳನ್ನು ಹಾಕಬೇಡಿ. ಏಕೆಂದರೆ ಅವು ಪ್ರಶಾಂತತೆಗೆ ಅಡ್ಡಿಯನ್ನುಂಟು ಮಾಡಬಹುದು. ಸೋಲಾರ್ ಅಥವಾ ಪರಿಸರ ಸ್ನೇಹಿ ಲೈಟುಗಳನ್ನುಆಯ್ಕೆ ಮಾಡುವುದರಿಂದ ಸಮರ್ಥವಾಗಿ ಶಕ್ತಿಯನ್ನು ತರುವುದರೊಂದಿಗೆ ವಾಸ್ತು-ಪಾಲನೆ ಮಾಡಿದಂತೆ ಆಗುತ್ತದೆ.
ಬಣ್ಣಗಳ ಆಯ್ಕೆಯು ಬಾಲ್ಕನಿಯಲ್ಲಿ ಎನರ್ಜಿಯ ಸಮಯತೋಲನದ ಮೇಲೆ ಪರಿಣಾಮ ಬೀರುತ್ತದೆ. ಹಸಿರು, ಬೀಜ್ ಬಣ್ಣ ಅಥವಾ ತಿಳಿ ಹಳದಿಯಂತಹ ಮಣ್ಣಿನಂತ ವಾತಾವರಣ ಕೊಡುವಂತಹವು ಬೆಳವಣಿಗೆ, ಸಕಾರಾತ್ಮಕತೆ ಮತ್ತು ಸಮತೋಲನವನ್ನು ಸಂಕೇತಿಸುತ್ತವೆ. ಈ ಬಣ್ಣಗಳು ಶಾಂತಿಯುತ ವಾತಾವರಣವನ್ನು ಕೊಡುತ್ತವೆ. ನಿಮ್ಮ ಮನೆಯ ಬಾಲ್ಕನಿಯನ್ನು ವಿಶ್ರಾಂತಿ ಮತ್ತು ಧ್ಯಾನಕ್ಕೆ ಸೂಕ್ತ ಸ್ಥಳವನ್ನಾಗಿ ಮಾಡುತ್ತವೆ. ನಿಮ್ಮ ಮನೆ ಬಾಲ್ಕನಿಯು ವಾಸ್ತುವಿಗೆ ಅನುಗುಣವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಪೀಠೋಪಕರಣಗಳು, ಕುಶನ್‌ಗಳು ಅಥವಾ ಗೋಡೆಯ ಬಣ್ಣಗಳನ್ನು ಒಳಗೊಂಡಂತೆ ನಿಮ್ಮ ಅಲಂಕಾರದಲ್ಲಿ ಈ ಬಣ್ಣದ ಛಾಯೆಗಳನ್ನು ನೀವು ಅಳವಡಿಸಿಕೊಳ್ಳಬಹುದು.
ಸಾಮರಸ್ಯದ ಜಾಗವನ್ನು ಸೃಷ್ಟಿಲು ನಿಮ್ಮ ಬಾಲ್ಕನಿಯಲ್ಲಿ ಸರಿಯಾದ ಹಾಗೂ ಸೂಕ್ತ ಪೀಠೋಪಕರಣಗಳ ಆಯ್ಕೆ ಅತ್ಯಗತ್ಯ. ಸ್ಥಳದ ಸೌಂದರ್ಯಕ್ಕೆ ಪೂರಕವಾದ ಆರಾಮದಾಯಕ ಮತ್ತು ಬಾಳಿಕೆ ಬರುವ ಪೀಠೋಪಕರಣಗಳನ್ನು ಆಯ್ಕೆ ಮಾಡಿಕೊಳ್ಳಿ. ಶಕ್ತಿಯ ಮುಕ್ತ ಹರಿವನ್ನು ಸುಗಮಗೊಳಿಸುವ ಮತ್ತು ವಿಶ್ರಾಂತಿಗೆ ಅನುವು ಮಾಡಿಕೊಡುವ ವಿನ್ಯಾಸಗಳನ್ನು ಆರಿಸಿಕೊಳ್ಳಿ. ಹೊರಾಂಗಣ ನೋಟ ಮತ್ತು ನಿಮ್ಮ ಮನೆಯ ಒಳಾಂಗಣ ಎರಡನ್ನೂ ಆನಂದಿಸುವ ರೀತಿಯಲ್ಲಿ ನಿಮ್ಮ ಪೀಠೋಪಕರಣಗಳನ್ನು ಇಡಿ.
ಮೇಲೆ ತಿಳಿಸಿದ ಸಲಹೆಗಳ ಜೊತೆಗೆ, ನಿಮ್ಮ ಬಾಲ್ಕನಿ ಸೌಂದರ್ಯದಲ್ಲಿ ವಾಸ್ತು ತತ್ವಗಳನ್ನು ನೀವು ಅಳವಡಿಸಿಕೊಳ್ಳಬಹುದಾದ ಕೆಲವು ಇತರ ವಿಧಾನಗಳು ಇಲ್ಲಿವೆ:
ನಿಮ್ಮ ಬಾಲ್ಕನಿಯಲ್ಲಿ ಸಸ್ಯಗಳನ್ನು ಇರಿಸಿ. ಅದರಿಂದ ಬಾಲ್ಕನಿಯ ಸೌಂದರ್ಯ ಹೆಚ್ಚಾಗುವುದರೊಂದಿಗೆ ಗಾಳಿಯನ್ನು ಶುದ್ಧೀಕರಿಸಿ ಪಾಸಿಟಿವ್ ಎನರ್ಜಿಯು ಹೆಚ್ಚಾಗುತ್ತದೆ. ನಿಮ್ಮ ಬಾಲ್ಕನಿಯಲ್ಲಿ ಸಿಗುವ ಸೂರ್ಯನ ಬೆಳಕಿನಲ್ಲಿ ಬೆಳೆಯುವ ಸಸ್ಯಗಳನ್ನು ಆಯ್ಕೆಮಾಡಿ.
ನಿಮ್ಮ ಬಾಲ್ಕನಿಯು ಅಸ್ತವಸ್ತವಾಗದಂತೆ ಸ್ವಚ್ಛವಾಗಿ ಇಟ್ಟುಕೊಳ್ಳಿ. ಅನಗತ್ಯ ವಸ್ತುಗಳು ಅಥವಾ ಕಸಕಡ್ಡಿಗಳಿಂದ ಎನರ್ಜಿಯ ಒಳ ಹರಿವಿಗೆ ಅಡ್ಡಿಯಾಗುತ್ತದೆ. ನಿಮ್ಮ ಬಾಲ್ಕನಿ ಅಸ್ತವ್ಯಸ್ತವಾಗಿರದಂತೆ ನೋಡಿಕೊಳ್ಳಿ ಮತ್ತು ಓರಣವಾಗಿ ಇಟ್ಟುಕೊಳ್ಳಿರಿ.
ವಿಶೇಷವಾಗಿ ನಿಮ್ಮ ಬಾಲ್ಕನಿ ಉತ್ತರ ಅಥವಾ ಈಶಾನ್ಯ ದಿಕ್ಕಿನಲ್ಲಿದ್ದರೆ ನಿಮ್ಮ ಬಾಲ್ಕನಿಯಲ್ಲಿ ಗಾಳಿಗೆ ಅಲುಗಾಡುವ ಗಂಟೆಗಳನ್ನು ನೇತು ಹಾಕಿ. ಅವು ಉಂಟುಮಾಡುವ ಸೌಮ್ಯವಾದ, ಸುಮಧುರ ಗಂಟಾನಾದವು ಸಕಾರಾತ್ಮಕ ಶಕ್ತಿಯನ್ನು ಸೆಳೆಯುತ್ತದೆ. ಮತ್ತು ಪರಿಸರವನ್ನು ಶಾಂತವಾಗಿಡುತ್ತದೆ ಎಂದು ನಂಬಲಾಗಿದೆ.
ಅರ್ಥಪೂರ್ಣ ಅಲಂಕಾರಿಕ ವಸ್ತುಗಳೊಂದಿಗೆ ನಿಮಗೆ ಪಾಸಿಟಿವ್ ಭಾವನೆ ಕೊಡುವಂತಹ ಕಲಾಕೃತಿಗಳು, ಪ್ರತಿಮೆಗಳು ಅಥವಾ ಚಿಹ್ನೆಗಳಿಂದ ನಿಮ್ಮ ಬಾಲ್ಕನಿಯನ್ನು ನಿಮ್ಮ ಇಷ್ಟದಂತೆ ವೈಯಕ್ತಿಕರಿಸಿಕೊಳ್ಳಿ. ಇವು ವೈಬ್‌ಗಳನ್ನು ಹೆಚ್ಚಿಸುತ್ತವೆ..
ನೆಗೆಟಿವ್ ಎನರ್ಜಿಯನ್ನು ತೆಗೆದುಹಾಕಲು ಮತ್ತು ಉತ್ತಮ ಬಾಲ್ಕನಿ ವಾಸ್ತುಗಾಗಿ ತಾಜಾ, ಸಕಾರಾತ್ಮಕ ವಾತಾವರಣವನ್ನು ಕಾಪಾಡಿಕೊಳ್ಳಲು ನಿಮ್ಮ ಬಾಲ್ಕನಿಯನ್ನು ಕಾಲಕಾಲಕ್ಕೆ ಕಲ್ಲುಪ್ಪು ಅಥವಾ ಸುಗಂಧ ದ್ರವ್ಯ ಸ್ವಚ್ಛಗೊಳಿಸಿ.
ವಾಸ್ತು ಪ್ರಕಾರ ನಿಮ್ಮ ಬಾಲ್ಕನಿಯನ್ನು ನಿರ್ಮಿಸಿಕೊಳ್ಳುವ ಮೂಲಕ, ನಿಮ್ಮ ಒಟ್ಟಾರೆ ಸೌಖ್ಯವನ್ನು ಹೆಚ್ಚಿಸುವ ಮತ್ತು ನೈಸರ್ಗಿಕ ಅಂಶಗಳೊಂದಿಗೆ ನಿಮ್ಮನ್ನು ಸಂಪರ್ಕಿಸುವಂತೆ ಮಾಡುವ ಶಾಂತ ಮತ್ತು ಸಕಾರಾತ್ಮಕ ಸ್ಥಳವಾಗಿ ನೀವು ಅದನ್ನು ಪರಿವರ್ತಿಸಬಹುದು. ಬಾಲ್ಕನಿಯ ವಾಸ್ತುವಿಗೆ ಸಂಬಂಧಿಸಿದ ಹಲವು ಸಲಹೆಗಳಲ್ಲಿ ಇವು ಕೆಲವು ಮಾತ್ರ ಇಲ್ಲಿವೆ. ವೃತ್ತಿಪರರ ಬಳಿಗೆ ಹೋಗುವುದು ಯಾವಾಗಲೂ ಉತ್ತಮವಾಗಿದೆ ಆದ್ದರಿಂದ ಈ ತತ್ವಗಳು ನಿಮ್ಮ ಮನೆಯ ವಿಶಿಷ್ಟತೆಗಳಿಗೆ ಅನುಗುಣವಾಗಿರುತ್ತವೆ.
ನಿಮ್ಮ ಬಾಲ್ಕನಿಯಲ್ಲಿ ವಾಸ್ತು ತತ್ವಗಳನ್ನು ಅಳವಡಿಸಿಕೊಳ್ಳುವುದರಿಂದ ಪಾಸಿಟಿವ್ ಮತ್ತು ಪ್ರಶಾಂತವಾದ ಹೊರಾಂಗಣವನ್ನು ಬೆಳೆಸುತ್ತದೆ. ಈ ಜಾಗದಲ್ಲಿ ಎನರ್ಜಿಯ ಹರಿವನ್ನು ಹೆಚ್ಚಿಸಲು ದಿಕ್ಕು, ಬಣ್ಣಗಳು, ಬೆಳಕು ಮತ್ತು ಪೀಠೋಪಕರಣಗಳ ನಿಯೋಜನೆಯಂತಹ ಅಂಶಗಳ ಮೇಲೆ ಕೇಂದ್ರೀಕರಿಸಿ. ಈ ವಾಸ್ತು ಸಲಹೆಗಳು, ನಿಮಮ್ಮ ಪ್ರಕೃತಿಯೊಂದಿಗೆ ಸಂಪರ್ಕಿಸುವ ಮೂಲಕ, ನಿಮ್ಮ ಬಾಲ್ಕನಿಯನ್ನು ವಿಶ್ರಾಂತಿ ಮತ್ತು ಹೊಸತನ ತರುವಂತಹ ಆಶ್ರಯತಾಣವನ್ನಾಗಿ ಪರಿವರ್ತಿಸಲು ನಿಮಗೆ ಮಾರ್ಗದರ್ಶನ ನೀಡುತ್ತವೆ. ಈ ಬಾಲ್ಕನಿಯ ವಾಸ್ತು ಸಲಹೆಗಳನ್ನು ನಿಮ್ಮ ಇಷ್ಟಕ್ಕೆ ತಕ್ಕಂತೆ ಮತ್ತು ಅನುಕೂಲಕ್ಕೆ ಅನುಗುಣವಾಗಿ ಅನುಸರಿಸಬಹುದು. ಅಂತಹ ವಾಸ್ತು ತತ್ವಗಳ ಬಗ್ಗೆ ನೀವು ಇನ್ನಷ್ಟು ತಿಳಿದುಕೊಳ್ಳಲು ಬಯಸಿದರೆ, ನಮ್ಮ ಬ್ಲಾಗ್ ಅನ್ನು ಪರಿಶೀಲಿಸಿ ಮನೆ ವಾಸ್ತು ಸಲಹೆಗಳು.